79ನೇ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳಿಗಾಗಿ ವಿಶ್ವದೆಲ್ಲೆಡೆಗಿನ ನಾಯಕರಿಗೆ ಪ್ರಧಾನಮಂತ್ರಿ ಅವರು ಧನ್ಯವಾದ ಅರ್ಪಿಸಿದರು
August 15th, 07:26 pm
79ನೇ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳಿಗಾಗಿ ವಿಶ್ವದೆಲ್ಲೆಡೆಗಿನ ನಾಯಕರಿಗೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಧನ್ಯವಾದ ಅರ್ಪಿಸಿದರು.ಮಾಲ್ಡೀವ್ಸ್ ದೇಶದ ಸ್ವಾತಂತ್ರ್ಯದ 60ನೇ ವಾರ್ಷಿಕೋತ್ಸವದಲ್ಲಿ ಗೌರವ ಅತಿಥಿಯಾಗಿ ಭಾಗವಹಿಸಿದ ಪ್ರಧಾನಮಂತ್ರಿ
July 26th, 06:47 pm
ರಾಜಧಾನಿ ಮಾಲೆ ಭೇಟಿಯ ಸಂದರ್ಭದಲ್ಲಿ, ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಮಾಲ್ಡೀವ್ಸ್ ನ ಸ್ವಾತಂತ್ರ್ಯದ 60 ನೇ ವಾರ್ಷಿಕೋತ್ಸವ ಸಮಾರಂಭದಲ್ಲಿ 'ಗೌರವ ಅತಿಥಿ'ಯಾಗಿ ಭಾಗವಹಿಸಿದರು. ಮಾಲ್ಡೀವ್ಸ್ ನಲ್ಲಿ ಈತನಕದ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಭಾರತದ ಪ್ರಧಾನಮಂತ್ರಿಯೊಬ್ಬರು ಭಾಗವಹಿಸುತ್ತಿರುವುದು ಇದೇ ಮೊದಲು. ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಮಾಲ್ಡೀವ್ಸ್ ಅಧ್ಯಕ್ಷರಾದ ಶ್ರೀ ಮುಯಿಝು ಅವರು ಆತಿಥ್ಯ ವಹಿಸಿದ ರಾಷ್ಟ್ರ ಅಥವಾ ಸರ್ಕಾರದ ಮುಖ್ಯಸ್ಥರ ಮಟ್ಟದ ವಿಶೇಷ ಸಭೆಯಲ್ಲಿ ಭಾಗವಹಿಸಿದ ಮೊದಲ ವಿದೇಶಿ ನಾಯಕರಾಗಿದ್ದಾರೆ.ಭಾರತ-ಮಾಲ್ಡೀವ್ಸ್ ರಾಜತಾಂತ್ರಿಕ ಸಂಬಂಧಗಳ ಸ್ಥಾಪನೆಯ 60 ನೇ ವಾರ್ಷಿಕೋತ್ಸವದ ಸ್ಮರಣಾರ್ಥ ಅಂಚೆಚೀಟಿ ಬಿಡುಗಡೆ
July 25th, 09:08 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಮತ್ತು ಮಾಲ್ಡೀವ್ಸ್ ಗಣರಾಜ್ಯದ ಅಧ್ಯಕ್ಷರಾದ ಗೌರವಾನ್ವಿತ ಡಾ. ಮೊಹಮ್ಮದ್ ಮುಯಿಝು ಅವರು, ಭಾರತ-ಮಾಲ್ಡೀವ್ಸ್ ರಾಜತಾಂತ್ರಿಕ ಸಂಬಂಧಗಳ ಸ್ಥಾಪನೆಯ 60ನೇ ವಾರ್ಷಿಕೋತ್ಸವದ ಅಂಗವಾಗಿ ಸ್ಮರಣಾರ್ಥ ಅಂಚೆ ಚೀಟಿಗಳನ್ನು ಬಿಡುಗಡೆ ಮಾಡಿದರು.ಮಾಲ್ಡೀವ್ಸ್ ಅಧ್ಯಕ್ಷರನ್ನು ಭೇಟಿಯಾದ ಪ್ರಧಾನಮಂತ್ರಿ
July 25th, 08:48 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಮಾಲೆಯಲ್ಲಿರುವ ಅಧ್ಯಕ್ಷರ ಕಚೇರಿಯಲ್ಲಿ ಮಾಲ್ಡೀವ್ಸ್ ಗಣರಾಜ್ಯದ ಘನತೆವೆತ್ತ ಅಧ್ಯಕ್ಷರಾದ ಡಾ. ಮೊಹಮ್ಮದ್ ಮುಯಿಝು ಅವರನ್ನು ಭೇಟಿಯಾದರು. ಸಭೆಗೂ ಮುನ್ನ, ಅಧ್ಯಕ್ಷ ಮುಯಿಝು ಅವರು ಪ್ರಧಾನ ಮಂತ್ರಿಯವರನ್ನು ಬರಮಾಡಿಕೊಂಡು ಗಣರಾಜ್ಯ ಚೌಕದಲ್ಲಿ ಅವರಿಗೆ ಔಪಚಾರಿಕ ಸ್ವಾಗತ ನೀಡಿದರು. ಸಭೆಯು ಆತ್ಮೀಯವಾಗಿತ್ತು ಮತ್ತು ಎರಡೂ ದೇಶಗಳ ನಡುವಿನ ಆಳವಾದ ಸ್ನೇಹವನ್ನು ದೃಢೀಕರಿಸಿತು.ಭಾರತದ ಪ್ರಧಾನಮಂತ್ರಿ ಮತ್ತು ಮಾಲ್ಡೀವ್ಸ್ ಅಧ್ಯಕ್ಷರಿಂದ ಮಾಲ್ಡೀವ್ಸ್ ನ ರಕ್ಷಣಾ ಸಚಿವಾಲಯದ ಕಟ್ಟಡ ಜಂಟಿಯಾಗಿ ಉದ್ಘಾಟನೆ
July 25th, 08:43 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಮತ್ತು ಮಾಲ್ಡೀವ್ಸ್ ಅಧ್ಯಕ್ಷರಾದ ಮಾನ್ಯ ಡಾ||ಮೊಹಮ್ಮದ್ ಮುಯಿಝು ಅವರು ಜಂಟಿಯಾಗಿ ಇಂದು ಮಾಲೆಯಲ್ಲಿ ಮಾಲ್ಡೀವ್ಸ್ ನ ರಕ್ಷಣಾ ಸಚಿವಾಲಯದ (MoD) ಅತ್ಯಾಧುನಿಕ ಕಟ್ಟಡವನ್ನು ಉದ್ಘಾಟಿಸಿದರು.ಮಾಲ್ಡೀವ್ಸ್ ಅಧ್ಯಕ್ಷರೊಂದಿಗಿನ ಜಂಟಿ ಪತ್ರಿಕಾ ಹೇಳಿಕೆ ಸಂದರ್ಭದಲ್ಲಿ ಪ್ರಧಾನಮಂತ್ರಿ ಅವರ ಪತ್ರಿಕಾ ಹೇಳಿಕೆ
July 25th, 06:00 pm
ಮೊಟ್ಟ ಮೊದಲನೆಯದಾಗಿ ಎಲ್ಲಾ ಭಾರತೀಯರ ಪರವಾಗಿ, 60ನೇ ಸ್ವಾತಂತ್ರ್ಯೋತ್ಸವದ ಐತಿಹಾಸಿಕ ಸಂದರ್ಭದಲ್ಲಿ ಮಾಲ್ಡೀವ್ಸ್‌ನ ಗೌರವಾನ್ವಿತ ಅಧ್ಯಕ್ಷರು ಮತ್ತು ಜನರಿಗೆ ನನ್ನ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆ.ಪ್ರಧಾನಿ ಮೋದಿ ಮಾಲ್ಡೀವ್ಸ್‌ನ ಮಾಲೆಗೆ ಆಗಮಿಸಿದರು
July 25th, 10:28 am
ಪ್ರಧಾನಿ ನರೇಂದ್ರ ಮೋದಿ ಅವರು ಸ್ವಲ್ಪ ಸಮಯದ ಹಿಂದೆ ಮಾಲ್ಡೀವ್ಸ್‌ಗೆ ಆಗಮಿಸಿದರು. ಅವರನ್ನು ಅಧ್ಯಕ್ಷ ಮೊಹಮ್ಮದ್ ಮುಯಿಝು ಅವರು ವಿಮಾನ ನಿಲ್ದಾಣದಲ್ಲಿ ವೈಯಕ್ತಿಕವಾಗಿ ಬರಮಾಡಿಕೊಂಡರು. ಪ್ರಧಾನಿಯವರು ಮಾಲ್ಡೀವ್ಸ್‌ನ 60 ನೇ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಗೌರವಾನ್ವಿತ ಅತಿಥಿಯಾಗಿ ಭಾಗವಹಿಸಲಿದ್ದಾರೆ.ಬ್ರಿಟನ್ ಮತ್ತು ಮಾಲ್ಡೀವ್ಸ್ ಗೆ ಅಧಿಕೃತ ಭೇಟಿ ಮುನ್ನಾದಿನದಂದು ಪ್ರಧಾನಮಂತ್ರಿ ಅವರ ನಿರ್ಗಮನ ಹೇಳಿಕೆ
July 23rd, 01:05 pm
ಭಾರತ ಮತ್ತು ಬ್ರಿಟನ್ ಸಮಗ್ರ ಕಾರ್ಯತಂತ್ರದ ಪಾಲುದಾರಿಕೆಯನ್ನು ಹಂಚಿಕೊಂಡಿದ್ದು, ಇತ್ತೀಚಿನ ವರ್ಷಗಳಲ್ಲಿ ಅದು ಗಮನಾರ್ಹ ಪ್ರಗತಿಗೆ ಸಾಕ್ಷಿಯಾಗಿದೆ. ನಮ್ಮ ಸಹಯೋಗವು ವ್ಯಾಪಾರ, ಹೂಡಿಕೆ, ತಂತ್ರಜ್ಞಾನ, ನಾವೀನ್ಯತೆ, ರಕ್ಷಣೆ, ಶಿಕ್ಷಣ, ಸಂಶೋಧನೆ, ಸುಸ್ಥಿರತೆ, ಆರೋಗ್ಯ ಮತ್ತು ಜನರ ನಡುವಿನ ಸಂಬಂಧಗಳು ಸೇರಿದಂತೆ ವ್ಯಾಪಕ ಶ್ರೇಣಿಯ ಕ್ಷೇತ್ರಗಳನ್ನು ವ್ಯಾಪಿಸಿದೆ. ಪ್ರಧಾನಮಂತ್ರಿ ಗೌರವಾನ್ವಿತ ಸರ್ ಕೈರ್ ಸ್ಟಾರ್ಮರ್ ಅವರೊಂದಿಗಿನ ನನ್ನ ಭೇಟಿಯ ವೇಳೆ, ಉಭಯ ದೇಶಗಳ ಸಮೃದ್ಧಿ, ಬೆಳವಣಿಗೆ ಮತ್ತು ಉದ್ಯೋಗ ಸೃಷ್ಟಿಯನ್ನು ಉತ್ತೇಜಿಸುವ ಗುರಿಯನ್ನು ಹೊಂದಿರುವ ನಮ್ಮ ಆರ್ಥಿಕ ಪಾಲುದಾರಿಕೆಯನ್ನು ಮತ್ತಷ್ಟು ಹೆಚ್ಚಿಸಲು ನಮಗೆ ಅವಕಾಶ ಸಿಗಲಿದೆ. ಈ ಭೇಟಿಯ ವೇಳೆ ಘನತೆವೆತ್ತ ದೊರೆ ಮೂರನೇ ಚಾರ್ಲ್ಸ್ ಅವರನ್ನು ಭೇಟಿ ಮಾಡಲು ನಾನು ಎದುರು ನೋಡುತ್ತಿದ್ದೇನೆ.ಪ್ರಧಾನಿಯವರ ಯುನೈಟೆಡ್ ಕಿಂಗ್‌ಡಮ್ ಮತ್ತು ಮಾಲ್ಡೀವ್ಸ್ ಭೇಟಿ (ಜುಲೈ 23 - 26, 2025)
July 20th, 10:49 pm
ಪ್ರಧಾನಿ ಮೋದಿ ಜುಲೈ 23 - 26 ರವರೆಗೆ ಯುಕೆಗೆ ಅಧಿಕೃತ ಭೇಟಿ ಮತ್ತು ಮಾಲ್ಡೀವ್ಸ್‌ಗೆ ರಾಜ್ಯ ಭೇಟಿ ನೀಡಲಿದ್ದಾರೆ. ಅವರು ಪ್ರಧಾನಿ ಸ್ಟಾರ್ಮರ್ ಅವರೊಂದಿಗೆ ವ್ಯಾಪಕ ಚರ್ಚೆಗಳನ್ನು ನಡೆಸಲಿದ್ದಾರೆ ಮತ್ತು ಅವರು ಸಿಎಸ್‌ಪಿಯ ಪ್ರಗತಿಯನ್ನು ಸಹ ಪರಿಶೀಲಿಸಲಿದ್ದಾರೆ. ಜುಲೈ 26 ರಂದು ಮಾಲ್ಡೀವ್ಸ್‌ನ 60 ನೇ ಸ್ವಾತಂತ್ರ್ಯ ವಾರ್ಷಿಕೋತ್ಸವದ ಆಚರಣೆಯಲ್ಲಿ ಪ್ರಧಾನಿ ಮೋದಿ 'ಗೌರವ ಅತಿಥಿ'ಯಾಗಿರುತ್ತಾರೆ. ಅವರು ಮಾಲ್ಡೀವ್ಸ್ ಅಧ್ಯಕ್ಷ ಮುಯಿಝು ಅವರನ್ನು ಭೇಟಿ ಮಾಡಲಿದ್ದಾರೆ ಮತ್ತು ಪರಸ್ಪರ ಆಸಕ್ತಿಯ ವಿಷಯಗಳ ಕುರಿತು ಚರ್ಚೆ ನಡೆಸಲಿದ್ದಾರೆ.ಭಾರತದ 76ನೇ ಗಣರಾಜ್ಯೋತ್ಸವದ ಶುಭಾಶಯಗಳಿಗಾಗಿ ವಿಶ್ವ ನಾಯಕರಿಗೆ ಧನ್ಯವಾದ ಅರ್ಪಿಸಿದ ಪ್ರಧಾನಮಂತ್ರಿ
January 26th, 05:56 pm
ಭಾರತದ 76ನೇ ಗಣರಾಜ್ಯೋತ್ಸವದ ಶುಭಾಶಯಗಳು ಮತ್ತು ಶುಭಸಂದೇಶಗಳಿಗಾಗಿ ವಿಶ್ವ ನಾಯಕರಿಗೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಧನ್ಯವಾದಗಳನ್ನು ತಿಳಿಸಿದರು.ಮಾಲ್ಡೀವ್ಸ್ ಗಣರಾಜ್ಯದ ಅಧ್ಯಕ್ಷರಾದ ಘನತೆವೆತ್ತ ಡಾ. ಮೊಹಮದ್ ಮುಯಿಜ್ಜು ಅವರ ಭಾರತ ಭೇಟಿಯ ಫಲಿತಾಂಶಗಳು (ಅಕ್ಟೋಬರ್ 06 - ಅಕ್ಟೋಬರ್ 10, 2024)
October 07th, 03:40 pm
ಭಾರತ-ಮಾಲ್ಡೀವ್ಸ್ ಸಹಯೋಗ: ಸಮಗ್ರ ಆರ್ಥಿಕ ಮತ್ತು ಕಡಲ ಭದ್ರತಾ ಪಾಲುದಾರಿಕೆಗಾಗಿ ಒಂದು ದೃಷ್ಟಿಕೋನ.ಭಾರತ ಮತ್ತು ಮಾಲ್ಡೀವ್ಸ್: ಸಮಗ್ರ ಆರ್ಥಿಕ ಮತ್ತು ಕಡಲ ತೀರದ ಸುರಕ್ಷತೆಯಲ್ಲಿ ಪಾಲುದಾರಿಕೆಗಾಗಿ ಒಂದು ದೂರದರ್ಶಿತ್ವ
October 07th, 02:39 pm
ಭಾರತದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಮತ್ತು ಮಾಲ್ಡೀವ್ಸ್ ಅಧ್ಯಕ್ಷರಾದ ಗೌರವಾನ್ವಿತ ಡಾ. ಮೊಹಮದ್ ಮುಯಿಝು ಅವರು 7ನೇ ಅಕ್ಟೋಬರ್ 2024ರಂದು ಭೇಟಿಯಾಗಿದ್ದರು. ದ್ವಿಪಕ್ಷೀಯ ಸಂಬಂಧಗಳ ವಿಚಾರವಾಗಿ ವಿಸ್ತೃತವಾಗಿ ಸಮಗ್ರವಾಗಿ ಪರಿಶೀಲಿಸಿದ ಉಭಯ ನಾಯಕರು ಎರಡೂ ದೇಶಗಳ ಜನರ ಒಳಿತಿಗಾಗಿ ಐತಿಹಾಸಿಕವೆನಿಸುವ ಇನ್ನಷ್ಟು ನಿಕಟ ಮತ್ತು ವಿಶೇಷ ಸಂಬಂಧವನ್ನು ಸದೃಢಗೊಳಿಸುವ ನಿಟ್ಟಿನಲ್ಲಿ ಈವರೆಗೆ ಸಾಧಿಸಿದ ಪ್ರಗತಿಯ ಪರಿಶೀಲನೆ ನಡೆಸಿದರು.ಮಾಲ್ಡೀವ್ಸ್ ಅಧ್ಯಕ್ಷರೊಂದಿಗೆ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಪತ್ರಿಕಾ ಹೇಳಿಕೆಯ ಇಂಗ್ಲಿಷ್ ಅವತರಣಿಕೆ (ಅಕ್ಟೋಬರ್ 7, 2024)
October 07th, 12:25 pm
ಮೊದಲನೆಯದಾಗಿ, ನಾನು ಅಧ್ಯಕ್ಷ ಮುಯಿಝು ಮತ್ತು ಅವರ ನಿಯೋಗಕ್ಕೆ ಆತ್ಮೀಯ ಸ್ವಾಗತವನ್ನು ನೀಡಲು ಬಯಸುತ್ತೇನೆಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 78 ನೇ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳಿಗಾಗಿ ವಿಶ್ವ ನಾಯಕರಿಗೆ ಧನ್ಯವಾದಗಳು
August 15th, 09:20 pm
ಪ್ರಧಾನಿ ನರೇಂದ್ರ ಮೋದಿ ಅವರು ಭಾರತದ 78 ನೇ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳಿಗಾಗಿ ವಿಶ್ವ ನಾಯಕರಿಗೆ ತಮ್ಮ ಕೃತಜ್ಞತೆಯನ್ನು ವ್ಯಕ್ತಪಡಿಸಿದ್ದಾರೆ, ಪ್ರಗತಿಯತ್ತ ರಾಷ್ಟ್ರದ ಪ್ರಯಾಣ ಮತ್ತು ಅದರ ಬೆಳೆಯುತ್ತಿರುವ ಜಾಗತಿಕ ಪ್ರಭಾವವನ್ನು ಒತ್ತಿ ಹೇಳಿದರು. ಪ್ರಧಾನಿಯವರು ಅಂತಾರಾಷ್ಟ್ರೀಯ ಸಂಬಂಧಗಳ ಬಲವನ್ನು ಮತ್ತು ಸಮೃದ್ಧ ಭವಿಷ್ಯಕ್ಕಾಗಿ ಹಂಚಿಕೊಂಡ ದೃಷ್ಟಿಯನ್ನು ಎತ್ತಿ ತೋರಿಸಿದರು.ಪ್ರಧಾನಮಂತ್ರಿ ಮತ್ತು ಮಂತ್ರಿಮಂಡಲದ ಪ್ರಮಾಣವಚನ ಸಮಾರಂಭದಲ್ಲಿ ಭಾರತದ ನೆರೆಹೊರೆ ಮತ್ತು ಹಿಂದೂ ಮಹಾಸಾಗರ ಪ್ರದೇಶದ ನಾಯಕರು ಭಾಗಿ
June 09th, 11:50 pm
ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಮತ್ತು ಮಂತ್ರಿಮಂಡಲದ ಪ್ರಮಾಣವಚನ ಸ್ವೀಕಾರ ಸಮಾರಂಭ ರಾಷ್ಟ್ರಪತಿ ಭವನದಲ್ಲಿ 2024 ಜೂನ್ 9ರಂದು ನಡೆಯಿತು. ಭಾರತದ ನೆರೆಹೊರೆಯ ರಾಷ್ಟ್ರಗಳು ಮತ್ತು ಹಿಂದೂ ಮಹಾಸಾಗರ ಪ್ರದೇಶದ ನಾಯಕರು ಸಮಾರಂಭದಲ್ಲಿ ಗೌರವಾನ್ವಿತ ಅತಿಥಿಗಳಾಗಿ ಭಾಗವಹಿಸಿದ್ದರು.ಪ್ರಧಾನ ಮಂತ್ರಿ ಮತ್ತು ಮಂತ್ರಿಮಂಡಲದ ಪ್ರಮಾಣವಚನ ಸಮಾರಂಭದಲ್ಲಿ ಪಾಲ್ಗೊಳ್ಳಲಿರುವ ವಿವಿಧ ರಾಷ್ಟ್ರಗಳ ನಾಯಕರು
June 08th, 12:24 pm
2024ರ ಸಾರ್ವತ್ರಿಕ ಚುನಾವಣೆಯ ನಂತರ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ನೇತೃತ್ವದ ಮಂತ್ರಿಮಂಡಲದ ಪ್ರಮಾಣವಚನ ಸಮಾರಂಭವನ್ನು 2024 ಜೂನ್ 9ರಂದು ನಿಗದಿಪಡಿಸಲಾಗಿದೆ. ಈ ಸಂದರ್ಭದಲ್ಲಿ ಭಾರತದ ನೆರೆಹೊರೆಯ ರಾಷ್ಟ್ರಗಳು ಮತ್ತು ಹಿಂದೂ ಮಹಾಸಾಗರ ಪ್ರದೇಶದ ದೇಶಗಳ ನಾಯಕರನ್ನು ಗೌರವಾನ್ವಿತ ಅತಿಥಿಗಳಾಗಿ ಆಹ್ವಾನಿಸಲಾಗಿದೆ.ಮಾಲ್ಡೀವ್ಸ್ ಗಣರಾಜ್ಯದ ಅಧ್ಯಕ್ಷರೊಂದಿಗೆ ದ್ವಿಪಕ್ಷೀಯ ಸಮಾಲೋಚನೆ ನಡೆಸಿದ ಪ್ರಧಾನಮಂತ್ರಿ
December 01st, 09:35 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2023 ರ ಡಿಸೆಂಬರ್ 1 ರಂದು ಯುಎಇಯಲ್ಲಿ ನಡೆದ ಸಿಒಪಿ-28 ಶೃಂಗ ಸಭೆಯ ಸಂದರ್ಭದಲ್ಲಿ ಮಾಲ್ಡೀವ್ಸ್ ಅಧ್ಯಕ್ಷರಾದ ಗೌರವಾನ್ವಿತ ಡಾ.ಮೊಹಮದ್ ಮುಯಿಝ್ ಅವರೊಂದಿಗೆ ಸಭೆ ನಡೆಸಿದರು.ಮಾಲ್ಡೀವ್ಸ್ ಅಧ್ಯಕ್ಷರಾಗಿ ಡಾ ಮೊಹಮದ್ ಮುಯಿಝು ಆಯ್ಕೆ: ಪ್ರಧಾನಮಂತ್ರಿ ಅಭಿನಂದನೆ
October 01st, 09:34 am
ಟ್ವೀಟ್ ಮೂಲಕ ಶುಭಾಶಯ ತಿಳಿಸಿರುವ ಪ್ರಧಾನ ಮಂತ್ರಿಗಳು, ಮಾಲ್ಡೀವ್ಸ್‌ನ ಅಧ್ಯಕ್ಷರಾಗಿ ಆಯ್ಕೆಯಾದ ಡಾ ಮೊಹಮದ್ ಮುಯಿಝು ಅವರಿಗೆ ಅಭಿನಂದನೆಗಳು ಮತ್ತು ಶುಭಾಶಯಗಳು.