ವೈದ್ಯರ ಸಲಹೆಯನ್ನು ಪಾಲಿಸುವಂತೆ ಸೋನಂ ವಾಂಗ್ಚುಕ್ ಅವರಿಗೆ ಮನವಿ ಮಾಡಿದ ಮತ್ತು ಅವರ ಉತ್ತಮ ಆರೋಗ್ಯಕ್ಕಾಗಿ ಪ್ರಾರ್ಥಿಸಿದ ಪ್ರಧಾನಮಂತ್ರಿ
July 24th, 06:10 am
ವೈದ್ಯರ ಸಲಹೆಯಂತೆ ತಮ್ಮ ದೈನಂದಿನ ದಿನಚರಿಯನ್ನು ಕಾಪಾಡಿಕೊಳ್ಳುವಂತೆ ಮತ್ತು ಆದಷ್ಟು ಬೇಗ ತಮ್ಮ ಹಿಂದಿನ ತೂಕವನ್ನು ಮರಳಿ ಪಡೆಯುವಂತೆ ಸೋನಮ್ ವಾಂಗ್ಚುಕ್ ಅವರಿಗೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಮನವಿ ಮಾಡಿದ್ದಾರೆ.ಚಂಡೀಗಢದಲ್ಲಿ ಬಹು ಅಭಿವೃದ್ಧಿ ಯೋಜನೆಗಳ ಉದ್ಘಾಟನೆಯ ಸಂದರ್ಭದಲ್ಲಿ ಪ್ರಧಾನಮಂತ್ರಿ ಅವರ ಭಾಷಣದ ಕನ್ನಡ ಅವತರಣಿಕೆ
July 17th, 02:08 pm
ಚಂಡೀಗಢ ಕೇವಲ ಒಂದು ನಗರವಲ್ಲ - ಇದು ಭಾರತಕ್ಕೆ ಅಭಿವೃದ್ಧಿಯ ಮಾದರಿಯಾಗಿದೆ. ಚಂಡೀಗಢವು ಯೋಜಿತ ಬೆಳವಣಿಗೆಗೆ, ಉತ್ತಮ ಜೀವನಶೈಲಿ ಮತ್ತು ಸುಲಭ ಜೀವನ ಶೈಲಿಯ ನಗರವಾಗಿ ತನ್ನ ಗುರುತಿಸುವಿಕೆಗಾಗಿ ಹೆಸರುವಾಸಿಯಾಗಿದೆ. ಇದು ಸುಧಾರಿತ ವೈದ್ಯಕೀಯ ಸೌಲಭ್ಯಗಳಿಗೆ ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ಮಾ ಚಂಡಿಯ ಆಶೀರ್ವಾದಕ್ಕಾಗಿ ಗುರುತಿಸಲ್ಪಟ್ಟಿದೆ. ಅದಕ್ಕಾಗಿಯೇ ಚಂಡೀಗಢದ ಅಭಿವೃದ್ಧಿಯು ಎನ್.ಡಿಎ. ಸರ್ಕಾರಕ್ಕೆ ಸದಾ ಆದ್ಯತೆಯಾಗಿದೆ. ನಿಮಗೆ ನೆನಪಿರಬಹುದು, ಸುಮಾರು ಒಂದೂವರೆ ವರ್ಷಗಳ ಹಿಂದೆ, ದೇಶವು ತನ್ನ ನ್ಯಾಯ ವ್ಯವಸ್ಥೆಯಲ್ಲಿ ಪ್ರಮುಖ ಸುಧಾರಣೆಯನ್ನು ಮಾಡಿದೆ. ನಾವು ದಂಡ ಸಂಹಿತೆಯನ್ನು ಶಿಕ್ಷೆ ಆಧಾರಿತ ಕಾನೂನುಗಳ ಬದಲಿಗೆ ನ್ಯಾಯ ಆಧಾರಿತ ಕಾನೂನು ಚೌಕಟ್ಟಾದ ಭಾರತೀಯ ನ್ಯಾಯ ಸಂಹಿತದೊಂದಿಗೆ ಬದಲಾಯಿಸಿದ್ದೇವೆ. ಮತ್ತು ಭಾರತೀಯ ನ್ಯಾಯ ಸಂಹಿತದ ಅನುಷ್ಠಾನವು ಇಲ್ಲಿಯೇ ಚಂಡೀಗಢದಲ್ಲಿ ಪ್ರಾರಂಭವಾಯಿತು.ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಚಂಡೀಗಢದಲ್ಲಿ ಆರೋಗ್ಯ ರಕ್ಷಣೆ, ಶಿಕ್ಷಣ ಮತ್ತು ರಸ್ತೆ ಮೂಲಸೌಕರ್ಯ ಸೇರಿದಂತೆ ₹4,700 ಕೋಟಿಗೂ ಹೆಚ್ಚು ಮೌಲ್ಯದ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಿದರು, ಕೆಲವು ಯೋಜನೆಗಳನ್ನು ರಾಷ್ಟ್ರಕ್ಕೆ ಸಮರ್ಪಿಸಿದರು
July 17th, 01:45 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಚಂಡೀಗಢದಲ್ಲಿ ಆರೋಗ್ಯ ರಕ್ಷಣೆ, ಶಿಕ್ಷಣ ಮತ್ತು ರಸ್ತೆ ಮೂಲಸೌಕರ್ಯವನ್ನು ಒಳಗೊಂಡ ₹4,700 ಕೋಟಿಗೂ ಹೆಚ್ಚು ಮೌಲ್ಯದ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಶಂಕುಸ್ಥಾಪನೆ ಮತ್ತು ರಾಷ್ಟ್ರಕ್ಕೆ ಸಮರ್ಪಿಸಿದರು. ವ್ಯವಸ್ಥಿತ ರಾಷ್ಟ್ರೀಯ ಪ್ರಗತಿಗೆ ಅನುಕರಣೀಯ ಮಾದರಿಯಾಗಿ ನಗರದ ವಿಶಿಷ್ಟ ಸ್ಥಾನಮಾನವನ್ನು ವಿವರಿಸಿದ ಅವರು, ಉತ್ತಮ ಜೀವನಶೈಲಿ ಮತ್ತು ಸುಲಭ ಜೀವನವನ್ನು ಖಾತ್ರಿಪಡಿಸಿಕೊಳ್ಳುವ ಅದರ ಖ್ಯಾತಿಯನ್ನು ವಿವರಿಸಿದರು. ಈ ಪ್ರದೇಶದ ಮೇಲೆ ಮಾ ಚಂಡಿಯವರ ದೈವಿಕ ಅನುಗ್ರಹ ಇರುವುದು ಸ್ಪಷ್ಟವಾಗಿದೆ. ಆಡಳಿತವು ಅದರ ನಿರಂತರ, ರಚನಾತ್ಮಕ ಬೆಳವಣಿಗೆಗೆ ಹೊಂದಿರುವ ಅಚಲ ಬದ್ಧತೆಯನ್ನು ಹೊಂದಿದೆ ಎಂದರು. ಚಂಡೀಗಢದ ಅಭಿವೃದ್ಧಿ ಯಾವಾಗಲೂ ಪ್ರಸ್ತುತ ಸರ್ಕಾರದ ಸಂಪೂರ್ಣ ಆದ್ಯತೆಯಾಗಿದೆ ಎಂದು ಶ್ರೀ ಮೋದಿ ಪ್ರತಿಪಾದಿಸಿದರು.ಹರಿಯಾಣದ ಜಿಂದ್‌ನಲ್ಲಿ ಬಹು ಅಭಿವೃದ್ಧಿ ಯೋಜನೆಗಳ ಉದ್ಘಾಟನಾ ಸಮಾರಂಭದಲ್ಲಿ ಪ್ರಧಾನಮಂತ್ರಿ ಅವರ ಭಾಷಣದ ಕನ್ನಡ ಅವತರಣಿಕೆ
July 17th, 12:00 pm
ಇವೆಲ್ಲ ಇಲ್ಲಿ ತರಲಾದ ಕೆಲವು ಫೋಟೋಗಳು - ದಯವಿಟ್ಟು ಅವುಗಳನ್ನು ಸಂಗ್ರಹಿಸಿ, ಇಲ್ಲದಿದ್ದರೆ ಹಿಂದೆ ಕುಳಿತಿರುವವರು ನೋಡಲು ಸಾಧ್ಯವಾಗುವುದಿಲ್ಲ. ಎಸ್‌ಪಿಜಿ ಸಿಬ್ಬಂದಿ, ದಯವಿಟ್ಟು ಅವುಗಳನ್ನು ಸಂಗ್ರಹಿಸಿ. ಧನ್ಯವಾದಗಳು, ಸಹೋದರ, ಅಂತಹ ಸುಂದರವಾದ ರೇಖಾಚಿತ್ರಗಳನ್ನು ತಂದಿದ್ದಕ್ಕಾಗಿ. ಅಲ್ಲಿ, ಒಬ್ಬ ಪುಟ್ಟ ಹುಡುಗಿ ಕೂಡ ಏನನ್ನೋ ತಂದಿದ್ದಾಳೆ - ದಯವಿಟ್ಟು ಅದನ್ನು ಸಂಗ್ರಹಿಸಿ. ಇಲ್ಲಿಯೂ ಸಹ, ಇಬ್ಬರು ಮಹನೀಯರು ಗೋಚರಿಸುತ್ತಾರೆ. ಮತ್ತು ಈಗ, ಎಲ್ಲರೂ ದಯವಿಟ್ಟು ಆರಾಮವಾಗಿ ಕುಳಿತುಕೊಳ್ಳಿ. ನಿಮ್ಮ ಪ್ರೀತಿಗಾಗಿ, ನಿಮ್ಮ ಕಲಾತ್ಮಕ ಅರ್ಪಣಾ ಭಾವಕ್ಕಾಗಿ/ಭಕ್ತಿಗಾಗಿ, ನಾನು ನಿಮ್ಮೆಲ್ಲರಿಗೂ ಋಣಿ.ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಹರಿಯಾಣದ ಜಿಂದ್ ನಲ್ಲಿ ಸುಮಾರು 14,700 ಕೋಟಿ ರೂ.ಗಳ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಿದರು ಮತ್ತು ರಾಷ್ಟ್ರಕ್ಕೆ ಸಮರ್ಪಿಸಿದರು
July 17th, 11:30 am
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಹರಿಯಾಣದ ಜಿಂದ್ ನಲ್ಲಿ ಸುಮಾರು 14,700 ಕೋಟಿ ರೂ.ಗಳ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಿದರು ಮತ್ತು ರಾಷ್ಟ್ರಕ್ಕೆ ಸಮರ್ಪಿಸಿದರು. ಸ್ಥಳಕ್ಕೆ ಆಗಮಿಸಿದ ಬಳಿಕ ಅಪಾರ ಸಂತೋಷವನ್ನು ವ್ಯಕ್ತಪಡಿಸಿದ ಪ್ರಧಾನಮಂತ್ರಿಯವರು, ಶಕ್ತಿ ಪೀಠ ಮಾತಾ ಜಯಂತಿಯವರಿಂದ ಅನನ್ಯವಾಗಿ ಆಶೀರ್ವದಿಸಲ್ಪಟ್ಟ ಪ್ರದೇಶದ ಶ್ರೀಮಂತ ಐತಿಹಾಸಿಕ, ಸಮರ ಮತ್ತು ಆಧ್ಯಾತ್ಮಿಕ ಪರಂಪರೆಯನ್ನು ಉಲ್ಲೇಖಿಸಿದರು. ಸಂಘಟನೆಯ ಕರ್ತವ್ಯಗಳಿಗಾಗಿ ದಶಕಗಳ ಹಿಂದೆ ನಗರಕ್ಕೆ ತಮ್ಮ ಆರಂಭಿಕ ಭೇಟಿಗಳನ್ನು ನೆನಪಿಸಿಕೊಂಡ ಅವರು, ಮುರ್ರಾ ಎಮ್ಮೆ ಡೈರಿ, ದೇಸಿ ಬುರಾ ಮತ್ತು ಘೇವರ್ ನಂತಹ ಸ್ಥಳೀಯ ಪಾಕಶಾಲೆಯ ಪ್ರಮುಖ ಆಹಾರಗಳೊಂದಿಗೆ ಅಂತರ್ಗತವಾಗಿ ಸಂಬಂಧ ಹೊಂದಿರುವ ತಾವು ಪಡೆದ ಮರೆಯಲಾಗದ ವಾತ್ಸಲ್ಯವನ್ನು ಪ್ರೀತಿಯಿಂದ ನೆನಪಿಸಿಕೊಂಡರು. ಇದು ಸಾಮಾನ್ಯ ಭೂಮಿಯಲ್ಲ. ಇದು ಇತಿಹಾಸ, ಶೌರ್ಯ, ಧರ್ಮ ಮತ್ತು ಅಪಾರ ಹೆಮ್ಮೆಯ ಭೂಮಿಯಾಗಿದೆ ಎಂದು ಶ್ರೀ ಮೋದಿ ಹೇಳಿದರು.ಕೇರಳದ ಆರ್ಯ ವೈದ್ಯ ಶಾಲಾ ಚಾರಿಟೇಬಲ್ ಆಸ್ಪತ್ರೆಯ ಶತಮಾನೋತ್ಸವ ಸಮಾರಂಭದಲ್ಲಿ ಪ್ರಧಾನಮಂತ್ರಿ ಅವರ ಭಾಷಣದ ಕನ್ನಡ ಅವತರಣಿಕೆ
January 28th, 02:39 pm
ಇಂದು ಈ ಮಹತ್ವದ ಸಂದರ್ಭದಲ್ಲಿ, ನಿಮ್ಮೆಲ್ಲರೊಂದಿಗೆ ಸಂಪರ್ಕ ಸಾಧಿಸುವುದು ನನಗೆ ಸಂತೋಷದ ಸಂಗತಿಯಾಗಿದೆ. ಆರ್ಯ ವೈದ್ಯ ಶಾಲೆಯು ಆಯುರ್ವೇದವನ್ನು ಕಾಪಿಡುವಲ್ಲಿ, ರಕ್ಷಿಸುವಲ್ಲಿ ಮತ್ತು ಮುನ್ನಡೆಸುವಲ್ಲಿ ಮಹತ್ವದ ಕೊಡುಗೆಯನ್ನು ಹೊಂದಿದೆ. 125 ವರ್ಷಗಳ ತನ್ನ ಪ್ರಯಾಣದಲ್ಲಿ, ಈ ಸಂಸ್ಥೆಯು ಆಯುರ್ವೇದವನ್ನು ಪ್ರಬಲ ಚಿಕಿತ್ಸಾ ವ್ಯವಸ್ಥೆಯಾಗಿ ಸ್ಥಾಪಿಸಿದೆ. ಇಂದು ಈ ಸಂದರ್ಭದಲ್ಲಿ, ಆರ್ಯ ವೈದ್ಯ ಶಾಲೆಯ ಸ್ಥಾಪಕ ವೈದ್ಯರತ್ನಂ ಪಿ.ಎಸ್. ವಾರಿಯರ್ ಜೀ ಅವರ ಕೊಡುಗೆಗಳನ್ನು ನಾನು ಸ್ಮರಿಸುತ್ತೇನೆ. ಆಯುರ್ವೇದದ ಬಗ್ಗೆ ಅವರ ದೃಷ್ಟಿಕೋನ ಮತ್ತು ಸಾರ್ವಜನಿಕ ಕಲ್ಯಾಣಕ್ಕಾಗಿ ಅವರ ಸಮರ್ಪಣೆ ಇಂದಿಗೂ ನಮಗೆ ಸ್ಫೂರ್ತಿ ನೀಡುತ್ತದೆ.ಕೇರಳದ ಆರ್ಯ ವೈದ್ಯ ಸಾಲಾ ಚಾರಿಟೇಬಲ್ ಆಸ್ಪತ್ರೆಯ ಶತಮಾನೋತ್ಸವ ಸಮಾರಂಭ ಉದ್ದೇಶಿಸಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಭಾಷಣ
January 28th, 02:25 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಕೇರಳದ ಆರ್ಯ ವೈದ್ಯ ಸಾಲಾ ಚಾರಿಟೇಬಲ್ ಆಸ್ಪತ್ರೆಯ ಶತಮಾನೋತ್ಸವ ಸಮಾರಂಭವನ್ನು ಉದ್ದೇಶಿಸಿ ವಿಡಿಯೋ ಸಂದೇಶದ ಮೂಲಕ ಮಾತನಾಡಿದರು. ಈ ಸಂದರ್ಭವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾಮಂತ್ರಿ, ಈ ಶುಭ ಸಂದರ್ಭದಲ್ಲಿ ಎಲ್ಲರೊಂದಿಗೂ ಸಂಪರ್ಕ ಸಾಧಿಸುತ್ತಿರುವುದು ಸಂತೋಷದ ವಿಷಯ ಎಂದು ಹೇಳಿದರು. ಆರ್ಯ ವೈದ್ಯಶಾಲೆ ಆಯುರ್ವೇದವನ್ನು ಸಂರಕ್ಷಿಸುವಲ್ಲಿ, ರಕ್ಷಣೆ ಮಾಡುವಲ್ಲಿ ಮತ್ತು ಮುನ್ನಡೆಸುವಲ್ಲಿ ಮಹತ್ವದ ಪಾತ್ರ ವಹಿಸಿದೆ ಎಂದು ಅವರು ಪ್ರಮುಖವಾಗಿ ಪ್ರಸ್ತಾಪಿಸಿದರು. ತನ್ನ 125 ವರ್ಷಗಳ ಪಯಣದಲ್ಲಿ, ಸಂಸ್ಥೆಯು ಆಯುರ್ವೇದವನ್ನು ಪ್ರಬಲ ಚಿಕಿತ್ಸಾ ವ್ಯವಸ್ಥೆಯಾಗಿ ಸ್ಥಾಪಿಸಿದೆ ಎಂದು ಶ್ರೀ ನರೇಂದ್ರ ಮೋದಿ ಉಲ್ಲೇಖಿಸಿದರು. ಆರ್ಯ ವೈದ್ಯಶಾಲೆಯ ಸಂಸ್ಥಾಪಕ ವೈದ್ಯರತ್ನಂ ಪಿ.ಎಸ್. ವೇರಿಯರ್ ಅವರ ಕೊಡುಗೆಗಳನ್ನು ಸ್ಮರಿಸಿದ ಪ್ರಧಾನಮಂತ್ರಿ, ಆಯುರ್ವೇದದ ಬಗೆಗಿನ ಅವರ ವಿಧಾನವು ಮತ್ತು ಸಾರ್ವಜನಿಕ ಕಲ್ಯಾಣಕ್ಕಾಗಿ ಅವರ ಬದ್ಧತೆಯು ಸದಾ ಸ್ಫೂರ್ತಿ ನೀಡುವುದು ಮುಂದುವರಿಯುತ್ತದೆ ಎಂದು ಒತ್ತಿ ಹೇಳಿದರು.ನವ ರಾಯ್‌ಪುರದ “ಸತ್ಯಸಾಯಿ ಸಂಜೀವಿನಿ ಮಕ್ಕಳ ಹೃದ್ರೋಗ ಆಸ್ಪತ್ರೆ”ಯಲ್ಲಿ ಯಶಸ್ವೀ ಹೃದ್ರೋಗ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡ ಮಕ್ಕಳೊಂದಿಗೆ ಪ್ರಧಾನಮಂತ್ರಿ ಸಂವಾದ
November 01st, 05:30 pm
ನಾನು ಹಾಕಿ ಚಾಂಪಿಯನ್. ನಾನು ಹಾಕಿಯಲ್ಲಿ 5 ಪದಕಗಳನ್ನು ಗೆದ್ದಿದ್ದೇನೆ. ನನ್ನ ಶಾಲೆಯಲ್ಲಿ ಆರೋಗ್ಯ ತಪಾಸಣೆ ಮಾಡಿಸಿದಾಗ, ನನ್ನ ಹೃದಯದಲ್ಲಿ ರಂಧ್ರವಿದೆ ಎಂದು ವೈದ್ಯರು ಪತ್ತೆ ಹಚ್ಚಿದರು. ನಾನು ಚಿಕಿತ್ಸೆಗಾಗಿ ಇಲ್ಲಿಗೆ ಬಂದೆ, ಶಸ್ತ್ರಚಿಕಿತ್ಸೆಗೆ ಒಳಗಾದೆ, ನಾನೀಗ ಗುಣಮುಖವಾಗಿದ್ದು, ನಾನು ಮತ್ತೆ ಹಾಕಿ ಆಡಬಹುದು.ಜನ್ಮಜಾತ ಹೃದಯ ಕಾಯಿಲೆಗಳನ್ನು ಉತ್ತಮ ಚಿಕಿತ್ಸೆ ಮೂಲಕ ನಿವಾರಿಸಿಕೊಂಡ ಮಕ್ಕಳೊಂದಿಗೆ ಸಂವಾದ ನಡೆಸಿದ ಪ್ರಧಾನಮಂತ್ರಿ
November 01st, 05:15 pm
'ಹೃದಯದ ಮಾತು (ದಿಲ್ ಕಿ ಬಾತ್)' ಕಾರ್ಯಕ್ರಮದ ಭಾಗವಾಗಿ, ಛತ್ತೀಸ್ ಗಢದ ನವ ರಾಯ್ ಪುರದ ಶ್ರೀ ಸತ್ಯ ಸಾಯಿ ಸಂಜೀವನಿ ಆಸ್ಪತ್ರೆಯಲ್ಲಿ ನಡೆದ 'ಜೀವನದ ಉಡುಗೊರೆ' ಸಮಾರಂಭದಲ್ಲಿ ಜನ್ಮಜಾತ ಹೃದಯ ಕಾಯಿಲೆಗಳಿಂದ ಯಶಸ್ವಿಯಾಗಿ ಚಿಕಿತ್ಸೆ ಪಡೆದ 2500 ಮಕ್ಕಳೊಂದಿಗೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಸಂವಾದ ನಡೆಸಿದರು.ದೇಶದಲ್ಲಿ ಸ್ನಾತಕೋತ್ತರ ಮತ್ತು ಪದವಿಪೂರ್ವ ವೈದ್ಯಕೀಯ ಶಿಕ್ಷಣ ಸಾಮರ್ಥ್ಯದ ಪ್ರಮುಖ ವಿಸ್ತರಣೆಗೆ ಸಂಪುಟ ಅನುಮೋದನೆ
September 24th, 05:52 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಪ್ರಸ್ತುತ ಅಸ್ತಿತ್ವದಲ್ಲಿರುವ ರಾಜ್ಯ ಸರ್ಕಾರ/ಕೇಂದ್ರ ಸರ್ಕಾರಿ ವೈದ್ಯಕೀಯ ಕಾಲೇಜುಗಳು/ಸ್ವತಂತ್ರ ಸ್ನಾತಕೋತ್ತರ ಸಂಸ್ಥೆಗಳು/ಸರ್ಕಾರಿ ಆಸ್ಪತ್ರೆಗಳ ಬಲಪಡಿಸುವಿಕೆ ಮತ್ತು ಮೇಲ್ದರ್ಜೆಗೇರಿಸುವ ಕೇಂದ್ರೀಯ ಪ್ರಾಯೋಜಿತ ಯೋಜನೆಯ (ಸಿಎಸ್ಎಸ್) ಹಂತ-ಹಂತದ ಅನುಷ್ಠಾನಕ್ಕೆ ಅನುಮೋದನೆ ನೀಡಿದೆ. 5,000 ಸ್ನಾತಕೋತ್ತರ ಸೀಟುಗಳನ್ನು ಹೆಚ್ಚಿಸಲು ಮತ್ತು ಅಸ್ತಿತ್ವದಲ್ಲಿರುವ ಸರ್ಕಾರಿ ವೈದ್ಯಕೀಯ ಕಾಲೇಜುಗಳ ಮೇಲ್ದರ್ಜೆಗೇರಿಸುವ ಸಿಎಸ್ಎಸ್ ವಿಸ್ತರಣೆಗೆ ಅನುಮೋದನೆ ನೀಡಿದೆ. 5,023 ಎಂಬಿಬಿಎಸ್ ಸೀಟುಗಳನ್ನು ಹೆಚ್ಚಿಸಲು ಪ್ರತಿ ಸೀಟಿಗೆ ರೂ. 1.50 ಕೋಟಿಗಳ ಹೆಚ್ಚಿನ ವೆಚ್ಚದ ಮಿತಿಯನ್ನು ಹೊಂದಿಸಬೇಕಾಗುತ್ತದೆ. ಈ ಉಪಕ್ರಮವು ಗಮನಾರ್ಹವಾಗಿ: ಪದವಿಪೂರ್ವ ವೈದ್ಯಕೀಯ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ; ಹೆಚ್ಚುವರಿ ಸ್ನಾತಕೋತ್ತರ ಸೀಟುಗಳನ್ನು ರಚಿಸುವ ಮೂಲಕ ತಜ್ಞ ವೈದ್ಯರ ಲಭ್ಯತೆ; ಮತ್ತು ಸರ್ಕಾರಿ ವೈದ್ಯಕೀಯ ಸಂಸ್ಥೆಗಳಲ್ಲಿ ಹೊಸ ವಿಶೇಷತೆಗಳನ್ನು ಪರಿಚಯಿಸಲು ಅನುವು ಮಾಡಿಕೊಡುತ್ತದೆ. ಇದು ದೇಶದಲ್ಲಿ ವೈದ್ಯರ ಒಟ್ಟಾರೆ ಲಭ್ಯತೆಯನ್ನು ಬಲಪಡಿಸುತ್ತದೆ.ಅಸ್ಸಾಂನ ದರ್ರಾಂಗ್‌ನಲ್ಲಿ ವಿವಿಧ ಅಭಿವೃದ್ಧಿ ಯೋಜನೆಗಳ ಉದ್ಘಾಟನಾ ಸಮಾರಂಭ ಉದ್ದೇಶಿಸಿ ಪ್ರಧಾನಮಂತ್ರಿ ಭಾಷಣ
September 14th, 11:30 am
ಭಾರತ್ ಮಾತಾ ಕಿ ಜೈ, ಭಾರತ್ ಮಾತಾ ಕಿ ಜೈ, ಭಾರತ್ ಮಾತಾ ಕಿ ಜೈ! ಅಸ್ಸಾಂನ ಜನಪ್ರಿಯ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಜಿ, ಕೇಂದ್ರ ಸಚಿವ ಸಂಪುಟದ ನನ್ನ ಸಹೋದ್ಯೋಗಿ ಶ್ರೀ ಸರ್ಬಾನಂದ ಸೋನೋವಾಲ್ ಜಿ, ಅಸ್ಸಾಂ ಸರ್ಕಾರದ ಎಲ್ಲಾ ಸಚಿವರು, ಸಂಸತ್ ಸದಸ್ಯರು ಮತ್ತು ಶಾಸಕರು, ಇಲ್ಲಿರುವ ಸಾರ್ವಜನಿಕ ಪ್ರತಿನಿಧಿಗಳೆ, ನಿರಂತರ ಮಳೆಯ ನಡುವೆಯೂ ನಮ್ಮನ್ನು ಆಶೀರ್ವದಿಸಲು ಇಲ್ಲಿಗೆ ಬಂದಿರುವ ನನ್ನ ಪ್ರೀತಿಯ ಸಹೋದರ ಸಹೋದರಿಯರೆ – ನಿಮ್ಮೆಲ್ಲರಿಗೂ ಹೃತ್ಪೂರ್ವಕ ನಮಸ್ಕಾರ.ಅಸ್ಸಾಂನ ದರ್ರಾಂಗ್‌ನಲ್ಲಿ ಸುಮಾರು 6,500 ಕೋಟಿ ರೂ. ಮೌಲ್ಯದ ಅಭಿವೃದ್ಧಿ ಕಾಮಗಾರಿಗಳಿಗೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಶಂಕುಸ್ಥಾಪನೆ, ಉದ್ಘಾಟನೆ
September 14th, 11:00 am
ಆಪರೇಷನ್ ಸಿಂದೂರ್ ಯಶಸ್ಸಿನ ನಂತರ, ನಿನ್ನೆ ಮೊದಲ ಬಾರಿಗೆ ಅಸ್ಸಾಂಗೆ ಭೇಟಿ ನೀಡಿದ್ದಾಗಿ ಪ್ರಧಾನಮಂತ್ರಿ ಅವರು ಹೇಳಿದರು. ಕಾರ್ಯಾಚರಣೆಯ ಅದ್ಭುತ ಯಶಸ್ಸಿಗೆ ಮಾತೆ ಕಾಮಾಕ್ಯಳ ಆಶೀರ್ವಾದ ಕಾರಣ. ಆಕೆಯ ಪವಿತ್ರ ಭೂಮಿಯಲ್ಲಿ ಕಾಲಿಟ್ಟಾಗ ಆಳವಾದ ಆಧ್ಯಾತ್ಮಿಕ ತೃಪ್ತಿ ತಂದಿತು. ಅಸ್ಸಾಂನಲ್ಲಿ ಆಚರಿಸಲಾಗುತ್ತಿರುವ ಶ್ರೀಕೃಷ್ಣ ಜನ್ಮಾಷ್ಟಮಿ ಶುಭಾಶಯಗಳನ್ನು ಸಲ್ಲಿಸಿದರು. ಕೆಂಪುಕೋಟೆಯ ಮೇಲೆ ಮಾಡಿದ ಭಾಷಣವನ್ನು ಪುನರುಚ್ಚರಿಸಿದ ಶ್ರೀ ಮೋದಿ, ಭಾರತದ ಭದ್ರತಾ ಕಾರ್ಯತಂತ್ರದಲ್ಲಿ 'ಸುದರ್ಶನ-ಚಕ್ರ'ದ ಕಲ್ಪನೆಯನ್ನು ತಾವು ಪ್ರಸ್ತುತಪಡಿಸಿದೆವು. ಮಂಗಲ್ಡೋಯ್ ತಾಣವು ಸಂಸ್ಕೃತಿ, ಐತಿಹಾಸಿಕ ಹೆಮ್ಮೆ ಮತ್ತು ಭವಿಷ್ಯದ ಭರವಸೆಯ ಸಂಗಮ ಸ್ಥಳ. ಈ ಪ್ರದೇಶವು ಅಸ್ಸಾಂನ ಗುರುತಿನ ಕೇಂದ್ರದ ಸಂಕೇತವಾಗಿದೆ. ಸ್ಫೂರ್ತಿ ಮತ್ತು ಶೌರ್ಯದಿಂದ ತುಂಬಿರುವ ಈ ಭೂಮಿಯಲ್ಲಿ, ಜನರನ್ನು ಭೇಟಿ ಮಾಡಲು ಮತ್ತು ಅವರೊಂದಿಗೆ ಮಾತುಕತೆ ನಡೆಸಲು ಅವಕಾಶ ಸಿಕ್ಕಿದ್ದು ತಮ್ಮ ಅದೃಷ್ಟ ಎಂದು ಪ್ರಧಾನಮಂತ್ರಿ ಹೇಳಿದರು.ನಮೀಬಿಯಾದ ರಾಷ್ಟ್ರೀಯ ಅಸೆಂಬ್ಲಿಯನ್ನುದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
July 09th, 08:14 pm
ಪ್ರಜಾಪ್ರಭುತ್ವದ ತಾಯಿ ಎನಿಸಿದ ದೇಶದ ಪ್ರತಿನಿಧಿಯಾಗಿ ನಾನು ನಿಮ್ಮ ಮುಂದೆ ನಿಂತಿದ್ದೇನೆ. ನಾನು ನನ್ನೊಂದಿಗೆ 140 ಕೋಟಿ ಭಾರತೀಯರ ಆತ್ಮೀಯ ಶುಭಾಶಯಗಳನ್ನು ತಂದಿದ್ದೇನೆ.Prime Minister addresses the Namibian Parliament
July 09th, 08:00 pm
PM Modi addressed the Parliament of Namibia and expressed gratitude to the people of Namibia for conferring upon him their highest national honour. Recalling the historic ties and shared struggle for freedom between the two nations, he paid tribute to Dr. Sam Nujoma, the founding father of Namibia. He also called for enhanced people-to-people exchanges between the two countries.ಟ್ರಿನಿಡಾಡ್ ಮತ್ತು ಟೊಬಾಗೋ ಸಂಸತ್ತಿನ ಜಂಟಿ ಅಧಿವೇಶನವನ್ನುದ್ದೇಶಿಸಿ ಪ್ರಧಾನಮಂತ್ರಿ ಭಾಷಣ
July 04th, 09:30 pm
ಈ ಐತಿಹಾಸಿಕ 'ರೆಡ್ ಹೌಸ್'ನಲ್ಲಿ ನಿಮ್ಮನ್ನು ಉದ್ದೇಶಿಸಿ ಮಾತನಾಡಿದ ಮೊದಲ ಭಾರತೀಯ ಪ್ರಧಾನಿಯಾಗಿರುವುದು ನನಗೆ ದೊರೆತ ವಿನಮ್ರ ಗೌರವ. ಈ ಐತಿಹಾಸಿಕ ಕಟ್ಟಡವು ಟ್ರಿನಿಡಾಡ್ ಮತ್ತು ಟೊಬಾಗೋ ಜನರ ಸ್ವಾತಂತ್ರ್ಯ ಮತ್ತು ಘನತೆಗಾಗಿ ನಡೆದ ಹೋರಾಟ ಹಾಗೂ ತ್ಯಾಗಗಳಿಗೆ ಸಾಕ್ಷಿಯಾಗಿದೆ. ಕಳೆದ ಆರು ದಶಕಗಳಲ್ಲಿ ನೀವು ನ್ಯಾಯನಿಷ್ಠ, ಸರ್ವಸಮ್ಮತ ಹಾಗೂ ಸಮೃದ್ಧಿಯುತ ಪ್ರಜಾಪ್ರಭುತ್ವವನ್ನು ರೂಪಿಸುವಲ್ಲಿ, ಈ ಭವನವು ನಿಮ್ಮ ಪಯಣದ ದೃಢ ಹೆಗ್ಗುರುತಾಗಿ ನಿಂತಿದೆ.ಟ್ರಿನಿಡಾಡ್ ಮತ್ತು ಟೊಬಾಗೊ ಸಂಸತ್ತಿನ ಜಂಟಿ ಅಧಿವೇಶನ ಉದ್ದೇಶಿಸಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಭಾಷಣ
July 04th, 09:00 pm
ಸೆನೆಟ್ ಅಧ್ಯಕ್ಷರಾದ ಗೌರವಾನ್ವಿತ ವೇಡ್ ಮಾರ್ಕ್ ಮತ್ತು ಸದನದ ಸ್ಪೀಕರ್ ಗೌರವಾನ್ವಿತ ಜಗದೇವ್ ಸಿಂಗ್ ಅವರ ಆಹ್ವಾನದ ಮೇರೆಗೆ, ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಟ್ರಿನಿಡಾಡ್ ಮತ್ತು ಟೊಬಾಗೊ ಸಂಸತ್ತಿನ ಜಂಟಿ ಸಭೆಯನ್ನು ಉದ್ದೇಶಿಸಿ ಇಂದು ಮಾತನಾಡಿದರು. ಟ್ರಿನಿಡಾಡ್ ಮತ್ತು ಟೊಬಾಗೊ ಸಂಸತ್ತನ್ನು ಉದ್ದೇಶಿಸಿ ಮಾತನಾಡಿದ ಭಾರತದ ಮೊದಲ ಪ್ರಧಾನ ಮಂತ್ರಿ ಮೋದಿ ಅವರು, ಈ ಸಂದರ್ಭವು ಭಾರತ-ಟ್ರಿನಿಡಾಡ್ ಮತ್ತು ಟೊಬಾಗೊ ನಡುವಿನ ದ್ವಿಪಕ್ಷೀಯ ಸಂಬಂಧಗಳಲ್ಲಿ ಒಂದು ಮೈಲಿಗಲ್ಲು ಗುರುತಿಸಿದೆ ಎಂದರು.ಘಾನಾ ಅಧ್ಯಕ್ಷರೊಂದಿಗಿನ ಜಂಟಿ ಪತ್ರಿಕಾ ಹೇಳಿಕೆಯ ಸಂದರ್ಭದಲ್ಲಿ ಪ್ರಧಾನಮಂತ್ರಿ ಅವರ ಪತ್ರಿಕಾ ಹೇಳಿಕೆ
July 03rd, 12:32 am
ಮೂರು ದಶಕಗಳ ಸುದೀರ್ಘ ಅಂತರದ ನಂತರ, ಭಾರತದ ಪ್ರಧಾನಮಂತ್ರಿಯೊಬ್ಬರು ಘಾನಾಗೆ ಭೇಟಿ ನೀಡುತ್ತಿದ್ದಾರೆ.ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ದಿನಾಂಕ 29.06.2025 ರಂದು ಮಾಡಿದ ‘ಮನ್ ಕಿ ಬಾತ್’ – 123ನೇ ಸಂಚಿಕೆಯ ಕನ್ನಡ ಅವತರಣಿಕೆ
June 29th, 11:30 am
ನನ್ನ ಪ್ರಿಯ ದೇಶವಾಸಿಗಳೇ, ನಮಸ್ಕಾರ. ‘ಮನದ ಮಾತು’ ಕಾರ್ಯಕ್ರಮಕ್ಕೆ ಸ್ವಾಗತ, ನಿಮ್ಮೆಲ್ಲರಿಗೂ ಅಭಿನಂದನೆಗಳು. ಯೋಗದ ಶಕ್ತಿ ಮತ್ತು ‘ಅಂತಾರಾಷ್ಟ್ರೀಯ ಯೋಗ ದಿನ’ದ ನೆನಪುಗಳಿಂದ ನಿಮ್ಮ ಮನ ಉತ್ಸಾಹದಿಂದಿರಬಹುದು. ಈ ಬಾರಿಯೂ, ಜೂನ್ 21 ರಂದು, ದೇಶ ಮತ್ತು ವಿದೇಶಗಳ ಕೋಟ್ಯಂತರ ಜನರು ‘ಅಂತಾರಾಷ್ಟ್ರೀಯ ಯೋಗ ದಿನ’ದಲ್ಲಿ ಭಾಗವಹಿಸಿದ್ದರು. ಇದು 10 ವರ್ಷಗಳ ಹಿಂದೆ ಪ್ರಾರಂಭವಾಯಿತು ಎಂಬುದು ನಿಮಗೆ ನೆನಪಿದೆಯೇ. ಈ 10 ವರ್ಷಗಳಲ್ಲಿ, ಈ ಯೋಗ ದಿನಾಚರಣೆ ಪ್ರತಿ ವರ್ಷವೂ ಭವ್ಯವಾಗುತ್ತಲೇ ಸಾಗುತ್ತಿದೆ. ಹೆಚ್ಚು ಜನರು ತಮ್ಮ ದೈನಂದಿನ ಜೀವನದಲ್ಲಿ ಯೋಗವನ್ನು ಅಳವಡಿಸಿಕೊಳ್ಳುತ್ತಿದ್ದಾರೆ ಎಂಬುದರ ಸಂಕೇತವೂ ಇದಾಗಿದೆ. ಈ ಬಾರಿ ‘ಯೋಗ ದಿನ’ದ ಸಾಕಷ್ಟು ಆಕರ್ಷಕ ಚಿತ್ರಗಳನ್ನು ನಾವು ನೋಡಿದ್ದೇವೆ. ವಿಶಾಖಪಟ್ಟಣದ ಕಡಲತೀರದಲ್ಲಿ ಮೂರು ಲಕ್ಷ ಜನರು ಒಗ್ಗೂಡಿ ಯೋಗ ಮಾಡಿದರು. ವಿಶಾಖಪಟ್ಟಣದಿಂದಲೇ ಮತ್ತೊಂದು ಅದ್ಭುತ ಕಾರ್ಯಕ್ರಮ ನಡೆದಿರುವುದು ತಿಳಿದು ಬಂದಿದೆ. ಎರಡು ಸಾವಿರಕ್ಕೂ ಹೆಚ್ಚು ಬುಡಕಟ್ಟು ವಿದ್ಯಾರ್ಥಿಗಳು 108 ನಿಮಿಷಗಳ ಕಾಲ 108 ಸೂರ್ಯ ನಮಸ್ಕಾರಗಳನ್ನು ಇಲ್ಲಿ ಮಾಡಿದ್ದಾರೆ. ಅದೆಷ್ಟು ಶಿಸ್ತು, ಅದೆಷ್ಟು ಸಮರ್ಪಣೆ ಇದ್ದಿರಬೇಕು ಎಂದು ಕಲ್ಪಿಸಿಕೊಳ್ಳಿ. ನಮ್ಮ ನೌಕಾಪಡೆಯ ಹಡಗುಗಳಲ್ಲಿಯೂ ಸಹ ಯೋಗದ ಭವ್ಯ ಪ್ರದರ್ಶನ ನಡೆಯಿತು. ತೆಲಂಗಾಣದಲ್ಲಿ, ಮೂರು ಸಾವಿರ ದಿವ್ಯಾಂಗರು ಒಟ್ಟಾಗಿ ಯೋಗ ಶಿಬಿರದಲ್ಲಿ ಭಾಗವಹಿಸಿದರು. ಯೋಗವು ಯಾವ ರೀತಿ ಸಬಲೀಕರಣದ ಮಾಧ್ಯಮವಾಗಿದೆ ಎಂಬುದನ್ನು ಅವರು ತೋರಿಸಿದರು. ದೆಹಲಿಯ ಜನರು ಶುದ್ಧ ಯಮುನೆಯ ಸಂಕಲ್ಪದೊಂದಿಗೆ ಯಮುನಾ ನದಿ ತೀರದಲ್ಲಿ ಯೋಗ ಪ್ರದರ್ಶನ ಮಾಡಿದರು ಜಮ್ಮು ಮತ್ತು ಕಾಶ್ಮೀರದಲ್ಲಿರುವ ವಿಶ್ವದ ಅತಿ ಎತ್ತರದ ರೈಲ್ವೆ ಸೇತುವೆಯಾದ ಚೆನಾಬ್ ಸೇತುವೆಯಲ್ಲಿಯೂ ಜನರು ಯೋಗ ಮಾಡಿದರು. ಹಿಮಾಲಯದ ಹಿಮಭರಿತ ಶಿಖರಗಳು ಮತ್ತು ಐಟಿಬಿಪಿ ಸೈನಿಕರು ಕೂಡಾ ಯೋಗ ಪ್ರದರ್ಶನದಲ್ಲಿ ಪಾಲ್ಗೊಂಡರು. ಶೌರ್ಯ ಮತ್ತು ಸಾಧನೆ ಜೊತೆಗೆ ಹೆಜ್ಜೆ ಹಾಕಿದವು. ಗುಜರಾತ್‌ನ ಜನರು ಕೂಡ ಹೊಸ ಇತಿಹಾಸವನ್ನು ಸೃಷ್ಟಿಸಿದರು. ವಡ್ನಗರದಲ್ಲಿ, 2121 (ಎರಡು ಸಾವಿರದ ನೂರ ಇಪ್ಪತ್ತೊಂದು) ಜನರು ಒಟ್ಟಿಗೆ ಭುಜಂಗಾಸನವನ್ನು ಮಾಡಿದರು ಮತ್ತು ಹೊಸ ದಾಖಲೆಯನ್ನು ಸೃಷ್ಟಿಸಿದರು. ನ್ಯೂಯಾರ್ಕ್, ಲಂಡನ್, ಟೋಕಿಯೊ, ಪ್ಯಾರಿಸ್, ಪ್ರಪಂಚದ ಪ್ರತಿಯೊಂದು ಮಹಾ ನಗರಗಳಿಂದಲೂ ಯೋಗಾಭ್ಯಾಸದ ಚಿತ್ರಗಳು ತಲುಪಿದವು ಮತ್ತು ಪ್ರತಿ ಚಿತ್ರದಲ್ಲೂ ಶಾಂತಿ, ಸ್ಥಿರತೆ ಮತ್ತು ಸಮತೋಲನ ಎಂಬ ವಿಷಯಗಳು ವಿಶೇಷವಾಗಿದ್ದವು. ಈ ಬಾರಿಯ ತತ್ವವು ಬಹಳ ವಿಶೇಷವಾಗಿತ್ತು, ‘Yoga for One Earth, One Health, ಅಂದರೆ 'ಒಂದು ಭೂಮಿ, ಒಂದು ಆರೋಗ್ಯಕ್ಕಾಗಿ ಯೋಗ'. ಇದು ಕೇವಲ ಒಂದು ಘೋಷಣೆಯಲ್ಲ, 'ವಸುಧೈವ ಕುಟುಂಬಕಂ' ಎಂಬುದರ ಅನುಭೂತಿ ನಮಗೆ ಮೂಡುವಂತೆ ಮಾಡುವ ನಿರ್ದೇಶನವಾಗಿದೆ. ಈ ವರ್ಷದ ಯೋಗ ದಿನದ ಭವ್ಯತೆ ಖಂಡಿತವಾಗಿಯೂ ಹೆಚ್ಚು ಹೆಚ್ಚು ಜನರನ್ನು ಯೋಗಾಭ್ಯಾಸದಲ್ಲಿ ಅಳವಡಿಸಿಕೊಳ್ಳುವಂತೆ ಪ್ರೇರೇಪಿಸುತ್ತದೆ ಎಂದು ನನಗೆ ವಿಶ್ವಾಸವಿದೆ.ಪಾಡ್‌ಕ್ಯಾಸ್ಟ್ ನಲ್ಲಿ ಲೆಕ್ಸ್ ಫ್ರಿಡ್ಮನ್ ಅವರೊಂದಿಗಿನ ಪ್ರಧಾನಮಂತ್ರಿಯವರ ಮಾತುಕತೆಯ ಕನ್ನಡ ಅನುವಾದ
March 16th, 11:47 pm
ಪ್ರಧಾನಮಂತ್ರಿ ನರೇಂದ್ರ ಮೋದಿ: ನನ್ನ ಶಕ್ತಿ ಇರುವುದು ಮೋದಿಯಾಗಿರುವುದರಲ್ಲಿ ಅಲ್ಲ; ಅದು 140 ಕೋಟಿ ಭಾರತೀಯರಿಂದ ಬಂದಿದೆ, ಸಾವಿರಾರು ವರ್ಷಗಳ ನಮ್ಮ ದೇಶದ ಶ್ರೀಮಂತ ಸಾಂಸ್ಕೃತಿಕ ಮತ್ತು ಐತಿಹಾಸಿಕ ಪರಂಪರೆಯಿಂದ ಬಂದಿದೆ. ಅದೇ ನನ್ನ ನಿಜವಾದ ಶಕ್ತಿ. ನಾನು ಎಲ್ಲಿಗೆ ಹೋದರೂ, ಮೋದಿಯಾಗಿ ಹೋಗುವುದಿಲ್ಲ - ವೇದಗಳಿಂದ ವಿವೇಕಾನಂದರವರೆಗೆ ನಮ್ಮ ನಾಗರಿಕತೆಯ ಸಾವಿರಾರು ವರ್ಷಗಳ ಹಳೆಯ ಶ್ರೇಷ್ಠ ಸಂಪ್ರದಾಯಗಳನ್ನು ನನ್ನೊಂದಿಗೆ ಕೊಂಡೊಯ್ಯತೇನೆ. ನಾನು 140 ಕೋಟಿ ಜನರನ್ನು, ಅವರ ಕನಸುಗಳನ್ನು ಮತ್ತು ಅವರ ಆಕಾಂಕ್ಷೆಗಳನ್ನು ಪ್ರತಿನಿಧಿಸುತ್ತೇನೆ. ಅದಕ್ಕಾಗಿಯೇ, ನಾನು ಯಾವುದೇ ವಿಶ್ವ ನಾಯಕರೊಂದಿಗೆ ಕೈಕುಲುಕಿದಾಗ, ಅದು ಕೇವಲ ಮೋದಿಯವರ ಕೈ ಆಗಿರುವುದಿಲ್ಲ - ಅದು 140 ಕೋಟಿ ಭಾರತೀಯರ ಸಾಮೂಹಿಕ ಕೈ ಆಗಿರುತ್ತದೆ. ನನ್ನ ಶಕ್ತಿ ಮೋದಿಯದ್ದಲ್ಲ; ಅದು ಭಾರತದ ಶಕ್ತಿ. ನಾವು ಶಾಂತಿಯ ಬಗ್ಗೆ ಮಾತನಾಡುವಾಗಲೆಲ್ಲಾ, ಜಗತ್ತು ಕೇಳುತ್ತದೆ, ಏಕೆಂದರೆ ಇದು ಬುದ್ಧನ ನಾಡು, ಮಹಾತ್ಮ ಗಾಂಧಿಯವರ ನಾಡು. ನಾವು ಸಂಘರ್ಷದ ಪ್ರತಿಪಾದಕರಲ್ಲ; ನಾವು ಸಾಮರಸ್ಯವನ್ನು ಪ್ರತಿಪಾದಿಸುತ್ತೇವೆ. ನಾವು ಪ್ರಕೃತಿಯೊಂದಿಗೆ ಸಂಘರ್ಷ ಅಥವಾ ರಾಷ್ಟ್ರಗಳ ನಡುವಿನ ಕಲಹವನ್ನು ಬಯಸುವುದಿಲ್ಲ - ನಾವು ಸಹಕಾರದಲ್ಲಿ ನಂಬಿಕೆ ಇಡುವ ಜನರು ಮತ್ತು ನಾವು ಶಾಂತಿಯನ್ನು ಉತ್ತೇಜಿಸಲು ಯಾವುದೇ ರೀತಿಯಲ್ಲಿ ಕೊಡುಗೆ ನೀಡಲು ಸಾಧ್ಯವಾದರೆ, ನಾವು ಯಾವಾಗಲೂ ಅದನ್ನು ಮಾಡಲು ಪ್ರಯತ್ನಿಸುತ್ತೇವೆ. ನನ್ನ ಜೀವನವು ಅತ್ಯಂತ ಬಡತನದಿಂದ ಬಂದಿದೆ, ಆದರೂ ನಾವು ಅದರ ಹೊರೆಯನ್ನು ಎಂದಿಗೂ ಅನುಭವಿಸಲಿಲ್ಲ. ಜೀವನದುದ್ದಕ್ಕೂ ಬೂಟುಗಳನ್ನು ಧರಿಸಿದ ವ್ಯಕ್ತಿಗೆ ಇದ್ದಕ್ಕಿದ್ದಂತೆ ಅವುಗಳಿಲ್ಲದೆ ಹೋದರೆ ಅವನು ಕಷ್ಟಪಡಬೇಕಾಗಬಹುದು. ಆದರೆ ಎಂದಿಗೂ ಬೂಟುಗಳನ್ನು ಧರಿಸದವರಿಗೆ, ಅಭಾವದ ಭಾವನೆಯೇ ಇರುವುದಿಲ್ಲ - ನಾವು ನಮ್ಮ ಜೀವನವನ್ನು ಅದು ಇದ್ದಂತೆಯೇ ಸರಳವಾಗಿ ಬದುಕಿದ್ದೇವೆ.ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಲೆಕ್ಸ್ ಫ್ರಿಡ್ಮನ್ ಅವರೊಂದಿಗೆ ʻಪಾಡ್‌ಕಾಸ್ಟ್ʼನಲ್ಲಿ ಸಂವಾದ ನಡೆಸಿದರು
March 16th, 05:30 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಲೆಕ್ಸ್ ಫ್ರಿಡ್ಮನ್ ಅವರೊಂದಿಗೆ ಇಂದು ವಿವಿಧ ವಿಷಯಗಳ ಬಗ್ಗೆ ʻಪಾಡ್‌ಕಾಸ್ಟ್ʼನಲ್ಲಿ ಸಂವಾದ ನಡೆಸಿದರು. ಪ್ರಾಮಾಣಿಕವಾದ, ಮನದಾಳದ ಮಾತುಕತೆಯ ವೇಳೆ ಪ್ರಧಾನಿ ಅವರನ್ನು ನೀವು ಏಕೆ ಉಪವಾಸ ಮಾಡುತ್ತೀರಿ ಮತ್ತು ಹೇಗೆ ನಿರ್ವಹಿಸುತ್ತೀರಿ ಎಂದು ಕೇಳಿದಾಗ, ಪ್ರಧಾನಿಯವರು ತಮ್ಮ ಮೇಲಿನ ಗೌರವದ ಸಂಕೇತವಾಗಿ ಉಪವಾಸ ಮಾಡಿದ ಪಾಡ್‌ಕಾಸ್ಟರ್ ಲೆಕ್ಸ್ ಫ್ರಿಡ್ಮನ್ ಅವರಿಗೆ ಕೃತಜ್ಞತೆ ಸಲ್ಲಿಸಿದರು. ಭಾರತದಲ್ಲಿ, ಧಾರ್ಮಿಕ ಸಂಪ್ರದಾಯಗಳು ದೈನಂದಿನ ಜೀವನದೊಂದಿಗೆ ಆಳವಾಗಿ ಹೆಣೆದುಕೊಂಡಿವೆ ಎಂದು ಶ್ರೀ ಮೋದಿ ಹೇಳಿದರು. ಹಿಂದೂ ಧರ್ಮವು ಕೇವಲ ಆಚರಣೆಗಳ ಕುರಿತಾದದ್ದಲ್ಲ. ಅದು ಜೀವನಕ್ಕೆ ಮಾರ್ಗದರ್ಶನ ನೀಡುವ ತತ್ವಶಾಸ್ತ್ರವಾಗಿದೆ ಎಂದು ಹೇಳಿದ ಶ್ರೀ ಮೋದಿ ಅವರು ಈ ಕುರಿತು ಭಾರತದ ಗೌರವಾನ್ವಿತ ಸರ್ವೋಚ್ಚ ನ್ಯಾಯಾಲಯದ ವ್ಯಾಖ್ಯಾನವನ್ನು ಉಲ್ಲೇಖಿಸಿದರು. ಉಪವಾಸವು ಶಿಸ್ತನ್ನು ಬೆಳೆಸಲು ಹಾಗೂ ಮನಸ್ಸು ಹಾಗೂ ದೇಹವನ್ನು ಸಮತೋಲನಗೊಳಿಸಲು ಒಂದು ಸಾಧನವಾಗಿದೆ ಎಂದು ಅವರು ಒತ್ತಿ ಹೇಳಿದರು. ಉಪವಾಸವು ಇಂದ್ರಿಯಗಳ ಪ್ರಜ್ಞೆಯನ್ನು ಹೆಚ್ಚಿಸುತ್ತದೆ, ಅವುಗಳನ್ನು ಹೆಚ್ಚು ಸೂಕ್ಷ್ಮ ಮತ್ತು ಜಾಗೃತಗೊಳಿಸುತ್ತದೆ ಎಂದು ಪ್ರಧಾನಿ ಹೇಳಿದರು. ಉಪವಾಸದ ಸಮಯದಲ್ಲಿ, ಅತ್ಯಂತ ಸೂಕ್ಷ್ಮವಾದ ಸುವಾಸನೆ ಮತ್ತು ವಿವರಗಳನ್ನು ಸಹ ಹೆಚ್ಚು ಸ್ಪಷ್ಟವಾಗಿ ಗ್ರಹಿಸಬಹುದು ಎಂದು ಅವರು ಹೇಳಿದರು. ಉಪವಾಸವು ಆಲೋಚನಾ ಪ್ರಕ್ರಿಯೆಯನ್ನು ವೇಗಗೊಳಿಸುತ್ತದೆ, ಹೊಸ ದೃಷ್ಟಿಕೋನಗಳನ್ನು ಒದಗಿಸುತ್ತದೆ ಮತ್ತು ರೂಢಿಗತವಲ್ಲದ ರೀತಿಯಲ್ಲಿ (ಔಟ್ ಆಫ್ ದಿ ಬಾಕ್ಸ್) ಆಲೋಚನೆಯನ್ನು ಉತ್ತೇಜಿಸುತ್ತದೆ ಎಂದು ಅವರು ಒತ್ತಿ ಹೇಳಿದರು. ಉಪವಾಸವೆಂದರೆ ಕೇವಲ ಆಹಾರವನ್ನು ತ್ಯಜಿಸುವುದಷ್ಟೇ ಅಲ್ಲ ಎಂದು ಶ್ರೀ ಮೋದಿ ಸ್ಪಷ್ಟಪಡಿಸಿದರು. ಇದು ಪೂರ್ವ ಸಿದ್ಧತೆ ಮತ್ತು ನಿರ್ವಿಷೀಕರಣದ (ಡಿಟಾಕ್ಸಿಕೇಷನ್) ವೈಜ್ಞಾನಿಕ ಪ್ರಕ್ರಿಯೆಯನ್ನು ಒಳಗೊಂಡಿದೆ. ಹಲವಾರು ದಿನಗಳ ಮುಂಚಿತವಾಗಿ ಆಯುರ್ವೇದ ಮತ್ತು ಯೋಗ ಅಭ್ಯಾಸಗಳನ್ನು ಅನುಸರಿಸುವ ಮೂಲಕ ತಮ್ಮ ದೇಹವನ್ನು ಉಪವಾಸಕ್ಕಾಗಿ ಸಜ್ಜುಗೊಳಿಸುವುದಾಗಿ ಅವರು ಒತ್ತಿ ಹೇಳಿದರು ಮತ್ತು ಈ ಅವಧಿಯಲ್ಲಿ ದೇಹದಲ್ಲಿ ನೀರಿನ ಅಂಶವನ್ನು ಕಾಯ್ದುಕೊಳ್ಳುವುದರ ಮಹತ್ವವನ್ನು ಒತ್ತಿ ಹೇಳಿದರು. ಉಪವಾಸ ಪ್ರಾರಂಭವಾದ ನಂತರ, ಅವರು ಅದನ್ನು ಭಕ್ತಿ ಮತ್ತು ಸ್ವಯಂ ಶಿಸ್ತಿನ ಕ್ರಿಯೆಯಾಗಿ ನೋಡುವುದಾಗಿ, ಮತ್ತು ಇದು ಆಳವಾದ ಆತ್ಮಾವಲೋಕನ ಮತ್ತು ಏಕಾಗ್ರತೆಗೆ ಅನುವು ಮಾಡಿಕೊಡುತ್ತದೆ ಎಂದು ಹೇಳಿದರು. ತಮ್ಮ ಶಾಲಾ ದಿನಗಳಲ್ಲಿ ಉಪವಾಸದ ಅಭ್ಯಾಸವು ವೈಯಕ್ತಿಕ ಅನುಭವದಿಂದ ಪ್ರಾರಂಭವಾಯಿತು. ಮಹಾತ್ಮಾ ಗಾಂಧಿಯವರಿಂದ ಸ್ಫೂರ್ತಿಪಡೆದ ಆಂದೋಲನದಿಂದ ಅದು ಶುರುವಾಯಿತು ಎಂದು ಪ್ರಧಾನಿ ಹಂಚಿಕೊಂಡರು. ಅವರು ತಮ್ಮ ಮೊದಲ ಉಪವಾಸದ ಸಮಯದಲ್ಲಿ ಶಕ್ತಿ ಮತ್ತು ಜಾಗೃತಿಯಲ್ಲಿ ಉಂಟಾದ ತೀವ್ರತೆಯ ಅನುಭವನ್ನು ವಿವರಿಸಿದರು. ಅದು ಉಪವಾಸದ ಪರಿವರ್ತಕ ಶಕ್ತಿಯನ್ನು ತಮಗೆ ಮನವರಿಕೆ ಮಾಡಿಕೊಟ್ಟಿತು ಎಂದರು. ಉಪವಾಸವು ತಮ್ಮನ್ನು ತಾಮಸ ಅಥವಾ ನಿಧಾನಗೊಳಿಸುವುದಿಲ್ಲ. ಬದಲಾಗಿ, ಇದು ಆಗಾಗ್ಗೆ ತಮ್ಮ ಉತ್ಪಾದಕತೆಯನ್ನು ಹೆಚ್ಚಿಸುತ್ತದೆ ಎಂದು ಅವರು ಒತ್ತಿ ಹೇಳಿದರು. ಉಪವಾಸದ ಸಮಯದಲ್ಲಿ, ಅವರ ಆಲೋಚನೆಗಳು ಹೆಚ್ಚು ಮುಕ್ತವಾಗಿ ಮತ್ತು ಸೃಜನಶೀಲವಾಗಿ ಹರಿಯುತ್ತವೆ, ಇದು ತಮ್ಮನ್ನು ವ್ಯಕ್ತಪಡಿಸಲು ಅದ್ಭುತ ಅನುಭವವನ್ನು ನೀಡುತ್ತದೆ ಎಂದು ಅವರು ವಿವರಿಸಿದರು.