ನವ ರಾಯ್‌ಪುರದ “ಸತ್ಯಸಾಯಿ ಸಂಜೀವಿನಿ ಮಕ್ಕಳ ಹೃದ್ರೋಗ ಆಸ್ಪತ್ರೆ”ಯಲ್ಲಿ ಯಶಸ್ವೀ ಹೃದ್ರೋಗ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡ ಮಕ್ಕಳೊಂದಿಗೆ ಪ್ರಧಾನಮಂತ್ರಿ ಸಂವಾದ
November 01st, 05:30 pm
ನಾನು ಹಾಕಿ ಚಾಂಪಿಯನ್. ನಾನು ಹಾಕಿಯಲ್ಲಿ 5 ಪದಕಗಳನ್ನು ಗೆದ್ದಿದ್ದೇನೆ. ನನ್ನ ಶಾಲೆಯಲ್ಲಿ ಆರೋಗ್ಯ ತಪಾಸಣೆ ಮಾಡಿಸಿದಾಗ, ನನ್ನ ಹೃದಯದಲ್ಲಿ ರಂಧ್ರವಿದೆ ಎಂದು ವೈದ್ಯರು ಪತ್ತೆ ಹಚ್ಚಿದರು. ನಾನು ಚಿಕಿತ್ಸೆಗಾಗಿ ಇಲ್ಲಿಗೆ ಬಂದೆ, ಶಸ್ತ್ರಚಿಕಿತ್ಸೆಗೆ ಒಳಗಾದೆ, ನಾನೀಗ ಗುಣಮುಖವಾಗಿದ್ದು, ನಾನು ಮತ್ತೆ ಹಾಕಿ ಆಡಬಹುದು.ಜನ್ಮಜಾತ ಹೃದಯ ಕಾಯಿಲೆಗಳನ್ನು ಉತ್ತಮ ಚಿಕಿತ್ಸೆ ಮೂಲಕ ನಿವಾರಿಸಿಕೊಂಡ ಮಕ್ಕಳೊಂದಿಗೆ ಸಂವಾದ ನಡೆಸಿದ ಪ್ರಧಾನಮಂತ್ರಿ
November 01st, 05:15 pm
'ಹೃದಯದ ಮಾತು (ದಿಲ್ ಕಿ ಬಾತ್)' ಕಾರ್ಯಕ್ರಮದ ಭಾಗವಾಗಿ, ಛತ್ತೀಸ್ ಗಢದ ನವ ರಾಯ್ ಪುರದ ಶ್ರೀ ಸತ್ಯ ಸಾಯಿ ಸಂಜೀವನಿ ಆಸ್ಪತ್ರೆಯಲ್ಲಿ ನಡೆದ 'ಜೀವನದ ಉಡುಗೊರೆ' ಸಮಾರಂಭದಲ್ಲಿ ಜನ್ಮಜಾತ ಹೃದಯ ಕಾಯಿಲೆಗಳಿಂದ ಯಶಸ್ವಿಯಾಗಿ ಚಿಕಿತ್ಸೆ ಪಡೆದ 2500 ಮಕ್ಕಳೊಂದಿಗೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಸಂವಾದ ನಡೆಸಿದರು.