India-New Zealand relationship built on enduring friendship, shared values, common commitment: PM Modi in Auckland
July 11th, 01:15 pm
PM Modi addressed a vibrant community event in Auckland, praising the Indian diaspora as a strong bridge between India and New Zealand. He highlighted the elevation of bilateral ties to a Strategic Partnership, celebrated 100 years of sporting ties between the two countries and underscored the shared heritage and deepening partnership between the two nations.Prime Minister Addresses the Indian Diaspora in New Zealand
July 11th, 12:35 pm
PM Modi addressed a vibrant community event in Auckland, praising the Indian diaspora as a strong bridge between India and New Zealand. He highlighted the elevation of bilateral ties to a Strategic Partnership, celebrated 100 years of sporting ties between the two countries and underscored the shared heritage and deepening partnership between the two nations.ಇಂಡೋನೇಷ್ಯಾ ಅಧ್ಯಕ್ಷರೊಂದಿಗೆ ಜಂಟಿ ಪತ್ರಿಕಾ ಹೇಳಿಕೆಯ ಸಂದರ್ಭದಲ್ಲಿ ಪ್ರಧಾನಮಂತ್ರಿಯವರ ಪತ್ರಿಕಾ ಹೇಳಿಕೆಯ ಕನ್ನಡ ಅನುವಾದ
July 07th, 11:21 am
2018ರಲ್ಲಿ ಸ್ಥಾಪನೆಯಾದ ನಮ್ಮ ʻಸಮಗ್ರ ಕಾರ್ಯತಂತ್ರದ ಸಹಭಾಗಿತ್ವʼವು ಇಂದು ಹೊಸ ಎತ್ತರವನ್ನು ತಲುಪುತ್ತಿದೆ. ಅಭಿವೃದ್ಧಿ, ಭದ್ರತೆ, ತಂತ್ರಜ್ಞಾನ, ಸಂಸ್ಕೃತಿ ಮತ್ತು ಶಿಕ್ಷಣ ಸೇರಿದಂತೆ ಸಹಕಾರದ ಪ್ರತಿಯೊಂದು ಕ್ಷೇತ್ರದಲ್ಲೂ ನಾವು ಗಮನಾರ್ಹ ದಾಪುಗಾಲು ಹಾಕುತ್ತಿದ್ದೇವೆ.PM marks 11 years of Digital India, says initiative strengthened the foundation of a Viksit Bharat
July 01st, 12:04 pm
Marking 11 years of Digital Bharat, PM Modi highlighted how the initiative has transformed governance, empowered citizens and made technology a key driver of ease of living. He noted that Digital India has strengthened innovation, expanded opportunities across sectors and laid a strong foundation for a developed and self-reliant India.ಪ್ರಧಾನಮಂತ್ರಿ ಅವರ ಸೀಶೆಲ್ಸ್ ಅಧಿಕೃತ ಭೇಟಿ
June 28th, 08:30 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2026ರ ಜೂನ್ 27 ರಿಂದ 29 ರವರೆಗೆ ಸೀಶೆಲ್ಸ್‌ಗೆ ಕೈಗೊಂಡಿರುವ ಅಧಿಕೃತ ಭೇಟಿಯ ಭಾಗವಾಗಿ, ಪ್ರಧಾನಮಂತ್ರಿ ಮತ್ತು ಸೀಶೆಲ್ಸ್ ಅಧ್ಯಕ್ಷರಾದ ಘನತೆವೆತ್ತ ಡಾ. ಪ್ಯಾಟ್ರಿಕ್ ಹರ್ಮಿನ್ ಅವರು ಇಂದು ಮಾಹೆಯ ವಿಕ್ಟೋರಿಯಾದಲ್ಲಿರುವ ಸ್ಟೇಟ್ ಹೌಸ್‌ನಲ್ಲಿ ಅಧಿಕೃತ ಮಾತುಕತೆ ನಡೆಸಿದರು.ಫಲಿತಾಂಶಗಳ ಪಟ್ಟಿ: ಪ್ರಧಾನಮಂತ್ರಿ ಅವರ ಸೀಶೆಲ್ಸ್ ಭೇಟಿ
June 28th, 08:17 pm
ಸೀಶೆಲ್ಸ್ ಸರ್ಕಾರಕ್ಕೆ ಒಂದು ವೇಗದ ಗಸ್ತು ನೌಕೆಯನ್ನು ಉಡುಗೊರೆಯಾಗಿ ನೀಡುವುದುಸೆಶೆಲ್ಸ್ನ ನ್ಯಾಷನಲ್ ಅಸೆಂಬ್ಲಿಯನ್ನುದ್ದೇಶಿಸಿ ಪ್ರಧಾನಮಂತ್ರಿಯವರ ಭಾಷಣ
June 28th, 05:00 pm
ಘನತೆವೆತ್ತ ಗೌರವಾನ್ವಿತ ರಾಷ್ಟ್ರೀಯ ಅಸೆಂಬ್ಲಿಯ ಸ್ಪೀಕರ್ ಮಿಸೆಸ್ ಅಜಾರೆಲ್ ಅರ್ನೆಸ್ಟಾ,ಪ್ರಧಾನಮಂತ್ರಿ ಅವರನ್ನು ಭೇಟಿಯಾದ ನೆದರ್‌ಲ್ಯಾಂಡ್ ಮಹಾರಾಣಿ ಮ್ಯಾಕ್ಸಿಮಾ
June 25th, 10:40 pm
ವಿಶ್ವಸಂಸ್ಥೆಯ ಮಹಾಕಾರ್ಯದರ್ಶಿಗಳ ಆರ್ಥಿಕ ಆರೋಗ್ಯದ ವಿಶೇಷ ವಕೀಲರೂ ಆಗಿರುವ ನೆದರ್‌ಲ್ಯಾಂಡ್ ಮಹಾರಾಣಿ ಮ್ಯಾಕ್ಸಿಮಾ ಅವರು ಇಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರನ್ನು ಭೇಟಿಯಾದರು. ಭಾರತದ ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯ ನೇತೃತ್ವದ ಕ್ರಾಂತಿಯು ಹಣಕಾಸು ಸೇವೆಗಳನ್ನು ಹೆಚ್ಚು ಸುಲಭವಾಗಿ ಮತ್ತು ಕೈಗೆಟುಕುವಂತೆ ಮಾಡುವ ಕುರಿತು ನಾವು ಚರ್ಚಿಸಿದ್ದೇವೆ ಎಂದು ಶ್ರೀ ಮೋದಿ ಹೇಳಿದರು. ಪ್ರಪಂಚದಾದ್ಯಂತದ ಪಾಲುದಾರ ರಾಷ್ಟ್ರಗಳೊಂದಿಗೆ ತನ್ನ ಅನುಭವವನ್ನು ಹಂಚಿಕೊಳ್ಳುವ ಭಾರತದ ಬದ್ಧತೆಯನ್ನು ಶ್ರೀ ಮೋದಿ ಪುನರುಚ್ಚರಿಸಿದರು.ಗೌರವಾನ್ವಿತ ಪ್ರಧಾನಮಂತ್ರಿಯವರ ಸ್ಲೋವಾಕಿಯಾ ಭೇಟಿಯ ಸಂದರ್ಭದಲ್ಲಿನ ಫಲಿತಾಂಶಗಳ ಪಟ್ಟಿ
June 15th, 05:17 pm
ಕಾರ್ಮಿಕ ವಲಸೆ ಕ್ಷೇತ್ರದಲ್ಲಿನ ಸಹಕಾರಕ್ಕಾಗಿ ತಿಳುವಳಿಕಾ ಒಪ್ಪಂದIndia and Slovakia are moving forward in close coordination on the global stage: PM Modi at the India-Slovakia Joint Press Meet
June 15th, 03:00 pm
At the joint press meet in Bratislava, PM Modi and Slovak Prime Minister Robert Fico announced the elevation of India-Slovakia ties to a Comprehensive Partnership. PM Modi highlighted growing cooperation in trade, technology, defence, space, digital innovation and mobility, saying the upgraded partnership reflects shared priorities, shared trust and a shared vision for the future.ಫ್ರಾನ್ಸ್‌ನಲ್ಲಿ ನಡೆದ ಭಾರತ್ ಇನ್ನೋವೇಟ್ಸ್ 2026 ಕಾರ್ಯಕ್ರಮದಲ್ಲಿ ಪ್ರಧಾನಮಂತ್ರಿ ಅವರ ಭಾಷಣದ ಕನ್ನಡ ಅವತರಣಿಕೆ
June 14th, 04:36 pm
ಈ ಸಂದರ್ಭದಲ್ಲಿ ಇಲ್ಲಿ ಉಪಸ್ಥಿತರಿದ್ದದ್ದಕ್ಕಾಗಿ ನನ್ನ ಸ್ನೇಹಿತ ಅಧ್ಯಕ್ಷ ಮ್ಯಾಕ್ರನ್ ಅವರಿಗೆ ನಾನು ನನ್ನ ಪ್ರಾಮಾಣಿಕ ಕೃತಜ್ಞತೆಯನ್ನು ವ್ಯಕ್ತಪಡಿಸುತ್ತೇನೆ. ಇತ್ತೀಚೆಗೆ ಭಾರತಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಅಧ್ಯಕ್ಷ ಮ್ಯಾಕ್ರನ್, ಈ ಶತಮಾನದ ಸವಾಲುಗಳನ್ನು ಎದುರಿಸಲು ಭಾರತ ಮತ್ತು ಫ್ರಾನ್ಸ್ ಒಟ್ಟಾಗಿ ಬರಬೇಕು ಎಂದು ನೀವು ಹೇಳಿದ್ದೀರಿ. ಇಂದು, ಈ ಉಪಕ್ರಮವು ಆ ದಿಕ್ಕಿನಲ್ಲಿ ಒಂದು ಮಹತ್ವದ ಹೆಜ್ಜೆಯಾಗಿದೆ ಎಂದು ನಾನು ಹೆಮ್ಮೆಯಿಂದ ಹೇಳಬಲ್ಲೆ.2026ರ ಭಾರತ್ ಇನ್ನೋವೇಟ್ಸ್ ನಲ್ಲಿ ಭಾಗವಹಿಸಿದ ಪ್ರಧಾನಮಂತ್ರಿ
June 14th, 03:00 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಮತ್ತು ಫ್ರಾನ್ಸ್ ಅಧ್ಯಕ್ಷರಾದ ಗೌರವಾನ್ವಿತ ಎಮ್ಯಾನುಯೆಲ್ ಮ್ಯಾಕ್ರನ್ ಅವರು ಇಂದು ನೈಸ್‌ನ ಪಲೈಸ್ ಡೆಸ್ ಎಕ್ಸ್‌ಪೊಸಿಷನ್ಸ್‌ನಲ್ಲಿ ಭಾರತ್ ಇನ್ನೋವೇಟ್ಸ್ 2026 ಅನ್ನು ಜಂಟಿಯಾಗಿ ಉದ್ಘಾಟಿಸಿದರು. ಮೂರು ದಿನಗಳ ಕಾರ್ಯಕ್ರಮವಾದ ಭಾರತ್ ಇನ್ನೋವೇಟ್ಸ್, ಜಾಗತಿಕ ನಾವೀನ್ಯತೆ ನಿಧಿಗಳು ಮತ್ತು ಹೆಜ್ಜೆಗುರುತನ್ನು ಹೊಂದಿರುವ ಭಾರತೀಯ ಡೀಪ್-ಟೆಕ್ ನವೋದ್ಯಮಗಳು (ಸ್ಟಾರ್ಟ್-ಅಪ್‌ಗಳು), ನಾವೀನ್ಯಕಾರರು, ಸಂಶೋಧಕರು ಮತ್ತು ಹೂಡಿಕೆದಾರರನ್ನು ಒಟ್ಟುಗೂಡಿಸುತ್ತದೆ. ಇದು ಜಾಗತಿಕ ಹಂತದಲ್ಲಿ ಭಾರತದ ಪ್ರಮುಖ ಡೀಪ್ ಟೆಕ್ ತಂತ್ರಜ್ಞಾನವನ್ನು ಪ್ರದರ್ಶಿಸುತ್ತದೆ, ಜಾಗತಿಕ ಪ್ರಾಮುಖ್ಯತೆಯ 13 ನಿರ್ಣಾಯಕ ತಂತ್ರಜ್ಞಾನ ಸ್ತಂಭಗಳಲ್ಲಿ 120 ಪಥ-ಭಂಜಕ (ಹೊಸ ಹಾದಿ ತೋರುವ) ಸ್ಟಾರ್ಟ್-ಅಪ್‌ಗಳು ಮತ್ತು 20ಕ್ಕೂ ಹೆಚ್ಚು ಶ್ರೇಷ್ಠತಾ ಸಂಸ್ಥೆಗಳನ್ನು ಪ್ರಸ್ತುತಪಡಿಸುತ್ತದೆ. ಪ್ರಪಂಚದಾದ್ಯಂತದ 350ಕ್ಕೂ ಹೆಚ್ಚು ಉನ್ನತ ಹೂಡಿಕೆದಾರರು ಮತ್ತು ಸಾಹಸೋದ್ಯಮ (ವೆಂಚರ್) ಬಂಡವಾಳಗಾರರು ಸಹ ಈ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದಾರೆ.ಭಾರತದ ಡಿಜಿಟಲ್ ಮೂಲಸೌಕರ್ಯ ಪ್ರಯಾಣದ ಗಮನಾರ್ಹ ಆವೇಗವನ್ನು ಉಲ್ಲೇಖಿಸಿದ ಪ್ರಧಾನಮಂತ್ರಿ
June 05th, 05:10 pm
ಭಾರತದ ಡಿಜಿಟಲ್ ಮೂಲಸೌಕರ್ಯ ಪ್ರಯಾಣವು ಗಮನಾರ್ಹ ವೇಗವನ್ನು ಪಡೆಯುತ್ತಿರುವ ಬಗ್ಗೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಇಂದು ಒತ್ತಿ ಹೇಳಿದರು. ಏರ್‌ಟ್ರಂಕ್ ಭಾರತದಲ್ಲಿ ಸುಮಾರು 3 ಲಕ್ಷ ಕೋಟಿ ರೂ. (30 ಬಿಲಿಯನ್ ಡಾಲರ್) ಹೂಡಿಕೆ ಮಾಡುವ ಮತ್ತು 5 ಗಿಗಾವ್ಯಾಟ್ ಡೇಟಾ ಸೆಂಟರ್ ಸಾಮರ್ಥ್ಯವನ್ನು ಅಭಿವೃದ್ಧಿಪಡಿಸುವ ಯೋಜನೆಯನ್ನು ಪ್ರಕಟಿಸಿದೆ ಎಂದು ಪ್ರಧಾನಮಂತ್ರಿಯವರು ಗಮನಿಸಿ, ಇದು ದೇಶದ ಡಿಜಿಟಲ್ ಮೂಲಸೌಕರ್ಯ ಪರಿಸರ ವ್ಯವಸ್ಥೆಯಲ್ಲಿ ಅತಿದೊಡ್ಡ ಪ್ರಸ್ತಾವಿತ ಹೂಡಿಕೆಗಳಲ್ಲಿ ಒಂದಾಗಿದೆ ಎಂದು ಹೇಳಿದರು.ರೋಜ್‌ಗಾರ್ ಮೇಳದ ನೇಮಕಾತಿ ಪತ್ರಗಳ ವಿತರಣೆ ಕಾರ್ಯಕ್ರಮ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
May 23rd, 11:15 am
ಈ ಹಂತವನ್ನು ತಲುಪಲು ನೀವು ದೀರ್ಘ ತಯಾರಿ ಮತ್ತು ಕಠಿಣ ಪರಿಶ್ರಮದ ಮೂಲಕ ಬಂದಿದ್ದೀರಿ. ಈ ಸಾಧನೆಗಾಗಿ ನಾನು ನಿಮಗೆ ಮತ್ತು ನಿಮ್ಮ ಕುಟುಂಬಗಳಿಗೆ ನನ್ನ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ನಿಮ್ಮನ್ನು ಇಲ್ಲಿಗೆ ಕರೆತರುವಲ್ಲಿ ನಿಮ್ಮ ಪೋಷಕರು ಮತ್ತು ಕುಟುಂಬಗಳ ಕೊಡುಗೆ ಅಪಾರವಾಗಿದೆ. ನಾವು ಈ ಹಂತಕ್ಕೆ ತಲುಪಲು ಕುಟುಂಬ ಮತ್ತು ಸಮಾಜ ಮಾತ್ರವೇ ದೊಡ್ಡ ಪಾತ್ರವನ್ನು ವಹಿಸಿರುವುದಿಲ್ಲ. ನಾವು ಇಲ್ಲಿಗೆ ಬಂದಿರುವುದು ನಮ್ಮಿಂದಾಗಿ ಅಥವಾ ನಮ್ಮ ಕುಟುಂಬಗಳಿಂದಾಗಿ ಮಾತ್ರ ಅಲ್ಲ. ಈ ವಿಶಾಲ ರಾಷ್ಟ್ರದ 140 ಕೋಟಿ ನಾಗರಿಕರ ಕೊಡುಗೆಯೂ ಸಹ ಬಹಳ ಮಹತ್ವದ್ದಾಗಿದೆ. ಆದ್ದರಿಂದ, ನಮ್ಮ ಜವಾಬ್ದಾರಿ ನಮ್ಮ ಮತ್ತು ನಮ್ಮ ಕುಟುಂಬಗಳ ಕಡೆಗೆ ಮಾತ್ರವಲ್ಲ, ಇಡೀ ಸಮಾಜದ ಕಡೆಗೂ ಹೋಗಬೇಕು. ಈ ಎಲ್ಲಾ ಕೆಲಸಗಳಿಗೆ ನೀವು ಇನ್ನಷ್ಟು ಸಮರ್ಥರಾಗುತ್ತೀರಿ ಎಂಬ ವಿಶ್ವಾಸ ನನಗಿದೆ. ನಿಮಗೆಲ್ಲರಿಗೂ ಶುಭ ಹಾರೈಸುತ್ತೇನೆ.ಉದ್ಯೋಗ ಮೇಳದ ಅಡಿಯಲ್ಲಿ ಸರ್ಕಾರಿ ಇಲಾಖೆಗಳಿಗೆ ಹೊಸದಾಗಿ ಆಯ್ಕೆಯಾದ ಯುವಕರಿಗೆ, 51,000 ಕ್ಕೂ ಹೆಚ್ಚು ನೇಮಕಾತಿ ಪತ್ರಗಳನ್ನು ವಿತರಿಸಿದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ
May 23rd, 11:00 am
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ವಿಡಿಯೋ ಕಾನ್ಫರೆನ್ಸ್ ಮೂಲಕ, ಬೆಳಿಗ್ಗೆ 11 ಗಂಟೆಗೆ ನಡೆದ 19ನೇ ಉದ್ಯೋಗ ಮೇಳದಲ್ಲಿ ವಿವಿಧ ಸರ್ಕಾರಿ ಇಲಾಖೆಗಳು ಮತ್ತು ಸಂಸ್ಥೆಗಳಿಗೆ ಹೊಸದಾಗಿ ಆಯ್ಕೆಯಾದ ಯುವಕರಿಗೆ, 51,000 ಕ್ಕೂ ಹೆಚ್ಚು ನೇಮಕಾತಿ ಪತ್ರಗಳನ್ನು ವಿತರಿಸಿದರು. ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಈ ಸಂದರ್ಭವನ್ನು ದೇಶಾದ್ಯಂತದ ಸಾವಿರಾರು ಯುವಕರಿಗೆ ಅತ್ಯಂತ ಮಹತ್ವದ ದಿನ ಎಂದು ಬಣ್ಣಿಸಿದರು. ಸರ್ಕಾರಿ ಸೇವೆಗೆ ಹೊಸದಾಗಿ ಸೇರಿದವರನ್ನು ಸ್ವಾಗತಿಸಿದ ಅವರು, ರೈಲ್ವೆ, ಬ್ಯಾಂಕಿಂಗ್, ರಕ್ಷಣೆ, ಆರೋಗ್ಯ ಮತ್ತು ಶಿಕ್ಷಣ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಭಾರತದ ಅಭಿವೃದ್ಧಿಗೆ ಅವರು ನೀಡಲಿರುವ ಮುಂಬರುವ ಕೊಡುಗೆಯ ಬಗ್ಗೆ ಒತ್ತಿಹೇಳಿದರು. ಮುಂಬರುವ ವರ್ಷಗಳಲ್ಲಿ, ವಿಕಸಿತ ಭಾರತದ ದೃಷ್ಟಿಕೋನವನ್ನು ಸಾಕಾರಗೊಳಿಸುವಲ್ಲಿ ನೀವೆಲ್ಲರೂ ನಿರ್ಣಾಯಕ ಪಾತ್ರ ವಹಿಸಲಿದ್ದೀರಿ ಎಂದು ಶ್ರೀ ಮೋದಿ ಪ್ರತಿಪಾದಿಸಿದರು.ಎಫ್‌ಎಒ ಅಗ್ರಿಕೋಲಾ ಪದಕ ಸ್ವೀಕಾರ ಸಮಾರಂಭ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
May 20th, 11:00 pm
ಭಾರತದಲ್ಲಿ ಕೃಷಿಯು ಜೀವನದ ಆಧಾರವಾಗಿದೆ. ಇದು ನಮ್ಮ ಸಂಸ್ಕೃತಿಯ ಅವಿಭಾಜ್ಯ ಅಂಗವಾಗಿದೆ, ನಮ್ಮ ಮೂಲ ಮೌಲ್ಯಗಳ ಪ್ರತಿಬಿಂಬವಾಗಿದೆ. ನಮ್ಮ ಸಂಪ್ರದಾಯದಲ್ಲಿ, ಭೂಮಿಯನ್ನು ತಾಯಿ ಎಂದು ಪೂಜಿಸಲಾಗುತ್ತದೆ, ರೈತನನ್ನು ಮಣ್ಣಿನ ಮಗ ಎಂದು ಕರೆಯಲಾಗುತ್ತದೆ. ಸಾವಿರಾರು ವರ್ಷಗಳ ಪರಂಪರೆಯಲ್ಲಿ ಬೇರೂರಿರುವ ಈ ಕಾಲಾತೀತ ಮೌಲ್ಯಗಳು ಇಂದಿಗೂ ನಮ್ಮ ಪ್ರಯತ್ನಗಳಿಗೆ ಸ್ಫೂರ್ತಿ ನೀಡುತ್ತಲೇ ಇವೆ.ರೋಮ್ ನಲ್ಲಿ ವಿಶ್ವಸಂಸ್ಥೆಯ ಆಹಾರ ಮತ್ತು ಕೃಷಿ ಸಂಸ್ಥೆ (ಎಫ್ ಎ ಒ) ವತಿಯಿಂದ ಪ್ರಧಾನಮಂತ್ರಿ ಅವರಿಗೆ ಅಗ್ರಿಕೋಲಾ ಪದಕ ಪ್ರದಾನ
May 20th, 10:55 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಗೆ ಇಂದು ರೋಮ್ನಲ್ಲಿರುವ ವಿಶ್ವಸಂಸ್ಥೆಯ ಆಹಾರ ಮತ್ತು ಕೃಷಿ ಸಂಸ್ಥೆ (ಎಫ್ ಎ ಒ) ಯ ಪ್ರಧಾನ ಕಚೇರಿಯಲ್ಲಿ 2026 ರ ಪ್ರತಿಷ್ಠಿತ 'ಅಗ್ರಿಕೋಲಾ ಪದಕ'ವನ್ನು ನೀಡಿ ಗೌರವಿಸಲಾಯಿತು. ಭಾರತದಲ್ಲಿ ಮತ್ತು ಜಾಗತಿಕ ಮಟ್ಟದಲ್ಲಿ ಆಹಾರ ಭದ್ರತೆ, ಸುಸ್ಥಿರ ಕೃಷಿ ಹಾಗೂ ಗ್ರಾಮೀಣ ಅಭಿವೃದ್ಧಿಯನ್ನು ಉತ್ತೇಜಿಸುವಲ್ಲಿ ಅವರು ತೋರಿದ ಅಸಾಧಾರಣ ನಾಯಕತ್ವವನ್ನು ಗುರುತಿಸಿ ಈ ಪ್ರಶಸ್ತಿಯನ್ನು ನೀಡಲಾಯಿತು.ಭಾರತ-ಇಟಲಿ ಜಂಟಿ ಘೋಷಣೆ
May 20th, 10:28 pm
ಇಟಲಿಯ ಪ್ರಧಾನಮಂತ್ರಿ ಜಾರ್ಜಿಯಾ ಮೆಲೋನಿ ಅವರ ಆಹ್ವಾನದ ಮೇರೆಗೆ, ಭಾರತದ ಪ್ರಧಾನಮಂತ್ರಿಗಳಾದ ಶ್ರೀ ನರೇಂದ್ರ ಮೋದಿ ಅವರು 19-20 ಮೇ 2026 ರಂದು ಇಟಲಿಗೆ ಅಧಿಕೃತ ಭೇಟಿ ನೀಡಿದರು. ಜಿ7 ಶೃಂಗಸಭೆಗಾಗಿ ಜೂನ್ 2024ರಲ್ಲಿ ಪ್ರಧಾನಮಂತ್ರಿ ಮೋದಿ ಅವರು ಇಟಲಿಗೆ ನೀಡಿದ್ದ ಭೇಟಿ ಮತ್ತು 2023ರಲ್ಲಿ ಜಿ20 ಶೃಂಗಸಭೆಗಾಗಿ ಪ್ರಧಾನಮಂತ್ರಿ ಮೆಲೋನಿ ಅವರು ಭಾರತಕ್ಕೆ ನೀಡಿದ್ದ ಭೇಟಿಯ ಮುಂದುವರಿಕೆಯಾಗಿ ನಡೆದ ಈ ಭೇಟಿಯು, ದ್ವಿಪಕ್ಷೀಯ ಸಂಬಂಧಗಳಿಗೆ ಹೊಸ ಉತ್ತೇಜನವನ್ನು ನೀಡಿತು. ಉಭಯ ನಾಯಕರು ಭಾರತ-ಇಟಲಿ ಸಂಬಂಧಗಳನ್ನು 'ವಿಶೇಷ ಕಾರ್ಯತಂತ್ರದ ಪಾಲುದಾರಿಕೆ'ಯ ಮಟ್ಟಕ್ಕೆ ಏರಿಸಲು ನಿರ್ಧರಿಸಿದರು.ನಾರ್ವೆ ಪ್ರಧಾನಮಂತ್ರಿ ಜತೆ ಜಂಟಿ ಪತ್ರಿಕಾ ಹೇಳಿಕೆ ಸಂದರ್ಭದಲ್ಲಿ ಪ್ರಧಾನಮಂತ್ರಿ ಪತ್ರಿಕಾ ಅವರ ಹೇಳಿಕೆ
May 18th, 04:44 pm
ಕಳೆದ ವರ್ಷ ನಾನು ನಾರ್ವೆಗೆ ಭೇಟಿ ನೀಡಬೇಕಿತ್ತು, ಆದರೆ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯಿಂದಾಗಿ ಪ್ರವಾಸ ಮುಂದೂಡಬೇಕಾಯಿತು. ಆ ಕಷ್ಟದ ಸಮಯದಲ್ಲಿ, ಭಯೋತ್ಪಾದನೆಯ ವಿರುದ್ಧ ನಾರ್ವೆ ಭಾರತದೊಂದಿಗೆ ಸದೃಢವಾಗಿ ನಿಂತಿತು. ಇದು ನಮ್ಮ ಸ್ನೇಹದ ಬಲವನ್ನು ಪ್ರತಿಬಿಂಬಿಸುತ್ತದೆ. ಇಂದು ನಾನು ನಾರ್ವೆಗೆ ಭೇಟಿ ನೀಡಿರುವಾಗ ಆ ಬೆಂಬಲ ಮತ್ತು ಒಗ್ಗಟ್ಟಿಗೆ ನನ್ನ ಹೃತ್ಪೂರ್ವಕ ಕೃತಜ್ಞತೆಯನ್ನು ವ್ಯಕ್ತಪಡಿಸುತ್ತೇನೆ.ಎನ್‌ಎಕ್ಸ್‌ಟಿ ಶೃಂಗಸಭೆ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
March 12th, 10:47 pm
ಇಂದು, ಮಾರ್ಚ್ 12, ಬಹಳ ಐತಿಹಾಸಿಕ ದಿನ. 1930 ಮಾರ್ಚ್ 12ರಂದು, ಮಹಾತ್ಮ ಗಾಂಧಿ ಅವರು ಸಬರಮತಿ ಆಶ್ರಮದಿಂದ ದಂಡಿಯಾತ್ರೆ ಪ್ರಾರಂಭಿಸಿದರು. ಇದು ಭಾರತದ ಸ್ವಾತಂತ್ರ್ಯ ಚಳವಳಿಯಲ್ಲಿ ಒಂದು ಮಹತ್ವದ ತಿರುವು, ಏಕೆಂದರೆ ಈ ಪ್ರಯಾಣವು ದೇಶದ ಪ್ರತಿಯೊಂದು ಮೂಲೆಯನ್ನು ಒಂದೇ ಗುರಿಯೊಂದಿಗೆ ಸಂಪರ್ಕಿಸಿತು. ಅದೇ ಭಾರತದ ಸ್ವಾತಂತ್ರ್ಯ. ಇಂದು ಈ ಐತಿಹಾಸಿಕ ಪ್ರಯಾಣದ ಸುಮಾರು 100 ವರ್ಷಗಳ ನಂತರ, ನಾವು ಭಾರತೀಯರು ಮತ್ತೊಂದು ಪ್ರಯಾಣವನ್ನು ಪ್ರಾರಂಭಿಸಿದ್ದೇವೆ. ಈ ಪ್ರಯಾಣವು ಅಭಿವೃದ್ಧಿ ಹೊಂದಿದ ಭಾರತದ ಪ್ರಯಾಣ(ವಿಕಸಿತ ಭಾರತ). ನಮ್ಮ ಗುರಿ ಒಂದೇ, ನಮ್ಮ ಗಮ್ಯಸ್ಥಾನ ಒಂದೇ – ಅದೇ ಅಭಿವೃದ್ಧಿ ಹೊಂದಿದ ಭಾರತ. ಈ ಗುರಿ ಸಾಧಿಸುವಲ್ಲಿ ಇಂತಹ ಶೃಂಗಗಳಲ್ಲಿ ನಡೆಯುವ ಚಿಂತನ ಮಂಥನ ಮತ್ತು ಅವುಗಳಿಂದ ಪಡೆದ ಅಮೃತವು ದೊಡ್ಡ ಪಾತ್ರ ವಹಿಸುತ್ತದೆ. ಮುಂದಿನ ಶೃಂಗಸಭೆಗೆ ನನ್ನನ್ನು ಆಹ್ವಾನಿಸಿದ್ದಕ್ಕಾಗಿ ನಾನು ನಿಮ್ಮೆಲ್ಲರಿಗೂ ಕೃತಜ್ಞನಾಗಿದ್ದೇನೆ. ದೇಶ ಮತ್ತು ವಿಶ್ವದ ಅನೇಕ ಸಹೋದ್ಯೋಗಿಗಳು ಇಲ್ಲಿಗೆ ಬಂದಿದ್ದಾರೆ, ಕೆಲವರು ಹಳೆಯ ಪರಿಚಯಸ್ಥರು ಇದ್ದಾರೆ. ನಿಮ್ಮೆಲ್ಲರನ್ನು ನಾನು ಸ್ವಾಗತಿಸುತ್ತೇನೆ.