ರಾಜಸ್ಥಾನದ ಬನ್ಸ್‌ವಾರಾದಲ್ಲಿ ಅಭಿವೃದ್ಧಿ ಕಾರ್ಯಗಳ ಉದ್ಘಾಟನೆ ಸಮಾರಂಭ ಉದ್ದೇಶಿಸಿ ಪ್ರಧಾನಮಂತ್ರಿ ಭಾಷಣ

September 25th, 02:32 pm

ಮಾತೆ ತ್ರಿಪುರ ಸುಂದರಿ ಕೀ ಜೈ, ಬೆನೇಶ್ವರ್ ಧಾಮ್ ಕಿ ಜೈ, ಮಂಗರ್ ಧಾಮ್ ಕಿ ಜೈ, ನಿಮ್ಮೆಲ್ಲರಿಗೂ ಜೈ ಗುರು! ರಾಮ್-ರಾಮ್! ಗೌರವಾನ್ವಿತ ರಾಜ್ಯಪಾಲರಾದ ಶ್ರೀ ಹರಿಭಾವು ಬಗಡೆ ಜಿ, ಜನಪ್ರಿಯ ಮುಖ್ಯಮಂತ್ರಿ ಶ್ರೀ ಭಜನಲಾಲ್ ಶರ್ಮಾ ಜಿ, ಮಾಜಿ ಮುಖ್ಯಮಂತ್ರಿ ಸಹೋದರಿ ವಸುಂಧರಾ ರಾಜೇ ಜಿ, ಸಚಿವ ಸಂಪುಟದ ನನ್ನ ಸಹೋದ್ಯೋಗಿ ಪ್ರಹ್ಲಾದ್ ಜೋಶಿ ಜಿ, ಗಜೇಂದ್ರ ಸಿಂಗ್ ಶೇಖಾವತ್ ಜಿ ಮತ್ತು ಜೋಧ್‌ಪುರದಿಂದ ನಮ್ಮೊಂದಿಗೆ ಸೇರ್ಪಡೆಯಾಗಿರುವ ಅಶ್ವಿನಿ ವೈಷ್ಣವ್ ಜಿ, ಉಪಮುಖ್ಯಮಂತ್ರಿ ಶ್ರೀ ಅರ್ಜುನ್ ರಾಮ್ ಮೇಘವಾಲ್ ಜಿ ಮತ್ತು ದಿಯಾ ಕುಮಾರಿ ಜಿ, ಬಿಜೆಪಿ ರಾಜ್ಯಾಧ್ಯಕ್ಷ ಶ್ರೀ ಮದನ್ ರಾಥೋಡ್ ಜಿ, ರಾಜಸ್ಥಾನ ಸರ್ಕಾರದ ಸಚಿವರೆ, ಇಲ್ಲಿ ಉಪಸ್ಥಿತರಿರುವ ಎಲ್ಲಾ ಗಣ್ಯರೆ, ಸಹೋದರ ಸಹೋದರಿಯರೆ,

ರಾಜಸ್ಥಾನದ ಬನ್ಸ್ವಾರಾದಲ್ಲಿ 1,22,100 ಕೋಟಿ ರೂ.ಗಳಿಗೂ ಹೆಚ್ಚು ಮೌಲ್ಯದ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸಿದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ

September 25th, 02:30 pm

ರಾಜಸ್ಥಾನದ ಬನ್ಸ್ವಾರಾದಲ್ಲಿ 1,22,100 ಕೋಟಿ ರೂ.ಗಳಿಗೂ ಹೆಚ್ಚು ಮೌಲ್ಯದ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆಯನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ನೆರವೇರಿಸಿದರು. ನವರಾತ್ರಿಯ ನಾಲ್ಕನೇ ದಿನದಂದು, ಬನ್ಸ್ವಾರಾದಲ್ಲಿರುವ ಮಾ ತ್ರಿಪುರ ಸುಂದರಿಯ ಪವಿತ್ರ ಭೂಮಿಗೆ ಭೇಟಿ ನೀಡುವುದು ಒಂದು ಸೌಭಾಗ್ಯ ಎಂದು ಪ್ರಧಾನಮಂತ್ರಿ ಸಂತಸ ವ್ಯಕ್ತಪಡಿಸಿದರು. ಕಾಂತಲ್ ಮತ್ತು ವಾಗಡ್‌ನ ಗಂಗೆ ಎಂದು ಪೂಜಿಸಲ್ಪಡುವ ಮಾ ಮಾಹಿಯನ್ನು ವೀಕ್ಷಿಸುವ ಅವಕಾಶವೂ ತಮಗೆ ಸಿಕ್ಕಿದೆ ಎಂದು ಅವರು ಹೇಳಿದರು. ಮಾಹಿಯ ನೀರು ಭಾರತದ ಬುಡಕಟ್ಟು ಸಮುದಾಯಗಳ ಸ್ಥಿತಿಸ್ಥಾಪಕತ್ವ ಮತ್ತು ಹೋರಾಟವನ್ನು ಸಂಕೇತಿಸುತ್ತದೆ ಎಂದೂ ಪ್ರಧಾನಮಂತ್ರಿ ಹೇಳಿದರು. ಮಹಾಯೋಗಿ ಗೋವಿಂದ ಗುರು ಜೀ ಅವರ ಸ್ಪೂರ್ತಿದಾಯಕ ನಾಯಕತ್ವವನ್ನು ಅವರು ಉಲ್ಲೇಖಿಸಿದರು, ಅವರ ಪರಂಪರೆ ನಿರಂತರವಾಗಿ ಪ್ರತಿಧ್ವನಿಸುತ್ತಿದೆ, ಮಾಹಿಯ ಪವಿತ್ರ ನೀರು ಆ ಮಹಾನ್ ಸಾಹಸಗಾಥೆಗೆ ಸಾಕ್ಷಿಯಾಗಿದೆ ಎಂದ ಶ್ರೀ ಮೋದಿ ಮಾ ತ್ರಿಪುರ ಸುಂದರಿ ಮತ್ತು ಮಾ ಮಾಹಿಗೆ ಗೌರವ ಸಲ್ಲಿಸಿದರು ಮತ್ತು ಭಕ್ತಿ ಹಾಗು ಶೌರ್ಯದ ಈ ಭೂಮಿಯಿಂದ ಅವರು ಮಹಾರಾಣಾ ಪ್ರತಾಪ್ ಮತ್ತು ರಾಜಾ ಬನ್ಸಿಯಾ ಭಿಲ್ ಅವರಿಗೆ ತಮ್ಮ ಗೌರವ ಸಮರ್ಪಿಸಿದರು.

ಪಂಡಿತ್ ದೀನ್ ದಯಾಳ್ ಉಪಾಧ್ಯಾಯ ಅವರ ಪುಣ್ಯ ತಿಥಿಯಂದು ಪ್ರಧಾನಮಂತ್ರಿಯವರಿಂದ ಗೌರವ ನಮನ

February 11th, 01:45 pm

ಪಂಡಿತ್ ದೀನ್ ದಯಾಳ್ ಉಪಾಧ್ಯಾಯ ಅವರ ಪುಣ್ಯ ತಿಥಿಯಂದು, ಭಾರತದ ಸೇವೆಗೆ ತಮ್ಮನ್ನು ಸಮರ್ಪಿಸಿಕೊಂಡ ದೂರದೃಷ್ಟಿಯ ಚಿಂತಕರಾದ ಪಂಡಿತ್ ದೀನ್ ದಯಾಳ್ ಉಪಾಧ್ಯಾಯ ಅವರಿಗೆ ನಾವು ಹೃತ್ಪೂರ್ವಕ ಗೌರವ ನಮನವನ್ನು ಸಲ್ಲಿಸುತ್ತೇವೆ. ಸಮಾಜದ ದೀನ ದಲಿತ ವ್ಯಕ್ತಿಯನ್ನು ಮೇಲಕ್ಕೆತ್ತುವ ಅವರ ಪ್ರಯತ್ನಗಳು ಬಲಿಷ್ಠ ರಾಷ್ಟ್ರದೆಡೆಗಿನ ನಮ್ಮ ಪ್ರಯಾಣಕ್ಕೆ ಸ್ಫೂರ್ತಿ ನೀಡುತ್ತವೆ. ಪ್ರಗತಿ ಮತ್ತು ಏಕತೆಗಾಗಿ ನಮ್ಮ ಸಾಮೂಹಿಕ ಧ್ಯೇಯದಲ್ಲಿ ಅವರ ತ್ಯಾಗ ಮತ್ತು ಆದರ್ಶಗಳು ಮಾರ್ಗದರ್ಶಕ ಶಕ್ತಿಯಾಗಿ ಉಳಿದಿವೆ ಎಂದು ಪೋಸ್ಟ್ ಮಾಡಿದ್ದಾರೆ.

ವಾರಣಾಸಿಯಲ್ಲಿ ಗಂಗಾ ನದಿಗೆ ಅಡ್ಡಲಾಗಿ ಪಂಡಿತ್‌ ದೀನ್ ದಯಾಳ್ ಉಪಾಧ್ಯಾಯ ಹೊಸ ರೈಲ್-ಕಮ್-ರೋಡ್ ಸೇತುವೆ ಸೇರಿದಂತೆ ಮಲ್ಟಿಟ್ರ್ಯಾಕಿಂಗ್ ನಿರ್ಮಾಣಕ್ಕೆ ಸಂಪುಟದ ಅನುಮೋದನೆ: ಸಂಪರ್ಕವನ್ನು ಒದಗಿಸಲು, ಪ್ರಯಾಣವನ್ನು ಸುಲಭಗೊಳಿಸಲು, ಲಾಜಿಸ್ಟಿಕ್ಸ್ ವೆಚ್ಚವನ್ನು ಕಡಿಮೆ ಮಾಡಲು, ತೈಲ ಆಮದು ಮತ್ತು ಕಾರ್ಬನ್‌ ಡೈ ಆಕ್ಸೈಡ್‌ ಹೊರಸೂಸುವಿಕೆಯನ್ನು ಕಡಿಮೆ ಮಾಡಲು ಚಿಂತನೆ

October 16th, 03:18 pm

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಇಂದು ರೈಲ್ವೆ ಸಚಿವಾಲಯದ ಒಟ್ಟು 2,642 ಕೋಟಿ ರೂಪಾಯಿ (ಅಂದಾಜು) ಅಂದಾಜು ವೆಚ್ಚದ ಯೋಜನೆಗೆ ಅನುಮೋದನೆ ನೀಡಿದೆ. ಪ್ರಸ್ತಾವಿತ ಬಹು-ಟ್ರ್ಯಾಕಿಂಗ್ ಯೋಜನೆಯು ಕಾರ್ಯಾಚರಣೆಗಳನ್ನು ಸರಾಗಗೊಳಿಸುತ್ತದೆ ಮತ್ತು ದಟ್ಟಣೆಯನ್ನು ಕಡಿಮೆ ಮಾಡುತ್ತದೆ, ಭಾರತೀಯ ರೈಲ್ವೆಯಾದ್ಯಂತ ಅತ್ಯಂತ ಜನನಿಬಿಡ ವಿಭಾಗಗಳಲ್ಲಿ ಹೆಚ್ಚು ಅಗತ್ಯವಿರುವ ಮೂಲಸೌಕರ್ಯ ಅಭಿವೃದ್ಧಿಯನ್ನು ಒದಗಿಸುತ್ತದೆ. ಈ ಯೋಜನೆಯು ಉತ್ತರ ಪ್ರದೇಶದ ವಾರಣಾಸಿ ಮತ್ತು ಚಂದೌಲಿ ಜಿಲ್ಲೆಗಳ ಮೂಲಕ ಹಾದು ಹೋಗುತ್ತದೆ.