ಬಡವರ ಕಲ್ಯಾಣಕ್ಕೆ ಸಮರ್ಪಿತವಾದ ಸಹಾನುಭೂತಿಯುಳ್ಳ ಸರ್ಕಾರ: ಪ್ರಧಾನಮಂತ್ರಿ

June 05th, 09:45 am

ದೇಶವು ಪರಿವರ್ತನಶೀಲ ಮತ್ತು ಎಲ್ಲರನ್ನೂ ಒಳಗೊಂಡ ಆಡಳಿತದ 11ನೇ ವರ್ಷವನ್ನು ಆಚರಿಸುತ್ತಿರುವ ಸಂದರ್ಭದಲ್ಲಿ ಬಡವರ ಕಲ್ಯಾಣಕ್ಕೆ ಎನ್‌ಡಿಎ ಸರ್ಕಾರದ ಅಚಲ ಬದ್ಧತೆಯನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಪುನರುಚ್ಚರಿಸಿದ್ದಾರೆ. ಸಬಲೀಕರಣ, ಮೂಲಸೌಕರ್ಯ ಮತ್ತು ಒಳಗೊಳ್ಳುವಿಕೆಯ ಮೇಲೆ ಗಮನ ಕೇಂದ್ರೀಕರಿಸಿದ ಸಹಾನುಭೂತಿಯುಳ್ಳ ಸರ್ಕಾರವು 25 ಕೋಟಿಗೂ ಹೆಚ್ಚು ಜನರನ್ನು ಬಡತನದಿಂದ ಮೇಲೆತ್ತುವಲ್ಲಿ ಪ್ರಮುಖ ಪಾತ್ರ ವಹಿಸಿದೆ ಎಂದು ಅವರು ಹೇಳಿದ್ದಾರೆ.

ಎಬಿಪಿ ನೆಟ್‌ವರ್ಕ್ ಇಂಡಿಯಾ@2047 ಶೃಂಗಸಭೆ ಉದ್ದೇಶಿಸಿ ಪ್ರಧಾನಮಂತ್ರಿ ಭಾಷಣ

May 06th, 08:04 pm

ಭಾರತ ಮಂಟಪವು ಇಂದು ಬೆಳಿಗ್ಗೆಯಿಂದ ರೋಮಾಂಚನಕಾರಿ ವೇದಿಕೆಯಾಗಿದೆ. ಕೆಲವೇ ನಿಮಿಷಗಳ ಹಿಂದೆ, ನಿಮ್ಮ ತಂಡವನ್ನು ಭೇಟಿ ಮಾಡುವ ಅವಕಾಶ ನನಗೆ ಸಿಕ್ಕಿತು. ಈ ಶೃಂಗಸಭೆಯು ವೈವಿಧ್ಯತೆಯಿಂದ ಕೂಡಿದೆ. ಅನೇಕ ಗಣ್ಯರು ಈ ಶೃಂಗಸಭೆಗೆ ಮೆರುಗು ತುಂಬಿದ್ದಾರೆ. ನಿಮ್ಮೆಲ್ಲರ ಅನುಭವ ಶ್ರೀಮಂತವಾಗಿದೆ ಎಂದು ನಾನು ನಂಬಿದ್ದೇನೆ. ಈ ಶೃಂಗಸಭೆಯಲ್ಲಿ ಯುವಕರು ಮತ್ತು ಮಹಿಳೆಯರ ದೊಡ್ಡ ಉಪಸ್ಥಿತಿಯು ಒಂದು ರೀತಿಯಲ್ಲಿ ವಿಶಿಷ್ಟ ಲಕ್ಷಣವಾಗಿದೆ. ವಿಶೇಷವಾಗಿ, ನಮ್ಮ ಡ್ರೋನ್ ದೀದಿಗಳು ಮತ್ತು ಲಖ್ಪತಿ ದೀದಿಗಳು ಹಂಚಿಕೊಂಡ ಅನುಭವಗಳು - ನಾನು ಈಗ ಈ ಎಲ್ಲರನ್ನೂ ಭೇಟಿಯಾದಾಗ, ಅವರು ತಮ್ಮ ಕಥೆಗಳನ್ನು ಹಂಚಿಕೊಳ್ಳುತ್ತಿದ್ದ ಉತ್ಸಾಹವನ್ನು ನಾನು ನೋಡಿದೆ. ಅವರ ಪ್ರತಿಯೊಂದು ಸಂಭಾಷಣೆಯೂ ನೆನಪಾಗುತ್ತಿದೆ. ಇದು ನಿಜಕ್ಕೂ ಸ್ಫೂರ್ತಿದಾಯಕವಾಗಿದೆ.

ಎಬಿಪಿ ನೆಟ್‌ವರ್ಕ್ ಇಂಡಿಯಾ @ 2047 ಶೃಂಗಸಭೆ ಉದ್ದೇಶಿಸಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಭಾಷಣ

May 06th, 08:00 pm

ನವದೆಹಲಿಯ ಭಾರತ ಮಂಟಪದಲ್ಲಿಂದು ನಡೆದ ಎಬಿಪಿ ನೆಟ್‌ವರ್ಕ್ ಇಂಡಿಯಾ@2047 ಶೃಂಗಸಭೆ ಉದ್ದೇಶಿಸಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಭಾಷಣ ಮಾಡಿದರು. ಭಾರತ್ ಮಂಟಪದಲ್ಲಿ ನಡೆಯುತ್ತಿರುವ ಈ ಕಾರ್ಯಕ್ರಮವು ಇಂದು ಬೆಳಗ್ಗೆಯಿಂದಲೂ ಗದ್ದಲದಿಂದ ಕೂಡಿದೆ. ಸಂಘಟನಾ ತಂಡದೊಂದಿಗಿನ ತಮ್ಮ ಸಂವಾದವನ್ನು ಪ್ರಸ್ತಾಪಿಸಿದ ಅವರು, ಶೃಂಗಸಭೆಯ ಶ್ರೀಮಂತ ವೈವಿಧ್ಯತೆಯನ್ನು ಶ್ಲಾಘಿಸಿದರು. ಕಾರ್ಯಕ್ರಮದ ಚೈತನ್ಯಕ್ಕೆ ಕೊಡುಗೆ ನೀಡಿದ ಹಲವಾರು ಗಣ್ಯ ವ್ಯಕ್ತಿಗಳ ಭಾಗವಹಿಸಿದ್ದಾರೆ. ಇಲ್ಲಿ ನೆರೆದಿರುವ ಎಲ್ಲಾ ಪ್ರತಿನಿಧಿಗಳು ಸಕಾರಾತ್ಮಕ ಅನುಭವ ಹೊಂದಿದ್ದಾರೆ. ಶೃಂಗಸಭೆಯಲ್ಲಿ ಯುವಕರು ಮತ್ತು ಮಹಿಳೆಯರ ಗಮನಾರ್ಹ ಉಪಸ್ಥಿತಿ ಇದೆ, ಡ್ರೋನ್ ದೀದಿಗಳು ಮತ್ತು ಲಖ್ಪತಿ ದೀದಿಗಳು ಹಂಚಿಕೊಂಡ ಸ್ಪೂರ್ತಿದಾಯಕ ಅನುಭವಗಳನ್ನು ಶ್ಲಾಘಿಸಿದರು. ಅವರ ಕಥೆಗಳು ಪ್ರೇರಣೆಯ ಮೂಲವಾಗಿ ಕಾರ್ಯ ನಿರ್ವಹಿಸುತ್ತವೆ ಎಂದರು.

Today, India is not just a Nation of Dreams but also a Nation That Delivers: PM Modi in TV9 Summit

March 28th, 08:00 pm

PM Modi participated in the TV9 Summit 2025. He remarked that India now follows the Equi-Closeness policy of being equally close to all. He emphasized that the world is eager to understand What India Thinks Today. PM remarked that India's approach has always prioritized humanity over monopoly. “India is no longer just a ‘Nation of Dreams’ but a ‘Nation That Delivers’”, he added.

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಟಿವಿ9 ಶೃಂಗಸಭೆ 2025 ಉದ್ದೇಶಿಸಿ ಮಾತನಾಡಿದರು

March 28th, 06:53 pm

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ನವದೆಹಲಿಯ ಭಾರತ ಮಂಟಪದಲ್ಲಿ ನಡೆದ ಟಿವಿ9 ಶೃಂಗಸಭೆ 2025 ರಲ್ಲಿ ಭಾಗವಹಿಸಿದರು. ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಇಡೀ ಟಿವಿ9 ತಂಡಕ್ಕೆ ಮತ್ತು ಅದರ ವೀಕ್ಷಕರಿಗೆ ತಮ್ಮ ಶುಭಾಶಯಗಳನ್ನು ತಿಳಿಸಿದರು. ಟಿವಿ9 ವಿಶಾಲವಾದ ಪ್ರಾದೇಶಿಕ ಪ್ರೇಕ್ಷಕರನ್ನು ಹೊಂದಿದ್ದು, ಈಗ ಜಾಗತಿಕ ಪ್ರೇಕ್ಷಕರೂ ಸೃಷ್ಟಿಯಾಗುತ್ತಿದ್ದಾರೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಟೆಲಿಕಾನ್ಫರೆನ್ಸ್‌ ಮೂಲಕ ಭಾಗವಹಿಸಿದ ಭಾರತೀಯ ವಲಸೆಗಾರರನ್ನು ಅವರು ಸ್ವಾಗತಿಸಿದರು ಮತ್ತು ಶುಭಾಶಯ ತಿಳಿಸಿದರು.