ಸ್ವೀಡನ್‌ನಲ್ಲಿ ರಾಯಲ್ ಆರ್ಡರ್ ಆಫ್ ದಿ ಪೋಲಾರ್ ಸ್ಟಾರ್, ಡಿಗ್ರಿ ಕಮಾಂಡರ್ ಗ್ರ್ಯಾಂಡ್ ಕ್ರಾಸ್ ಅನ್ನು ಸ್ವೀಕರಿಸಿದ ಪ್ರಧಾನಮಂತ್ರಿ
May 17th, 11:13 pm
ಸ್ವೀಡನ್ನಿನ ಗೋಥೆನ್‌ಬರ್ಗ್‌ನಲ್ಲಿ ಆಯೋಜಿಸಲಾಗಿದ್ದ ವಿಶೇಷ ಸಮಾರಂಭದಲ್ಲಿ, ಸ್ವೀಡನ್‌ನ ಗೌರವಾನ್ವಿತ ರಾಣಿ ಕ್ರೌನ್ ಪ್ರಿನ್ಸೆಸ್ ವಿಕ್ಟೋರಿಯಾ ಅವರು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಗೆ 18ನೇ ಶತಮಾನದಲ್ಲಿ ಸ್ಥಾಪಿಸಲಾದ ಸ್ವೀಡನ್‌ನ ಅತ್ಯಂತ ಹಳೆಯ ಮತ್ತು ಅತ್ಯಂತ ವಿಶಿಷ್ಟ ಗೌರವಗಳಲ್ಲಿ ಒಂದಾದ 'ರಾಯಲ್ ಆರ್ಡರ್ ಆಫ್ ದಿ ಪೋಲಾರ್ ಸ್ಟಾರ್, ಡಿಗ್ರಿ ಕಮಾಂಡರ್ ಗ್ರ್ಯಾಂಡ್ ಕ್ರಾಸ್' ಅನ್ನು ಪ್ರದಾನ ಮಾಡಿದರು. ಈ ಪ್ರಶಸ್ತಿಯು ಸ್ವೀಡನ್‌ನೊಂದಿಗಿನ ಸಂಬಂಧಗಳ ಬಲವರ್ಧನೆಯಲ್ಲಿ ಅಸಾಧಾರಣ ಸಾರ್ವಜನಿಕ ಸೇವೆ ಮತ್ತು ಕೊಡುಗೆಯನ್ನು ಗುರುತಿಸಿ ವಿದೇಶಿ ಸರ್ಕಾರದ ಮುಖ್ಯಸ್ಥರಿಗೆ ನೀಡಲಾಗುವ ಸ್ವೀಡನ್‌ನ ಅತ್ಯುನ್ನತ ಗೌರವವಾಗಿದೆ.