ಬಿಹಾರದ ಸಿವಾನ್‌ನಲ್ಲಿ ವಿವಿಧ ಅಭಿವೃದ್ಧಿ ಯೋಜನೆಗಳ ಉದ್ಘಾಟನಾ ಸಮಾರಂಭ ಉದ್ದೇಶಿಸಿ ಪ್ರಧಾನಮಂತ್ರಿ ಭಾಷಣ
June 20th, 01:00 pm
ನಾನು ಎಲ್ಲರಿಗೂ ನಮಸ್ಕರಿಸುತ್ತೇನೆ. ಬಾಬಾ ಮಹೇಂದ್ರನಾಥ್, ಬಾಬಾ ಹಂಸನಾಥ್, ಸೋಹಗ್ರಾ ಧಾಮ್, ಮಾತೆ ತಾವೇ ಭವಾನಿ, ಮಾತೆ ಅಂಬಿಕಾ ಭವಾನಿ, ದೇಶದ ಮೊದಲ ರಾಷ್ಟ್ರಪತಿ ಡಾ. ರಾಜೇಂದ್ರ ಪ್ರಸಾದ್ ಮತ್ತು ಲೋಕನಾಯಕ್ ಜಯಪ್ರಕಾಶ್ ನಾರಾಯಣ್ ಅವರ ಪುಣ್ಯ ಭೂಮಿಯಲ್ಲಿರುವ ಎಲ್ಲರಿಗೂ ನಾನು ನಮಸ್ಕರಿಸುತ್ತೇನೆ!ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಬಿಹಾರದ ಸಿವಾನ್ ನಲ್ಲಿ 5,200 ಕೋಟಿ ರೂ.ಗೂ ಅಧಿಕ ಮೌಲ್ಯದ ಅಭಿವೃದ್ಧಿ ಕಾಮಗಾರಿಗಳನ್ನು ಉದ್ಘಾಟಿಸಿದರು, ಶಂಕುಸ್ಥಾಪನೆ ನೆರವೇರಿಸಿದರು
June 20th, 12:00 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಬಿಹಾರದ ಸಿವಾನ್ ನಲ್ಲಿ 5,200 ಕೋಟಿ ರೂ.ಗೂ ಅಧಿಕ ಮೌಲ್ಯದ ಹಲವು ಅಭಿವೃದ್ಧಿ ಯೋಜನೆಗಳನ್ನು ಉದ್ಘಾಟಿಸಿದರು ಮತ್ತು ಶಂಕುಸ್ಥಾಪನೆ ನೆರವೇರಿಸಿದರು. ಹಾಜರಿದ್ದ ಎಲ್ಲರಿಗೂ ಶುಭಾಶಯಗಳನ್ನು ತಿಳಿಸಿದ ಪ್ರಧಾನಮಂತ್ರಿ ಅವರು, ಬಾಬಾ ಮಹೇಂದ್ರ ನಾಥ್ ಮತ್ತು ಬಾಬಾ ಹನ್ಸ್ ನಾಥ್ ಅವರಿಗೆ ಗೌರವ ನಮನ ಸಲ್ಲಿಸಿದರು ಮತ್ತು ಸೊಹಗಾರ ಧಾಮದ ಪವಿತ್ರ ಉಪಸ್ಥಿತಿಯನ್ನು ಸ್ಮರಿಸಿದರು. ಅವರು ಮಾ ತವೆ ಭವಾನಿ ಮತ್ತು ಮಾ ಅಂಬಿಕಾ ಭವಾನಿ ಅವರಿಗೂ ನಮಸ್ಕರಿಸಿದರು. ಪ್ರಧಾನಮಂತ್ರಿ ಅವರು ದೇಶದ ಮೊದಲ ರಾಷ್ಟ್ರಪತಿ ದೇಶ್ ರತ್ನ ಡಾ. ರಾಜೇಂದ್ರ ಪ್ರಸಾದ್ ಮತ್ತು ಲೋಕನಾಯಕ ಜಯಪ್ರಕಾಶ್ ನಾರಾಯಣ್ ಅವರ ಸ್ಮರಣೆಯನ್ನು ಗೌರವಿಸಿದರು.ಭಾರತ - ಕ್ರೊಯೇಷಿಯಾ ನಾಯಕರ ಹೇಳಿಕೆ
June 19th, 06:06 pm
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಭೇಟಿಯು ದ್ವಿಪಕ್ಷೀಯ ಪಾಲುದಾರಿಕೆಗೆ ಹೊಸ ವೇಗವನ್ನು ನೀಡಿದ್ದು, ವಿಶೇಷವಾಗಿ ಪ್ರವಾಸೋದ್ಯಮ, ವ್ಯಾಪಾರ ಮತ್ತು ತಂತ್ರಜ್ಞಾನ ಕ್ಷೇತ್ರಗಳಲ್ಲಿ ಎರಡೂ ಆರ್ಥಿಕತೆಗಳ ಪೂರಕತೆಯನ್ನು ಎತ್ತಿ ತೋರಿಸಿದೆ. (i) ಕೃಷಿ ಸಹಕಾರದ ಕುರಿತಾದ ತಿಳುವಳಿಕಾ ಒಡಂಬಡಿಕೆ; (ii) ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಸಹಕಾರ ಕಾರ್ಯಕ್ರಮ; (iii) ಸಾಂಸ್ಕೃತಿಕ ವಿನಿಮಯ ಕಾರ್ಯಕ್ರಮ (ಸಿ.ಇ.ಪಿ-CEP); ಮತ್ತು (iv) ಜಾಗ್ರೆಬ್ ವಿಶ್ವವಿದ್ಯಾಲಯದಲ್ಲಿ ಹಿಂದಿ ಪೀಠವನ್ನು ಸ್ಥಾಪಿಸುವ ತಿಳುವಳಿಕಾ ಒಡಂಬಡಿಕೆಗೆ ಸಹಿ ಹಾಕಿರುವುದನ್ನು ಇಬ್ಬರೂ ಪ್ರಧಾನಮಂತ್ರಿಗಳು ಸ್ವಾಗತಿಸಿದರು.ಕ್ರೊಯೇಷಿಯಾ ಗಣರಾಜ್ಯದ ಅಧ್ಯಕ್ಷರನ್ನು ಭೇಟಿ ಮಾಡಿದ ಪ್ರಧಾನಮಂತ್ರಿ
June 18th, 11:58 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಕ್ರೊಯೇಷಿಯಾ ಗಣರಾಜ್ಯದ ಅಧ್ಯಕ್ಷ ಘನತೆವೆತ್ತ ಜೋರಾನ್ ಮಿಲನೋವಿಕ್ ಅವರನ್ನು ಝಾಗ್ರೆಬ್ ನಲ್ಲಿ ಭೇಟಿಯಾದರು.ಕ್ರೊಯೇಷಿಯಾ ಗಣರಾಜ್ಯದ ಪ್ರಧಾನಮಂತ್ರಿ ಅವರನ್ನು ಭೇಟಿಯಾದ ಪ್ರಧಾನಮಂತ್ರಿ
June 18th, 11:40 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಜಾಗ್ರೆಬ್‌ನಲ್ಲಿ ಕ್ರೊಯೇಷಿಯಾ ಗಣರಾಜ್ಯದ ಪ್ರಧಾನಮಂತ್ರಿ ಗೌರವಾನ್ವಿತ ಶ್ರೀ ಆಂಡ್ರೆಜ್ ಪ್ಲೆಂಕೋವಿಕ್ ಅವರನ್ನು ಭೇಟಿ ಮಾಡಿದರು. ಇದು ಕ್ರೊಯೇಷಿಯಾಕ್ಕೆ ಭಾರತೀಯ ಪ್ರಧಾನ ಮಂತ್ರಿಯೊಬ್ಬರು ನೀಡಿದ ಮೊದಲ ಭೇಟಿಯಾಗಿದ್ದು, ಭಾರತ-ಕ್ರೊಯೇಷಿಯಾ ಸಂಬಂಧಗಳಲ್ಲಿ ಇದು ಒಂದು ಐತಿಹಾಸಿಕ ಮೈಲಿಗಲ್ಲಾಗಿದೆ. ಐತಿಹಾಸಿಕ ಬನ್ಸ್ಕಿ ಡ್ವೋರಿ ಅರಮನೆಗೆ ಆಗಮಿಸಿದ ಪ್ರಧಾನ ಮಂತ್ರಿ ಅವರನ್ನು ಕ್ರೊಯೇಷಿಯಾ ಪ್ರಧಾನಿ ಪ್ಲೆಂಕೋವಿಕ್ ಬರಮಾಡಿಕೊಂಡು, ಔಪಚಾರಿಕ ಸ್ವಾಗತ ನೀಡಿದರು. ದಿನದ ಆರಂಭದಲ್ಲಿ, ಪ್ರಧಾನ ಮಂತ್ರಿಯವರು ಜಾಗ್ರೆಬ್‌ನ ವಿಮಾನ ನಿಲ್ದಾಣಕ್ಕೆ ಆಗಮಿಸಿದಾಗ ವಿಶೇಷ ಮತ್ತು ಆತ್ಮೀಯ ಗೌರವ ಸೂಚಕವಾಗಿ, ಅವರನ್ನು ಪ್ರಧಾನಿ ಪ್ಲೆಂಕೋವಿಕ್ ಸ್ವಾಗತಿಸಿದರು.ಕ್ರೊಯೇಷಿಯಾದ ಪ್ರಧಾನಮಂತ್ರಿಯವರೊಂದಿಗಿನ ಜಂಟಿ ಪತ್ರಿಕಾ ಹೇಳಿಕೆಯ ಸಂದರ್ಭದಲ್ಲಿ ಪ್ರಧಾನಮಂತ್ರಿಯವರ ಪತ್ರಿಕಾ ಹೇಳಿಕೆಯ ಇಂಗ್ಲಿಷ್ ಅನುವಾದ
June 18th, 09:56 pm
ಐತಿಹಾಸಿಕ ಮತ್ತು ಸುಂದರ ನಗರವಾದ ಜಾಗ್ರೆಬ್‌ನಲ್ಲಿ ನನ್ನನ್ನು ಆತ್ಮೀಯತೆಯ, ಉತ್ಸಾಹ ಭರಿತ ಮತ್ತು ವಾತ್ಸಲ್ಯಭರಿತ ರೀತಿಯಲ್ಲಿ ಸ್ವಾಗತಿಸಿದುದಕ್ಕೆ ನಾನು ಪ್ರಧಾನ ಮಂತ್ರಿ ಮತ್ತು ಕ್ರೊಯೇಷಿಯಾ ಸರ್ಕಾರಕ್ಕೆ ನನ್ನ ಹೃತ್ಪೂರ್ವಕ ಕೃತಜ್ಞತೆಯನ್ನು ಸಲ್ಲಿಸುತ್ತೇನೆ.ಕ್ರೊಯೇಷಿಯಾದ ಜಾಗ್ರೆಬ್‌ಗೆ ಪ್ರಧಾನಿ ಆಗಮಿಸಿದರು
June 18th, 05:38 pm
ಪ್ರಧಾನಿ ಮೋದಿ ಕ್ರೊಯೇಷಿಯಾದ ಜಾಗ್ರೆಬ್‌ಗೆ ಆಗಮಿಸಿದರು. ಭಾರತದ ಪ್ರಧಾನಿಯೊಬ್ಬರು ಕ್ರೊಯೇಷಿಯಾಕ್ಕೆ ಭೇಟಿ ನೀಡುತ್ತಿರುವುದು ಇದೇ ಮೊದಲು.ಪ್ರಧಾನಿ ಮೋದಿ ಅವರನ್ನು ವಿಮಾನ ನಿಲ್ದಾಣದಲ್ಲಿ ಪ್ರಧಾನಿ ಆಂಡ್ರೆಜ್ ಪ್ಲೆಂಕೋವಿಕ್ ಅವರು ಆತ್ಮೀಯವಾಗಿ ಬರಮಾಡಿಕೊಂಡರು.ಸೈಪ್ರಸ್, ಕೆನಡಾ ಮತ್ತು ಕ್ರೊಯೇಷಿಯಾ ಸೇರಿ ಮೂರು ರಾಷ್ಟ್ರಗಳ ಪ್ರವಾಸಕ್ಕೆ ಮುನ್ನು ಪ್ರಧಾನಮಂತ್ರಿ ಅವರ ನಿರ್ಗಮನ ಹೇಳಿಕೆ
June 15th, 07:00 am
ಜೂನ್ 15-16ರಂದು ನಾನು ಅಧ್ಯಕ್ಷ ಘನತೆವೆತ್ತ ನಿಕೋಸ್ ಕ್ರಿಸ್ಟೋಡೌಲಿಡೆಸ್ ಅವರ ಆಹ್ವಾನದ ಮೇರೆಗೆ ಸೈಪ್ರಸ್ ಗಣರಾಜ್ಯಕ್ಕೆ ಭೇಟಿ ನೀಡಲಿದ್ದೇನೆ. ಸೈಪ್ರಸ್ ಮೆಡಿಟರೇನಿಯನ್ ಪ್ರದೇಶ ಮತ್ತು ಇಯುನಲ್ಲಿ ಆಪ್ತ ಸ್ನೇಹಿತ ಮತ್ತು ಪ್ರಮುಖ ಪಾಲುದಾರ. ಈ ಭೇಟಿಯು ಐತಿಹಾಸಿಕ ಬಂಧಗಳನ್ನು ನಿರ್ಮಿಸಲು ಮತ್ತು ವ್ಯಾಪಾರ, ಹೂಡಿಕೆ, ಭದ್ರತೆ, ತಂತ್ರಜ್ಞಾನ ಕ್ಷೇತ್ರಗಳಲ್ಲಿ ನಮ್ಮ ಸಂಬಂಧಗಳನ್ನು ವಿಸ್ತರಿಸಲು ಮತ್ತು ಜನರ ನಡುವಿನ ವಿನಿಮಯವನ್ನು ಉತ್ತೇಜಿಸಲು ಅವಕಾಶವನ್ನು ಒದಗಿಸುತ್ತದೆ.ಜೂನ್ 15 ರಿಂದ 19 ರವರೆಗೆ ಪ್ರಧಾನಿ ಮೋದಿ ಸೈಪ್ರಸ್ ಗಣರಾಜ್ಯ, ಕೆನಡಾ ಮತ್ತು ಕ್ರೊಯೇಷಿಯಾಕ್ಕೆ ಭೇಟಿ ನೀಡಲಿದ್ದಾರೆ
June 14th, 11:58 am
ಪ್ರಧಾನಿ ಮೋದಿ ಜೂನ್ 15-16 ರಂದು ಸೈಪ್ರಸ್‌ಗೆ ಭೇಟಿ ನೀಡಲಿದ್ದಾರೆ, ಜೂನ್ 16-17 ರಂದು ಜಿ-7 ಶೃಂಗಸಭೆಗಾಗಿ ಕೆನಡಾಕ್ಕೆ ಮತ್ತು ಜೂನ್ 18 ರಂದು ಕ್ರೊಯೇಷಿಯಾಕ್ಕೆ ಭೇಟಿ ನೀಡಲಿದ್ದಾರೆ. ಪ್ರಧಾನಿ ಮೋದಿ ಸೈಪ್ರಸ್ ಅಧ್ಯಕ್ಷ ಕ್ರಿಸ್ಟೋಡೌಲೈಡ್ಸ್ ಅವರೊಂದಿಗೆ ಮಾತುಕತೆ ನಡೆಸಲಿದ್ದಾರೆ ಮತ್ತು ಲಿಮಾಸೋಲ್‌ನಲ್ಲಿ ವ್ಯಾಪಾರ ನಾಯಕರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ನಂತರ ಕೆನಡಾದಲ್ಲಿ, ಜಿ-7 ಶೃಂಗಸಭೆಯಲ್ಲಿ, ಪ್ರಧಾನಿ ಮೋದಿ ಜಿ-7 ದೇಶಗಳ ನಾಯಕರೊಂದಿಗೆ ಅಭಿಪ್ರಾಯಗಳನ್ನು ವಿನಿಮಯ ಮಾಡಿಕೊಳ್ಳಲಿದ್ದಾರೆ. ಕ್ರೊಯೇಷಿಯಾದಲ್ಲಿ, ಪ್ರಧಾನಿ ಮೋದಿ ಪ್ರಧಾನಿ ಪ್ಲೆಂಕೋವಿಕ್ ಅವರೊಂದಿಗೆ ದ್ವಿಪಕ್ಷೀಯ ಚರ್ಚೆ ನಡೆಸಲಿದ್ದಾರೆ ಮತ್ತು ಕ್ರೊಯೇಷಿಯಾದ ಅಧ್ಯಕ್ಷ ಜೊರಾನ್ ಮಿಲನೋವಿಕ್ ಅವರನ್ನು ಭೇಟಿ ಮಾಡಲಿದ್ದಾರೆ.PM greets the people of Croatia, on their Statehood Day
June 25th, 10:15 am