UDF and LDF are causing double damage by encouraging fundamentalist forces and engaging in corruption: PM Modi
April 02nd, 05:00 pm
PM Modi interacted with BJP karyakartas across Keralam under the “Mera Booth Sabse Mazboot” initiative, energising grassroots organisation and expressing confidence that the state is ready for a historic political shift. Extending greetings to the people of Keralam, he noted that the ongoing election campaign reflects a strong wave in favour of BJP-NDA.PM Modi interacts with BJP Karyakartas from Keralam under “Mera Booth Sabse Mazboot” campaign
April 02nd, 04:30 pm
PM Modi interacted with BJP karyakartas across Keralam under the “Mera Booth Sabse Mazboot” initiative, energising grassroots organisation and expressing confidence that the state is ready for a historic political shift. Extending greetings to the people of Keralam, he noted that the ongoing election campaign reflects a strong wave in favour of BJP-NDA.ಮನ್ ಕಿ ಬಾತ್‌ನಲ್ಲಿ ಪಶ್ಚಿಮ ಏಷ್ಯಾ ಬಿಕ್ಕಟ್ಟನ್ನು ನಿವಾರಿಸಲು 140 ಕೋಟಿ ಭಾರತೀಯರ ಒಗ್ಗಟ್ಟಿನಲ್ಲಿ ವಿಶ್ವಾಸ ವ್ಯಕ್ತಪಡಿಸಿದ ಪ್ರಧಾನಿ ಮೋದಿ
March 29th, 11:30 am
ಈ ತಿಂಗಳ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ, ಪ್ರಧಾನಿ ಮೋದಿ ಪಶ್ಚಿಮ ಏಷ್ಯಾ ಸಂಘರ್ಷದ ಬಗ್ಗೆ ಮಾತನಾಡಿದರು ಮತ್ತು ಬಿಕ್ಕಟ್ಟನ್ನು ನಿವಾರಿಸಲು ಒಗ್ಗಟ್ಟಾಗಿ ಉಳಿಯುವ ಅಗತ್ಯವನ್ನು ಒತ್ತಿ ಹೇಳಿದರು. ನಾಗರಿಕರು ವದಂತಿಗಳಿಂದ ದಾರಿತಪ್ಪಿಸಬೇಡಿ ಮತ್ತು ಸರ್ಕಾರ ನೀಡುವ ಮಾಹಿತಿಯನ್ನು ಮಾತ್ರ ಅವಲಂಬಿಸಬೇಕೆಂದು ಅವರು ಮನವಿ ಮಾಡಿದರು. ಜ್ಞಾನ ಭಾರತಂ ಸಮೀಕ್ಷೆ, ಕ್ರೀಡೆ ಮತ್ತು ಫಿಟ್‌ನೆಸ್, ನೀರಿನ ಸಂರಕ್ಷಣೆ, ಮೀನು ಸಾಕಣೆ ಮತ್ತು ಸೌರಶಕ್ತಿಯಂತಹ ಪ್ರಮುಖ ವಿಷಯಗಳ ಮೇಲೂ ಪ್ರಧಾನಿ ಮಾತನಾಡಿದರು.ಐಸಿಸಿ ಪುರುಷರ ಟಿ20 ವಿಶ್ವಕಪ್ ಗೆದ್ದ ಟೀಮ್ ಇಂಡಿಯಾವನ್ನು ಅಭಿನಂದಿಸಿದ ಪ್ರಧಾನಮಂತ್ರಿ
March 08th, 11:32 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಐಸಿಸಿ ಪುರುಷರ ಟಿ20 ವಿಶ್ವಕಪ್ ಗೆದ್ದ ಭಾರತೀಯ ಕ್ರಿಕೆಟ್ ತಂಡವನ್ನು ಅಭಿನಂದಿಸಿದ್ದಾರೆ. ಗಮನಾರ್ಹ ಗೆಲುವು ಅಸಾಧಾರಣ ಕೌಶಲ್ಯಗಳು, ದೃಢನಿಶ್ಚಯ ಮತ್ತು ತಂಡದ ಕೆಲಸವನ್ನು ಪ್ರತಿಬಿಂಬಿಸುತ್ತದೆ ಎಂದು ಶ್ರೀ ನರೇಂದ್ರ ಮೋದಿ ಹೇಳಿದ್ದಾರೆ. ಪಂದ್ಯಾವಳಿಯುದ್ದಕ್ಕೂ ತಂಡವು ಅತ್ಯುತ್ತಮ ಧೈರ್ಯವನ್ನು ತೋರಿಸಿದೆ ಎಂದು ಅವರು ಹೇಳಿದರು.ಜಮ್ಮು- ಕಾಶ್ಮೀರ ತಂಡದ ಮೊದಲ ರಣಜಿ ಟ್ರೋಫಿ ಜಯಕ್ಕೆ ಪ್ರಧಾನಮಂತ್ರಿ ಅಭಿನಂದನೆ
February 28th, 07:03 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಜಮ್ಮು- ಕಾಶ್ಮೀರ ತಂಡವು ಮೊದಲ ಬಾರಿಗೆ ರಣಜಿ ಟ್ರೋಫಿ ಗೆದ್ದಿರುವುದಕ್ಕೆ ಅಭಿನಂದನೆಗಳನ್ನು ತಿಳಿಸಿದ್ದಾರೆ.ವಿಶ್ವಕಪ್ ಗೆದ್ದಿರುವ ಭಾರತದ 19 ವರ್ಷದೊಳಗಿನವರ ಕ್ರಿಕೆಟ್ ತಂಡಕ್ಕೆ ಪ್ರಧಾನಮಂತ್ರಿ ಅಭಿನಂದನೆ
February 06th, 09:33 pm
ವಿಶ್ವ ಕಪ್ ಜಯಿಸಿರುವ ಭಾರತದ 19 ವರ್ಷದೊಳಗಿನವರ ಕ್ರಿಕೆಟ್ ತಂಡದ ಅತ್ಯುತ್ತಮ ಪ್ರದರ್ಶನವನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಶ್ಲಾಘಿಸಿದ್ದಾರೆ.ಅಂಧ ಮಹಿಳಾ ಟಿ20 ವಿಶ್ವಕಪ್ ಗೆದ್ದ ಭಾರತೀಯ ದೃಷ್ಟಿ ಚೇತನ ಮಹಿಳಾ ಕ್ರಿಕೆಟ್ ತಂಡಕ್ಕೆ ಪ್ರಧಾನಮಂತ್ರಿ ಆತಿಥ್ಯ
November 27th, 10:03 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇತ್ತೀಚೆಗೆ ಅಂಧ ಮಹಿಳಾ ಟಿ20 ವಿಶ್ವಕಪ್ ಗೆದ್ದ ಭಾರತೀಯ ದೃಷ್ಟಿಚೇತನ ಮಹಿಳಾ ಕ್ರಿಕೆಟ್ ತಂಡಕ್ಕೆ ಇಂದು ಆತಿಥ್ಯ ವಹಿಸಿದ್ದರು. ಪಂದ್ಯಾವಳಿಯ ಅನುಭವಗಳನ್ನು ಹಂಚಿಕೊಂಡ ಆಟಗಾರರೊಂದಿಗೆ ಶ್ರೀ ನರೇಂದ್ರ ಮೋದಿ ಆತ್ಮೀಯವಾಗಿ ಸಂವಾದ ನಡೆಸಿದರು.ಅಂಧ ಮಹಿಳೆಯರ ಟಿ20 ವಿಶ್ವಕಪ್ ಗೆದ್ದ ಭಾರತ ಕ್ರಿಕೆಟ್ ತಂಡಕ್ಕೆ ಪ್ರಧಾನಮಂತ್ರಿ ಅವರಿಂದ ಅಭಿನಂದನೆ
November 24th, 12:23 pm
ಅಂಧ ಮಹಿಳೆಯರ ಟಿ20 ವಿಶ್ವಕಪ್ ಗೆದ್ದ ಭಾರತೀಯ ಕ್ರಿಕೆಟ್ ತಂಡವನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಅಭಿನಂದಿಸಿದರು.ಐಸಿಸಿ ಮಹಿಳಾ ವಿಶ್ವಕಪ್ ಚಾಂಪಿಯನ್‌ಗಳೊಂದಿಗೆ ಪ್ರಧಾನಮಂತ್ರಿ ಅವರ ಸಂವಾದ
November 06th, 10:15 am
ಗೌರವಾನ್ವಿತ ಪ್ರಧಾನಮಂತ್ರಿಗಳೇ, ತುಂಬು ಧನ್ಯವಾದಗಳು. ನಾವು ಇಲ್ಲಿರುವುದಕ್ಕೆ ನಮಗೆ ಅಪಾರ ಗೌರವ ಮತ್ತು ಸೌಭಾಗ್ಯ ತಂದಿದೆ ಎಂದು ನಾನು ಭಾವಿಸುತ್ತೇನೆ. ನಾನು ನಿಮಗೆ ಒಂದು ಅಭಿಯಾನದ ಬಗ್ಗೆ ಹೇಳಲು ಬಯಸುತ್ತೇನೆ. ಈ ಹೆಣ್ಣು ಮಕ್ಕಳು ಅದ್ಭುತಗಳನ್ನೇ ಮಾಡಿದ್ದಾರೆ, ನಿಜವಾಗಿಯೂ ಅದ್ಭುತ. ಕಳೆದ 2 ವರ್ಷಗಳಿಂದ, ಅವರು ತುಂಬಾ ಶ್ರಮ ಹಾಕಿದ್ದಾರೆ. ಅಪಾರ ಪ್ರಯತ್ನವನ್ನು ತೋರಿಸಿದ್ದಾರೆ. ಪ್ರತಿ ಅಭ್ಯಾಸ ಅವಧಿಯಲ್ಲೂ, ಅವರು ಪೂರ್ಣ ಗಮನ ಮತ್ತು ಶಕ್ತಿ ಹಾಕಿ ಆಡಿದರು. ಅವರ ಕಠಿಣ ಪರಿಶ್ರಮ ನಿಜವಾಗಿಯೂ ಫಲ ನೀಡಿದೆ ಎಂದು ನಾನು ಹೇಳುತ್ತೇನೆ.ಐಸಿಸಿ ಮಹಿಳಾ ವಿಶ್ವಕಪ್ 2025 ಚಾಂಪಿಯನ್‌ಗಳೊಂದಿಗೆ ಪ್ರಧಾನಮಂತ್ರಿ ಸಂವಾದ
November 06th, 10:00 am
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ನವದೆಹಲಿಯ ಲೋಕ ಕಲ್ಯಾಣ ಮಾರ್ಗದ ನಂಬರ್ 7ರಲ್ಲಿ ಐಸಿಸಿ ಮಹಿಳಾ ವಿಶ್ವಕಪ್ 2025 ಚಾಂಪಿಯನ್ ಗಳೊಂದಿಗೆ ಸಂವಾದ ನಡೆಸಿದರು. 2025ರ ನವೆಂಬರ್ 2ರಂದು ರಾತ್ರಿ ನಡೆದ ಫೈನಲ್ಸ್ ನಲ್ಲಿ ಭಾರತ ತಂಡ ದಕ್ಷಿಣಾ ಆಫ್ರಿಕಾ ವಿರುದ್ಧ ಗೆಲುವು ಸಾಧಿಸಿತು. ದೇವ ದೀಪಾವಳಿ ಮತ್ತು ಗುರುಪುರಬ್ ಎರಡನ್ನೂ ಗುರುತಿಸುವ ಈ ದಿನವು ಬಹಳ ಮಹತ್ವದ ದಿನವಾಗಿದೆ ಎಂದು ಪ್ರಧಾನಮಂತ್ರಿಹೇಳಿದರು ಮತ್ತು ಹಾಜರಿದ್ದ ಎಲ್ಲಾ ಆಟಗಾರ್ತಿಯರಿಗೂ ಶುಭ ಕೋರಿದರು.ಉದಯೋನ್ಮುಖ ವಿಜ್ಞಾನ, ತಂತ್ರಜ್ಞಾನ ಮತ್ತು ನಾವೀನ್ಯತೆ ಸಮಾವೇಶ-2025 ಉದ್ದೇಶಿಸಿ ಪ್ರಧಾನಮಂತ್ರಿ ಭಾಷಣ
November 03rd, 11:00 am
ಭಾರತ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರಾದ ಡಾ. ಜಿತೇಂದ್ರ ಸಿಂಗ್ ಜಿ, ಪ್ರಧಾನ ವೈಜ್ಞಾನಿಕ ಸಲಹೆಗಾರ ಅಜಯ್ ಕುಮಾರ್ ಸೂದ್, ನೊಬೆಲ್ ಪ್ರಶಸ್ತಿ ವಿಜೇತ ಸರ್ ಆಂಡ್ರೆ ಗೀಮ್ ಅವರು ನಮ್ಮೊಂದಿಗೆ ಉಪಸ್ಥಿತರಿದ್ದಾರೆ, ಇಲ್ಲಿರುವ ಎಲ್ಲಾ ವಿಜ್ಞಾನಿಗಳೆ, ಅನುಶೋಧಕರೆ, ಶೈಕ್ಷಣಿಕ ಕ್ಷೇತ್ರದ ಗಣ್ಯರೆ, ಭಾರತ ಮತ್ತು ವಿದೇಶಗಳಿಂದ ಆಗಮಿಸಿರುವ ಗಣ್ಯರೆ, ಮಹಿಳೆಯರೆ ಮತ್ತು ಮಹನೀಯರೆ!ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 'ಉದಯೋನ್ಮುಖ ವಿಜ್ಞಾನ, ತಂತ್ರಜ್ಞಾನ ಮತ್ತು ನಾವೀನ್ಯತೆ ಸಮಾವೇಶ 2025' ಅನ್ನು ಉದ್ದೇಶಿಸಿ ಮಾತನಾಡಿದರು
November 03rd, 10:30 am
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ನವದೆಹಲಿಯ ಭಾರತ್ ಮಂಟಪದಲ್ಲಿ ನಡೆದ 'ಉದಯೋನ್ಮುಖ ವಿಜ್ಞಾನ, ತಂತ್ರಜ್ಞಾನ ಮತ್ತು ನಾವೀನ್ಯತೆ ಸಮಾವೇಶ (ESTIC) 2025' ಅನ್ನು ಉದ್ದೇಶಿಸಿ ಮಾತನಾಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಪ್ರಧಾನಿಯವರು, ಭಾರತ ಮತ್ತು ವಿದೇಶಗಳ ವಿಜ್ಞಾನಿಗಳು, ನಾವೀನ್ಯಕಾರರು (innovators), ಶಿಕ್ಷಣ ತಜ್ಞರು ಮತ್ತು ಇತರ ಗಣ್ಯ ಅತಿಥಿಗಳನ್ನು ಸ್ವಾಗತಿಸಿದರು. ಐಸಿಸಿ ಮಹಿಳಾ ವಿಶ್ವಕಪ್ 2025 ರಲ್ಲಿ ಭಾರತ ಗಳಿಸಿದ ಗಮನಾರ್ಹ ವಿಜಯದ ಬಗ್ಗೆ ಮಾತನಾಡಿದ ಶ್ರೀ ಮೋದಿಯವರು, ಭಾರತೀಯ ಕ್ರಿಕೆಟ್ ತಂಡದ ಯಶಸ್ಸಿನಿಂದ ಇಡೀ ರಾಷ್ಟ್ರವೇ ಹರ್ಷಗೊಂಡಿದೆ ಎಂದು ಪ್ರಸ್ತಾಪಿಸಿದರು. ಇದು ಭಾರತದ ಮೊದಲ ಮಹಿಳಾ ವಿಶ್ವಕಪ್ ಗೆಲುವು ಎಂಬುದನ್ನು ಒತ್ತಿ ಹೇಳಿದ ಅವರು, ಮಹಿಳಾ ಕ್ರಿಕೆಟ್ ತಂಡಕ್ಕೆ ತಮ್ಮ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸಿದರು. ರಾಷ್ಟ್ರವು ಅವರ ಬಗ್ಗೆ ಹೆಮ್ಮೆಪಡುತ್ತದೆ ಎಂದು ಹೇಳಿದ ಪ್ರಧಾನಿಯವರು, ಅವರ ಈ ಸಾಧನೆಯು ದೇಶಾದ್ಯಂತ ಲಕ್ಷಾಂತರ ಯುವಜನರಿಗೆ ಸ್ಫೂರ್ತಿ ನೀಡುತ್ತದೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದರು.ನವ ರಾಯ್‌ಪುರದ “ಸತ್ಯಸಾಯಿ ಸಂಜೀವಿನಿ ಮಕ್ಕಳ ಹೃದ್ರೋಗ ಆಸ್ಪತ್ರೆ”ಯಲ್ಲಿ ಯಶಸ್ವೀ ಹೃದ್ರೋಗ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡ ಮಕ್ಕಳೊಂದಿಗೆ ಪ್ರಧಾನಮಂತ್ರಿ ಸಂವಾದ
November 01st, 05:30 pm
ನಾನು ಹಾಕಿ ಚಾಂಪಿಯನ್. ನಾನು ಹಾಕಿಯಲ್ಲಿ 5 ಪದಕಗಳನ್ನು ಗೆದ್ದಿದ್ದೇನೆ. ನನ್ನ ಶಾಲೆಯಲ್ಲಿ ಆರೋಗ್ಯ ತಪಾಸಣೆ ಮಾಡಿಸಿದಾಗ, ನನ್ನ ಹೃದಯದಲ್ಲಿ ರಂಧ್ರವಿದೆ ಎಂದು ವೈದ್ಯರು ಪತ್ತೆ ಹಚ್ಚಿದರು. ನಾನು ಚಿಕಿತ್ಸೆಗಾಗಿ ಇಲ್ಲಿಗೆ ಬಂದೆ, ಶಸ್ತ್ರಚಿಕಿತ್ಸೆಗೆ ಒಳಗಾದೆ, ನಾನೀಗ ಗುಣಮುಖವಾಗಿದ್ದು, ನಾನು ಮತ್ತೆ ಹಾಕಿ ಆಡಬಹುದು.ಜನ್ಮಜಾತ ಹೃದಯ ಕಾಯಿಲೆಗಳನ್ನು ಉತ್ತಮ ಚಿಕಿತ್ಸೆ ಮೂಲಕ ನಿವಾರಿಸಿಕೊಂಡ ಮಕ್ಕಳೊಂದಿಗೆ ಸಂವಾದ ನಡೆಸಿದ ಪ್ರಧಾನಮಂತ್ರಿ
November 01st, 05:15 pm
'ಹೃದಯದ ಮಾತು (ದಿಲ್ ಕಿ ಬಾತ್)' ಕಾರ್ಯಕ್ರಮದ ಭಾಗವಾಗಿ, ಛತ್ತೀಸ್ ಗಢದ ನವ ರಾಯ್ ಪುರದ ಶ್ರೀ ಸತ್ಯ ಸಾಯಿ ಸಂಜೀವನಿ ಆಸ್ಪತ್ರೆಯಲ್ಲಿ ನಡೆದ 'ಜೀವನದ ಉಡುಗೊರೆ' ಸಮಾರಂಭದಲ್ಲಿ ಜನ್ಮಜಾತ ಹೃದಯ ಕಾಯಿಲೆಗಳಿಂದ ಯಶಸ್ವಿಯಾಗಿ ಚಿಕಿತ್ಸೆ ಪಡೆದ 2500 ಮಕ್ಕಳೊಂದಿಗೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಸಂವಾದ ನಡೆಸಿದರು.'ವಂದೇ ಮಾತರಂ' ನ ಚೈತನ್ಯವು ಭಾರತದ ಅಮರ ಪ್ರಜ್ಞೆಗೆ ಸಂಬಂಧಿಸಿದೆ: ಮನ್ ಕಿ ಬಾತ್ ನಲ್ಲಿ ಪ್ರಧಾನಿ ಮೋದಿ
October 26th, 11:30 am
ಈ ತಿಂಗಳ ಮನ್ ಕಿ ಬಾತ್ ಭಾಷಣದಲ್ಲಿ, ಅಕ್ಟೋಬರ್ 31 ರಂದು ನಡೆದ ಸರ್ದಾರ್ ಪಟೇಲ್ ಅವರ 150 ನೇ ಜನ್ಮ ದಿನಾಚರಣೆಯಂದು ಪ್ರಧಾನಿ ಮೋದಿ ಅವರಿಗೆ ಗೌರವ ಸಲ್ಲಿಸಿದರು. ಛಠ್ ಪೂಜಾ ಉತ್ಸವ, ಪರಿಸರ ಸಂರಕ್ಷಣೆ, ಭಾರತೀಯ ನಾಯಿ ತಳಿಗಳು, ಭಾರತೀಯ ಕಾಫಿ, ಬುಡಕಟ್ಟು ಸಮುದಾಯದ ನಾಯಕರು ಮತ್ತು ಸಂಸ್ಕೃತ ಭಾಷೆಯ ಪ್ರಾಮುಖ್ಯತೆಯಂತಹ ಆಸಕ್ತಿದಾಯಕ ವಿಷಯಗಳನ್ನು ಅವರು ಸ್ಪರ್ಶಿಸಿದರು. 'ವಂದೇ ಮಾತರಂ' ಹಾಡಿನ 150 ನೇ ವರ್ಷದ ಬಗ್ಗೆ ಪ್ರಧಾನಿಯವರು ವಿಶೇಷವಾಗಿ ಉಲ್ಲೇಖಿಸಿದರು.2025ರ ಏಷ್ಯಾ ಕಪ್‌ನಲ್ಲಿ ಗೆದ್ದ ಭಾರತ ಕ್ರಿಕೆಟ್ ತಂಡಕ್ಕೆ ಪ್ರಧಾನಮಂತ್ರಿ ಅಭಿನಂದನೆ
September 29th, 12:30 am
2025ರ ಏಷ್ಯಾ ಕಪ್‌ನಲ್ಲಿ ಅದ್ಭುತ ಗೆಲುವು ಸಾಧಿಸಿದ ಭಾರತೀಯ ಕ್ರಿಕೆಟ್ ತಂಡಕ್ಕೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.ಫಿಜಿ ಪ್ರಧಾನಮಂತ್ರಿ ಶ್ರೀ ಸಿಟಿವೆನಿ ರಬೂಕಾ ಅವರ ಭಾರತ ಭೇಟಿ: ದ್ವಿಪಕ್ಷೀಯ ಮಾತುಕತೆಯ ಫಲಿತಾಂಶಗಳ ಪಟ್ಟಿ
August 25th, 01:58 pm
ಫಿಜಿಯಲ್ಲಿ ಸೂಪರ್-ಸ್ಪೆಷಾಲಿಟಿ ಆಸ್ಪತ್ರೆಯ ವಿನ್ಯಾಸ, ನಿರ್ಮಾಣ, ಕಾರ್ಯಾರಂಭ, ಕಾರ್ಯಾಚರಣೆ ಮತ್ತು ನಿರ್ವಹಣೆಗಾಗಿ ಭಾರತ ಗಣರಾಜ್ಯ ಸರ್ಕಾರ ಮತ್ತು ಫಿಜಿ ಗಣರಾಜ್ಯ ಸರ್ಕಾರಗಳ ನಡುವಿನ ತಿಳುವಳಿಕೆ ಒಪ್ಪಂದ.ಫಿಜಿ ಪ್ರಧಾನಮಂತ್ರಿ ಅವರ ಜತೆಗಿನ ಜಂಟಿ ಪತ್ರಿಕಾ ಹೇಳಿಕೆಯ ಸಂದರ್ಭದಲ್ಲಿ ಪ್ರಧಾನಮಂತ್ರಿ ಅವರ ಪತ್ರಿಕಾ ಹೇಳಿಕೆಯ ಕನ್ನಡ ಅನುವಾದ
August 25th, 12:30 pm
ಆ ಸಮಯದಲ್ಲಿ, ನಾವು ಭಾರತ-ಪೆಸಿಫಿಕ್ ದ್ವೀಪಗಳ ಸಹಕಾರ ವೇದಿಕೆಯನ್ನು (ಎಫ್‌ಐಪಿಐಸಿ) ಪ್ರಾರಂಭಿಸಿದ್ದೇವೆ. ಈ ಉಪಕ್ರಮವು ಭಾರತ-ಫಿಜಿ ಸಂಬಂಧಗಳನ್ನು ಬಲಪಡಿಸುವುದಲ್ಲದೆ, ಇಡೀ ಪೆಸಿಫಿಕ್ ಪ್ರದೇಶದೊಂದಿಗಿನ ನಮ್ಮ ಸಂಬಂಧಗಳನ್ನು ಬಲಪಡಿಸಿದೆ. ಇಂದು, ಪ್ರಧಾನಮಂತ್ರಿ ರಬೂಕಾ ಅವರ ಭೇಟಿಯೊಂದಿಗೆ, ನಾವು ನಮ್ಮ ಪಾಲುದಾರಿಕೆಯಲ್ಲಿ ಹೊಸ ಅಧ್ಯಾಯವನ್ನು ಬರೆಯುತ್ತಿದ್ದೇವೆ.ಬ್ರಿಟನ್ ಪ್ರಧಾನಮಂತ್ರಿಯವರೊಂದಿಗಿನ ಜಂಟಿ ಪತ್ರಿಕಾ ಹೇಳಿಕೆಯ ಸಂದರ್ಭದಲ್ಲಿ ಪ್ರಧಾನ ಮಂತ್ರಿಯವರು ನೀಡಿದ ಪತ್ರಿಕಾ ಹೇಳಿಕೆಯ ಕನ್ನಡ ಅನುವಾದ
July 24th, 04:20 pm
ಮೊದಲನೆಯದಾಗಿ, ಪ್ರಧಾನಿ ಸ್ಟಾರ್ಮರ್ ಅವರ ಆತ್ಮೀಯ ಸ್ವಾಗತ ಮತ್ತು ಸೌಹಾರ್ದಯುತ ಆತಿಥ್ಯಕ್ಕಾಗಿ ನಾನು ಅವರಿಗೆ ನನ್ನ ಹೃತ್ಪೂರ್ವಕ ಕೃತಜ್ಞತೆಯನ್ನು ವ್ಯಕ್ತಪಡಿಸಲು ಬಯಸುತ್ತೇನೆ. ಇಂದು ನಮ್ಮ ದ್ವಿಪಕ್ಷೀಯ ಸಂಬಂಧಗಳಲ್ಲಿ ಒಂದು ಐತಿಹಾಸಿಕ ಮೈಲಿಗಲ್ಲು. ಹಲವು ವರ್ಷಗಳ ಸಮರ್ಪಿತ ಪ್ರಯತ್ನಗಳ ನಂತರ, ಇಂದು ನಮ್ಮ ಎರಡೂ ದೇಶಗಳ ನಡುವೆ ಸಮಗ್ರ ಆರ್ಥಿಕ ಮತ್ತು ವ್ಯಾಪಾರ ಒಪ್ಪಂದವನ್ನು ಅಂತಿಮಗೊಳಿಸಲಾಗಿದೆ ಎಂದು ನನಗೆ ಸಂತೋಷವಾಗಿದೆ.ಬ್ರೆಜಿಲ್ ಅಧ್ಯಕ್ಷರೊಂದಿಗಿನ ಜಂಟಿ ಪತ್ರಿಕಾ ಹೇಳಿಕೆಯ ಸಂದರ್ಭದಲ್ಲಿ ಪ್ರಧಾನಮಂತ್ರಿ ಅವರ ಪತ್ರಿಕಾ ಹೇಳಿಕೆ
July 08th, 08:30 pm
ಇಂದು ಬ್ರೆಜಿಲ್ ಅಧ್ಯಕ್ಷರಿಂದ ಬ್ರೆಜಿಲ್ ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿಯನ್ನು ಸ್ವೀಕರಿಸುತ್ತಿರುವುದು ನನಗೆ ಮಾತ್ರವಲ್ಲದೆ 140 ಕೋಟಿ ಭಾರತೀಯರಿಗೆ ಅತೀವ ಹೆಮ್ಮೆ ಮತ್ತು ಭಾವನಾತ್ಮಕ ಕ್ಷಣವಾಗಿದೆ. ಈ ಗೌರವಕ್ಕಾಗಿ ಅಧ್ಯಕ್ಷರಿಗೆ, ಬ್ರೆಜಿಲ್ ಸರ್ಕಾರಕ್ಕೆ ಮತ್ತು ಬ್ರೆಜಿಲ್ ಜನರಿಗೆ ನಾನು ಪ್ರಾಮಾಣಿಕವಾಗಿ ಧನ್ಯವಾದ ಹೇಳುತ್ತೇನೆ.