ದೇಶಭಕ್ತಿ ಗೀತೆಯಾಗಿ ವಂದೇ ಮಾತರಂ ಅಳವಡಿಸಿಕೊಂಡು 150 ವರ್ಷಗಳನ್ನು ಪೂರೈಸಿರುವ ಸಂದರ್ಭದಲ್ಲಿ ಲೋಕಸಭೆಯಲ್ಲಿ ನಡೆದ ವಿಶೇಷ ಚರ್ಚೆಯಲ್ಲಿ ಪ್ರಧಾನಮಂತ್ರಿ ಅವರ ಭಾಷಣ
December 08th, 12:30 pm
ಈ ಮಹತ್ವದ ಸಂದರ್ಭದಲ್ಲಿ ಸಾಮೂಹಿಕ ಚರ್ಚೆಯ ಮಾರ್ಗವನ್ನು ಆಯ್ಕೆ ಮಾಡಿದ್ದಕ್ಕಾಗಿ ನಿಮಗೆ ಮತ್ತು ಈ ಸದನದ ಎಲ್ಲಾ ಗೌರವಾನ್ವಿತ ಸದಸ್ಯರಿಗೆ ನನ್ನ ಹೃತ್ಪೂರ್ವಕ ಕೃತಜ್ಞತೆಗಳನ್ನು ವ್ಯಕ್ತಪಡಿಸುತ್ತೇನೆ. ರಾಷ್ಟ್ರದ ಸ್ವಾತಂತ್ರ್ಯ ಚಳುವಳಿಗೆ ಶಕ್ತಿ, ಸ್ಫೂರ್ತಿ, ತ್ಯಾಗ ಮತ್ತು ಕಾಠಿನ್ಯದ ಮನೋಭಾವ ತುಂಬಿದ ಆ ಮಂತ್ರ, ಆ ಸ್ಪಷ್ಟ ಕರೆಯನ್ನು ಗೌರವದಿಂದ ನೆನಪಿಸಿಕೊಳ್ಳುವುದು, ಈ ಸದನದೊಳಗೆ ವಂದೇ ಮಾತರಂ(ಇದನ್ನು ದೇಶಭಕ್ತಿ ಗೀತೆಯಾಗಿ ಅಳವಡಿಸಿಕೊಂಡು 150 ವರ್ಷಗಳು ಸಂದಿವೆ, ಕವಿ ರವೀಂದ್ರನಾಥ್ ಠ್ಯಾಗೋರ್ ಅವರ ಜನ ಗಣ ಮನ ಅಧಿನಾಯಕ ಜಯ ಹೇ – ಹಾಗೂ ಬಂಕಿಮ್ ಚಂದ್ರ ಚಟರ್ಜಿ ಅವರ ವಂದೇ ಮಾತರಂಗೆ 1950 ಜನವರಿ 24ರಂದು ರಾಷ್ಟ್ರಗೀತೆಯ ಸ್ಥಾನಮಾನ ನೀಡಲಾಗಿದೆ) ಅನ್ನು ಸ್ಮರಿಸುವುದು ನಮಗೆಲ್ಲರಿಗೂ ಸೌಭಾಗ್ಯದ ವಿಷಯವಾಗಿದೆ. ವಂದೇ ಮಾತರಂ ಅನ್ನು ದೇಶಭಕ್ತಿ ಗೀತೆಯಾಗಿ ಅಳವಡಿಸಿಕೊಂಡು 150 ವರ್ಷಗಳನ್ನು ಗುರುತಿಸುವ ಐತಿಹಾಸಿಕ ಸಂದರ್ಭಕ್ಕೆ ನಾವೆಲ್ಲರೂ ಸಾಕ್ಷಿಯಾಗಿದ್ದೇವೆ ಎಂಬುದು ಬಹಳ ಹೆಮ್ಮೆಯ ವಿಷಯ. ಈ ಅವಧಿಯು ಇತಿಹಾಸ ಪುಟದ ಅಸಂಖ್ಯಾತ ಘಟನೆಗಳನ್ನು ನಮ್ಮ ಮುಂದೆ ತರುತ್ತದೆ. ಈ ಚರ್ಚೆಯು ಖಂಡಿತವಾಗಿಯೂ ಈ ಸದನದ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ, ಆದರೆ ನಾವು ಈ ಕ್ಷಣವನ್ನು ಸಾಮೂಹಿಕವಾಗಿ ಬಳಸಿಕೊಂಡರೆ, ಅದು ಮುಂದಿನ ಪೀಳಿಗೆಗೆ, ಪ್ರತಿ ಪೀಳಿಗೆಗೂ ಸತತ ಕಲಿಕೆಯ ಮೂಲವಾಗಿಯೂ ಕಾರ್ಯ ನಿರ್ವಹಿಸಬಹುದು.ಲೋಕಸಭೆಯಲ್ಲಿ ನಡೆದ ರಾಷ್ಟ್ರೀಯ ಗೀತೆ ವಂದೇ ಮಾತರಂನ 150 ವರ್ಷಗಳ ವಿಶೇಷ ಚರ್ಚೆಯಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾತನಾಡಿದರು
December 08th, 12:00 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಲೋಕಸಭೆಯಲ್ಲಿ ರಾಷ್ಟ್ರೀಯ ಗೀತೆ ವಂದೇ ಮಾತರಂನ 150ನೇ ವಾರ್ಷಿಕೋತ್ಸವದ ವಿಶೇಷ ಚರ್ಚೆಯಲ್ಲಿ ಮಾತನಾಡಿದರು. ಈ ಮಹತ್ವದ ಸಂದರ್ಭದಲ್ಲಿ ಸಾಮೂಹಿಕ ಚರ್ಚೆಯ ಮಾರ್ಗವನ್ನು ಆಯ್ಕೆ ಮಾಡಿಕೊಂಡಿದ್ದಕ್ಕಾಗಿ ಸದನದ ಎಲ್ಲಾ ಗೌರವಾನ್ವಿತ ಸದಸ್ಯರಿಗೆ ಪ್ರಧಾನಮಂತ್ರಿಯವರು ಹೃತ್ಪೂರ್ವಕ ಕೃತಜ್ಞತೆಗಳನ್ನು ವ್ಯಕ್ತಪಡಿಸಿದರು. ರಾಷ್ಟ್ರದ ಸ್ವಾತಂತ್ರ್ಯ ಚಳವಳಿಗೆ ಶಕ್ತಿ ತುಂಬಿದ ಮತ್ತು ಸ್ಫೂರ್ತಿ ನೀಡಿದ, ತ್ಯಾಗ ಮತ್ತು ತಪಸ್ಸಿನ ಮಾರ್ಗವನ್ನು ತೋರಿಸಿದ ವಂದೇ ಮಾತರಂ ಎಂಬ ಮಂತ್ರ ಮತ್ತು ಘೋಷವಾಕ್ಯವನ್ನು ನೆನಪಿಸಿಕೊಳ್ಳಲಾಗುತ್ತಿದೆ ಮತ್ತು ಇದು ಸದನದಲ್ಲಿರುವ ಎಲ್ಲರಿಗೂ ಒಂದು ದೊಡ್ಡ ಸೌಭಾಗ್ಯ ಎಂದು ಅವರು ಹೇಳಿದರು. ವಂದೇ ಮಾತರಂನ 150 ವರ್ಷಗಳ ಐತಿಹಾಸಿಕ ಸಂದರ್ಭಕ್ಕೆ ದೇಶ ಸಾಕ್ಷಿಯಾಗುತ್ತಿರುವುದು ಹೆಮ್ಮೆಯ ವಿಷಯ ಎಂದು ಶ್ರೀ ಮೋದಿ ಹೇಳಿದರು. ಈ ಅವಧಿಯು ಇತಿಹಾಸದ ಅಸಂಖ್ಯಾತ ಘಟನೆಗಳನ್ನು ನಮ್ಮ ಮುಂದೆ ತರುತ್ತದೆ ಎಂದು ಅವರು ಹೇಳಿದರು. ಈ ಚರ್ಚೆಯು ಸದನದ ಬದ್ಧತೆಯನ್ನು ಪ್ರತಿಬಿಂಬಿಸುವುದಲ್ಲದೆ, ಎಲ್ಲರೂ ಸಾಮೂಹಿಕವಾಗಿ ಇದನ್ನು ಸದುಪಯೋಗಪಡಿಸಿಕೊಂಡರೆ ಭವಿಷ್ಯದ ಪೀಳಿಗೆಗೆ ಶಿಕ್ಷಣದ ಮೂಲವೂ ಆಗುತ್ತದೆ ಎಂದು ಪ್ರಧಾನಮಂತ್ರಿ ಒತ್ತಿ ಹೇಳಿದರು.'ಮನ್ ಕಿ ಬಾತ್' ಜನರ ಸಾಮೂಹಿಕ ಪ್ರಯತ್ನಗಳನ್ನು ಸಾರ್ವಜನಿಕರಿಗೆ ತಿಳಿಸಲು ಅತ್ಯುತ್ತಮ ವೇದಿಕೆಯಾಗಿದೆ: ಪ್ರಧಾನಿ ಮೋದಿ
November 30th, 11:30 am
ಈ ತಿಂಗಳ ಮನ್ ಕಿ ಬಾತ್ ನಲ್ಲಿ, ಪ್ರಧಾನಿ ಮೋದಿ ಅವರು ಸಂವಿಧಾನ ದಿನಾಚರಣೆ, ವಂದೇ ಮಾತರಂನ 150 ನೇ ವಾರ್ಷಿಕೋತ್ಸವ, ಅಯೋಧ್ಯೆಯಲ್ಲಿ ಧರ್ಮ ಧ್ವಜಾರೋಹಣ, ಐಎನ್ಎಸ್ 'ಮಹೆ' ಸೇರ್ಪಡೆ ಮತ್ತು ಕುರುಕ್ಷೇತ್ರದಲ್ಲಿ ಅಂತರರಾಷ್ಟ್ರೀಯ ಗೀತಾ ಮಹೋತ್ಸವ ಸೇರಿದಂತೆ ನವೆಂಬರ್ ತಿಂಗಳ ಪ್ರಮುಖ ಘಟನೆಗಳನ್ನು ಹೈಲೈಟ್ ಮಾಡಿದರು. ದಾಖಲೆಯ ಆಹಾರ ಧಾನ್ಯ ಮತ್ತು ಜೇನುತುಪ್ಪ ಉತ್ಪಾದನೆ, ಭಾರತದ ಕ್ರೀಡಾ ಯಶಸ್ಸುಗಳು, ವಸ್ತು ಸಂಗ್ರಹಾಲಯಗಳು ಮತ್ತು ನೈಸರ್ಗಿಕ ಕೃಷಿಯಂತಹ ಹಲವಾರು ಪ್ರಮುಖ ವಿಷಯಗಳನ್ನು ಸಹ ಅವರು ಸ್ಪರ್ಶಿಸಿದರು. ಎಲ್ಲರೂ ಕಾಶಿ-ತಮಿಳು ಸಂಗಮದ ಭಾಗವಾಗಬೇಕೆಂದು ಪ್ರಧಾನಿ ಒತ್ತಾಯಿಸಿದರು.ಸಂವಿಧಾನ ದಿನದಂದು ಪ್ಯಾರಿಸ್‌ನ ಯುನೆಸ್ಕೋ ಕೇಂದ್ರ ಕಚೇರಿಯಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಪುತ್ಥಳಿ ಅನಾವರಣಗೊಳಿಸಿದ್ದಕ್ಕೆ ಹೆಮ್ಮೆ ವ್ಯಕ್ತಪಡಿಸಿದ ಪ್ರಧಾನಮಂತ್ರಿ
November 26th, 10:51 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಸಂವಿಧಾನ ದಿನದಂದು ಪ್ಯಾರಿಸ್‌ನ ಯುನೆಸ್ಕೋ ಕೇಂದ್ರ ಕಚೇರಿಯಲ್ಲಿ ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರ ಪುತ್ಥಳಿ ಅನಾವರಣಗೊಳಿಸಿರುವುದಕ್ಕೆ ಅಪಾರ ಹೆಮ್ಮೆ ವ್ಯಕ್ತಪಡಿಸಿದ್ದಾರೆ.ಸಂವಿಧಾನ ಸದನದ ಕೇಂದ್ರ ಸಭಾಂಗಣದಲ್ಲಿ ನಡೆದ ಸಂವಿಧಾನ ದಿನಾಚರಣೆಯಲ್ಲಿ ಪ್ರಧಾನಮಂತ್ರಿ ಅವರು ಭಾಗವಹಿಸಿದರು
November 26th, 09:28 pm
ಇಂದು ಮುಂಜಾನೆ, ನವದೆಹಲಿಯ ಸಂವಿಧಾನ ಸದನದ ಐತಿಹಾಸಿಕ ಕೇಂದ್ರ ಸಭಾಂಗಣದಲ್ಲಿ ನಡೆದ ಸಂವಿಧಾನ ದಿನಾಚರಣೆಯಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಭಾಗವಹಿಸಿದ್ದರು.ಸಂವಿಧಾನ ದಿನದಂದು ಸಂವಿಧಾನ ಪೀಠಿಕೆ ಓದುವ ಕಾರ್ಯಕ್ರಮದಲ್ಲಿ ಪ್ರಧಾನ ಮಂತ್ರಿಯವರ ಕಛೇರಿ ಅಧಿಕಾರಿಗಳು ಭಾಗವಹಿಸಿದರು
November 26th, 09:25 pm
ಸಂವಿಧಾನ ದಿನದ ಸಂದರ್ಭದಲ್ಲಿ, ಇಂದು ಪ್ರಧಾನಮಂತ್ರಿ ಕಛೇರಿಯಲ್ಲಿ ಭಾರತದ ಸಂವಿಧಾನ ಪೀಠಿಕೆಯನ್ನು ಓದಲಾಯಿತು.ಸಂವಿಧಾನ ದಿನದಂದು, ಭಾರತದ ಸಂವಿಧಾನ ರಚನಾಕಾರರಿಗೆ ಗೌರವ ನಮನ ಸಲ್ಲಿಸಿದ ಪ್ರಧಾನಮಂತ್ರಿ
November 26th, 10:15 am
'ಸಂವಿಧಾನ ದಿನದ ಸಂದರ್ಭದಲ್ಲಿ, ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಭಾರತದ ಸಂವಿಧಾನ ರಚನಾಕಾರರಿಗೆ ಗೌರವ ನಮನ ಸಲ್ಲಿಸಿದರು. 'ವಿಕಸಿತ ಭಾರತ'ವನ್ನು ನಿರ್ಮಿಸುವ ಸಾಮೂಹಿಕ ಪ್ರಯತ್ನದಲ್ಲಿ ಸಂವಿಧಾನ ರಚನಕಾರರ ಮುನ್ನೋಟ ಮತ್ತು ದೂರದೃಷ್ಟಿಯು ರಾಷ್ಟ್ರಕ್ಕೆ ಪ್ರೇರಣೆಯಾಗಿದೆ ಎಂದು ಪ್ರಧಾನಮಂತ್ರಿ ಹೇಳಿದರು.ನವೆಂಬರ್ 26 ರಂದು ʻಸಂವಿಧಾನ ಸದನʼದ ಸೆಂಟ್ರಲ್ ಹಾಲ್‌ನಲ್ಲಿ ನಡೆಯಲಿರುವ ʻಸಂವಿಧಾನ ದಿನಾಚರಣೆʼ ಕಾರ್ಯಕ್ರಮದಲ್ಲಿ ಭಾಗವಹಿಸಲಿರುವ ಪ್ರಧಾನಮಂತ್ರಿ
November 25th, 04:19 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ನವೆಂಬರ್ 26 ರಂದು ಬೆಳಗ್ಗೆ 11 ಗಂಟೆಗೆ ಸಂವಿಧಾನ ಸದನದ ಸೆಂಟ್ರಲ್ ಹಾಲ್‌ನಲ್ಲಿ ನಡೆಯುವ ʻಸಂವಿಧಾನ ದಿನಾಚರಣೆʼಯಲ್ಲಿ ಭಾಗವಹಿಸಲಿದ್ದಾರೆ. ಈ ವರ್ಷವು ಸಂವಿಧಾನವನ್ನು ಅಂಗೀಕರಿಸಿದ 76ನೇ ವಾರ್ಷಿಕೋತ್ಸವವನ್ನು ಸೂಚಿಸುತ್ತದೆ.AAP-da's sinking ship will drown in Yamuna Ji: PM Modi in Kartar Nagar, Delhi
January 29th, 01:16 pm
PM Modi today, addressed a massive crowd in Kartar Nagar, declared that Delhi had rejected excuses, fake promises, and deception. He asserted that the city demanded a double-engine BJP government focused on welfare and development, ensuring housing, modernization, piped water, and an end to the tanker mafia. Confident of victory, he proclaimed, On February 5th, AAP-da Jayegi, BJP Aayegi!”PM Modi’s power-packed rally in Kartar Nagar ignites BJP’s campaign
January 29th, 01:15 pm
PM Modi today, addressed a massive crowd in Kartar Nagar, declared that Delhi had rejected excuses, fake promises, and deception. He asserted that the city demanded a double-engine BJP government focused on welfare and development, ensuring housing, modernization, piped water, and an end to the tanker mafia. Confident of victory, he proclaimed, On February 5th, AAP-da Jayegi, BJP Aayegi!”ಸಂವಿಧಾನವೇ ನಮ್ಮ ಮಾರ್ಗದರ್ಶಕ ಬೆಳಕು: ಮನ್ ಕಿ ಬಾತ್ ನಲ್ಲಿ ಪ್ರಧಾನಿ ಮೋದಿ
December 29th, 11:30 am
ಮನ್ ಕಿ ಬಾತ್‌ನ ಈ ಸಂಚಿಕೆಯಲ್ಲಿ, ಪ್ರಧಾನಿ ಮೋದಿ ಅವರು ಸಂವಿಧಾನದ 75 ನೇ ವಾರ್ಷಿಕೋತ್ಸವ ಮತ್ತು ಪ್ರಯಾಗರಾಜ್‌ನಲ್ಲಿ ಮಹಾಕುಂಭದ ಸಿದ್ಧತೆ ಸೇರಿದಂತೆ ಭಾರತದ ಸಾಧನೆಗಳನ್ನು ಪ್ರತಿಬಿಂಬಿಸಿದರು. ಅವರು ಬಸ್ತಾರ್ ಒಲಿಂಪಿಕ್ಸ್‌ನ ಯಶಸ್ಸನ್ನು ಶ್ಲಾಘಿಸಿದರು ಮತ್ತು ಆಯುಷ್ಮಾನ್ ಭಾರತ್ ಯೋಜನೆಯಡಿಯಲ್ಲಿ ಮಲೇರಿಯಾ ನಿರ್ಮೂಲನೆ ಮತ್ತು ಕ್ಯಾನ್ಸರ್ ಚಿಕಿತ್ಸೆಯ ಪ್ರಗತಿಯಂತಹ ಮಹತ್ವದ ಆರೋಗ್ಯ ಪ್ರಗತಿಗಳನ್ನು ಎತ್ತಿ ತೋರಿಸಿದರು. ಹೆಚ್ಚುವರಿಯಾಗಿ, ಅವರು ಒಡಿಶಾದ ಕಲಹಂಡಿಯಲ್ಲಿನ ಕೃಷಿ ರೂಪಾಂತರವನ್ನು ಶ್ಲಾಘಿಸಿದರು.The mantra of the Bharatiya Nyaya Sanhita is - Citizen First: PM Modi
December 03rd, 12:15 pm
The Prime Minister, Shri Narendra Modi dedicated to the nation the successful implementation of three transformative new criminal laws—Bharatiya Nyaya Sanhita, Bharatiya Nagarik Suraksha Sanhita and Bharatiya Sakshya Adhiniyam today at Chandigarh.ಯಶಸ್ವಿಯಾಗಿ ಅನುಷ್ಠಾನಗೊಂಡ 3 ಹೊಸ ಕ್ರಿಮಿನಲ್ ಕಾನೂನುಗಳನ್ನು ರಾಷ್ಟ್ರಕ್ಕೆ ಸಮರ್ಪಿಸಿದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ
December 03rd, 11:47 am
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಚಂಡೀಗಢದಲ್ಲಿಂದು 3 ಪರಿವರ್ತನೀಯ ಹೊಸ ಕ್ರಿಮಿನಲ್ ಕಾನೂನುಗಳಾದ ಭಾರತೀಯ ನ್ಯಾಯ ಸಂಹಿತೆ, ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ ಮತ್ತು ಭಾರತೀಯ ಸಾಕ್ಷಿ ಅಧಿನಿಯಮಗಳನ್ನು ರಾಷ್ಟ್ರಕ್ಕೆ ಸಮರ್ಪಿಸಿದರು. ಈ 3 ಕಾನೂನುಗಳು ಯಶಸ್ವಿಯಾಗಿ ಅನುಷ್ಠಾನಗೊಂಡಿವೆ. ನಂತರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಶ್ರೀ ಮೋದಿ, ಸತ್ಯ ಮತ್ತು ನ್ಯಾಯ ಸ್ಥಾಪಿಸುವ ಶಕ್ತಿಯ ರೂಪವಾದ ಮಾತೆ ಚಂಡಿ ದೇವಿಗೆ ಚಂಡೀಗಢದ ಗುರುತು ಸಂಬಂಧಿಸಿದೆ, ಅದೇ ತತ್ವಶಾಸ್ತ್ರವು ಭಾರತೀಯ ನ್ಯಾಯ ಸಂಹಿತೆ ಮತ್ತು ಭಾರತೀಯ ನಾಗರಿಕ ಸುರಕ್ಷಾ ಸಂಹಿತೆಯ ಸಂಪೂರ್ಣ ಸ್ವರೂಪದ ಆಧಾರವಾಗಿದೆ. ಭಾರತ ಸಂವಿಧಾನದ ಸ್ಫೂರ್ತಿಯಿಂದ ಪ್ರೇರಿತವಾದ ಭಾರತೀಯ ನ್ಯಾಯ ಸಂಹಿತೆ ಜಾರಿಗೆ ಬರುತ್ತಿರುವುದು ಒಂದು ಐತಿಹಾಸಿಕ ಕ್ಷಣವಾಗಿದ್ದು, ರಾಷ್ಟ್ರವು ವಿಕಸಿತ ಭಾರತ್ ಕಟ್ಟುವ ಸಂಕಲ್ಪದೊಂದಿಗೆ ಮುನ್ನಡೆಯುವ ಪ್ರಮುಖ ಘಟ್ಟದಲ್ಲಿದೆ. ಭಾರತೀಯ ಸಂವಿಧಾನ ಅಳವಡಿಸಿಕೊಂ 75 ವರ್ಷಗಳಲ್ಲಿ ನಮ್ಮ ಸಂವಿಧಾನವು ದೇಶದ ನಾಗರಿಕರಿಗೆ ಕಲ್ಪಿಸಿದ ಆದರ್ಶಗಳನ್ನು ಈಡೇರಿಸುವ ನಿಟ್ಟಿನಲ್ಲಿ ಇದು ಸಂಕೀರ್ಣ ಪ್ರಯತ್ನವಾಗಿದೆ. ಅದರ ಲೈವ್ ಡೆಮೊ ಮೂಲಕ ಕಾನೂನುಗಳನ್ನು ಹೇಗೆ ಜಾರಿಗೊಳಿಸಬಹುದು ಎಂಬುದರ ಕುರಿತು ತನಗೆ ಒಂದು ನೋಟ ಸಿಕ್ಕಿದೆ. ಹಾಗಾಗಿ, ಕಾನೂನುಗಳ ಲೈವ್ ಡೆಮೊಗೆ ಭೇಟಿ ನೀಡುವಂತೆ ಪ್ರಧಾನಿ ಜನರನ್ನು ಒತ್ತಾಯಿಸಿದರು. 3 ಹೊಸ ಕ್ರಿಮಿನಲ್ ಕಾನೂನುಗಳ ಯಶಸ್ವಿ ಅನುಷ್ಠಾನದ ಸಂದರ್ಭದಲ್ಲಿ ಅವರು ಎಲ್ಲಾ ನಾಗರಿಕರಿಗೆ ತಮ್ಮ ಹೃತ್ಪೂರ್ವಕ ಶುಭಾಶಯಗಳನ್ನು ತಿಳಿಸಿದರು. ಚಂಡೀಗಢದ ಆಡಳಿತದ ಎಲ್ಲಾ ಪಾಲುದಾರರನ್ನು ಅವರು ಅಭಿನಂದಿಸಿದರು.ಪ್ರಧಾನಮಂತ್ರಿಯವರ ಕಚೇರಿಯ ಅಧಿಕಾರಿಗಳು ಸಂವಿಧಾನ ದಿನವಾದ ಇಂದು ಸಂವಿಧಾನ ಪೀಠಿಕೆಯನ್ನು ಓದಿದರು
November 26th, 08:17 pm
ಪ್ರಧಾನಮಂತ್ರಿಯವರ ಪ್ರಧಾನ ಕಾರ್ಯದರ್ಶಿಯವರಾದ ಡಾ. ಪಿ.ಕೆ. ಮಿಶ್ರಾ ಅವರು ಪ್ರಧಾನಮಂತ್ರಿ ಕಾರ್ಯಾಲಯದ ಇತರ ಅಧಿಕಾರಿಗಳೊಂದಿಗೆ ಸಂವಿಧಾನ ದಿನದ ಅಂಗವಾಗಿ ಇಂದು ಪ್ರಧಾನಮಂತ್ರಿ ಕಾರ್ಯಾಲಯದಲ್ಲಿ ಸಂವಿಧಾನ ಪೀಠಿಕೆಯನ್ನು ಓದಿದರು.ಸುಪ್ರೀಂ ಕೋರ್ಟ್‌ನಲ್ಲಿ ಆಯೋಜಿತವಾಗಿದ್ದ ಸಂವಿಧಾನ ದಿನಾಚರಣೆ ಕಾರ್ಯಕ್ರಮ ಉದ್ದೇಶಿಸಿ ಪ್ರಧಾನಮಂತ್ರಿ ಭಾಷಣ
November 26th, 08:15 pm
ಭಾರತದ ಮುಖ್ಯ ನ್ಯಾಯಮೂರ್ತಿ ಸಂಜೀವ್ ಖನ್ನಾ ಜಿ, ನ್ಯಾಯಮೂರ್ತಿಗಳಾದ ಬಿ.ಆರ್. ಗವಾಯಿ ಜಿ, ಸೂರ್ಕಕಾಂತ್ ಜಿ, ಕೇಂದ್ರ ಸಚಿವ ಸಂಪುಟದ ನನ್ನ ಸಹೋದ್ಯೋಗಿ ಶ್ರೀ ಅರ್ಜುನ್ ರಾಮ್ ಮೇಘವಾಲ್ ಜಿ, ಅಟಾರ್ನಿ ಜನರಲ್ ಶ್ರೀ ವೆಂಕಟರಮಣಿ ಜಿ, ಬಾರ್ ಕೌನ್ಸಿಲ್ ಅಧ್ಯಕ್ಷ ಮನನ್ ಕುಮಾರ್ ಮಿಶ್ರಾ ಜಿ, ಸುಪ್ರೀಂ ಕೋರ್ಟ್ ಬಾರ್ ಅಸೋಸಿಯೇಷನ್ ಅಧ್ಯಕ್ಷ ಶ್ರೀ ಕಪಿಲ್ ಸಿಬಲ್ ಜಿ, ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳು, ಮಾಜಿ ಮುಖ್ಯ ನ್ಯಾಯಮೂರ್ತಿಗಳು, ಇತರೆ ಗೌರವಾನ್ವಿತ ಅತಿಥಿಗಳು, ಗೌರವಾನ್ವಿತ ಮಹಿಳೆಯರು ಮತ್ತು ಮಹನೀಯರೇ!ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಸರ್ವೋಚ್ಛ ನ್ಯಾಯಾಲಯದಲ್ಲಿ ನಡೆದ ಸಂವಿಧಾನ ದಿನ ಕಾರ್ಯಕ್ರಮದಲ್ಲಿ ಭಾಗವಹಿಸಿದರು
November 26th, 08:10 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ನವದೆಹಲಿಯ ಸರ್ವೋಚ್ಛ ನ್ಯಾಯಾಲಯದಲ್ಲಿ ಸಂವಿಧಾನ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಭಾರತದ ಮುಖ್ಯ ನ್ಯಾಯಮೂರ್ತಿ ಶ್ರೀ ಸಂಜೀವ್ ಖನ್ನಾ, ಸರ್ವೋಚ್ಛ ನ್ಯಾಯಾಲಯದ ನ್ಯಾಯಮೂರ್ತಿಗಳಾದ ಶ್ರೀ ಬಿ.ಆರ್. ಗವಾಯಿ ಮತ್ತು ನ್ಯಾಯಮೂರ್ತಿ ಶ್ರೀ ಸೂರ್ಯಕಾಂತ್, ಕಾನೂನು ಮತ್ತು ನ್ಯಾಯ ಸಚಿವರಾದ ಶ್ರೀ ಅರ್ಜುನ್ ರಾಮ್ ಮೇಘವಾಲ್, ಭಾರತದ ಅಟಾರ್ನಿ ಜನರಲ್ ಮತ್ತು ಇತರ ಗಣ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.ಸಂವಿಧಾನ ಸದನದಲ್ಲಿ ಸಂವಿಧಾನ ದಿನಾಚರಣೆಯ ಕಾರ್ಯಕ್ರಮದಲ್ಲಿ ಪ್ರಧಾನಮಂತ್ರಿ ಭಾಗವಹಿಸಿದರು
November 26th, 02:46 pm
ಸಂವಿಧಾನ ಸದನದಲ್ಲಿ ಇಂದು ನಡೆದ ಸಂವಿಧಾನ ದಿನಾಚರಣೆಯ ಕಾರ್ಯಕ್ರಮದಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ರಾಷ್ಟ್ರಪತಿಗಳು ಮಾಡಿದ ಭಾಷಣ ಒಳನೋಟವನ್ನು ಹೊಂದಿತ್ತು ಎಂದು ಪ್ರಧಾನ ಮಂತ್ರಿಗಳು ಶ್ಲಾಘಿಸಿದರು.ಸಂವಿಧಾನ ದಿನ ಮತ್ತು ಸಂವಿಧಾನದ 75ನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ ರಾಷ್ಟ್ರಕ್ಕೆ ಶುಭ ಕೋರಿದ ಪ್ರಧಾನಮಂತ್ರಿ
November 26th, 09:01 am
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಇಂದು ಸಂವಿಧಾನ ದಿನ ಮತ್ತು ಸಂವಿಧಾನದ 75ನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ ದೇಶದ ಜನತೆಗೆ ಶುಭ ಕೋರಿದ್ದಾರೆ.ನವೆಂಬರ್ 26 ರಂದು ನಡೆಯುವ ಸಂವಿಧಾನ ದಿನಾಚರಣೆಯಲ್ಲಿ ಭಾಗವಹಿಸಲಿರುವ ಪ್ರಧಾನಮಂತ್ರಿ
November 25th, 08:11 pm
ಭಾರತದ ಸಂವಿಧಾನ ಅಂಗೀಕರಿಸಿ 75 ವರ್ಷಗಳು ಪೂರ್ಣಗೊಂಡಿರುವ ಮಹತ್ವದ ಸಂದರ್ಭದಲ್ಲಿ, ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ನವೆಂಬರ್ 26ರಂದು ಸುಪ್ರೀಂ ಕೋರ್ಟ್‌ನ ಆಡಳಿತಾತ್ಮಕ ಕಟ್ಟಡ ಸಂಕೀರ್ಣ ಸಭಾಂಗಣದಲ್ಲಿ ಸಂಜೆ 5 ಗಂಟೆಗೆ ಆಯೋಜಿಸಿರುವ ಸಂವಿಧಾನ ದಿನಾಚರಣೆಯಲ್ಲಿ ಭಾಗವಹಿಸಲಿದ್ದಾರೆ. ಅವರು ಭಾರತೀಯ ನ್ಯಾಯಾಂಗದ(2023-24) ವಾರ್ಷಿಕ ವರದಿ ಬಿಡುಗಡೆ ಮಾಡಲಿದ್ದಾರೆ. ಇದೇ ಸಂದರ್ಭದಲ್ಲಿ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಲಿದ್ದಾರೆ.ಮುಂದಿನ 5 ವರ್ಷಗಳು ದೇಶಕ್ಕೆ ನಿರ್ಣಾಯಕ: ರಾಜ್ಯಸಭೆಯಲ್ಲಿ ಪ್ರಧಾನಿ ಮೋದಿ
July 03rd, 12:45 pm
ಪ್ರಧಾನಿ ನರೇಂದ್ರ ಮೋದಿ ಅವರು ರಾಜ್ಯಸಭೆಯಲ್ಲಿ ರಾಷ್ಟ್ರಪತಿಗಳ ಭಾಷಣದ ಮೇಲಿನ ವಂದನಾ ನಿರ್ಣಯಕ್ಕೆ ನೀಡಿದ ಉತ್ತರದಲ್ಲಿ ಭಾರತದ ಪ್ರಜಾಸತ್ತಾತ್ಮಕ ಪಯಣವನ್ನು ಎತ್ತಿ ತೋರಿಸಿದರು. 60 ವರ್ಷಗಳ ನಂತರ, ಮತದಾರರು ಸತತ ಮೂರನೇ ಅವಧಿಗೆ ಸರ್ಕಾರವನ್ನು ಮರಳಿ ತಂದಿದ್ದಾರೆ, ಇದನ್ನು ಐತಿಹಾಸಿಕ ಎಂದು ಕರೆದರು. ಈ ನಿರ್ಧಾರವನ್ನು ದುರ್ಬಲಗೊಳಿಸುವ ಪ್ರತಿಪಕ್ಷಗಳ ಪ್ರಯತ್ನವನ್ನು ಖಂಡಿಸಿದ ಅವರು, ಅವರು ತಮ್ಮ ಸೋಲನ್ನು ಇಷ್ಟವಿಲ್ಲದೆ ಒಪ್ಪಿಕೊಂಡಿದ್ದಾರೆ ಎಂದು ಗಮನಿಸಿದರು.