ಸೈಪ್ರಸ್ ಅಧ್ಯಕ್ಷರ ಅಧಿಕೃತ ಭಾರತ ಭೇಟಿ ಕುರಿತು ಜಂಟಿ ಹೇಳಿಕೆ
May 22nd, 09:31 pm
ಸೈಪ್ರಸ್ ಗಣರಾಜ್ಯದ ಅಧ್ಯಕ್ಷರಾದ ಶ್ರೀ ನಿಕೋಸ್ ಕ್ರಿಸ್ಟೋಡೌಲೈಡ್ಸ್ ಅವರು ಭಾರತದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಆಹ್ವಾನದ ಮೇರೆಗೆ 2026 ಮೇ 20-23ರ ವರೆಗೆ ಭಾರತಕ್ಕೆ ಅಧಿಕೃತ ಭೇಟಿ ನೀಡಿದ್ದರು. ಐರೋಪ್ಯ ಒಕ್ಕೂಟ ಮಂಡಳಿ ಸಭೆಯು ಸೈಪ್ರಸ್ ಅಧ್ಯಕ್ಷತೆಯ ಅವಧಿಯಲ್ಲಿ ನಡೆಯುವುದರಿಂದ ಈ ಭೇಟಿ ನಿರ್ದಿಷ್ಟ ಮತ್ತು ವಿಶೇಷ ಮಹತ್ವ ಹೊಂದಿದೆ.ಪ್ರಧಾನಮಂತ್ರಿ ಅವರು ಇಟಲಿಯ ಪ್ರಧಾನಮಂತ್ರಿ ಅವರನ್ನು ಭೇಟಿಯಾದರು
May 20th, 07:21 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಟಲಿ ಗಣರಾಜ್ಯದ ಪ್ರಧಾನಮಂತ್ರಿ ಗೌರವಾನ್ವಿತ ಶ್ರೀಮತಿ ಜಾರ್ಜಿಯಾ ಮೆಲೋನಿ ಅವರೊಂದಿಗೆ ಮೇ 20, 2026 ರಂದು ರೋಮ್ ನಲ್ಲಿ ಅಧಿಕೃತ ಮಾತುಕತೆ ನಡೆಸಿದರು.ಪ್ರಧಾನಮಂತ್ರಿ ಅವರಿಂದ ಇಟಲಿ ಅಧ್ಯಕ್ಷರ ಭೇಟಿ
May 20th, 07:19 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ರೋಮ್ ನ ಅಧ್ಯಕ್ಷರ ಅರಮನೆಯಾದ ಕ್ವಿರಿನಾಲೆಯಲ್ಲಿ ಇಟಲಿ ಗಣರಾಜ್ಯದ ಅಧ್ಯಕ್ಷರಾದ ಗೌರವಾನ್ವಿತ ಶ್ರೀ ಸೆರ್ಗಿಯೋ ಮಟ್ಟರೆಲ್ಲಾ ಅವರನ್ನು ಭೇಟಿ ಮಾಡಿದರು.ಇಟಲಿ ಪ್ರಧಾನಮಂತ್ರಿ ಜತೆ ಜಂಟಿ ಪತ್ರಿಕಾ ಹೇಳಿಕೆ ಸಂದರ್ಭದಲ್ಲಿ ಪ್ರಧಾನಮಂತ್ರಿ ಅವರ ಪತ್ರಿಕಾ ಹೇಳಿಕೆ
May 20th, 05:00 pm
ಕಳೆದ ಸುಮಾರು ಮೂರೂವರೆ ವರ್ಷಗಳಲ್ಲಿ ಪ್ರಧಾನಮಂತ್ರಿ ಮೆಲೋನಿ ಅವರನ್ನು ಭೇಟಿ ಮಾಡಲು ನನಗೆ ಹಲವಾರು ಅವಕಾಶಗಳು ಸಿಕ್ಕಿವೆ. ಇದು ಭಾರತ ಮತ್ತು ಇಟಲಿ ನಡುವಿನ ನಿಕಟ ಸಹಕಾರ ಮತ್ತು ತಿಳಿವಳಿಕೆಯನ್ನು ಪ್ರತಿಬಿಂಬಿಸುತ್ತದೆ. ಅವರ ನಾಯಕತ್ವದಲ್ಲಿ, ನಮ್ಮ ಸಂಬಂಧಗಳು ಹೊಸ ಆವೇಗ, ಹೊಸ ದಿಕ್ಕು ಮತ್ತು ನವೀಕೃತ ವಿಶ್ವಾಸವನ್ನು ಪಡೆದುಕೊಂಡಿವೆ. ನಾವು ನಮ್ಮ ಸಂಬಂಧಗಳನ್ನು ಮತ್ತಷ್ಟು ಹೆಚ್ಚಿಸುತ್ತಿದ್ದಂತೆ, ನಾವು ವಿಶೇಷ ಕಾರ್ಯತಂತ್ರ ಪಾಲುದಾರಿಕೆಯನ್ನು ಘೋಷಿಸುತ್ತಿದ್ದೇವೆ ಎಂಬುದರಿಂದ ನನಗೆ ಸಂತೋಷವಾಗಿದೆ.3ನೇ ಭಾರತ-ನಾರ್ಡಿಕ್ ಶೃಂಗಸಭೆಯ ಸಂದರ್ಭದಲ್ಲಿ ಫಿನ್ ಲ್ಯಾಂಡ್ ಪ್ರಧಾನಮಂತ್ರಿಯೊಂದಿಗೆ ಪ್ರಧಾನಮಂತ್ರಿಯವರ ಸಭೆ
May 19th, 06:42 pm
2026ರ ಮೇ 19 ರಂದು ಓಸ್ಲೋದಲ್ಲಿ ನಡೆದ 3ನೇ ಭಾರತ-ನಾರ್ಡಿಕ್ ಶೃಂಗಸಭೆಯ ಸಂದರ್ಭದ ನೇಪಥ್ಯದಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಫಿನ್ ಲ್ಯಾಂಡ್ ಪ್ರಧಾನಮಂತ್ರಿ ಗೌರವಾನ್ವಿತ ಶ್ರೀ ಪೆಟ್ಟೇರಿ ಓರ್ಪೊ ಅವರನ್ನು ಭೇಟಿಯಾದರು.ಪ್ರಧಾನಮಂತ್ರಿಗಳಿಂದ 3ನೇ ಭಾರತ-ನಾರ್ಡಿಕ್ ಶೃಂಗಸಭೆಯ ನೇಪಥ್ಯದಲ್ಲಿ ಡೆನ್ಮಾರ್ಕ್ ಹಂಗಾಮಿ ಪ್ರಧಾನಮಂತ್ರಿಯೊಂದಿಗೆ ಸಭೆ
May 19th, 06:40 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 3ನೇ ಭಾರತ-ನಾರ್ಡಿಕ್ ಶೃಂಗಸಭೆಯ ನೇಪಥ್ಯದಲ್ಲಿ ಇಂದು ಓಸ್ಲೋದಲ್ಲಿ ಡೆನ್ಮಾರ್ಕ್ ಹಂಗಾಮಿ ಪ್ರಧಾನಮಂತ್ರಿ ಶ್ರೀಮತಿ ಮೆಟ್ಟೆ ಫ್ರೆಡೆರಿಕ್ಸನ್ ಅವರನ್ನು ಭೇಟಿ ಮಾಡಿದರು.The future of India-Netherlands partnership is brighter than ever before: PM Modi in Netherlands
May 16th, 10:00 pm
Speaking at the CEO Roundtable in the Netherlands, PM Modi said India’s rapid growth, skilled talent pool and reform-driven economy are creating new opportunities for global businesses. He also highlighted plans to strengthen India-Netherlands cooperation through technology, investment and strategic partnerships.ವಿಯೆಟ್ನಾಂ ಸಮಾಜವಾದಿ ಗಣರಾಜ್ಯದ ಅಧ್ಯಕ್ಷರಾಗಿ ಆಯ್ಕೆಯಾದ ಶ್ರೀ ಟು ಲಾಮ್ ಅವರನ್ನು ಅಭಿನಂದಿಸಿದ ಪ್ರಧಾನಮಂತ್ರಿ
April 07th, 12:32 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ವಿಯೆಟ್ನಾಂ ಸಮಾಜವಾದಿ ಗಣರಾಜ್ಯದ ಅಧ್ಯಕ್ಷರಾಗಿ ಆಯ್ಕೆಯಾದ ಶ್ರೀ ಟು ಲಾಮ್ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.ಫಲಿತಾಂಶಗಳ ಪಟ್ಟಿ: ಫಿನ್ಲೆಂಡ್ ಅಧ್ಯಕ್ಷರ ಭೇಟಿ
March 05th, 04:36 pm
ಫಿನ್ಲೆಂಡ್ ಭಾರತೀಯ ವೃತ್ತಿಪರರಿಗೆ, ವಿಶೇಷವಾಗಿ ತಂತ್ರಜ್ಞಾನ ಮತ್ತು ನಾವೀನ್ಯತೆ ಕ್ಷೇತ್ರಗಳಲ್ಲಿಪ್ರಮುಖ ತಾಣವಾಗಿ ಹೊರಹೊಮ್ಮಿದೆ. ವಲಸೆ ಮತ್ತು ಚಲನಶೀಲತೆ ಪಾಲುದಾರಿಕೆ ಕುರಿತ ತಿಳಿವಳಿಕೆ ಒಪ್ಪಂದವು ಪ್ರತಿಭೆಗಳ ಚಲನಶೀಲತೆಯನ್ನು ಸುಗಮಗೊಳಿಸುತ್ತದೆ.ಭಾರತ - ಇಸ್ರೇಲ್ ಜಂಟಿ ಹೇಳಿಕೆ
February 26th, 07:44 pm
ಭಾರತ ಮತ್ತು ಇಸ್ರೇಲ್ ನಡುವಿನ ಆತ್ಮೀಯತೆ, ಸದ್ಭಾವನೆ ಮತ್ತು ಆಳವಾದ ಕಾರ್ಯತಂತ್ರದ ಬಾಂಧವ್ಯವನ್ನು ಗೌರವಿಸಿ, ಇಸ್ರೇಲ್ ಪ್ರಧಾನಮಂತ್ರಿ ಶ್ರೀ ಬೆಂಜಮಿನ್ ನೆತನ್ಯಾಹು ಅವರ ಆಹ್ವಾನದ ಮೇರೆಗೆ ಭಾರತದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2026ರ ಫೆಬ್ರವರಿ 25 ರಿಂದ 26 ರವರೆಗೆ ಇಸ್ರೇಲ್ ಗೆ ಅಧಿಕೃತ ಭೇಟಿ ನೀಡಿದರು. ಪ್ರಧಾನಮಂತ್ರಿಯವರೊಂದಿಗೆ ಹಿರಿಯ ಸಚಿವರು ಮತ್ತು ಅಧಿಕಾರಿಗಳನ್ನೊಳಗೊಂಡ ಉನ್ನತ ಮಟ್ಟದ ನಿಯೋಗವು ಆಗಮಿಸಿತ್ತು.ಭಾರತ AI ಇಂಪ್ಯಾಕ್ಟ್ ಶೃಂಗಸಭೆಯ ಸಂದರ್ಭದಲ್ಲಿ ಮಾರಿಷಸ್ ಪ್ರಧಾನಮಂತ್ರಿಯೊಂದಿಗೆ ಪ್ರಧಾನಮಂತ್ರಿ ಸಭೆ
February 20th, 10:13 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ನವದೆಹಲಿಯಲ್ಲಿ ನಡೆದ ಭಾರತ AI ಇಂಪ್ಯಾಕ್ಟ್ ಶೃಂಗಸಭೆಯ ಸಂದರ್ಭದಲ್ಲಿ ಮಾರಿಷಸ್ ಪ್ರಧಾನಮಂತ್ರಿ ಡಾ. ನವೀನ್‌ಚಂದ್ರ ರಾಮ್‌ಗೂಲಂ ಅವರನ್ನು ಭೇಟಿ ಮಾಡಿದರು. ಸೆಪ್ಟೆಂಬರ್ 2025 ರಲ್ಲಿ ಅವರ ರಾಜ್ಯ ಭೇಟಿಯ ನಂತರ, ಪ್ರಧಾನಮಂತ್ರಿ ರಾಮ್‌ಗೂಲಂ ಅವರ ಪ್ರಸ್ತುತ ಅವಧಿಯಲ್ಲಿ ಭಾರತಕ್ಕೆ ಇದು ಎರಡನೇ ಭೇಟಿಯಾಗಿದೆ. ಫೆಬ್ರವರಿ 09, 2026 ರಂದು ನಡೆದ ಅವರ ಇತ್ತೀಚಿನ ದೂರವಾಣಿ ಸಂಭಾಷಣೆಯ ನಂತರ ಇದು ಮೊದಲ ಭೇಟಿಯಾಗಿದೆ.ಮುಂಬೈನಲ್ಲಿ ನಡೆದ ಭಾರತ-ಫ್ರಾನ್ಸ್ ನಾವೀನ್ಯತೆ ವೇದಿಕೆಯ ಉದ್ಘಾಟನೆಯ ಸಂದರ್ಭದಲ್ಲಿ ಪ್ರಧಾನಮಂತ್ರಿ ಅವರ ಭಾಷಣದ ಅನುವಾದ
February 18th, 12:07 pm
ಇಂದು, ವಿಶ್ವದ ಎರಡು ಮಹಾನ್ ನಾವೀನ್ಯತೆ ಕೇಂದ್ರಗಳು ಒಟ್ಟಿಗೆ ಬರುತ್ತಿವೆ. ನಾವು ಭಾರತ ಮತ್ತು ಫ್ರಾನ್ಸ್ ಬಗ್ಗೆ ಮಾತನಾಡುವಾಗ, ನಮ್ಮ ಸಂಬಂಧವು ನಾವೀನ್ಯತೆ ಬಗ್ಗೆ ಮಾತ್ರವಲ್ಲ, ನಂಬಿಕೆ ಮತ್ತು ಹಂಚಿಕೆಯ ಮೌಲ್ಯಗಳ ಬಗ್ಗೆಯೂ ಆಗಿದೆ. ಈ ಮನೋಭಾವದಿಂದ, ಅಧ್ಯಕ್ಷ ಮ್ಯಾಕ್ರನ್ ಮತ್ತು ನಾನು 2026 ಅನ್ನು ಭಾರತ-ಫ್ರಾನ್ಸ್ ನಾವೀನ್ಯತೆಯ ವರ್ಷವೆಂದು ಆಚರಿಸಲು ನಿರ್ಧರಿಸಿದ್ದೇವೆ. ಇದು ಕೇವಲ ಆಚರಣೆಯಲ್ಲ; ಇದು ನಮ್ಮ ಹಂಚಿಕೆಯ ಬದ್ಧತೆ - ನಾವೀನ್ಯತೆಗಾಗಿ ಬದ್ಧತೆ, ಮುನ್ನಡೆಸಲು ಬದ್ಧತೆ.ಫ್ರೆಂಚ್ ಗಣರಾಜ್ಯದ ಅಧ್ಯಕ್ಷರ ಭಾರತ ಭೇಟಿಯ ಫಲಶ್ರುತಿಯ ವಿವರಗಳು ಹೀಗಿವೆ
February 17th, 07:00 pm
ಭಾರತ-ಫ್ರಾನ್ಸ್ ಸಂಬಂಧವನ್ನು ವಿಶೇಷ ಜಾಗತಿಕ ಕಾರ್ಯತಂತ್ರದ ಪಾಲುದಾರಿಕೆಗೆ ಮೇಲ್ದರ್ಜೆಗೇರಿಸುವುದುಫ್ರಾನ್ಸ್ ಅಧ್ಯಕ್ಷರೊಂದಿಗಿನ ಜಂಟಿ ಪತ್ರಿಕಾ ಹೇಳಿಕೆಯ ಸಂದರ್ಭದಲ್ಲಿ ಪ್ರಧಾನಮಂತ್ರಿ ಅವರ ಪತ್ರಿಕಾ ಹೇಳಿಕೆಯ ಕನ್ನಡ ಅನುವಾದ
February 17th, 04:00 pm
ಗೌರವಾನ್ವಿತರೇ, ನನ್ನ ಪ್ರೀತಿಯ ಸ್ನೇಹಿತ, ಅಧ್ಯಕ್ಷರಾದ ಮ್ಯಾಕ್ರನ್ ಅವರೇ,ಇಟಿ ನೌ ಜಾಗತಿಕ ವ್ಯಾಪಾರ ಶೃಂಗಸಭೆಯಲ್ಲಿ ಪ್ರಧಾನಮಂತ್ರಿ ಅವರ ಭಾಷಣ
February 13th, 08:30 pm
ಈ ಜಾಗತಿಕ ವ್ಯಾಪಾರ ಶೃಂಗಸಭೆಗೆ ನಿಮ್ಮೆಲ್ಲರನ್ನೂ ಸ್ವಾಗತಿಸುತ್ತೇನೆ; ಪ್ರತಿಯೊಬ್ಬರಿಗೂ ನನ್ನ ಶುಭಾಶಯಗಳು. ಅಡೆತಡೆಯ ಒಂದು ದಶಕ, ಬದಲಾವಣೆಯ ಒಂದು ಶತಮಾನ ಎನ್ನುವ ವಿಷಯವನ್ನು ಚರ್ಚಿಸಲು ನಾವು ಇಲ್ಲಿದ್ದೇವೆ. ವಿನೀತ್ ಅವರ ಭಾಷಣವನ್ನು ಕೇಳಿದ ನಂತರ, ನನ್ನ ಕೆಲಸವು ಬಹಳ ಸುಲಭವಾಗಿದೆ ಎಂದು ನನಗೆ ಅನಿಸುತ್ತದೆ. ಆದರೆ ನಾನು ಒಂದು ಸಣ್ಣ ವಿನಂತಿ - ನಿಮಗೆ ಬಹಳಷ್ಟು ತಿಳಿದಿರುವುದರಿಂದ, ಅದು ಕೆಲವೊಮ್ಮೆ ಇ ಟಿ ಯಲ್ಲಿಯೂ ಕಾಣಿಸಿಕೊಳ್ಳಬೇಕು.ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇ ಟಿ ನೌ ಜಾಗತಿಕ ವ್ಯಾಪಾರ ಶೃಂಗಸಭೆ 2026 ಅನ್ನು ಉದ್ದೇಶಿಸಿ ಮಾತನಾಡಿದರು
February 13th, 08:00 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ನವದೆಹಲಿಯಲ್ಲಿ ನಡೆದ ʻಇಟಿ ನೌ ಜಾಗತಿಕ ವ್ಯಾಪಾರ ಶೃಂಗಸಭೆ 2026ʼ ಅನ್ನು ಉದ್ದೇಶಿಸಿ ಮಾತನಾಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಪ್ರಧಾನಮಂತ್ರಿಯವರು, ಜಾಗತಿಕ ವ್ಯಾಪಾರ ಶೃಂಗಸಭೆಯಲ್ಲಿ ಹಾಜರಿದ್ದ ಎಲ್ಲರಿಗೂ ಶುಭಾಶಯಗಳನ್ನು ತಿಳಿಸಿದರು ಮತ್ತು ʻಅಡೆತಡೆಯ ಒಂದು ದಶಕ, ಬದಲಾವಣೆಯ ಒಂದು ಶತಮಾನʼ ಎನ್ನುವ ವಿಷಯದ ಕುರಿತು ಮಾತನಾಡಿದರು. 21 ನೇ ಶತಮಾನದ ಕಳೆದ ದಶಕವು ಜಾಗತಿಕ ಸಾಂಕ್ರಾಮಿಕ ರೋಗ, ಉದ್ವಿಗ್ನತೆ ಹಾಗು ವಿವಿಧ ಪ್ರದೇಶಗಳಲ್ಲಿನ ಯುದ್ಧಗಳು ಮತ್ತು ಜಾಗತಿಕ ಸಮತೋಲನವನ್ನು ಅಲುಗಾಡಿಸಿದ ಪೂರೈಕೆ ಸರಪಳಿ ಸ್ಥಗಿತಗಳು ಸೇರಿದಂತೆ ಹಿಂದೆಂದೂ ಕಾಣದಂತ ಅಡೆತಡೆಗಳನ್ನು ಕಂಡಿದೆ ಎಂದು ಅವರು ಉಲ್ಲೇಖಿಸಿದರು. ಬಿಕ್ಕಟ್ಟುಗಳು ರಾಷ್ಟ್ರದ ನಿಜವಾದ ಶಕ್ತಿಯನ್ನು ತೋರಿಸುತ್ತವೆ ಎಂದು ಅವರು ಒತ್ತಿ ಹೇಳಿದರು ಮತ್ತು ಈ ಅಡೆತಡೆಗಳ ಹೊರತಾಗಿಯೂ, ಭಾರತದ ದಶಕವು ಗಮನಾರ್ಹ ಅಭಿವೃದ್ಧಿ, ಅತ್ಯುತ್ತಮ ವಿತರಣೆ ಮತ್ತು ಪ್ರಜಾಪ್ರಭುತ್ವದ ಬಲವರ್ಧನೆಯಿಂದ ಗುರುತಿಸಲ್ಪಟ್ಟಿದೆ ಎಂದು ಅವರು ಹೆಮ್ಮೆ ವ್ಯಕ್ತಪಡಿಸಿದರು. ಕಳೆದ ದಶಕ ಪ್ರಾರಂಭವಾದಾಗ, ಭಾರತವು ಹನ್ನೊಂದನೇ ಅತಿದೊಡ್ಡ ಆರ್ಥಿಕತೆಯಾಗಿತ್ತು ಮತ್ತು ಪ್ರಕ್ಷುಬ್ಧತೆಯ ನಡುವೆ ಕುಸಿತದ ಭಯವಿತ್ತು, ಆದರೆ ಇಂದು ಭಾರತವು ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕತೆಯಾಗಲು ವೇಗವಾಗಿ ಮುನ್ನಡೆಯುತ್ತಿದೆ ಎಂದು ಶ್ರೀ ಮೋದಿ ನೆನಪಿಸಿಕೊಂಡರು. ಬದಲಾವಣೆಯ ಶತಮಾನಕ್ಕೆ ಭಾರತವು ಪ್ರಮುಖ ಅಡಿಪಾಯವಾಗಲಿದೆ ಎಂದು ಒತ್ತಿ ಹೇಳಿದ ಶ್ರೀ ಮೋದಿಯವರು, ಭಾರತವು ಪ್ರಸ್ತುತ ಜಾಗತಿಕ ಬೆಳವಣಿಗೆಗೆ ಶೇ. ಹದಿನಾರು ಕ್ಕಿಂತ ಹೆಚ್ಚು ಕೊಡುಗೆ ನೀಡುತ್ತದೆ ಎಂದು ಹೇಳಿದರು ಮತ್ತು ಈ ಕೊಡುಗೆ ವರ್ಷದಿಂದ ವರ್ಷಕ್ಕೆ ಏರಿಕೆಯಾಗುತ್ತಲೇ ಇರುತ್ತದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು. ಭಾರತವು ಜಾಗತಿಕ ಬೆಳವಣಿಗೆಗೆ ಚಾಲನೆ ನೀಡುತ್ತದೆ ಮತ್ತು ವಿಶ್ವ ಆರ್ಥಿಕತೆಯ ಹೊಸ ಎಂಜಿನ್ ಆಗಿ ಹೊರಹೊಮ್ಮುತ್ತದೆ ಎಂದು ಅವರು ದೃಢಪಡಿಸಿದರು.ಬಾರ್ಬಡೋಸ್‌ನಲ್ಲಿ ಐತಿಹಾಸಿಕ ಸತತ ಮೂರನೇ ಚುನಾವಣಾ ಗೆಲುವಿಗಾಗಿ ಪ್ರಧಾನಮಂತ್ರಿ ಮಿಯಾ ಅಮೋರ್ ಮೊಟ್ಲಿ ಅವರನ್ನು ಅಭಿನಂದಿಸಿದ ಪ್ರಧಾನಮಂತ್ರಿ
February 13th, 12:17 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಬಾರ್ಬಡೋಸ್‌ನಲ್ಲಿ ಐತಿಹಾಸಿಕ ಸತತ ಮೂರನೇ ಚುನಾವಣಾ ಗೆಲುವಿಗಾಗಿ ಪ್ರಧಾನಮಂತ್ರಿ ಮಿಯಾ ಅಮೋರ್ ಮೊಟ್ಲಿ ಅವರನ್ನು ಅಭಿನಂದಿಸಿದ್ದಾರೆ. ಬಾರ್ಬಡೋಸ್‌ನೊಂದಿಗಿನ ತನ್ನ ದೀರ್ಘಕಾಲದ ಸ್ನೇಹವನ್ನು ಭಾರತವು ಬಹಳವಾಗಿ ಗೌರವಿಸುತ್ತದೆ, ಇದು ವಿವಿಧ ಕ್ಷೇತ್ರಗಳ ಸಹಕಾರದಲ್ಲಿ ವಿಸ್ತರಣೆಯಾಗುತ್ತಲೇ ಇದೆ ಎಂದು ಶ್ರೀ ನರೇಂದ್ರ ಮೋದಿ ಹೇಳಿದರು. 2024ರಲ್ಲಿ ಭಾರತ-CARICOM ಶೃಂಗಸಭೆಯ ಸಂದರ್ಭದಲ್ಲಿ ನಮ್ಮ ಸಭೆಯನ್ನು ನಾನು ಹೃತ್ಪೂರ್ವಕವಾಗಿ ನೆನಪಿಸಿಕೊಳ್ಳುತ್ತೇನೆ ಮತ್ತು ನಮ್ಮ ಜನರ ಪ್ರಯೋಜನಕ್ಕಾಗಿ ನಮ್ಮ ಪಾಲುದಾರಿಕೆಯನ್ನು ಮತ್ತಷ್ಟು ಬಲವರ್ಧನೆಗೊಳಿಸಲು ನಿಮ್ಮೊಂದಿಗೆ ನಿಕಟವಾಗಿ ಕಾರ್ಯನಿರ್ವಹಿಸಲು ಎದುರು ನೋಡುತ್ತಿದ್ದೇನೆ’’ ಎಂದು ಶ್ರೀ ನರೇಂದ್ರ ಮೋದಿ ಹೇಳಿದರು.ಭಾರತೀಯ ವಲಸಿಗರ ಗೌರವಾನ್ವಿತ ಸದಸ್ಯರೊಂದಿಗೆ ಸಂವಾದ ನಡೆಸಿದ ಪ್ರಧಾನಮಂತ್ರಿ
February 08th, 02:48 pm
ಸಚಿವರು, ಸೆನೆಟರ್‌ಗಳು, ಸಂಸತ್ ಸದಸ್ಯರು ಮತ್ತು ಆಜಾದ್ ಹಿಂದ್ ಫೌಜ್ (ಭಾರತೀಯ ರಾಷ್ಟ್ರೀಯ ಸೇನೆ-ಐ.ಎನ್.ಎ.)ಯ ಹಿರಿಯ ಯೋಧರು ಸೇರಿದಂತೆ ಆಯ್ದ ಭಾರತೀಯ ವಲಸಿಗ ನಾಯಕರೊಂದಿಗೆ ಪ್ರಧಾನಿ ಇಂದು ಸಂವಾದ ನಡೆಸಿದರು. ತುವಾನ್ ಗೋವಿಂದ್ ಸಿಂಗ್ ಡಿಯೋ, ಡಿಜಿಟಲ್ ಸಚಿವ; ದತೋ ಶ್ರೀ ರಮಣನ್ ರಾಮಕೃಷ್ಣನ್, ಮಾನವ ಸಂಪನ್ಮೂಲ ಸಚಿವ; ತುವಾನ್ ಎಂ. ಕುಲಸೆಗರನ್, ಪ್ರಧಾನ ಮಂತ್ರಿಗಳ ಇಲಾಖೆಯ ಉಪ ಮಂತ್ರಿ; ಮತ್ತು ರಾಷ್ಟ್ರೀಯ ಏಕತೆಯ ಉಪ ಸಚಿವ ತುವಾನ್ ಆರ್.ಇವರಲ್ಲಿ ಸೇರಿದ್ದಾರೆ.ಮಲೇಷ್ಯಾದಲ್ಲಿರುವ ಭಾರತೀಯ ಸಮುದಾಯವನ್ನುದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
February 07th, 03:59 pm
ನಿಮ್ಮ ಶುಭಾಶಯಗಳ ಆತ್ಮೀಯತೆಯು ನಮ್ಮ ಹಂಚಿಕೆಯ ಸಂಸ್ಕೃತಿಯ ಸುಂದರ ವೈವಿಧ್ಯತೆಯನ್ನು ಪ್ರತಿಬಿಂಬಿಸುತ್ತದೆ.ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಲೇಷ್ಯಾದ ಕೌಲಾಲಂಪುರ್ ನಲ್ಲಿ ಸಮುದಾಯ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು
February 07th, 03:15 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಮಲೇಷ್ಯಾದ ಕೌಲಾಲಂಪುರ್‌ನಲ್ಲಿ ಸಮುದಾಯ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು. ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿಯವರು, ಈ ಆತ್ಮೀಯ ಸ್ವಾಗತವು ನಮ್ಮ ಹಂಚಿಕೆಯ ಸಂಸ್ಕೃತಿಯ ಸುಂದರ ವೈವಿಧ್ಯತೆಯನ್ನು ಪ್ರತಿಬಿಂಬಿಸುತ್ತದೆ ಎಂದು ಹೇಳಿದರು. ಈ ಸಮುದಾಯ ಸಂಭ್ರಮಾಚರಣೆಯಲ್ಲಿ ಭಾಗವಹಿಸಿದ್ದಕ್ಕಾಗಿ ಅವರು ತಮ್ಮ ಆತ್ಮೀಯ ಮಿತ್ರರಾದ ಪ್ರಧಾನಮಂತ್ರಿ ಅನ್ವರ್ ಇಬ್ರಾಹಿಂ ಅವರಿಗೆ ಧನ್ಯವಾದ ಅರ್ಪಿಸಿದರು. ಪ್ರಧಾನಮಂತ್ರಿ ಅನ್ವರ್ ಇಬ್ರಾಹಿಂ ಅವರು ವಿಮಾನ ನಿಲ್ದಾಣಕ್ಕೆ ಬಂದು ತಮ್ಮನ್ನು ಸ್ವಾಗತಿಸಿ, ತಮ್ಮ ಕಾರಿನಲ್ಲೇ ಈ ಕಾರ್ಯಕ್ರಮಕ್ಕೆ ಕರೆತಂದಿದ್ದನ್ನು ಅವರು ಸ್ಮರಿಸಿದರು. ಈ ವಿಶೇಷ ಸನ್ನೆಗಳು ಭಾರತದ ಮೇಲೆ ಮತ್ತು ಇಲ್ಲಿ ಉಪಸ್ಥಿತರಿರುವ ಜನರ ಮೇಲೆ ಪ್ರಧಾನಮಂತ್ರಿ ಅನ್ವರ್ ಇಬ್ರಾಹಿಂ ಅವರಿಗಿರುವ ಪ್ರೀತಿ ಮತ್ತು ಗೌರವವನ್ನು ಪ್ರತಿಬಿಂಬಿಸುತ್ತವೆ ಎಂದು ಶ್ರೀ ಮೋದಿ ಸೇರಿಸಿದರು.