ಸೆಪ್ಟೆಂಬರ್ 26ರಂದು ಬಿಹಾರ ನಲ್ಲಿ ಮುಖ್ಯಮಂತ್ರಿ ಮಹಿಳಾ ರೋಜ್ಗಾರ್ ಯೋಜನೆಗೆ ಚಾಲನೆ ನೀಡಲಿರುವ ಪ್ರಧಾನಮಂತ್ರಿ
September 25th, 06:44 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಸೆಪ್ಟೆಂಬರ್ 26ರಂದು ಬೆಳಗ್ಗೆ 11 ಗಂಟೆಗೆ ಬಿಹಾರದ ಮುಖ್ಯಮಂತ್ರಿ ಮಹಿಳಾ ರೋಜ್ಗಾರ್ ಯೋಜನೆಗೆ ವಿಡಿಯೊ ಕಾನಧಿರೆನ್ಸ್ ಮೂಲಕ ಚಾಲನೆ ನೀಡಲಿದ್ದಾರೆ. ಕಾರ್ಯಕ್ರಮದಲ್ಲಿ ಪ್ರಧಾನಮಂತ್ರಿ ಅವರು ಬಿಹಾರದಾದ್ಯಂತ 75 ಲಕ್ಷ ಮಹಿಳೆಯರ ಬ್ಯಾಂಕ್ ಖಾತೆಗಳಿಗೆ ತಲಾ 10,000 ರೂ.ಗಳನ್ನು ಒಟ್ಟು 7,500 ಕೋಟಿ ರೂ.ಗಳನ್ನು ನೇರವಾಗಿ ವರ್ಗಾಯಿಸಲಿದ್ದಾರೆ.ಇಂಧನ ಸುರಕ್ಷತೆಯ ಕುರಿತಾದ ಜಿ 7 ಔಟ್ರೀಚ್ ಅಧಿವೇಶನದಲ್ಲಿ (ಜೂನ್ 17, 2025) ಪ್ರಧಾನಮಂತ್ರಿ ಅವರ ಭಾಷಣ
June 18th, 11:15 am
ನಮ್ಮನ್ನು G-7 ಶೃಂಗಸಭೆಗೆ ಆಹ್ವಾನಿಸಿದ್ದಕ್ಕಾಗಿ ಮತ್ತು ನಮಗೆ ನೀಡಿದ ಅದ್ಭುತ ಸ್ವಾಗತಕ್ಕಾಗಿ ನಾನು ಪ್ರಧಾನಮಂತ್ರಿ ಕಾರ್ನಿ ಅವರಿಗೆ ನನ್ನ ಹೃತ್ಪೂರ್ವಕ ಕೃತಜ್ಞತೆಯನ್ನು ಸಲ್ಲಿಸುತ್ತೇನೆ. G-7 ಗುಂಪು 50 ವರ್ಷಗಳನ್ನು ಪೂರ್ಣಗೊಳಿಸಿದ ಈ ಐತಿಹಾಸಿಕ ಸಂದರ್ಭದಲ್ಲಿ ನಾನು ನಮ್ಮೆಲ್ಲಾ ಸ್ನೇಹಿತರನ್ನು ಅಭಿನಂದಿಸುತ್ತೇನೆ.G7 ಔಟ್ರೀಚ್ ಅಧಿವೇಶನವನ್ನುದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
June 18th, 11:13 am
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಕಾನನಾಸ್ಕಿಸ್ ನಲ್ಲಿ ನಡೆದ G7 ಶೃಂಗಸಭೆಯ ಹೊರನೋಟದ ಅಧಿವೇಶನದಲ್ಲಿ (Outreach Session) ಭಾಗವಹಿಸಿದರು. 'ಇಂಧನ ಭದ್ರತೆ: ಬದಲಾಗುತ್ತಿರುವ ಜಗತ್ತಿನಲ್ಲಿ ಲಭ್ಯತೆ ಮತ್ತು ಕೈಗೆಟಕುವಿಕೆಯನ್ನು ಖಚಿತಪಡಿಸಿಕೊಳ್ಳಲು ವೈವಿಧ್ಯೀಕರಣ, ತಂತ್ರಜ್ಞಾನ ಮತ್ತು ಮೂಲಸೌಕರ್ಯ' ಕುರಿತ ಅಧಿವೇಶನವನ್ನು ಅವರು ಉದ್ದೇಶಿಸಿ ಮಾತನಾಡಿದರು. ಅವರು ಕೆನಡಾದ ಪ್ರಧಾನಿ, ಘನತೆವೆತ್ತ ಶ್ರೀ ಮಾರ್ಕ್ ಕಾರ್ನಿ ಅವರ ಆಹ್ವಾನಕ್ಕಾಗಿ ಧನ್ಯವಾದ ಅರ್ಪಿಸಿದರು ಮತ್ತು G7 ತನ್ನ 50 ವರ್ಷಗಳ ಪಯಣವನ್ನು ಪೂರ್ಣಗೊಳಿಸಿದ್ದಕ್ಕಾಗಿ ಅಭಿನಂದಿಸಿದರು.ಸೌದಿ ಅರೇಬಿಯಾ ಭೇಟಿಗೂ ಮುನ್ನ ಪ್ರಧಾನಮಂತ್ರಿಯವರ ನಿರ್ಗಮನ ಹೇಳಿಕೆ
April 22nd, 08:30 am
ಸೌದಿ ಅರೇಬಿಯಾದ ಕ್ರೌನ್ ಪ್ರಿನ್ಸ್ ಮತ್ತು ಪ್ರಧಾನಮಂತ್ರಿ ಘನತೆವೆತ್ತ ಮೊಹಮ್ಮದ್ ಬಿನ್ ಸಲ್ಮಾನ್ ರಾಜಕುಮಾರರ ಆಹ್ವಾನದ ಮೇರೆಗೆ, ಇಂದು ನಾನು ಸೌದಿ ರಾಜ್ಯಕ್ಕೆ ಎರಡು ದಿನಗಳ ಅಧಿಕೃತ ಭೇಟಿಗೆ ತೆರಳುತ್ತಿದ್ದೇನೆ.The National Games are a celebration of India's incredible sporting talent: PM Modi in Dehradun
January 28th, 09:36 pm
PM Modi during the 38th National Games inauguration in Dehradun addressed the nation's youth, highlighting the role of sports in fostering unity, fitness, and national development. He emphasized the government's efforts in promoting sports, the importance of sports infrastructure, and India's growing sports economy.ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಡೆಹ್ರಾಡೂನ್‌ನಲ್ಲಿ 38ನೇ ರಾಷ್ಟ್ರೀಯ ಕ್ರೀಡಾಕೂಟವನ್ನು ಉದ್ಘಾಟಿಸಿದರು
January 28th, 09:02 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಉತ್ತರಾಖಂಡದ ಡೆಹ್ರಾಡೂನ್‌ನಲ್ಲಿ 38ನೇ ರಾಷ್ಟ್ರೀಯ ಕ್ರೀಡಾಕೂಟವನ್ನು ಉದ್ಘಾಟಿಸಿದರು. ನಂತರ ಸಭಿಕರನ್ನುದ್ದೇಶಿಸಿ ಮಾತನಾಡಿದ ಅವರು, ಉತ್ತರಾಖಂಡ ಇಂದು ಯುವಜನರ ಶಕ್ತಿಯಿಂದ ಬೆಳಗುತ್ತಿದೆ ಎಂದರು. ಬಾಬಾ ಕೇದಾರನಾಥ, ಬದರೀನಾಥ ಮತ್ತು ಗಂಗಾ ಮಾತೆಯ ಆಶೀರ್ವಾದದಿಂದ 38ನೇ ರಾಷ್ಟ್ರೀಯ ಕ್ರೀಡಾಕೂಟ ಇಂದು ಆರಂಭವಾಗುತ್ತಿದೆ ಎಂದರು. ಇದು ಉತ್ತರಾಖಂಡದ ರಚನೆಯ 25ನೇ ವರ್ಷವಾಗಿದೆ ಎಂಬುದನ್ನು ಒತ್ತಿ ಹೇಳಿದ ಶ್ರೀ ನರೇಂದ್ರ ಮೋದಿ ಅವರು, ರಾಷ್ಟ್ರದಾದ್ಯಂತದ ಯುವಕರು ಈ ಯುವ ರಾಜ್ಯದಲ್ಲಿ ತಮ್ಮ ಸಾಮರ್ಥ್ಯವನ್ನು ಪ್ರದರ್ಶಿಸಲಿದ್ದಾರೆ ಎಂದರು. ಈ ಕಾರ್ಯಕ್ರಮವು ‘ಏಕ್ ಭಾರತ್, ಶ್ರೇಷ್ಠ ಭಾರತ್’ ನ ಸುಂದರವಾದ ಚಿತ್ರವನ್ನು ಪ್ರದರ್ಶಿಸಿತು ಎಂದು ಅವರು ಹೇಳಿದರು. ರಾಷ್ಟ್ರೀಯ ಕ್ರೀಡಾಕೂಟದ ಈ ಆವೃತ್ತಿಯಲ್ಲಿಅನೇಕ ಸ್ಥಳೀಯ ಆಟಗಳನ್ನು ಸೇರಿಸಲಾಗಿದೆ ಮತ್ತು ಪರಿಸರ ಸ್ನೇಹಿ ವಸ್ತುಗಳ ಬಳಕೆ ಇರುವುದರಿಂದ ‘ಗ್ರೀನ್ ಗೇಮ್ಸ್’(ಹಸಿರು ಕ್ರೀಡಾಕೂಟ) ಘೋಷವಾಕ್ಯವಾಗಿದೆ ಎಂದು ಅವರು ಹೇಳಿದರು. ಈ ವಿಷಯದ ಬಗ್ಗೆ ಮತ್ತಷ್ಟು ವಿವರಿಸಿದ ಪ್ರಧಾನಮಂತ್ರಿ ಅವರು, ಟ್ರೋಫಿಗಳು ಮತ್ತು ಪದಕಗಳನ್ನು ಸಹ ಇ-ತ್ಯಾಜ್ಯದಿಂದ ತಯಾರಿಸಲಾಗಿದೆ ಮತ್ತು ಪ್ರತಿ ಪದಕ ವಿಜೇತರ ಹೆಸರಿನಲ್ಲಿಒಂದು ಮರವನ್ನು ನೆಡಲಾಗುವುದು, ಇದು ಉತ್ತಮ ಉಪಕ್ರಮವಾಗಿದೆ ಎಂದು ಅವರು ಹೇಳಿದರು. ಉತ್ತಮ ಪ್ರದರ್ಶನಕ್ಕಾಗಿ ಅವರು ಎಲ್ಲಾ ಕ್ರೀಡಾಪಟುಗಳಿಗೆ ಶುಭ ಹಾರೈಸಿದರು. ಇಂತಹ ಭವ್ಯ ಕಾರ್ಯಕ್ರಮವನ್ನು ಆಯೋಜಿಸಿದ್ದಕ್ಕಾಗಿ ಉತ್ತರಾಖಂಡ ಸರ್ಕಾರ ಮತ್ತು ಜನರನ್ನು ಅವರು ಅಭಿನಂದಿಸಿದರು.ಪ್ರಧಾನಮಂತ್ರಿಗಳು ಚಾಲನೆ ನೀಡಿದ್ದ ಬೇಟಿ ಬಚಾವೋ, ಬೇಟಿ ಪಡಾವೋ ಆಂದೋಲನಕ್ಕೆ ದಶಕ ಪೂರೈಸಿದ ಸಂಭ್ರಮ
January 22nd, 10:04 am
ಬೇಟಿ ಬಚಾವೋ, ಬೇಟಿ ಪಡಾವೋ ಆಂದೋಲನ ಯಶಸ್ವಿಯಾಗಿ 10 ವರ್ಷಗಳನ್ನು ಪೂರೈಸಿರುವ ಹಿನ್ನೆಲೆಯಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಇದು ಪರಿವರ್ತನಾತ್ಮಕ, ಜನಶಕ್ತಿಯ ಕೇಂದ್ರಿತ ಉಪಕ್ರಮವಾಗಿದೆ ಮತ್ತು ಸಮಾಜದ ಎಲ್ಲಾ ಸ್ತರ ಜನರಿಂದ ಪಾಲ್ಗೊಳ್ಳುವಿಕೆಗೆ ಸೆಳೆಯುವಲ್ಲಿ ಯಶಸ್ವಿಯಾಗಿದೆ ಎಂದು ಬಣ್ಣಿಸಿದರು. ಬೇಟಿ ಬಚಾವೋ, ಬೇಟಿ ಪಡಾವೋ ಆಂದೋಲನವು ಲಿಂಗ ತಾರತಮ್ಯವನ್ನು ನಿವಾರಿಸುವಲ್ಲಿ ಮತ್ತು ಹೆಣ್ಣು ಮಕ್ಕಳ ಸಬಲೀಕರಣದಲ್ಲಿ ಪ್ರಮುಖ ಪಾತ್ರ ವಹಿಸಿದೆ ಎಂದು ಅವರು ಎತ್ತಿ ಹೇಳಿದರು. ಐತಿಹಾಸಿಕವಾಗಿ ಕಡಿಮೆ ಮಕ್ಕಳ ಲಿಂಗ ಅನುಪಾತಗಳನ್ನು ಹೊಂದಿರುವ ಜಿಲ್ಲೆಗಳು ಯೋಜನೆ ಅನುಷ್ಠಾನದ ನಂತರ ಗಮನಾರ್ಹ ಸುಧಾರಣೆ ಕಂಡಿರುವುದು ವರದಿಯಾಗಿದೆ ಹಾಗೂ ಈ ಆಂದೋಲನವನ್ನು ತಳಮಟ್ಟದಲ್ಲಿ ಕ್ರಿಯಾಶೀಲವಾಗಿ ಮುನ್ನಡೆಸಿದ ಎಲ್ಲ ಪಾಲುದಾರರನ್ನೂ ಶ್ರೀ ಮೋದಿ ಅವರು ಅಭಿನಂದಿಸಿದ್ದಾರೆ.ಒಡಿಶಾದ ಭುವನೇಶ್ವರದಲ್ಲಿ 18ನೇ ಪ್ರವಾಸಿ ಭಾರತೀಯ ದಿವಸ್ ಸಮ್ಮೇಳನದ ಉದ್ಘಾಟನಾ ಸಮಾರಂಭದಲ್ಲಿ ಪ್ರಧಾನಮಂತ್ರಿಯವರ ಭಾಷಣ
January 09th, 10:15 am
ಒಡಿಶಾದ ಗವರ್ನರ್ ಹರಿ ಬಾಬು ಜೀ, ನಮ್ಮ ಜನಪ್ರಿಯ ಮುಖ್ಯಮಂತ್ರಿ ಮೋಹನ್ ಚರಣ್ ಮಾಂಝಿ ಜೀ, ಕೇಂದ್ರ ಸಚಿವ ಸಂಪುಟದ ನನ್ನ ಸಹ ಸದಸ್ಯ ಎಸ್. ಜೈಶಂಕರ್ ಜೀ, ಜುವಾಲ್ ಒರಾಮ್ ಜೀ, ಧರ್ಮೇಂದ್ರ ಪ್ರಧಾನ ಜೀ, ಅಶ್ವಿನಿ ವೈಷ್ಣವ್ ಜೀ, ಶೋಭಾ ಕರಂದ್ಲಾಜೆ ಜೀ, ಕೀರ್ತಿ ವರ್ಧನ್ ಸಿಂಗ್ ಜೀ, ಪಬಿತ್ರ ಮಾರ್ಗರೇಟಾ ಜೀ, ಒಡಿಶಾದ ಉಪ ಮುಖ್ಯಮಂತ್ರಿ ಕನಕ್ ವರ್ಧನ್ ಸಿಂಗ್ ದೇವ್ ಜೀ, ಪ್ರವತಿ ಪರಿದಾ ಜೀ, ಇತರ ಮಂತ್ರಿಗಳು, ಸಂಸದರು ಮತ್ತು ಶಾಸಕರು, ಜಗತ್ತಿನ ಮೂಲೆ ಮೂಲೆಯಿಂದ ಇಲ್ಲಿಗೆ ಬಂದಿರುವ ಭಾರತ ಮಾತೆಯ ಎಲ್ಲಾ ಪುತ್ರರೇ ಮತ್ತು ಪುತ್ರಿಯರೇ!ಒಡಿಶಾದಲ್ಲಿ 18ನೇ ಪ್ರವಾಸಿ ಭಾರತೀಯ ದಿನ ಉದ್ಘಾಟಿಸಿದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ
January 09th, 10:00 am
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಒಡಿಶಾದ ಭುವನೇಶ್ವರದಲ್ಲಿ ಇಂದು 18ನೇ ಪ್ರವಾಸಿ ಭಾರತೀಯ ದಿನವನ್ನು ಉದ್ಘಾಟಿಸಿದರು. ಜಗತ್ತಿನ ನಾನಾ ಮೂಲೆಗಳಿಂದ ಆಗಮಿಸಿರುವ ಪ್ರತಿನಿಧಿಗಳು ಹಾಗೂ ಅನಿವಾಸಿ ಭಾರತೀಯರನ್ನು ಸ್ವಾಗತಿಸಿದ ಶ್ರೀ ನರೇಂದ್ರ ಮೋದಿ ಅವರು ಭವಿಷ್ಯದಲ್ಲಿ ಜಗತ್ತಿನಾದ್ಯಂತದ ವಿವಿಧ ಭಾರತೀಯ ಅನಿವಾಸಿ ಕಾರ್ಯಕ್ರಮಗಳಲ್ಲಿ ಉದ್ಘಾಟನಾ ಗೀತೆಯನ್ನು ನುಡಿಸಲಾಗುವುದು ಎಂದು ವಿಶ್ವಾಸ ವ್ಯಕ್ತಪಡಿಸಿದರು. ಭಾರತೀಯ ವಲಸಿಗರ ಭಾವನೆಗಳು ಮತ್ತು ಅನುಭವಗಳನ್ನು ಸೆರೆಹಿಡಿದ ಅದ್ಭುತ ಗಾಯನಕ್ಕಾಗಿ ಅವರು ಗ್ರ್ಯಾಮಿ ಪ್ರಶಸ್ತಿ ವಿಜೇತ ಕಲಾವಿದ ರಿಕಿ ಕೇಜ್ ಮತ್ತು ಅವರ ತಂಡವನ್ನು ಶ್ಲಾಘಿಸಿದರು.ಸ್ವಾಭಿಮಾನ್ ಅಪಾರ್ಟ್‌ಮೆಂಟ್‌ಗಳ ಫಲಾನುಭವಿಗಳೊಂದಿಗೆ ಪ್ರಧಾನಮಂತ್ರಿಯವರ ಸಂವಾದ
January 03rd, 08:30 pm
ಖಂಡಿತ ಸರ್, ಸಿಕ್ಕಿತು. ತಮ್ಮ ಋಣ ಎಂದೂ ತೀರಿಸಲಾಗದು. ಗುಡಿಸಲಲ್ಲಿ ಜೀವನ ನಡೆಸ್ತಿದ್ದ ನಮಗೆ ಅರಮನೆಯನ್ನೇ ಕೊಟ್ಟಿದ್ದೀರಿ. ಇಷ್ಟೊಂದು ದೊಡ್ಡ ಮನೆ ನಮಗೆ ಸಿಗುತ್ತೆ ಅಂತ ಕನಸು ಮನಸ್ಸಲ್ಲೂ ಇರಲಿಲ್ಲ. ಆದ್ರೆ ನೀವು ನಮ್ಮ ಕನಸನ್ನು ನನಸು ಮಾಡಿದ್ದೀರಿ... ಹೌದು ಸರ್.ಸ್ವಾಭಿಮಾನ್ ಅಪಾರ್ಟ್‌ಮೆಂಟ್‌ಗಳ ಫಲಾನುಭವಿಗಳೊಂದಿಗೆ ಪ್ರಧಾನಮಂತ್ರಿ ಸಂವಾದ
January 03rd, 08:24 pm
'ಎಲ್ಲರಿಗೂ ವಸತಿ' ಎಂಬ ಬದ್ಧತೆಗೆ ಅನುಗುಣವಾಗಿ, ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ದೆಹಲಿಯ ಅಶೋಕ್ ವಿಹಾರ್‌ನ ಸ್ವಾಭಿಮಾನ್ ಅಪಾರ್ಟ್‌ಮೆಂಟ್‌ನಲ್ಲಿ ಇನ್-ಸಿಟು ಸ್ಲಂ ಪುನರ್ವಸತಿ ಯೋಜನೆಯಡಿಯಲ್ಲಿ ಜುಗ್ಗಿ ಜೊಪ್ರಿ (ಜೆಜೆ) ಕ್ಲಸ್ಟರ್‌ಗಳ ನಿವಾಸಿಗಳಿಗಾಗಿ ಹೊಸದಾಗಿ ನಿರ್ಮಿಸಲಾದ ಫ್ಲಾಟ್‌ಗಳಿಗೆ ಭೇಟಿ ನೀಡಿದರು. ಪ್ರಧಾನಮಂತ್ರಿ ಶ್ರೀ ಮೋದಿ ಅವರು ಸ್ವಾಭಿಮಾನ್ ಅಪಾರ್ಟ್‌ಮೆಂಟ್‌ಗಳ ಫಲಾನುಭವಿಗಳೊಂದಿಗೆ ಸಂವಾದ ನಡೆಸಿದರು.ಯುಕೆ ಪ್ರಧಾನಮಂತ್ರಿ ಅವರನ್ನು ಭೇಟಿ ಮಾಡಿದ ಪ್ರಧಾನಮಂತ್ರಿ
November 19th, 05:41 am
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಬ್ರೆಜಿಲ್ನ ರಿಯೊ ಡಿ ಜನೈರೊದಲ್ಲಿ ನಡೆಯುತ್ತಿರುವ ಜಿ-20 ಶೃಂಗಸಭೆಯ ನೇಪಥ್ಯದಲ್ಲಿ ಯುನೈಟೆಡ್ ಕಿಂಗ್ಡಂನ ಪ್ರಧಾನಮಂತ್ರಿ ಗೌರವಾನ್ವಿತ ಸರ್ ಕೀರ್ ಸ್ಟಾರ್ಮರ್ ಅವರನ್ನು ಭೇಟಿ ಮಾಡಿದ್ದರು. ಉಭಯ ಪ್ರಧಾನಿಗಳ ನಡುವಿನ ಮೊದಲ ಭೇಟಿ ಇದಾಗಿದೆ. ಪ್ರಧಾನಮಂತ್ರಿಯಾಗಿ ಸ್ಟಾರ್ಮರ್ ಅಧಿಕಾರ ಸ್ವೀಕರಿಸುವುದಕ್ಕೆ ಪ್ರಧಾನಿ ಅಭಿನಂದಿಸಿದರು. ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರು ತಮ್ಮ ಐತಿಹಾಸಿಕ ಮೂರನೇ ಅವಧಿಯ ಅಧಿಕಾರ ವಹಿಸಿಕೊಂಡಿರುವುದಕ್ಕೆ ಪ್ರಧಾನಮಂತ್ರಿ ಸ್ಟಾರ್ಮರ್ ಅವರಿಗೆ ಶುಭಾಶಯಗಳನ್ನು ತಿಳಿಸಿದರು.ಲಾವೊ ಪಿಡಿಆರ್ ನ ವಿಯೆಂಟಿಯಾನ್ ನಲ್ಲಿ ನಡೆದ 21 ನೇ ಆಸಿಯಾನ್-ಭಾರತ ಶೃಂಗಸಭೆಯಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಮಾಡಿದ ಪ್ರಾಸ್ತಾವಿಕ ಭಾಷಣದ ಕನ್ನಡ ಅವತರಣಿಕೆ
October 10th, 02:35 pm
ಇಂದು, ಆಸಿಯಾನ್ ಕುಟುಂಬದೊಂದಿಗೆ ಹನ್ನೊಂದನೇ ಬಾರಿಗೆ ಈ ಸಭೆಯಲ್ಲಿ ಭಾಗವಹಿಸಲು ನನಗೆ ಗೌರವ ವಿಷಯವಾಗಿದೆ.ಲಾವೊ ಪಿಡಿಆರ್ ನ ವಿಯೆಂಟಿಯಾನ್ ನಲ್ಲಿ ನಡೆದ 21 ನೇ ಆಸಿಯಾನ್-ಭಾರತ ಶೃಂಗಸಭೆಯಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಮಾಡಿದ ಪ್ರಾಸ್ತಾವಿಕ ಭಾಷಣದ ಕನ್ನಡ ಅವತರಣಿಕೆ
October 10th, 02:30 pm
ಹತ್ತು ವರ್ಷಗಳ ಹಿಂದೆ, ನಾನು ಭಾರತದ ‘ಆಕ್ಟ್ ಈಸ್ಟ್’ ನೀತಿಯನ್ನು ಘೋಷಿಸಿದೆ. ಕಳೆದ ದಶಕದಲ್ಲಿ, ಈ ಉಪಕ್ರಮವು ಭಾರತ ಮತ್ತು ಆಸಿಯಾನ್ ದೇಶಗಳ ನಡುವಿನ ಐತಿಹಾಸಿಕ ಸಂಬಂಧಗಳನ್ನು ಪುನರುಜ್ಜೀವನಗೊಳಿಸಿದೆ, ಅವುಗಳನ್ನು ಈಗ ನವೀಕರಿಸಿ ಇನ್ನೂ ಉತ್ತಮ ಶಕ್ತಿ, ನಿರ್ದೇಶನ ಮತ್ತು ಆವೇಗದೊಂದಿಗೆ ರೂಪಿಸಿದ್ದೇವೆ.ಸ್ವಚ್ಛ ಭಾರತ ಅಭಿಯಾನದ 10ನೇ ವರ್ಷಾಚರಣೆಯ ಅಂಗವಾಗಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಯುವಜನರೊಂದಿಗೆ ಸ್ವಚ್ಛತಾ ಅಭಿಯಾನದಲ್ಲಿ ಪಾಲ್ಗೊಂಡರು
October 02nd, 04:40 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ದಿಲ್ಲಿಯಲ್ಲಿ ಶಾಲಾ ಮಕ್ಕಳೊಂದಿಗೆ ಸ್ವಚ್ಛತಾ ಅಭಿಯಾನದಲ್ಲಿ ಪಾಲ್ಗೊಂಡು ಸ್ವಚ್ಛ ಭಾರತ ಅಭಿಯಾನದ 10ನೇ ವರ್ಷಾಚರಣೆಯ ಅಂಗವಾಗಿ ಅವರೊಂದಿಗೆ ಸಂವಾದ ನಡೆಸಿದರು.ಫ್ರಾನ್ಸ್ ಗಣರಾಜ್ಯದ ಪ್ರಧಾನ ಮಂತ್ರಿಯವರೊಂದಿಗೆ ಭಾರತದ ಪ್ರಧಾನ ಮಂತ್ರಿಯವರ ಸಭೆ
July 13th, 11:05 pm
ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2023ರ ಜುಲೈ 13ರಂದು ಫ್ರಾನ್ಸ್ ಪ್ರಧಾನಿ ಘನತೆವೆತ್ತ ಶ್ರೀಮತಿ ಎಲಿಜಬೆತ್ ಬೋರ್ನ್ ಅವರನ್ನು ಭೇಟಿ ಮಾಡಿದರು.PM Modi interacts with the Indian community in Paris
July 13th, 11:05 pm
PM Modi interacted with the Indian diaspora in France. He highlighted the multi-faceted linkages between India and France. He appreciated the role of Indian community in bolstering the ties between both the countries.The PM also mentioned the strides being made by India in different domains and invited the diaspora members to explore opportunities of investing in India.ಎಸ್ಟಿ ಸಂಗಮಂ ಗುಜರಾತ್ ಮತ್ತು ತಮಿಳುನಾಡು ನಡುವೆ ಶತಮಾನಗಳ ಹಳೆಯ ಬಾಂಧವ್ಯ ಬಲವರ್ಧನೆಗೊಳಿಸುತ್ತದೆ: ಪ್ರಧಾನಮಂತ್ರಿ
March 26th, 10:49 am
ಸೌರಾಷ್ಟ್ರಮತ್ತು ತಮಿಳುನಾಡು ಸಂಗಮಂ (ಎಸ್ಟಿ ಸಂಗಮಂ) ಗುಜರಾತ್ ಮತ್ತು ತಮಿಳುನಾಡು ನಡುವಿನ ಶತಮಾನಗಳಷ್ಟು ಹಳೆಯದಾದ ಬಾಂಧವ್ಯ ಬಲವರ್ಧನೆಗೊಳಿಸುತ್ತದೆ ಎಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಹೇಳಿದ್ದಾರೆ.ಪ್ರಧಾನಮಂತ್ರಿಯವರು ಜೂನ್ 3 ರಂದು ಉತ್ತರ ಪ್ರದೇಶಕ್ಕೆ ಭೇಟಿ ನೀಡಲಿದ್ದಾರೆ
June 02nd, 03:40 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಜೂನ್ 3, 2022 ರಂದು ಉತ್ತರ ಪ್ರದೇಶಕ್ಕೆ ಭೇಟಿ ನೀಡಲಿದ್ದಾರೆ. ಸುಮಾರು 11 ಗಂಟೆಗೆ, ಪ್ರಧಾನಮಂತ್ರಿಯವರು ಲಕ್ನೋದ ಇಂದಿರಾಗಾಂಧಿ ಪ್ರತಿಷ್ಠಾನವನ್ನು ತಲುಪಲಿದ್ದಾರೆ, ಅಲ್ಲಿ ಅವರು ಯುಪಿ ಹೂಡಿಕೆದಾರರ ಶೃಂಗಸಭೆಯ ಗುದ್ದಲಿ ಪೂಜೆಯ ಸಮಾರಂಭ @3.0 ಯಲ್ಲಿ ಭಾಗವಹಿಸಲಿದ್ದಾರೆ. ಮಧ್ಯಾಹ್ನ 1:45 ರ ಸುಮಾರಿಗೆ, ಪ್ರಧಾನಮಂತ್ರಿಯವರು ಕಾನ್ಪುರದ ಪರೌಂಕ್ ಗ್ರಾಮವನ್ನು ತಲುಪುತ್ತಾರೆ, ಅಲ್ಲಿ ಅವರು ಗೌರವಾನ್ವಿತ ರಾಷ್ಟ್ರಪತಿ ಶ್ರೀ ರಾಮ್ ನಾಥ್ ಕೋವಿಂದ್ ಅವರೊಂದಿಗೆ ಪಾತ್ರಿ ಮಾತಾ ಮಂದಿರಕ್ಕೆ ಭೇಟಿ ನೀಡಲಿದ್ದಾರೆ. ನಂತರ, ಮಧ್ಯಾಹ್ನ 2 ಗಂಟೆಗೆ ಅವರು ಡಾ. ಬಿ ಆರ್ ಅಂಬೇಡ್ಕರ್ ಭವನಕ್ಕೆ, ನಂತರ ಮಧ್ಯಾಹ್ನ 2:15 ಕ್ಕೆ ಮಿಲನ್ ಕೇಂದ್ರಕ್ಕೆ ಭೇಟಿ ನೀಡಲಿದ್ದಾರೆ. ಕೇಂದ್ರವು ಗೌರವಾನ್ವಿತ ರಾಷ್ಟ್ರಪತಿಯವರ ಪೂರ್ವಜರ ಮನೆಯಾಗಿದೆ, ಇದನ್ನು ಸಾರ್ವಜನಿಕ ಬಳಕೆಗಾಗಿ ದಾನ ಮಾಡಲಾಗಿದೆ ಮತ್ತು ಸಮುದಾಯ ಕೇಂದ್ರವಾಗಿ (ಮಿಲನ್ ಕೇಂದ್ರ) ಪರಿವರ್ತಿಸಲಾಗಿದೆ. ನಂತರ, ಅವರು ಮಧ್ಯಾಹ್ನ 2:30 ಕ್ಕೆ ಪರೌಂಖ್ ಗ್ರಾಮದಲ್ಲಿ ಸಾರ್ವಜನಿಕ ಸಮಾರಂಭದಲ್ಲಿ ಪಾಲ್ಗೊಳ್ಳುತ್ತಾರೆ.ದೊಡ್ಡದಾದನ್ನು ಯೋಚಿಸಿ, ದೊಡ್ಡದರ ಕನಸು ಕಾಣಿ ಮತ್ತು ಅವುಗಳನ್ನು ನನಸಾಗಿಸಲು ಶ್ರಮಿಸಿ: ಮನ್ ಕಿ ಬಾತ್ ಸಮಯದಲ್ಲಿ ಪ್ರಧಾನಿ ಮೋದಿ
December 26th, 11:30 am
ನನ್ನ ಪ್ರಿಯ ದೇಶಬಾಂಧವರೆ, ನಮಸ್ಕಾರ. ಈಗ ನೀವು 2021 ರ ಬೀಳ್ಕೊಡುಗೆ ಮತ್ತು 2022 ರ ಸ್ವಾಗತಕ್ಕೆ ಸಿದ್ಧರಾಗಿರಬಹುದು. ಹೊಸ ವರ್ಷದಲ್ಲಿ ಪ್ರತಿ ವ್ಯಕ್ತಿ, ಪ್ರತಿ ಸಂಸ್ಥೆ ಮುಂಬರುವ ವರ್ಷದಲ್ಲಿ ಮತ್ತಷ್ಟು ಅಭಿವೃದ್ಧಿಯ ಮತ್ತು ಸುಧಾರಣೆಯ ಸಂಕಲ್ಪಗೈಯ್ಯುತ್ತಾರೆ. ಕಳೆದ 7 ವರ್ಷಗಳಲ್ಲಿ ನಮ್ಮ ಈ ಮನದ ಮಾತು ಕೂಡಾ ವ್ಯಕ್ತಿಗಳ, ಸಮಾಜದ ದೇಶದ ಒಳ್ಳೆತನವನ್ನು ಬೆಳಕಿಗೆ ತಂದು ಮತ್ತಷ್ಟು ಸಾಧಿಸುವ ಮತ್ತಷ್ಟು ಸುಧಾರಿಸುವ ಪ್ರೇರಣೆ ನೀಡುತ್ತಾ ಬಂದಿದೆ. ಈ 7 ವರ್ಷಗಳಲ್ಲಿ ಮನದ ಮಾತಿನಲ್ಲಿ ನಾನು ಸರ್ಕಾರದ ಸಾಧನೆಗಳ ಬಗ್ಗೆಯೂ ಚರ್ಚೆ ಮಾಡಬಹುದಿತ್ತು. ನಿಮಗೂ ಹಿತವೆನಿಸುತ್ತಿತ್ತು ನೀವೂ ಶ್ಲಾಘಿಸಬಹುದಿತ್ತು. ಮಾಧ್ಯಮದ ಥಳಕು ಬೆಳಕಿನ ಹೊರತಾಗಿ, ವೃತ್ತ ಪತ್ರಿಕೆಗಳ ಮುಖ್ಯಾಂಶಗಳ ಹೊರತಾಗಿಯೂ ಬಹಳಷ್ಟು ಉತ್ತಮ ಕೆಲಸಗಳನ್ನು ಮಾಡುತ್ತಿರುವ ಕೋಟಿ ಕೋಟಿ ಜನರಿದ್ದಾರೆ ಎಂಬುದು ದಶಕಗಳ ನನ್ನ ಅನುಭವವಾಗಿದೆ. ಅವರು ದೇಶದ ಭವಿಷ್ಯಕ್ಕಾಗಿ ತಮ್ಮ ವರ್ತಮಾನವನ್ನು ವ್ಯಯಿಸುತ್ತಿದ್ದಾರೆ. ಮುಂಬರುವ ದೇಶದ ಪೀಳಿಗೆಗಾಗಿ ತಮ್ಮ ಪ್ರಯತ್ನಗಳಲ್ಲಿ ಇಂದು ತನುಮನದಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ಇಂಥವರ ವಿಷಯಗಳು ಆಹ್ಲಾದವನ್ನು ನೀಡುತ್ತವೆ ಮತ್ತು ಪ್ರೇರಣೆ ಒದಗಿಸುತ್ತವೆ. ನನಗೆ ಮನದ ಮಾತು ಎಂದರೆ ಎಂದೆಂದಿಗೂ ಇಂತಹ ಜನರ ಪ್ರಯತ್ನಗಳಿಂದ ತುಂಬಿದ, ಅಲಂಕೃತವಾದ, ಅರಳಿದಂತಹ ಉದ್ಯಾನದಂತಿದೆ. ಮನದ ಮಾತಿನಲ್ಲಿ ಪ್ರತಿ ತಿಂಗಳು ನಾನು ಉದ್ಯಾನದ ಯಾವ ಹೂವಿನ ವಿಚಾರ ನಿಮ್ಮೊಂದಿಗೆ ಹಂಚಿಕೊಳ್ಳಲಿ ಎಂಬುದೇ ನನ್ನ ಪ್ರಯತ್ನವಾಗಿರುತ್ತದೆ.