ಶ್ರೀ ಪಿಯೂಷ್ ಪಾಂಡೆ ಅವರ ನಿಧನಕ್ಕೆ ಪ್ರಧಾನಮಂತ್ರಿ ಸಂತಾಪ

October 24th, 11:29 am

ಜಾಹೀರಾತು ಮತ್ತು ಸಂವಹನ ಕ್ಷೇತ್ರದ ದಿಗ್ಗಜ ಶ್ರೀ ಪಿಯೂಷ್ ಪಾಂಡೆ ಅವರ ನಿಧನಕ್ಕೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಸಂತಾಪ ವ್ಯಕ್ತಪಡಿಸಿದ್ದಾರೆ. ಶ್ರೀ ಪಾಂಡೆ ಅವರ ಅನನ್ಯ ಸೃಜನಶೀಲತೆ ಮತ್ತು ಭಾರತದ ಜಾಹೀರಾತು ವಲಯಕ್ಕೆ ಅವರ ಅಮೋಘ ಕೊಡುಗೆಗಳು ಸ್ಮರಣೀಯ ಎಂದು ಪ್ರಧಾನಮಂತ್ರಿ ತಮ್ಮ ಸಂದೇಶದಲ್ಲಿ ತಿಳಿಸಿದ್ದಾರೆ.

ದೆಹಲಿಯ ಯಶೋಭೂಮಿಯಲ್ಲಿ ನಡೆದ ಇಂಡಿಯಾ ಮೊಬೈಲ್ ಸಮ್ಮೇಳನ(ಕಾಂಗ್ರೆಸ್) 2025 ಉದ್ದೇಶಿಸಿ ಪ್ರಧಾನಮಂತ್ರಿ ಭಾಷಣ

October 08th, 10:15 am

ನನ್ನ ಸಂಪುಟ ಸಹೋದ್ಯೋಗಿ ಜ್ಯೋತಿರಾದಿತ್ಯ ಸಿಂಧಿಯಾ ಜಿ, ರಾಜ್ಯ ಸಚಿವ ಚಂದ್ರ ಶೇಖರ್ ಪೆಮ್ಮಸಾನಿ ಜಿ, ಇಲ್ಲಿರುವ ವಿವಿಧ ರಾಜ್ಯಗಳ ಪ್ರತಿನಿಧಿಗಳೆ, ವಿದೇಶಗಳಿಂದ ಬಂದಿರುವ ನಮ್ಮ ಅತಿಥಿಗಳೆ, ದೂರಸಂಪರ್ಕ ವಲಯಕ್ಕೆ ಸಂಬಂಧಿಸಿದ ಎಲ್ಲಾ ಗಣ್ಯರೆ, ಇಲ್ಲಿ ಉಪಸ್ಥಿತರಿರುವ ವಿವಿಧ ಕಾಲೇಜುಗಳ ನನ್ನ ಯುವ ಸ್ನೇಹಿತರೆ, ಮಹಿಳೆಯರೆ ಮತ್ತು ಮಹನೀಯರೆ!

ಇಂಡಿಯಾ ಮೊಬೈಲ್ ಕಾಂಗ್ರೆಸ್ 2025 ಅನ್ನುದ್ದೇಶಿಸಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಭಾಷಣ

October 08th, 10:00 am

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಇಂದು ನವದೆಹಲಿಯ ಯಶೋಭೂಮಿಯಲ್ಲಿ ಏಷ್ಯಾದ ಅತಿದೊಡ್ಡ ಟೆಲಿಕಾಂ, ಮಾಧ್ಯಮ ಮತ್ತು ತಂತ್ರಜ್ಞಾನ ಸಮಾವೇಶವಾದ 'ಇಂಡಿಯಾ ಮೊಬೈಲ್ ಕಾಂಗ್ರೆಸ್' (IMC) 2025ರ 9ನೇ ಆವೃತ್ತಿಯನ್ನು ಉದ್ಘಾಟಿಸಿದರು. ಇಂಡಿಯಾ ಮೊಬೈಲ್ ಕಾಂಗ್ರೆಸ್ನ ಈ ವಿಶೇಷ ಆವೃತ್ತಿಗೆ ಎಲ್ಲಾ ಗಣ್ಯರನ್ನು ಸ್ವಾಗತಿಸಿದ ಶ್ರೀ ಮೋದಿಯವರು, ಹಣಕಾಸು ವಂಚನೆ ತಡೆಗಟ್ಟುವಿಕೆ, ಕ್ವಾಂಟಮ್ ಸಂವಹನ, 6G, ಆಪ್ಟಿಕಲ್ ಸಂವಹನ ಮತ್ತು ಸೆಮಿಕಂಡಕ್ಟರ್ಗಳಂತಹ ನಿರ್ಣಾಯಕ ವಿಷಯಗಳ ಕುರಿತು ಹಲವಾರು ಸ್ಟಾರ್ಟ್ಅಪ್ಗಳು ತಮ್ಮ ಯೋಜನೆಗಳನ್ನು ಪ್ರಸ್ತುತಪಡಿಸಿವೆ ಎಂದು ತಿಳಿಸಿದರು. ಇಂತಹ ಪ್ರಮುಖ ವಿಷಯಗಳ ಕುರಿತಾದ ಪ್ರಸ್ತುತಿಗಳನ್ನು ನೋಡುವುದು, ಭಾರತದ ತಾಂತ್ರಿಕ ಭವಿಷ್ಯವು ಸಮರ್ಥ ಕೈಗಳಲ್ಲಿದೆ ಎಂಬ ನಂಬಿಕೆಯನ್ನು ಬಲಪಡಿಸುತ್ತದೆ ಎಂದು ಪ್ರಧಾನಮಂತ್ರಿಗಳು ಹೇಳಿದರು. ಅವರು ಈ ಸಮಾವೇಶಕ್ಕೆ ಮತ್ತು ಎಲ್ಲಾ ಹೊಸ ಉಪಕ್ರಮಗಳಿಗೆ ತಮ್ಮ ಶುಭಾಶಯಗಳನ್ನು ಕೋರಿದರು.

ಪ್ರಧಾನಮಂತ್ರಿ ಅವರನ್ನು ಭೇಟಿಯಾದ 2024ನೇ ಬ್ಯಾಚ್‌ನ ಐ.ಎಫ್‌.ಎಸ್ ಅಧಿಕಾರಿ ತರಬೇತಿದಾರರು

August 19th, 08:34 pm

ಭಾರತೀಯ ವಿದೇಶಾಂಗ ಸೇವೆ (ಐ.ಎಫ್‌.ಎಸ್)ಯ 2024ರ ಬ್ಯಾಚ್‌ ನ ಅಧಿಕಾರಿ ತರಬೇತಿದಾರರು ಇಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರನ್ನು ಅವರ 7, ಲೋಕ ಕಲ್ಯಾಣ ಮಾರ್ಗದ ನಿವಾಸದಲ್ಲಿ ಭೇಟಿಯಾದರು. 2024ರ ಈ ಬ್ಯಾಚ್‌ನಲ್ಲಿ ವಿವಿಧ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಂದ ಬಂದಿರುವ 33 ಐ.ಎಫ್‌.ಎಸ್ ಅಧಿಕಾರಿ ತರಬೇತಿದಾರರಿದ್ದಾರೆ.

ಪ್ರಧಾನಮಂತ್ರಿ ಮತ್ತು ಅಮೆರಿಕ ಅಧ್ಯಕ್ಷರ ನಡುವಿನ ದೂರವಾಣಿ ಸಂಭಾಷಣೆ ಕುರಿತು ವಿದೇಶಾಂಗ ಕಾರ್ಯದರ್ಶಿ ಹೇಳಿಕೆ

June 18th, 12:32 pm

ಜಿ-7 ಶೃಂಗಸಭೆಯ ನೇಪಥ್ಯದಲ್ಲಿ ಪ್ರಧಾನ ಮಂತ್ರಿ ಶ್ರೀ ಮೋದಿ ಮತ್ತು ಅಮೆರಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭೇಟಿ ನಿಗದಿಯಾಗಿತ್ತು. ಆದರೆ, ಅಮೆರಿಕ ಅಧ್ಯಕ್ಷ ಟ್ರಂಪ್ ಅವರು ಅಮೆರಿಕಕ್ಕೆ ಬೇಗನೆ ಹಿಂತಿರುಗಬೇಕಾದ ಹಿನ್ನೆಲೆಯಲ್ಲಿ ಈ ಸಭೆ ಸಾಧ್ಯವಾಗಲಿಲ್ಲ.

ಅಹಮದಾಬಾದ್ ದುರಂತದ ಬಗ್ಗೆ ಪ್ರಧಾನಮಂತ್ರಿ ದುಃಖ ವ್ಯಕ್ತಪಡಿಸಿದ್ದಾರೆ, ತ್ವರಿತ ಮತ್ತು ಪರಿಣಾಮಕಾರಿ ನೆರವಿನ ಭರವಸೆ ನೀಡಿದ್ದಾರೆ

June 12th, 04:15 pm

ಅಹಮದಾಬಾದ್ ನಲ್ಲಿ ಇಂದು ಸಂಭವಿಸಿದ ದುರಂತದ ಬಗ್ಗೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ತೀವ್ರ ದುಃಖ ಮತ್ತು ಆಘಾತ ವ್ಯಕ್ತಪಡಿಸಿದ್ದಾರೆ. ಈ ದುರಂತವು ಇಡೀ ರಾಷ್ಟ್ರವನ್ನು ದಿಗ್ಭ್ರಮೆಗೊಳಿಸಿದೆ ಮತ್ತು ದುಃಖಕ್ಕೆ ತಳ್ಳಿದೆ ಮತ್ತು ಇದು ಪದಗಳಲ್ಲಿ ಹೇಳಲಾಗದಷ್ಟು ಹೃದಯವಿದ್ರಾವಕವಾಗಿದೆ ಎಂದು ಅವರು ಹೇಳಿದ್ದಾರೆ.

ಪ್ರಧಾನಮಂತ್ರಿಯವರ ಅಧ್ಯಕ್ಷತೆಯಲ್ಲಿ ಕೇಂದ್ರ ಸರ್ಕಾರದ ಕಾರ್ಯದರ್ಶಿಗಳ ಉನ್ನತ ಮಟ್ಟದ ಸಭೆ

May 08th, 02:17 pm

ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದ ಇತ್ತೀಚಿನ ಬೆಳವಣಿಗೆಗಳ ಹಿನ್ನೆಲೆಯಲ್ಲಿ ರಾಷ್ಟ್ರೀಯ ಸನ್ನದ್ಧತೆ ಮತ್ತು ಅಂತರ-ಸಚಿವಾಲಯಗಳ ಸಮನ್ವಯವನ್ನು ಪರಿಶೀಲಿಸಲು ಕೇಂದ್ರ ಸರ್ಕಾರದ ವಿವಿಧ ಸಚಿವಾಲಯಗಳು ಮತ್ತು ಇಲಾಖೆಗಳ ಕಾರ್ಯದರ್ಶಿಗಳ ಉನ್ನತ ಮಟ್ಟದ ಸಭೆ ಇಂದು ಪ್ರಧಾನಮಂತ್ರಿಯವರ ಅಧ್ಯಕ್ಷತೆಯಲ್ಲಿ ನಡೆಯಿತು.

ಐಎನ್‌ಎಸ್ ಸೂರತ್, ಐಎನ್‌ಎಸ್ ನೀಲಗಿರಿ ಮತ್ತು ಐಎನ್‌ಎಸ್ ವಾಘ್‌ಶೀರ್ ಕಾರ್ಯಾರಂಭ ಸಂದರ್ಭದಲ್ಲಿ ಪ್ರಧಾನಮಂತ್ರಿಯವರ ಇಂಗ್ಲಿಷ್ ಭಾಷಣ

January 15th, 11:08 am

ಮಹಾರಾಷ್ಟ್ರದ ಘನತೆವೆತ್ತ ರಾಜ್ಯಪಾಲರಾದ ಶ್ರೀ ಸಿಪಿ ರಾಧಾಕೃಷ್ಣನ್ ಅವರು, ಮಹಾರಾಷ್ಟ್ರದ ಜನಪ್ರಿಯ ಮುಖ್ಯಮಂತ್ರಿ, ಶ್ರೀ ದೇವೇಂದ್ರ ಫಡ್ನವೀಸ್ ಅವರು, ಮಂತ್ರಿ ಪರಿಷತ್ತಿನಲ್ಲಿ ನನ್ನ ಹಿರಿಯ ಸಹೋದ್ಯೋಗಿಗಳಾದ ಶ್ರೀ ರಾಜನಾಥ್ ಸಿಂಗ್ಅವರು, ಸಂಜಯ್ ಸೇಠ್ ಜಿ, ಮಹಾರಾಷ್ಟ್ರದ ಮುಖ್ಯಮಂತ್ರಿ ಅವರೊಂದಿಗೆ ಇಂದು ನಮ್ಮ ಇಬ್ಬರು ಉಪಮುಖ್ಯಮಂತ್ರಿಗಳಾದ. ಉಪಮುಖ್ಯಮಂತ್ರಿ ಶ್ರೀ.ಏಕನಾಥ ಶಿಂಧೆಯವರು, ಶ್ರೀ ಅಜಿತ್ ಪವಾರ್ ಅವರು, CDS, CNS, ಎಲ್ಲ ನೌಕಾ ಸಿಬ್ಬಂದಿ, ಮಡಗಾಂವ್ ನೌಕಾನೆಲೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಎಲ್ಲ ಸಹೋದ್ಯೋಗಿಗಳೇ, ಇತರ ಆಹ್ವಾನಿತರೆ, ಮಹಿಳೆಯರೇ ಮತ್ತು ಮಹನೀಯರೇ,

ಮುಂಚೂಣಿ ಯುದ್ಧ ನೌಕೆಗಳಾದ ಐ ಎನ್ ಎಸ್ ಸೂರತ್, ಐ ಎನ್ ಎಸ್ ನೀಲಗಿರಿ ಮತ್ತು ಐ ಎನ್ ಎಸ್ ವಘ್ ಶೀರ್ ಗಳನ್ನು ರಾಷ್ಟ್ರಕ್ಕೆ ಸಮರ್ಪಿಸಿದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ

January 15th, 10:30 am

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಮುಂಬೈಯ ನೌಕಾ ಹಡಗುಕಟ್ಟೆಯಲ್ಲಿ ಮೂರು ಮುಂಚೂಣಿ ನೌಕಾ ಯುದ್ಧ ನೌಕೆಗಳಾದ ಐಎನ್ಎಸ್ ಸೂರತ್, ಐಎನ್ಎಸ್ ನೀಲಗಿರಿ ಮತ್ತು ಐಎನ್ಎಸ್ ವಘ್ ಶೀರ್ ಗಳನ್ನು ರಾಷ್ಟ್ರಕ್ಕೆ ಸಮರ್ಪಿಸಿದರು. ಬಳಿಕ ಸಭಿಕರನ್ನುದ್ದೇಶಿಸಿ ಮಾತನಾಡಿದ ಶ್ರೀ ಮೋದಿ, ಜನವರಿ 15 ಅನ್ನು ಸೇನಾ ದಿನವಾಗಿ ಆಚರಿಸಲಾಗುತ್ತದೆ ಮತ್ತು ರಾಷ್ಟ್ರದ ಸುರಕ್ಷತೆ ಹಾಗು ಭದ್ರತೆಗಾಗಿ ತಮ್ಮ ಪ್ರಾಣವನ್ನು ತ್ಯಾಗ ಮಾಡುವ ಪ್ರತಿಯೊಬ್ಬ ಧೈರ್ಯಶಾಲಿ ಯೋಧನಿಗೆ ನಮಸ್ಕರಿಸುತ್ತೇನೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಅವರು ಎಲ್ಲ ವೀರ ಯೋಧರನ್ನು ಅಭಿನಂದಿಸಿದರು.

'ಕರ್ಮಯೋಗಿ ಸಪ್ತಾಹ' - ರಾಷ್ಟ್ರೀಯ ಕಲಿಕಾ ಸಪ್ತಾಹಕ್ಕೆ ಚಾಲನೆ ನೀಡಿದ ಪ್ರಧಾನಮಂತ್ರಿ

October 19th, 06:57 pm

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಇಂದು ನವದೆಹಲಿಯ ಡಾ.ಅಂಬೇಡ್ಕರ್ ಅಂತಾರಾಷ್ಟ್ರೀಯ ಕೇಂದ್ರದಲ್ಲಿ 'ಕರ್ಮಯೋಗಿ ಸಪ್ತಾಹ' – ರಾಷ್ಟ್ರೀಯ ಕಲಿಕಾ ಸಪ್ತಾಹಕ್ಕೆ ಚಾಲನೆ ನೀಡಿದರು.

2ನೇ ʻಜಾಗತಿಕ ದಕ್ಷಿಣದ ಧ್ವನಿʼ (ವಾಯ್ಸ್ ಆಫ್ ಗ್ಲೋಬಲ್ ಸೌತ್‌) ಶೃಂಗಸಭೆ ಸಂದರ್ಭದಲ್ಲಿ ಪ್ರಧಾನಮಂತ್ರಿಯವರ ಉದ್ಘಾಟನಾ ಭಾಷಣದ ಕನ್ನಡ ಅನುವಾದ

November 17th, 04:03 pm

140 ಕೋಟಿ ಭಾರತೀಯರ ಪರವಾಗಿ, 2ನೇ ʻಜಾಗತಿಕ ದಕ್ಷಿಣದ ಧ್ವನಿʼ(ವಾಯ್ಸ್‌ ಆಫ್‌ ಗ್ಲೋಬಲ್‌ ಸೌತ್‌) ಶೃಂಗಸಭೆಯ ಉದ್ಘಾಟನಾ ಅಧಿವೇಶನಕ್ಕೆ ನಿಮ್ಮೆಲ್ಲರನ್ನೂ ಹೃತ್ಪೂರ್ವಕವಾಗಿ ಸ್ವಾಗತಿಸುತ್ತೇನೆ. ʻಜಾಗತಿಕ ದಕ್ಷಿಣದ ಧ್ವನಿʼಯು 21ನೇ ಶತಮಾನದ ಬದಲಾಗುತ್ತಿರುವ ವಿಶ್ವದ ಅತ್ಯಂತ ವಿಶಿಷ್ಟ ವೇದಿಕೆಯಾಗಿದೆ. ಭೌಗೋಳಿಕವಾಗಿ, ಜಾಗತಿಕ ದಕ್ಷಿಣವು ಯಾವಾಗಲೂ ಅಸ್ತಿತ್ವದಲ್ಲಿದೆ. ಆದರೆ ಇದು ಮೊದಲ ಬಾರಿಗೆ ಈ ರೀತಿಯ ಧ್ವನಿಯನ್ನು ಪಡೆಯುತ್ತಿದೆ. ಮತ್ತು ಇದು ನಮ್ಮೆಲ್ಲರ ಜಂಟಿ ಪ್ರಯತ್ನದಿಂದ ಸಾಧ್ಯವಾಗಿದೆ. ನಾವು 100ಕ್ಕೂ ಹೆಚ್ಚು ವಿಭಿನ್ನ ದೇಶಗಳು, ಆದರೆ ನಾವು ಒಂದೇ ರೀತಿಯ ಆಸಕ್ತಿಗಳು ಮತ್ತು ಸಮಾನ ಆದ್ಯತೆಗಳನ್ನು ಹೊಂದಿದ್ದೇವೆ.

ಬೆಂಗಳೂರಿನಲ್ಲಿ ಅಭಿವೃದ್ಧಿ ಯೋಜನೆಗಳ ಉದ್ಘಾಟನಾ ಸಮಾರಂಭದಲ್ಲಿ ಪ್ರಧಾನಮಂತ್ರಿಯವರ ಭಾಷಣದ ಇಂಗ್ಲೀಷ್ ಅವತರಣಿಕೆ.

June 20th, 02:46 pm

ಕರ್ನಾಟಕದ ಕ್ಷಿಪ್ರ ಅಭಿವೃದ್ಧಿಗೆ ಸಂಬಂಧಿಸಿ ಡಬಲ್ ಇಂಜಿನ್ ಸರ್ಕಾರವು ನಿಮಗೆ ನೀಡಿದ ನಂಬಿಕೆ, ವಿಶ್ವಾಸವನ್ನು ಇಂದು ನಾವೆಲ್ಲರೂ ಮತ್ತೊಮ್ಮೆ ಸಾಕ್ಷೀಕರಿಸುತ್ತಿದ್ದೇವೆ. ಇಂದು 27,000 ಕೋಟಿ ರೂ.ಗಳಿಗೂ ಅಧಿಕ ಮೊತ್ತದ ಯೋಜನೆಗಳು ಒಂದೋ ಉದ್ಘಾಟನೆಯಾಗುತ್ತಿವೆ ಅಥವಾ ಅವುಗಳಿಗೆ ಶಿಲಾನ್ಯಾಸ ಮಾಡಲಾಗುತ್ತಿದೆ. ಈ ಬಹು ಆಯಾಮದ ಯೋಜನೆಗಳು ಉನ್ನತ ಶಿಕ್ಷಣ, ಸಂಶೋಧನೆ, ಕೌಶಲ್ಯ ಅಭಿವೃದ್ಧಿ, ಆರೋಗ್ಯ ಮತ್ತು ಸಂಪರ್ಕದಲ್ಲಿ ನಿಮಗೆ ಸೇವೆಯನ್ನು ಒದಗಿಸಲಿವೆ. ಸಂಕ್ಷಿಪ್ತವಾಗಿ ಹೇಳುವುದಾದರೆ, ಜೀವನ ಮತ್ತು ವ್ಯವಹಾರಕ್ಕೆ ಅನುಕೂಲಕರ ವಾತಾವರಣವನ್ನು ನಿರ್ಮಾಣ ಮಾಡುವುದು ಮತ್ತು ಅದನ್ನು ಸುಲಭಗೊಳಿಸುವುದು ಈ ಯೋಜನೆಗಳ ಪ್ರಮುಖ ಆದ್ಯತೆಯಾಗಿದೆ.

PM inaugurates and lays the foundation stone of multiple rail and road infrastructure projects worth over Rs 27000 crore in Bengaluru

June 20th, 02:45 pm

The Prime Minister, Shri Narendra Modi inaugurated and laid the foundation stone of multiple rail and road infrastructure projects worth over Rs 27000 crore in Bengaluru today. Earlier, the Prime Minister inaugurated the Centre for Brain Research and laid the foundation Stone for Bagchi Parthasarathy Multispeciality Hospital at IISc Bengaluru.

ತಂತ್ರಜ್ಞಾನ ಆಧಾರಿತ ಅಭಿವೃದ್ಧಿ ಕುರಿತ ವೆಬಿನಾರಿನಲ್ಲಿ ಪ್ರಧಾನ ಮಂತ್ರಿ ಅವರ ಭಾಷಣ

March 02nd, 10:49 am

ವಿಜ್ಞಾನ ಮತ್ತು ತಂತ್ರಜ್ಞಾನ ಎಂಬುದು ನಮ್ಮ ಸರಕಾರಕ್ಕೆ ಪ್ರತ್ಯೇಕವಾದ ವಲಯವಾಗಿ ಉಳಿದಿಲ್ಲ. ಇಂದು ಆರ್ಥಿಕ ವಲಯದಲ್ಲಿ ನಮ್ಮ ಚಿಂತನೆ ಡಿಜಿಟಲ್ ಆರ್ಥಿಕತೆ ಮತ್ತು ಫಿನ್ ಟೆಕ್ ನಂತಹ ಮೂಲ ತಳಹದಿಯ ಸಂಗತಿಗಳಿಗೆ ಸಂಬಂಧಿಸಿದುದಾಗಿದೆ. ಮೂಲ ಸೌಕರ್ಯಗಳಲ್ಲಿ ನಮ್ಮ ಅಭಿವೃದ್ಧಿ ಚಿಂತನೆ ಆಧುನಿಕ ತಂತ್ರಜ್ಞಾನವನ್ನು ಆಧರಿಸಿದೆ. ಸಾರ್ವಜನಿಕ ಸೇವೆಗಳು ಮತ್ತು ಕಟ್ಟ ಕಡೆಯ ಹಂತದವರೆಗೂ ಸೇವಾ ಒದಗಣೆ ಈಗ ದತ್ತಾಂಶಗಳ ಮೂಲಕ ಡಿಜಿಟಲ್ ವೇದಿಕೆಗಳಿಗೆ ಜೋಡಿಸಲ್ಪಟ್ಟಿದೆ. ತಂತ್ರಜ್ಞಾನ ನಮಗೆ ದೇಶದ ಜನ ಸಾಮಾನ್ಯರನ್ನು ಸಶಕ್ತೀಕರಣಗೊಳಿಸಲು ಇರುವ ಪ್ರಮುಖ ಶಕ್ತಿಶಾಲೀ ಮಾಧ್ಯಮ. ನಮಗೆ ತಂತ್ರಜ್ಞಾನ ಎನ್ನುವುದು ದೇಶವನ್ನು ಸ್ವಾವಲಂಬನೆಯತ್ತ ಕೊಂಡೊಯ್ಯುವ ತಳಹದಿ ಮತ್ತು ನಾನು ಭಾರತದ ಸ್ವಾವಲಂಬನೆ ಬಗ್ಗೆ ಮಾತನಾಡುವಾಗ, ನೀವು ಇಂದು ಬೆಳಗ್ಗೆ ಅಮೆರಿಕಾ ಅಧ್ಯಕ್ಷ ಬೈಡನ್ ಅವರ ಮಾತುಗಳನ್ನು ಕೇಳಿರಬಹುದು. ಅವರು ಕೂಡಾ ಅಮೆರಿಕಾವನ್ನು ಸ್ವಾವಲಂಬಿ ಮಾಡುವ ಬಗ್ಗೆ ಮಾತನಾಡಿದ್ದಾರೆ. ಅವರು ಕೂಡಾ ಇಂದು ’ಅಮೆರಿಕಾ ನಿರ್ಮಿತ” ಕ್ಕೆ ಬಹಳ ಒತ್ತು ಕೊಟ್ಟಿದ್ದಾರೆ. ಮತ್ತು ಹಾಗಾಗಿ ವಿಶ್ವದಲ್ಲಿ ಹೊಸ ವ್ಯವಸ್ಥೆಯೊಂದು ಜಾರಿಗೆ ಬರುವ ಬಗ್ಗೆ ನಾವು ತಿಳಿದುಕೊಂಡಿದ್ದೇವೆ. ಆದುದರಿಂದ ಸ್ವಾವಲಂಬನೆಯೊಂದಿಗೆ ಮುಂದುವರಿಯುವುದು ನಮಗೆ ಬಹಳ ಮುಖ್ಯ ಮತ್ತು ಅದು ಉತ್ತಮ ಕೂಡಾ. ಮತ್ತು ನೀವು ಕೂಡಾ ಇಂತಹ ಸಂಗತಿಗಳಿಗೆ ಬಜೆಟಿನಲ್ಲಿ ಹೆಚ್ಚು ಒತ್ತು ನೀಡಿರುವುದನ್ನು ಗಮನಿಸಿರಬಹುದು.

'ತಂತ್ರಜ್ಞಾನ ಆಧರಿತ ಅಭಿವೃದ್ಧಿ' ಕುರಿತು ವೆಬಿನಾರ್‌ ಉದ್ದೇಶಿಸಿ ಪ್ರಧಾನಿ ಭಾಷಣ

March 02nd, 10:32 am

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಬಜೆಟ್ ನಂತರದ ವೆಬಿನಾರ್‌ಗಳ ಸರಣಿಯಲ್ಲಿ ಏಳನೇ ವೆಬಿನಾರ್‌ ಉದ್ದೇಶಿಸಿ ಇಂದು ಮಾತನಾಡಿದರು. ಬಜೆಟ್‌ನ ಪ್ರಸ್ತಾಪಗಳನ್ನು ಕಾಲಮಿತಿಯೊಳಗೆ ಸಂಪೂರ್ಣವಾಗಿ ಅನುಷ್ಠಾನಗೊಳಿಸುವ ಸಲುವಾಗಿ ಮಧ್ಯಸ್ಥಗಾರರೊಂದಿಗೆ ಸಮಾಲೋಚಿಸಲು ನಡೆಸುವುದು ಮತ್ತು ಅವರನ್ನು ಈ ನಿಟ್ಟಿನಲ್ಲಿ ಪ್ರೋತ್ಸಾಹಿಸುವುದು ಈ ಸರಣಿಯ ಉದ್ದೇಶವಾಗಿದೆ. ಬಜೆಟ್‌ಗೆ ಸಂಬಂಧಿಸಿದ ಪ್ರಸ್ತಾಪಗಳನ್ನು ನಾವು ತ್ವರಿತವಾಗಿ, ತಡೆರಹಿತವಾಗಿ ಮತ್ತು ಸೂಕ್ತ ಫಲಿತಾಂಶದೊಂದಿಗೆ ಹೇಗೆ ಕಾರ್ಯಗತಗೊಳಿಸಬಹುದು ಎಂಬುದನ್ನು ಖಚಿತಪಡಿಸಿಕೊಳ್ಳಲು ಇದೊಂದು ಸಹಯೋಗದ ಪ್ರಯತ್ನ,” ಎಂದು ಈ ವೆಬಿನಾರ್‌ಗಳ ಹಿಂದಿನ ತಾರ್ಕಿಕತೆಯನ್ನು ಅವರು ವಿವರಿಸಿದರು.

Double engine government knows how to set big goals and achieve them: PM Modi

December 28th, 01:49 pm

PM Narendra Modi inaugurated Kanpur Metro Rail Project and Bina-Panki Multiproduct Pipeline Project. Commenting on the work culture of adhering to deadlines, the Prime Minister said that double engine government works day and night to complete the initiatives for which the foundation stones have been laid.

ಕಾನ್ಪುರ ಮೆಟ್ರೋ ರೈಲು ಯೋಜನೆ ಪ್ರಧಾನ ಮಂತ್ರಿ ಅವರಿಂದ ಉದ್ಘಾಟನೆ

December 28th, 01:46 pm

ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಂದು ಕಾನ್ಪುರ ಮೆಟ್ರೋ ರೈಲು ಯೋಜನೆಯನ್ನು ಉದ್ಘಾಟಿಸಿದರು. ಅವರು ಕಾನ್ಪುರ ಮೆಟ್ರೋ ರೈಲ್ ಯೋಜನೆಯನ್ನು ಪರಿಶೀಲಿಸಿದರು ಮತ್ತು ಐ.ಐ.ಟಿ. ಮೆಟ್ರೋ ನಿಲ್ದಾಣದಿಂದ ಗೀತಾ ನಗರಕ್ಕೆ ಮೆಟ್ರೋ ರೈಲಿನಲ್ಲಿ ಸಂಚರಿಸಿದರು. ಅವರು ಬಿನಾ-ಪಾನಕಿ ಬಹು ಉತ್ಪಾದನಾ ಕೊಳವೆ ಮಾರ್ಗ ಯೋಜನೆಯನ್ನೂ ಉದ್ಘಾಟಿಸಿದರು. ಈ ಕೊಳವೆ ಮಾರ್ಗ ಮಧ್ಯಪ್ರದೇಶದ ಬಿನಾ ತೈಲ ಶುದ್ದೀಕರಣಾಗಾರದಿಂದ ಕಾನ್ಪುರದ ಪಾನಕಿವರೆಗೆ ವಿಸ್ತರಿಸಲ್ಪಟ್ಟಿದೆ. ಮತ್ತು ಅದು ಈ ವಲಯಕ್ಕೆ ಬಿನಾ ತೈಲ ಶುದ್ದೀಕರಣಾಗಾರದಿಂದ ಪೆಟ್ರೋಲಿಯಂ ಉತ್ಪನ್ನಗಳನ್ನು ಪಡೆಯಲು ಸಹಾಯ ಮಾಡಲಿದೆ. ಉತ್ತರ ಪ್ರದೇಶ ಮುಖ್ಯಮಂತ್ರಿ ಶ್ರೀ ಯೋಗಿ ಆದಿತ್ಯನಾಥ, ಕೇಂದ್ರ ಸಚಿವರಾದ ಶ್ರೀ ಹರದೀಪ್ ಪುರಿ ಈ ಸಂದರ್ಭದಲ್ಲಿ ಹಾಜರಿದ್ದರು.

ಕಡಿಮೆ ವ್ಯಾಕ್ಸಿನೇಷನ್ ವ್ಯಾಪ್ತಿಯನ್ನು ಹೊಂದಿರುವ ಜಿಲ್ಲೆಗಳೊಂದಿಗೆ ಪರಿಶೀಲನಾ ಸಭೆಯಲ್ಲಿ ಪ್ರಧಾನ ಮಂತ್ರಿಯವರ ಹೇಳಿಕೆಗಳು

November 03rd, 01:49 pm

ಇಟಲಿ ಮತ್ತು ಗ್ಲಾಸ್ಗೋ ಪ್ರವಾಸದಿಂದ ಹಿಂದಿರುಗಿದ ತಕ್ಷಣವೇ ಪ್ರಧಾನಿ ನರೇಂದ್ರ ಮೋದಿ ಅವರು ಕಡಿಮೆ ವ್ಯಾಕ್ಸಿನೇಷನ್ ವ್ಯಾಪ್ತಿಯ ಜಿಲ್ಲೆಗಳೊಂದಿಗೆ ಪರಿಶೀಲನಾ ಸಭೆ ನಡೆಸಿದರು. ಸಂವಾದದ ಸಮಯದಲ್ಲಿ, ಈ ಜಿಲ್ಲೆಗಳಲ್ಲಿ 100% ವ್ಯಾಕ್ಸಿನೇಷನ್ ವ್ಯಾಪ್ತಿಯನ್ನು ಖಾತ್ರಿಪಡಿಸಿಕೊಳ್ಳಲು ಕಾರ್ಯಗತಗೊಳಿಸಬಹುದಾದ ವ್ಯಾಪಕವಾದ ಆಲೋಚನೆಗಳ ಕುರಿತು ಪ್ರಧಾನಮಂತ್ರಿ ಚರ್ಚಿಸಿದರು.

ಕಡಿಮೆ ಲಸಿಕೆ ವ್ಯಾಪ್ತಿ ಹೊಂದಿರುವ ಜಿಲ್ಲೆಗಳೊಂದಿಗೆ ಪರಿಶೀಲನಾ ಸಭೆ ನಡೆಸಿದ ಪ್ರಧಾನಿ

November 03rd, 01:30 pm

ಇಟಲಿ ಮತ್ತು ಗ್ಲ್ಯಾಸ್ಗೋ ಪ್ರವಾಸದಿಂದ ಹಿಂದಿರುಗಿದ ಕೂಡಲೇ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಕಡಿಮೆ ಲಸಿಕೆ ವ್ಯಾಪ್ತಿಯನ್ನು ಹೊಂದಿರುವ ಜಿಲ್ಲೆಗಳೊಂದಿಗೆ ಪರಿಶೀಲನಾ ಸಭೆ ನಡೆಸಿದರು. ಕೋವಿಡ್‌ ಲಸಿಕೆಯ ಮೊದಲ ಡೋಸ್‌ನ ವ್ಯಾಪ್ತಿ 50% ಕ್ಕಿಂತ ಕಡಿಮೆ ಇರುವ ಹಾಗೂ ಎರಡನೇ ಡೋಸ್‌ನ ವ್ಯಾಪ್ತಿಯೂ ತೀರಾ ಕಡಿಮೆ ಇರುವ ಜಿಲ್ಲೆಗಳು ಈ ಸಭೆಯಲ್ಲಿ ಭಾಗಿಯಾದವು. ಜಾರ್ಖಂಡ್, ಮಣಿಪುರ, ನಾಗಾಲ್ಯಾಂಡ್, ಅರುಣಾಚಲ ಪ್ರದೇಶ, ಮಹಾರಾಷ್ಟ್ರ, ಮೇಘಾಲಯ ಮತ್ತು ಇತರ ರಾಜ್ಯಗಳ 40ಕ್ಕೂ ಹೆಚ್ಚು ಜಿಲ್ಲೆಗಳ ಜಿಲ್ಲಾಧಿಕಾರಿಗಳೊಂದಿಗೆ ಪ್ರಧಾನಮಂತ್ರಿಯವರು ಸಂವಾದ ನಡೆಸಿದರು.

ನಾಸ್ಕಾಂ ತಂತ್ರಜ್ಞಾನ ಮತ್ತು ನಾಯಕತ್ವ ವೇದಿಕೆಯಲ್ಲಿ ಪ್ರಧಾನ ಮಂತ್ರಿ ಅವರ ಭಾಷಣ

February 17th, 12:31 pm

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ವಿಡಿಯೋ ಕಾನ್ಫರೆನ್ಸ್ ಮೂಲಕ ನ್ಯಾಸ್ ಕಾಮ್ ತಂತ್ರಜ್ಞಾನ ಮತ್ತು ನಾಯಕತ್ವ ವೇದಿಕೆ( ಎನ್ ಟ ಎಲ್ ಎಫ್ ) ಉದ್ದೇಶಿಸಿ ಭಾಷಣ ಮಾಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಪ್ರಧಾನಮಂತ್ರಿ, ಅವರು ಕೊರೊನಾದ ಸಂಕಷ್ಟದ ಸಮಯದಲ್ಲಿ ಸ್ಥಿತಿಸ್ಥಾಪಕತ್ವ ತೋರಿದ ಐ.ಟಿ. ಉದ್ಯಮವನ್ನು ಶ್ಲಾಘಿಸಿದರು. “ಚಿಪ್ ಗಳು ಕಾರ್ಯನಿರ್ವಹಿಸುವುದು ಕುಸಿದಾಗ, ನಿಮ್ಮ ಸಂಕೇತ(ಕೋಡ್) ಕೆಲಸ ಮಾಡುತ್ತದೆ’’ಎಂದು ಪ್ರಧಾನಮಂತ್ರಿ ಹೇಳಿದರು. ಈ ವಲಯದಲ್ಲಿ ಶೇ.2ರಷ್ಟು ಬೆಳವಣಿಗೆಯಾಗಿದೆ ಎಂಬುದನ್ನು ಉಲ್ಲೇಖಿಸಿದ ಅವರು, ಅಭಿವೃದ್ಧಿ ಕುಂಠಿತವಾಗುತ್ತದೆ ಎನ್ನುವ ಭಯದ ನಡುವೆಯೇ ಹೆಚ್ಚವರಿಯಾಗಿ 4 ಬಿಲಿಯನ್ ಡಾಲರ್ ಆದಾಯವನ್ನು ಗಳಿಸಿದೆ ಎಂದು ಹೇಳಿದರು.