80ನೇ ಸ್ವಾತಂತ್ರ್ಯ ದಿನಾಚರಣೆ ಸಮಾರಂಭ ಉದ್ದೇಶಿಸಿ ಕೆಂಪುಕೋಟೆಯ ಮೇಲಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಭಾಷಣ
August 15th, 07:00 am
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು 80ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪುಕೋಟೆಯ ವೇದಿಕೆಯಿಂದ ರಾಷ್ಟ್ರವನ್ನುದ್ದೇಶಿಸಿ ಭಾಷಣ ಮಾಡಿದರು. ವಂದೇ ಮಾತರಂನ 150ನೇ ವರ್ಷವನ್ನು ಆಚರಿಸುವಾಗ ದೇಶಾದ್ಯಂತ ಪ್ರತಿ ಹೃದಯದ ಬಡಿತ ಮತ್ತು ಮನೆ ತ್ರಿವರ್ಣ ಧ್ವಜದ ಚೈತನ್ಯ ಮತ್ತು ಹೊಸ ಸಂಕಲ್ಪಗಳೊಂದಿಗೆ ಪ್ರತಿಧ್ವನಿಸುತ್ತದೆ ಎಂದು ಹೇಳಿದ ಅವರು ತಮ್ಮ ಹೃತ್ಪೂರ್ವಕ ಶುಭಾಶಯಗಳನ್ನು ತಿಳಿಸಿದರು. ತ್ಯಾಗದ ಮಹಾನ್ ಸಂಪ್ರದಾಯವನ್ನು ಜಾಗೃತಗೊಳಿಸಿದ ಎಲ್ಲಾ ಸ್ವಾತಂತ್ರ್ಯ ಹೋರಾಟಗಾರರು ಮತ್ತು ಮಹಾನ್ ಕ್ರಾಂತಿಕಾರಿಗಳಿಗೆ ನಾನು ಗೌರವಪೂರ್ವಕವಾಗಿ ನಮಿಸುತ್ತೇನೆ ಎಂದು ಶ್ರೀ ಮೋದಿ ಹೇಳಿದರು.80ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪುಕೋಟೆಯ ವೇದಿಕೆಯಿಂದ ರಾಷ್ಟ್ರವನ್ನುದ್ದೇಶಿಸಿ ಭಾಷಣ ಮಾಡಿದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ
August 15th, 06:50 am
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು 80ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪುಕೋಟೆಯ ವೇದಿಕೆಯಿಂದ ರಾಷ್ಟ್ರವನ್ನುದ್ದೇಶಿಸಿ ಭಾಷಣ ಮಾಡಿದರು. ವಂದೇ ಮಾತರಂನ 150ನೇ ವರ್ಷವನ್ನು ಆಚರಿಸುವಾಗ ದೇಶಾದ್ಯಂತ ಪ್ರತಿ ಹೃದಯದ ಬಡಿತ ಮತ್ತು ಮನೆ ತ್ರಿವರ್ಣ ಧ್ವಜದ ಚೈತನ್ಯ ಮತ್ತು ಹೊಸ ಸಂಕಲ್ಪಗಳೊಂದಿಗೆ ಪ್ರತಿಧ್ವನಿಸುತ್ತದೆ ಎಂದು ಹೇಳಿದ ಅವರು ತಮ್ಮ ಹೃತ್ಪೂರ್ವಕ ಶುಭಾಶಯಗಳನ್ನು ತಿಳಿಸಿದರು. ತ್ಯಾಗದ ಮಹಾನ್ ಸಂಪ್ರದಾಯವನ್ನು ಜಾಗೃತಗೊಳಿಸಿದ ಎಲ್ಲಾ ಸ್ವಾತಂತ್ರ್ಯ ಹೋರಾಟಗಾರರು ಮತ್ತು ಮಹಾನ್ ಕ್ರಾಂತಿಕಾರಿಗಳಿಗೆ ನಾನು ಗೌರವಪೂರ್ವಕವಾಗಿ ನಮಿಸುತ್ತೇನೆ ಎಂದು ಶ್ರೀ ಮೋದಿ ಹೇಳಿದರು.ಭಾರತವು 80 ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸುತ್ತಿದೆ
August 15th, 06:45 am
80 ನೇ ಸ್ವಾತಂತ್ರ್ಯ ದಿನಾಚರಣೆಯಂದು ಕೆಂಪು ಕೋಟೆಯಿಂದ ರಾಷ್ಟ್ರವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, 140 ಕೋಟಿ ಭಾರತೀಯರ ಶಕ್ತಿ ಮತ್ತು ಸಂಕಲ್ಪದಿಂದ 2047 ರ ವೇಳೆಗೆ ವಿಕಸಿತ ಭಾರತವನ್ನು ನಿರ್ಮಿಸುವ ಕನಸಿನ ಬಗ್ಗೆ ಮಾತನಾಡಿದರು. ಅವರು ಶಾಂತಿ ಕಾಯ್ದೆ, ರೈಲ್ವೆ ವಿದ್ಯುದೀಕರಣ, ಭಾರತದ ವ್ಯಾಪಾರ ಒಪ್ಪಂದಗಳು, ನಕ್ಸಲಿಸಂನ ಅಂತ್ಯ ಮತ್ತು ಇನ್ನೂ ಹೆಚ್ಚಿನ ಪ್ರಮುಖ ಉಪಕ್ರಮಗಳನ್ನು ಎತ್ತಿ ತೋರಿಸಿದರು. 'ಶಕ್ತಿ ಕಿ ಸಪ್ತಧಾರ'ವನ್ನು ಅಳವಡಿಸಿಕೊಳ್ಳಲು ಅವರು ರಾಷ್ಟ್ರಕ್ಕೆ ಕರೆ ನೀಡಿದರು.ಅದ್ಧೂರಿ ಭೋಜನಕೂಟ ಸಭೆ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
July 11th, 12:32 pm
ಕಳೆದ ವರ್ಷ ಪ್ರಧಾನ ಮಂತ್ರಿ ಲಕ್ಸನ್ ಅವರ ಭಾರತ ಭೇಟಿಯು ನಮ್ಮ ದ್ವಿಪಕ್ಷೀಯ ಸಂಬಂಧದ ಪ್ರತಿಯೊಂದು ಅಂಶಕ್ಕೂ ಹೊಸ ಶಕ್ತಿ ತುಂಬಿತು. ಅವರ ನಾಯಕತ್ವ, ಸ್ಪಷ್ಟ ದೃಷ್ಟಿಕೋನ ಮತ್ತು ಬಲವಾದ ಬದ್ಧತೆಯಡಿ, ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಸ್ನೇಹವು ಹೊಸ ಆವೇಗ ಮತ್ತು ಹೊಸ ದಿಕ್ಕನ್ನು ಪಡೆದುಕೊಂಡಿದೆ. 40 ವರ್ಷಗಳಲ್ಲಿ ಭಾರತೀಯ ಪ್ರಧಾನ ಮಂತ್ರಿಯೊಬ್ಬರು ನ್ಯೂಜಿಲೆಂಡ್‌ಗೆ ನೀಡಿದ ಮೊದಲ ಭೇಟಿ ಇದಾಗಿದೆ. ನಾನು ಆಗಾಗ್ಗೆ ಹೇಳುವಂತೆ, ನನಗಿಂತ ಮೊದಲು ಬಂದವರು ನನಗಾಗಿ ಅನೇಕ ಉತ್ತಮ ಕಾರ್ಯಗಳನ್ನು ಬಿಟ್ಟು ಹೋಗಿದ್ದಾ, ಅವುಗಳನ್ನು ಪೂರ್ಣಗೊಳಿಸುವ ಸೌಭಾಗ್ಯ ನನಗಿದೆ. ಸ್ನೇಹಿತರೆ, ಇದು ನಮ್ಮ ದ್ವಿಪಕ್ಷೀಯ ಸಂಬಂಧದಲ್ಲಿ ಹೊಸ ಅಧ್ಯಾಯದ ಆರಂಭವನ್ನು ಸೂಚಿಸುತ್ತಿದೆ."ಭಾರತ-ನ್ಯೂಜಿಲೆಂಡ್: ಒಂದು ಯಶಸ್ವಿ ಪಾಲುದಾರಿಕೆ" ಎಂಬ ವಿಷಯದ ಮೇಲೆ ನ್ಯೂಜಿಲೆಂಡ್ ಪ್ರಧಾನಮಂತ್ರಿ ಅವರು ಆಯೋಜಿಸಿದ್ದ ವಿಶೇಷ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಪ್ರಧಾನಮಂತ್ರಿ
July 11th, 12:30 pm
ನ್ಯೂಜಿಲೆಂಡ್ ಪ್ರಧಾನಮಂತ್ರಿ ಅವರಾದ ಮಾನ್ಯ ಕ್ರಿಸ್ಟೋಫರ್ ಅವರು ಆಯೋಜಿಸಿದ್ದ ಭಾರತ-ನ್ಯೂಜಿಲೆಂಡ್: ಒಂದು ಯಶಸ್ವಿ ಪಾಲುದಾರಿಕೆ ಎಂಬ ವಿಷಯಾಧಾರಿತ ವಿಶೇಷ ಭೋಜನಕೂಟದಲ್ಲಿ ಪ್ರಧಾನಮಂತ್ರಿ ಅವರಾದ ಶ್ರೀ ನರೇಂದ್ರ ಮೋದಿಯವರು ಭಾಗವಹಿಸಿದ್ದರು. ರಾಜಕೀಯ, ವ್ಯಾಪಾರ, ಕೈಗಾರಿಕೆ, ಶಿಕ್ಷಣ, ತಂತ್ರಜ್ಞಾನ, ಕ್ರೀಡೆ ಮತ್ತು ಕಲೆ ಮುಂತಾದ ಕ್ಷೇತ್ರಗಳ ಗಣ್ಯರು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.ಕ್ರೀಡಾ ಕಾರ್ಯಕ್ರಮಕ್ಕಾಗಿ ಮೆಲ್ಬೋರ್ನ್ ಕ್ರಿಕೆಟ್ ಮೈದಾನಕ್ಕೆ ಭೇಟಿ ನೀಡಿದ ಪ್ರಧಾನಮಂತ್ರಿ
July 10th, 08:21 am
ಭಾರತ-ಆಸ್ಟ್ರೇಲಿಯಾ ನಡುವಿನ ಕ್ರೀಡಾ ಸಂಬಂಧಗಳನ್ನು ಆಚರಿಸುವ ಕಾರ್ಯಕ್ರಮಕ್ಕಾಗಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಆಸ್ಟ್ರೇಲಿಯಾದ ಪ್ರಧಾನಮಂತ್ರಿ ಗೌರವಾನ್ವಿತ ಶ್ರೀ ಆಂಥೋನಿ ಅಲ್ಬನೀಸ್ ಮತ್ತು ವಿಕ್ಟೋರಿಯಾದ ಪ್ರೀಮಿಯರ್ ಗೌರವಾನ್ವಿತ ಜೆಸಿಂತಾ ಅಲನ್ ಅವರೊಂದಿಗೆ ಮೆಲ್ಬೋರ್ನ್ ಕ್ರಿಕೆಟ್ ಮೈದಾನಕ್ಕೆ ಭೇಟಿ ನೀಡಿದರು. ಶ್ರೀ ಸ್ಟೀವ್ ವಾ ಮತ್ತು ಶ್ರೀಮತಿ ಲಿಸಾ ಸ್ಥಾಲೇಕರ್ ಸೇರಿದಂತೆ ಹಲವು ಆಸ್ಟ್ರೇಲಿಯಾದ ಕ್ರೀಡಾ ದಿಗ್ಗಜರು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಭಾರತ-ಆಸ್ಟ್ರೇಲಿಯಾ ಸಮಗ್ರ ಕಾರ್ಯತಂತ್ರದ ಪಾಲುದಾರಿಕೆಯ ಆಧಾರಸ್ತಂಭಗಳಾಗಿ ಕ್ರೀಡೆ, ಸಾಂಸ್ಕೃತಿಕ ವಿನಿಮಯ ಮತ್ತು ಜನರ ನಡುವಿನ ಸಂಬಂಧ ಹೆಚ್ಚುತ್ತಿರುವ ಪ್ರಾಮುಖ್ಯತೆಯನ್ನು ಈ ಭೇಟಿ ಬಲವಾಗಿ ಪ್ರತಿಪಾದಿಸಿತು.ಪ್ರಧಾನಮಂತ್ರಿ ಅವರು ಆಸ್ಟ್ರೇಲಿಯಾದ ಗವರ್ನರ್ ಜನರಲ್ ಅವರನ್ನು ಭೇಟಿ ಮಾಡಿದರು
July 09th, 01:55 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಮೆಲ್ಬೋರ್ನ್ ನಲ್ಲಿ ಆಸ್ಟ್ರೇಲಿಯಾದ ಗವರ್ನರ್ ಜನರಲ್ ಗೌರವಾನ್ವಿತ ಸ್ಯಾಮ್ ಮೋಸ್ಟಿನ್ ಎಸಿ ಅವರನ್ನು ಭೇಟಿ ಮಾಡಿದರು.ಅಹಮದಾಬಾದ್ ಮೆಟ್ರೋ ರೈಲು ಯೋಜನೆ 2ಎ ಹಂತಕ್ಕೆ (ಕೋಟೇಶ್ವರ ರಸ್ತೆಯಿಂದ ವಿಮಾನ ನಿಲ್ದಾಣ ಕಾರಿಡಾರ್) ಗೆ ಕೇಂದ್ರ ಸಂಪುಟ ಅನುಮೋದನೆ
June 10th, 01:59 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆಯು 6.032 ಕಿ.ಮೀ ಉದ್ದದ ಕಾರಿಡಾರ್ ಹೊಂದಿರುವ ಅಹಮದಾಬಾದ್ ಮೆಟ್ರೋ ರೈಲು ಯೋಜನೆಯ ಹಂತ 2(ಎ) ಗೆ ಅನುಮೋದನೆ ನೀಡಿದ್ದು, ಅದರಲ್ಲಿ 05 ನಿಲ್ದಾಣಗಳು (04 ಎತ್ತರಿಸಿದ ಮತ್ತು 01 ನೆಲದಾಳದಲ್ಲಿ) ಇರುತ್ತವೆ. ಹಂತ 2(ಎ) ಕಾರ್ಯಾಚರಣೆಯ ನಂತರ ಅಹಮದಾಬಾದ್-ಗಾಂಧಿನಗರವು 77.63 ಕಿ.ಮೀ ಸಕ್ರಿಯ ಮೆಟ್ರೋ ರೈಲು ಜಾಲವನ್ನು ಹೊಂದಿರುತ್ತದೆ. ಹಂತ 2(ಎ) ಕಾರಿಡಾರ್‌ನಲ್ಲಿರುವ ನಿಲ್ದಾಣಗಳ ಹೆಸರುಗಳು- ಆಶ್ರಮ ರಸ್ತೆ, ಕೋಟೇಶ್ವರ ಪ್ರಾಚೀನ್ ಮಂದಿರ, ಸಬರಮತಿ ನದಿ, ಸರ್ದಾರ್ ನಗರ ಮತ್ತು ವಿಮಾನ ನಿಲ್ದಾಣ.2030ರಲ್ಲಿ ನಡೆಯಲಿರುವ ಕಾಮನ್ವೆಲ್ತ್ ಕ್ರೀಡಾಕೂಟದ ಶತಮಾನೋತ್ಸವ ಬಿಡ್ ಅನ್ನು ಭಾರತವು ಗೆದ್ದಿದ್ದಕ್ಕಾಗಿ ರಾಷ್ಟ್ರವನ್ನು ಅಭಿನಂದಿಸಿದ ಪ್ರಧಾನಮಂತ್ರಿ
November 26th, 09:23 pm
2030ರಲ್ಲಿ ನಡೆಯಲಿರುವ ಶತಮಾನೋತ್ಸವ ಕಾಮನ್ವೆಲ್ತ್ ಕ್ರೀಡಾಕೂಟವನ್ನು ಆಯೋಜಿಸುವ ಬಿಡ್ ಅನ್ನು ಭಾರತವು ಗೆದ್ದಿದ್ದಕ್ಕೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಸಂತಸ ವ್ಯಕ್ತಪಡಿಸಿದ್ದಾರೆ.