ಮಾಲ್ಡೀವ್ಸ್ ಅಧ್ಯಕ್ಷರನ್ನು ಭೇಟಿಯಾದ ಪ್ರಧಾನಮಂತ್ರಿ

July 25th, 08:48 pm

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಮಾಲೆಯಲ್ಲಿರುವ ಅಧ್ಯಕ್ಷರ ಕಚೇರಿಯಲ್ಲಿ ಮಾಲ್ಡೀವ್ಸ್ ಗಣರಾಜ್ಯದ ಘನತೆವೆತ್ತ ಅಧ್ಯಕ್ಷರಾದ ಡಾ. ಮೊಹಮ್ಮದ್ ಮುಯಿಝು ಅವರನ್ನು ಭೇಟಿಯಾದರು. ಸಭೆಗೂ ಮುನ್ನ, ಅಧ್ಯಕ್ಷ ಮುಯಿಝು ಅವರು ಪ್ರಧಾನ ಮಂತ್ರಿಯವರನ್ನು ಬರಮಾಡಿಕೊಂಡು ಗಣರಾಜ್ಯ ಚೌಕದಲ್ಲಿ ಅವರಿಗೆ ಔಪಚಾರಿಕ ಸ್ವಾಗತ ನೀಡಿದರು. ಸಭೆಯು ಆತ್ಮೀಯವಾಗಿತ್ತು ಮತ್ತು ಎರಡೂ ದೇಶಗಳ ನಡುವಿನ ಆಳವಾದ ಸ್ನೇಹವನ್ನು ದೃಢೀಕರಿಸಿತು.

ಮಾಲ್ಡೀವ್ಸ್ ಅಧ್ಯಕ್ಷರೊಂದಿಗಿನ ಜಂಟಿ ಪತ್ರಿಕಾ ಹೇಳಿಕೆ ಸಂದರ್ಭದಲ್ಲಿ ಪ್ರಧಾನಮಂತ್ರಿ ಅವರ ಪತ್ರಿಕಾ ಹೇಳಿಕೆ

July 25th, 06:00 pm

ಮೊಟ್ಟ ಮೊದಲನೆಯದಾಗಿ ಎಲ್ಲಾ ಭಾರತೀಯರ ಪರವಾಗಿ, 60ನೇ ಸ್ವಾತಂತ್ರ್ಯೋತ್ಸವದ ಐತಿಹಾಸಿಕ ಸಂದರ್ಭದಲ್ಲಿ ಮಾಲ್ಡೀವ್ಸ್‌ನ ಗೌರವಾನ್ವಿತ ಅಧ್ಯಕ್ಷರು ಮತ್ತು ಜನರಿಗೆ ನನ್ನ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆ.

ಶ್ರೀಲಂಕಾ ಅಧ್ಯಕ್ಷರೊಂದಿಗೆ ಜಂಟಿ ಪತ್ರಿಕಾ ಹೇಳಿಕೆ ನೀಡಿದ ಸಂದರ್ಭದಲ್ಲಿ ಪ್ರಧಾನಮಂತ್ರಿ ಅವರ ಹೇಳಿಕೆ

April 05th, 11:30 am

ಇಂದು ಅಧ್ಯಕ್ಷರಾದ ದಿಸ್ಸೆನಾಯಕೆ ಅವರಿಂದ 'ಶ್ರೀಲಂಕಾ ಮಿತ್ರ ವಿಭೂಷಣ' ಪ್ರಶಸ್ತಿ ಪಡೆದಿರುವುದು ನನಗೆ ಹೆಮ್ಮೆಯ ವಿಷಯವಾಗಿದೆ. ಈ ಪ್ರಶಸ್ತಿ ನನ್ನನ್ನು ಗೌರವಿಸುವುದಷ್ಟೇ ಅಲ್ಲ, 140 ಕೋಟಿ ಭಾರತೀಯರನ್ನು ಗೌರವಿಸುತ್ತದೆ. ಇದು ಭಾರತ ಮತ್ತು ಶ್ರೀಲಂಕಾದ ಜನರ ನಡುವಿನ ಐತಿಹಾಸಿಕ ಸಂಬಂಧಗಳು ಮತ್ತು ಆಳವಾದ ಸ್ನೇಹಕ್ಕೆ ಗೌರವವಾಗಿದೆ.

ಭಾರತ ಮತ್ತು ಮಾಲ್ಡೀವ್ಸ್: ಸಮಗ್ರ ಆರ್ಥಿಕ ಮತ್ತು ಕಡಲ ತೀರದ ಸುರಕ್ಷತೆಯಲ್ಲಿ ಪಾಲುದಾರಿಕೆಗಾಗಿ ಒಂದು ದೂರದರ್ಶಿತ್ವ

October 07th, 02:39 pm

ಭಾರತದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಮತ್ತು ಮಾಲ್ಡೀವ್ಸ್ ಅಧ್ಯಕ್ಷರಾದ ಗೌರವಾನ್ವಿತ ಡಾ. ಮೊಹಮದ್ ಮುಯಿಝು ಅವರು 7ನೇ ಅಕ್ಟೋಬರ್ 2024ರಂದು ಭೇಟಿಯಾಗಿದ್ದರು. ದ್ವಿಪಕ್ಷೀಯ ಸಂಬಂಧಗಳ ವಿಚಾರವಾಗಿ ವಿಸ್ತೃತವಾಗಿ ಸಮಗ್ರವಾಗಿ ಪರಿಶೀಲಿಸಿದ ಉಭಯ ನಾಯಕರು ಎರಡೂ ದೇಶಗಳ ಜನರ ಒಳಿತಿಗಾಗಿ ಐತಿಹಾಸಿಕವೆನಿಸುವ ಇನ್ನಷ್ಟು ನಿಕಟ ಮತ್ತು ವಿಶೇಷ ಸಂಬಂಧವನ್ನು ಸದೃಢಗೊಳಿಸುವ ನಿಟ್ಟಿನಲ್ಲಿ ಈವರೆಗೆ ಸಾಧಿಸಿದ ಪ್ರಗತಿಯ ಪರಿಶೀಲನೆ ನಡೆಸಿದರು.