ನಾಗರಿಕ ಪುರಸ್ಕಾರ ಸಮಾರಂಭ-IIರಲ್ಲಿ ಪ್ರಧಾನಮಂತ್ರಿ ಭಾಗಿ

May 28th, 09:27 am

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಪದ್ಮ ಪ್ರಶಸ್ತಿಗಳನ್ನು ಪ್ರದಾನ ಮಾಡಲಾದ ನಾಗರಿಕ ಪುರಸ್ಕಾರ ಸಮಾರಂಭ-II ರಲ್ಲಿ ಭಾಗಿಯಾಗಿದ್ದರು. ಪದ್ಮ ಪ್ರಶಸ್ತಿ ಪುರಸ್ಕೃತರು ನಮ್ಮ ಸಮಾಜಕ್ಕೆ ಅಭೂತಪೂರ್ವ ಕೊಡುಗೆಗಳನ್ನು ನೀಡಿದ್ದಾರೆ. ಪದ್ಮ ಪ್ರಶಸ್ತಿ ಪುರಸ್ಕೃತರ ಜೀವನ ಪಯಣ ಅತ್ಯಂತ ಪ್ರೇರಣಾದಾಯಕ ಎಂದು ಶ್ರೀ ಮೋದಿ ಅವರು ಹೇಳಿದ್ದಾರೆ.

ನಾಗರಿಕ ಪ್ರಶಸ್ತಿ ಪದಕ ಪ್ರದಾನ ಸಮಾರಂಭ-I ರಲ್ಲಿ ಭಾಗವಹಿಸಿದ ಪ್ರಧಾನಮಂತ್ರಿ

April 28th, 09:46 pm

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು, ಪದ್ಮ ಪ್ರಶಸ್ತಿಗಳ ಪದಕಗಳನ್ನು ಪ್ರದಾನ ಮಾಡುವ ನಾಗರಿಕ ಪ್ರಶಸ್ತಿ ಪದಕ ಪ್ರದಾನ ಸಮಾರಂಭ-I ನಲ್ಲಿ ಭಾಗವಹಿಸಿದರು. ಎಲ್ಲಾ ಕ್ಷೇತ್ರಗಳ ಅತ್ಯುತ್ತಮ ವ್ಯಕ್ತಿಗಳನ್ನು ಅವರ ಸೇವೆ ಮತ್ತು ಸಾಧನೆಗಳಿಗಾಗಿ ಗೌರವಿಸಲಾಯಿತು ಎಂದು ಶ್ರೀ ಮೋದಿ ಅವರು ಹೇಳಿದರು.