ಉತ್ಸಾಹ ಮತ್ತು ದೃಢತೆಯ ಮಹತ್ವವನ್ನು ಪ್ರಮುಖವಾಗಿ ಪ್ರಸ್ತಾಪಿಸುವ ಸಂಸ್ಕೃತ ಸುಭಾಷಿತವನ್ನು ಹಂಚಿಕೊಂಡಿರುವ ಪ್ರಧಾನಮಂತ್ರಿ
August 20th, 10:40 am
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಬುದ್ಧಿವಂತರು ಮತ್ತು ದೃಢನಿಶ್ಚಯವುಳ್ಳ ಜನರು ಪ್ರತಿಕೂಲ ಮತ್ತು ಕಷ್ಟಕರ ಸಂದರ್ಭಗಳಲ್ಲಿಯೂ ತಮ್ಮ ಉತ್ಸಾಹವನ್ನು ಕಳೆದುಕೊಳ್ಳುವುದಿಲ್ಲ ಎಂಬುದನ್ನು ಪ್ರಮುಖವಾಗಿ ಪ್ರತಿಪಾದಿಸುವ ಸಂಸ್ಕೃತ ಸುಭಾಷಿತವನ್ನು ಹಂಚಿಕೊಂಡರು.80ನೇ ಸ್ವಾತಂತ್ರ್ಯ ದಿನಾಚರಣೆ ಸಮಾರಂಭ ಉದ್ದೇಶಿಸಿ ಕೆಂಪುಕೋಟೆಯ ಮೇಲಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಭಾಷಣ
August 15th, 07:00 am
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು 80ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪುಕೋಟೆಯ ವೇದಿಕೆಯಿಂದ ರಾಷ್ಟ್ರವನ್ನುದ್ದೇಶಿಸಿ ಭಾಷಣ ಮಾಡಿದರು. ವಂದೇ ಮಾತರಂನ 150ನೇ ವರ್ಷವನ್ನು ಆಚರಿಸುವಾಗ ದೇಶಾದ್ಯಂತ ಪ್ರತಿ ಹೃದಯದ ಬಡಿತ ಮತ್ತು ಮನೆ ತ್ರಿವರ್ಣ ಧ್ವಜದ ಚೈತನ್ಯ ಮತ್ತು ಹೊಸ ಸಂಕಲ್ಪಗಳೊಂದಿಗೆ ಪ್ರತಿಧ್ವನಿಸುತ್ತದೆ ಎಂದು ಹೇಳಿದ ಅವರು ತಮ್ಮ ಹೃತ್ಪೂರ್ವಕ ಶುಭಾಶಯಗಳನ್ನು ತಿಳಿಸಿದರು. ತ್ಯಾಗದ ಮಹಾನ್ ಸಂಪ್ರದಾಯವನ್ನು ಜಾಗೃತಗೊಳಿಸಿದ ಎಲ್ಲಾ ಸ್ವಾತಂತ್ರ್ಯ ಹೋರಾಟಗಾರರು ಮತ್ತು ಮಹಾನ್ ಕ್ರಾಂತಿಕಾರಿಗಳಿಗೆ ನಾನು ಗೌರವಪೂರ್ವಕವಾಗಿ ನಮಿಸುತ್ತೇನೆ ಎಂದು ಶ್ರೀ ಮೋದಿ ಹೇಳಿದರು.80ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪುಕೋಟೆಯ ವೇದಿಕೆಯಿಂದ ರಾಷ್ಟ್ರವನ್ನುದ್ದೇಶಿಸಿ ಭಾಷಣ ಮಾಡಿದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ
August 15th, 06:50 am
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು 80ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪುಕೋಟೆಯ ವೇದಿಕೆಯಿಂದ ರಾಷ್ಟ್ರವನ್ನುದ್ದೇಶಿಸಿ ಭಾಷಣ ಮಾಡಿದರು. ವಂದೇ ಮಾತರಂನ 150ನೇ ವರ್ಷವನ್ನು ಆಚರಿಸುವಾಗ ದೇಶಾದ್ಯಂತ ಪ್ರತಿ ಹೃದಯದ ಬಡಿತ ಮತ್ತು ಮನೆ ತ್ರಿವರ್ಣ ಧ್ವಜದ ಚೈತನ್ಯ ಮತ್ತು ಹೊಸ ಸಂಕಲ್ಪಗಳೊಂದಿಗೆ ಪ್ರತಿಧ್ವನಿಸುತ್ತದೆ ಎಂದು ಹೇಳಿದ ಅವರು ತಮ್ಮ ಹೃತ್ಪೂರ್ವಕ ಶುಭಾಶಯಗಳನ್ನು ತಿಳಿಸಿದರು. ತ್ಯಾಗದ ಮಹಾನ್ ಸಂಪ್ರದಾಯವನ್ನು ಜಾಗೃತಗೊಳಿಸಿದ ಎಲ್ಲಾ ಸ್ವಾತಂತ್ರ್ಯ ಹೋರಾಟಗಾರರು ಮತ್ತು ಮಹಾನ್ ಕ್ರಾಂತಿಕಾರಿಗಳಿಗೆ ನಾನು ಗೌರವಪೂರ್ವಕವಾಗಿ ನಮಿಸುತ್ತೇನೆ ಎಂದು ಶ್ರೀ ಮೋದಿ ಹೇಳಿದರು.ಭಾರತವು 80 ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸುತ್ತಿದೆ
August 15th, 06:45 am
80 ನೇ ಸ್ವಾತಂತ್ರ್ಯ ದಿನಾಚರಣೆಯಂದು ಕೆಂಪು ಕೋಟೆಯಿಂದ ರಾಷ್ಟ್ರವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, 140 ಕೋಟಿ ಭಾರತೀಯರ ಶಕ್ತಿ ಮತ್ತು ಸಂಕಲ್ಪದಿಂದ 2047 ರ ವೇಳೆಗೆ ವಿಕಸಿತ ಭಾರತವನ್ನು ನಿರ್ಮಿಸುವ ಕನಸಿನ ಬಗ್ಗೆ ಮಾತನಾಡಿದರು. ಅವರು ಶಾಂತಿ ಕಾಯ್ದೆ, ರೈಲ್ವೆ ವಿದ್ಯುದೀಕರಣ, ಭಾರತದ ವ್ಯಾಪಾರ ಒಪ್ಪಂದಗಳು, ನಕ್ಸಲಿಸಂನ ಅಂತ್ಯ ಮತ್ತು ಇನ್ನೂ ಹೆಚ್ಚಿನ ಪ್ರಮುಖ ಉಪಕ್ರಮಗಳನ್ನು ಎತ್ತಿ ತೋರಿಸಿದರು. 'ಶಕ್ತಿ ಕಿ ಸಪ್ತಧಾರ'ವನ್ನು ಅಳವಡಿಸಿಕೊಳ್ಳಲು ಅವರು ರಾಷ್ಟ್ರಕ್ಕೆ ಕರೆ ನೀಡಿದರು.ದೂರದೃಷ್ಟಿ, ಆಲೋಚನೆಗಳು, ಮಾತುಗಳು ಮತ್ತು ಕ್ರಿಯೆಗಳ ಮೂಲಕ ಹೃದಯಗಳನ್ನು ಗೆಲ್ಲುವ ಶಕ್ತಿಯನ್ನು ಬಿಂಬಿಸುವ ಸಂಸ್ಕೃತ ಸುಭಾಷಿತಂ ಹಂಚಿಕೊಂಡ ಪ್ರಧಾನಮಂತ್ರಿ
August 12th, 08:10 am
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಸಂಸ್ಕೃತ ಸುಭಾಷಿತಂ ಹಂಚಿಕೊಂಡಿದ್ದು, ದೂರದೃಷ್ಟಿ, ಆಲೋಚನೆಗಳು, ಮಾತುಗಳು ಮತ್ತು ಕ್ರಿಯೆಗಳ ಮೂಲಕ ಹೃದಯಗಳನ್ನು ಗೆಲ್ಲುವ ಶಕ್ತಿಯನ್ನು ಬಿಂಬಿಸಿದ್ದಾರೆ.ಸತ್ಯ ಮತ್ತು ಅಧಿಕೃತ ಮಾಹಿತಿಗೆ ಆದ್ಯತೆ ನೀಡುವ ಸಂಸ್ಕೃತ ಸುಭಾಷಿತ ಹಂಚಿಕೊಂಡಿರುವ ಪ್ರಧಾನಮಂತ್ರಿ
August 10th, 10:00 am
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಂದು ಸಂಸ್ಕೃತ ಸುಭಾಷಿತವನ್ನು ಹಂಚಿಕೊಳ್ಳುತ್ತಾ ಜನರನ್ನು ಸಬಲಗೊಳಿಸುವ ಹಾಗೂ ಸೌಹಾರ್ದ ತರುವ ಸತ್ಯವಾದ, ಅಧಿಕೃತವಾದ ಮತ್ತು ಸಾರ್ವಜನಿಕ ಹಿತಾಸಕ್ತಿಯಿಂದ ಕೂಡಿರುವ ಮಾಹಿತಿಯು ಪ್ರಸಾರವಾಗಬೇಕು ಎಂದು ಒತ್ತಿ ಹೇಳಿದ್ದಾರೆ.'ಮನ್ ಕಿ ಬಾತ್' ಗಾಗಿ ನಿಮ್ಮ ಆಲೋಚನೆಗಳು ಮತ್ತು ಸಲಹೆಗಳನ್ನು ಈಗಲೇ ಹಂಚಿಕೊಳ್ಳಿ!
August 05th, 10:11 am
ಪ್ರಧಾನಿ ನರೇಂದ್ರ ಮೋದಿ ಅವರು ಆಗಸ್ಟ್ 30 ರ ಭಾನುವಾರದಂದು 'ಮನ್ ಕಿ ಬಾತ್' ಅನ್ನು ಹಂಚಿಕೊಳ್ಳಲಿದ್ದಾರೆ. ನಿಮ್ಮಲ್ಲಿ ನವೀನ ವಿಚಾರಗಳು ಮತ್ತು ಸಲಹೆಗಳಿದ್ದರೆ, ಅದನ್ನು ನೇರವಾಗಿ ಪ್ರಧಾನಿಯವರೊಂದಿಗೆ ಹಂಚಿಕೊಳ್ಳಲು ಇಲ್ಲಿ ಒಂದು ಅವಕಾಶವಿದೆ. ಕೆಲವು ಸಲಹೆಗಳನ್ನು ಪ್ರಧಾನಿಯವರು ತಮ್ಮ ಭಾಷಣದ ಸಮಯದಲ್ಲಿ ಉಲ್ಲೇಖಿಸುತ್ತಾರೆ.Prime Minister calls upon youth to work together, to work for Bharat
July 31st, 11:47 pm
The Prime Minister, Shri Narendra Modi, has said that abuses never solve anything and called upon people to guide those who have gone astray.ಮನ್ ಕಿ ಬಾತ್ ನಲ್ಲಿ ಭಾರತದ ರಕ್ಷಣಾ ಶಕ್ತಿ, ನಾವೀನ್ಯತೆ ಮತ್ತು ಸಾಮೂಹಿಕ ಪ್ರಯತ್ನಗಳನ್ನು ಪ್ರಧಾನಿ ಮೋದಿ ಎತ್ತಿ ತೋರಿಸಿದ್ದಾರೆ
July 26th, 11:30 am
Prime Minister Narendra Modi addressed the nation through Mann Ki Baat. In his speech, he highlighted important topics such as Kargil Vijay Diwas, Catch the Rain campaign, India's space sector prowess, Science Olympiads, Environmental conservation, Khadi and more. He called upon the citizens to share their ideas and suggestions for Independence Day through MyGov.ಜುಲೈ 26 ರಂದು ನಡೆಯುವ ಮನ್ ಕಿ ಬಾತ್ ಕೇಳಲು ಟ್ಯೂನ್ ಮಾಡಿ
July 25th, 09:00 am
ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ವಿವಿಧ ವಿಷಯಗಳ ಬಗ್ಗೆ ತಮ್ಮ ಅನಿಸಿಕೆ ಹಾಗು ಅಭಿಪ್ರಾಯಗಳನ್ನು ಬಾನುವಾರ ೧೧ ಗಂಟೆಗೆ ಮನ್ ಕೀ ಬಾತ್ ನಲ್ಲಿ ಹಂಚಿಕೊಳ್ಳಲಿದ್ದಾರೆ. ನರೇಂದ್ರ ಮೋದಿ ಆಪ್ ನಲ್ಲಿ ಕಾರ್ಯಕ್ರಮವನ್ನು ಕೇಳಬಹುದು.ಅಂತರ್ಗತ ಅಭಿವೃದ್ಧಿ ಮತ್ತು ರಾಷ್ಟ್ರ ನಿರ್ಮಾಣದ ಮಹತ್ವವನ್ನು ಬಿಂಬಿಸುವ ಸಂಸ್ಕೃತ ಸುಭಾಷಿತಂ ಹಂಚಿಕೊಂಡ ಪ್ರಧಾನಮಂತ್ರಿ
July 13th, 08:32 am
ಸರ್ವತೋಮುಖ ಅಭಿವೃದ್ಧಿಯು ಪ್ರತಿಯೊಬ್ಬ ನಾಗರಿಕನ ಜೀವನದಲ್ಲಿ ಸಕಾರಾತ್ಮಕ ಪರಿವರ್ತನೆಯನ್ನು ಖಾತ್ರಿಪಡಿಸಿದಾಗ, ಅದು ರಾಷ್ಟ್ರದ ಪ್ರಗತಿಗೆ ಹೊಸ ವೇಗವನ್ನು ನೀಡುತ್ತದೆ ಎಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಹೇಳಿದ್ದಾರೆ. ಈ ಸ್ಪೂರ್ತಿದಾಯಕ ಮನೋಭಾವದಿಂದಲೇ ಭಾರತದ ಸಾಮರ್ಥ್ಯಗಳನ್ನು ಮತ್ತಷ್ಟು ಬಲಪಡಿಸಲು ದೇಶವು ನಿರಂತರವಾಗಿ ಕೆಲಸ ಮಾಡುತ್ತಿದೆ ಎಂದು ಅವರು ಹೇಳಿದರು.ಧೈರ್ಯ ಮತ್ತು ಸ್ಥೈರ್ಯದ ಶಕ್ತಿಯನ್ನು ಬಿಂಬಿಸುವ ಸಂಸ್ಕೃತ ಸುಭಾಷಿತವನ್ನು ಹಂಚಿಕೊಂಡಿರುವ ಪ್ರಧಾನಮಂತ್ರಿ
July 08th, 07:48 am
ಧೈರ್ಯವೇ ರಾಷ್ಟ್ರದ ಅತಿ ದೊಡ್ಡ ಶಕ್ತಿ ಎಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಹೇಳಿದ್ದಾರೆ. ಕಠಿಣ ಸವಾಲುಗಳ ನಡುವೆಯೂ ದೇಶವನ್ನು ಒಗ್ಗಟ್ಟಿನಿಂದ ಇರಲು ಹಾಗೂ ಪ್ರಗತಿ, ಸಮೃದ್ಧಿ ಮತ್ತು ಸ್ವಾವಲಂಬನೆಯತ್ತ ದೃಢವಾಗಿ ಸಾಗಲು ಧೈರ್ಯವೇ ಪ್ರೇರಣೆ ನೀಡುತ್ತದೆ ಎಂದು ಹೇಳಿದ್ದಾರೆ.ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ದಿನಾಂಕ 28.06.2026 ರಂದು ಮಾಡಿದ ‘ಮನ್ ಕಿ ಬಾತ್’ – 135ನೇ ಸಂಚಿಕೆಯ ಕನ್ನಡ ಅವತರಣಿಕೆ
June 28th, 11:30 am
‘ಮನದ ಮಾತು’ ಮೂಲಕ ನಿಮ್ಮೆಲ್ಲರೊಂದಿಗೆ ಮತ್ತೆ ಮಾತನಾಡಲು ಅವಕಾಶ ಸಿಕ್ಕಿರುವುದು ನನಗೆ ಅಪಾರ ಸಂತೋಷವಾಗುತ್ತಿದೆ. 2026 ನೇ ವರ್ಷದ ಅರ್ಧ ಭಾಗವು ಮುಗಿಯಲಿದೆ. ಈ ಆರು ತಿಂಗಳುಗಳಲ್ಲಿ, ಈ ಕಾರ್ಯಕ್ರಮದಲ್ಲಿ ನಮ್ಮ ದೇಶದ ನಾಗರಿಕರ ಹಲವಾರು ಸಾಧನೆಗಳ ಬಗ್ಗೆ ನಾವು ಚರ್ಚಿಸಿದ್ದೇವೆ. ಜೂನ್‌ನಲ್ಲಿಯೂ ಸಹ, ಪ್ರತಿಯೊಬ್ಬ ನಾಗರಿಕನು ಹೆಮ್ಮೆ ಪಡುವಂತಹ ಸಾಧನೆಗಳನ್ನು ರಾಷ್ಟ್ರವು ಸಾಧಿಸಿದೆ. ಈ ಯಶಸ್ಸು ದೇಶದ ಭದ್ರತೆ ಮತ್ತು ಸ್ವಾವಲಂಬನೆಗೆ ಸಂಬಂಧಿಸಿದ್ದಾಗಿವೆ. ಇತ್ತೀಚೆಗೆ ನನಗೆ ಕೋಲ್ಕತ್ತಾದಲ್ಲಿ ನೌಕಾಪಡೆಯ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ಅವಕಾಶ ಸಿಕ್ಕಿತು. ಅಲ್ಲಿ, ಐಎನ್ಎಸ್ ದೂನಗಿರಿ, ಐಎನ್ಎಸ್ ಸಂಶೋಧಕ್ ಮತ್ತು ಐಎನ್ಎಸ್ ಅಗ್ರಯಗಳನ್ನು ಭಾರತೀಯ ನೌಕಾಪಡೆಗೆ ಸೇರ್ಪಡೆಗೊಳಿಸಲಾಯಿತು. ವಿನ್ಯಾಸದಿಂದ ಹಿಡಿದು ಈ ಹಡಗುಗಳ ತಯಾರಿಕೆಯವರೆಗೆ ಎಲ್ಲವೂ ಸ್ವದೇಶದಲ್ಲೇ ಸಿದ್ಧಪಡಿಸಲಾಗಿದೆ.ಜೂನ್ 28 ರಂದು ಮನ್ ಕಿ ಬಾತ್ ಕೇಳಲು ಟ್ಯೂನ್ ಮಾಡಿ
June 27th, 09:00 am
ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ವಿವಿಧ ವಿಷಯಗಳ ಬಗ್ಗೆ ತಮ್ಮ ಅನಿಸಿಕೆ ಹಾಗು ಅಭಿಪ್ರಾಯಗಳನ್ನು ಬಾನುವಾರ ೧೧ ಗಂಟೆಗೆ ಮನ್ ಕೀ ಬಾತ್ ನಲ್ಲಿ ಹಂಚಿಕೊಳ್ಳಲಿದ್ದಾರೆ. ನರೇಂದ್ರ ಮೋದಿ ಆಪ್ ನಲ್ಲಿ ಕಾರ್ಯಕ್ರಮವನ್ನು ಕೇಳಬಹುದು.ಅಂತಾರಾಷ್ಟ್ರೀಯ ಯೋಗ ದಿನ 2026 ಅನ್ನು ಜಾಗತಿಕ ಆಚರಣೆಯನ್ನಾಗಿ ಮಾಡಿದ್ದಕ್ಕಾಗಿ ಪ್ರಧಾನಮಂತ್ರಿ ಕೃತಜ್ಞತೆ ಸಲ್ಲಿಕೆ
June 21st, 10:00 pm
ಅಂತಾರಾಷ್ಟ್ರೀಯ ಯೋಗ ದಿನ 2026 ಅನ್ನು ನಿಜವಾದ ಜಾಗತಿಕ ಆಚರಣೆಯನ್ನಾಗಿ ಮಾಡಿದ್ದಕ್ಕಾಗಿ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ವಿಶ್ವದಾದ್ಯಂತದ ಜನರಿಗೆ ಕೃತಜ್ಞತೆ ವ್ಯಕ್ತಪಡಿಸಿದ್ದಾರೆ.ಬೇಸಿಗೆಯ ಬಿಸಿಲನ್ನು ನಿವಾರಿಸಲು ಪ್ರಧಾನಿ ಮೋದಿ ಸಲಹೆಗಳನ್ನು ಹಂಚಿಕೊಳ್ಳುತ್ತಾರೆ, ಮನ್ ಕಿ ಬಾತ್‌ನಲ್ಲಿ ನಾಗರಿಕರಿಗೆ ನೀರಿನಂಶ ಕಾಪಾಡಿಕೊಳ್ಳಲು ಸಲಹೆ ನೀಡುತ್ತಾರೆ
May 31st, 11:30 am
ನನ್ನ ಪ್ರಿಯ ದೇಶ ಬಾಂಧವರೆ, ನಮಸ್ಕಾರ. ‘ಮನದ ಮಾತಿನ’ ಮೂಲಕ ಮತ್ತೊಮ್ಮೆ ನಿಮ್ಮನ್ನು ಸಂಪರ್ಕಿಸುತ್ತಿರುವುದು ನನಗೆ ಬಹಳ ಸಂತೋಷವೆನಿಸಿದೆ. ದೇಶದ ವಿವಿಧ ಭಾಗಗಳಲ್ಲಿ, ನಮ್ಮ ಜನರು ರಾಷ್ಟ್ರ ಮತ್ತು ಸಮಾಜದ ಹಿತದೃಷ್ಟಿಯಿಂದ ಸಾಕಷ್ಟು ಗಮನಾರ್ಹ ಕೆಲಸಗಳನ್ನು ಮಾಡುತ್ತಿದ್ದಾರೆ ಮತ್ತು ಅವರ ಪ್ರಯತ್ನಗಳ ಬಗ್ಗೆ ಕೇಳಿದಾಗ, ನಮ್ಮಲ್ಲಿ ಹೊಸ ಸ್ಫೂರ್ತಿಯ ಸೆಲೆ ಹುಟ್ಟುತ್ತದೆ. ಇಂದು, ಅಥ್ಲೆಟಿಕ್ಸ್ ಕ್ಷೇತ್ರದಲ್ಲಿ ಅಂತಹ ಒಂದು ರಾಷ್ಟ್ರೀಯ ಸಾಧನೆಯ ಕುರಿತು ಪ್ರಸ್ತಾಪಿಸುವ ಮೂಲಕ ನಾನು ಈ ಕಾರ್ಯಕ್ರಮವನ್ನು ಪ್ರಾರಂಭಿಸಲು ಬಯಸುತ್ತೇನೆ. ಕೆಲವೇ ದಿನಗಳ ಹಿಂದೆ, ಜಾರ್ಖಂಡ್‌ನ ರಾಂಚಿಯಲ್ಲಿ ರಾಷ್ಟ್ರೀಯ ಹಿರಿಯ ಅಥ್ಲೆಟಿಕ್ಸ್ ಫೆಡರೇಶನ್ ಸ್ಪರ್ಧೆ ನಡೆಯಿತು. ಈ ಸ್ಪರ್ಧೆಯಲ್ಲಿ ಸುಮಾರು 800 ಕ್ರೀಡಾಪಟುಗಳು ಭಾಗವಹಿಸಿದ್ದರು. ದೇಶದ ಮೂಲೆ ಮೂಲೆಗಳಿಂದ ಅವರನ್ನು ಅಭಿನಂದಿಸಲಾಯಿತು. ಈ ಸಂದರ್ಭದಲ್ಲಿ, ನಾಲ್ಕು ವಿಭಿನ್ನ ಸ್ಪರ್ಧೆಗಳಲ್ಲಿ ನಾಲ್ಕು ರಾಷ್ಟ್ರೀಯ ದಾಖಲೆಗಳನ್ನು ಮುರಿಯಲಾಯಿತು. ಗುರಿಂದರ್‌ವೀರ್ ಸಿಂಗ್, ವಿಶಾಲ್ ಟಿ.ಕೆ., ತೇಜಸ್ವಿನ್ ಶಂಕರ್, ದೇವ್ ಮೀನಾ ಮತ್ತು ಕುಲದೀಪ್ ಕುಮಾರ್ - ಈ ಕ್ರೀಡಾಪಟುಗಳು ತಮ್ಮ ತಮ್ಮ ವಿಭಾಗಗಳಲ್ಲಿ ಹೊಸ ದಾಖಲೆಗಳನ್ನು ಸ್ಥಾಪಿಸಿದರು. ಮೊದಲನೆಯದಾಗಿ, ಅವರೆಲ್ಲರಿಗೂ ನನ್ನ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆ.ಮೇ 31 ರಂದು ಮನ್ ಕಿ ಬಾತ್ ಕೇಳಲು ಟ್ಯೂನ್ ಮಾಡಿ
May 30th, 08:30 am
ಪ್ರಧಾನ ಮಂತ್ರಿ ಶ್ರೀ ನರೇಂದ್ರ ಭಾನುವಾರ 11 ಗಂಟೆಗೆ 'ಮನ್ ಕಿ ಬಾತ್' ನಲ್ಲಿ ಹಲವಾರು ವಿಷಯಗಳು ಮತ್ತು ವಿಚಾರಗಳ ಬಗ್ಗೆ ತಮ್ಮ ಆಲೋಚನೆಗಳನ್ನು ಹಂಚಿಕೊಳ್ಳುತ್ತಾರೆ. 'ಮನ್ ಕಿ ಬಾತ್' ಅನ್ನು ನರೇಂದ್ರ ಮೋದಿ ಅಪ್ಲಿಕೇಶನ್ ನಲ್ಲಿ ಲೈವ್ ಆಲಿಸಲು ಟ್ಯೂನ್ ಮಾಡಿ.ವಿನಯ, ಕ್ಷಮೆ ಮತ್ತು ಸಜ್ಜನಿಕೆಯ ಗುಣಗಳನ್ನು ಸಾರುವ ಸಂಸ್ಕೃತ ಸುಭಾಷಿತವನ್ನು ಹಂಚಿಕೊಂಡಿರುವ ಪ್ರಧಾನಮಂತ್ರಿ
May 29th, 08:45 am
ಮನುಷ್ಯನಲ್ಲಿ ವಿನಯ, ಕ್ಷಮೆ ಮತ್ತು ಸಜ್ಜನಿಕೆಯ ನಡೆ-ನುಡಿಗಳೇ ವ್ಯಕ್ತಿತ್ವದ ನಿಜವಾದ ಆಭರಣಗಳಾಗಿವೆ ಎಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಹೇಳಿದ್ದಾರೆ. ಈ ಗುಣಗಳನ್ನು ಹೊಂದುವ ಮೂಲಕ ಜನರು ಅಭಿವೃದ್ಧಿ ಹೊಂದಿದ ಭಾರತದ ಸಂಕಲ್ಪವನ್ನು ಸಾಕಾರಗೊಳಿಸುವ ದಿಸೆಯಲ್ಲಿ ನಿರಂತರವಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಅವರು ತಿಳಿಸಿದ್ದಾರೆ.ಸಾರ್ಥಕ್-ಪಿಡಿಎಸ್ (SARTHAK-PDS) ಸಮಗ್ರ ಯೋಜನೆಯ ಅಡಿಯಲ್ಲಿ ಎರಡು ಯೋಜನೆಗಳ ಸಂಯೋಜನೆ ಮತ್ತು ಮುಂದುವರಿಕೆಗೆ ಸಚಿವ ಸಂಪುಟ ಅನುಮೋದನೆ ನೀಡಿದೆ, ಅವುಗಳೆಂದರೆ (i) "ಎನ್ ಎಫ್ ಎಸ್ ಎ (NFSA) ಅಡಿಯಲ್ಲಿ ಆಹಾರ ಧಾನ್ಯಗಳ ರಾಜ್ಯದೊಳಗಿನ ಸಾಗಾಟ ಮತ್ತು ಎಫ್ಪಿಎಸ್ (FPS) ವಿತರಕರ ಮಾರ್ಜಿನ್ ಗಾಗಿ ರಾಜ್ಯ ಏಜೆನ್ಸಿಗಳಿಗೆ ನೆರವು" ಮತ್ತು (ii) "ಸಾರ್ವಜನಿಕ ವಿತರಣಾ ವ್ಯವಸ್ಥೆಯಲ್ಲಿ ತಂತ್ರಜ್ಞಾನದ ಮೂಲಕ ಆಧುನೀಕರಣ ಮತ್ತು ಸುಧಾರಣೆಗಳ ಯೋಜನೆ (SMART PDS)"
May 27th, 02:53 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿಯು (CCEA), 16ನೇ ಹಣಕಾಸು ಆಯೋಗದ ಅವಧಿಯಲ್ಲಿ 25,530 ಕೋಟಿ ರೂಪಾಯಿಗಳ ಕೇಂದ್ರದ ಪಾಲಿನ ವೆಚ್ಚದೊಂದಿಗೆ ಪಡಿತರ ಸಾಗಣೆ ಮತ್ತು ನಿರ್ವಹಣೆಯಲ್ಲಿ ಸಹಾಯ-ಪಿಡಿಎಸ್ನಲ್ಲಿ ಆಟೊಮೇಷನ್ನೊಂದಿಗೆ ಆದಾಯ (SARTHAK PDS) ಯೋಜನೆಯನ್ನು ಒಂದು ಛತ್ರಿ ಯೋಜನೆಯಾಗಿ ಮುಂದುವರಿಸಲು ಅನುಮೋದನೆ ನೀಡಿದೆ.ಭಾರತದಾದ್ಯಂತ ಹೆಚ್ಚುತ್ತಿರುವ ತಾಪಮಾನದ ನಡುವೆ ಮುನ್ನೆಚ್ಚರಿಕೆ ವಹಿಸುವಂತೆ ನಾಗರಿಕರಿಗೆ ಪ್ರಧಾನಮಂತ್ರಿ ಕರೆ
May 27th, 11:21 am
ಭಾರತದ ವಿವಿಧ ಭಾಗಗಳಲ್ಲಿ ಹೆಚ್ಚುತ್ತಿರುವ ತೀವ್ರ ತಾಪಮಾನದ ಹಿನ್ನೆಲೆಯಲ್ಲಿ ದೇಶದ ನಾಗರಿಕರು ಸಾಧ್ಯವಿರುವ ಎಲ್ಲಾ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವಂತೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಕರೆ ನೀಡಿದ್ದಾರೆ.