ನ್ಯೂಜಿಲೆಂಡ್‌ನಲ್ಲಿರುವ ಭಾರತೀಯ ಸಮುದಾಯ ಉದ್ದೇಶಿಸಿ ಪ್ರಧಾನಮಂತ್ರಿ ಭಾಷಣ
July 11th, 01:15 pm
ನ್ಯೂಜಿಲೆಂಡ್ ಭೇಟಿ ಅಂತಿಮಗೊಳಿಸಿದಾಗ, ಹವಾಮಾನವು ತುಂಬಾ ಚಳಿ ಇರುತ್ತದೆ ಎಂದು ನನಗೆ ಹೇಳಿದ್ದರಿಂದ, ನಾನು ಅದನ್ನು ನನ್ನೊಂದಿಗೆ ತರುವ ನಿರ್ಧಾರ ತೆಗೆದುಕೊಂಡೆ.ನ್ಯೂಜಿಲೆಂಡ್ ನಲ್ಲಿರುವ ಭಾರತೀಯ ಸಮುದಾಯವನ್ನುದ್ದೇಶಿಸಿ ಪ್ರಧಾನಮಂತ್ರಿ ಅವರಿಂದ ಭಾಷಣ
July 11th, 12:35 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಆಕ್ ಲ್ಯಾಂಡ್ ನಲ್ಲಿ ನಡೆದ 'ಕಿಯಾ ಔರಾ ಮೋದಿ' ಕಾರ್ಯಕ್ರಮದಲ್ಲಿ ನ್ಯೂಜಿಲೆಂಡ್ ನಲ್ಲಿರುವ ಭಾರತೀಯ ವಲಸಿಗರ ಬೃಹತ್ ಸಭೆಯನ್ನುದ್ದೇಶಿಸಿ ಮಾತನಾಡಿದರು. ಈ ವಿಶೇಷ ಸನ್ನಿವೇಶದಲ್ಲಿ, ನ್ಯೂಜಿಲೆಂಡ್ ನ ಪ್ರಧಾನಮಂತ್ರಿ ಯವರಾದ ಗೌರವಾನ್ವಿತ ಆರ್. ಕ್ರಿಸ್ಟೋಫರ್ ಲಕ್ಸನ್ ಅವರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಭಾರತೀಯ ವಲಸಿಗರ 10,000ಕ್ಕೂ ಹೆಚ್ಚು ಸದಸ್ಯರ ಶಕ್ತಿ, ಉತ್ಸಾಹ ಮತ್ತು ಉಲ್ಲಾಸದಿಂದ ಈ ಸಭೆ ತುಂಬಿತ್ತು.ಅದ್ಧೂರಿ ಭೋಜನಕೂಟ ಸಭೆ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
July 11th, 12:32 pm
ಕಳೆದ ವರ್ಷ ಪ್ರಧಾನ ಮಂತ್ರಿ ಲಕ್ಸನ್ ಅವರ ಭಾರತ ಭೇಟಿಯು ನಮ್ಮ ದ್ವಿಪಕ್ಷೀಯ ಸಂಬಂಧದ ಪ್ರತಿಯೊಂದು ಅಂಶಕ್ಕೂ ಹೊಸ ಶಕ್ತಿ ತುಂಬಿತು. ಅವರ ನಾಯಕತ್ವ, ಸ್ಪಷ್ಟ ದೃಷ್ಟಿಕೋನ ಮತ್ತು ಬಲವಾದ ಬದ್ಧತೆಯಡಿ, ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಸ್ನೇಹವು ಹೊಸ ಆವೇಗ ಮತ್ತು ಹೊಸ ದಿಕ್ಕನ್ನು ಪಡೆದುಕೊಂಡಿದೆ. 40 ವರ್ಷಗಳಲ್ಲಿ ಭಾರತೀಯ ಪ್ರಧಾನ ಮಂತ್ರಿಯೊಬ್ಬರು ನ್ಯೂಜಿಲೆಂಡ್‌ಗೆ ನೀಡಿದ ಮೊದಲ ಭೇಟಿ ಇದಾಗಿದೆ. ನಾನು ಆಗಾಗ್ಗೆ ಹೇಳುವಂತೆ, ನನಗಿಂತ ಮೊದಲು ಬಂದವರು ನನಗಾಗಿ ಅನೇಕ ಉತ್ತಮ ಕಾರ್ಯಗಳನ್ನು ಬಿಟ್ಟು ಹೋಗಿದ್ದಾ, ಅವುಗಳನ್ನು ಪೂರ್ಣಗೊಳಿಸುವ ಸೌಭಾಗ್ಯ ನನಗಿದೆ. ಸ್ನೇಹಿತರೆ, ಇದು ನಮ್ಮ ದ್ವಿಪಕ್ಷೀಯ ಸಂಬಂಧದಲ್ಲಿ ಹೊಸ ಅಧ್ಯಾಯದ ಆರಂಭವನ್ನು ಸೂಚಿಸುತ್ತಿದೆ."ಭಾರತ-ನ್ಯೂಜಿಲೆಂಡ್: ಒಂದು ಯಶಸ್ವಿ ಪಾಲುದಾರಿಕೆ" ಎಂಬ ವಿಷಯದ ಮೇಲೆ ನ್ಯೂಜಿಲೆಂಡ್ ಪ್ರಧಾನಮಂತ್ರಿ ಅವರು ಆಯೋಜಿಸಿದ್ದ ವಿಶೇಷ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಪ್ರಧಾನಮಂತ್ರಿ
July 11th, 12:30 pm
ನ್ಯೂಜಿಲೆಂಡ್ ಪ್ರಧಾನಮಂತ್ರಿ ಅವರಾದ ಮಾನ್ಯ ಕ್ರಿಸ್ಟೋಫರ್ ಅವರು ಆಯೋಜಿಸಿದ್ದ ಭಾರತ-ನ್ಯೂಜಿಲೆಂಡ್: ಒಂದು ಯಶಸ್ವಿ ಪಾಲುದಾರಿಕೆ ಎಂಬ ವಿಷಯಾಧಾರಿತ ವಿಶೇಷ ಭೋಜನಕೂಟದಲ್ಲಿ ಪ್ರಧಾನಮಂತ್ರಿ ಅವರಾದ ಶ್ರೀ ನರೇಂದ್ರ ಮೋದಿಯವರು ಭಾಗವಹಿಸಿದ್ದರು. ರಾಜಕೀಯ, ವ್ಯಾಪಾರ, ಕೈಗಾರಿಕೆ, ಶಿಕ್ಷಣ, ತಂತ್ರಜ್ಞಾನ, ಕ್ರೀಡೆ ಮತ್ತು ಕಲೆ ಮುಂತಾದ ಕ್ಷೇತ್ರಗಳ ಗಣ್ಯರು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.ಭಾರತ-ನ್ಯೂಜಿಲೆಂಡ್ ಉದ್ಯಮ ವ್ಯವಹಾರ ಕಾರ್ಯಕ್ರಮ ಉದ್ದೇಶಿಸಿ ಪ್ರಧಾನಮಂತ್ರಿ ಭಾಷಣ
July 11th, 08:20 am
ಆಕ್ಲೆಂಡ್‌ನಲ್ಲಿ ನಿಮ್ಮೆಲ್ಲರೊಂದಿಗೆ ಇಲ್ಲಿರುವುದು ನನಗೆ ಸಂತೋಷ ತಂದಿದೆ. ಪ್ರಧಾನ ಮಂತ್ರಿ ಲಕ್ಸನ್ ಅವರ ಸಕಾರಾತ್ಮಕ ದೃಷ್ಟಿಕೋನ ಮತ್ತು ಭಾರತದ ಬಗ್ಗೆ ಅವರು ಹೊಂದಿರುವ ಆಳವಾದ ಬದ್ಧತೆಗಾಗಿ ನಾನು ಅವರಿಗೆ ನನ್ನ ವಿಶೇಷ ಕೃತಜ್ಞತೆ ವ್ಯಕ್ತಪಡಿಸಲು ಬಯಸುತ್ತೇನೆ.Prime Minister addresses business leaders in New Zealand
July 11th, 08:16 am
PM Modi interacted with leading CEOs and business leaders from India and New Zealand, highlighting the vast opportunities for trade, investment and innovation. He invited New Zealand businesses to partner India's growth story and help achieve the shared goal of doubling bilateral trade to NZD 7 billion by 2030.ನ್ಯೂಜಿಲೆಂಡ್ ಪ್ರಧಾನಮಂತ್ರಿಯೊಂದಿಗೆ ಅಧಿಕೃತ ಮಾತುಕತೆ ನಡೆಸಿದ ಪ್ರಧಾನಮಂತ್ರಿ
July 11th, 08:09 am
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಆಕ್ಲೆಂಡ್‌ನ ಸರ್ಕಾರಿ ಭವನದಲ್ಲಿಂದು ನ್ಯೂಜಿಲೆಂಡ್ ಪ್ರಧಾನಮಂತ್ರಿ ಗೌರವಾನ್ವಿತ ಕ್ರಿಸ್ಟೋಫರ್ ಲಕ್ಸನ್ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿದರು. ಸರ್ಕಾರಿ ಭವನಕ್ಕೆ ಆಗಮಿಸಿದಾಗ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಗೆ ಸಾಂಪ್ರದಾಯಿಕ ಮಾವೊರಿ ಸ್ವಾಗತ ನೀಡಲಾಯಿತು. ಸಮಾರಂಭದಲ್ಲಿ ಶಾಂತಿ, ಗೌರವ ಮತ್ತು ಸ್ವಾಗತವನ್ನು ಸಂಕೇತಿಸುವ ಸಾಂಪ್ರದಾಯಿಕ ಮಾವೊರಿ ಆಚರಣೆಗಳು ಒಳಗೊಂಡಿದ್ದವು. ಸಾಂಪ್ರದಾಯಿಕ ಸ್ವಾಗತದ ನಂತರ, ಪ್ರಧಾನಮಂತ್ರಿಯವರು ಗೌರವ ರಕ್ಷೆ (ಗಾರ್ಡ್ ಆಫ್ ಆನರ್ ) ಸ್ವೀಕರಿಸಿದರು.ಪ್ರಧಾನಮಂತ್ರಿ ಅವರ ನ್ಯೂಜಿಲೆಂಡ್ ಅಧಿಕೃತ ಭೇಟಿಯ ಫಲಿತಾಂಶದ ಪಟ್ಟಿ
July 11th, 08:03 am
ಸಂವಾದ, ಸಮನ್ವಯ, ಮಾಹಿತಿ ವಿನಿಮಯ ಮತ್ತು ಜಂಟಿ ಚಟುವಟಿಕೆಗಳ ಮೂಲಕ ಇಂಡೋ-ಪೆಸಿಫಿಕ್‌ನಲ್ಲಿ ವರ್ಧಿತ ಕಡಲ ಸಹಕಾರಕ್ಕಾಗಿ ಒಂದು ಚೌಕಟ್ಟನ್ನು ಸ್ಥಾಪಿಸುತ್ತದೆ.ಭಾರತ-ನ್ಯೂಜಿಲೆಂಡ್ ಜಂಟಿ ಹೇಳಿಕೆ
July 11th, 07:59 am
ನ್ಯೂಜಿಲೆಂಡ್ ಪ್ರಧಾನಮಂತ್ರಿ ಗೌರವಾನ್ವಿತ ಕ್ರಿಸ್ಟೋಫರ್ ಲಕ್ಸನ್ ಅವರ ಆಹ್ವಾನದ ಮೇರೆಗೆ ಭಾರತದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2026ರ ಜುಲೈ 10 ಮತ್ತು 11 ರಂದು ನ್ಯೂಜಿಲೆಂಡ್‌ನ ಆಕ್ಲೆಂಡ್‌ಗೆ ಅಧಿಕೃತ ಭೇಟಿ ನೀಡಿದ್ದರು. 40 ವರ್ಷಗಳಲ್ಲಿ ಭಾರತದ ಪ್ರಧಾನಿಯೊಬ್ಬರು ನ್ಯೂಜಿಲೆಂಡ್‌ಗೆ ನೀಡುತ್ತಿರುವ ಮೊದಲ ಭೇಟಿ ಇದಾಗಿದ್ದು, ಇದು ಐತಿಹಾಸಿಕ ಮೈಲಿಗಲ್ಲೆಂದು ಗುರುತಿಸಲಾಗಿದೆ ಮತ್ತು ಎರಡೂ ರಾಷ್ಟ್ರಗಳ ನಡುವಿನ ಕಾಯಂ ಸ್ನೇಹ ಮತ್ತು ಪಾಲುದಾರಿಕೆಯಲ್ಲಿ ಹೊಸ ಹಾದಿಯನ್ನು ರೂಪಿಸುತ್ತದೆ.ಭಾರತ-ನ್ಯೂಜಿಲೆಂಡ್ ನಿಯೋಗ ಮಟ್ಟದ ಮಾತುಕತೆ ಸಂದರ್ಭದಲ್ಲಿ ಪ್ರಧಾನಮಂತ್ರಿ ಅವರ ಹೇಳಿಕೆ
July 11th, 07:00 am
ನಿಮ್ಮ ಸಚಿವರು ರಾತ್ರಿಯಿಡೀ ನನ್ನೊಂದಿಗೆ ಇದ್ದರು, ಅದಕ್ಕೂ ನಾನು ಕೃತಜ್ಞನಾಗಿದ್ದೇನೆ. 40 ವರ್ಷಗಳ ನಂತರ ಭಾರತದ ಪ್ರಧಾನ ಮಂತ್ರಿಯೊಬ್ಬರು ನ್ಯೂಜಿಲೆಂಡ್‌ಗೆ ಚೊಚ್ಚಲ ಭೇಟಿ ನೀಡುತ್ತಿರುವುದು ನನಗೆ ತುಂಬಾ ಸಂತೋಷದ ವಿಷಯ. ನಿಮ್ಮ ಆರ್ಥಿಕ ರಾಜಧಾನಿಯಲ್ಲಿ ಈ ಕಾರ್ಯಕ್ರಮ ಆಯೋಜಿಸುವ ಮೂಲಕ, ನೀವು ಭಾರತ-ನ್ಯೂಜಿಲೆಂಡ್ ಸಂಬಂಧಗಳಿಗೆ ಹೊಸ ಉತ್ತೇಜನ ನೀಡುವ ಅವಕಾಶ ಸೃಷ್ಟಿಸಿದ್ದೀರಿ. ಇದಕ್ಕಾಗಿ ನಾನು ನಿಮಗೆ ನನ್ನ ಹೃತ್ಪೂರ್ವಕ ಕೃತಜ್ಞತೆ ಸಲ್ಲಿಸುತ್ತೇನೆ.ಪ್ರಧಾನಿ ಮೋದಿ ಆಕ್ಲೆಂಡ್‌ಗೆ ಆಗಮಿಸಿದರು
July 10th, 02:56 pm
ಪ್ರಧಾನಿ ಮೋದಿ ಅವರನ್ನು ನ್ಯೂಜಿಲೆಂಡ್‌ನ ಆಕ್ಲೆಂಡ್‌ಗೆ ಆಗಮಿಸಿದರು, ಅಲ್ಲಿ ಅವರನ್ನು ಪ್ರಧಾನಿ ಕ್ರಿಸ್ಟೋಫರ್ ಲಕ್ಸನ್ ಅವರು ಆತ್ಮೀಯವಾಗಿ ಸ್ವಾಗತಿಸಿದರು.ಇಂಡೋನೇಷ್ಯಾ, ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್‌ಗೆ ಮೂರು ರಾಷ್ಟ್ರಗಳ ಅಧಿಕೃತ ಭೇಟಿಗೆ ತೆರಳುವ ಮುನ್ನ ಪ್ರಧಾನಮಂತ್ರಿ ಅವರ ಹೇಳಿಕೆ
July 06th, 09:00 am
ಇಂಡೋನೇಷ್ಯಾ ಗಣತಂತ್ರದ ಅಧ್ಯಕ್ಷ ಘನತೆವೆತ್ತ ಶ್ರೀ ಪ್ರಬೊವೊ ಸುಬಿಯಾಂಟೊ ಅವರ ಆಹ್ವಾನದ ಮೇರೆಗೆ ನಾನು ಜುಲೈ 6-8ರವರೆಗೆ ಇಂಡೋನೇಷ್ಯಾಕ್ಕೆ ಭೇಟಿ ನೀಡುತ್ತಿದ್ದೇನೆ. 2018ರಲ್ಲಿ ನಾನು ಇಂಡೋನೇಷ್ಯಾಕ್ಕೆ ನೀಡಿದ ಮೊದಲ ಭೇಟಿಯ ಸಂದರ್ಭದಲ್ಲಿ ಭಾರತ ಮತ್ತು ಇಂಡೋನೇಷ್ಯಾ ನಡುವಿನ ದ್ವಿಪಕ್ಷೀಯ ಸಂಬಂಧಗಳನ್ನು ಸಮಗ್ರ ಕಾರ್ಯತಂತ್ರದ ಸಹಭಾಗಿತ್ವದ ಮಟ್ಟಕ್ಕೆ ಏರಿಸಲಾಗಿತ್ತು. ನಮ್ಮ ದ್ವಿಪಕ್ಷೀಯ ಸಂಬಂಧಗಳ ಉನ್ನತಿಯ ನಂತರ ಇದು ನನ್ನ ಮೊದಲ ದ್ವಿಪಕ್ಷೀಯ ಭೇಟಿಯಾಗಿದೆ. 2025ರ ಜನವರಿ 26ರಂದು ನಮ್ಮ ಗಣರಾಜ್ಯೋತ್ಸವ ಆಚರಣೆಯಲ್ಲಿ ಮುಖ್ಯ ಅತಿಥಿಯಾಗಿದ್ದ ಅಧ್ಯಕ್ಷ ಪ್ರಬೋವೊ ಅವರ ಅಧಿಕೃತ ಭಾರತ ಭೇಟಿಯ ನಂತರ ಇದು ನನ್ನ ಮೊದಲ ದ್ವಿಪಕ್ಷೀಯ ಭೇಟಿಯಾಗಿದೆ. ಭಾರತ ಮತ್ತು ಇಂಡೋನೇಷ್ಯಾ ಬಲವಾದ ನಾಗರಿಕ ಮತ್ತು ಜನ ಸಂಬಂಧಗಳನ್ನು ಹಂಚಿಕೊಂಡಿವೆ. ನನ್ನ ಭೇಟಿಯು ನಮ್ಮ ಬಹುಮುಖಿ ಪಾಲುದಾರಿಕೆಯ ಎಲ್ಲಾ ಅಂಶಗಳನ್ನು ಮತ್ತಷ್ಟು ಗಾಢಗೊಳಿಸುತ್ತದೆ. ಈ ಭೇಟಿಯ ಸಮಯದಲ್ಲಿ, ನಾನು ಇಂಡೋನೇಷ್ಯಾದಲ್ಲಿರುವ ಭಾರತೀಯ ವಲಸಿಗರೊಂದಿಗೆ ಸಂವಾದ ನಡೆಸುತ್ತೇನೆ ಮತ್ತು ಅಧ್ಯಕ್ಷ ಪ್ರಬೋವೊ ಅವರೊಂದಿಗೆ ಯೋಗ್ಯಕರ್ತಾದಲ್ಲಿರುವ ಪ್ರಂಬನನ್ ದೇವಾಲಯ ಸಂಕೀರ್ಣಕ್ಕೆ ಭೇಟಿ ನೀಡಲಿದ್ದೇನೆ. ಈ ದೇವಾಲಯವು ನಮ್ಮ ನಿಕಟ ಸಾಂಸ್ಕೃತಿಕ ಸಂಬಂಧಗಳಿಗೆ ಮತ್ತೊಂದು ಗಮನಾರ್ಹ ಸಾಕ್ಷಿಯಾಗಿದೆ.ಇಂಡೋನೇಷ್ಯಾ, ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್‌ಗೆ ಪ್ರಧಾನಮಂತ್ರಿ ಭೇಟಿ
July 03rd, 08:42 pm
ಇಂಡೋನೇಷ್ಯಾ ಗಣರಾಜ್ಯದ ಅಧ್ಯಕ್ಷರಾದ ಘನತೆವೆತ್ತ ಶ್ರೀ ಪ್ರಬೋವೊ ಸುಬಿಯಾಂಟೊ ಅವರ ಆಹ್ವಾನದ ಮೇರೆಗೆ, ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಜುಲೈ 6-8, 2026 ರವರೆಗೆ ಇಂಡೋನೇಷ್ಯಾಕ್ಕೆ ಭೇಟಿ ನೀಡಲಿದ್ದಾರೆ. ಇದು ಇಂಡೋನೇಷ್ಯಾಕ್ಕೆ ಪ್ರಧಾನಮಂತ್ರಿಯವರ ನಾಲ್ಕನೇ ಭೇಟಿ ಮತ್ತು ಮೇ 2018ರಲ್ಲಿ ಭಾರತ-ಇಂಡೋನೇಷ್ಯಾ ಸಂಬಂಧಗಳು ಸಮಗ್ರ ಕಾರ್ಯತಂತ್ರದ ಪಾಲುದಾರಿಕೆಯ ಮಟ್ಟಕ್ಕೆ ಏರಿದ ನಂತರ ಅವರ ಮೊದಲ ದ್ವಿಪಕ್ಷೀಯ ಭೇಟಿಯಾಗಿದೆ. ಭೇಟಿಯ ಸಮಯದಲ್ಲಿ, ಪ್ರಧಾನಿಯವರು ಅಧ್ಯಕ್ಷ ಪ್ರಬೋವೊ ಅವರೊಂದಿಗೆ ದ್ವಿಪಕ್ಷೀಯ ಚರ್ಚೆಗಳನ್ನು ನಡೆಸಲಿದ್ದಾರೆ ಮತ್ತು ಪಾಲುದಾರಿಕೆಯಲ್ಲಿ ಆಗಿರುವ ಪ್ರಗತಿಯನ್ನು ಪರಿಶೀಲಿಸಲಿದ್ದಾರೆ.ವಿಶ್ವದ ಎಲ್ಲಾ ನಾಯಕರು ಮತ್ತು ನಾಗರಿಕರ ಆತ್ಮೀಯ ಹಾಗೂ ಹೃತ್ಪೂರ್ವಕವಾದ ಶುಭಾಶಯಗಳಿಗೆ ಪ್ರಧಾನಮಂತ್ರಿಯವರು ತಮ್ಮ ಕೃತಜ್ಞತೆಯನ್ನು ವ್ಯಕ್ತಪಡಿಸಿದ್ದಾರೆ
June 10th, 11:50 pm
ಪ್ರಧಾನಮಂತ್ರಿಯವರು ವಿಶ್ವದ ಎಲ್ಲಾ ನಾಯಕರು ಮತ್ತು ಎಲ್ಲಾ ವರ್ಗದ ಜನರಿಗೆ ಅವರ ಆತ್ಮೀಯ ಶುಭಾಶಯಗಳು ಮತ್ತು ಅಭಿನಂದನಾ ಸಂದೇಶಗಳಿಗಾಗಿ ತಮ್ಮ ಹೃತ್ಪೂರ್ವಕವಾದ ಕೃತಜ್ಞತೆಯನ್ನು ವ್ಯಕ್ತಪಡಿಸಿದ್ದಾರೆ. ಶುಭಾಶಯಗಳಿಂದ ತೀವ್ರವಾಗಿ ಪ್ರಭಾವಿತರಾದ ಅವರು, ಭಾರತಕ್ಕೆ ಸೇವೆ ಸಲ್ಲಿಸುವುದು ಮತ್ತು ರಾಷ್ಟ್ರದ ಅಭಿವೃದ್ಧಿಯ ಹಾದಿಯಲ್ಲಿ ಕೊಡುಗೆ ನೀಡುವುದು ತಮ್ಮ ಒಂದು ಸೌಭಾಗ್ಯ ಎಂದು ಹೇಳಿದರು. ಜನರ ನಂಬಿಕೆಯೇ ತಮ್ಮ ಶಕ್ತಿಯ ದೊಡ್ಡ ಮೂಲ ಎಂದು ಒತ್ತಿ ಹೇಳಿದ ಪ್ರಧಾನಿಯವರು, ವಿಕಸಿತ ಭಾರತದ ದೃಷ್ಟಿಕೋನವನ್ನು ಸಾಕಾರಗೊಳಿಸಲು, 140 ಕೋಟಿ ಭಾರತೀಯರ ಆಕಾಂಕ್ಷೆಗಳನ್ನು ಈಡೇರಿಸಲು ಮತ್ತು ಭಾರತದ ಜಾಗತಿಕ ಪಾಲುದಾರಿಕೆಗಳನ್ನು ಮತ್ತಷ್ಟು ಬಲಪಡಿಸಲು ಇನ್ನೂ ಹೆಚ್ಚಿನ ಸಮರ್ಪಣೆಯೊಂದಿಗೆ ಕೆಲಸ ಮಾಡುವ ತಮ್ಮ ಸಂಪೂರ್ಣ ಬದ್ಧತೆಯನ್ನು ಪುನರುಚ್ಚರಿಸಿದರು.ಭಾರತ-ನ್ಯೂಜಿಲೆಂಡ್ ಮುಕ್ತ ವ್ಯಾಪಾರ ಒಪ್ಪಂದವು ಮೈಲಿಗಲ್ಲಿನ ಕ್ಷಣವಾಗಿದ್ದು ಅಭಿವೃದ್ಧಿ ಪಾಲುದಾರಿಕೆಗೆ ಅಭೂತಪೂರ್ವ ವೇಗ ನೀಡಲಿದೆ - ಪ್ರಧಾನಮಂತ್ರಿ ಶ್ಲಾಘನೆ
April 27th, 05:32 pm
ಭಾರತ-ನ್ಯೂಜಿಲೆಂಡ್ ಮುಕ್ತ ವ್ಯಾಪಾರ ಒಪ್ಪಂದವು (ಎಫ್‌ಟಿಎ) ಉಭಯ ದೇಶಗಳ ನಡುವಿನ ಪಾಲುದಾರಿಕೆಯಲ್ಲಿ ಮೈಲಿಗಲ್ಲಿನ ಕ್ಷಣ ಎಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಶ್ಲಾಘಿಸಿದ್ದಾರೆ.ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ನ್ಯೂಜಿಲೆಂಡ್ ಪ್ರಧಾನಮಂತ್ರಿ ಅವರೊಂದಿಗೆ ದೂರವಾಣಿ ಮೂಲಕ ಸಮಾಲೋಚನೆ
December 22nd, 11:26 am
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ನ್ಯೂಜಿಲೆಂಡ್ ಪ್ರಧಾನಮಂತ್ರಿ ಗೌರವಾನ್ವಿತ ಕ್ರಿಸ್ಟೋಫರ್ ಲಕ್ಸನ್ ಅವರೊಂದಿಗೆ ದೂರವಾಣಿ ಸಮಾಲೋಚನೆ ನಡೆಸಿದರು. ಐತಿಹಾಸಿಕ, ಮಹತ್ವಾಕಾಂಕ್ಷೆಯ ಮತ್ತು ಪರಸ್ಪರ ಪ್ರಯೋಜನಕಾರಿಯಾಗಿರುವ ಭಾರತ-ನ್ಯೂಜಿಲೆಂಡ್ ಮುಕ್ತ ವ್ಯಾಪಾರ ಒಪ್ಪಂದದ (ಎಫ್.ಟಿ.ಎ) ಯಶಸ್ವಿಯಾಗಿ ಮುಕ್ತಾಯವಾಗಿರುವುದನ್ನು ಉಭಯ ನಾಯಕರು ಜಂಟಿಯಾಗಿ ಘೋಷಿಸಿದರು.PM Modi expresses gratitude to world leaders for birthday wishes
September 17th, 03:03 pm
The Prime Minister Shri Narendra Modi expressed his gratitude to the world leaders for greetings on his 75th birthday, today.ಈ ವಾರ ಭಾರತದ ಬಗ್ಗೆ ವಿಶ್ವ
March 26th, 12:06 pm
ಭಾರತವು ರಕ್ಷಣೆ ಮತ್ತು ತಂತ್ರಜ್ಞಾನದಿಂದ ಜಾಗತಿಕ ವ್ಯಾಪಾರ ಮತ್ತು ರಾಜತಾಂತ್ರಿಕತೆಯವರೆಗೆ ವಿವಿಧ ಕ್ಷೇತ್ರಗಳಲ್ಲಿ ಅಲೆಗಳನ್ನು ಸೃಷ್ಟಿಸುತ್ತಿದೆ. ಈ ವಾರ, ದೇಶವು ತನ್ನ ನೌಕಾ ಶಕ್ತಿಯನ್ನು ಬಲಪಡಿಸುತ್ತಿದೆ, ಭವಿಷ್ಯದ ಸಾರಿಗೆಯನ್ನು ಅಳವಡಿಸಿಕೊಳ್ಳುತ್ತಿದೆ ಮತ್ತು ಜಾಗತಿಕ ಪಾಲುದಾರರೊಂದಿಗೆ ಆರ್ಥಿಕ ಸಂಬಂಧಗಳನ್ನು ನಿರ್ಮಿಸುತ್ತಿದೆ.ರೈಸಿನಾ ಸಂವಾದ 2025ರಲ್ಲಿ ಪ್ರಧಾನಮಂತ್ರಿ ಭಾಗಿ
March 17th, 10:29 pm
ನವದೆಹಲಿಯಲ್ಲಿ ನಡೆದ ರೈಸಿನಾ ಸಂವಾದ 2025 ರಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಭಾಗವಹಿಸಿದರು.ಗುರುದ್ವಾರ ರಕಬ್ ಗಂಜ್ ಸಾಹಿಬ್ ಗೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಮತ್ತು ನ್ಯೂಜಿಲೆಂಡ್ ಪ್ರಧಾನಮಂತ್ರಿ ಕ್ರಿಸ್ಟೋಫರ್ ಲಕ್ಸನ್ ಭೇಟಿ
March 17th, 10:26 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಮತ್ತು ನ್ಯೂಜಿಲೆಂಡ್ ಪ್ರಧಾನಿ ಕ್ರಿಸ್ಟೋಫರ್ ಲಕ್ಸನ್ ಅವರು ನವದೆಹಲಿಯಲ್ಲಿ ಗುರುದ್ವಾರ ರಕಬ್ ಗಂಜ್ ಸಾಹಿಬ್ ಗೆ ಭೇಟಿ ನೀಡಿದರು. ಈ ಭೇಟಿಯ ಬಗ್ಗೆ ಕೆಲವು ನೋಟಗಳನ್ನು ಹಂಚಿಕೊಂಡಿರುವ ಶ್ರೀ ಮೋದಿ ಅವರು, ಸಿಖ್ ಸಮುದಾಯದ ಸೇವೆ ಮತ್ತು ಮಾನವೀಯತೆಗೆ ಅಚಲ ಬದ್ಧತೆಯು ಪ್ರಪಂಚದಾದ್ಯಂತ ಮೆಚ್ಚುಗೆಗೆ ಪಾತ್ರವಾಗಿದೆ ಎಂದು ಹೇಳಿದರು.