ಆಸ್ಟ್ರಿಯಾದ ಫೆಡರಲ್ ಚಾನ್ಸಲರ್ ಆಗಿ ಪ್ರಮಾಣ ವಚನ ಸ್ವೀಕರಿಸಿದ ಗೌರವಾನ್ವಿತ ಶ್ರೀ ಕ್ರಿಶ್ಚಿಯನ್ ಸ್ಟಾಕರ್ ಅವರನ್ನು ಪ್ರಧಾನಮಂತ್ರಿ ಅಭಿನಂದಿಸಿದರು
March 04th, 11:47 am
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಆಸ್ಟ್ರಿಯಾದ ಫೆಡರಲ್ ಚಾನ್ಸಲರ್ ಆಗಿ ಪ್ರಮಾಣ ವಚನ ಸ್ವೀಕರಿಸಿದ ಗೌರವಾನ್ವಿತ ಶ್ರೀ ಕ್ರಿಶ್ಚಿಯನ್ ಸ್ಟಾಕರ್ ಅವರನ್ನು ಅಭಿನಂದಿಸಿದರು. ಭಾರತ-ಆಸ್ಟ್ರಿಯಾ ವರ್ಧಿತ ಪಾಲುದಾರಿಕೆಯು ಮುಂಬರುವ ವರ್ಷಗಳಲ್ಲಿ ಸ್ಥಿರವಾದ ಪ್ರಗತಿಯನ್ನು ಸಾಧಿಸಲು ಸಜ್ಜಾಗಿದೆ ಎಂದು ಅವರು ಹೇಳಿದರು.