ಸೆಪ್ಟೆಂಬರ್ 25 ನವದೆಹಲಿಯ ಭಾರತ ಮಂಟಪದಲ್ಲಿ ನಡೆಯಲಿರುವ 'ವಿಶ್ವ ಆಹಾರ ಮೇಳ ಭಾರತ 2025' ಕಾರ್ಯಕ್ರಮದಲ್ಲಿ ಪ್ರಧಾನಮಂತ್ರಿ ಭಾಗವಹಿಸಲಿದ್ದಾರೆ

September 24th, 06:33 pm

'ಪ್ರಧಾನಮಂತ್ರಿ ಕಿರು ಆಹಾರ ಸಂಸ್ಕರಣಾ ಉದ್ದಿಮೆಗಳ ಔಪಚಾರೀಕರಣ' (PMFME) ಯೋಜನೆಯಡಿ, ಆಹಾರ ಸಂಸ್ಕರಣಾ ವಲಯದಲ್ಲಿನ ಸೂಕ್ಷ್ಮ ಯೋಜನೆಗಳಿಗಾಗಿ ಸುಮಾರು 26,000 ಫಲಾನುಭವಿಗಳಿಗೆ ₹770 ಕೋಟಿಗೂ ಅಧಿಕ ಮೊತ್ತದ ಸಾಲ-ಸಂಯೋಜಿತ ನೆರವನ್ನು ವಿತರಿಸಲಾಗುವುದು.

ನವದೆಹಲಿಯಲ್ಲಿ ಜ್ಞಾನ ಭಾರತಂ ಕುರಿತ ಅಂತಾರಾಷ್ಟ್ರೀಯ ಸಮ್ಮೇಳನವನ್ನುದ್ದೇಶಿಸಿ ಪ್ರಧಾನಮಂತ್ರಿ ಭಾಷಣ

September 12th, 04:54 pm

ಇಂದು ವಿಜ್ಞಾನ ಭವನವು ಭಾರತದ ಸುವರ್ಣ ಗತಕಾಲದ ಪುನರುಜ್ಜೀವನಕ್ಕೆ ಸಾಕ್ಷಿಯಾಗಿದೆ. ಕೆಲವು ದಿನಗಳ ಹಿಂದೆ, ನಾನು ಜ್ಞಾನ ಭಾರತಂ ಮಿಷನ್ ಅನ್ನು ಘೋಷಿಸಿದೆ. ಇಂದು ಇಷ್ಟು ಕಡಿಮೆ ಸಮಯದಲ್ಲಿ ನಾವು ಜ್ಞಾನ ಭಾರತಂ ಅಂತಾರಾಷ್ಟ್ರೀಯ ಸಮ್ಮೇಳನವನ್ನು ಆಯೋಜಿಸುತ್ತಿದ್ದೇವೆ. ಇದಕ್ಕೆ ಸಂಬಂಧಿಸಿದ ಪೋರ್ಟಲ್ ಅನ್ನು ಸಹ ಇತ್ತೀಚೆಗೆ ಪ್ರಾರಂಭಿಸಲಾಗಿದೆ. ಇದು ಸರ್ಕಾರಿ ಅಥವಾ ಶೈಕ್ಷಣಿಕ ಘಟನೆಯಲ್ಲ; ಜ್ಞಾನ ಭಾರತಂ ಆಂದೋಲನ ಭಾರತದ ಸಂಸ್ಕೃತಿ, ಸಾಹಿತ್ಯ ಮತ್ತು ಪ್ರಜ್ಞೆಯ ಘೋಷಣೆಯಾಗಲಿದೆ. ಸಾವಿರಾರು ತಲೆಮಾರುಗಳ ಆಲೋಚನೆಗಳು ಮತ್ತು ಚಿಂತನೆಗಳು, ಭಾರತದ ಮಹಾನ್ ಸಂತರು ಮತ್ತು ವಿದ್ವಾಂಸರ ಬುದ್ಧಿವಂತಿಕೆ ಮತ್ತು ಸಂಶೋಧನೆ, ನಮ್ಮ ಜ್ಞಾನ ಸಂಪ್ರದಾಯಗಳು, ನಮ್ಮ ವೈಜ್ಞಾನಿಕ ಪರಂಪರೆ, ನಾವು ಜ್ಞಾನ ಭಾರತಂ ಮಿಷನ್ ಮೂಲಕ ಅವುಗಳನ್ನು ಡಿಜಿಟಲೀಕರಣಗೊಳಿಸಲಿದ್ದೇವೆ. ಈ ಆಂದೋಲನಕ್ಕಾಗಿ ನಾನು ಎಲ್ಲಾ ದೇಶವಾಸಿಗಳನ್ನು ಅಭಿನಂದಿಸುತ್ತೇನೆ. ಜ್ಞಾನ ಭಾರತಂನ ಇಡೀ ತಂಡಕ್ಕೆ ಮತ್ತು ಸಂಸ್ಕೃತಿ ಸಚಿವಾಲಯಕ್ಕೆ ನಾನು ಶುಭ ಹಾರೈಸುತ್ತೇನೆ.

ನವದೆಹಲಿಯಲ್ಲಿ ನಡೆದ ಜ್ಞಾನ ಭಾರತಂ ಕುರಿತ ಅಂತರರಾಷ್ಟ್ರೀಯ ಸಮ್ಮೇಳನವನ್ನು ಉದ್ದೇಶಿಸಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಭಾಷಣ

September 12th, 04:45 pm

ನವದೆಹಲಿಯ ವಿಜ್ಞಾನ ಭವನದಲ್ಲಿ ಇಂದು ನಡೆದ ಜ್ಞಾನ ಭಾರತಂ ಕುರಿತ ಅಂತರರಾಷ್ಟ್ರೀಯ ಸಮ್ಮೇಳನವನ್ನು ಉದ್ದೇಶಿಸಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಮಾತನಾಡಿದರು. ಈ ಸಂದರ್ಭದಲ್ಲಿ ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿ, ವಿಜ್ಞಾನ ಭವನ ಇಂದು ಭಾರತದ ಸುವರ್ಣ ಗತಕಾಲದ ಪುನರುಜ್ಜೀವನಕ್ಕೆ ಸಾಕ್ಷಿಯಾಗುತ್ತಿದೆ ಎಂದು ಹೇಳಿದರು. ಕೆಲವೇ ದಿನಗಳ ಹಿಂದೆ ತಾವು ಜ್ಞಾನ ಭಾರತಂ ಮಿಷನ್ ಘೋಷಿಸಿದ್ದನ್ನು ಮತ್ತು ಇಷ್ಟು ಕಡಿಮೆ ಅವಧಿಯಲ್ಲಿ ಜ್ಞಾನ ಭಾರತಂ ಅಂತರರಾಷ್ಟ್ರೀಯ ಸಮ್ಮೇಳನವನ್ನು ಆಯೋಜಿಸಲಾಗುತ್ತಿರುವುದನ್ನು ಅವರು ಒತ್ತಿ ಹೇಳಿದರು. ಈ ಮಿಷನ್‌ಗೆ ಸಂಬಂಧಿಸಿದ ಪೋರ್ಟಲ್ ಸಹ ಪ್ರಾರಂಭಿಸಲಾಗಿದೆ ಎಂದು ಶ್ರೀ ಮೋದಿ ಮಾಹಿತಿ ನೀಡಿದರು. ಇದು ಸರ್ಕಾರಿ ಅಥವಾ ಶೈಕ್ಷಣಿಕ ಕಾರ್ಯಕ್ರಮವಲ್ಲ ಎಂದು ಹೇಳಿದ ಪ್ರಧಾನಮಂತ್ರಿ, ಜ್ಞಾನ ಭಾರತಂ ಮಿಷನ್ ಭಾರತದ ಸಂಸ್ಕೃತಿ, ಸಾಹಿತ್ಯ ಮತ್ತು ಪ್ರಜ್ಞೆಯ ಘೋಷಣೆಯಾಗಲಿದೆ ಎಂದೂ ಹೇಳಿದರು. ಸಾವಿರಾರು ತಲೆಮಾರುಗಳ ಚಿಂತನಶೀಲ ಪರಂಪರೆಯನ್ನು ಅವರು ಉಲ್ಲೇಖಿಸಿದರು. ಭಾರತದ ಮಹಾನ್ ಋಷಿಗಳು, ಆಚಾರ್ಯರು ಮತ್ತು ವಿದ್ವಾಂಸರ ಬುದ್ಧಿವಂತಿಕೆ ಮತ್ತು ಸಂಶೋಧನೆಯನ್ನು ಅವರು ಗುರುತಿಸಿದರು, ಭಾರತದ ಜ್ಞಾನ, ಸಂಪ್ರದಾಯಗಳು ಮತ್ತು ವೈಜ್ಞಾನಿಕ ಪರಂಪರೆಯನ್ನು ಒತ್ತಿ ಹೇಳಿದರು. ಜ್ಞಾನ ಭಾರತಂ ಮಿಷನ್ ಮೂಲಕ ಈ ಪರಂಪರೆಗಳನ್ನು ಡಿಜಿಟಲೀಕರಣಗೊಳಿಸಲಾಗುತ್ತಿದೆ ಎಂದು ಶ್ರೀ ಮೋದಿ ಹೇಳಿದರು. ಈ ಕಾರ್ಯಾಚರಣೆಗಾಗಿ ಅವರು ಎಲ್ಲಾ ನಾಗರಿಕರಿಗೆ ಅಭಿನಂದನೆಗಳನ್ನು ಸಲ್ಲಿಸಿದರು ಮತ್ತು ಇಡೀ ಜ್ಞಾನ ಭಾರತಂ ತಂಡ ಮತ್ತು ಸಂಸ್ಕೃತಿ ಸಚಿವಾಲಯಕ್ಕೆ ತಮ್ಮ ಶುಭಾಶಯಗಳನ್ನು ತಿಳಿಸಿದರು.

ಎಸ್.ಸಿ.ಒ. ಶೃಂಗಸಭೆಯ ಸಂದರ್ಭದಲ್ಲಿ ಮ್ಯಾನ್ಮಾರ್‌ ನ ರಾಷ್ಟ್ರೀಯ ಭದ್ರತೆ ಮತ್ತು ಶಾಂತಿ ಆಯೋಗದ ಅಧ್ಯಕ್ಷರಾದ ಹಿರಿಯ ಜನರಲ್ ಮಿನ್ ಆಂಗ್ ಹ್ಲೈಂಗ್ ಅವರನ್ನು ಪ್ರಧಾನಮಂತ್ರಿ ಅವರು ಭೇಟಿ ಮಾಡಿದರು

August 31st, 04:50 pm

ಟಿಯಾಂಜಿನ್‌ ನಲ್ಲಿ ನಡೆದ ಶಾಂಘೈ ಸಹಕಾರ ಸಂಸ್ಥೆಯ ಶೃಂಗಸಭೆಯ ಸಂದರ್ಭದಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಮ್ಯಾನ್ಮಾರ್‌ ನ ರಾಷ್ಟ್ರೀಯ ಭದ್ರತೆ ಮತ್ತು ಶಾಂತಿ ಆಯೋಗದ ಅಧ್ಯಕ್ಷರಾದ ಹಿರಿಯ ಜನರಲ್ ಮಿನ್ ಆಂಗ್ ಹ್ಲೈಂಗ್ ಅವರನ್ನು ಭೇಟಿಯಾದರು.

ತಿಯಾನ್ ಜಿನ್ ನಲ್ಲಿ ಚೀನಾ ಅಧ್ಯಕ್ಷರಾದ ಕ್ಸಿ ಜಿನ್ ಪಿಂಗ್ ಅವರೊಂದಿಗಿನ ದ್ವಿಪಕ್ಷೀಯ ಸಭೆಯಲ್ಲಿ ಪ್ರಧಾನಮಂತ್ರಿ ಅವರ ಹೇಳಿಕೆ

August 31st, 11:06 am

ನಿಮ್ಮ ಆತ್ಮೀಯ ಸ್ವಾಗತಕ್ಕೆ ನನ್ನ ಹೃತ್ಪೂರ್ವಕ ವಂದನೆಗಳು. ಕಜಾನ್ ನಲ್ಲಿ ಕಳೆದ ವರ್ಷ ನಾವು ನಡೆಸಿದ ಅರ್ಥಪೂರ್ಣ ಚರ್ಚೆಯು ನಮ್ಮ ಸಂಬಂಧಗಳಿಗೆ ಸಕಾರಾತ್ಮಕ ದಿಶೆಯನ್ನು ನೀಡಿದೆ. ಗಡಿಯಲ್ಲಿ ಯುದ್ಧದ ಸನ್ನಿವೇಶದಿಂದ ಹಿಂದಕ್ಕೆ ಸರಿದ ನಂತರ ಶಾಂತಿ ಮತ್ತು ಸ್ಥಿರತೆಯ ವಾತಾವರಣ ನೆಲೆಸಿದೆ. ನಮ್ಮ ವಿಶೇಷ ಪ್ರತಿನಿಧಿಗಳು ಗಡಿ ನಿರ್ವಹಣೆಯ ಕುರಿತು ಒಮ್ಮತದ ತಿಳುವಳಿಕೆ ಹೊಂದಿದ್ದಾರೆ. ಕೈಲಾಸ ಮಾನಸ ಸರೋವರ ಯಾತ್ರೆಯು ಪುನರಾರಂಭಗೊಂಡಿದೆ ಮತ್ತು ಎರಡೂ ದೇಶಗಳ ನಡುವೆ ನೇರ ವಿಮಾನ ಸೇವೆಯನ್ನೂ ಸಹ ಪ್ರಾರಂಭಿಸಲಾಗುತ್ತಿದೆ. ನಮ್ಮ ನಡುವಿನ ಸಹಕಾರವು ನಮ್ಮ ಎರಡೂ ರಾಷ್ಟ್ರಗಳ 2.8 ಶತಕೋಟಿ ಜನರ ಹಿತಾಸಕ್ತಿಗಳಿಗೆ ಸಂಬಂಧಿಸಿದೆ. ಇದು ಎಲ್ಲಾ ಮಾನವೀಯ ಕಲ್ಯಾಣಕ್ಕೂ ದಾರಿ ಮಾಡಿಕೊಡಲಿದೆ. ಪರಸ್ಪರ ನಂಬಿಕೆ, ಗೌರವ ಮತ್ತು ಸೂಕ್ಷ್ಮ ಭಾವನಾತ್ಮಕತೆಯ ಆಧಾರದ ಮೇಲೆ ನಮ್ಮ ಸಂಬಂಧಗಳನ್ನು ಇನ್ನಷ್ಟು ಬಲಪಡಿಸಲು ನಾವು ಬದ್ಧರಾಗಿದ್ದೇವೆ.

ಚೀನಾ ಅಧ್ಯಕ್ಷರಾದ ಕ್ಸಿ ಜಿನ್ಪಿಂಗ್ ಅವರೊಂದಿಗೆ ಪ್ರಧಾನಮಂತ್ರಿ ಅವರ ದ್ವಿಪಕ್ಷೀಯ ಮಾತುಕತೆ

August 31st, 11:00 am

ಆಗಸ್ಟ್ 31, 2025 ರಂದು ಟಿಯಾಂಜಿನ್ ನಲ್ಲಿ ನಡೆದ ಶಾಂಘೈ ಸಹಕಾರ ಸಂಸ್ಥೆಯ (ಎಸ್.ಸಿ.ಒ.) ನಾಯಕರ ಶೃಂಗಸಭೆಯ ಸಂದರ್ಭದಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಪೀಪಲ್ಸ್ ರಿಪಬ್ಲಿಕ್ ಆಫ್ ಚೀನಾದ ಅಧ್ಯಕ್ಷರಾದ ಶ್ರೀ ಕ್ಸಿ ಜಿನ್ಪಿಂಗ್ ಅವರನ್ನು ಭೇಟಿಯಾದರು.

ಪ್ರಧಾನಿ ಮೋದಿ ಅವರು ಚೀನಾದ ಟಿಯಾಂಜಿನ್‌ಗೆ ಆಗಮಿಸಿದರು

August 30th, 04:00 pm

ಪ್ರಧಾನಿ ನರೇಂದ್ರ ಮೋದಿ ಅವರು ಸ್ವಲ್ಪ ಸಮಯದ ಹಿಂದೆ ಚೀನಾಕ್ಕೆ ಆಗಮಿಸಿದರು. ಭೇಟಿಯ ಸಮಯದಲ್ಲಿ, ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರ ಆಹ್ವಾನದ ಮೇರೆಗೆ ಪ್ರಧಾನಿ ಅವರು ಟಿಯಾಂಜಿನ್‌ನಲ್ಲಿ ನಡೆಯುವ ಶಾಂಘೈ ಸಹಕಾರ ಸಂಸ್ಥೆಯ ಶೃಂಗಸಭೆಯಲ್ಲಿ ಭಾಗವಹಿಸಲಿದ್ದಾರೆ. ಶೃಂಗಸಭೆಯ ಸಂದರ್ಭದಲ್ಲಿ ಅವರು ಅಧ್ಯಕ್ಷ ಕ್ಸಿ ಜಿನ್‌ಪಿಂಗ್, ಅಧ್ಯಕ್ಷ ಪುಟಿನ್ ಮತ್ತು ಇತರ ನಾಯಕರನ್ನು ಭೇಟಿ ಮಾಡಲಿದ್ದಾರೆ.

ಪ್ರಧಾನಮಂತ್ರಿ ಅವರ ಜಪಾನ್ ಮತ್ತು ಚೀನಾ ದೇಶಗಳ ಭೇಟಿಯ ಮುನ್ನಾ ದಿನದಂದು ನೀಡಿರುವ ನಿರ್ಗಮನ ಹೇಳಿಕೆ

August 28th, 08:40 pm

ನನ್ನ ಭೇಟಿಯ ಸಮಯದಲ್ಲಿ, ಕಳೆದ ಹನ್ನೊಂದು ವರ್ಷಗಳಲ್ಲಿ ಆಗಿರುವ ಸ್ಥಿರತೆ ಕುರಿತು ಮತ್ತು ಗಮನಾರ್ಹ ಪ್ರಗತಿಯನ್ನು ಸಾಧಿಸಿರುವ ನಮ್ಮ ವಿಶೇಷ ಕಾರ್ಯತಂತ್ರ ಮತ್ತು ಜಾಗತಿಕ ಪಾಲುದಾರಿಕೆಯಲ್ಲಿ ಮುಂದಿನ ಹಂತವನ್ನು ರೂಪಿಸುವತ್ತ ನಾವು ಗಮನಹರಿಸುತ್ತೇವೆ. ನಮ್ಮ ಸಹಯೋಗಕ್ಕೆ ಹೊಸ ರೆಕ್ಕೆ ಹಾಗೂ ಆಯಾಮಗಳನ್ನು ನೀಡಲು, ನಮ್ಮ ಆರ್ಥಿಕ ಮತ್ತು ಹೂಡಿಕೆ ಸಂಬಂಧಗಳ ವ್ಯಾಪ್ತಿ ಮತ್ತು ಮಹತ್ವಾಕಾಂಕ್ಷೆಯನ್ನು ವಿಸ್ತರಿಸಲು ಮತ್ತು ಕೃತಕ ಬುದ್ಧಿಮತ್ತೆ (ಎಐ)ಮತ್ತು ಸೆಮಿಕಂಡಕ್ಟರ್‌ ಗಳು ಸೇರಿದಂತೆ ಹೊಸ ಮತ್ತು ಉದಯೋನ್ಮುಖ ತಂತ್ರಜ್ಞಾನಗಳಲ್ಲಿ ಸಹಕಾರವನ್ನು ಮುನ್ನಡೆಸಲು ನಾವು ಪ್ರಯತ್ನಿಸುತ್ತೇವೆ. ಈ ಭೇಟಿಯು ನಮ್ಮ ನಾಗರಿಕತೆಯ ಪರಸ್ಪರ ಬಂಧಗಳು ಮತ್ತು ನಮ್ಮ ಜನರನ್ನು ಸಂಪರ್ಕಿಸುವ ಸಾಂಸ್ಕೃತಿಕ ಸಂಬಂಧಗಳನ್ನು ಬಲಪಡಿಸಲು ಒಂದು ಅವಕಾಶವಾಗಿದೆ.

ಜಪಾನ್ ಮತ್ತು ಚೀನಾಕ್ಕೆ ಪ್ರಧಾನ ಮಂತ್ರಿಗಳ ಭೇಟಿ

August 22nd, 06:15 pm

ಜಪಾನ್ ಪ್ರಧಾನಿ ಶಿಗೇರು ಇಶಿಬಾ ಮತ್ತು ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರ ಆಹ್ವಾನದ ಮೇರೆಗೆ ಪ್ರಧಾನಿ ಮೋದಿ ಅವರು ಆಗಸ್ಟ್ 29–30, 2025 ರವರೆಗೆ ಜಪಾನ್‌ಗೆ ಮತ್ತು ಆಗಸ್ಟ್ 31–1, 2025 ರವರೆಗೆ ಚೀನಾಕ್ಕೆ ಭೇಟಿ ನೀಡಲಿದ್ದಾರೆ. ಜಪಾನ್‌ನಲ್ಲಿ, ಪ್ರಧಾನಿಯವರು 15 ನೇ ಭಾರತ-ಜಪಾನ್ ವಾರ್ಷಿಕ ಶೃಂಗಸಭೆಯಲ್ಲಿ ಭಾಗವಹಿಸಲಿದ್ದಾರೆ ಮತ್ತು ಜಪಾನಿನ ಪ್ರಧಾನಿ ಇಶಿಬಾ ಅವರೊಂದಿಗೆ ಚರ್ಚೆ ನಡೆಸಲಿದ್ದಾರೆ. ಚೀನಾದಲ್ಲಿ, ಪ್ರಧಾನಿಯವರು ಟಿಯಾಂಜಿನ್‌ನಲ್ಲಿ ಶಾಂಘೈ ಸಹಕಾರ ಸಂಸ್ಥೆ (ಎಸ್‌ಸಿಒ) ಶೃಂಗಸಭೆಯಲ್ಲಿ ಭಾಗವಹಿಸಲಿದ್ದಾರೆ.

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದ ಚೀನಾ ವಿದೇಶಾಂಗ ಸಚಿವರಾದ ವಾಂಗ್ ಯಿ

August 19th, 07:34 pm

ಇಂದು, ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಚೀನಾದ ಕಮ್ಯುನಿಸ್ಟ್ ಪಕ್ಷದ ಪಾಲಿಟ್‌ ಬ್ಯೂರೊ ಸದಸ್ಯ ಹಾಗೂ ವಿದೇಶಾಂಗ ಸಚಿವರಾದ ಶ್ರೀ ವಾಂಗ್ ಯಿ ಅವರನ್ನು ಬರಮಾಡಿಕೊಂಡರು.

ಎಎಸ್ ಪಿಐಯ ಕ್ರಿಟಿಕಲ್ ಟೆಕ್ನಾಲಜಿ ಟ್ರ್ಯಾಕರ್‌ನಲ್ಲಿ ಅಗ್ರ ಐದು ರಾಷ್ಟ್ರಗಳಲ್ಲಿ ಭಾರತದ ಸ್ಥಾನವನ್ನು ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಶ್ಲಾಘಿಸಿದ್ದಾರೆ

October 03rd, 07:35 pm

ಎಎಸ್ ಪಿಐ ಕ್ರಿಟಿಕಲ್ ಟೆಕ್ನಾಲಜಿ ಟ್ರ್ಯಾಕರ್ ಪ್ರಕಾರ 64 ತಂತ್ರಜ್ಞಾನಗಳಲ್ಲಿ 45 ಕ್ಕೆ ಬಂದಾಗ ಭಾರತವು ಈಗ ಅಗ್ರ ಐದು ರಾಷ್ಟ್ರಗಳಲ್ಲಿ ಸ್ಥಾನ ಪಡೆದಿದೆ. ಅಧ್ಯಯನವು ವೈಜ್ಞಾನಿಕ ಮತ್ತು ಸಂಶೋಧನಾ ಪ್ರಗತಿಯ ಓಟ ಮತ್ತು ಜಾಗತಿಕ ಪ್ರತಿಭೆಯನ್ನು ಉಳಿಸಿಕೊಳ್ಳುವ ಸಾಮರ್ಥ್ಯ ಸೇರಿದಂತೆ ನಿರ್ಣಾಯಕ ತಂತ್ರಜ್ಞಾನಗಳ ಅಭಿವೃದ್ಧಿಯನ್ನು ಟ್ರ್ಯಾಕ್ ಮಾಡುತ್ತದೆ. ಅಧ್ಯಯನವು ವಿಶ್ವದ ಪ್ರಮುಖ ತಂತ್ರಜ್ಞಾನಗಳ ಅಭಿವೃದ್ಧಿ ಮತ್ತು ನಿಯಂತ್ರಣಕ್ಕೆ ಆಧಾರವಾಗಿರುವ ನಿರ್ಣಾಯಕ ಅಂಶಗಳನ್ನು ದಾಖಲಿಸುತ್ತದೆ ಮತ್ತು ಅದು ದೇಶದ ಆರ್ಥಿಕ ಪರಾಕ್ರಮವನ್ನು ಹೇಗೆ ಅಳೆಯುತ್ತದೆ.

​​​​​​​ಏಷ್ಯನ್ ಪ್ಯಾರಾ ಗೇಮ್ಸ್ 2022 ರಲ್ಲಿ ಭಾಗವಹಿಸಿದ ಭಾರತೀಯ ಅಥ್ಲೀಟ್‌ಗಳ ತಂಡದೊಂದಿಗೆ ನವೆಂಬರ್ 1 ರಂದು ಸಂವಾದ ನಡೆಸಲಿರುವ ಮತ್ತು ಅವರನ್ನು ಉದ್ದೇಶಿಸಿ ಮಾತನಾಡಲಿರುವ ಪ್ರಧಾನಮಂತ್ರಿಯವರು

October 31st, 05:04 pm

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ನವೆಂಬರ್ 1, 2023 ರಂದು ನವದೆಹಲಿಯ ಮೇಜರ್ ಧ್ಯಾನ್ ಚಂದ್ ರಾಷ್ಟ್ರೀಯ ಕ್ರೀಡಾಂಗಣದಲ್ಲಿ ಸಂಜೆ ಸುಮಾರು 4:30 ಕ್ಕೆ ಭಾರತದ ಏಷ್ಯನ್ ಪ್ಯಾರಾ ಗೇಮ್ಸ್ ತಂಡದೊಂದಿಗೆ ಸಂವಾದ ನಡೆಸಲಿದ್ದಾರೆ ಮತ್ತು ಕ್ರೀಡಾಳುಗಳನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.

Prime Minister Narendra Modi lauds Indias extraordinary performance at Asian Para Games

October 28th, 11:13 pm

The Prime Minister, Shri Narendra Modi has lauded India’s extraordinary performance at Asian Para Games with the medal tally of 111. Shri Modi hailed the unwavering dedication and indomitable spirit of the athletes.

PM congratulates Kishan Gangoli for winning bronze in chess at Asian Para Games

October 28th, 08:48 pm

The Prime Minister, Shri Narendra Modi, congratulated Kishan Gangoli for winning a bronze medal in the men's chess B2 category at the Hangzhou Asian Para Games today.

PM congratulates Himanshi Rathi, Sanskruti More, Vruthi Jain for winning bronze in chess at Asian Para Games

October 28th, 08:45 pm

The Prime Minister, Shri Narendra Modi, congratulated Himanshi Rathi, Sanskruti More and Vruthi Jain for winning a bronze medal in the women's chess B1 category team at the Hangzhou Asian Para Games today.

PM congratulates Kishan Gangoli, Aryan Joshi, Somendra for winning bronze in chess at Asian Para Games

October 28th, 08:44 pm

The Prime Minister, Shri Narendra Modi, congratulated Kishan Gangoli, Aryan Joshi and Somendra for winning a bronze medal in the men's chess B2 category team at the Hangzhou Asian Para Games today.

ಏಷ್ಯನ್ ಪ್ಯಾರಾ ಗೇಮ್ಸ್ ನ ಚೆಸ್ ನಲ್ಲಿ ಕಂಚಿನ ಪದಕ ಗೆದ್ದ ಅಶ್ವಿನ್ ಮಕ್ವಾನಾ ಅವರನ್ನು ಪ್ರಧಾನಮಂತ್ರಿ ಅಭಿನಂದಿಸಿದರು

October 28th, 08:38 pm

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಇಂದು ಹಾಂಗ್ ಝೌ ಏಷ್ಯನ್ ಪ್ಯಾರಾ ಗೇಮ್ಸ್ ನ ಪುರುಷರ ಚೆಸ್ ಬಿ1 ವಿಭಾಗದಲ್ಲಿ ಕಂಚಿನ ಪದಕ ಗೆದ್ದ ಅಶ್ವಿನ್ ಮಕ್ವಾನಾ ಅವರನ್ನು ಅಭಿನಂದಿಸಿದರು.

PM congratulates Pooja for winning bronze in women's 1500m T-20 at Asian Para Games

October 28th, 08:35 pm

The Prime Minister, Shri Narendra Modi, congratulated Pooja for winning a bronze medal in the women's 1500m T-20 event at the Hangzhou Asian Para Games today.

PM congratulates Tek Chand Mahlawat for winning bronze in javeline throw at Asian Para Games

October 28th, 08:32 pm

The Prime Minister, Shri Narendra Modi, congratulated Tek Chand Mahlawat for winning a bronze medal in the men's javeline throw-F55 at the Hangzhou Asian Para Games today.

​​​​​​​ಏಷ್ಯನ್ ಪ್ಯಾರಾ ಗೇಮ್ಸ್ ಚೆಸ್ ನಲ್ಲಿ ಚಿನ್ನ ಗೆದ್ದ ದರ್ಪಣ್ ಇನಾನಿಗೆ ಪ್ರಧಾನಿ ಅಭಿನಂದನೆ

October 28th, 11:50 am

ಹಾಂಗ್ ಝೌ ಏಷ್ಯನ್ ಪ್ಯಾರಾ ಗೇಮ್ಸ್ ನಲ್ಲಿ ಪುರುಷರ ಚೆಸ್ ವಿಭಾಗದಲ್ಲಿ ಇಂದು ಚಿನ್ನದ ಪದಕ ಗೆದ್ದ ದರ್ಪಣ್ ಇನಾನಿ ಅವರನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಅಭಿನಂದಿಸಿದರು.