Tiruchirappalli turns out in huge numbers for PM Modi’s public meeting
March 11th, 06:00 pm
At a massive public meeting in Tamil Nadu’s Tiruchirappalli, Prime Minister Narendra Modi hailed Tiruchirappalli as a land of courage and faith, recalling the bravery of the Marudu Brothers and paying tribute to Major M. Saravanan for his sacrifice during the Kargil War. “Trichy is a land of courage and faith,” he said, adding that the Centre proudly honours Tamil Nadu’s culture and heritage. He also highlighted that C. P. Radhakrishnan, a son of the state, serves as the Vice President of India.ತಮಿಳುನಾಡಿನ ತಿರುಚಿರಾಪಳ್ಳಿಯಲ್ಲಿ ಬಹು ಅಭಿವೃದ್ಧಿ ಯೋಜನೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ಕಾರ್ಯಕ್ರಮ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
March 11th, 05:45 pm
ಈ ಅದ್ಭುತ ನಗರ ತಿರುಚಿಯಲ್ಲಿ ಇರುವುದು ನನಗೆ ತುಂಬಾ ಸಂತೋಷ ನೀಡುತ್ತಿದೆ. ಇಂದಿನ ಕಾರ್ಯಕ್ರಮವು ತಮಿಳುನಾಡಿನ ಭವಿಷ್ಯಕ್ಕೆ ಮಹತ್ವದ್ದಾಗಿದೆ. ಇದು 5 ಸಾವಿರದ 600 ಕೋಟಿ ರೂಪಾಯಿ ಮೊತ್ತದ ಯೋಜನೆಗಳಿಗೆ ಸಂಬಂಧಿಸಿದೆ. ಈ ಯೋಜನೆಗಳು: ಸ್ವಚ್ಛ ಇಂಧನಕ್ಕಾಗಿ ಮೂಲಸೌಕರ್ಯ, ಪೆಟ್ರೋಲಿಯಂ ಸಂಬಂಧಿತ ಉತ್ಪಾದನೆ, ಹೆದ್ದಾರಿಗಳು, ರೈಲ್ವೆಗಳು ಮತ್ತು ಗ್ರಾಮೀಣ ರಸ್ತೆ ಯೋಜನೆಗಳಾಗಿವೆ. ಅವು ಇಂಧನ ಪ್ರವೇಶ, ಸಂಪರ್ಕವನ್ನು ಹೆಚ್ಚಿಸುತ್ತವೆ ಮತ್ತು ತಮಿಳುನಾಡಿನ ಯುವಕರಿಗೆ ಸಾವಿರಾರು ಉದ್ಯೋಗಗಳನ್ನು ಸೃಷ್ಟಿಸುತ್ತವೆ.ತಮಿಳುನಾಡಿನ ತಿರುಚಿರಾಪಳ್ಳಿಯಲ್ಲಿ ಸುಮಾರು ₹5,650 ಕೋಟಿ ಮೌಲ್ಯದ ಬಹು ಅಭಿವೃದ್ಧಿ ಯೋಜನೆಗಳನ್ನು ಉದ್ಘಾಟಿಸಿ, ರಾಷ್ಟ್ರಕ್ಕೆ ಸಮರ್ಪಿಸಿ, ಶಿಲಾನ್ಯಾಸ ಮಾಡಿ, ಹಸಿರು ನಿಶಾನೆ ತೋರಿಸಿದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ
March 11th, 05:30 pm
ತಮಿಳುನಾಡಿನ ಮೂಲಸೌಕರ್ಯ ಮತ್ತು ಆರ್ಥಿಕತೆಯನ್ನು ಬಲಪಡಿಸುವ ಗುರಿಯನ್ನು ಹೊಂದಿರುವ ಪರಿವರ್ತನಾತ್ಮಕ ಅಭಿವೃದ್ಧಿ ಯೋಜನೆಗಳ ಸರಣಿಯನ್ನು ಉದ್ಘಾಟಿಸಲು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಇಂದು ಐತಿಹಾಸಿಕ ನಗರವಾದ ತಿರುಚ್ಚಿಗೆ ಭೇಟಿ ನೀಡಿದರು. ಒಟ್ಟು ಐದು ಸಾವಿರದ ಆರುನೂರು ಕೋಟಿ ರೂಪಾಯಿಗಳ ಹೂಡಿಕೆಯೊಂದಿಗೆ, ಈ ಉಪಕ್ರಮಗಳು ಶುದ್ಧ ಇಂಧನ, ಪೆಟ್ರೋಲಿಯಂ ಸಂಬಂಧಿತ ಉತ್ಪಾದನೆ ಮತ್ತು ಹೆದ್ದಾರಿಗಳು, ರೈಲ್ವೆಗಳು ಮತ್ತು ಗ್ರಾಮೀಣ ರಸ್ತೆಗಳ ಮೂಲಕ ವರ್ಧಿತ ಬಹು-ಮಾದರಿ ಸಂಪರ್ಕ ವಿಸ್ತರಣೆಯ ಉದ್ದೇಶಗಳನ್ನು ಒಳಗೊಂಡಿವೆ. ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿ, ಈ ಯೋಜನೆಗಳು ಇಂಧನ ಲಭ್ಯತೆ ಸಂಪರ್ಕವನ್ನು ಹೆಚ್ಚಿಸುತ್ತವೆ ಮತ್ತು ತಮಿಳುನಾಡಿನ ಯುವಜನರಿಗೆ ಸಾವಿರಾರು ಉದ್ಯೋಗಗಳನ್ನು ಸೃಷ್ಟಿಸುತ್ತವೆ ಎಂದು ಒತ್ತಿ ಹೇಳಿದರು.ಮಾರ್ಚ್ 11 ರಂದು ಕೇರಳ ಮತ್ತು ತಮಿಳುನಾಡಿಗೆ ಪ್ರಧಾನಮಂತ್ರಿ ಭೇಟಿ
March 09th, 09:54 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2026ರ ಮಾರ್ಚ್ 11 ರಂದು ಕೇರಳ ಮತ್ತು ತಮಿಳುನಾಡಿಗೆ ಭೇಟಿ ನೀಡಲಿದ್ದಾರೆ. ಮಧ್ಯಾಹ್ನ 1:30ರ ಸುಮಾರಿಗೆ, ಪ್ರಧಾನ ಮಂತ್ರಿಗಳು ಕೇರಳದ ಎರ್ನಾಕುಲಂನಲ್ಲಿ ಸುಮಾರು ₹10,800 ಕೋಟಿ ಮೌಲ್ಯದ ಬಹು ಅಭಿವೃದ್ಧಿ ಯೋಜನೆಗಳನ್ನು ಉದ್ಘಾಟಿಸಿ, ರಾಷ್ಟ್ರಕ್ಕೆ ಸಮರ್ಪಿಸಿ, ಶಿಲಾನ್ಯಾಸ ನೆರವೇರಿಸುತ್ತಾರೆ ಮತ್ತು ಕಾಮಗಾರಿಗೆ ಚಾಲನೆ ನೀಡಲಿದ್ದಾರೆ. ಕಾರ್ಯಕ್ರಮದ ಸಂದರ್ಭದಲ್ಲಿ ಪ್ರಧಾನ ಮಂತ್ರಿಗಳು ಸಭೆಯನ್ನುದ್ದೇಶಿಸಿ ಮಾತನಾಡಲಿದ್ದಾರೆ. ನಂತರ ಸಂಜೆ 5:45ರ ಸುಮಾರಿಗೆ, ಪ್ರಧಾನಮಂತ್ರಿಗಳು ತಮಿಳುನಾಡಿನ ತಿರುಚಿರಾಪಳ್ಳಿಯಲ್ಲಿ ಸುಮಾರು ₹5,650 ಕೋಟಿ ಮೌಲ್ಯದ ಬಹು ಅಭಿವೃದ್ಧಿ ಯೋಜನೆಗಳನ್ನು ಉದ್ಘಾಟಿಸಿ, ರಾಷ್ಟ್ರಕ್ಕೆ ಸಮರ್ಪಿಸಿ, ಶಿಲಾನ್ಯಾಸ ನೆರವೇರಿಸಲಿದ್ದಾರೆ. ಈ ಸಂದರ್ಭದಲ್ಲಿ ಪ್ರಧಾನಮಂತ್ರಿಗಳು ಸಭೆಯನ್ನುದ್ದೇಶಿಸಿ ಮಾತನಾಡಲಿದ್ದಾರೆ.ಪುದುಚೇರಿಯಲ್ಲಿ ವಿವಿಧ ಅಭಿವೃದ್ಧಿ ಯೋಜನೆಗಳ ಉದ್ಘಾಟನೆಯ ಸಂದರ್ಭದಲ್ಲಿ ಪ್ರಧಾನಮಂತ್ರಿ ಅವರ ಭಾಷಣ
March 01st, 12:00 pm
ಪುದುಚೇರಿಯ ಮುಖ್ಯಮಂತ್ರಿ ಶ್ರೀ ಎನ್. ರಂಗಸ್ವಾಮಿ ಅವರೇ, ನನ್ನ ಕೇಂದ್ರ ಸಚಿವ ಸಂಪುಟದ ಸಹೋದ್ಯೋಗಿ ಶ್ರೀ ಮನ್ಸುಖ್ ಮಾಂಡವೀಯ ಅವರೇ, ಪುದುಚೇರಿಯ ಲೆಫ್ಟಿನೆಂಟ್ ಗವರ್ನರ್ ಶ್ರೀ ಕೆ. ಕೈಲಾಸನಾಥನ್ ಅವರೇ, ಸಭಾಪತಿ ಶ್ರೀ ಆರ್. ಸೆಲ್ವಂ ಅವರೇ, ಗೃಹ ಸಚಿವ ಶ್ರೀ ಎ. ನಮಶಿವಾಯಂ ಅವರೇ, ಇತರ ನಾಯಕರೇ, ಪುದುಚೇರಿಯ ನನ್ನ ಪ್ರೀತಿಯ ಸಹೋದರ ಸಹೋದರಿಯರೇ, ವಣಕ್ಕಂ!ಪುದುಚೇರಿಯಲ್ಲಿ 2,700 ಕೋಟಿ ರೂಪಾಯಿಗಳಿಗೂ ಅಧಿಕ ಮೌಲ್ಯದ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಚಾಲನೆ, ರಾಷ್ಟ್ರಕ್ಕೆ ಸಮರ್ಪಣೆ ಮತ್ತು ಶಂಕುಸ್ಥಾಪನೆ ನೆರವೇರಿಸಿದರು
March 01st, 11:45 am
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಪುದುಚೇರಿಯಲ್ಲಿ 2,700 ಕೋಟಿ ರೂಪಾಯಿಗೂ ಅಧಿಕ ಮೌಲ್ಯದ ವಿವಿಧ ಅಭಿವೃದ್ಧಿ ಯೋಜನೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸಿದರು. ಜನರ ಜೀವನವನ್ನು ಪರಿವರ್ತಿಸುವ ನಿಟ್ಟಿನಲ್ಲಿ ಮೂಲಸೌಕರ್ಯ, ಶಿಕ್ಷಣ, ಆರೋಗ್ಯ ಮತ್ತು ಸಂಚಾರ ಸೇರಿದಂತೆ ಪ್ರಮುಖ ವಲಯಗಳನ್ನು ಈ ಯೋಜನೆಗಳು ಒಳಗೊಂಡಿವೆ.ಮಹಾರಾಷ್ಟ್ರದಲ್ಲಿ ₹19,142 ಕೋಟಿ ವೆಚ್ಚದ 374 ಕಿ.ಮೀ. ಉದ್ದದ ಷಟ್ಪಥ ಹಸಿರು ವಲಯ ಪ್ರವೇಶ ನಿಯಂತ್ರಿತ ನಾಸಿಕ್ – ಸೋಲಾಪುರ-ಅಕ್ಕಲಕೋಟ್ ಕಾರಿಡಾರ್ ನಿರ್ಮಾಣಕ್ಕೆ ಸಂಪುಟದ ಅನುಮೋದನೆ
December 31st, 03:06 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿಂದು ನಡೆದ ಆರ್ಥಿಕ ವ್ಯವಹಾರಗಳ ಕುರಿತ ಸಂಪುಟ ಸಮಿತಿಯು ಮಹಾರಾಷ್ಟ್ರದಲ್ಲಿ ಷಟ್ಪಥದ ಹಸಿರು ವಲಯ ಪ್ರವೇಶ ನಿಯಂತ್ರಿತ ನಾಸಿಕ್ – ಸೋಲಾಪುರ-ಅಕ್ಕಲಕೋಟ್ ಕಾರಿಡಾರ್ ಅನ್ನು ಒಟ್ಟು ₹19,142 ಕೋಟಿ ಬಂಡವಾಳ ವೆಚ್ಚದಲ್ಲಿ 374 ಕಿ.ಮೀ. ಉದ್ದದ ಯೋಜನಾ ಮಾದರಿಯಲ್ಲಿ ನಿರ್ಮಿಸಲು ಅನುಮೋದನೆ ನೀಡಿದೆ. ಈ ಯೋಜನೆಯು ಪ್ರಮುಖ ಪ್ರಾದೇಶಿಕ ನಗರಗಳಾದ ನಾಸಿಕ್, ಅಹಿಲ್ಯಾನಗರ, ಸೋಲಾಪುರಕ್ಕೆ ಸಂಪರ್ಕ ಕಲ್ಪಿಸುತ್ತದೆ ಮತ್ತು ನಕ್ಷೆಯಲ್ಲಿ ಸೂಚಿಸಿರುವಂತೆ ಕರ್ನೂಲ್ ಗೆ ಸಂಪರ್ಕ ಕಲ್ಪಿಸಲಿದೆ. ಈ ಮೂಲಸೌಕರ್ಯವು ಪ್ರಧಾನಮಂತ್ರಿ ಗತಿಶಕ್ತಿ ರಾಷ್ಟ್ರೀಯ ಮಾಸ್ಟರ್ ಪ್ಲಾನ್ ತತ್ವದ ಅಡಿಯಲ್ಲಿ ಸಮಗ್ರ ಸಾರಿಗೆ ಮೂಲಸೌಕರ್ಯ ಅಭಿವೃದ್ಧಿಗೆ ಅನುಕೂಲವಾಗುವಂತೆ ಮಹತ್ವದ ಹೆಜ್ಜೆಯಾಗಿದೆ.ತಮಿಳುನಾಡಿನ ಚೆನ್ನೈನಲ್ಲಿ ಕಟ್ಟಡ ಕುಸಿತದಿಂದಾಗಿ ಉಂಟಾದ ಜೀವ ಹಾನಿಗೆ ಪ್ರಧಾನಮಂತ್ರಿ ಸಂತಾಪ
September 30th, 09:48 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ತಮಿಳುನಾಡಿನ ಚೆನ್ನೈನಲ್ಲಿ ಕಟ್ಟಡವೊಂದು ಕುಸಿದು ಬಿದ್ದು ಸಂಭವಿಸಿದ ಜೀವಹಾನಿಗೆ ತೀವ್ರ ದುಃಖ ವ್ಯಕ್ತಪಡಿಸಿದ್ದಾರೆ. ಈ ಅವಘಡದಲ್ಲಿ ಗಾಯಗೊಂಡವರು ಶೀಘ್ರ ಚೇತರಿಸಿಕೊಳ್ಳಲಿ ಎಂದು ಶ್ರೀ ಮೋದಿ ಅವರು ಹಾರೈಸಿದ್ದಾರೆ.ತಮಿಳುನಾಡಿನ ತೂತುಕುಡಿಯಲ್ಲಿ ಅಭಿವೃದ್ಧಿ ಕಾರ್ಯಗಳ ಉದ್ಘಾಟನೆ ಸಮಾರಂಭ ಉದ್ದೇಶಿಸಿ ಪ್ರಧಾನಮಂತ್ರಿ ಭಾಷಣ
July 26th, 08:16 pm
ತಮಿಳುನಾಡು ರಾಜ್ಯಪಾಲರಾದ ಗೌರವಾನ್ವಿತ ಆರ್.ಎನ್. ರವಿ ಜಿ, ನನ್ನ ಸಂಪುಟ ಸಹೋದ್ಯೋಗಿಗಳಾದ ಕಿಂಜರಾಪು ರಾಮಮೋಹನ್ ನಾಯ್ಡು ಜಿ, ಡಾ. ಎಲ್. ಮುರುಗನ್ ಜಿ, ತಮಿಳುನಾಡು ಸಚಿವರಾದ ತಂಗಂ ತೆನ್ನರಸು ಜಿ, ಡಾ. ಟಿ.ಆರ್.ಬಿ. ರಾಜಾ ಜಿ, ಪಿ. ಗೀತಾ ಜೀವನ್ ಜಿ, ಅನಿತಾ ಆರ್. ರಾಧಾಕೃಷ್ಣನ್ ಜಿ, ಸಂಸದೆ ಕನಿಮೊಳಿ ಜಿ, ತಮಿಳುನಾಡು ಬಿಜೆಪಿ ಅಧ್ಯಕ್ಷರು ಮತ್ತು ನಮ್ಮ ಶಾಸಕರಾದ ನಾಯನಾರ್ ನಾಗೇಂದ್ರನ್ ಜಿ, ಮತ್ತು ತಮಿಳುನಾಡಿನ ನನ್ನ ಸಹೋದರ ಸಹೋದರಿಯರೆ!ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ತಮಿಳುನಾಡಿನ ತೂತುಕುಡಿಯಲ್ಲಿ ₹4800 ಕೋಟಿಗೂ ಹೆಚ್ಚು ಮೌಲ್ಯದ ಅಭಿವೃದ್ಧಿ ಕಾರ್ಯಗಳ ಶಿಲಾನ್ಯಾಸ, ಉದ್ಘಾಟನೆ ಮತ್ತು ಲೋಕಾರ್ಪಣೆ ಮಾಡಿದರು
July 26th, 07:47 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ತಮಿಳುನಾಡಿನ ತೂತುಕುಡಿಯಲ್ಲಿ ₹4800 ಕೋಟಿಗೂ ಹೆಚ್ಚು ಮೌಲ್ಯದ ದೇಶದ ಅಭಿವೃದ್ಧಿ ಯೋಜನೆಗಳ ಶಂಕುಸ್ಥಾಪನೆ, ಉದ್ಘಾಟನೆ ಮತ್ತು ಲೋಕಾರ್ಪಣೆ ಮಾಡಿದರು. ಪ್ರಾದೇಶಿಕ ಸಂಪರ್ಕವನ್ನು ಗಮನಾರ್ಹವಾಗಿ ಹೆಚ್ಚಿಸುವ, ಸಾರಿಗೆ ಸೌಲಭ್ಯದ ದಕ್ಷತೆಯನ್ನು ಹೆಚ್ಚಿಸುವ, ಶುದ್ಧ ಇಂಧನ ಮೂಲಸೌಕರ್ಯವನ್ನು ಬಲಪಡಿಸುವ ಹಾಗು ತಮಿಳುನಾಡಿನಾದ್ಯಂತ ನಾಗರಿಕರ ಜೀವನ ಮಟ್ಟವನ್ನು ಸುಧಾರಿಸುವ ಬಹು ವಲಯಗಳಲ್ಲಿ ಪ್ರಮುಖವಾದ ಯೋಜನೆಗಳ ಸರಣಿ ಇದಾಗಿದೆ. ಕಾರ್ಗಿಲ್ ವಿಜಯ ದಿವಸದ ಸಂದರ್ಭದಲ್ಲಿ, ಶ್ರೀ ಮೋದಿ ಕಾರ್ಗಿಲ್ ನ ವೀರ ಸೇನಾನಿಗಳಿಗೆ ಗೌರವ ಸಲ್ಲಿಸಿದರು ಮತ್ತು ವೀರ ಯೋಧರಿಗೆ ನಮನ ಸಲ್ಲಿಸಿದರು ಮತ್ತು ರಾಷ್ಟ್ರಕ್ಕಾಗಿ ಬೆಲೆಕಟ್ಟಲಾಗದ ತ್ಯಾಗ ಮಾಡಿದ ಹುತಾತ್ಮರಿಗೆ ಹೃತ್ಪೂರ್ವಕ ಗೌರವ ಸಲ್ಲಿಸಿದರು.ಕೈಗಾರಿಕಾ ತರಬೇತಿ ಸಂಸ್ಥೆ (ಐಟಿಐ) ಉನ್ನತೀಕರಣಕ್ಕೆ ರಾಷ್ಟ್ರೀಯ ಯೋಜನೆ ಮತ್ತು ಕೌಶಲ್ಯಕ್ಕಾಗಿ ಐದು ರಾಷ್ಟ್ರೀಯ ಉತ್ಕೃಷ್ಟತಾ ಕೇಂದ್ರಗಳ ಸ್ಥಾಪನೆಗೆ ಸಂಪುಟದ ಅನುಮೋದನೆ
May 07th, 02:07 pm
2024-25 ಮತ್ತು 2025-26ನೇ ಸಾಲಿನ ಆಯವ್ಯಯದಲ್ಲಿ ಘೋಷಿಸಲಾಗಿರುವ 60,000 ಕೋಟಿ ರೂ.ಗಳ (ಕೇಂದ್ರ ಪಾಲು: 30,000 ಕೋಟಿ ರೂ., ರಾಜ್ಯ ಪಾಲು 20,000 ಕೋಟಿ ರೂ. ಮತ್ತು ಕೈಗಾರಿಕಾ ಪಾಲು 10,000 ಕೋಟಿ ರೂ.ಗಳ) ವೆಚ್ಚದಲ್ಲಿ ಕೈಗಾರಿಕಾ ತರಬೇತಿ ಸಂಸ್ಥೆ (ಐ.ಟಿ.ಐ.) ಮೇಲ್ದರ್ಜೆಗೆ ಏರಿಸುವ ಮತ್ತು ಕೌಶಲ್ಯಕ್ಕಾಗಿ ಐದು (5) ರಾಷ್ಟ್ರೀಯ ಉತ್ಕೃಷ್ಟತಾ ಕೇಂದ್ರಗಳನ್ನು (ಎನ್‌ಸಿಒಇ) ಸ್ಥಾಪಿಸುವ ಯೋಜನೆಯನ್ನು ಕೇಂದ್ರ ಪ್ರಾಯೋಜಿತ ಯೋಜನೆಯಾಗಿ ಜಾರಿಗೆ ತರಲಾಗುವುದು. ಇದರಲ್ಲಿ ಕೇಂದ್ರದ ಪಾಲನ್ನು 50% ವರೆಗೆ ಏಷಿಯನ್ ಡೆವಲಪ್ಮೆಂಟ್ ಬ್ಯಾಂಕ್ ಮತ್ತು ವಿಶ್ವಬ್ಯಾಂಕ್ ಗಳು ಸಮಾನವಾಗಿ ಭರಿಸಲಿವೆ.Serving the people of Andhra Pradesh is our commitment: PM Modi in Visakhapatnam
January 08th, 05:45 pm
PM Modi laid foundation stone, inaugurated development works worth over Rs. 2 lakh crore in Visakhapatnam, Andhra Pradesh. The Prime Minister emphasized that the development of Andhra Pradesh was the NDA Government's vision and serving the people of Andhra Pradesh was the Government's commitment.ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಆಂಧ್ರಪ್ರದೇಶದ ವಿಶಾಖಪಟ್ಟಣಂನಲ್ಲಿ 2 ಲಕ್ಷ ಕೋಟಿ ರೂಪಾಯಿಗೂ ಅಧಿಕ ಮೌಲ್ಯದ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಿ, ಉದ್ಘಾಟಿಸಿದರು
January 08th, 05:30 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಆಂಧ್ರಪ್ರದೇಶದ ವಿಶಾಖಪಟ್ಟಣಂನಲ್ಲಿ 2 ಲಕ್ಷ ಕೋಟಿ ರೂಪಾಯಿಗೂ ಅಧಿಕ ಮೌಲ್ಯದ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಿದರು. ಭಗವಾನ್ ಸಿಂಹಾಚಲಂ ವರಾಹ ಲಕ್ಷ್ಮೀ ನರಸಿಂಹ ಸ್ವಾಮಿಗೆ ಗೌರವ ಸಲ್ಲಿಸಿದ ಶ್ರೀ ನರೇಂದ್ರ ಮೋದಿ ಅವರು, 60 ವರ್ಷಗಳ ಅಂತರದ ನಂತರ, ಜನರ ಆಶೀರ್ವಾದದಿಂದ ದೇಶದಲ್ಲಿಸತತ ಮೂರನೇ ಬಾರಿಗೆ ಕೇಂದ್ರ ಸರ್ಕಾರ ಆಯ್ಕೆಯಾಗಿದೆ ಎಂದರು. ಅಧಿಕೃತವಾಗಿ, ಸರ್ಕಾರ ರಚನೆಯಾದ ನಂತರ ಆಂಧ್ರಪ್ರದೇಶದಲ್ಲಿ ಇದು ಅವರ ಮೊದಲ ಕಾರ್ಯಕ್ರಮವಾಗಿದೆ ಎಂದು ಅವರು ಹೇಳಿದರು. ಕಾರ್ಯಕ್ರಮಕ್ಕೂ ಮುನ್ನ ರೋಡ್ ಶೋ ವೇಳೆ ತಮಗೆ ನೀಡಿದ ಭವ್ಯ ಸ್ವಾಗತಕ್ಕಾಗಿ ಶ್ರೀ ನರೇಂದ್ರ ಮೋದಿ ಅವರು ಜನತೆಗೆ ಧನ್ಯವಾದ ಅರ್ಪಿಸಿದರು. ತಮ್ಮ ಭಾಷಣದಲ್ಲಿಶ್ರೀ ಚಂದ್ರಬಾಬು ನಾಯ್ಡು ಅವರ ಪ್ರತಿಯೊಂದು ಮಾತಿನ ಸ್ಫೂರ್ತಿ ಮತ್ತು ಭಾವನೆಯನ್ನು ಗೌರವಿಸುತ್ತೇನೆ ಎಂದು ಅವರು ಹೇಳಿದರು. ಆಂಧ್ರಪ್ರದೇಶ ಮತ್ತು ಭಾರತದ ಜನತೆಯ ಬೆಂಬಲದೊಂದಿಗೆ ಶ್ರೀ ಚಂದ್ರಬಾಬು ನಾಯ್ಡು ಅವರು ತಮ್ಮ ಭಾಷಣದಲ್ಲಿಉಲ್ಲೇಖಿಸಿದ ಎಲ್ಲಗುರಿಗಳನ್ನು ಸಾಧಿಸುವ ವಿಶ್ವಾಸವನ್ನು ಪ್ರಧಾನಮಂತ್ರಿ ವ್ಯಕ್ತಪಡಿಸಿದರು.(i) ಮಾಧವರಂನಿಂದ ಸಿಪ್ಕಾಟ್, (ii) ಲೈಟ್ ಹೌಸ್ ನಿಂದ ಪೂನಮಲ್ಲಿ ಬೈಪಾಸ್ ಮತ್ತು (iii) ಮಾಧವರಂನಿಂದ ಶೋಲಿಂಗನಲ್ಲೂರ್ ಎಂಬ ಮೂರು ಕಾರಿಡಾರ್ ಗಳನ್ನು ಒಳಗೊಂಡಿರುವ ಚೆನ್ನೈ ಮೆಟ್ರೋ ರೈಲು ಯೋಜನೆಯ ಎರಡನೇ ಹಂತಕ್ಕೆ ಸಂಪುಟದ ಅನುಮೋದನೆ
October 03rd, 09:25 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಮೂರು ಕಾರಿಡಾರ್ ಗಳನ್ನು ಒಳಗೊಂಡ ಚೆನ್ನೈ ಮೆಟ್ರೋ ರೈಲು ಯೋಜನೆ ಹಂತ-2ಕ್ಕೆ ಸಂಬಂಧಿಸಿ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯದ ಪ್ರಸ್ತಾವನೆಗೆ ತನ್ನ ಅನುಮೋದನೆ ನೀಡಿದೆ. ಅನುಮೋದಿತ ಮಾರ್ಗಗಳ ಒಟ್ಟು ಉದ್ದ 128 ನಿಲ್ದಾಣಗಳೊಂದಿಗೆ 118.9 ಕಿ.ಮೀ.ಚೆಸ್ ಒಲಿಂಪಿಯಾಡ್ ವಿಜೇತರೊಂದಿಗೆ ಪ್ರಧಾನಮಂತ್ರಿಯವರ ಸಂವಾದದ ಇಂಗ್ಲಿಷ್ ಅವತರಣಿಕೆ
September 26th, 12:15 pm
ಸರ್, ಭಾರತವು ಎರಡೂ ಚಿನ್ನದ ಪದಕಗಳನ್ನು ಗೆದ್ದಿರುವುದು ಇದೇ ಮೊದಲು, ಮತ್ತು ತಂಡದ ಪ್ರದರ್ಶನ ಗಮನಾರ್ಹವಾಗಿದೆ. ಬಾಲಕರು 22 ರಲ್ಲಿ 21 ಅಂಕಗಳನ್ನು ಗಳಿಸಿದರೆ, ಬಾಲಕಿಯರು 22 ರಲ್ಲಿ 19 ಅಂಕಗಳನ್ನು ಗಳಿಸಿದರು. ಒಟ್ಟಾರೆಯಾಗಿ, ನಾವು 44 ರಲ್ಲಿ 40 ಅಂಕಗಳನ್ನು ಗಳಿಸಿದ್ದೇವೆ. ಇಷ್ಟು ದೊಡ್ಡ ಮತ್ತು ಪ್ರಭಾವಶಾಲಿ ಪ್ರದರ್ಶನವು ಹಿಂದೆಂದೂ ಆಗಿಲ್ಲ.ಪ್ರಧಾನಿ ಮೋದಿಯವರು ನಮ್ಮ ಚೆಸ್ ಚಾಂಪಿಯನ್‌ಗಳನ್ನು ಭೇಟಿಯಾಗಿ ಪ್ರೋತ್ಸಾಹಿಸುತ್ತಾರೆ
September 26th, 12:00 pm
ಭಾರತದ ಚೆಸ್ ತಂಡ ಐತಿಹಾಸಿಕ ಉಭಯ ಚಿನ್ನ ಗೆದ್ದ ನಂತರ ಪ್ರಧಾನಿ ಮೋದಿ ಅವರೊಂದಿಗೆ ಮಾತನಾಡಿದರು. ಚರ್ಚೆಯು ಅವರ ಕಠಿಣ ಪರಿಶ್ರಮ, ಚೆಸ್‌ನ ಹೆಚ್ಚುತ್ತಿರುವ ಜನಪ್ರಿಯತೆ, ಆಟದ ಮೇಲೆ AI ಪ್ರಭಾವ ಮತ್ತು ಯಶಸ್ಸನ್ನು ಸಾಧಿಸುವಲ್ಲಿ ನಿರ್ಣಯ ಮತ್ತು ತಂಡದ ಕೆಲಸಗಳ ಪ್ರಾಮುಖ್ಯತೆಯನ್ನು ಎತ್ತಿ ತೋರಿಸಿತು.ಮೂರು ವಂದೇ ಭಾರತ್ ರೈಲುಗಳಿಗೆ ಹಸಿರು ನಿಶಾನೆ ತೋರುವ ಸಂದರ್ಭದಲ್ಲಿ ಪ್ರಧಾನಮಂತ್ರಿಯವರ ಭಾಷಣ
August 31st, 12:16 pm
ಅಶ್ವಿನಿ ವೈಷ್ಣವ್ ಜೀ ಸೇರಿದಂತೆ ಕೇಂದ್ರ ಸರ್ಕಾರದ ನನ್ನ ಗೌರವಾನ್ವಿತ ಸಹೋದ್ಯೋಗಿಗಳೇ; ಉತ್ತರ ಪ್ರದೇಶದ ರಾಜ್ಯಪಾಲರಾದ ಆನಂದಿ ಬೆನ್ ಪಟೇಲ್ ಜೀ; ತಮಿಳುನಾಡು ರಾಜ್ಯಪಾಲರಾದ ಆರ್.ಎನ್.ರವಿ; ಕರ್ನಾಟಕದ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್; ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್; ನನ್ನ ಇತರ ಸಂಪುಟ ಸಹೋದ್ಯೋಗಿಗಳೇ; ರಾಜ್ಯಗಳ ಉಪ ಮುಖ್ಯಮಂತ್ರಿಗಳು; ಮಂತ್ರಿಗಳು; ಸಂಸತ್ ಸದಸ್ಯರು; ಮತ್ತು ದೇಶದಾದ್ಯಂತದ ಇತರ ಸಾರ್ವಜನಿಕ ಪ್ರತಿನಿಧಿಗಳು, ಮಹಿಳೆಯರೇ ಮತ್ತು ಮಹನೀಯರೇ!ವಿಡಿಯೋ ಕಾನ್ಪರೆನ್ಸ್ ಮೂಲಕ ಮೂರು ವಂದೇ ಭಾರತ್ ರೈಲುಗಳಿಗೆ ಹಸಿರು ನಿಶಾನೆ ತೋರಿದ ಪ್ರಧಾನಮಂತ್ರಿ
August 31st, 11:55 am
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ವಿಡಿಯೋ ಕಾನ್ಪರೆನ್ಸಿಂಗ್ ಮೂಲಕ ಮೂರು ವಂದೇ ಭಾರತ್ ರೈಲುಗಳಿಗೆ ಹಸಿರು ನಿಶಾನೆ ತೋರಿದರು. ಪ್ರಧಾನಮಂತ್ರಿಯವರ ‘ಭಾರತದಲ್ಲೇ ತಯಾರಿಸು - ಮೇಕ್ ಇನ್ ಇಂಡಿಯಾ’ ಮತ್ತು ಸ್ವಾವಲಂಬಿ ಭಾರತ” ದೃಷ್ಟಿಕೋನದ ಮಹತ್ವ ಕುರಿತು ಬೆಳಕು ಚೆಲ್ಲಿದರು. ಅತ್ಯಾಧುನಿಕ ವಂದೇ ಭಾರತ್ ಎಕ್ಸ್‌ಪ್ರೆಸ್ ಮೀರತ್-ಲಕ್ನೋ, ಮಧುರೈ-ಬೆಂಗಳೂರು ಮತ್ತು ಚೆನ್ನೈ-ನಾಗರ್‌ಕೋಯಿಲ್ ಮೂರು ಮಾರ್ಗಗಳಲ್ಲಿ ಸಂಪರ್ಕವನ್ನು ಸುಧಾರಿಸುತ್ತಿದೆ. ಈ ಮೂರು ರೈಲುಗಳು ಉತ್ತರ ಪ್ರದೇಶ, ತಮಿಳುನಾಡು ಮತ್ತು ಕರ್ನಾಟಕದಲ್ಲಿ ಸಂಪರ್ಕ ವ್ಯವಸ್ಥೆಗೆ ಪುಷ್ಟಿ ನೀಡಲಿದೆ.ಆಂಧ್ರಪ್ರದೇಶದಲ್ಲಿ ವೈಎಸ್‌ಆರ್ ಕಾಂಗ್ರೆಸ್‌ಗೆ 5 ವರ್ಷ ಸಿಕ್ಕಿತು, ಆದರೆ ಅವರು ಈ 5 ವರ್ಷಗಳನ್ನು ವ್ಯರ್ಥ ಮಾಡಿದರು: ರಾಜಮಂಡ್ರಿಯಲ್ಲಿ ಪ್ರಧಾನಿ ಮೋದಿ
May 06th, 03:45 pm
ಚುನಾವಣಾ ಪ್ರಚಾರದ ಭರಾಟೆಯನ್ನು ಮುಂದುವರೆಸಿರುವ ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಆಂಧ್ರಪ್ರದೇಶದ ರಾಜಮಂಡ್ರಿಯಲ್ಲಿ ಬೃಹತ್ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ತಮ್ಮ ಭಾಷಣವನ್ನು ಆರಂಭಿಸಿದ ಪ್ರಧಾನಿ ಮೋದಿ, ಮೇ 13 ರಂದು ನಿಮ್ಮ ಮತದಿಂದ ಆಂಧ್ರಪ್ರದೇಶದ ಅಭಿವೃದ್ಧಿ ಪಯಣದಲ್ಲಿ ಹೊಸ ಅಧ್ಯಾಯವನ್ನು ಆರಂಭಿಸಲಿದ್ದೀರಿ. ಲೋಕಸಭೆ ಚುನಾವಣೆ ಹಾಗೂ ಆಂಧ್ರಪ್ರದೇಶ ವಿಧಾನಸಭೆಯಲ್ಲೂ ಎನ್‌ಡಿಎ ದಾಖಲೆ ನಿರ್ಮಿಸಲಿದೆ. ಇದು ಅಭಿವೃದ್ಧಿ ಹೊಂದಿದ ಆಂಧ್ರ ಪ್ರದೇಶ ಮತ್ತು ಅಭಿವೃದ್ಧಿ ಹೊಂದಿದ ಭಾರತಕ್ಕೆ ಮಹತ್ವದ ಹೆಜ್ಜೆಯಾಗಲಿದೆ.ಆಂಧ್ರಪ್ರದೇಶದ ರಾಜಮಂಡ್ರಿ ಮತ್ತು ಅನಕಪಲ್ಲಿಯಲ್ಲಿ ಪ್ರಧಾನಿ ಮೋದಿ ಪ್ರಚಾರ ನಡೆಸುತ್ತಿದ್ದಾರೆ
May 06th, 03:30 pm
ತಮ್ಮ ಚುನಾವಣಾ ಪ್ರಚಾರದ ಭರಾಟೆಯನ್ನು ಮುಂದುವರೆಸಿರುವ ಪ್ರಧಾನಿ ನರೇಂದ್ರ ಮೋದಿ ಅವರು ಇಂದು ರಾಜಮಂಡ್ರಿ ಮತ್ತು ಆಂಧ್ರಪ್ರದೇಶದ ಅನಕಪಲ್ಲಿಯಲ್ಲಿ ಎರಡು ಬೃಹತ್ ಸಾರ್ವಜನಿಕ ಸಭೆಗಳನ್ನು ಉದ್ದೇಶಿಸಿ ಮಾತನಾಡಿದರು. ತಮ್ಮ ಭಾಷಣವನ್ನು ಆರಂಭಿಸಿದ ಪ್ರಧಾನಿ ಮೋದಿ, ಮೇ 13 ರಂದು ನಿಮ್ಮ ಮತದಿಂದ ಆಂಧ್ರಪ್ರದೇಶದ ಅಭಿವೃದ್ಧಿ ಪಯಣದಲ್ಲಿ ಹೊಸ ಅಧ್ಯಾಯವನ್ನು ಆರಂಭಿಸಲಿದ್ದೀರಿ. ಲೋಕಸಭೆ ಚುನಾವಣೆ ಹಾಗೂ ಆಂಧ್ರಪ್ರದೇಶ ವಿಧಾನಸಭೆಯಲ್ಲೂ ಎನ್‌ಡಿಎ ದಾಖಲೆ ನಿರ್ಮಿಸಲಿದೆ. ಇದು ಅಭಿವೃದ್ಧಿ ಹೊಂದಿದ ಆಂಧ್ರ ಪ್ರದೇಶ ಮತ್ತು ಅಭಿವೃದ್ಧಿ ಹೊಂದಿದ ಭಾರತಕ್ಕೆ ಮಹತ್ವದ ಹೆಜ್ಜೆಯಾಗಲಿದೆ.