'ಮನ್ ಕಿ ಬಾತ್' ಜನರ ಸಾಮೂಹಿಕ ಪ್ರಯತ್ನಗಳನ್ನು ಸಾರ್ವಜನಿಕರಿಗೆ ತಿಳಿಸಲು ಅತ್ಯುತ್ತಮ ವೇದಿಕೆಯಾಗಿದೆ: ಪ್ರಧಾನಿ ಮೋದಿ

November 30th, 11:30 am

ಈ ತಿಂಗಳ ಮನ್ ಕಿ ಬಾತ್ ನಲ್ಲಿ, ಪ್ರಧಾನಿ ಮೋದಿ ಅವರು ಸಂವಿಧಾನ ದಿನಾಚರಣೆ, ವಂದೇ ಮಾತರಂನ 150 ನೇ ವಾರ್ಷಿಕೋತ್ಸವ, ಅಯೋಧ್ಯೆಯಲ್ಲಿ ಧರ್ಮ ಧ್ವಜಾರೋಹಣ, ಐಎನ್ಎಸ್ 'ಮಹೆ' ಸೇರ್ಪಡೆ ಮತ್ತು ಕುರುಕ್ಷೇತ್ರದಲ್ಲಿ ಅಂತರರಾಷ್ಟ್ರೀಯ ಗೀತಾ ಮಹೋತ್ಸವ ಸೇರಿದಂತೆ ನವೆಂಬರ್ ತಿಂಗಳ ಪ್ರಮುಖ ಘಟನೆಗಳನ್ನು ಹೈಲೈಟ್ ಮಾಡಿದರು. ದಾಖಲೆಯ ಆಹಾರ ಧಾನ್ಯ ಮತ್ತು ಜೇನುತುಪ್ಪ ಉತ್ಪಾದನೆ, ಭಾರತದ ಕ್ರೀಡಾ ಯಶಸ್ಸುಗಳು, ವಸ್ತು ಸಂಗ್ರಹಾಲಯಗಳು ಮತ್ತು ನೈಸರ್ಗಿಕ ಕೃಷಿಯಂತಹ ಹಲವಾರು ಪ್ರಮುಖ ವಿಷಯಗಳನ್ನು ಸಹ ಅವರು ಸ್ಪರ್ಶಿಸಿದರು. ಎಲ್ಲರೂ ಕಾಶಿ-ತಮಿಳು ಸಂಗಮದ ಭಾಗವಾಗಬೇಕೆಂದು ಪ್ರಧಾನಿ ಒತ್ತಾಯಿಸಿದರು.

ರಾಷ್ಟ್ರಗೀತೆ "ವಂದೇ ಮಾತರಂ"ನ 150ನೇ ವಾರ್ಷಿಕೋತ್ಸವದ ವರ್ಷಪೂರ್ತಿ ಆಚರಣೆ(ಸ್ಮರಣಾರ್ಥ)ಯ ಉದ್ಘಾಟನಾ ಸಮಾರಂಭ ಉದ್ದೇಶಿಸಿ ಪ್ರಧಾನಮಂತ್ರಿ ಭಾಷಣ

November 07th, 10:00 am

ವಂದೇ ಮಾತರಂ, ಈ ಪದಗಳೇ ಒಂದು ಮಂತ್ರ, ಒಂದು ಶಕ್ತಿ, ಒಂದು ಕನಸು, ಒಂದು ಸಂಕಲ್ಪವಾಗಿದೆ. ವಂದೇ ಮಾತರಂ, ಈ ಒಂದು ಪದವು ಭಾರತ ಮಾತೆಯ ಆರಾಧನೆ, ಭಾರತ ಮಾತೆಯ ನಿಜವಾದ ಆರಾಧನೆಯಾಗಿದೆ. ವಂದೇ ಮಾತರಂ, ಈ ಒಂದು ಪದವು ನಮ್ಮನ್ನು ಇತಿಹಾಸಕ್ಕೆ ಕರೆದೊಯ್ಯುತ್ತದೆ. ಇದು ನಮ್ಮ ಆತ್ಮವಿಶ್ವಾಸವನ್ನು, ನಮ್ಮ ವರ್ತಮಾನವನ್ನು ಆತ್ಮವಿಶ್ವಾಸದಿಂದ ತುಂಬುತ್ತದೆ, ನಮ್ಮ ಭವಿಷ್ಯಕ್ಕೆ ಹೊಸ ಧೈರ್ಯವನ್ನು ನೀಡುತ್ತದೆ, ಅಂತಹ ಯಾವುದೇ ಬೇರೆ ಸಂಕಲ್ಪವಿಲ್ಲ, ಸಾಧಿಸಲಾಗದ ಇನ್ನಾವುದೇ ಸಂಕಲ್ಪವಿಲ್ಲ. ನಾವು ಭಾರತೀಯರು ಸಾಧಿಸಲು ಸಾಧ್ಯವಾಗದ ಬೇರೆ ಇನ್ನಾವುದೇ ಗುರಿಯಿಲ್ಲ.

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ರಾಷ್ಟ್ರೀಯ ಗೀತೆ ʻವಂದೇ ಮಾತರಂʼನ 150ನೇ ವರ್ಷಾಚರಣೆಯ ಹಿನ್ನೆಲೆಯಲ್ಲಿ ವರ್ಷವಿಡೀ ನಡೆಯಲಿರುವ ಸ್ಮರಣಾರ್ಥ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು

November 07th, 09:45 am

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ನವದೆಹಲಿಯಲ್ಲಿ ಇಂದು ರಾಷ್ಟ್ರೀಯ ಗೀತೆ ʻವಂದೇ ಮಾತರಂʼನ 150ನೇ ವರ್ಷಾಚರಣೆಯ ಸ್ಮರಣಾರ್ಥ ವರ್ಷವಿಡೀ ನಡೆಯಲಿರುವ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಸಭಿಕರನ್ನು ಉದ್ದೇಶಿಸಿ ಮಾತನಾಡಿದ ಶ್ರೀ ಮೋದಿ, ʻವಂದೇ ಮಾತರಂʼ ಕೇವಲ ಒಂದು ಪದವಲ್ಲ, ಅದೊಂದು ಮಂತ್ರ, ಅದೊಂದು ಶಕ್ತಿ, ಅದೊಂದು ಕನಸು ಮತ್ತು ಒಕ್ಕೊರಲ ಸಂಕಲ್ಪ ಎಂದು ಹೇಳಿದರು. ʻವಂದೇ ಮಾತರಂʼ ಭಾರತ ಮಾತೆಯ ಮೇಲಿನ ಭಕ್ತಿ ಮತ್ತು ಆಧ್ಯಾತ್ಮಿಕ ಸಮರ್ಪಣೆ ಸಾಕಾರರೂಪ ಎಂದು ಅವರು ಒತ್ತಿ ಹೇಳಿದರು. ʻವಂದೇ ಮಾತರಂʼ ಎಂಬ ಒಂದೇ ಒಂದು ಪದವು ನಮ್ಮನ್ನು ನಮ್ಮ ಇತಿಹಾಸದೊಂದಿಗೆ ಬೆಸೆಯುತ್ತದೆ, ನಮ್ಮ ವರ್ತಮಾನಕ್ಕೆ ಆತ್ಮವಿಶ್ವಾಸವನ್ನು ತುಂಬುತ್ತದೆ. ಜೊತೆಗೆ, ಈಡೇರಸಿಕೊಳ್ಳಲಾಗದಂತಹ ಯಾವುದೇ ಸಂಕಲ್ಪವಿಲ್ಲ ಮತ್ತು ಸಾಧಿಸಲಾಗದಂತಹ ಗುರಿ ಯಾವುದೂ ಇಲ್ಲ ಎಂದು ನಂಬುವ ಧೈಯವನ್ನು ನಮ್ಮಲ್ಲಿ ನೆಲೆಗೊಳಿಸುವ ಮೂಲಕ ನಮ್ಮ ಭವಿಷ್ಯಕ್ಕೆ ಸ್ಫೂರ್ತಿ ನೀಡುತ್ತದೆ ಎಂದು ಪ್ರಧಾನಮಂತ್ರಿ ಹೇಳಿದರು.

ಉದಯೋನ್ಮುಖ ವಿಜ್ಞಾನ, ತಂತ್ರಜ್ಞಾನ ಮತ್ತು ನಾವೀನ್ಯತೆ ಸಮಾವೇಶ-2025 ಉದ್ದೇಶಿಸಿ ಪ್ರಧಾನಮಂತ್ರಿ ಭಾಷಣ

November 03rd, 11:00 am

ಭಾರತ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರಾದ ಡಾ. ಜಿತೇಂದ್ರ ಸಿಂಗ್ ಜಿ, ಪ್ರಧಾನ ವೈಜ್ಞಾನಿಕ ಸಲಹೆಗಾರ ಅಜಯ್ ಕುಮಾರ್ ಸೂದ್, ನೊಬೆಲ್ ಪ್ರಶಸ್ತಿ ವಿಜೇತ ಸರ್ ಆಂಡ್ರೆ ಗೀಮ್ ಅವರು ನಮ್ಮೊಂದಿಗೆ ಉಪಸ್ಥಿತರಿದ್ದಾರೆ, ಇಲ್ಲಿರುವ ಎಲ್ಲಾ ವಿಜ್ಞಾನಿಗಳೆ, ಅನುಶೋಧಕರೆ, ಶೈಕ್ಷಣಿಕ ಕ್ಷೇತ್ರದ ಗಣ್ಯರೆ, ಭಾರತ ಮತ್ತು ವಿದೇಶಗಳಿಂದ ಆಗಮಿಸಿರುವ ಗಣ್ಯರೆ, ಮಹಿಳೆಯರೆ ಮತ್ತು ಮಹನೀಯರೆ!

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 'ಉದಯೋನ್ಮುಖ ವಿಜ್ಞಾನ, ತಂತ್ರಜ್ಞಾನ ಮತ್ತು ನಾವೀನ್ಯತೆ ಸಮಾವೇಶ 2025' ಅನ್ನು ಉದ್ದೇಶಿಸಿ ಮಾತನಾಡಿದರು

November 03rd, 10:30 am

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ನವದೆಹಲಿಯ ಭಾರತ್ ಮಂಟಪದಲ್ಲಿ ನಡೆದ 'ಉದಯೋನ್ಮುಖ ವಿಜ್ಞಾನ, ತಂತ್ರಜ್ಞಾನ ಮತ್ತು ನಾವೀನ್ಯತೆ ಸಮಾವೇಶ (ESTIC) 2025' ಅನ್ನು ಉದ್ದೇಶಿಸಿ ಮಾತನಾಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಪ್ರಧಾನಿಯವರು, ಭಾರತ ಮತ್ತು ವಿದೇಶಗಳ ವಿಜ್ಞಾನಿಗಳು, ನಾವೀನ್ಯಕಾರರು (innovators), ಶಿಕ್ಷಣ ತಜ್ಞರು ಮತ್ತು ಇತರ ಗಣ್ಯ ಅತಿಥಿಗಳನ್ನು ಸ್ವಾಗತಿಸಿದರು. ಐಸಿಸಿ ಮಹಿಳಾ ವಿಶ್ವಕಪ್ 2025 ರಲ್ಲಿ ಭಾರತ ಗಳಿಸಿದ ಗಮನಾರ್ಹ ವಿಜಯದ ಬಗ್ಗೆ ಮಾತನಾಡಿದ ಶ್ರೀ ಮೋದಿಯವರು, ಭಾರತೀಯ ಕ್ರಿಕೆಟ್ ತಂಡದ ಯಶಸ್ಸಿನಿಂದ ಇಡೀ ರಾಷ್ಟ್ರವೇ ಹರ್ಷಗೊಂಡಿದೆ ಎಂದು ಪ್ರಸ್ತಾಪಿಸಿದರು. ಇದು ಭಾರತದ ಮೊದಲ ಮಹಿಳಾ ವಿಶ್ವಕಪ್ ಗೆಲುವು ಎಂಬುದನ್ನು ಒತ್ತಿ ಹೇಳಿದ ಅವರು, ಮಹಿಳಾ ಕ್ರಿಕೆಟ್ ತಂಡಕ್ಕೆ ತಮ್ಮ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸಿದರು. ರಾಷ್ಟ್ರವು ಅವರ ಬಗ್ಗೆ ಹೆಮ್ಮೆಪಡುತ್ತದೆ ಎಂದು ಹೇಳಿದ ಪ್ರಧಾನಿಯವರು, ಅವರ ಈ ಸಾಧನೆಯು ದೇಶಾದ್ಯಂತ ಲಕ್ಷಾಂತರ ಯುವಜನರಿಗೆ ಸ್ಫೂರ್ತಿ ನೀಡುತ್ತದೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದರು.

ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತ ಶಿಕ್ಷಕರೊಂದಿಗಿನ ಸಭೆಯಲ್ಲಿ ಪ್ರಧಾನಮಂತ್ರಿ ಅವರ ಭಾಷಣದ ಅನುವಾದ

September 04th, 05:35 pm

ನಮ್ಮ ಸಂಪ್ರದಾಯದಲ್ಲಿ ಶಿಕ್ಷಕರ ಬಗ್ಗೆ ವಿಶೇಷ ಗೌರವವಿದೆ, ಮತ್ತು ಅವರು ಸಮಾಜದ ದೊಡ್ಡ ಶಕ್ತಿಯೂ ಹೌದು. ಶಿಕ್ಷಕರು ಆಶೀರ್ವಾದಕ್ಕಾಗಿ ಎದ್ದು ನಿಲ್ಲುವಂತೆ ಮಾಡುವುದು ತಪ್ಪು. ನಾನು ಅಂತಹ ಪಾಪವನ್ನು ಮಾಡಲು ಬಯಸುವುದಿಲ್ಲ. ಆದರೆ ನಾನು ಖಂಡಿತವಾಗಿಯೂ ನಿಮ್ಮೊಂದಿಗೆ ಸಂವಾದ ನಡೆಸಲು ಬಯಸುತ್ತೇನೆ. ನನಗೆ, ನಿಮ್ಮೆಲ್ಲರನ್ನು ಭೇಟಿಯಾಗುವ ಅವಕಾಶ ಸಿಕ್ಕಿರುವುದು ಅದ್ಭುತ ಅನುಭವವಾಗಿದೆ. ನಿಮ್ಮಲ್ಲಿ ಪ್ರತಿಯೊಬ್ಬರೂ ನಿಮ್ಮದೇ ಆದ ಕಥೆಯನ್ನು ಹೊಂದಿರಬೇಕು, ಏಕೆಂದರೆ ಅದು ಇಲ್ಲದೇ, ನೀವು ಈ ಹಂತವನ್ನು ತಲುಪುತ್ತಿರಲಿಲ್ಲ. ಆ ಎಲ್ಲಾ ಕಥೆಗಳನ್ನು ತಿಳಿದುಕೊಳ್ಳಲು ಸಾಕಷ್ಟು ಸಮಯವನ್ನು ಒದಗಿಸುವುದು ಕಷ್ಟ, ಆದರೆ ನಾನು ನಿಮ್ಮಿಂದ ಕಲಿಯಬಹುದಾದ ಸ್ವಲ್ಪವಾದರೂ ನಿಜವಾಗಿಯೂ ಸ್ಪೂರ್ತಿದಾಯಕವಾಗಿತ್ತು ಮತ್ತು ಅದಕ್ಕಾಗಿ, ನಾನು ನಿಮ್ಮೆಲ್ಲರನ್ನು ಹೃತ್ಪೂರ್ವಕವಾಗಿ ಅಭಿನಂದಿಸುತ್ತೇನೆ. ಈ ರಾಷ್ಟ್ರೀಯ ಪ್ರಶಸ್ತಿಯನ್ನು ಸ್ವೀಕರಿಸುವುದು ಕೊನೆಯಲ್ಲ. ಈಗ, ಈ ಪ್ರಶಸ್ತಿಯ ನಂತರ ಎಲ್ಲರ ಗಮನವು ನಿಮ್ಮ ಮೇಲಿದೆ. ಇದರರ್ಥ ನಿಮ್ಮ ವ್ಯಾಪ್ತಿಯು ಗಮನಾರ್ಹವಾಗಿ ವಿಸ್ತರಿಸಿದೆ. ಹಿಂದೆ, ನಿಮ್ಮ ಪ್ರಭಾವ ಅಥವಾ ಆದೇಶದ ವ್ಯಾಪ್ತಿಯು ಸೀಮಿತವಾಗಿತ್ತು, ಆದರೆ ಈಗ ಈ ಮನ್ನಣೆಯ ನಂತರ, ಅದು ಹೆಚ್ಚು ವಿಸ್ತಾರವಾಗಿ ಬೆಳೆಯಬಹುದು. ಇದು ಆರಂಭ ಎಂದು ನಾನು ನಂಬುತ್ತೇನೆ ಮತ್ತು ಈ ಅವಕಾಶವನ್ನು ಬಳಸಿಕೊಳ್ಳಬೇಕು. ನಿಮ್ಮೊಳಗೆ ಏನೇ ಇರಲಿ, ಅದನ್ನು ನೀವು ಸಾಧ್ಯವಾದಷ್ಟು ಹಂಚಿಕೊಳ್ಳಬೇಕು. ನೀವು ಹಾಗೆ ಮಾಡಿದಾಗ, ನಿಮ್ಮ ತೃಪ್ತಿಯ ಭಾವನೆ ಬೆಳೆಯುತ್ತದೆ ಮತ್ತು ನೀವು ಆ ದಿಕ್ಕಿನಲ್ಲಿ ಶ್ರಮಿಸುವುದನ್ನು ಮುಂದುವರಿಸಬೇಕು. ಈ ಪ್ರಶಸ್ತಿಗೆ ನಿಮ್ಮ ಆಯ್ಕೆಯು ನಿಮ್ಮ ಕಠಿಣ ಪರಿಶ್ರಮ ಮತ್ತು ನಿರಂತರ ಸಮರ್ಪಣೆಗೆ ಸಾಕ್ಷಿಯಾಗಿದೆ. ಅದಕ್ಕಾಗಿಯೇ ಇದು ಸಾಧ್ಯವಾಗಿದೆ. ಒಬ್ಬ ಶಿಕ್ಷಕ ಕೇವಲ ವರ್ತಮಾನದ ಬಗ್ಗೆ ಅಲ್ಲ, ರಾಷ್ಟ್ರದ ಭವಿಷ್ಯದ ಪೀಳಿಗೆಯನ್ನು ರೂಪಿಸುತ್ತಾನೆ, ಭವಿಷ್ಯವನ್ನು ಮೆರುಗುಗೊಳಿಸುತ್ತಾನೆ ಮತ್ತು ಇದು ಇತರರಿಗಿಂತ ಕಡಿಮೆಯಿಲ್ಲದ ರಾಷ್ಟ್ರ ಸೇವೆಯಾಗಿದೆ ಎಂದು ನಾನು ನಂಬುತ್ತೇನೆ. ಇಂದು, ನಿಮ್ಮಂತಹ ಕೋಟ್ಯಂತರ ಶಿಕ್ಷಕರು ಅದೇ ಭಕ್ತಿ, ಪ್ರಾಮಾಣಿಕತೆ ಮತ್ತು ಸಮರ್ಪಣೆಯೊಂದಿಗೆ ರಾಷ್ಟ್ರ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಎಲ್ಲರಿಗೂ ಇಲ್ಲಿಗೆ ಬರುವ ಅವಕಾಶ ಸಿಗುವುದಿಲ್ಲ. ಬಹುಶಃ ಅನೇಕರು ಪ್ರಯತ್ನಿಸಿಲ್ಲ, ಅಥವಾ ಕೆಲವರು ಗಮನಿಸಿಲ್ಲ. ಅಂತಹ ಸಾಮರ್ಥ್ಯಗಳನ್ನು ಹೊಂದಿರುವ ಅಸಂಖ್ಯಾತ ಜನರಿದ್ದಾರೆ. ಅವರೆಲ್ಲರ ಸಾಮೂಹಿಕ ಪ್ರಯತ್ನಗಳಿಂದ ರಾಷ್ಟ್ರವು ಮುಂದುವರಿಯುವುದು, ಹೊಸ ಪೀಳಿಗೆಗಳನ್ನು ಪೋಷಿಸುವುದನ್ನು, ರಾಷ್ಟ್ರಕ್ಕಾಗಿ ಬದುಕುವುದನ್ನು ಖಚಿತಪಡಿಸುತ್ತವೆ ಮತ್ತು ಅದರಲ್ಲಿ ಪ್ರತಿಯೊಬ್ಬರ ಕೊಡುಗೆಯೂ ಇದೆ.

ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತ ಶಿಕ್ಷಕರನ್ನು ಉದ್ದೇಶಿಸಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಭಾಷಣ

September 04th, 05:33 pm

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ನವದೆಹಲಿಯಲ್ಲಿ ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತ ಶಿಕ್ಷಕರನ್ನುದ್ದೇಶಿಸಿ ಭಾಷಣ ಮಾಡಿದರು. ಭಾರತೀಯ ಸಮಾಜವು ಶಿಕ್ಷಕರ ಬಗ್ಗೆ ಹೊಂದಿರುವ ಸ್ವಾಭಾವಿಕ ಗೌರವವನ್ನು ಶ್ಲಾಘಿಸಿದ ಶ್ರೀ ನರೇಂದ್ರ ಮೋದಿ, ಅವರು ರಾಷ್ಟ್ರ ನಿರ್ಮಾಣದಲ್ಲಿ ಪ್ರಬಲ ಶಕ್ತಿ ಎಂದು ಬಣ್ಣಿಸಿದರು. ಶಿಕ್ಷಕರನ್ನು ಗೌರವಿಸುವುದು ಕೇವಲ ಆಚರಣೆಯಲ್ಲ, ಆದರೆ ಅವರ ಜೀವಮಾನದ ಸಮರ್ಪಣೆ ಮತ್ತು ಪ್ರಭಾವದ ಮನ್ನಣೆಯಾಗಿದೆ ಎಂದು ಅವರು ಒತ್ತಿ ಹೇಳಿದರು.

ಜಪಾನ್ ಪ್ರಧಾನಮಂತ್ರಿ ಅವರೊಂದಿಗಿನ ಜಂಟಿ ಪತ್ರಿಕಾ ಹೇಳಿಕೆಯ ಸಂದರ್ಭದಲ್ಲಿ ಪ್ರಧಾನಮಂತ್ರಿ ಅವರ ಪತ್ರಿಕಾ ಹೇಳಿಕೆ

August 29th, 03:59 pm

ಇಂದಿನ ನಮ್ಮ ಚರ್ಚೆಯು ಫಲಪ್ರದ ಮತ್ತು ನಿರ್ದಿಷ್ಟ ಉದ್ದೇಶಗಳನ್ನು ಒಳಗೊಂಡಿತ್ತು. ಎರಡು ಪ್ರಮುಖ ಆರ್ಥಿಕತೆಗಳು ಮತ್ತು ಚೈತನ್ಯಶೀಲ ಪ್ರಜಾಪ್ರಭುತ್ವಗಳಾಗಿ, ನಮ್ಮ ಪಾಲುದಾರಿಕೆಯು ನಮ್ಮ ಎರಡೂ ದೇಶಗಳಿಗೆ ಮಾತ್ರವಲ್ಲದೆ ಜಾಗತಿಕ ಶಾಂತಿ ಮತ್ತು ಸ್ಥಿರತೆಗೂ ಬಹಳ ಮುಖ್ಯವಾಗಿದೆ ಎಂಬುದನ್ನು ನಾವಿಬ್ಬರೂ ಒಪ್ಪುತ್ತೇವೆ.

ಗುಜರಾತ್‌ನ ಅಹಮದಾಬಾದ್‌ನಲ್ಲಿ ವಿವಿಧ ಅಭಿವೃದ್ಧಿ ಯೋಜನೆಗಳ ಉದ್ಘಾಟನಾ ಸಮಾರಂಭ ಉದ್ದೇಶಿಸಿ ಪ್ರಧಾನಮಂತ್ರಿ ಭಾಷಣ

August 25th, 06:42 pm

ಇಂದು, ನೀವೆಲ್ಲರೂ ನಿಜವಾಗಿಯೂ ಉತ್ತಮ ವಾತಾವರಣ ಸೃಷ್ಟಿಸಿದ್ದೀರಿ. ಈ ಲಕ್ಷಾಂತರ ಜನರ ಪ್ರೀತಿ ಮತ್ತು ಆಶೀರ್ವಾದ ಪಡೆಯಲು ನಾನು ಎಷ್ಟು ಅದೃಷ್ಟಶಾಲಿ ಎಂದು ನಾನು ಅನೇಕ ಬಾರಿ ಭಾವಿಸಿದ್ದೇನೆ. ನಾನು ನಿಮಗೆ ಎಷ್ಟೇ ಧನ್ಯವಾದ ಹೇಳಿದರೂ ಅದು ಎಂದಿಗೂ ಮುಗಿಯುವುದಿಲ್ಲ. ನೋಡಿ, ಅಲ್ಲಿ ಸ್ವಲ್ಪ ನರೇಂದ್ರ ನಿಂತಿದ್ದಾನೆ!

ಗುಜರಾತಿನ ಅಹಮದಾಬಾದ್‌ ನಲ್ಲಿ 5,400 ಕೋಟಿ ರೂ. ಮೌಲ್ಯದ ಅಭಿವೃದ್ಧಿ ಕಾಮಗಾರಿಗಳಿಗೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಉದ್ಘಾಟನೆ, ಶಿಲಾನ್ಯಾಸ ಮತ್ತು ಲೋಕಾರ್ಪಣೆ ನೆರವೇರಿಸಿದರು

August 25th, 06:15 pm

ಗುಜರಾತಿನ ಅಹಮದಾಬಾದ್‌ ನಲ್ಲಿ ಇಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 5,400 ಕೋಟಿ ರೂ. ಮೌಲ್ಯದ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ, ಶಿಲಾನ್ಯಾಸ, ಲೋಕಾರ್ಪಣೆ ನೆರವೇರಿಸಿದರು. ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿ, ಇಡೀ ರಾಷ್ಟ್ರವು ಪ್ರಸ್ತುತ ಗಣೇಶೋತ್ಸವದ ಉತ್ಸಾಹದಲ್ಲಿ ಮುಳುಗಿದೆ ಎಂದು ಹೇಳಿದರು. ಗಣಪತಿ ಬಪ್ಪಾ ಆಶೀರ್ವಾದದೊಂದಿಗೆ, ಇಂದು ಗುಜರಾತಿನ ಪ್ರಗತಿಗೆ ಸಂಬಂಧಿಸಿದ ಹಲವಾರು ಅಭಿವೃದ್ಧಿ ಯೋಜನೆಗಳನ್ನು ಶುಭಾರಂಭ ಮಾಡಲಾಗಿದೆ. ಜನರ ಪಾದಾರವಿಂದಗಳಿಗೆ ಹಲವಾರು ಯೋಜನೆಗಳನ್ನು ಅರ್ಪಿಸುವ ಸೌಭಾಗ್ಯ ತಮಗೆ ದೊರೆತಿದೆ ಎಂದು ಅವರು ಹೇಳಿದರು ಮತ್ತು ಈ ಅಭಿವೃದ್ಧಿ ಉಪಕ್ರಮಗಳಿಗಾಗಿ ಎಲ್ಲಾ ನಾಗರಿಕರಿಗೆ ಹೃತ್ಪೂರ್ವಕ ಅಭಿನಂದನೆಗಳನ್ನು ತಿಳಿಸಿದರು.

ರಾಷ್ಟ್ರೀಯ ಬಾಹ್ಯಾಕಾಶ ದಿನದ ಅಂಗವಾಗಿ ಪ್ರಧಾನಮಂತ್ರಿ ಅವರ ವಿಡಿಯೋ ಸಂದೇಶ

August 23rd, 11:00 am

ರಾಷ್ಟ್ರೀಯ ಬಾಹ್ಯಾಕಾಶ ದಿನದಂದು ನಿಮ್ಮೆಲ್ಲರಿಗೂ ನನ್ನ ಹೃತ್ಪೂರ್ವಕ ಶುಭಾಶಯಗಳು. ಈ ವರ್ಷದ ಬಾಹ್ಯಾಕಾಶ ದಿನದ ವಿಷಯ 'ಆರ್ಯಭಟದಿಂದ ಗಗನಯಾನಕ್ಕೆ: ಪ್ರಾಚೀನ ಜ್ಞಾನದಿಂದ ಅನಂತ ಸಾಧ್ಯತೆಗಳಿಗೆ'. ಇದು ಭೂತಕಾಲದ ವಿಶ್ವಾಸ ಮತ್ತು ಭವಿಷ್ಯದ ಸಂಕಲ್ಪವನ್ನು ಸಾಕಾರಗೊಳಿಸುತ್ತದೆ. ಇಂದು ಇಷ್ಟು ಕಡಿಮೆ ಅವಧಿಯಲ್ಲಿ, ರಾಷ್ಟ್ರೀಯ ಬಾಹ್ಯಾಕಾಶ ದಿನವು ನಮ್ಮ ಯುವಕರಿಗೆ ಉತ್ಸಾಹ ಮತ್ತು ಸ್ಫೂರ್ತಿಯ ಸೆಲೆಯಾಗಿದೆ ಎಂಬುದನ್ನು ನಾವು ನೋಡುತ್ತಿದ್ದೇವೆ. ಇದು ನಿಜಕ್ಕೂ ರಾಷ್ಟ್ರಕ್ಕೆ ಅಪಾರ ಹೆಮ್ಮೆ ತರುವ ವಿಷಯವಾಗಿದೆ. ರಾಷ್ಟ್ರೀಯ ಬಾಹ್ಯಾಕಾಶ ದಿನದಂದು ಬಾಹ್ಯಾಕಾಶ ವಲಯದೊಂದಿಗೆ ಸಂಬಂಧ ಹೊಂದಿರುವ ಎಲ್ಲರಿಗೂ, ನಮ್ಮ ವಿಜ್ಞಾನಿಗಳಿಗೆ ಮತ್ತು ಎಲ್ಲಾ ಯುವಕರಿಗೆ ನನ್ನ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ಇತ್ತೀಚೆಗೆ ಭಾರತವು 'ಖಗೋಳಶಾಸ್ತ್ರ ಮತ್ತು ಖಗೋಳ ಭೌತಶಾಸ್ತ್ರದ ಅಂತಾರಾಷ್ಟ್ರೀಯ ಒಲಿಂಪಿಯಾಡ್' ಆಯೋಜಿಸಿತ್ತು. ಈ ಸ್ಪರ್ಧೆಯಲ್ಲಿ, ವಿಶ್ವಾದ್ಯಂತದ 60ಕ್ಕೂ ಹೆಚ್ಚು ದೇಶಗಳಿಂದ ಸುಮಾರು 300 ಯುವ ಪ್ರತಿನಿಧಿಗಳು ಭಾಗವಹಿಸಿದ್ದರು. ನಮ್ಮ ಭಾರತೀಯ ಯುವಕರು ಸಹ ಪದಕಗಳನ್ನು ಗೆದ್ದಿದ್ದಾರೆ. ಈ ಒಲಿಂಪಿಯಾಡ್ ಬಾಹ್ಯಾಕಾಶ ವಲಯದಲ್ಲಿ ಭಾರತದ ಉದಯೋನ್ಮುಖ ನಾಯಕತ್ವದ ಸಂಕೇತವಾಗಿದೆ.

2025ನೇ ಸಾಲಿನ ʻರಾಷ್ಟ್ರೀಯ ಬಾಹ್ಯಾಕಾಶ ದಿನʼದ ಸಂದರ್ಭದಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಭಾಷಣ

August 23rd, 10:30 am

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು `ರಾಷ್ಟ್ರೀಯ ಬಾಹ್ಯಾಕಾಶ ದಿನ- 2025’ರ ಸಂದರ್ಭದಲ್ಲಿ ವಿಡಿಯೋ ಸಂದೇಶದ ಮೂಲಕ ಭಾಷಣ ಮಾಡಿದರು. ಈ ಸಂದರ್ಭದಲ್ಲಿ ತಮ್ಮ ಹಾರ್ದಿಕ ಶುಭಾಶಯಗಳನ್ನು ತಿಳಿಸಿದ ಪ್ರಧಾನಮಂತ್ರಿಯವರು, ಆರ್ಯಭಟದಿಂದ ಗಗನಯಾನದವರೆಗೆ ಎಂಬ ಈ ವರ್ಷದ ಧ್ಯೇಯವಾಕ್ಯವು ಭಾರತದ ಗತಕಾಲದ ವಿಶ್ವಾಸ ಮತ್ತು ಅದರ ಭವಿಷ್ಯದ ಸಂಕಲ್ಪ ಎರಡನ್ನೂ ಪ್ರತಿಬಿಂಬಿಸುತ್ತದೆ ಎಂದು ಪ್ರಧಾನಮಂತ್ರಿ ಹೇಳಿದರು. ಅತ್ಯಲ್ಪ ಕಾಲದಲ್ಲಿ, ʻರಾಷ್ಟ್ರೀಯ ಬಾಹ್ಯಾಕಾಶ ದಿನʼವು ಭಾರತದ ಯುವಕರಿಗೆ ಉತ್ಸಾಹ ಮತ್ತು ಆಕರ್ಷಣೆಯ ಸಂದರ್ಭವಾಗಿ ಮಾರ್ಪಟ್ಟಿದೆ, ಇದು ರಾಷ್ಟ್ರೀಯ ಹೆಮ್ಮೆಯ ವಿಷಯವಾಗಿದೆ ಎಂದು ಅವರು ಹೇಳಿದರು. ವಿಜ್ಞಾನಿಗಳು ಮತ್ತು ಯುವಕರು ಸೇರಿದಂತೆ ಬಾಹ್ಯಾಕಾಶ ಕ್ಷೇತ್ರಕ್ಕೆ ಸಂಬಂಧಿಸಿದ ಎಲ್ಲ ವ್ಯಕ್ತಿಗಳಿಗೆ ಅವರು ಶುಭಾಶಯಗಳನ್ನು ತಿಳಿಸಿದರು. ಭಾರತವು ಪ್ರಸ್ತುತ ಖಗೋಳ ವಿಜ್ಞಾನ ಮತ್ತು ಖಗೋಳ ಭೌತಶಾಸ್ತ್ರ ಕುರಿತ ಅಂತಾರಾಷ್ಟ್ರೀಯ ಒಲಿಂಪಿಯಾಡ್ಗೆ ಆತಿಥ್ಯ ವಹಿಸುತ್ತಿದ್ದು, ಅರವತ್ತಕ್ಕೂ ಹೆಚ್ಚು ದೇಶಗಳ ಸುಮಾರು 300 ಯುವ ಸ್ಪರ್ಧಿಗಳು ಅದರಲ್ಲಿ ಭಾಗವಹಿಸುತ್ತಿದ್ದಾರೆ ಎಂದರು. ಈ ಸ್ಪರ್ಧೆಯಲ್ಲಿ ಅನೇಕ ಭಾರತೀಯ ಸ್ಪರ್ಧಿಗಳು ಪದಕಗಳನ್ನು ಗೆದ್ದಿರುವುದಕ್ಕೆ ಶ್ರೀ ಮೋದಿ ಸಂತಸ ವ್ಯಕ್ತಪಡಿಸಿದರು. ಈ ಒಲಿಂಪಿಯಾಡ್ ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಉದಯೋನ್ಮುಖ ಜಾಗತಿಕ ನಾಯಕತ್ವದ ಸಂಕೇತವಾಗಿದೆ ಎಂದು ಅವರು ಹೇಳಿದರು. ಯುವಜನರಲ್ಲಿ ಬಾಹ್ಯಾಕಾಶದ ಬಗ್ಗೆ ಆಸಕ್ತಿಯನ್ನು ಮತ್ತಷ್ಟು ಹೆಚ್ಚಿಸಲು, ʻಭಾರತೀಯ ಬಾಹ್ಯಾಕಾಶ ಹ್ಯಾಕಥಾನ್ʼ ಮತ್ತು ʻರೊಬೊಟಿಕ್ಸ್ ಚಾಲೆಂಜ್ʼ ನಂತಹ ಉಪಕ್ರಮಗಳನ್ನು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ʻಇಸ್ರೋʼ) ಪ್ರಾರಂಭಿಸಿದೆ ಎಂದು ಪ್ರಧಾನಮಂತ್ರಿ ಸಂತೋಷ ವ್ಯಕ್ತಪಡಿಸಿದರು. ಈ ಸ್ಪರ್ಧೆಗಳಲ್ಲಿ ಭಾಗವಹಿಸಿದ ಎಲ್ಲಾ ವಿದ್ಯಾರ್ಥಿಗಳು ಮತ್ತು ವಿಜೇತರನ್ನು ಅವರು ಅಭಿನಂದಿಸಿದರು.

ಶುಭಾಂಶು ಶುಕ್ಲಾ ಅವರೊಂದಿಗೆ ಪ್ರಧಾನಮಂತ್ರಿ ಸಂವಾದ

August 19th, 09:43 am

ಹಾಗಾದರೆ, ಆಸನ ವ್ಯವಸ್ಥೆಗೆ ಸಂಬಂಧಿಸಿದಂತೆ, ಅದು ಹಾಗೆಯೇ ಉಳಿದಿದೆಯೇ?

ಗಗನಯಾತ್ರಿ ಶುಭಾಂಶು ಶುಕ್ಲಾ ಅವರೊಂದಿಗೆ ಸಂವಾದ ನಡೆಸಿದ ಪ್ರಧಾನಮಂತ್ರಿ

August 19th, 09:42 am

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ದೆಹಲಿಯಲ್ಲಿ ನಿನ್ನೆ ಗಗನಯಾತ್ರಿ ಶುಭಾಂಶು ಶುಕ್ಲಾ ಅವರೊಂದಿಗೆ ಸಂವಾದ ನಡೆಸಿದರು. ಬಾಹ್ಯಾಕಾಶ ಪಯಣದ ಪರಿವರ್ತನಾತ್ಮಕ ಅನುಭವಗಳ ಬಗ್ಗೆ ಬೆಳಕು ಚೆಲ್ಲಿದ, ಪ್ರಧಾನಮಂತ್ರಿ ಅವರು, ಇಂತಹ ಮಹತ್ವದ ಪ್ರಯಾಣವನ್ನು ಕೈಗೊಂಡ ನಂತರ, ಒಬ್ಬರ ಬದಲಾವಣೆಯನ್ನು ಅನುಭವಿಸಬೇಕು ಎಂದು ಹೇಳಿದರು ಮತ್ತು ಗಗನಯಾತ್ರಿಗಳು ಈ ಪರಿವರ್ತನೆಯನ್ನು ಹೇಗೆ ಗ್ರಹಿಸುತ್ತಾರೆ ಮತ್ತು ಅನುಭವಿಸುತ್ತಾರೆ ಎಂಬುದನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಿದರು. ಪ್ರಧಾನಮಂತ್ರಿ ಅವರ ಮಾತಿಗೆ ಪ್ರತಿಕ್ರಿಯಿಸಿದ ಶುಭಾಂಶು ಶುಕ್ಲಾ, ಬಾಹ್ಯಾಕಾಶದಲ್ಲಿನ ಪರಿಸರವು ಅತ್ಯಂತ ವಿಭಿನ್ನವಾಗಿದೆ, ಗುರುತ್ವಾಕರ್ಷಣೆಯ ಅನುಪಸ್ಥಿತಿಯು ಪ್ರಮುಖ ಅಂಶವಾಗಿದೆ ಎಂದು ಹೇಳಿದರು.

18ನೇ ಅಂತಾರಾಷ್ಟ್ರೀಯ ಖಗೋಳವಿಜ್ಞಾನ ಮತ್ತು ಖಗೋಳ ಭೌತಶಾಸ್ತ್ರ ಒಲಿಂಪಿಯಾಡ್‌ ಗಾಗಿ ಪ್ರಧಾನಮಂತ್ರಿಯವರ ವೀಡಿಯೋ ಸಂದೇಶ

August 12th, 04:34 pm

64 ದೇಶಗಳಿಂದ ಆಗಮಿಸಿರುವ 300 ಕ್ಕೂ ಹೆಚ್ಚು ತರುಣ ಪ್ರತಿಭೆಗಳ ಜೊತೆ ಸಂವಾದ ನಡೆಸಲು ನನಗೆ ಸಂತೋಷವಾಗುತ್ತಿದೆ. 18ನೇ ಅಂತಾರಾಷ್ಟ್ರೀಯ ಖಗೋಳ ವಿಜ್ಞಾನ ಮತ್ತು ಖಗೋಳ ಭೌತಶಾಸ್ತ್ರದ ಒಲಿಂಪಿಯಾಡ್‌ ಗೆ ನಿಮ್ಮೆಲ್ಲರನ್ನೂ ಭಾರತಕ್ಕೆ ಆತ್ಮೀಯವಾಗಿ ಸ್ವಾಗತಿಸುತ್ತೇನೆ. ಭಾರತದಲ್ಲಿ ಸಂಪ್ರದಾಯ ಮತ್ತು ಹೊಸತನ, ಆಧ್ಯಾತ್ಮಿಕತೆ ಮತ್ತು ವಿಜ್ಞಾನ, ಕುತೂಹಲ ಮತ್ತು ಸೃಜನಶೀಲತೆ ಒಂದಾಗುತ್ತವೆ. ಶತಮಾನಗಳಿಂದಲೂ ಭಾರತೀಯರು ಆಕಾಶವನ್ನು ವೀಕ್ಷಿಸುತ್ತಾ, ಅನೇಕ ದೊಡ್ಡ ಪ್ರಶ್ನೆಗಳನ್ನು ಕೇಳುತ್ತಾ ಬಂದಿದ್ದಾರೆ. ಉದಾಹರಣೆಗೆ, 5ನೇ ಶತಮಾನದಲ್ಲಿ, ಆರ್ಯಭಟ ಸೊನ್ನೆಯನ್ನು ಕಂಡುಹಿಡಿದರು. ಭೂಮಿಯು ತನ್ನದೇ ಅಕ್ಷದ ಮೇಲೆ ಸುತ್ತುತ್ತದೆ ಎಂದು ಹೇಳಿದ ಮೊದಲ ವ್ಯಕ್ತಿ ಕೂಡ ಇವರೇ. ಅಕ್ಷರಶಃ, ಅವರು ಸೊನ್ನೆಯಿಂದಲೇ ಇತಿಹಾಸ ಸೃಷ್ಟಿಸಿದರು!

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 18ನೇ ಅಂತಾರಾಷ್ಟ್ರೀಯ ಖಗೋಳಶಾಸ್ತ್ರ ಮತ್ತು ಖಗೋಳ ಭೌತಶಾಸ್ತ್ರ ಒಲಿಂಪಿಯಾಡ್ ಉದ್ದೇಶಿಸಿ ಮಾತನಾಡಿದರು

August 12th, 04:33 pm

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ವಿಡಿಯೋ ಸಂದೇಶದ ಮೂಲಕ 18 ನೇ ಅಂತಾರಾಷ್ಟ್ರೀಯ ಖಗೋಳಶಾಸ್ತ್ರ ಮತ್ತು ಖಗೋಳ ಭೌತಶಾಸ್ತ್ರ ಒಲಿಂಪಿಯಾಡ್ ಉದ್ದೇಶಿಸಿ ಮಾತನಾಡಿದರು. ಈ ಸಂದರ್ಭದಲ್ಲಿ, ಪ್ರಧಾನಮಂತ್ರಿ ಅವರು 64 ದೇಶಗಳಿಂದ ಬಂದಿದ್ದ 300 ಕ್ಕೂ ಹೆಚ್ಚು ಪ್ರತಿನಿಧಿಗಳೊಂದಿಗೆ ಸಂಪರ್ಕ ಸಾಧಿಸಲು ಸಾಧ್ಯವಾಗಿರುವುದಕ್ಕೆ ಸಂತೋಷ ವ್ಯಕ್ತಪಡಿಸಿದರು ಮತ್ತು ಅಂತರರಾಷ್ಟ್ರೀಯ ಒಲಿಂಪಿಯಾಡ್‌ಗಾಗಿ ಭಾರತಕ್ಕೆ ಅವರನ್ನು ಹೃತ್ಪೂರ್ವಕವಾಗಿ ಸ್ವಾಗತಿಸಿದರು. ಭಾರತದಲ್ಲಿ, ಸಂಪ್ರದಾಯವು ನಾವೀನ್ಯತೆಯನ್ನು ಭೇಟಿ ಮಾಡುತ್ತದೆ, ಆಧ್ಯಾತ್ಮಿಕತೆಯು ವಿಜ್ಞಾನವನ್ನು ಸಂಗಮಿಸುತ್ತದೆ ಮತ್ತು ಕುತೂಹಲವು ಸೃಜನಶೀಲತೆಯನ್ನು ಭೇಟಿ ಮಾಡುತ್ತದೆ. ಶತಮಾನಗಳಿಂದ, ಭಾರತೀಯರು ಆಕಾಶವನ್ನು ಗಮನಿಸುತ್ತಿದ್ದಾರೆ ಮತ್ತು ದೊಡ್ಡ ಪ್ರಶ್ನೆಗಳನ್ನು ಕೇಳುತ್ತಿದ್ದಾರೆ ಎಂದು ಶ್ರೀ ಮೋದಿ ಹೇಳಿದರು. 5 ನೇ ಶತಮಾನದಲ್ಲಿ ಶೂನ್ಯವನ್ನು ಕಂಡುಹಿಡಿದ ಮತ್ತು ಭೂಮಿಯು ತನ್ನ ಅಕ್ಷದ ಮೇಲೆ ತಿರುಗುತ್ತದೆ ಎಂದು ಮೊದಲು ಹೇಳಿದ ಆರ್ಯಭಟನ ಉದಾಹರಣೆಯನ್ನು ಅವರು ಉಲ್ಲೇಖಿಸಿದರು. ಅಕ್ಷರಶಃ, ಅವರು ಶೂನ್ಯದಿಂದ ಪ್ರಾರಂಭಿಸಿ ಇತಿಹಾಸವನ್ನು ನಿರ್ಮಿಸಿದರು! ಎಂಬುದರತ್ತ ಪ್ರಧಾನಮಂತ್ರಿ ಗಮನ ಸೆಳೆದರು.

ತಮಿಳುನಾಡಿನ ಗಂಗೈಕೊಂಡ ಚೋಳಪುರಂ ದೇವಸ್ಥಾನದಲ್ಲಿ ಆದಿ ತಿರುವಥಿರೈ ಕಾರ್ಯಕ್ರಮ ಉದ್ದೇಶಿಸಿ ಪ್ರಧಾನಮಂತ್ರಿ ಭಾಷಣ

July 27th, 12:30 pm

ಅತ್ಯಂತ ಗೌರವಾನ್ವಿತ ಆಧೀನಂ ಮಠಾಧೀಶಗನ್ (ಮುಖ್ಯಸ್ಥರೆ), ಚಿನ್ಮಯ ಮಿಷನ್ ಸ್ವಾಮಿಗಳೆ, ತಮಿಳುನಾಡು ರಾಜ್ಯಪಾಲರಾದ ಆರ್ ಎನ್ ರವಿ ಜಿ, ನನ್ನ ಸಂಪುಟ ಸಹೋದ್ಯೋಗಿ ಡಾ. ಎಲ್ ಮುರುಗನ್ ಜಿ, ಸ್ಥಳೀಯ ಸಂಸದರಾದ ತಿರುಮ-ವಲವನ್ ಜಿ, ವೇದಿಕೆಯಲ್ಲಿರುವ ತಮಿಳುನಾಡು ಸಚಿವರೆ, ಸಂಸತ್ತಿನ ನನ್ನ ಸಹೋದ್ಯೋಗಿ ಶ್ರೀ ಇಳಯರಾಜ ಜಿ, ಇಲ್ಲಿ ನೆರೆದಿರುವ ಎಲ್ಲಾ ಭಕ್ತರೆ, ವಿದ್ಯಾರ್ಥಿಗಳೆ, ಸಹೋದರ ಸಹೋದರಿಯರೆ! ನಮಃ ಶಿವಾಯ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ತಮಿಳುನಾಡಿನ ಗಂಗೈಕೊಂಡ ಚೋಳಪುರಂನಲ್ಲಿ ʻಆದಿ ತಿರುವಥಿರೈʼ ಉತ್ಸವ ಉದ್ದೇಶಿಸಿ ಮಾತನಾಡಿದರು

July 27th, 12:25 pm

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ತಮಿಳುನಾಡಿನ ಗಂಗೈಕೊಂಡ ಚೋಳಪುರಂ ದೇವಸ್ಥಾನದಲ್ಲಿ `ಆದಿ ತಿರುವಥಿರೈ' ಉತ್ಸವ ಉದ್ದೇಶಿಸಿ ಮಾತನಾಡಿದರು. ಸರ್ವಶಕ್ತನಾದ ಶಿವನಿಗೆ ನಮಿಸುತ್ತಾ, ರಾಜ ರಾಜ ಚೋಳನ ಪವಿತ್ರ ಭೂಮಿಯಲ್ಲಿ ದೈವಿಕ ಶಿವದರ್ಶನದ ಮೂಲಕ ಅನುಭವಿಸಿದ ಆಳವಾದ ಆಧ್ಯಾತ್ಮಿಕ ಶಕ್ತಿಯ ಬಗ್ಗೆ ಮಾತನಾಡಿದರು. ಶ್ರೀ ಇಳಯರಾಜಾ ಅವರ ಸಂಗೀತ ಮತ್ತು ಒಥುವರರ ಪವಿತ್ರ ಪಠಣದೊಂದಿಗೆ, ಆಧ್ಯಾತ್ಮಿಕ ವಾತಾವರಣವು ಆತ್ಮವನ್ನು ಆಳವಾಗಿ ಪ್ರಭಾವಿಸಿದೆ ಎಂದು ಶ್ರೀ ಮೋದಿ ಹೇಳಿದರು.

2047 ರಲ್ಲಿ ಅಭಿವೃದ್ಧಿ ಹೊಂದಿದ ಭಾರತದ ಹಾದಿ ಸ್ವಾವಲಂಬನೆಯ ಮೂಲಕ ಸಾಗುತ್ತದೆ: ಮನ್ ಕಿ ಬಾತ್‌ನಲ್ಲಿ ಪ್ರಧಾನಿ ಮೋದಿ

July 27th, 11:30 am

‘ಮನದ ಮಾತಿನಲ್ಲಿ’ ಮತ್ತೊಮ್ಮೆ ನಾವು ದೇಶದ ಯಶಸ್ಸಿನ ಬಗ್ಗೆ, ದೇಶವಾಸಿಗಳ ಸಾಧನೆಗಳ ಬಗ್ಗೆ ಮಾತನಾಡಲಿದ್ದೇವೆ. ಕ್ರೀಡೆಯಾಗಿರಲಿ, ವಿಜ್ಞಾನವಾಗಿರಲಿ ಅಥವಾ ಸಂಸ್ಕೃತಿಯಾಗಿರಲಿ ಎಲ್ಲ ಕ್ಷೇತ್ರಗಳಲ್ಲಿ ಕಳೆದ ಕೆಲವು ವಾರಗಳಲ್ಲಿ, ಪ್ರತಿಯೊಬ್ಬ ಭಾರತೀಯನು ಹೆಮ್ಮೆಪಡುವಂತಹ ಘಟನೆಗಳು ನಡೆದಿವೆ. ಇತ್ತೀಚೆಗೆ, ಬಾಹ್ಯಾಕಾಶದಿಂದ ಶುಭಾಂಶು ಶುಕ್ಲಾ ಹಿಂದಿರುಗಿದ ಕುರಿತು ದೇಶದಲ್ಲಿ ಬಹಳಷ್ಟು ಚರ್ಚೆಗಳು ನಡೆದಿವೆ. ಶುಭಾಂಶು ಭೂಮಿಗೆ ಸುರಕ್ಷಿತವಾಗಿ ಬಂದಿಳಿದ ತಕ್ಷಣ, ಜನರು ಸಂತೋಷದಿಂದ ಕುಣಿದು ಕುಪ್ಪಳಿಸಿದರು, ಪ್ರತಿಯೊಬ್ಬರ ಹೃದಯದಲ್ಲೂ ಸಂತಸದ ಅಲೆ ಹರಿದಾಡಿತು. ಇಡೀ ದೇಶ ಹೆಮ್ಮೆಯಿಂದ ಬೀಗಿತು. ಆಗಸ್ಟ್ 2023 ರಲ್ಲಿ ಚಂದ್ರಯಾನ-3 ರ ಯಶಸ್ವಿ ಲ್ಯಾಂಡಿಂಗ್ ಆದಾಗ, ದೇಶದಲ್ಲಿ ಹೊಸ ವಾತಾವರಣವೇ ಸೃಷ್ಟಿಯಾಗಿದ್ದು ನನಗೆ ನೆನಪಿದೆ. ವಿಜ್ಞಾನ ಮತ್ತು ಬಾಹ್ಯಾಕಾಶದ ಬಗ್ಗೆ ಮಕ್ಕಳಲ್ಲಿ ಹೊಸ ಕುತೂಹಲವೂ ಅರಳಿತು. ಈಗ ಚಿಕ್ಕ ಚಿಕ್ಕ ಮಕ್ಕಳು ಕೂಡ ನಾವು ಬಾಹ್ಯಾಕಾಶಕ್ಕೆ ಹೋಗುತ್ತೇವೆ, ಚಂದ್ರನ ಮೇಲೆ ಇಳಿಯುತ್ತೇವೆ - ನಾವು ಬಾಹ್ಯಾಕಾಶ ವಿಜ್ಞಾನಿಗಳಾಗುತ್ತೇವೆ ಎಂದು ಹೇಳುತ್ತಾರೆ.

ಟ್ರಿನಿಡಾಡ್ ಮತ್ತು ಟೊಬಾಗೊದಲ್ಲಿ ಭಾರತೀಯ ಸಮುದಾಯವನ್ನುದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣದ ಪಠ್ಯ

July 04th, 05:56 am

ಈ ಸಂಜೆ ನಿಮ್ಮೆಲ್ಲರೊಂದಿಗೆ ಇರುವುದು ನನಗೆ ಅಪಾರ ಹೆಮ್ಮೆ ಮತ್ತು ಸಂತೋಷದ ವಿಷಯವಾಗಿದೆ. ಪ್ರಧಾನಮಂತ್ರಿ ಕಮಲಾ ಜೀ ಅವರ ಅದ್ಭುತ ಆತಿಥ್ಯ ಮತ್ತು ಕರುಣಾಮಯಿ ಮಾತುಗಳಿಗೆ ನಾನು ಧನ್ಯವಾದ ಅರ್ಪಿಸುತ್ತೇನೆ.