ಇಥಿಯೋಪಿಯಾದ ಪ್ರಧಾಮಂತ್ರಿಗಳೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಿದ ಪ್ರಧಾಮಂತ್ರಿ
December 17th, 12:02 am
ಪ್ರಧಾಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಅಡಿಸ್ ಅಬಾಬಾದ ರಾಷ್ಟ್ರೀಯ ಅರಮನೆಯಲ್ಲಿ ಇಥಿಯೋಪಿಯಾ ಪ್ರಜಾಸತ್ತಾತ್ಮಕ ಗಣರಾಜ್ಯದ ಪ್ರಧಾನಮಂತ್ರಿ ಘನತೆವೆತ್ತ ಡಾ. ಅಬಿ ಅಹ್ಮದ್ ಅವರನ್ನು ಭೇಟಿಯಾದರು. ಅರಮನೆಗೆ ಆಗಮಿಸಿದ ಪ್ರಧಾನಮಂತ್ರಿ ಮೋದಿ ಅವರನ್ನು ಡಾ. ಅಬಿ ಅಹ್ಮದ್ ಅವರು ಆತ್ಮೀಯವಾಗಿ ಸ್ವಾಗತಿಸಿದರು ಮತ್ತು ವಿಧ್ಯುಕ್ತ ಸ್ವಾಗತ ನೀಡಿದರು.ಇಥಿಯೋಪಿಯಾಗೆ ಪ್ರಧಾನಮಂತ್ರಿ ಆಗಮನ - ಭವ್ಯ ಸ್ವಾಗತ
December 16th, 06:21 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಥಿಯೋಪಿಯಾಗೆ ತಮ್ಮ ಮೊದಲ ದ್ವಿಪಕ್ಷೀಯ ಭೇಟಿಯಾಗಿ ಅಡಿಸ್ ಅಬಾಬಾ ತಲುಪಿದ್ದಾರೆ. ವಿಮಾನ ನಿಲ್ದಾಣಕ್ಕೆ ಆಗಮಿಸಿದ ಅವರಿಗೆ ವಿಶೇಷ ಅಭಿವ್ಯಕ್ತಿಯೊಂದಿಗೆ ಇಥಿಯೋಪಿಯಾದ ಪ್ರಧಾನಮಂತ್ರಿ ಡಾ. ಅಬಿಯ್ ಅಹ್ಮದ್ ಅಲಿ ಅವರು ಆತ್ಮೀಯ ಮತ್ತು ವರ್ಣಮಯ ಸ್ವಾಗತ ನೀಡಿದರು.ಮಾಲ್ಡೀವ್ಸ್ ಅಧ್ಯಕ್ಷರನ್ನು ಭೇಟಿಯಾದ ಪ್ರಧಾನಮಂತ್ರಿ
July 25th, 08:48 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಮಾಲೆಯಲ್ಲಿರುವ ಅಧ್ಯಕ್ಷರ ಕಚೇರಿಯಲ್ಲಿ ಮಾಲ್ಡೀವ್ಸ್ ಗಣರಾಜ್ಯದ ಘನತೆವೆತ್ತ ಅಧ್ಯಕ್ಷರಾದ ಡಾ. ಮೊಹಮ್ಮದ್ ಮುಯಿಝು ಅವರನ್ನು ಭೇಟಿಯಾದರು. ಸಭೆಗೂ ಮುನ್ನ, ಅಧ್ಯಕ್ಷ ಮುಯಿಝು ಅವರು ಪ್ರಧಾನ ಮಂತ್ರಿಯವರನ್ನು ಬರಮಾಡಿಕೊಂಡು ಗಣರಾಜ್ಯ ಚೌಕದಲ್ಲಿ ಅವರಿಗೆ ಔಪಚಾರಿಕ ಸ್ವಾಗತ ನೀಡಿದರು. ಸಭೆಯು ಆತ್ಮೀಯವಾಗಿತ್ತು ಮತ್ತು ಎರಡೂ ದೇಶಗಳ ನಡುವಿನ ಆಳವಾದ ಸ್ನೇಹವನ್ನು ದೃಢೀಕರಿಸಿತು.