ಸಿಕ್ಕಿಂ ರಾಜ್ಯ ಸಂಸ್ಥಾಪನಾ ದಿನದಂದು ಸಿಕ್ಕಿಂ ಜನತೆಗೆ ಶುಭ ಕೋರಿದ ಪ್ರಧಾನಮಂತ್ರಿ
May 16th, 01:32 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ರಾಜ್ಯ ಸಂಸ್ಥಾಪನಾ ದಿನದ ಸಂದರ್ಭದಲ್ಲಿ ಸಿಕ್ಕಿಂ ಜನತೆಗೆ ಶುಭಾಶಯ ಕೋರಿದ್ದಾರೆ, ಈ ವರ್ಷ ಸಿಕ್ಕಿಂ ತನ್ನ 50ನೇ ರಾಜ್ಯೋತ್ಸವ ದಿನವನ್ನು ಆಚರಿಸುತ್ತಿರುವ ಸಂದರ್ಭದಲ್ಲಿ ಇದು ಐತಿಹಾಸಿಕ ಮೈಲಿಗಲ್ಲಾಗಿದೆ. ಭಾರತದ ಅಭಿವೃದ್ಧಿ ಪಯಣಕ್ಕೆ ಸಿಕ್ಕಿಂನ ಕೊಡುಗೆ ಆಳವಾಗಿ ಮೌಲ್ಯಯುತವಾಗಿದೆ ಮತ್ತು ಪ್ರಶಂಸಿಸಲ್ಪಡುತ್ತದೆ ಎಂದು ಶ್ರೀ ನರೇಂದ್ರ ಮೋದಿ ಹೇಳಿದರು. 50ನೇ ರಾಜ್ಯೋತ್ಸವ ದಿನಾಚರಣೆಯ ಸಂದರ್ಭದಲ್ಲಿ ಸಿಕ್ಕಿಂಗೆ ತಾವು ಇತ್ತೀಚೆಗೆ ಭೇಟಿ ನೀಡಿದ್ದನ್ನು ಸ್ಮರಿಸಿದ ಪ್ರಧಾನಮಂತ್ರಿ ಅವರು, ರಾಜ್ಯದ ಜನರು ತೋರಿದ ಆತ್ಮೀಯತೆ ಮತ್ತು ವಾತ್ಸಲ್ಯದಿಂದ ತಮ್ಮನ್ನು ಆಳವಾಗಿ ಸ್ಪರ್ಶಿಸಿದ್ದೇನೆ ಎಂದು ಹೇಳಿದರು.ಪ್ರಧಾನಮಂತ್ರಿ ಮೇ 10-11 ರಂದು ಗುಜರಾತ್‌ಗೆ ಭೇಟಿ
May 09th, 11:19 am
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2026ರ ಮೇ 10-11 ರಂದು ಗುಜರಾತ್‌ಗೆ ಭೇಟಿ ನೀಡಲಿದ್ದಾರೆ. ಅವರು ಮೇ 10 ರಂದು ತಡರಾತ್ರಿ ಗುಜರಾತ್‌ನ ಜಾಮ್‌ನಗರಕ್ಕೆ ಆಗಮಿಸಲಿದ್ದಾರೆ. ಪ್ರಧಾನಮಂತ್ರಿ ಮೇ 11 ರಂದು ಬೆಳಿಗ್ಗೆ 10:15 ರ ಸುಮಾರಿಗೆ ಸೋಮನಾಥ ದೇವಾಲಯದಲ್ಲಿ ಸೋಮನಾಥ ಅಮೃತ ಮಹೋತ್ಸವದಲ್ಲಿ ಭಾಗವಹಿಸಲಿದ್ದಾರೆ. ನಂತರ ಪ್ರಧಾನಮಂತ್ರಿ ಸಂಜೆ 6 ಗಂಟೆಗೆ ವಡೋದರಾಕ್ಕೆ ಪ್ರಯಾಣಿಸಲಿದ್ದಾರೆ. ಅಲ್ಲಿ ಅವರು ಸರ್ದಾರ್ ಧಾಮ್ ವಸತಿ ನಿಲಯವನ್ನು ಉದ್ಘಾಟಿಸಲಿದ್ದಾರೆ. ಎರಡೂ ಸಂದರ್ಭಗಳಲ್ಲಿ ಅವರು ಸಾರ್ವಜನಿಕ ಸಭೆಗಳನ್ನು ಉದ್ದೇಶಿಸಿ ಭಾಷಣ ಮಾಡಲಿದ್ದಾರೆ.ಪ್ರಧಾನಮಂತ್ರಿ ಮೇ 10 ರಂದು ಕರ್ನಾಟಕ ಮತ್ತು ತೆಲಂಗಾಣಕ್ಕೆ ಭೇಟಿ
May 09th, 11:17 am
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2026ರ ಮೇ 10 ರಂದು ಕರ್ನಾಟಕ ಮತ್ತು ತೆಲಂಗಾಣಕ್ಕೆ ಭೇಟಿ ನೀಡಲಿದ್ದಾರೆ. ಪ್ರಧಾನ ಮಂತ್ರಿ ಬೆಳಿಗ್ಗೆ ಸುಮಾರು 11 ಗಂಟೆಗೆ ಬೆಂಗಳೂರಿನಲ್ಲಿ ನಡೆಯಲಿರುವ ಆರ್ಟ್ ಆಫ್ ಲಿವಿಂಗ್‌ನ 45ನೇ ವಾರ್ಷಿಕೋತ್ಸವದಲ್ಲಿ ಭಾಗವಹಿಸಿ, ಅಲ್ಲಿ ಸಭೆಯನ್ನುದ್ದೇಶಿಸಿ ಮಾತನಾಡಲಿದ್ದಾರೆ. ನಂತರ ಪ್ರಧಾನಮಂತ್ರಿ ಹೈದರಾಬಾದ್‌ಗೆ ಪ್ರಯಾಣಿಸಲಿದ್ದಾರೆ ಮತ್ತು ಮಧ್ಯಾಹ್ನ 3 ಗಂಟೆಗೆ ಸುಮಾರು 9,400 ಕೋಟಿ ರೂ. ಮೌಲ್ಯದ ಬಹು ಅಭಿವೃದ್ಧಿ ಯೋಜನೆಗಳಿಗೆ ಶಂಕುಸ್ಥಾಪನೆ, ಉದ್ಘಾಟನೆ ಮತ್ತು ಲೋಕಾರ್ಪಣೆ ಮಾಡಲಿದ್ದಾರೆ. ಈ ಸಂದರ್ಭದಲ್ಲಿ ಅವರು ಸಭೆಯನ್ನುದ್ದೇಶಿಸಿ ಮಾತನಾಡಲಿದ್ದಾರೆ. ಮಧ್ಯಾಹ್ನ 3:45 ರ ಸುಮಾರಿಗೆ ಪ್ರಧಾನಮಂತ್ರಿ ಹೈದರಾಬಾದ್‌ನಲ್ಲಿರುವ ಸಿಂಧು ಆಸ್ಪತ್ರೆಯನ್ನು ರಾಷ್ಟ್ರಕ್ಕೆ ಸಮರ್ಪಿಸಲಿದ್ದಾರೆ.ಗುಜರಾತ್ ದಿನದ ವಿಶೇಷ ಸಂದರ್ಭದಲ್ಲಿ ಗುಜರಾತ್ ಜನತೆಗೆ ಹಾರ್ದಿಕ ಶುಭಾಶಯಗಳನ್ನು ಕೋರಿದ ಪ್ರಧಾನಮಂತ್ರಿ
May 01st, 09:14 am
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಗುಜರಾತ್ ದಿನದ ವಿಶೇಷ ಸಂದರ್ಭದಲ್ಲಿ ಗುಜರಾತ್ ಜನತೆಗೆ ಹಾರ್ದಿಕ ಶುಭಾಶಯಗಳನ್ನು ಕೋರಿದ್ದಾರೆ.ಮನ್ ಕಿ ಬಾತ್ ನಲ್ಲಿ 2027 ರ ಡಿಜಿಟಲ್ ಜನಗಣತಿಯನ್ನು ಯಶಸ್ವಿಗೊಳಿಸುವಂತೆ ಪ್ರಧಾನಿ ಮೋದಿ ದೇಶವಾಸಿಗಳನ್ನು ಕೋರಿದ್ದಾರೆ
April 26th, 11:30 am
ಈ ತಿಂಗಳ ಮನ್ ಕಿ ಬಾತ್ ಸಂಚಿಕೆಯಲ್ಲಿ, ಪ್ರಧಾನಿ ಮೋದಿ ಪರಮಾಣು ಮತ್ತು ಪವನ ಇಂಧನ ಕ್ಷೇತ್ರಗಳಲ್ಲಿ ಭಾರತದ ಪ್ರಗತಿಯನ್ನು ಎತ್ತಿ ತೋರಿಸಿದರು. ಭಗವಾನ್ ಬುದ್ಧನ ಬೋಧನೆಗಳು, ಬೀಟಿಂಗ್ ರಿಟ್ರೀಟ್ ಸಮಾರಂಭ, ಪ್ರಕೃತಿ ಸಂರಕ್ಷಣೆ, ಬಿದಿರು ವಲಯ, ಪ್ರಾಚೀನ ಗ್ರಂಥಗಳು ಮತ್ತು ಗಣಿತ ಒಲಿಂಪಿಯಾಡ್ ಕಾರ್ಯಕ್ರಮ ಸೇರಿದಂತೆ ಹಲವಾರು ಪ್ರಮುಖ ವಿಷಯಗಳನ್ನು ಅವರು ಸ್ಪರ್ಶಿಸಿದರು. ನಡೆಯುತ್ತಿರುವ ಡಿಜಿಟಲ್ ಜನಗಣತಿ ಅಭಿಯಾನದ ಬಗ್ಗೆಯೂ ಪ್ರಧಾನಿ ಮಾತನಾಡಿದರು ಮತ್ತು ಪ್ರತಿಯೊಬ್ಬರೂ ಈ ಪ್ರಕ್ರಿಯೆಯಲ್ಲಿ ಭಾಗವಹಿಸುವಂತೆ ಒತ್ತಾಯಿಸಿದರು.ಈಸ್ಟರ್ ಹಬ್ಬದ ಶುಭಾಶಯ ಕೋರಿದ ಪ್ರಧಾನಮಂತ್ರಿ
April 05th, 09:02 am
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಈಸ್ಟರ್ ಸಂದರ್ಭದಲ್ಲಿ ಶುಭಾಶಯ ಕೋರಿದ್ದಾರೆ.ಗುಜರಾತ್‌ನ ಪೋರಬಂದರ್‌ನಲ್ಲಿ ನಡೆಯುತ್ತಿರುವ ಮಾಧವಪುರ ಮೇಳದ ಅಂಗವಾಗಿ ಶುಭಾಶಯಗಳನ್ನು ತಿಳಿಸಿದ ಪ್ರಧಾನಮಂತ್ರಿ
March 29th, 10:23 am
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಪೋರಬಂದರ್‌ನಲ್ಲಿ ನಡೆಯುತ್ತಿರುವ ಮಾಧವಪುರ ಮೇಳಕ್ಕೆ ಹಾರ್ದಿಕ ಶುಭಾಶಯಗಳನ್ನು ಕೋರಿದರು. ಈ ಸಾಂಸ್ಕೃತಿಕ ಹಬ್ಬವು ನಮ್ಮ ಭವ್ಯ ಪರಂಪರೆಯನ್ನು ತೋರಿಸುವುದರ ಜೊತೆಗೆ, ಗುಜರಾತ್ ಮತ್ತು ಈಶಾನ್ಯ ಭಾರತದ ನಡುವಿನ ಶಾಶ್ವತ ಸಾಂಸ್ಕೃತಿಕ ಬಾಂಧವ್ಯವನ್ನು ಬಲಪಡಿಸುತ್ತದೆ ಎಂದು ಅವರು ಹೇಳಿದ್ದಾರೆ. “ಈ ಹಬ್ಬವು ವಿಭಿನ್ನ ಸಂಪ್ರದಾಯಗಳನ್ನು ಒಂದೇ ವೇದಿಕೆಯಲ್ಲಿ ಸೇರಿಸಿ ‘ಏಕ್ ಭಾರತ್, ಶ್ರೇಷ್ಠ ಭಾರತ್’ ಎಂಬ ಮನೋಭಾವವನ್ನು ಪ್ರತಿಬಿಂಬಿಸುತ್ತದೆ. ಎಲ್ಲರೂ ಈ ಮೇಳಕ್ಕೆ ಭೇಟಿ ನೀಡುವಂತೆ ನಾನು ಕರೆ ನೀಡುತ್ತೇನೆ,” ಎಂದು ಮೋದಿ ತಿಳಿಸಿದ್ದಾರೆ.ಕೇರಳದ ಆರ್ಯ ವೈದ್ಯ ಶಾಲಾ ಚಾರಿಟೇಬಲ್ ಆಸ್ಪತ್ರೆಯ ಶತಮಾನೋತ್ಸವ ಸಮಾರಂಭದಲ್ಲಿ ಪ್ರಧಾನಮಂತ್ರಿ ಅವರ ಭಾಷಣದ ಕನ್ನಡ ಅವತರಣಿಕೆ
January 28th, 02:39 pm
ಇಂದು ಈ ಮಹತ್ವದ ಸಂದರ್ಭದಲ್ಲಿ, ನಿಮ್ಮೆಲ್ಲರೊಂದಿಗೆ ಸಂಪರ್ಕ ಸಾಧಿಸುವುದು ನನಗೆ ಸಂತೋಷದ ಸಂಗತಿಯಾಗಿದೆ. ಆರ್ಯ ವೈದ್ಯ ಶಾಲೆಯು ಆಯುರ್ವೇದವನ್ನು ಕಾಪಿಡುವಲ್ಲಿ, ರಕ್ಷಿಸುವಲ್ಲಿ ಮತ್ತು ಮುನ್ನಡೆಸುವಲ್ಲಿ ಮಹತ್ವದ ಕೊಡುಗೆಯನ್ನು ಹೊಂದಿದೆ. 125 ವರ್ಷಗಳ ತನ್ನ ಪ್ರಯಾಣದಲ್ಲಿ, ಈ ಸಂಸ್ಥೆಯು ಆಯುರ್ವೇದವನ್ನು ಪ್ರಬಲ ಚಿಕಿತ್ಸಾ ವ್ಯವಸ್ಥೆಯಾಗಿ ಸ್ಥಾಪಿಸಿದೆ. ಇಂದು ಈ ಸಂದರ್ಭದಲ್ಲಿ, ಆರ್ಯ ವೈದ್ಯ ಶಾಲೆಯ ಸ್ಥಾಪಕ ವೈದ್ಯರತ್ನಂ ಪಿ.ಎಸ್. ವಾರಿಯರ್ ಜೀ ಅವರ ಕೊಡುಗೆಗಳನ್ನು ನಾನು ಸ್ಮರಿಸುತ್ತೇನೆ. ಆಯುರ್ವೇದದ ಬಗ್ಗೆ ಅವರ ದೃಷ್ಟಿಕೋನ ಮತ್ತು ಸಾರ್ವಜನಿಕ ಕಲ್ಯಾಣಕ್ಕಾಗಿ ಅವರ ಸಮರ್ಪಣೆ ಇಂದಿಗೂ ನಮಗೆ ಸ್ಫೂರ್ತಿ ನೀಡುತ್ತದೆ.ಕೇರಳದ ಆರ್ಯ ವೈದ್ಯ ಸಾಲಾ ಚಾರಿಟೇಬಲ್ ಆಸ್ಪತ್ರೆಯ ಶತಮಾನೋತ್ಸವ ಸಮಾರಂಭ ಉದ್ದೇಶಿಸಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಭಾಷಣ
January 28th, 02:25 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಕೇರಳದ ಆರ್ಯ ವೈದ್ಯ ಸಾಲಾ ಚಾರಿಟೇಬಲ್ ಆಸ್ಪತ್ರೆಯ ಶತಮಾನೋತ್ಸವ ಸಮಾರಂಭವನ್ನು ಉದ್ದೇಶಿಸಿ ವಿಡಿಯೋ ಸಂದೇಶದ ಮೂಲಕ ಮಾತನಾಡಿದರು. ಈ ಸಂದರ್ಭವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾಮಂತ್ರಿ, ಈ ಶುಭ ಸಂದರ್ಭದಲ್ಲಿ ಎಲ್ಲರೊಂದಿಗೂ ಸಂಪರ್ಕ ಸಾಧಿಸುತ್ತಿರುವುದು ಸಂತೋಷದ ವಿಷಯ ಎಂದು ಹೇಳಿದರು. ಆರ್ಯ ವೈದ್ಯಶಾಲೆ ಆಯುರ್ವೇದವನ್ನು ಸಂರಕ್ಷಿಸುವಲ್ಲಿ, ರಕ್ಷಣೆ ಮಾಡುವಲ್ಲಿ ಮತ್ತು ಮುನ್ನಡೆಸುವಲ್ಲಿ ಮಹತ್ವದ ಪಾತ್ರ ವಹಿಸಿದೆ ಎಂದು ಅವರು ಪ್ರಮುಖವಾಗಿ ಪ್ರಸ್ತಾಪಿಸಿದರು. ತನ್ನ 125 ವರ್ಷಗಳ ಪಯಣದಲ್ಲಿ, ಸಂಸ್ಥೆಯು ಆಯುರ್ವೇದವನ್ನು ಪ್ರಬಲ ಚಿಕಿತ್ಸಾ ವ್ಯವಸ್ಥೆಯಾಗಿ ಸ್ಥಾಪಿಸಿದೆ ಎಂದು ಶ್ರೀ ನರೇಂದ್ರ ಮೋದಿ ಉಲ್ಲೇಖಿಸಿದರು. ಆರ್ಯ ವೈದ್ಯಶಾಲೆಯ ಸಂಸ್ಥಾಪಕ ವೈದ್ಯರತ್ನಂ ಪಿ.ಎಸ್. ವೇರಿಯರ್ ಅವರ ಕೊಡುಗೆಗಳನ್ನು ಸ್ಮರಿಸಿದ ಪ್ರಧಾನಮಂತ್ರಿ, ಆಯುರ್ವೇದದ ಬಗೆಗಿನ ಅವರ ವಿಧಾನವು ಮತ್ತು ಸಾರ್ವಜನಿಕ ಕಲ್ಯಾಣಕ್ಕಾಗಿ ಅವರ ಬದ್ಧತೆಯು ಸದಾ ಸ್ಫೂರ್ತಿ ನೀಡುವುದು ಮುಂದುವರಿಯುತ್ತದೆ ಎಂದು ಒತ್ತಿ ಹೇಳಿದರು.ರಾಷ್ಟ್ರ ಗರಿಮೆಯಿಂದ ಕೂಡಿದ ಉತ್ಸಾಹಭರಿತ ಗಣರಾಜ್ಯೋತ್ಸವ ಆಚರಣೆಗೆ ಪ್ರಧಾನಮಂತ್ರಿ ಮೆಚ್ಚುಗೆ
January 26th, 04:50 pm
ಕರ್ತವ್ಯ ಪಥದಲ್ಲಿ ನಡೆದ ಭವ್ಯ ಮೆರವಣಿಯು ಭಾರತದ ಪ್ರಜಾಪ್ರಭುತ್ವದ ಶಕ್ತಿ, ಪರಂಪರೆಯ ಶ್ರೀಮಂತಿಕೆ ಮತ್ತು ದೇಶವನ್ನು ಒಗ್ಗೂಡಿಸಿರುವ ಏಕತೆಯನ್ನು ಪ್ರದರ್ಶಿಸಿತು ಎಂದು ಅವರು ಒತ್ತಿ ಹೇಳಿದ್ದಾರೆ. ಕಾರ್ಯಕ್ರಮದ ನೋಟಗಳನ್ನು ಹಂಚಿಕೊಳ್ಳುತ್ತಾ ಅವರು, ಗಣರಾಜ್ಯೋತ್ಸವ ಸಮಾರಂಭದಲ್ಲಿ ಕರ್ತವ್ಯ ಪಥವು ರಾಷ್ಟ್ರೀಯ ಹೆಮ್ಮೆಯ ಶಕ್ತಿಶಾಲಿ ಪ್ರದರ್ಶನಕ್ಕೆ ಸಾಕ್ಷಿಯಾಯಿತು ಎಂದಿದ್ದಾರೆ.ಸ್ವಾಮಿನಾರಾಯಣ ಶಿಕ್ಷಾಪತ್ರಿಯ ದ್ವಿಶತಮಾನೋತ್ಸವ ಆಚರಣೆಯ ಸಂದರ್ಭದಲ್ಲಿ ಪ್ರಧಾನಮಂತ್ರಿ ಅವರು ಮಾಡಿದ ಭಾಷಣದ ಕನ್ನಡ ಅವತರಣಿಕೆ
January 23rd, 02:12 pm
ಇಂದು ನಾವೆಲ್ಲರೂ ಒಂದು ವಿಶೇಷ ಸಂದರ್ಭಕ್ಕೆ ಸಾಕ್ಷಿಯಾಗುತ್ತಿದ್ದೇವೆ. 200 ವರ್ಷಗಳ ಈ ಸಂದರ್ಭದಲ್ಲಿ, ಸ್ವಾಮಿನಾರಾಯಣ ಶಿಕ್ಷಾಪತ್ರಿಯ ದ್ವಿಶತಮಾನೋತ್ಸವ ಆಚರಣೆಯು, ನಾವೆಲ್ಲರೂ ಈ ಪವಿತ್ರ ಉತ್ಸವದಲ್ಲಿ ಭಾಗವಹಿಸುತ್ತಿರುವುದು ನಮಗೆಲ್ಲರಿಗೂ ಶುಭದ ಸಂಗತಿ. ಈ ಪವಿತ್ರ ಅವಧಿಯಲ್ಲಿ, ನಿಮ್ಮೆಲ್ಲ ಸಂತರಿಗೆ ನಾನು ನಮಸ್ಕರಿಸುತ್ತೇನೆ. ದ್ವಿಶತಮಾನೋತ್ಸವ ಉತ್ಸವದಂದು ಸ್ವಾಮಿನಾರಾಯಣರ ಕೋಟ್ಯಂತರ ಅನುಯಾಯಿಗಳನ್ನು ನಾನು ಅಭಿನಂದಿಸುತ್ತೇನೆ.ʻಶಿಕ್ಷಾಪತ್ರಿ ದ್ವಿಶತಾಬ್ದಿ ಮಹೋತ್ಸವʼ ಉದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ
January 23rd, 02:00 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ʻಶಿಕ್ಷಾಪತ್ರಿ ದ್ವಿಶತಾಬ್ದಿ ಮಹೋತ್ಸವʼದಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ಭಾಗಿಯಾಗಿ ತಮ್ಮ ಮಾತುಗಳನ್ನು ಹಂಚಿಕೊಂಡರು. ಈ ಸಂದರ್ಭದಲ್ಲಿ ಮಾತನಾಡಿದ ಶ್ರೀ ನರೇಂದ್ರ ಮೋದಿ ಅವರು, ಭಗವಾನ್ ಸ್ವಾಮಿನಾರಾಯಣ ಅವರ ʻಶಿಕ್ಷಾಪತ್ರಿʼಯ 200ನೇ ವರ್ಷಾಚರಣೆಯ ವಿಶೇಷ ಸಂದರ್ಭಕ್ಕೆ ಇಂದು ಎಲ್ಲರೂ ಸಾಕ್ಷಿಯಾಗುತ್ತಿದ್ದಾರೆ ಎಂದು ಒತ್ತಿ ಹೇಳಿದರು. ದ್ವಿಶತಮಾನೋತ್ಸವ ಆಚರಣೆಯು ಈ ಪವಿತ್ರ ಸಂದರ್ಭದ ಭಾಗಿಯಾಗುವುದು ನಿಜಕ್ಕೂ ಪ್ರತಿಯೊಬ್ಬರ ಸೌಭಾಗ್ಯವೇ ಸರಿ ಎಂದರು. ಈ ಪವಿತ್ರ ಸಮಯದಲ್ಲಿ ಎಲ್ಲಾ ಸಂತರಿಗೆ ನಮಸ್ಕರಿಸುವುದಾಗಿ ಹೇಳಿದ ಶ್ರೀ ಮೋದಿ ಅವರು, ದ್ವಿಶತಮಾನೋತ್ಸವದ ಸಂದರ್ಭದಲ್ಲಿ ಭಗವಾನ್ ಸ್ವಾಮಿನಾರಾಯಣರ ಕೋಟ್ಯಂತರ ಅನುಯಾಯಿಗಳಿಗೆ ಶುಭಾಶಯಗಳನ್ನು ಕೋರಿದರು.ನವೆಂಬರ್ 26 ರಂದು ʻಸಂವಿಧಾನ ಸದನʼದ ಸೆಂಟ್ರಲ್ ಹಾಲ್‌ನಲ್ಲಿ ನಡೆಯಲಿರುವ ʻಸಂವಿಧಾನ ದಿನಾಚರಣೆʼ ಕಾರ್ಯಕ್ರಮದಲ್ಲಿ ಭಾಗವಹಿಸಲಿರುವ ಪ್ರಧಾನಮಂತ್ರಿ
November 25th, 04:19 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ನವೆಂಬರ್ 26 ರಂದು ಬೆಳಗ್ಗೆ 11 ಗಂಟೆಗೆ ಸಂವಿಧಾನ ಸದನದ ಸೆಂಟ್ರಲ್ ಹಾಲ್‌ನಲ್ಲಿ ನಡೆಯುವ ʻಸಂವಿಧಾನ ದಿನಾಚರಣೆʼಯಲ್ಲಿ ಭಾಗವಹಿಸಲಿದ್ದಾರೆ. ಈ ವರ್ಷವು ಸಂವಿಧಾನವನ್ನು ಅಂಗೀಕರಿಸಿದ 76ನೇ ವಾರ್ಷಿಕೋತ್ಸವವನ್ನು ಸೂಚಿಸುತ್ತದೆ.ನವೆಂಬರ್ 19 ರಂದು ಆಂಧ್ರಪ್ರದೇಶ ಮತ್ತು ತಮಿಳುನಾಡಿಗೆ ಭೇಟಿ ನೀಡಲಿರುವ ಪ್ರಧಾನಮಂತ್ರಿ
November 18th, 11:38 am
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ನವೆಂಬರ್ 19 ರಂದು ಆಂಧ್ರಪ್ರದೇಶ ಮತ್ತು ತಮಿಳುನಾಡಿಗೆ ಭೇಟಿ ನೀಡಲಿದ್ದಾರೆ.ದೆಹಲಿಯ ಚಿತ್ತರಂಜನ್ ಉದ್ಯಾನವನದಲ್ಲಿ ನಡೆದ ದುರ್ಗಾ ಪೂಜೆಯಲ್ಲಿ ಪ್ರಧಾನಮಂತ್ರಿ ಭಾಗಿ
September 30th, 09:24 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ದೆಹಲಿಯ ಚಿತ್ತರಂಜನ್ ಉದ್ಯಾನವನದಲ್ಲಿ ಮಹಾ ಅಷ್ಟಮಿಯ ಶುಭ ಸಂದರ್ಭದಲ್ಲಿ ಇಂದು ನಡೆದ ದುರ್ಗಾ ಪೂಜೆಯಲ್ಲಿ ಪಾಲ್ಗೊಂಡರು.ರಾಷ್ಟ್ರೀಯ ಕೈಮಗ್ಗ ದಿನದ ಶುಭಾಶಯ ಕೋರಿದ ಪ್ರಧಾನಮಂತ್ರಿ
August 07th, 03:31 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ರಾಷ್ಟ್ರೀಯ ಕೈಮಗ್ಗ ದಿನದ ಶುಭಾಶಯ ಕೋರಿದ್ದಾರೆ. ನಮ್ಮ ಜನರ ಸೃಜನಶೀಲತೆಯನ್ನು ಪ್ರದರ್ಶಿಸುವ ನಮ್ಮ ಶ್ರೀಮಂತ ನೇಯ್ಗೆ ಸಂಪ್ರದಾಯವನ್ನು ಆಚರಿಸುವ ದಿನ ಇಂದು. ನಮಗೆ ಭಾರತದ ಕೈಮಗ್ಗದ ವೈವಿಧ್ಯತೆ ಮತ್ತು ಜೀವನೋಪಾಯ ಹಾಗೂ ಸಮೃದ್ಧಿಯನ್ನು ಹೆಚ್ಚಿಸುವಲ್ಲಿ ಅದರ ಪಾತ್ರದ ಬಗ್ಗೆ ಹೆಮ್ಮೆಯಿದೆ ಎಂದು ಶ್ರೀ ಮೋದಿ ಅವರು ಹೇಳಿದರು.ಮಾಲ್ಡೀವ್ಸ್ ದೇಶದ ಸ್ವಾತಂತ್ರ್ಯದ 60ನೇ ವಾರ್ಷಿಕೋತ್ಸವದಲ್ಲಿ ಗೌರವ ಅತಿಥಿಯಾಗಿ ಭಾಗವಹಿಸಿದ ಪ್ರಧಾನಮಂತ್ರಿ
July 26th, 06:47 pm
ರಾಜಧಾನಿ ಮಾಲೆ ಭೇಟಿಯ ಸಂದರ್ಭದಲ್ಲಿ, ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಮಾಲ್ಡೀವ್ಸ್ ನ ಸ್ವಾತಂತ್ರ್ಯದ 60 ನೇ ವಾರ್ಷಿಕೋತ್ಸವ ಸಮಾರಂಭದಲ್ಲಿ 'ಗೌರವ ಅತಿಥಿ'ಯಾಗಿ ಭಾಗವಹಿಸಿದರು. ಮಾಲ್ಡೀವ್ಸ್ ನಲ್ಲಿ ಈತನಕದ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಭಾರತದ ಪ್ರಧಾನಮಂತ್ರಿಯೊಬ್ಬರು ಭಾಗವಹಿಸುತ್ತಿರುವುದು ಇದೇ ಮೊದಲು. ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಮಾಲ್ಡೀವ್ಸ್ ಅಧ್ಯಕ್ಷರಾದ ಶ್ರೀ ಮುಯಿಝು ಅವರು ಆತಿಥ್ಯ ವಹಿಸಿದ ರಾಷ್ಟ್ರ ಅಥವಾ ಸರ್ಕಾರದ ಮುಖ್ಯಸ್ಥರ ಮಟ್ಟದ ವಿಶೇಷ ಸಭೆಯಲ್ಲಿ ಭಾಗವಹಿಸಿದ ಮೊದಲ ವಿದೇಶಿ ನಾಯಕರಾಗಿದ್ದಾರೆ.2025ರ ಜೂನ್ 24ರಂದು ಶ್ರೀ ನಾರಾಯಣ ಗುರು ಮತ್ತು ಮಹಾತ್ಮಾ ಗಾಂಧಿ ನಡುವಿನ ಸಂಭಾಷಣೆಯ ಶತಮಾನೋತ್ಸವ ಸಮಾರಂಭವನ್ನು ಉದ್ಘಾಟಿಸಲಿರುವ ಪ್ರಧಾನಮಂತ್ರಿ
June 23rd, 05:24 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2025ರ ಜೂನ್ 24ರಂದು ಬೆಳಗ್ಗೆ 11 ಗಂಟೆಗೆ ನವದೆಹಲಿಯ ವಿಜ್ಞಾನ ಭವನದಲ್ಲಿ ಭಾರತದ ಇಬ್ಬರು ಶ್ರೇಷ್ಠ ಆಧ್ಯಾತ್ಮಿಕ ಮತ್ತು ಸನ್ನಡತೆಯ ನಾಯಕರಾದ ಶ್ರೀ ನಾರಾಯಣ ಗುರು ಮತ್ತು ಮಹಾತ್ಮ ಗಾಂಧಿ ನಡುವಿನ ಐತಿಹಾಸಿಕ ಸಂಭಾಷಣೆಯ ಶತಮಾನೋತ್ಸವ ಆಚರಣೆಯನ್ನು ಉದ್ಘಾಟಿಸಲಿದ್ದಾರೆ. ಈ ಸಂದರ್ಭದಲ್ಲಿಅವರು ಸಭಿಕರನ್ನುದ್ದೇಶಿಸಿ ಭಾಷಣ ಮಾಡಲಿದ್ದಾರೆ.ಮಾರಿಷಸ್ ಭೇಟಿಗೆ ಮುನ್ನ ಪ್ರಧಾನಮಂತ್ರಿಯವರ ನಿರ್ಗಮನದ ಹೇಳಿಕೆ
March 10th, 06:18 pm
ಮಾರಿಷಸ್ ಪ್ರಧಾನಿ, ನನ್ನ ಸ್ನೇಹಿತ ಡಾ. ನವೀನ್ ಚಂದ್ರ ರಾಮಗೂಲಂ ಅವರ ಆಹ್ವಾನದ ಮೇರೆಗೆ, ನಾನು ಮಾರಿಷಸ್ ನ 57ನೇ ರಾಷ್ಟ್ರೀಯ ದಿನಾಚರಣೆಯಲ್ಲಿ ಪಾಲ್ಗೊಳ್ಳಲು ಆ ರಾಷ್ಟ್ರಕ್ಕೆ ಎರಡು ದಿನಗಳ ಭೇಟಿ ಕೈಗೊಳ್ಳುತ್ತಿದ್ದೇನೆ.ನಮ್ಮ ರೋಮಾಂಚಕ ಪ್ರಜಾಪ್ರಭುತ್ವದ ಆಚರಣೆ ಮತ್ತು ಪ್ರತಿಯೊಬ್ಬ ನಾಗರಿಕನು ತಮ್ಮ ಮತದಾನದ ಹಕ್ಕನ್ನು ಚಲಾಯಿಸುವ ಸಬಲೀಕರಣವೇ ರಾಷ್ಟ್ರೀಯ ಮತದಾರರ ದಿನವಾಗಿದೆ: ಪ್ರಧಾನಮಂತ್ರಿ
January 25th, 08:45 am
ರಾಷ್ಟ್ರೀಯ ಮತದಾರರ ದಿನವು ನಮ್ಮ ರೋಮಾಂಚಕ ಪ್ರಜಾಪ್ರಭುತ್ವವನ್ನು ಆಚರಣೆ ಮತ್ತು ಪ್ರತಿಯೊಬ್ಬ ನಾಗರಿಕನೂ ತಮ್ಮ ಮತದಾನದ ಹಕ್ಕನ್ನು ಚಲಾಯಿಸುವ ಸಶಕ್ತೀಕರಣದ ಸಂಕೇತವಾಗಿದೆ ಎಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಇಂದು ಹೇಳಿದ್ದಾರೆ.