ಅಸ್ಸಾಂನ ರಾಷ್ಟ್ರೀಯ ಹೆದ್ದಾರಿ-15 ರಲ್ಲಿ, ಮಂಗಲ್ದೊಯ್ ಬೈಪಾಸ್ (15.11 ಕಿಮೀ) ಹೊರತುಪಡಿಸಿ, ಗುವಾಹಾಟಿ ಬಳಿಯ ಬೈಹಾಟ ಚಾರಿಯಾಲಿ ಯಿಂದ ತೇಜ್‌ಪುರದವರೆಗೆ ಒಟ್ಟು 135.87 ಕಿಮೀ ಉದ್ದದ, Rs. 8970.20 ಕೋಟಿ ವೆಚ್ಚದ 4 ಪಥದ ಹೆದ್ದಾರಿ ನಿರ್ಮಾಣಕ್ಕೆ ಸಚಿವ ಸಂಪುಟ ಅನುಮೋದನೆ

August 06th, 04:12 pm

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿಂದು ನಡೆದ ಆರ್ಥಿಕ ವ್ಯವಹಾರಗಳ ಕುರಿತಾದ ಸಚಿವ ಸಂಪುಟ ಸಮಿತಿಯು ಅಸ್ಸಾಂನ ರಾಷ್ಟ್ರೀಯ ಹೆದ್ದಾರಿ (NH)-15 ರ 135.871 ಕಿಮೀ, 4 ಪಥದ ಪ್ರವೇಶ-ನಿಯಂತ್ರಣವಿರುವ ಗುವಾಹಟಿ-ತೇಜ್‌ಪುರ ಕಾರಿಡಾರ್ ಅಭಿವೃದ್ಧಿಗೆ ಅನುಮೋದನೆ ನೀಡಿದೆ. ಈ ಯೋಜನೆಯನ್ನು NH(O) ಅಡಿಯಲ್ಲಿ ಒಟ್ಟು ಬಂಡವಾಳ ವೆಚ್ಚ 8970.20 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣ-ನಿರ್ವಹಣೆ-ವರ್ಗಾವಣೆ (BOT) ಟೋಲ್ ಮಾದರಿಯಲ್ಲಿ ಅಭಿವೃದ್ಧಿಪಡಿಸಲಾಗುವುದು.

₹23,731 ಕೋಟಿ ವೆಚ್ಚದೊಂದಿಗೆ ಸಂಕುಚಿತ ಜೈವಿಕ ಅನಿಲಕ್ಕಾಗಿ (CBG) ಭಾರತದ ರಾಷ್ಟ್ರೀಯ ಏಕೀಕೃತ ಯೋಜನೆಯಾದ ಗೋಬರ್ ಧನ್ (GOBARdhan) ಗೆ ಕೇಂದ್ರ ಸಂಪುಟದ ಅನುಮೋದನೆ

August 06th, 04:08 pm

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಂಪುಟ ಸಭೆಯು ₹23,731 ಕೋಟಿ ಒಟ್ಟು ವೆಚ್ಚದೊಂದಿಗೆ 'ರಾಷ್ಟ್ರೀಯ ವೃತ್ತಾಕಾರದ ಜೈವಿಕ ಇಂಧನ ಯೋಜನೆ'ಯಾದ 'ಗೋಬರ್ ಧನ್' (GOBARdhan) ಗೆ ಅನುಮೋದನೆ ನೀಡಿದೆ.

Cabinet approves 'Samudra Manthan' (National Offshore Exploration Scheme) with an outlay of Rs.84,084 crore

July 31st, 04:17 pm

The Union Cabinet chaired by PM Modi has approved 'Samudra Manthan' – the National Offshore Exploration Scheme with an approved outlay of Rs.84,084 crore for implementation up to FY 2030-31. The Scheme is expected to stimulate significant investments across the exploration and production value chain, creating long-term opportunities for industry, innovation and economic growth.

Cabinet approves revamped Khelo India Scheme and enhanced Assistance to National Sports Federations (ANSFs)

July 31st, 04:15 pm

The Union Cabinet chaired by PM Modi has approved an expanded Khelo India Scheme and enhanced Assistance to National Sports Federations (ANSFs) with a combined outlay of Rs.36,441 crore for the period 2026-27 to 2030-31. Aligned with the vision of Khelo Bharat Niti 2025 and the NEP 2020, the scheme integrates sports with education, fitness, technology and high-performance training.

Cabinet approves continuation of the PM-KISAN Scheme from 2026-27 to 2030-31 with a Financial Outlay of Rs.3.15 lakh crore

July 31st, 04:13 pm

The Union Cabinet, chaired by PM Modi, has approved the continuation of the PM-KISAN Scheme with an outlay of ₹3.15 lakh crore for 2026–31. The scheme will continue providing direct income support to eligible farmers, strengthening agricultural investment and rural prosperity.

Cabinet approves Pradhan Mantri Surya Sarovar Yojana (PM-SSY) with a total outlay of Rs.5,070 crore

July 31st, 04:11 pm

The Union Cabinet, chaired by PM Modi, has approved the ₹5,070 crore Pradhan Mantri Surya Sarovar Yojana to develop 5,000 MW of floating solar projects with energy storage. The scheme will boost clean energy, strengthen the grid and create new employment opportunities.

Cabinet approves scheme of Chemical Parks “Bharat Audyogik Vikas Yojana Rasayan (BHAVYA Rasayan)

July 24th, 04:12 pm

The Union Cabinet, chaired by PM Modi, has approved the BHAVYA - Rasayan Scheme for establishing three dedicated Chemical Parks at a cost of ₹3,030 crore. The scheme, which will run for five years from FY 2026-27 to FY 2030-31, will lead to a cascading effect through enhanced development of downstream sectors of the economy, thereby generating higher employment and promoting greater economic growth, helping achieve the goal of Viksit Bharat @ 2047.

ಕರ್ನಾಟಕ ಮತ್ತು ಆಂಧ್ರಪ್ರದೇಶದಾದ್ಯಂತ ಮೂರು ಜಿಲ್ಲೆಗಳನ್ನು ಒಳಗೊಂಡಂತೆ ಒಂದು ಬಹು-ಟ್ರ್ಯಾಕಿಂಗ್ ಯೋಜನೆಗೆ ಸಂಪುಟ ಅನುಮೋದನೆ, ಭಾರತೀಯ ರೈಲ್ವೆಯ ಪ್ರಸ್ತುತ ಜಾಲ ಸುಮಾರು 46 ಕಿ.ಮೀ.ಗಳಷ್ಟು ವಿಸ್ತರಣೆ

July 24th, 04:05 pm

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ಇಂದು ನಡೆದ ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿಯು, ಕರ್ನಾಟಕ ಮತ್ತು ಆಂಧ್ರಪ್ರದೇಶದಲ್ಲಿರುವ ಬಳ್ಳಾರಿ - ಗುಂತಕಲ್ ವಿಭಾಗದ 3 ನೇ ಮತ್ತು 4 ನೇ ರೈಲು ಮಾರ್ಗಕ್ಕೆ ಸುಮಾರು ₹1,264 ಕೋಟಿ ಒಟ್ಟು ವೆಚ್ಚದಲ್ಲಿ ಅನುಮೋದನೆ ನೀಡಿದೆ.

ಇಂದಿನ ಸಚಿವ ಸಂಪುಟ ಸಭೆಯಲ್ಲಿ ಪ್ರಶ್ನೆಪತ್ರಿಕೆ ಸೋರಿಕೆ ವಿರುದ್ಧ ಮತ್ತಷ್ಟು ಕಠಿಣ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಘೋಷಿಸಿದ ಪ್ರಧಾನಮಂತ್ರಿ

July 24th, 06:08 am

ಸಚಿವ ಸಂಪುಟ ಸಭೆಯಲ್ಲಿ ಪ್ರಶ್ನೆಪತ್ರಿಕೆ ಸೋರಿಕೆ ವಿರುದ್ಧ ಮತ್ತಷ್ಟು ಕಠಿಣ ಕ್ರಮಗಳ ಬಗ್ಗೆ ನಿರ್ಧರಿಸಲಾಗುವುದು ಎಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ನಿನ್ನೆ ರಾತ್ರಿ ವಿಡಿಯೋ ಸಂದೇಶದ ಮೂಲಕ ಘೋಷಿಸಿದರು.

ಉತ್ತರ ಪ್ರದೇಶದಲ್ಲಿ ಒಟ್ಟು ₹7,145.14 ಕೋಟಿ ಬಂಡವಾಳ ವೆಚ್ಚದಲ್ಲಿ, ಬಿಒಟಿ (ಟೋಲ್) ಮಾದರಿಯಲ್ಲಿ ಎನ್ ಎಚ್ -34 ರ 4 / 6 ಪಥಗಳ ನಿಯಂತ್ರಿತ ಪ್ರವೇಶದ ಕಾನ್ಪುರ-ಕಬ್ರಾಯ್ ವಿಭಾಗದ ನಿರ್ಮಾಣಕ್ಕೆ ಸಚಿವ ಸಂಪುಟದ ಅನುಮೋದನೆ

July 01st, 03:09 pm

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ಇಂದು ನಡೆದ ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿಯು, ರಾಷ್ಟ್ರೀಯ ಹೆದ್ದಾರಿಗಳ (ಒ) ಕಾರ್ಯಕ್ರಮದ ಅಡಿಯಲ್ಲಿ ಭೂಪಾಲ್-ಕಾನ್ಪುರ ಆರ್ಥಿಕ ಕಾರಿಡಾರ್ನ ಪ್ರಮುಖ ಭಾಗವಾಗಿರುವ, 117.7 ಕಿ.ಮೀ ಉದ್ದದ ಕಾನ್ಪುರ-ಕಬ್ರಾಯ್ ನಿಯಂತ್ರಿತ ಪ್ರವೇಶದ ಗ್ರೀನ್ ಫೀಲ್ಡ್ ಹೆದ್ದಾರಿಯ ನಿರ್ಮಾಣಕ್ಕೆ ಅನುಮೋದನೆ ನೀಡಿದೆ. ಇದು ನಾಲ್ಕು ಪಥಗಳ ನಿಯಂತ್ರಿತ ಪ್ರವೇಶದ ಕಾರಿಡಾರ್ ಆಗಿದ್ದು, ಭವಿಷ್ಯದಲ್ಲಿ ಆರು ಪಥಗಳಾಗಿ ವಿಸ್ತರಿಸಲು ಪೂರಕವಾದ ರಚನೆಗಳೊಂದಿಗೆ ಇದನ್ನು ವಿನ್ಯಾಸಗೊಳಿಸಲಾಗಿದೆ. ಒಟ್ಟು ಬಂಡವಾಳ ಅಂದಾಜು ₹7,145.14 ಕೋಟಿ ವೆಚ್ಚದ ಈ ಯೋಜನೆಯನ್ನು, ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು (ಎನ್ ಎಚ್ ಎ ಐ) ಬಿಒಟಿ (ಟೋಲ್) ಮಾದರಿಯಲ್ಲಿ ಅನುಷ್ಠಾನಗೊಳಿಸಲಿದೆ. ಜೊತೆಗೆ ಎನ್ ಎಚ್-34 ರ ಅಸ್ತಿತ್ವದಲ್ಲಿರುವ ಕಾನ್ಪುರ-ಕಬ್ರಾಯ್ ವಿಭಾಗದ ಕಾರ್ಯಾಚರಣೆ ಮತ್ತು ನಿರ್ವಹಣೆಯನ್ನೂ ಸಹ ಇದು ಒಳಗೊಂಡಿರುತ್ತದೆ.

Cabinet approves a Road Tunnel Construction project in Delhi worth Rs. 6969.67 crore

July 01st, 03:06 pm

The Cabinet Committee on Economic Affairs, chaired by PM Modi, has approved the construction of a Road Tunnel Construction project in Delhi worth Rs. 6,969.67 crore. The total project length is 8.1 km, including 3.14 km of tunnel, 0.98 km of tunnel approach ramp, 0.554 km of approach with RE Wall, 2.556 km of elevated portion and 0.87 km of at-grade road. It will provide faster connectivity and employment opportunities.

Cabinet approves Ahmedabad Metro Rail project Phase 2A (Koteshwar Road to Airport corridor)

June 10th, 01:59 pm

The Union Cabinet has approved Phase 2A of the Ahmedabad Metro Rail Project, a 6.032 Km with 05 stations connecting key urban areas to Ahmedabad Airport. The ₹2,169 crore project will expand the Ahmedabad-Gandhinagar metro network to 77.63 km, improve connectivity, reduce traffic congestion and emissions, boost economic activity, and generate employment during both construction and operations.

ಆಂಧ್ರಪ್ರದೇಶದ ಅಮರಾವತಿಯಲ್ಲಿರುವ ಹೊಸ ರಾಜಧಾನಿ ನಗರದಲ್ಲಿ ಜನರಲ್ ಪೂಲ್ ರೆಸಿಡೆನ್ಶಿಯಲ್ ಅಕಾಮಡೇಷನ್ (ಜಿ ಪಿ ಆರ್ ಎ) ನಿರ್ಮಾಣಕ್ಕೆ ಕೇಂದ್ರ ಸಚಿವ ಸಂಪುಟ ಅನುಮೋದನೆ

June 10th, 01:57 pm

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿಂದು ನಡೆದ ಆರ್ಥಿಕ ವ್ಯವಹಾರಗಳ ಸಚಿವ ಸಂಪುಟ ಸಮಿತಿಯು ಆಂಧ್ರಪ್ರದೇಶದ ಅಮರಾವತಿಯಲ್ಲಿರುವ ಹೊಸ ರಾಜಧಾನಿ ನಗರದಲ್ಲಿ ಜನರಲ್ ಪೂಲ್ ರೆಸಿಡೆನ್ಶಿಯಲ್ ಅಕಾಮಡೇಷನ್ (ಜಿ ಪಿ ಆರ್ ಎ) ನಿರ್ಮಾಣಕ್ಕೆ ಅನುಮೋದನೆ ನೀಡಿದೆ. ಇದು ರಾಜಧಾನಿ ಅಮರಾವತಿಯಲ್ಲಿ ಮತ್ತು ಆಂಧ್ರಪ್ರದೇಶ ರಾಜ್ಯದೊಳಗೆ ಮೊದಲ ಜಿ ಪಿ ಆರ್ ಎ ಯೋಜನೆಯಾಗಿದೆ.

Cabinet approves construction of new Central Government General Pool Office Accommodation in Amaravati, Andhra Pradesh

June 10th, 01:52 pm

The Cabinet has approved the construction of the Central Government General Pool Office Accommodation (CGGPOA) in Amaravati, Andhra Pradesh. Built across 5.53 acres at an estimated cost of over ₹1,299.08 crore, the green-rated office complex will accommodate around 8,000 officials and staff members, enhance coordination among Central Government departments, provide modern civic amenities and generate significant employment opportunities.

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಸತತ ಅವಧಿಗಳಿಗೆ ಅತ್ಯಂತ ದೀರ್ಘಕಾಲ ಚುನಾಯಿತ ಪ್ರಧಾನಮಂತ್ರಿಯಾಗಿರುವುದನ್ನು ಶ್ಲಾಘಿಸಿ ಕೇಂದ್ರ ಸಚಿವ ಸಂಪುಟದಿಂದ ನಿರ್ಣಯ ಅಂಗೀಕಾರ

June 10th, 01:50 pm

ಕೇಂದ್ರ ಸಚಿವ ಸಂಪುಟವು ಇಂದು ಒಂದು ಮಹತ್ವದ ನಿರ್ಣಯವನ್ನು ಅಂಗೀಕರಿಸಿದೆ. ಈ ಮೂಲಕ ಜೂನ್ 10, 2026ರ ದಿನವನ್ನು ಭಾರತೀಯ ಪ್ರಜಾಪ್ರಭುತ್ವದ ಪಯಣದಲ್ಲಿ ಒಂದು ಐತಿಹಾಸಿಕ ಮೈಲಿಗಲ್ಲಾಗಿ ಗುರುತಿಸಲಾಗಿದ್ದು, ಶ್ರೀ ನರೇಂದ್ರ ಮೋದಿಯವರು ದೇಶದ ಅತ್ಯಂತ ದೀರ್ಘಕಾಲ ಸೇವೆ ಸಲ್ಲಿಸಿದ ಚುನಾಯಿತ ಪ್ರಧಾನಮಂತ್ರಿಯಾಗಿರುವುದನ್ನು ಶ್ಲಾಘಿಸಲಾಗಿದೆ. ಚುನಾಯಿತ ಪ್ರಧಾನಿಯಾಗಿ ಸತತ 4,399 ದಿನಗಳ ಕಾಲ ನಿರಂತರ ಸೇವೆ ಸಲ್ಲಿಸುವ ಮೂಲಕ ಅವರು ಹೊಸ ದಾಖಲೆ ಬರೆದಿದ್ದಾರೆ. ಈ ಮೂಲಕ ಅವರು ಶ್ರೀ ಜವಾಹರಲಾಲ್ ನೆಹರೂ ಅವರ ಹೆಸರಲ್ಲಿದ್ದ ಹಿಂದಿನ ದಾಖಲೆಯನ್ನು ಮೀರಿದ್ದಾರೆ. ನೆಹರೂ ಅವರು 1952 ರಿಂದ 1964 ರವರೆಗೆ ಸತತ 4,398 ದಿನಗಳ ಕಾಲ ಪ್ರಧಾನಿಯಾಗಿ ಸೇವೆ ಸಲ್ಲಿಸಿದ್ದರು. ಈ ಸಂದರ್ಭವು ಭಾರತದ ಪ್ರಜಾಪ್ರಭುತ್ವದ ಜಾಗೃತಿ, ಸಾರ್ವಜನಿಕರ ನಂಬಿಕೆ ಮತ್ತು ದೇಶದ ಜನರ ಭಾಗವಹಿಸುವಿಕೆಯ ಶಕ್ತಿಯ ಸಂಕೇತವಾಗಿದೆ ಎಂದು ನಿರ್ಣಯದಲ್ಲಿ ಹೇಳಲಾಗಿದೆ. ಇದು 'ರಾಷ್ಟ್ರ ಮೊದಲು' ಎಂಬ ದೃಢ ಸಂಕಲ್ಪದೊಂದಿಗೆ ಮುನ್ನಡೆಯುವ ನಾಯಕನಿಗೆ ದೇಶದ ಜನತೆ ನೀಡಿದ ಅಭೂತಪೂರ್ವ ಬೆಂಬಲವನ್ನು ತೋರಿಸುತ್ತದೆ.

Cabinet approves road upgradation projects in Madhya Pradesh worth Rs. 4,415.60 Crore

June 03rd, 03:29 pm

The Cabinet Committee on Economic Affairs, chaired by PM Modi, has approved upgradation of Hiwarkhedi-Roshni-Ashapur-Rudhy Section of NH-347B and widening of Deshgaon-Julwaniya Section of NH-347B in Madhya Pradesh at a cost of Rs.4,415.60 Crore. The upgraded corridor will enhance multi-modal integration by connecting with 6 PM Gati-Shakti Economic Nodes, 5 social nodes and 5 Logistic Nodes, thereby facilitating faster movement of goods and passengers across the region.

ತೆಲಂಗಾಣದಲ್ಲಿ ಒಟ್ಟು 190.76 ಕಿಲೋಮೀಟರ್ ಉದ್ದದ ಮತ್ತು 7597.16 ಕೋಟಿ ರೂಪಾಯಿಗಳ ವೆಚ್ಚದೊಂದಿಗೆ, ಅರ್ಮೂರ್-ಜಗತ್ಯಾಲ್-ಮಂಚೇರಿಯಲ್ ರಾಷ್ಟ್ರೀಯ ಹೆದ್ದಾರಿ (ಎನ್‌ ಎಚ್‌)-63 ರ ಭಾಗವನ್ನು ಹೈಬ್ರಿಡ್ ಅನ್ವಿಟಿ ಮಾಡೆಲ್ (ಎಚ್‌ ಎ ಎಂ) ಆಧಾರದ ಮೇಲೆ ಮತ್ತು ಜಗತ್ಯಾಲ್-ಕರೀಂನಗರ ರಾಷ್ಟ್ರೀಯ ಹೆದ್ದಾರಿ (ಎನ್‌ ಎಚ್)-563 ರ ಭಾಗವನ್ನು ನಿರ್ಮಾಣ-ನಿರ್ವಹಣೆ-ವರ್ಗಾವಣೆ (ಬಿಒಟಿ ಟೋಲ್) ಆಧಾರದ ಮೇಲೆ ಚತುಷ್ಪಥ (4-ಲೇನ್) ದರ್ಜೆಗೆ ವಿಸ್ತರಿಸಲು ಕೇಂದ್ರ ಸಚಿವ ಸಂಪುಟವು ಅನುಮೋದನೆ ನೀಡಿದೆ

June 03rd, 03:26 pm

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ಇಂದು ನಡೆದ ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿಯು, ತೆಲಂಗಾಣದಲ್ಲಿ ಒಟ್ಟು 190.76 ಕಿಲೋಮೀಟರ್ ಉದ್ದದ ಮತ್ತು 7597.16 ಕೋಟಿ ರೂಪಾಯಿಗಳ ಒಟ್ಟು ಯೋಜನಾ ವೆಚ್ಚದೊಂದಿಗೆ, ಮೂರು ಕಾಮಗಾರಿ ಪ್ಯಾಕೇಜ್‌ಗಳ ಅಡಿಯಲ್ಲಿ ಪ್ರಸ್ತುತ ಇರುವ ಅರ್ಮೂರ್-ಜಗತ್ಯಾಲ್-ಮಂಚೇರಿಯಲ್ ರಾಷ್ಟ್ರೀಯ ಹೆದ್ದಾರಿ (ಎನ್‌ ಎಚ್)-63 ರ ಭಾಗವನ್ನು ಹೈಬ್ರಿಡ್ ಅನ್ಯೂಯಿಟಿ ಮಾಡೆಲ್ (ಎಚ್‌ ಎ ಎಂ) ಆಧಾರದ ಮೇಲೆ ಮತ್ತು ಜಗತ್ಯಾಲ್-ಕರೀಂನಗರ ರಾಷ್ಟ್ರೀಯ ಹೆದ್ದಾರಿ (ಎನ್‌ ಎಚ್)-563 ರ ಭಾಗವನ್ನು ನಿರ್ಮಾಣ-ನಿರ್ವಹಣೆ-ವರ್ಗಾವಣೆ (ಬಿಒಟಿ ಟೋಲ್) ಆಧಾರದ ಮೇಲೆ ಚತುಷ್ಪಥ ದರ್ಜೆಗೆ (4-ಲೇನ್)ವಿಸ್ತರಿಸಲು ಅನುಮೋದನೆ ನೀಡಿದೆ.

ಬಿಹಾರದಲ್ಲಿ ಬಿಒಟಿ (ಟೋಲ್) ಮಾದರಿಯಲ್ಲಿ ₹3936.05 ಕೋಟಿ ವೆಚ್ಚದಲ್ಲಿ ಎನ್‌ ಎಚ್-31 ಮತ್ತು ಎನ್‌ ಎಚ್-231 ರ ಖಗಾರಿಯಾ-ಪೂರ್ನಿಯಾ ವಿಭಾಗವನ್ನು (143.529 ಕಿ.ಮೀ) ಚತುಷ್ಪಥವಾಗಿ ಮೇಲ್ದರ್ಜೆಗೇರಿಸಲು ಕೇಂದ್ರ ಸಚಿವ ಸಂಪುಟದ ಅನುಮೋದನೆ

June 03rd, 03:24 pm

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ಇಂದು ನಡೆದ ಆರ್ಥಿಕ ವ್ಯವಹಾರಗಳ ಸಚಿವ ಸಂಪುಟ ಸಮಿತಿಯು, ಬಿಹಾರದಲ್ಲಿ ಬಿಒಟಿ (ಟೋಲ್) ಅಂದರೆ 'ನಿರ್ಮಿಸಿ, ನಿರ್ವಹಿಸಿ ಮತ್ತು ಹಸ್ತಾಂತರಿಸಿ' ಮಾದರಿಯ ಅಡಿಯಲ್ಲಿ ₹3936.05 ಕೋಟಿ ವೆಚ್ಚದಲ್ಲಿ ಎನ್‌ ಎಚ್-31 ಮತ್ತು ಎನ್‌ ಎಚ್-231 ರಸ್ತೆಗಳ ಖಗಾರಿಯಾ-ಪೂರ್ನಿಯಾ ವಿಭಾಗವನ್ನು ಚತುಷ್ಪಥವಾಗಿ (143.529 ಕಿ.ಮೀ) ಮೇಲ್ದರ್ಜೆಗೇರಿಸಲು ಅನುಮೋದನೆ ನೀಡಿದೆ.

ದೆಹಲಿ-ಎನ್‌ಸಿಆರ್ ಪ್ರದೇಶದಲ್ಲಿ ಹಳೆಯ ಟ್ರಕ್‌ಗಳು ಮತ್ತು ಬಸ್‌ಗಳನ್ನು ಬದಲಾಯಿಸಲು ಎನ್‌ಸಿಆರ್‌ಪಿಬಿಗೆ ಬೆಂಬಲ ನೀಡುವ ಯೋಜನೆಗೆ ಕೇಂದ್ರ ಸಚಿವ ಸಂಪುಟ ಅನುಮೋದನೆ

June 03rd, 03:17 pm

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ, ದೆಹಲಿ-ಎನ್‌ಸಿಆರ್ ಪ್ರದೇಶದಲ್ಲಿ ವಾಯು ಮಾಲಿನ್ಯವನ್ನು ತಗ್ಗಿಸುವ ಮತ್ತು ಶುದ್ಧ ಸಾರಿಗೆಯನ್ನು ಉತ್ತೇಜಿಸುವ ಗುರಿಯನ್ನು ಹೊಂದಿರುವ ಎರಡು ವರ್ಷಗಳ ಮಹತ್ವದ ಯೋಜನೆಗೆ ಅನುಮೋದನೆ ನೀಡಿದೆ.ಈ ಯೋಜನೆಗೆ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯದ (ಎಂ ಒ ಎಚ್ ಯು ಎ) ಅಡಿಯಲ್ಲಿ ಬರುವ ರಾಷ್ಟ್ರೀಯ ರಾಜಧಾನಿ ಪ್ರದೇಶ ಯೋಜನಾ ಮಂಡಳಿ (ಎನ್ ಸಿ ಆರ್ ಪಿ ಬಿ) ಮೂಲಕ ಆರ್ಥಿಕ ನೆರವು ಒದಗಿಸಲಾಗುವುದು ಮತ್ತು ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಮತ್ತು ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ ಇದನ್ನು ಜಾರಿಗೊಳಿಸಲಿದೆ. ಇದನ್ನು ದೆಹಲಿ, ಹರಿಯಾಣ, ರಾಜಸ್ಥಾನ ಮತ್ತು ಉತ್ತರ ಪ್ರದೇಶ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಸಹಯೋಗದೊಂದಿಗೆ ಜಾರಿಗೆ ತರಲಾಗುವುದು.

ಎಟಿಎಫ್ ಬೆಲೆ ನಿಗದಿ ಸಂಬಂಧ ಭಾರತೀಯ ವಿಮಾನಯಾನ ಸಂಸ್ಥೆಗಳಿಗೆ ಬೆಲೆ ಸ್ಥಿರೀಕರಣ ನಿಧಿಗೆ ಕೇಂದ್ರ ಸಚಿವ ಸಂಪುಟ ಅನುಮೋದನೆ

June 03rd, 03:12 pm

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆ, ತೈಲ ಮಾರುಕಟ್ಟೆ ಕಂಪನಿಗಳಿಗೆ (ಒಎಂಸಿ) ದೇಶೀಯ ಮತ್ತು ಅಂತಾರಾಷ್ಟ್ರೀಯ ಕಾರ್ಯಾಚರಣೆಗಳಿಗಾಗಿ ಎಟಿಎಫ್ ಬೆಲೆ ಸ್ಥಿರೀಕರಣ ಬೆಂಬಲವನ್ನು ಒದಗಿಸಲು 10,000 ಕೋಟಿ ರೂ.ಗಳನ್ನು ಮೀರದ ಒಂದು ಬಾರಿಯ ಬಜೆಟ್ ಬೆಂಬಲವನ್ನು ಅನುಮೋದಿಸಿದೆ. ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯದ ಅನುದಾನಗಳ ಬೇಡಿಕೆಗಳ ಮೂಲಕ ತೈಲ ಮಾರುಕಟ್ಟೆ ಕಂಪನಿಗಳಿಗೆ ಬಜೆಟ್ ಬೆಂಬಲವು ಬಡ್ಡಿರಹಿತ ಮುಂಗಡಗಳ ರೂಪದಲ್ಲಿರುತ್ತದೆ. ಪಶ್ಚಿಮ ಏಷ್ಯಾ ಬಿಕ್ಕಟ್ಟಿನಿಂದ ಉಂಟಾಗುವ ಅಸಾಧಾರಣ ಇಂಧನ ಬೆಲೆ ಏರಿಳಿತದ ಅವಧಿಯಲ್ಲಿ ವಿಮಾನಯಾನ ಸಂಸ್ಥೆಗಳಿಗೆ ಸ್ಥಿರವಾದ ಎಟಿಎಫ್ ಬೆಲೆ ನಿಗದಿಯನ್ನು ಸುಗಮಗೊಳಿಸಲು ತೈಲ ಮಾರುಕಟ್ಟೆ ಕಂಪನಿಗಳಿಗೆ ಬೆಂಬಲವನ್ನು ಒದಗಿಸಲಾಗುತ್ತದೆ.