ಬಲ್ಗೇರಿಯಾ ಸಂಸದೀಯ ಚುನಾವಣೆಯಲ್ಲಿ ಜಯಗಳಿಸಿದ್ದಕ್ಕಾಗಿ ಶ್ರೀ ರುಮೆನ್ ರಾದೇವ್ ಅವರನ್ನು ಅಭಿನಂದಿಸಿದ ಪ್ರಧಾನಮಂತ್ರಿ

April 21st, 10:00 pm

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇತ್ತೀಚೆಗೆ ಮುಕ್ತಾಯಗೊಂಡ ಬಲ್ಗೇರಿಯಾ ಸಂಸದೀಯ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದಕ್ಕಾಗಿ ಶ್ರೀ ರುಮೆನ್ ರಾದೇವ್ ಮತ್ತು ಅವರ ಪಕ್ಷ ಪ್ರೋಗ್ರೆಸ್ಸಿವ್ ಬಲ್ಗೇರಿಯಾವನ್ನು ಅಭಿನಂದಿಸಿದ್ದಾರೆ. ”ಭಾರತ ಮತ್ತು ಬಲ್ಗೇರಿಯಾ ನಡುವಿನ ಸ್ನೇಹಪರ ಮತ್ತು ಬಹುಮುಖಿ ಸಂಬಂಧಗಳನ್ನು ಹಾಗೂ ಈ ಪ್ರದೇಶದಲ್ಲಿ ನಮ್ಮ ವಿಶಾಲ ಸಹಕಾರವನ್ನು ಮತ್ತಷ್ಟು ಬಲಪಡಿಸಲು ಒಗ್ಗೂಡಿ ಕಾರ್ಯನಿರ್ವಹಿಸಲು ನಾನು ಎದುರು ನೋಡುತ್ತಿದ್ದೇನೆ’’ ಎಂದು ಶ್ರೀ ನರೇಂದ್ರ ಮೋದಿ ಹೇಳಿದ್ದಾರೆ.

ಅಪಹರಣಕ್ಕೊಳಗಾದ ಬಲ್ಗೇರಿಯನ್ ಹಡಗು “ರುಯೆನ್” ಅನ್ನು ರಕ್ಷಿಸಿದ ಭಾರತೀಯ ನೌಕಾಪಡೆಯ ಕುರಿತು ಸ್ಪಂದಿಸಿದ ಬಲ್ಗೇರಿಯಾ ಗಣರಾಜ್ಯದ ಅಧ್ಯಕ್ಷರಿಗೆ ಪ್ರತಿಸ್ಪಂದಿಸಿದ ಪ್ರಧಾನಮಂತ್ರಿ

March 19th, 10:39 am

ಅಪಹರಣಕ್ಕೊಳಗಾದ ಬಲ್ಗೇರಿಯನ್ ಹಡಗು ರುಯೆನ್ ಅನ್ನು ಮತ್ತು 7 ಬಲ್ಗೇರಿಯನ್ ನಾಗರಿಕರು ಸೇರಿದಂತೆ ಅದರ ಸಿಬ್ಬಂದಿ ವರ್ಗವನ್ನು ರಕ್ಷಿಸಿದ ಭಾರತೀಯ ನೌಕಾಪಡೆಯ ಕುರಿತು ಸಂದೇಶ ನೀಡಿದ ಬಲ್ಗೇರಿಯಾ ಗಣರಾಜ್ಯದ ಅಧ್ಯಕ್ಷ ಶ್ರೀ ರುಮೆನ್ ರಾದೇವ್ ಅವರಿಗೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಪ್ರತಿಸ್ಪಂದಿಸಿ, ಮೆಚ್ಚುಗೆ ವ್ಯಕ್ತಪಡಿಸಿದರು.