ಲೇಹ್‌ನಲ್ಲಿ 'ತಥಾಗತರ ಪೂಜ್ಯ ಅವಶೇಷಗಳ ಪವಿತ್ರ ಪ್ರದರ್ಶನ'ದ ಉದ್ಘಾಟನೆಯ ಬಗ್ಗೆ ಸಂತಸ ವ್ಯಕ್ತಪಡಿಸಿದ ಪ್ರಧಾನಮಂತ್ರಿ

May 02nd, 06:59 pm

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ನಿನ್ನೆ ಬುದ್ಧ ಪೂರ್ಣಿಮೆಯ ಸಂದರ್ಭದಲ್ಲಿ ಲೇಹ್‌ನಲ್ಲಿ ಆರಂಭಗೊಂಡ 'ತಥಾಗತರ ಪಜ್ಯ ಅವಶೇಷಗಳ ಪವಿತ್ರ ಪ್ರದರ್ಶನ' ಉದ್ಘಾಟನೆಯ ಬಗ್ಗೆ ಇಂದು ಅಪಾರ ಸಂತಸ ವ್ಯಕ್ತಪಡಿಸಿದ್ದಾರೆ.

ಬುದ್ಧ ಪೂರ್ಣಿಮೆಯಂದು ಎಲ್ಲರಿಗೂ ಶುಭ ಕೋರಿದ ಪ್ರಧಾನಮಂತ್ರಿ

May 01st, 09:11 am

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಬುದ್ಧ ಪೂರ್ಣಿಮೆಯ ಶುಭ ಸಂದರ್ಭದಲ್ಲಿ ಎಲ್ಲಾ ನಾಗರಿಕರಿಗೆ ಶುಭ ಕೋರಿದ್ದಾರೆ. ಭಗವಾನ್ ಬುದ್ಧನ ಆದರ್ಶಗಳನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಬಲವಾದ ಬದ್ಧತೆಯನ್ನು ಒತ್ತಿ ಹೇಳಿದ ಪ್ರಧಾನಮಂತ್ರಿ ಅವರು, ಅವರ ಆಲೋಚನೆಗಳು ಸಮಾಜದಲ್ಲಿ ಸಂತೋಷ ಮತ್ತು ಒಗ್ಗಟ್ಟಿನ ಮನೋಭಾವವನ್ನು ಗಾಢವಾಗಿಸುತ್ತವೆ ಎಂದು ಆಶಿಸಿದರು. ಶಾಂತಿ, ಸಹಾನುಭೂತಿ ಮತ್ತು ಸದ್ಭಾವನೆಯ ಹಾದಿಯಲ್ಲಿ ನಡೆಯಲು ಪ್ರೇರೇಪಿಸುವ ಈ ಪವಿತ್ರ ಸಂದರ್ಭದಲ್ಲಿ ಭಗವಾನ್ ಬುದ್ಧನ ಜೀವನ ಮೌಲ್ಯಗಳನ್ನು ಅಳವಡಿಸಿಕೊಳ್ಳುವ ಸಂಕಲ್ಪವನ್ನು ಪ್ರತಿಯೊಬ್ಬರೂ ಪುನರುಚ್ಚರಿಸಬೇಕು ಎಂದು ಅವರು ಒತ್ತಾಯಿಸಿದರು.

ಮನ್ ಕಿ ಬಾತ್ ನಲ್ಲಿ 2027 ರ ಡಿಜಿಟಲ್ ಜನಗಣತಿಯನ್ನು ಯಶಸ್ವಿಗೊಳಿಸುವಂತೆ ಪ್ರಧಾನಿ ಮೋದಿ ದೇಶವಾಸಿಗಳನ್ನು ಕೋರಿದ್ದಾರೆ

April 26th, 11:30 am

ಈ ತಿಂಗಳ ಮನ್ ಕಿ ಬಾತ್ ಸಂಚಿಕೆಯಲ್ಲಿ, ಪ್ರಧಾನಿ ಮೋದಿ ಪರಮಾಣು ಮತ್ತು ಪವನ ಇಂಧನ ಕ್ಷೇತ್ರಗಳಲ್ಲಿ ಭಾರತದ ಪ್ರಗತಿಯನ್ನು ಎತ್ತಿ ತೋರಿಸಿದರು. ಭಗವಾನ್ ಬುದ್ಧನ ಬೋಧನೆಗಳು, ಬೀಟಿಂಗ್ ರಿಟ್ರೀಟ್ ಸಮಾರಂಭ, ಪ್ರಕೃತಿ ಸಂರಕ್ಷಣೆ, ಬಿದಿರು ವಲಯ, ಪ್ರಾಚೀನ ಗ್ರಂಥಗಳು ಮತ್ತು ಗಣಿತ ಒಲಿಂಪಿಯಾಡ್ ಕಾರ್ಯಕ್ರಮ ಸೇರಿದಂತೆ ಹಲವಾರು ಪ್ರಮುಖ ವಿಷಯಗಳನ್ನು ಅವರು ಸ್ಪರ್ಶಿಸಿದರು. ನಡೆಯುತ್ತಿರುವ ಡಿಜಿಟಲ್ ಜನಗಣತಿ ಅಭಿಯಾನದ ಬಗ್ಗೆಯೂ ಪ್ರಧಾನಿ ಮಾತನಾಡಿದರು ಮತ್ತು ಪ್ರತಿಯೊಬ್ಬರೂ ಈ ಪ್ರಕ್ರಿಯೆಯಲ್ಲಿ ಭಾಗವಹಿಸುವಂತೆ ಒತ್ತಾಯಿಸಿದರು.

ಭಾರತ ಎಐ ಇಂಪ್ಯಾಕ್ಟ್ ಶೃಂಗಸಭೆಯ ಉದ್ಯಮ ನಾಯಕರ ಅಧಿವೇಶನ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

February 19th, 01:00 pm

ಭಾರತದಲ್ಲಿ ನಡೆಯುತ್ತಿರುವ ಎಐ ಇಂಪ್ಯಾಕ್ಟ್(ಪ್ರಭಾವ) ಶೃಂಗಸಭೆಗೆ ನಿಮ್ಮೆಲ್ಲರನ್ನೂ ಮತ್ತೊಮ್ಮೆ ಸ್ವಾಗತಿಸಲು ನನಗೆ ಸಂತೋಷವಾಗುತ್ತಿದೆ. ಈ ಶೃಂಗಸಭೆಯು ಮಾನವ ಕೇಂದ್ರಿತ, ಸೂಕ್ಷ್ಮ ಜಾಗತಿಕ ಎಐ ಪರಿಸರ ವ್ಯವಸ್ಥೆ ನಿರ್ಮಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತದೆ ಎಂಬ ವಿಶ್ವಾಸ ನನಗಿದೆ.

ಇಂಡಿಯಾ ಎಐ ಇಂಪ್ಯಾಕ್ಟ್ ಶೃಂಗಸಭೆ 2026 ರ ನಾಯಕರ ಸರ್ವಸದಸ್ಯರ ಅಧಿವೇಶನದಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಹೇಳಿಕೆಗಳು

February 19th, 12:39 pm

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ನವದೆಹಲಿಯ ಭಾರತ ಮಂಟಪದಲ್ಲಿ ನಡೆದ ಇಂಡಿಯಾ ಎಐ ಇಂಪ್ಯಾಕ್ಟ್ ಶೃಂಗಸಭೆ 2026ರ ನಾಯಕರ ಸರ್ವಸದಸ್ಯರ ಅಧಿವೇಶನದಲ್ಲಿ ತಮ್ಮ ಹೇಳಿಕೆಗಳನ್ನು ಹಂಚಿಕೊಂಡರು. ಭಾರತದಲ್ಲಿ ನಡೆದ ಎಐ ಇಂಪ್ಯಾಕ್ಟ್ ಶೃಂಗಸಭೆಗೆ ಮತ್ತೊಮ್ಮೆ ಭಾಗವಹಿಸಿದವರನ್ನು ಸ್ವಾಗತಿಸಿದ ಪ್ರಧಾನಮಂತ್ರಿಯವರು, ಮಾನವ ಕೇಂದ್ರಿತ ಮತ್ತು ಸೂಕ್ಷ್ಮ ಜಾಗತಿಕ ಎಐ ಪರಿಸರ ವ್ಯವಸ್ಥೆಯನ್ನು ನಿರ್ಮಿಸುವಲ್ಲಿ ಶೃಂಗಸಭೆಯು ನಿರ್ಣಾಯಕ ಪಾತ್ರ ವಹಿಸುತ್ತದೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದರು. ಮಾನವೀಯತೆಯು ಯಾವಾಗಲೂ ಅಡೆತಡೆಗಳನ್ನು ಅವಕಾಶಗಳಾಗಿ ಪರಿವರ್ತಿಸಿದೆ ಎಂಬುದನ್ನು ಇತಿಹಾಸವು ತೋರಿಸುತ್ತದೆ ಮತ್ತು ಇಂದು ಅಡೆತಡೆಗಳನ್ನು ಮಾನವೀಯತೆಯ ಶ್ರೇಷ್ಠ ಅವಕಾಶವಾಗಿ ಪರಿವರ್ತಿಸಲು ಮತ್ತೊಂದು ಕ್ಷಣವನ್ನು ಪ್ರಸ್ತುತಪಡಿಸುತ್ತದೆ ಎಂದು ಅವರು ಹೇಳಿದರು.

ಪ್ರಧಾನಮಂತ್ರಿ ಅವರು ಶ್ರೀಲಂಕಾದ ಅಧ್ಯಕ್ಷರು ಪವಿತ್ರ ದೇವನಿಮೋರಿ ಅವಶೇಷಗಳ ಪ್ರದರ್ಶನವನ್ನು ಉದ್ಘಾಟಿಸಿದ್ದಕ್ಕಾಗಿ ಕೃತಜ್ಞತೆ ಸಲ್ಲಿಸಿದ್ದಾರೆ

February 05th, 10:45 am

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಕೊಲಂಬೊದ ಪವಿತ್ರ ಗಂಗಾರಾಮಯ ದೇವಸ್ಥಾನದಲ್ಲಿ ಪವಿತ್ರ ದೇವನಿಮೋರಿ ಅವಶೇಷಗಳ ಪ್ರದರ್ಶನವನ್ನು ಉದ್ಘಾಟಿಸಿದ್ದಕ್ಕಾಗಿ ಶ್ರೀಲಂಕಾದ ಅಧ್ಯಕ್ಷರಾದ ಶ್ರೀ ಅನುರ ಕುಮಾರ ದಿಸ್ಸಾನಾಯಕೆ ಅವರಿಗೆ ಕೃತಜ್ಞತೆಗಳನ್ನು ಸಲ್ಲಿಸಿದರು.

ಭಗವಾನ್ ಬುದ್ಧನಿಗೆ ಸಂಬಂಧಿಸಿದ ಪವಿತ್ರ ಪಿಪ್ರಹ್ವಾ ಅವಶೇಷ(ಕಳೇಬರ)ಗಳ ಭವ್ಯ ಅಂತಾರಾಷ್ಟ್ರೀಯ ಪ್ರದರ್ಶನದ ಉದ್ಘಾಟನಾ ಸಮಾರಂಭ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

January 03rd, 12:00 pm

ಕೇಂದ್ರ ಸಚಿವ ಸಂಪುಟದ ನನ್ನ ಸಹೋದ್ಯೋಗಿಗಳಾದ ಗಜೇಂದ್ರ ಸಿಂಗ್ ಶೇಖಾವತ್ ಜಿ, ಕಿರಣ್ ರಿಜಿಜು ಜಿ, ರಾಮದಾಸ್ ಅಠಾವಳೆ ಜಿ, ದೆಹಲಿಯ ಮುಖ್ಯಮಂತ್ರಿ ರಾವ್ ಇಂದರ್ಜಿತ್ ಜಿ, ದೆಹಲಿಯ ಎಲ್ಲಾ ಸಚಿವರೆ, ದೆಹಲಿಯ ಲೆಫ್ಟಿನೆಂಟ್ ಗವರ್ನರ್ ಶ್ರೀ ಸಕ್ಸೇನಾ ಜಿ, ಗೌರವಾನ್ವಿತ ರಾಜತಾಂತ್ರಿಕ ಸದಸ್ಯರೆ, ಬೌದ್ಧ ವಿದ್ವಾಂಸರು, ಧಮ್ಮ ಅನುಯಾಯಿಗಳು, ಮಹಿಳೆಯರೆ ಮತ್ತು ಮಹನೀಯರೆ.

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ನವದೆಹಲಿಯಲ್ಲಿ ಭಗವಾನ್ ಬುದ್ಧನಿಗೆ ಸಂಬಂಧಿಸಿದ ಪವಿತ್ರ ಪಿಪ್ರಹ್ವಾ ಅವಶೇಷಗಳ ಭವ್ಯ ಅಂತಾರಾಷ್ಟ್ರೀಯ ಪ್ರದರ್ಶನವನ್ನು ಉದ್ಘಾಟಿಸಿದರು

January 03rd, 11:30 am

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ನವದೆಹಲಿಯ ರಾಯ್ ಪಿತೋರಾ ಸಾಂಸ್ಕೃತಿಕ ಸಂಕೀರ್ಣದಲ್ಲಿ ಭಗವಾನ್ ಬುದ್ಧನಿಗೆ ಸಂಬಂಧಿಸಿದ ಪವಿತ್ರ ಪಿಪ್ರಹ್ವಾ ಅವಶೇಷಗಳ ದಿ ಲೈಟ್ ಅಂಡ್ ದಿ ಲೋಟಸ್: ರೆಲಿಕ್ಸ್ ಆಫ್ ದಿ ಅವೇಕನ್ಡ್ ಒನ್ ಎಂಬ ಹೆಸರಿನ ಬೃಹತ್ ಅಂತಾರಾಷ್ಟ್ರೀಯ ಪ್ರದರ್ಶನವನ್ನು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿಯವರು, ನೂರ ಇಪ್ಪತ್ತೈದು ವರ್ಷಗಳ ಸುದೀರ್ಘ ಕಾಯುವಿಕೆಯ ನಂತರ, ಭಾರತದ ಪರಂಪರೆ ಮತ್ತು ಸಾಂಸ್ಕೃತಿಕ ಆಸ್ತಿ ಇಂದು ಮರಳಿ ಬಂದಿದೆ, ಎಂದು ಹರ್ಷ ವ್ಯಕ್ತಪಡಿಸಿದರು. ಇಂದಿನಿಂದ ಭಾರತದ ಜನತೆ ಭಗವಾನ್ ಬುದ್ಧನ ಈ ಪವಿತ್ರ ಅವಶೇಷಗಳನ್ನು ದರ್ಶಿಸಲು ಮತ್ತು ಅವರ ಆಶೀರ್ವಾದವನ್ನು ಪಡೆಯಲು ಸಾಧ್ಯವಾಗಲಿದೆ ಎಂದು ಅವರು ಒತ್ತಿ ಹೇಳಿದರು. ಈ ಮಂಗಳಕರ ಸಂದರ್ಭದಲ್ಲಿ ಉಪಸ್ಥಿತರಿದ್ದ ಎಲ್ಲಾ ಅತಿಥಿಗಳನ್ನು ಶ್ರೀ ಮೋದಿ ಅವರು ಸ್ವಾಗತಿಸಿ, ಶುಭಾಶಯಗಳನ್ನು ಕೋರಿದರು. ಬೌದ್ಧ ಪರಂಪರೆಯ ಭಿಕ್ಷುಗಳು ಮತ್ತು ಧರ್ಮಾಚಾರ್ಯರ ಉಪಸ್ಥಿತಿಯನ್ನು ಶ್ಲಾಘಿಸಿದ ಅವರು, ಅವರ ಸಮ್ಮುಖವು ಈ ಕಾರ್ಯಕ್ರಮಕ್ಕೆ ಹೊಸ ಚೈತನ್ಯವನ್ನು ನೀಡಿದೆ ಎಂದು ಗೌರವಪೂರ್ವಕವಾಗಿ ತಿಳಿಸಿದರು. 2026ರ ವರ್ಷದ ಆರಂಭದಲ್ಲಿಯೇ ನಡೆಯುತ್ತಿರುವ ಈ ಮಂಗಳಕರ ಆಚರಣೆಯು ಅತ್ಯಂತ ಸ್ಪೂರ್ತಿದಾಯಕವಾಗಿದೆ ಎಂದು ಪ್ರಧಾನಿ ಅಭಿಪ್ರಾಯಪಟ್ಟರು. ಭಗವಾನ್ ಬುದ್ಧನ ಆಶೀರ್ವಾದದೊಂದಿಗೆ, 2026ನೇ ವರ್ಷವು ಇಡೀ ಜಗತ್ತಿಗೆ ಶಾಂತಿ, ಸಮೃದ್ಧಿ ಮತ್ತು ಸಾಮರಸ್ಯದ ಹೊಸ ಯುಗವನ್ನು ತರಲಿ ಎಂದು ಅವರು ಹಾರೈಸಿದರು.

ರಾಯ್‌ ಪಿಥೋರಾ ಸಾಂಸ್ಕೃತಿಕ ಸಂಕೀರ್ಣದಲ್ಲಿ ಪಿಪ್ರಾಹ್ವಾ ಅವಶೇಷಗಳನ್ನು ವೀಕ್ಷಿಸಲು ನಾಗರಿಕರಿಗೆ ಪ್ರಧಾನಮಂತ್ರಿ ಕರೆ

January 02nd, 06:16 pm

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2026ರ ಜನವರಿ 3ರಂದು ಬೆಳಗ್ಗೆ 11 ಗಂಟೆಗೆ ನವದೆಹಲಿಯ ರಾಯ್‌ ಪಿಥೋರಾ ಸಾಂಸ್ಕೃತಿಕ ಸಂಕೀರ್ಣದಲ್ಲಿ ಪವಿತ್ರ ಪಿಪ್ರಾಹ್ವಾ ಅವಶೇಷಗಳ ಭವ್ಯ ಅಂತಾರಾಷ್ಟ್ರೀಯ ಪ್ರದರ್ಶನವನ್ನು ಉದ್ಘಾಟಿಸಲಿದ್ದಾರೆ.

ಭಗವಾನ್ ಬುದ್ಧನಿಗೆ ಸಂಬಂಧಿಸಿದ ಪವಿತ್ರ ಪಿಪ್ರಹ್ವಾ ಅವಶೇಷಗಳ ಭವ್ಯ ಅಂತಾರಾಷ್ಟ್ರೀಯ ಪ್ರದರ್ಶನ ಜನವರಿ 3 ರಂದು ಪ್ರಧಾನಮಂತ್ರಿ ಅವರಿಂದ ಉದ್ಘಾಟನೆ

January 01st, 05:39 pm

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2026ರ ಜನವರಿ 3 ರಂದು ಬೆಳಗ್ಗೆ 11 ಗಂಟೆಗೆ ನವದೆಹಲಿಯ ರಾಯ್ ಪಿಥೋರಾ ಸಾಂಸ್ಕೃತಿಕ ಸಂಕೀರ್ಣದಲ್ಲಿ ಆಧ್ಯಾತ್ಮಿಕ ಶುದ್ಧತೆ ಮತ್ತು ಪರಿಪೂರ್ಣತೆ ಸಾರುವ “ದಿ ಲೈಟ್ & ದಿ ಲೋಟಸ್: ರೆಲಿಕ್ಸ್ ಆಫ್ ದಿ ಅವೇಕನ್ಡ್ ಒನ್ (“ಬೆಳಕು ಮತ್ತು ಕಮಲ (ಆಧ್ಯಾತ್ಮಿಕ ಸಂಕೇತ): ಜ್ಞಾನೋದಯ ವ್ಯಕ್ತಿಯ ಅವಶೇಷ”) ಎಂಬ ಶೀರ್ಷಿಕೆಯಡಿಯಲ್ಲಿ ಭಗವಾನ್ ಬುದ್ಧನಿಗೆ ಸಂಬಂಧಿಸಿದ ಪವಿತ್ರ ಪಿಪ್ರಹ್ವಾ ಅವಶೇಷಗಳ ಭವ್ಯ ಅಂತಾರಾಷ್ಟ್ರೀಯ ಪ್ರದರ್ಶನವನ್ನು ಉದ್ಘಾಟಿಸಲಿದ್ದಾರೆ.

ಭೂತಾನ್‌ ನ ರಾಜರೊಂದಿಗೆ ಸಭಿಕರನ್ನು ಬರಮಾಡಿಕೊಂಡ ಪ್ರಧಾನಮಂತ್ರಿ

November 11th, 06:14 pm

ಉಭಯ ದೇಶಗಳ ನಡುವಿನ ಸ್ನೇಹ ಮತ್ತು ಸಹಕಾರದ ನಿಕಟ ಸಂಬಂಧಗಳನ್ನು ರೂಪಿಸುವಲ್ಲಿ ಸತತವಾಗಿ ಅಧಿಕಾರಕ್ಕೆ ಬಂದ ಡ್ರೂಕ್ ಗಯಾಲ್ಪೋಸ್ (ರಾಜರು) ಒದಗಿಸಿದ ಮಾರ್ಗದರ್ಶಿ ದೃಷ್ಟಿಕೋನದ ಕುರಿತಾಗಿ ಪ್ರಧಾನಮಂತ್ರಿ ಅವರು ಮೆಚ್ಚುಗೆ ವ್ಯಕ್ತಪಡಿಸಿದರು. ಭೂತಾನ್ ನ ಸಾಮಾಜಿಕ-ಆರ್ಥಿಕ ಅಭಿವೃದ್ಧಿಗೆ ಭಾರತ ಸರ್ಕಾರ ನೀಡಿದ ಅಮೂಲ್ಯ ಬೆಂಬಲಕ್ಕೆ ಘನತೆವೆತ್ತ ದೊರೆ ಮೆಚ್ಚುಗೆ ವ್ಯಕ್ತಪಡಿಸಿದರು.

ಭೂತಾನ್ ಗೆ ತೆರಳುವ ಮುನ್ನ ಪ್ರಧಾನಮಂತ್ರಿ ಅವರ ಹೇಳಿಕೆ

November 11th, 07:28 am

ನಾನು 2025ರ ನವೆಂಬರ್ 11-12 ರವರೆಗೆ ಭೂತಾನ್ ಸಂಸ್ಥಾನಕ್ಕೆ ಭೇಟಿ ನೀಡಲಿದ್ದೇನೆ ಎಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಹೇಳಿದ್ದಾರೆ.

ಭಗವಾನ್ ಬುದ್ಧನ ಪವಿತ್ರ ಅವಶೇಷಗಳಿಗೆ ನೀಡಿದ ಗೌರವಯುತ ಸ್ವಾಗತಕ್ಕೆ ಭೂತಾನಿನ ಜನರು ಮತ್ತು ದೊರೆಗೆ ಕೃತಜ್ಞತೆ ಸಲ್ಲಿಸಿದ ಪ್ರಧಾನಮಂತ್ರಿ

November 09th, 03:43 pm

ಭಾರತದಿಂದ ಭಗವಾನ್ ಬುದ್ಧನ ಪವಿತ್ರ ಅವಶೇಷಗಳಿಗೆ ನೀಡಿದ ಗೌರವಯುತ ಸ್ವಾಗತಕ್ಕಾಗಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಭೂತಾನಿನ ಜನರು ಮತ್ತು ಅಲ್ಲಿನ ದೊರೆಗೆ ಹೃತ್ಪೂರ್ವಕ ಕೃತಜ್ಞತೆ ಸಲ್ಲಿಸಿದ್ದಾರೆ. ಭಗವಾನ್ ಬುದ್ಧನ ಅವಶೇಷಗಳು ಶಾಂತಿ, ಕರುಣೆ ಮತ್ತು ಸಾಮರಸ್ಯದ ಕಾಲಾತೀತ ಸಂದೇಶವನ್ನು ಸಂಕೇತಿಸುತ್ತವೆ. ಭಗವಾನ್ ಬುದ್ಧನ ಬೋಧನೆಗಳು ನಮ್ಮ ಎರಡೂ ರಾಷ್ಟ್ರಗಳ ಹಂಚಿಕೆಯ ಆಧ್ಯಾತ್ಮಿಕ ಪರಂಪರೆಯ ನಡುವಿನ ಪವಿತ್ರ ಕೊಂಡಿಯಾಗಿದೆ ಎಂದು ಶ್ರೀ ಮೋದಿ ಹೇಳಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ 2025 ರ ನವೆಂಬರ್ 11-12 ರವರೆಗೆ ಭೂತಾನ್‌ಗೆ ರಾಜ್ಯ ಭೇಟಿ ನೀಡಲಿದ್ದಾರೆ

November 09th, 09:59 am

ಉಭಯ ದೇಶಗಳ ನಡುವಿನ ಸಂಬಂಧಗಳನ್ನು ಬಲಪಡಿಸಲು ಪ್ರಧಾನಿ ಮೋದಿ 2025 ರ ನವೆಂಬರ್ 11-12 ರವರೆಗೆ ಭೂತಾನ್‌ಗೆ ರಾಜ್ಯ ಭೇಟಿ ನೀಡಲಿದ್ದಾರೆ. ಭೇಟಿಯ ಸಮಯದಲ್ಲಿ, ಪ್ರಧಾನಿಯವರು ಭೂತಾನ್ ರಾಜ ಹಿಸ್ ಮೆಜೆಸ್ಟಿ ಜಿಗ್ಮೆ ಖೇಸರ್ ನಮ್ಗ್ಯೆಲ್ ವಾಂಗ್‌ಚುಕ್ ಮತ್ತು ಭೂತಾನ್ ಪ್ರಧಾನಿ ತ್ಶೆರಿಂಗ್ ಟೋಬ್‌ಗೇ ಅವರನ್ನು ಭೇಟಿ ಮಾಡಲಿದ್ದಾರೆ. ಭೂತಾನ್‌ನ ನಾಲ್ಕನೇ ದೊರೆ ಹಿಸ್ ಮೆಜೆಸ್ಟಿ ಜಿಗ್ಮೆ ಸಿಂಗ್ಯೆ ವಾಂಗ್‌ಚುಕ್ ಅವರ 70 ನೇ ಜನ್ಮ ದಿನಾಚರಣೆ ಮತ್ತು ಜಾಗತಿಕ ಶಾಂತಿ ಪ್ರಾರ್ಥನಾ ಉತ್ಸವದಲ್ಲಿಯೂ ಪ್ರಧಾನಿ ಭಾಗವಹಿಸಲಿದ್ದಾರೆ.

ನವದೆಹಲಿಯಲ್ಲಿ ಜ್ಞಾನ ಭಾರತಂ ಕುರಿತ ಅಂತಾರಾಷ್ಟ್ರೀಯ ಸಮ್ಮೇಳನವನ್ನುದ್ದೇಶಿಸಿ ಪ್ರಧಾನಮಂತ್ರಿ ಭಾಷಣ

September 12th, 04:54 pm

ಇಂದು ವಿಜ್ಞಾನ ಭವನವು ಭಾರತದ ಸುವರ್ಣ ಗತಕಾಲದ ಪುನರುಜ್ಜೀವನಕ್ಕೆ ಸಾಕ್ಷಿಯಾಗಿದೆ. ಕೆಲವು ದಿನಗಳ ಹಿಂದೆ, ನಾನು ಜ್ಞಾನ ಭಾರತಂ ಮಿಷನ್ ಅನ್ನು ಘೋಷಿಸಿದೆ. ಇಂದು ಇಷ್ಟು ಕಡಿಮೆ ಸಮಯದಲ್ಲಿ ನಾವು ಜ್ಞಾನ ಭಾರತಂ ಅಂತಾರಾಷ್ಟ್ರೀಯ ಸಮ್ಮೇಳನವನ್ನು ಆಯೋಜಿಸುತ್ತಿದ್ದೇವೆ. ಇದಕ್ಕೆ ಸಂಬಂಧಿಸಿದ ಪೋರ್ಟಲ್ ಅನ್ನು ಸಹ ಇತ್ತೀಚೆಗೆ ಪ್ರಾರಂಭಿಸಲಾಗಿದೆ. ಇದು ಸರ್ಕಾರಿ ಅಥವಾ ಶೈಕ್ಷಣಿಕ ಘಟನೆಯಲ್ಲ; ಜ್ಞಾನ ಭಾರತಂ ಆಂದೋಲನ ಭಾರತದ ಸಂಸ್ಕೃತಿ, ಸಾಹಿತ್ಯ ಮತ್ತು ಪ್ರಜ್ಞೆಯ ಘೋಷಣೆಯಾಗಲಿದೆ. ಸಾವಿರಾರು ತಲೆಮಾರುಗಳ ಆಲೋಚನೆಗಳು ಮತ್ತು ಚಿಂತನೆಗಳು, ಭಾರತದ ಮಹಾನ್ ಸಂತರು ಮತ್ತು ವಿದ್ವಾಂಸರ ಬುದ್ಧಿವಂತಿಕೆ ಮತ್ತು ಸಂಶೋಧನೆ, ನಮ್ಮ ಜ್ಞಾನ ಸಂಪ್ರದಾಯಗಳು, ನಮ್ಮ ವೈಜ್ಞಾನಿಕ ಪರಂಪರೆ, ನಾವು ಜ್ಞಾನ ಭಾರತಂ ಮಿಷನ್ ಮೂಲಕ ಅವುಗಳನ್ನು ಡಿಜಿಟಲೀಕರಣಗೊಳಿಸಲಿದ್ದೇವೆ. ಈ ಆಂದೋಲನಕ್ಕಾಗಿ ನಾನು ಎಲ್ಲಾ ದೇಶವಾಸಿಗಳನ್ನು ಅಭಿನಂದಿಸುತ್ತೇನೆ. ಜ್ಞಾನ ಭಾರತಂನ ಇಡೀ ತಂಡಕ್ಕೆ ಮತ್ತು ಸಂಸ್ಕೃತಿ ಸಚಿವಾಲಯಕ್ಕೆ ನಾನು ಶುಭ ಹಾರೈಸುತ್ತೇನೆ.

ನವದೆಹಲಿಯಲ್ಲಿ ನಡೆದ ಜ್ಞಾನ ಭಾರತಂ ಕುರಿತ ಅಂತರರಾಷ್ಟ್ರೀಯ ಸಮ್ಮೇಳನವನ್ನು ಉದ್ದೇಶಿಸಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಭಾಷಣ

September 12th, 04:45 pm

ನವದೆಹಲಿಯ ವಿಜ್ಞಾನ ಭವನದಲ್ಲಿ ಇಂದು ನಡೆದ ಜ್ಞಾನ ಭಾರತಂ ಕುರಿತ ಅಂತರರಾಷ್ಟ್ರೀಯ ಸಮ್ಮೇಳನವನ್ನು ಉದ್ದೇಶಿಸಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಮಾತನಾಡಿದರು. ಈ ಸಂದರ್ಭದಲ್ಲಿ ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿ, ವಿಜ್ಞಾನ ಭವನ ಇಂದು ಭಾರತದ ಸುವರ್ಣ ಗತಕಾಲದ ಪುನರುಜ್ಜೀವನಕ್ಕೆ ಸಾಕ್ಷಿಯಾಗುತ್ತಿದೆ ಎಂದು ಹೇಳಿದರು. ಕೆಲವೇ ದಿನಗಳ ಹಿಂದೆ ತಾವು ಜ್ಞಾನ ಭಾರತಂ ಮಿಷನ್ ಘೋಷಿಸಿದ್ದನ್ನು ಮತ್ತು ಇಷ್ಟು ಕಡಿಮೆ ಅವಧಿಯಲ್ಲಿ ಜ್ಞಾನ ಭಾರತಂ ಅಂತರರಾಷ್ಟ್ರೀಯ ಸಮ್ಮೇಳನವನ್ನು ಆಯೋಜಿಸಲಾಗುತ್ತಿರುವುದನ್ನು ಅವರು ಒತ್ತಿ ಹೇಳಿದರು. ಈ ಮಿಷನ್‌ಗೆ ಸಂಬಂಧಿಸಿದ ಪೋರ್ಟಲ್ ಸಹ ಪ್ರಾರಂಭಿಸಲಾಗಿದೆ ಎಂದು ಶ್ರೀ ಮೋದಿ ಮಾಹಿತಿ ನೀಡಿದರು. ಇದು ಸರ್ಕಾರಿ ಅಥವಾ ಶೈಕ್ಷಣಿಕ ಕಾರ್ಯಕ್ರಮವಲ್ಲ ಎಂದು ಹೇಳಿದ ಪ್ರಧಾನಮಂತ್ರಿ, ಜ್ಞಾನ ಭಾರತಂ ಮಿಷನ್ ಭಾರತದ ಸಂಸ್ಕೃತಿ, ಸಾಹಿತ್ಯ ಮತ್ತು ಪ್ರಜ್ಞೆಯ ಘೋಷಣೆಯಾಗಲಿದೆ ಎಂದೂ ಹೇಳಿದರು. ಸಾವಿರಾರು ತಲೆಮಾರುಗಳ ಚಿಂತನಶೀಲ ಪರಂಪರೆಯನ್ನು ಅವರು ಉಲ್ಲೇಖಿಸಿದರು. ಭಾರತದ ಮಹಾನ್ ಋಷಿಗಳು, ಆಚಾರ್ಯರು ಮತ್ತು ವಿದ್ವಾಂಸರ ಬುದ್ಧಿವಂತಿಕೆ ಮತ್ತು ಸಂಶೋಧನೆಯನ್ನು ಅವರು ಗುರುತಿಸಿದರು, ಭಾರತದ ಜ್ಞಾನ, ಸಂಪ್ರದಾಯಗಳು ಮತ್ತು ವೈಜ್ಞಾನಿಕ ಪರಂಪರೆಯನ್ನು ಒತ್ತಿ ಹೇಳಿದರು. ಜ್ಞಾನ ಭಾರತಂ ಮಿಷನ್ ಮೂಲಕ ಈ ಪರಂಪರೆಗಳನ್ನು ಡಿಜಿಟಲೀಕರಣಗೊಳಿಸಲಾಗುತ್ತಿದೆ ಎಂದು ಶ್ರೀ ಮೋದಿ ಹೇಳಿದರು. ಈ ಕಾರ್ಯಾಚರಣೆಗಾಗಿ ಅವರು ಎಲ್ಲಾ ನಾಗರಿಕರಿಗೆ ಅಭಿನಂದನೆಗಳನ್ನು ಸಲ್ಲಿಸಿದರು ಮತ್ತು ಇಡೀ ಜ್ಞಾನ ಭಾರತಂ ತಂಡ ಮತ್ತು ಸಂಸ್ಕೃತಿ ಸಚಿವಾಲಯಕ್ಕೆ ತಮ್ಮ ಶುಭಾಶಯಗಳನ್ನು ತಿಳಿಸಿದರು.

ಜಪಾನಿನ ಪ್ರಾಂತ್ಯಗಳ ರಾಜ್ಯಪಾಲರೊಂದಿಗೆ ನಡೆಸಿದ ಸಂವಾದ ಕಾರ್ಯಕ್ರಮದಲ್ಲಿ ಪ್ರಧಾನಮಂತ್ರಿ ಭಾಷಣ

August 30th, 08:00 am

ನಾನು ಈ ಸಭಾಂಗಣದಲ್ಲಿ ಸೈತಾಮಾದ ವೇಗ, ಮಿಯಾಗಿಯ ಚೇತರಿಕೆ, ಫುಕುವೋಕಾದ ಚೈತನ್ಯ ಮತ್ತು ನಾರಾದ ಪರಂಪರೆಯನ್ನು ಅನುಭವಿಸಬಲ್ಲೆ. ನಿಮ್ಮೆಲ್ಲರಲ್ಲೂ ಕುಮಾಮೊಟೊದ ಉಷ್ಣತೆ, ನಾಗಾನೊದ ತಾಜಾತನ, ಶಿಜುವೋಕಾದ ಸೌಂದರ್ಯ ಮತ್ತು ನಾಗಸಾಕಿಯ ನಾಡಿಮಿಡಿತವಿದೆ. ನೀವೆಲ್ಲರೂ ಫ್ಯೂಜಿ ಪರ್ವತದ ಶಕ್ತಿ ಮತ್ತು ಸಕುರಾದ ಚೈತನ್ಯವನ್ನು ಸಾಕಾರಗೊಳಿಸುತ್ತೀರಿ. ಒಟ್ಟಾಗಿ, ನೀವು ಜಪಾನ್ ದೇಶವನ್ನು ಕಾಲಾತೀತವಾಗಿಸುತ್ತೀರಿ.

ಬಿಹಾರದ ಗಯಾಜಿಯಲ್ಲಿ ವಿವಿಧ ಅಭಿವೃದ್ಧಿ ಯೋಜನೆಗಳ ಉದ್ಘಾಟನಾ ಸಮಾರಂಭ ಉದ್ದೇಶಿಸಿ ಪ್ರಧಾನಮಂತ್ರಿ ಭಾಷಣ

August 22nd, 12:00 pm

ಬಿಹಾರದ ಗೌರವಾನ್ವಿತ ರಾಜ್ಯಪಾಲರಾದ ಆರಿಫ್ ಮೊಹಮ್ಮದ್ ಖಾನ್ ಜಿ, ಜನಪ್ರಿಯ ಮುಖ್ಯಮಂತ್ರಿ ನಿತೀಶ್ ಕುಮಾರ್ ಜಿ, ಕೇಂದ್ರ ಸಚಿವ ಸಂಪುಟದ ನನ್ನ ಸಹೋದ್ಯೋಗಿಗಳಾದ ಜಿತನ್ ರಾಮ್ ಮಾಂಝಿ ಜಿ, ರಾಜೀವ್ ರಂಜನ್ ಸಿಂಗ್, ಚಿರಾಗ್ ಪಾಸ್ವಾನ್ ಜಿ, ರಾಮ್ ನಾಥ್ ಠಾಕೂರ್ ಜಿ, ನಿತ್ಯಾನಂದ ರೈ ಜಿ, ಸತೀಶ್ ಚಂದ್ರ ದುಬೆ ಜಿ, ರಾಜ್ ಭೂಷಣ್ ಚೌಧರಿ ಜಿ, ಉಪಮುಖ್ಯಮಂತ್ರಿಗಳಾದ ಸಮ್ರಾಟ್ ಚೌಧರಿ ಜಿ ಮತ್ತು ವಿಜಯ್ ಕುಮಾರ್ ಸಿನ್ಹಾ ಜಿ, ಬಿಹಾರ ಸರ್ಕಾರದ ಸಚಿವರೆ, ನನ್ನ ಸಂಸದ ಮಿತ್ರರಾದ ಉಪೇಂದ್ರ ಕುಶ್ವಾಹ ಜಿ, ಇಲ್ಲಿರುವ ಇತರ ಸಂಸದರೆ ಮತ್ತು ಬಿಹಾರದ ನನ್ನ ಪ್ರೀತಿಯ ಸಹೋದರ ಸಹೋದರಿಯರೆ!

ಬಿಹಾರದ ಗಯಾದಲ್ಲಿ 12,000 ಕೋಟಿ ರೂ. ಮೌಲ್ಯದ ಹಲವಾರು ಅಭಿವೃದ್ಧಿ ಯೋಜನೆಗಳಿಗೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಶಂಕುಸ್ಥಾಪನೆ, ಉದ್ಘಾಟನೆ ನೆರವೇರಿಸಿದರು

August 22nd, 11:20 am

ಬಿಹಾರದ ಗಯಾದಲ್ಲಿ ಇಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 12,000 ಕೋಟಿ ರೂ. ಮೌಲ್ಯದ ಹಲವಾರು ಅಭಿವೃದ್ಧಿ ಯೋಜನೆಗಳಿಗೆ ಉದ್ಘಾಟನೆ ಮತ್ತು ಶಿಲಾನ್ಯಾಸ ನೆರವೇರಿಸಿದರು. ಜ್ಞಾನ ಮತ್ತು ಮೋಕ್ಷದ ಪವಿತ್ರ ನಗರವಾದ ಗಯಾಕ್ಕೆ ಪ್ರಧಾನಿಯವರು ನಮನ ಸಲ್ಲಿಸಿದರು ಮತ್ತು ವಿಷ್ಣುಪಾದ ಮಂದಿರದ ಅದ್ಭುತ ಭೂಮಿಯಿಂದ ಎಲ್ಲರಿಗೂ ಶುಭಾಶಯಗಳನ್ನು ತಿಳಿಸಿದರು. ಗಯಾ ಆಧ್ಯಾತ್ಮಿಕತೆ ಮತ್ತು ಶಾಂತಿಯ ಭೂಮಿ ಎಂದು ಶ್ರೀ ಮೋದಿ ಹೇಳಿದರು. ಭಗವಾನ್ ಬುದ್ಧ ಜ್ಞಾನೋದಯವನ್ನು ಪಡೆದದ್ದು ಈ ಪುಣ್ಯಭೂಮಿಯಲ್ಲಿ ಎಂದು ಅವರು ಹೇಳಿದರು. ಗಯಾ ಪ್ರಾಚೀನ ಮತ್ತು ಅತ್ಯಂತ ಶ್ರೀಮಂತ ಆಧ್ಯಾತ್ಮಿಕ ಮತ್ತು ಸಾಂಸ್ಕೃತಿಕ ಪರಂಪರೆಯನ್ನು ಹೊಂದಿದೆ ಎಂದು ಶ್ರೀ ಮೋದಿ ಹೇಳಿದರು. ಈ ಪ್ರದೇಶದ ಜನರು ನಗರವನ್ನು ಗಯಾ ಎಂದು ಮಾತ್ರ ಕರೆಯಬಾರದು, ಬದಲಿಗೆ ಗೌರವಯುತವಾಗಿ ಗಯಾಜಿ ಎಂದು ಕರೆಯಬೇಕೆಂದು ಬಯಸುತ್ತಾರೆ ಎಂದು ಹೇಳಿದ ಪ್ರಧಾನಿ, ಈ ಭಾವನೆಯನ್ನು ಗೌರವಿಸಿದ್ದಕ್ಕಾಗಿ ಬಿಹಾರ ಸರ್ಕಾರವನ್ನು ಅಭಿನಂದಿಸಿದರು. ಗಯಾದ ತ್ವರಿತ ಅಭಿವೃದ್ಧಿಗಾಗಿ ಕೇಂದ್ರ ಮತ್ತು ಬಿಹಾರದಲ್ಲಿರುವ ತಮ್ಮ ಸರ್ಕಾರಗಳು ನಿರಂತರ ಪ್ರಯತ್ನಗಳನ್ನು ಮಾಡುತ್ತಿರುವುದಕ್ಕೆ ಅವರು ಸಂತೋಷ ವ್ಯಕ್ತಪಡಿಸಿದರು.

ಪವಿತ್ರ ಪಿಪ್ರಹ್ವಾ ಅವಶೇಷಗಳು 127 ವರ್ಷಗಳ ನಂತರ ತವರಿಗೆ ವಾಪಸ್ - ಪ್ರಧಾನಮಂತ್ರಿ ಸ್ವಾಗತ

July 30th, 02:44 pm

ಭಗವಾನ್ ಬುದ್ಧನ ಪವಿತ್ರ ಪಿಪ್ರಹ್ವಾ ಅವಶೇಷಗಳು 127 ವರ್ಷಗಳ ನಂತರ ಭಾರತಕ್ಕೆ ಮರಳಿರುವುದನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಶ್ಲಾಘಿಸಿದ್ದಾರೆ. ಇದು ದೇಶದ ಶ್ರೀಮಂತ ಸಾಂಸ್ಕೃತಿಕ ಪರಂಪರೆಗೆ ಹೆಮ್ಮೆ ಮತ್ತು ಸಂತೋಷದ ಕ್ಷಣ ಎಂದು ಅವರು ಬಣ್ಣಿಸಿದ್ದಾರೆ.