ಬಿ ಎಸ್‌ ಎಫ್ ಸಿಬ್ಬಂದಿಗೆ ಸ್ಥಾಪನಾ ದಿನದ ಶುಭ ಕೋರಿದ ಪ್ರಧಾನಮಂತ್ರಿ

December 01st, 06:18 pm

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಬಿ ಎಸ್‌ ಎಫ್ ಸ್ಥಾಪನಾ ದಿನದ ಅಂಗವಾಗಿ ಅದರ ಸಿಬ್ಬಂದಿಗೆ ಶುಭಾಶಯಗಳನ್ನು ಕೋರಿದ್ದಾರೆ. ಬಿಎಸ್‌ಎಫ್ ಭಾರತದ ದೃಢ ಸಂಕಲ್ಪ ಮತ್ತು ಶ್ರೇಷ್ಠ ವೃತ್ತಿಪರತೆಯನ್ನು ಸಂಕೇತಿಸುತ್ತದೆ ಎಂದು ಶ್ರೀ ನರೇಂದ್ರ ಮೋದಿ ಹೇಳಿದ್ದಾರೆ. “ಅವರು ಕೆಲವು ಅತ್ಯಂತ ಸವಾಲಿನ ಪ್ರದೇಶಗಳಲ್ಲಿ ಸೇವೆ ಸಲ್ಲಿಸುತ್ತಾರೆ. ಅವರ ಶೌರ್ಯದ ಜೊತೆಗೆ, ಅವರ ಮಾನವೀಯ ಮನೋಭಾವವೂ ಅಸಾಧಾರಣವಾಗಿದೆ’’ ಎಂದು ಶ್ರೀ ನರೇಂದ್ರ ಮೋದಿ ಹೇಳಿದ್ದಾರೆ.

ಅಕ್ಟೋಬರ್ 30-31 ರಂದು ಗುಜರಾತ್ ಗೆ ಭೇಟಿ ನೀಡಲಿರುವ ಪ್ರಧಾನಮಂತ್ರಿ

October 29th, 10:58 am

ಅಕ್ಟೋಬರ್ 30-31 ರಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಗುಜರಾತ್ ಗೆ ಭೇಟಿ ನೀಡಲಿದ್ದಾರೆ. ಅಕ್ಟೋಬರ್ 30 ರಂದು ಪ್ರಧಾನಮಂತ್ರಿ ಅವರು ಕೆವಾಡಿಯಾದ ಏಕ್ತಾ ನಗರಕ್ಕೆ ಪ್ರಯಾಣಿಸಲಿದ್ದು, ಅದೇ ದಿನ ಸಂಜೆ 5:15ರ ಸುಮಾರಿಗೆ ಅಲ್ಲಿ ಇ-ಬಸ್ ಗಳಿಗೆ ಚಾಲನೆ ನೀಡಲಿದ್ದಾರೆ. ಸಂಜೆ 6:30ರ ಸುಮಾರಿಗೆ, ಅವರು ಏಕ್ತಾ ನಗರದಲ್ಲಿ 1,140 ಕೋಟಿ ರೂ.ಗಳಿಗೂ ಹೆಚ್ಚು ಮೌಲ್ಯದ ವಿವಿಧ ಮೂಲಸೌಕರ್ಯ ಮತ್ತು ಅಭಿವೃದ್ಧಿ ಯೋಜನೆಗಳನ್ನು ಉದ್ಘಾಟಿಸಿ, ಶಿಲಾನ್ಯಾಸ ಮಾಡಲಿದ್ದಾರೆ.

'ವಂದೇ ಮಾತರಂ' ನ ಚೈತನ್ಯವು ಭಾರತದ ಅಮರ ಪ್ರಜ್ಞೆಗೆ ಸಂಬಂಧಿಸಿದೆ: ಮನ್ ಕಿ ಬಾತ್ ನಲ್ಲಿ ಪ್ರಧಾನಿ ಮೋದಿ

October 26th, 11:30 am

ಈ ತಿಂಗಳ ಮನ್ ಕಿ ಬಾತ್ ಭಾಷಣದಲ್ಲಿ, ಅಕ್ಟೋಬರ್ 31 ರಂದು ನಡೆದ ಸರ್ದಾರ್ ಪಟೇಲ್ ಅವರ 150 ನೇ ಜನ್ಮ ದಿನಾಚರಣೆಯಂದು ಪ್ರಧಾನಿ ಮೋದಿ ಅವರಿಗೆ ಗೌರವ ಸಲ್ಲಿಸಿದರು. ಛಠ್ ಪೂಜಾ ಉತ್ಸವ, ಪರಿಸರ ಸಂರಕ್ಷಣೆ, ಭಾರತೀಯ ನಾಯಿ ತಳಿಗಳು, ಭಾರತೀಯ ಕಾಫಿ, ಬುಡಕಟ್ಟು ಸಮುದಾಯದ ನಾಯಕರು ಮತ್ತು ಸಂಸ್ಕೃತ ಭಾಷೆಯ ಪ್ರಾಮುಖ್ಯತೆಯಂತಹ ಆಸಕ್ತಿದಾಯಕ ವಿಷಯಗಳನ್ನು ಅವರು ಸ್ಪರ್ಶಿಸಿದರು. 'ವಂದೇ ಮಾತರಂ' ಹಾಡಿನ 150 ನೇ ವರ್ಷದ ಬಗ್ಗೆ ಪ್ರಧಾನಿಯವರು ವಿಶೇಷವಾಗಿ ಉಲ್ಲೇಖಿಸಿದರು.

ಐ.ಎನ್.ಎಸ್ ವಿಕ್ರಾಂತ್ ನಲ್ಲಿ ಸಶಸ್ತ್ರ ಪಡೆಗಳೊಂದಿಗೆ ದೀಪಾವಳಿ ಆಚರಣೆ ಸಂದರ್ಭದಲ್ಲಿ ಪ್ರಧಾನಮಂತ್ರಿ ಭಾಷಣ

October 20th, 10:30 am

ಇಂದು ಅದ್ಭುತ ದಿನ, ಈ ಕ್ಷಣವನ್ನು ಮರೆಯಲಾಗದು, ಇವತ್ತಿನ ಈ ದೃಶ್ಯ ಅಸಾಧಾರಣವಾಗಿದೆ. ನನ್ನ ಒಂದು ಬದಿಯಲ್ಲಿ ವಿಶಾಲವಾದ ಅಮಿತ ಸಾಗರವಿದೆ, ಇನ್ನೊಂದು ಬದಿಯಲ್ಲಿ ಭಾರತ ಮಾತೆಯ ಧೈರ್ಯಶಾಲಿ ಸೈನಿಕರ ಅಪಾರ ಶಕ್ತಿಯೇ ಇದೆ. ನನ್ನ ಒಂದು ಬದಿಯಲ್ಲಿ ಅನಂತ ದಿಗಂತ ಮತ್ತು ಅಂತ್ಯ ಕಾಣದ ಆಗಸವಿದೆ, ಇನ್ನೊಂದು ಬದಿಯಲ್ಲಿ ತನ್ನೊಳಗೆ ಅನಂತ ಶಕ್ತಿಯನ್ನು ಸಾಕಾರಗೊಳಿಸುವ ಪ್ರಬಲ ಮತ್ತು ಭವ್ಯವಾದ ಐಎನ್ಎಸ್ ವಿಕ್ರಾಂತ್ ನೆಲೆ ನಿಂತಿದೆ. ಸಾಗರ ನೀರಿನ ಮೇಲೆ ಸೂರ್ಯನ ಬೆಳಕಿನ ಹೊಳಪು, ಒಂದು ರೀತಿಯಲ್ಲಿ, ನಮ್ಮ ಧೈರ್ಯಶಾಲಿ ಸೈನಿಕರು ಬೆಳಗಿದ ದೀಪಾವಳಿ ದೀಪಗಳಂತೆ ಕಾಣುತ್ತಿದ್ದಾರೆ. ಇವು ನಮ್ಮ ದೈವಿಕ ಬೆಳಕಿನ ಹಾರಗಳಾಗಿವೆ. ಈ ಬಾರಿ ನಾನು ನಮ್ಮ ನೌಕಾಪಡೆಯ ಅಪ್ರತಿಮ ಯೋಧರ ನಡುವೆ ದೀಪಾವಳಿಯ ಪವಿತ್ರ ಹಬ್ಬ ಆಚರಿಸುತ್ತಿರುವುದು ನನ್ನ ಪಾಲಿನ ದೊಡ್ಡ ಅದೃಷ್ಟವೇ ಆಗಿದೆ.

PM Modi celebrates Diwali on board the INS Vikrant

October 20th, 10:00 am

In his address to the armed forces personnel on board INS Vikrant, PM Modi extended heartfelt Diwali greetings to the countrymen. He highlighted that, inspired by Chhatrapati Shivaji Maharaj, the Indian Navy has adopted a new flag. Recalling various operations, the PM emphasized that India stands ready to provide humanitarian assistance anywhere in the world. He also noted that over 100 districts have now fully emerged from Maoist terror.

Our government is making the vision of women-led development the axis of development: PM Modi in Bhopal, Madhya Pradesh

May 31st, 11:00 am

PM Modi participated in the Devi Ahilyabai Mahila Sashaktikaran Mahasammelan and launched multiple projects in Bhopal, Madhya Pradesh. Quoting Devi Ahilyabai, he reiterated that true governance means serving the people and improving their lives. Emphasising the government’s commitment to increasing women's participation in policymaking, the PM highlighted the progressive steps taken over the past decade.

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಧ್ಯಪ್ರದೇಶದ ಭೋಪಾಲ್ ನಲ್ಲಿ ಲೋಕಮಾತಾ ದೇವಿ ಅಹಲ್ಯಾಬಾಯಿ ಹೋಳ್ಕರ್ ಅವರ 300ನೇ ಜನ್ಮ ದಿನಾಚರಣೆಯ ಸಂದರ್ಭದಲ್ಲಿ ಮಹಿಳಾ ಸಶಕ್ತೀಕರಣ ಮಹಾಸಮ್ಮೇಳನ ಉದ್ದೇಶಿಸಿ ಭಾಷಣ ಮಾಡಿದರು

May 31st, 10:27 am

ಲೋಕಮಾತಾ ದೇವಿ ಅಹಲ್ಯಾಬಾಯಿ ಹೋಳ್ಕರ್ ಅವರ 300ನೇ ಜನ್ಮ ದಿನಾಚರಣೆಯ ಸಂದರ್ಭದಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಮಧ್ಯಪ್ರದೇಶದ ಭೋಪಾಲ್ ನಲ್ಲಿ ನಡೆದ ಲೋಕಮಾತಾ ದೇವಿ ಅಹಲ್ಯಾಬಾಯಿ ಮಹಿಳಾ ಸಶಕ್ತೀಕರಣ ಮಹಾಸಮ್ಮೇಳನವನ್ನುದ್ದೇಶಿಸಿ ಭಾಷಣ ಮಾಡಿದರು. ಅವರು ಭೋಪಾಲ್ ನಲ್ಲಿ ಅನೇಕ ಅಭಿವೃದ್ಧಿ ಯೋಜನೆಗಳನ್ನು ಉದ್ಘಾಟಿಸಿದರು ಮತ್ತು ಶಂಕುಸ್ಥಾಪನೆ ನೆರವೇರಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, 'ಮಾ ಭಾರತಿ'ಗೆ ಗೌರವ ಸಲ್ಲಿಸುವ ಮೂಲಕ ಮತ್ತು ಭಾರತದ ಮಹಿಳೆಯರ ಶಕ್ತಿಯನ್ನು ಅಂಗೀಕರಿಸುವ ಮೂಲಕ ಪ್ರಾರಂಭಿಸಿದರು. ಈ ಕಾರ್ಯಕ್ರಮವನ್ನು ಆಶೀರ್ವದಿಸಲು ಬಂದ ಸಹೋದರಿಯರು ಮತ್ತು ಹೆಣ್ಣುಮಕ್ಕಳ ದೊಡ್ಡ ಗುಂಪಿಗೆ ಅವರು ಕೃತಜ್ಞತೆ ಸಲ್ಲಿಸಿದರು, ಅವರ ಉಪಸ್ಥಿತಿಯಿಂದ ತಮಗೆ ಗೌರವವಿದೆ ಎಂದು ಹೇಳಿದರು. ಇಂದು ಲೋಕಮಾತಾ ದೇವಿ ಅಹಲ್ಯಾಬಾಯಿ ಹೋಳ್ಕರ್ ಅವರ 300ನೇ ಜನ್ಮ ದಿನಾಚರಣೆ, ಇದು 140 ಕೋಟಿ ಭಾರತೀಯರಿಗೆ ಸ್ಫೂರ್ತಿಯ ಸಂದರ್ಭ ಮತ್ತು ರಾಷ್ಟ್ರ ನಿರ್ಮಾಣದ ಸ್ಮರಣೀಯ ಪ್ರಯತ್ನಗಳಿಗೆ ಕೊಡುಗೆ ನೀಡುವ ಕ್ಷಣವಾಗಿದೆ ಎಂದು ಪ್ರಧಾನಮಂತ್ರಿ ಒತ್ತಿ ಹೇಳಿದರು. ದೇವಿ ಅಹಲ್ಯಾಬಾಯಿ ಅವರನ್ನು ಉಲ್ಲೇಖಿಸಿದ ಅವರು, ನಿಜವಾದ ಆಡಳಿತ ಎಂದರೆ ಜನರ ಸೇವೆ ಮತ್ತು ಅವರ ಜೀವನವನ್ನು ಸುಧಾರಿಸುವುದು ಎಂದು ಪುನರುಚ್ಚರಿಸಿದರು. ಇಂದಿನ ಕಾರ್ಯಕ್ರಮವು ಅವರ ದೃಷ್ಟಿಕೋನವನ್ನು ಸಾಕಾರಗೊಳಿಸುತ್ತದೆ ಮತ್ತು ಅವರ ಆದರ್ಶಗಳನ್ನು ಮುಂದಕ್ಕೆ ಕೊಂಡೊಯ್ಯುತ್ತದೆ ಎಂದು ಅವರು ಹೇಳಿದರು. ಇಂದೋರ್ ಮೆಟ್ರೋಗೆ ಚಾಲನೆ ನೀಡಿರುವುದನ್ನು ಪ್ರಧಾನಮಂತ್ರಿ ಅವರು ಉಲ್ಲೇಖಿಸಿದರು, ಜೊತೆಗೆ ದಾತಿಯಾ ಮತ್ತು ಸತ್ನಾಕ್ಕೆ ವಾಯು ಸಂಪರ್ಕವನ್ನು ಸೇರಿಸಲಾಯಿತು. ಈ ಯೋಜನೆಗಳು ಮಧ್ಯಪ್ರದೇಶದಲ್ಲಿ ಮೂಲಸೌಕರ್ಯವನ್ನು ಹೆಚ್ಚಿಸುತ್ತವೆ, ಅಭಿವೃದ್ಧಿಯನ್ನು ವೇಗಗೊಳಿಸುತ್ತವೆ ಮತ್ತು ಹೊಸ ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತವೆ ಎಂದು ಅವರು ಒತ್ತಿ ಹೇಳಿದರು. ಹಾಜರಿದ್ದ ಎಲ್ಲರಿಗೂ ಅವರು ಅಭಿನಂದನೆ ಸಲ್ಲಿಸಿದರು.

ಆದಂಪುರ ವಾಯುನೆಲೆಯಲ್ಲಿ ವೀರ ವಾಯುಪಡೆ ಯೋಧರು ಮತ್ತು ಸಮರ ವೀರರೊಂದಿಗೆ ಪ್ರಧಾನಮಂತ್ರಿ ಸಂವಾದ

May 13th, 03:45 pm

ಈ ಘೋಷಣೆಯ ಶಕ್ತಿಯನ್ನು ಜಗತ್ತು ಇದೀಗವಷ್ಟೇ ನೋಡಿದೆ. ಭಾರತ್ ಮಾತಾ ಕಿ ಜೈ ಎಂಬುದು ಕೇವಲ ಘೋಷಣೆಯಲ್ಲ, ಭಾರತ ಮಾತೆಯ ಗೌರವ ಮತ್ತು ಘನತೆಗಾಗಿ ತನ್ನ ಪ್ರಾಣವನ್ನೇ ಪಣಕ್ಕಿಡುವ ದೇಶದ ಪ್ರತಿಯೊಬ್ಬ ಸೈನಿಕನ ಪ್ರಮಾಣವಚನ ಇದಾಗಿದೆ. ದೇಶಕ್ಕಾಗಿ ಬದುಕಲು ಬಯಸುವ, ಏನನ್ನಾದರೂ ಸಾಧಿಸಲು ಬಯಸುವ ದೇಶದ ಪ್ರತಿಯೊಬ್ಬ ನಾಗರಿಕನ ಧ್ವನಿ ಇದಾಗಿದೆ. ಭಾರತ್ ಮಾತಾ ಕಿ ಜೈ ಎಂಬುದು ಯುದ್ಧಭೂಮಿಯಲ್ಲಿ ಮತ್ತು ಕಾರ್ಯಾಚರಣೆಯಲ್ಲಿ ಪ್ರತಿಧ್ವನಿಸುತ್ತದೆ. ಭಾರತದ ಸೈನಿಕರು ಭಾರತ್ ಮಾತಾ ಕಿ ಜೈ ಎಂದು ಜಪಿಸಿದಾಗ, ಶತ್ರುಗಳ ಹೃದಯ ನಡುಗುತ್ತದೆ. ನಮ್ಮ ಡ್ರೋನ್‌ಗಳು ಶತ್ರುಗಳ ಕೋಟೆಯ ಗೋಡೆಗಳನ್ನು ಉರುಳಿಸಿದಾಗ, ನಮ್ಮ ಕ್ಷಿಪಣಿಗಳು ಭಾರಿ ಶಬ್ದದೊಂದಿಗೆ ಗುರಿ ತಲುಪಿದಾಗ, ಶತ್ರು ಕೇಳುತ್ತಾನೆ - ಭಾರತ್ ಮಾತಾ ಕಿ ಜೈ! ಘೋಷಣೆಯನ್ನ. ರಾತ್ರಿಯ ಕಗ್ಗತ್ತಲೆಯಲ್ಲೂ ನಾವು ಸೂರ್ಯನನ್ನು ಬೆಳಗಿದಾಗ, ಶತ್ರು ನೋಡುತ್ತಾನೆ - ಭಾರತ್ ಮಾತಾ ಕಿ ಜೈ! ನಮ್ಮ ಪಡೆಗಳು ಪರಮಾಣು ಬೆದರಿಕೆಯನ್ನು ಹುಸಿಗೊಳಿಸಿದಾಗ, ಆಕಾಶದಿಂದ ಭೂಗತ ಲೋಕಕ್ಕೆ ಒಂದೇ ಒಂದು ವಿಷಯ ಪ್ರತಿಧ್ವನಿಸುತ್ತದೆ, ಅದೇ - ಭಾರತ್ ಮಾತಾ ಕಿ ಜೈ!

ಆದಂಪುರ ವಾಯುಪಡೆ ನಿಲ್ದಾಣದಲ್ಲಿ ಧೈರ್ಯಶಾಲಿ ವಾಯುಪಡೆ ಯೋಧರು ಮತ್ತು ಸೈನಿಕರೊಂದಿಗೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಸಂವಾದ

May 13th, 03:30 pm

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಆದಂಪುರದ ವಾಯುಪಡೆ ನಿಲ್ದಾಣದಲ್ಲಿಂದು ವೀರ ವಾಯುಪಡೆ ಯೋಧರು ಮತ್ತು ಸೈನಿಕರನ್ನು ಭೇಟಿ ಮಾಡಿ ಸಂವಾದ ನಡೆಸಿದರು. ಅವರ ಜತೆ ಮಾತನಾಡಿದ ಅವರು, 'ಭಾರತ್ ಮಾತಾ ಕಿ ಜೈ' ಘೋಷಣೆಯ ಶಕ್ತಿಯನ್ನು ಜಗತ್ತು ಇದೀಗಷ್ಟೇ ಕಂಡಿದೆ. ಇದು ಕೇವಲ ಮಂತ್ರವಲ್ಲ, ಭಾರತ ಮಾತೆಯ ಘನತೆ ಎತ್ತಿಹಿಡಿಯಲು ತಮ್ಮ ಪ್ರಾಣವನ್ನೇ ಪಣಕ್ಕಿಡುವ ಪ್ರತಿಯೊಬ್ಬ ಸೈನಿಕನು ತೆಗೆದುಕೊಳ್ಳುವ ಗಂಭೀರ ಪ್ರಮಾಣವಚನ ಇದಾಗಿದೆ. ಈ ಘೋಷಣೆಯು ರಾಷ್ಟ್ರಕ್ಕಾಗಿ ಬದುಕಲು ಮತ್ತು ಅರ್ಥಪೂರ್ಣ ಕೊಡುಗೆ ನೀಡಲು ಬಯಸುವ ಪ್ರತಿಯೊಬ್ಬ ನಾಗರಿಕನ ಧ್ವನಿಯಾಗಿದೆ. 'ಭಾರತ್ ಮಾತಾ ಕಿ ಜೈ' ಯುದ್ಧಭೂಮಿಯಲ್ಲಿ ಮತ್ತು ನಿರ್ಣಾಯಕ ಕಾರ್ಯಾಚರಣೆಗಳಲ್ಲಿ ಪ್ರತಿಧ್ವನಿಸುತ್ತದೆ. ಭಾರತೀಯ ಸೈನಿಕರು 'ಭಾರತ್ ಮಾತಾ ಕಿ ಜೈ' ಎಂದು ಜಪಿಸಿದಾಗ, ಅದು ಶತ್ರುಗಳ ಬೆನ್ನುಮೂಳೆಯಲ್ಲಿ ನಡುಕ ಉಂಟುಮಾಡುತ್ತದೆ. ಅವರು ಭಾರತದ ಸೇನಾ ಶಕ್ತಿಯನ್ನು ಶ್ಲಾಘಿಸಿದ ಅವರು, ಭಾರತೀಯ ಡ್ರೋನ್‌ಗಳು ಶತ್ರುಗಳ ಕೋಟೆಗಳನ್ನು ಕೆಡವಿದಾಗ ಮತ್ತು ಕ್ಷಿಪಣಿಗಳು ನಿಖರವಾಗಿ ದಾಳಿ ಮಾಡಿದಾಗ, ಶತ್ರುವು 'ಭಾರತ್ ಮಾತಾ ಕಿ ಜೈ' ಎಂಬ ಒಂದೇ ಒಂದು ಪದ ಕೇಳುತ್ತಾನೆ. ಅತ್ಯಂತ ಕತ್ತಲೆಯ ರಾತ್ರಿಗಳಲ್ಲೂ ಭಾರತವು ಆಕಾಶವನ್ನು ಬೆಳಗಿಸುವ ಸಾಮರ್ಥ್ಯ ಹೊಂದಿದೆ, ಶತ್ರುಗಳು ರಾಷ್ಟ್ರದ ಅದಮ್ಯ ಚೈತನ್ಯವನ್ನು ವೀಕ್ಷಿಸುವಂತೆ ಮಾಡಿದೆ. ಭಾರತದ ಪಡೆಗಳು ಪರಮಾಣು ಬೆದರಿಕೆಯನ್ನು ಕಳಚಿದಾಗ, 'ಭಾರತ್ ಮಾತಾ ಕಿ ಜೈ' ಎಂಬ ಸಂದೇಶವು ಆಕಾಶ ಮತ್ತು ಆಳದಲ್ಲಿ ಪ್ರತಿಧ್ವನಿಸಿದೆ ಎಂದು ಅವರು ಘೋಷಿಸಿದರು.

ಗಡಿ ಭದ್ರತಾ ಪಡೆಯ ಸಂಸ್ಥಾಪನಾ ದಿನದ ಅಂಗವಾಗಿ ಪ್ರಧಾನಮಂತ್ರಿ ಶುಭಾಶಯ

December 01st, 08:52 am

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಗಡಿ ಭದ್ರತಾ ಪಡೆಗೆ ಸಂಸ್ಥಾಪನಾ ದಿನದ ಅಂಗವಾಗಿ ಶುಭಾಶಯ ಕೋರಿದರು. ಗಡಿ ಭದ್ರತಾ ಪಡೆಯ ಧೈರ್ಯ, ಸಮರ್ಪಣೆ ಮತ್ತು ಅಸಾಧಾರಣ ಸೇವೆಯು ರಕ್ಷಣಾ ಸೇವೆಯಲ್ಲಿ ನಿರ್ಣಾಯಕವಾಗಿ ಎಂದು ಅವರು ಶ್ಲಾಘಿಸಿದ್ದಾರೆ.

​​​​​​​ಬಿಎಸ್ ಎಫ್ ಸ್ಥಾಪನಾ ದಿನದ ಅಂಗವಾಗಿ ಶುಭ ಕೋರಿದ ಪ್ರಧಾನಿ

December 01st, 10:16 am

“ ಈ ಬಿಎಸ್‌ ಎಫ್ ಸ್ಥಾಪನಾ ದಿನದಂದು ನಮ್ಮ ಗಡಿಗಳ ಕಾವಲುಗಾರರಾಗಿ ಗುರುತಿಸಿಕೊಂಡಿರುವ ಈ ಅತ್ಯುತ್ತಮ ಪಡೆಯನ್ನು ಶ್ಲಾಘಿಸುತ್ತೇವೆ. ನಮ್ಮ ರಾಷ್ಟ್ರವನ್ನು ರಕ್ಷಣೆಯಲ್ಲಿ ಅವರ ಶೌರ್ಯ ಮತ್ತು ಅಚಲ ಸ್ಫೂರ್ತಿಯು ಅವರ ಬದ್ಧತೆಗೆ ಸಾಕ್ಷಿಯಾಗಿದೆ. ನೈಸರ್ಗಿಕ ವಿಕೋಪಗಳ ಹಿನ್ನೆಲೆಯಲ್ಲಿ ರಕ್ಷಣಾ ಮತ್ತು ಪರಿಹಾರ ಕಾರ್ಯದಲ್ಲಿ ಬಿಎಸ್ಎಫ್ ಪಾತ್ರವನ್ನು ನಾನು ಪ್ರಶಂಸಿಸಲು ಬಯಸುತ್ತೇನೆ.’’

ರೋಜ್ಗಾರ್ ಮೇಳದ ಅಡಿಯಲ್ಲಿ, ಪ್ರಧಾನ ಮಂತ್ರಿಯವರು ಆಗಸ್ಟ್ 28 ರಂದು ಸರ್ಕಾರಿ ಇಲಾಖೆಗಳು ಮತ್ತು ಸಂಸ್ಥೆಗಳಲ್ಲಿ ಹೊಸದಾಗಿ ಸೇರ್ಪಡೆಗೊಂಡ 51,000 ಕ್ಕೂ ಹೆಚ್ಚು ಅಭ್ಯರ್ಥಿಗಳಿಗೆ ನೇಮಕಾತಿ ಪತ್ರ ವಿತರಿಸಲಿದ್ದಾರೆ

August 27th, 07:08 pm

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಆಗಸ್ಟ್ 28ರಂದು ಬೆಳಗ್ಗೆ 10:30 AM ಕ್ಕೆ ವೀಡಿಯೊ ಕಾನ್ಫರೆನ್ಸಿಂಗ್ ಮೂಲಕ ಹೊಸದಾಗಿ ಸೇರ್ಪಡೆಗೊಂಡವರಿಗೆ 51,000 ಕ್ಕೂ ಹೆಚ್ಚು ನೇಮಕಾತಿ ಪತ್ರಗಳನ್ನು ವಿತರಿಸಲಿದ್ದಾರೆ. ಪ್ರಧಾನಿಯವರು ಈ ಸಂದರ್ಭದಲ್ಲಿ ನೇಮಕಗೊಂಡವರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.

BSF ನಲ್ಲಿ ಮೂಲಸೌಕರ್ಯ ಮೇಲ್ದರ್ಜೆಗೇರಿಸುವಿಕೆಗೆ ಪ್ರಧಾನಿ ಶ್ಲಾಘನೆ

May 09th, 11:20 pm

ನಾಲ್ಕು ಜಂಟಿ ಹೊರಠಾಣೆಗಳ ಉದ್ಘಾಟನೆಯೊಂದಿಗೆ ಬಿಎಸ್ಎಫ್ ಅನ್ನು ಮತ್ತಷ್ಟು ಬಲಪಡಿಸಲಾಗಿದೆ ಎಂದು ಕೇಂದ್ರ ಗೃಹ ಸಚಿವ ಶ್ರೀ ಅಮಿತ್ ಶಾ ಟ್ವೀಟ್ ಮಾಡಿದ್ದಾರೆ. ಒಟ್ಟು 108.3 ಕೋಟಿ ರೂ.ಗಳ ಮೌಲ್ಯದ ಇತರ ಯೋಜನೆಗಳ ಜೊತೆಗೆ ಎರಡು ವಸತಿ ಸಮುಚ್ಚಯಗಳು ಮತ್ತು ಒಬ್ಬ ಅಧಿಕಾರಿಯ ಮೆಸ್ ಅನ್ನು ಸಹ ಉದ್ಘಾಟಿಸಲಾಯಿತು.

ಸಂಸ್ಥಾಪನ ದಿನದಂದು ಬಿಎಸ್ಎಫ್ ನ ಸಿಬ್ಬಂದಿವರ್ಗ ಮತ್ತು ಅವರ ಕುಟುಂಬ ವರ್ಗಕ್ಕೆ ಪ್ರಧಾನಿ ಶುಭಾಶಯ.

December 01st, 09:07 am

ಪ್ರಧಾನ ಮಂತ್ರಿಗಳಾದ, ಶ್ರೀ ನರೇಂದ್ರ ಮೋದಿಯವರು ಬಿಎಸ್ಎಫ್ ನ ಸಂಸ್ಥಾಪನ ದಿನದ ಸಂದರ್ಭದಲ್ಲಿ ಬಿಎಸ್ಎಫ್ ಸಿಬ್ಬಂದಿ ಮತ್ತು ಅವರ ಕುಟುಂಬಗಳಿಗೆ ಶುಭಾಶಯ ತಿಳಿಸಿದ್ದಾರೆ ಅತ್ಯಂತ ಪರಿಶ್ರಮದಿಂದ ಭಾರತವನ್ನು ರಕ್ಷಣೆ ಮಾಡುವಲ್ಲಿ ಮತ್ತು ನಮ್ಮ ದೇಶಕ್ಕೆ ಸೇವೆಸಲ್ಲಿಸುವ ಸಂದರ್ಭದಲ್ಲಿ ಬಿಎಸ್ಎಫ್ ಸಾಧಿಸಿರುವ ಮಹೋನ್ನತ ಹೆಜ್ಜೆಗುರುತುಗಳನ್ನು ಪ್ರಧಾನಿಯವರು ಸ್ಮರಿಸಿದರು.

ಗುಜರಾತ್ ನ ದಿಯೋದರ್ ನಲ್ಲಿರುವ ಬನಾಸ್ ಡೇರಿಯಲ್ಲಿ ಅಭಿವೃದ್ಧಿ ಉಪಕ್ರಮಗಳ ಉದ್ಘಾಟನೆ ಕುರಿತು ಪ್ರಧಾನಮಂತ್ರಿ ಅವರ ಭಾಷಣದ ಕನ್ನಡ ಅನುವಾದ

April 19th, 11:02 am

ನೀವು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದೀರಿ ಎಂದು ಭಾವಿಸುತ್ತೇನೆ. ನಾನು ಆರಂಭದಲ್ಲಿ ಹಿಂದಿಯಲ್ಲಿ ಮಾತನಾಡಬೇಕಾಗಿರುವುದರಿಂದ ನಾನು ನಿಮ್ಮಲ್ಲಿ ಕ್ಷಮೆಯಾಚಿಸುತ್ತೇನೆ. ಏಕೆಂದರೆ ಮಾಧ್ಯಮದ ಸ್ನೇಹಿತರು ನಾನು ಹಿಂದಿಯಲ್ಲಿ ಮಾತನಾಡುವುದು ಒಳ್ಳೆಯದು ಎಂದು ವಿನಂತಿಸಿದರು. ಆದ್ದರಿಂದ, ನಾನು ಅವರ ಮನವಿಯನ್ನು ಅಂಗೀಕರಿಸಲು ನಿರ್ಧರಿಸಿದೆ.

ಬನಸ್ಕಾಂತದ ದಿಯೋದರ್ ನ ಬನಾಸ್ ಡೈರಿ ಸಂಕುಲದಲ್ಲಿ ಬಹು ಅಭಿವೃದ್ಧಿ ಯೋಜನೆಗಳಿಗೆ ಶಂಕುಸ್ಥಾಪನೆ ಮತ್ತು ಲೋಕಾರ್ಪಣೆ ನೆರವೇರಿಸಿದ ಪ್ರಧಾನಮಂತ್ರಿ

April 19th, 11:01 am

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಬನಸ್ಕಾಂತ ಜಿಲ್ಲೆಯ ದಿಯೋದರ್‌ನಲ್ಲಿ 600 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿರುವ ಹೊಸ ಡೈರಿ ಸಂಕೀರ್ಣ ಮತ್ತು ಆಲೂಗಡ್ಡೆ ಸಂಸ್ಕರಣಾ ಘಟಕವನ್ನು ರಾಷ್ಟ್ರಕ್ಕೆ ಸಮರ್ಪಿಸಿದರು. ಈ ಹೊಸ ಡೈರಿ ಸಂಕೀರ್ಣವು ಸಂಪೂರ್ಣ ಗ್ರೀನ್‌ಫೀಲ್ಡ್ ಯೋಜನೆಯಾಗಿದೆ. ಇದು ದಿನಕ್ಕೆ ಸುಮಾರು 30 ಲಕ್ಷ ಲೀಟರ್ ಹಾಲು ಸಂಸ್ಕರಣೆ, ಸುಮಾರು 80 ಟನ್ ಬೆಣ್ಣೆ, ಒಂದು ಲಕ್ಷ ಲೀಟರ್ ಐಸ್ ಕ್ರೀಮ್, 20 ಟನ್ ಗಟ್ಟಿಗೊಳಿಸಿದ ಹಾಲು (ಖೋವಾ) ಮತ್ತು 6 ಟನ್ ಚಾಕೊಲೇಟ್ ಅನ್ನು ಉತ್ಪಾದಿಸುತ್ತದೆ. ಆಲೂಗೆಡ್ಡೆ ಸಂಸ್ಕರಣಾ ಘಟಕವು ಫ್ರೆಂಚ್ ಫ್ರೈಸ್, ಆಲೂಗಡ್ಡೆ ಚಿಪ್ಸ್, ಆಲೂ ಟಿಕ್ಕಿ, ಪ್ಯಾಟೀಸ್ ಮುಂತಾದ ವಿವಿಧ ರೀತಿಯ ಸಂಸ್ಕರಿಸಿದ ಆಲೂಗಡ್ಡೆ ಉತ್ಪನ್ನಗಳನ್ನು ತಯಾರಿಸಲಾಗುವುದು.

ಗುಜರಾತ್‌ನ ರಾಷ್ಟ್ರೀಯ ರಕ್ಷಾ ವಿಶ್ವವಿದ್ಯಾಲಯದ ಮೊದಲನೆಯ ಘಟಿಕೋತ್ಸವದಲ್ಲಿ ಪ್ರಧಾನಮಂತ್ರಿಯವರ ಭಾಷಣ

March 12th, 12:14 pm

ಗುಜರಾತ್ ರಾಜ್ಯಪಾಲರಾದ ಆಚಾರ್ಯ ದೇವವ್ರತ್ ಜಿ, ಗೃಹ ಸಚಿವರಾದ ಶ್ರೀ ಅಮಿತ್ ಶಾ, ಮುಖ್ಯಮಂತ್ರಿ ಶ್ರೀ ಭೂಪೇಂದ್ರ ಪಟೇಲ್, ರಾಷ್ಟ್ರೀಯ ರಕ್ಷಾ ವಿಶ್ವವಿದ್ಯಾಲಯದ ಉಪಕುಲಪತಿ ವಿಮಲ್ ಪಟೇಲ್ ಜಿ, ಅಧಿಕಾರಿಗಳು, ಶಿಕ್ಷಕರು, ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು, ಪೋಷಕರು, ಇತರ ಗಣ್ಯರೇ, ಮಹಿಳೆಯರೇ ಮತ್ತು ಮಹನೀಯರೇ!

ʻರಾಷ್ಟ್ರೀಯ ರಕ್ಷಾ ವಿಶ್ವವಿದ್ಯಾಲಯʼದ ಕಟ್ಟಡವನ್ನು ದೇಶಕ್ಕೆ ಸಮರ್ಪಿಸಿದ ಪ್ರಧಾನಮಂತ್ರಿಯವರು, ಮೊದಲ ಘಟಿಕೋತ್ಸವ ಉದ್ದೇಶಿಸಿ ಮಾತನಾಡಿದರು

March 12th, 12:10 pm

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ʻರಾಷ್ಟ್ರೀಯ ರಕ್ಷಾ ವಿಶ್ವವಿದ್ಯಾಲಯʼದ ಕಟ್ಟಡವನ್ನು ದೇಶಕ್ಕೆ ಸಮರ್ಪಿಸಿದರು ಮತ್ತು ಅಹಮದಾಬಾದ್ ನಲ್ಲಿ ಈ ವಿಶ್ವವಿದ್ಯಾಲಯದ ಮೊದಲ ಘಟಿಕೋತ್ಸವ ಉದ್ದೇಶಿಸಿ ಮಾತನಾಡಿದರು. ಕೇಂದ್ರ ಗೃಹ ವ್ಯವಹಾರಗಳು ಹಾಗು ಸಹಕಾರ ಖಾತೆ ಸಚಿವ ಶ್ರೀ ಅಮಿತ್ ಶಾ, ಗುಜರಾತ್ ರಾಜ್ಯಪಾಲ ಆಚಾರ್ಯ ದೇವವ್ರತ್ ಮತ್ತು ಗುಜರಾತ್ ಮುಖ್ಯಮಂತ್ರಿ ಶ್ರೀ ಭೂಪೇಂದ್ರ ಭಾಯಿ ಪಟೇಲ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಪರಿವಾರವಾದಿ ಗುಂಪುಗಳು ಬಡವರ ಪಡಿತರ ಲೂಟಿ, ಬಿಜೆಪಿ ಅವರ ಆಟ ಮುಗಿಸಿದೆ: ಬಾರಾಬಂಕಿಯಲ್ಲಿ ಪ್ರಧಾನಿ ಮೋದಿ

February 23rd, 12:44 pm

ಪ್ರಧಾನಿ ನರೇಂದ್ರ ಮೋದಿ ಅವರು ಉತ್ತರ ಪ್ರದೇಶದ ಬಾರಾಬಂಕಿ ಮತ್ತು ಕೌಶಂಬಿಯಲ್ಲಿ ಬೃಹತ್ ಚುನಾವಣಾ ರ್ಯಾಲಿಗಳನ್ನು ಉದ್ದೇಶಿಸಿ ಮಾತನಾಡಿದರು. ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಉತ್ತರ ಪ್ರದೇಶದ ಜನರ ಅಭಿವೃದ್ಧಿಯು ಭಾರತದ ಅಭಿವೃದ್ಧಿಗೆ ವೇಗವನ್ನು ನೀಡುತ್ತದೆ. ಉತ್ತರ ಪ್ರದೇಶದ ಜನರ ಸಾಮರ್ಥ್ಯವು ಭಾರತದ ಜನರ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ. ಆದರೆ ಉತ್ತರಪ್ರದೇಶದಲ್ಲಿ ಹಲವಾರು ದಶಕಗಳ ಕಾಲ ರಾಜವಂಶ ಆಧಾರಿತ ಸರ್ಕಾರಗಳು ಯುಪಿಯ ಸಾಮರ್ಥ್ಯಕ್ಕೆ ನ್ಯಾಯ ಒದಗಿಸಲಿಲ್ಲ.

ಉತ್ತರ ಪ್ರದೇಶದ ಬಾರಾಬಂಕಿ ಮತ್ತು ಕೌಶಂಬಿಯಲ್ಲಿ ಪ್ರಧಾನಿ ಮೋದಿ ಪ್ರಚಾರ ನಡೆಸುತ್ತಿದ್ದಾರೆ

February 23rd, 12:40 pm

ಪ್ರಧಾನಿ ನರೇಂದ್ರ ಮೋದಿ ಅವರು ಉತ್ತರ ಪ್ರದೇಶದ ಬಾರಾಬಂಕಿ ಮತ್ತು ಕೌಶಂಬಿಯಲ್ಲಿ ಬೃಹತ್ ಚುನಾವಣಾ ರ್ಯಾಲಿಗಳನ್ನು ಉದ್ದೇಶಿಸಿ ಮಾತನಾಡಿದರು. ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಉತ್ತರ ಪ್ರದೇಶದ ಜನರ ಅಭಿವೃದ್ಧಿಯು ಭಾರತದ ಅಭಿವೃದ್ಧಿಗೆ ವೇಗವನ್ನು ನೀಡುತ್ತದೆ. ಉತ್ತರ ಪ್ರದೇಶದ ಜನರ ಸಾಮರ್ಥ್ಯವು ಭಾರತದ ಜನರ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ. ಆದರೆ ಉತ್ತರಪ್ರದೇಶದಲ್ಲಿ ಹಲವಾರು ದಶಕಗಳ ಕಾಲ ರಾಜವಂಶ ಆಧಾರಿತ ಸರ್ಕಾರಗಳು ಯುಪಿಯ ಸಾಮರ್ಥ್ಯಕ್ಕೆ ನ್ಯಾಯ ಒದಗಿಸಲಿಲ್ಲ.