ಇಥಿಯೋಪಿಯಾದ ಪ್ರಧಾಮಂತ್ರಿಗಳೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಿದ ಪ್ರಧಾಮಂತ್ರಿ

December 17th, 12:02 am

ಪ್ರಧಾಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಅಡಿಸ್ ಅಬಾಬಾದ ರಾಷ್ಟ್ರೀಯ ಅರಮನೆಯಲ್ಲಿ ಇಥಿಯೋಪಿಯಾ ಪ್ರಜಾಸತ್ತಾತ್ಮಕ ಗಣರಾಜ್ಯದ ಪ್ರಧಾನಮಂತ್ರಿ ಘನತೆವೆತ್ತ ಡಾ. ಅಬಿ ಅಹ್ಮದ್ ಅವರನ್ನು ಭೇಟಿಯಾದರು. ಅರಮನೆಗೆ ಆಗಮಿಸಿದ ಪ್ರಧಾನಮಂತ್ರಿ ಮೋದಿ ಅವರನ್ನು ಡಾ. ಅಬಿ ಅಹ್ಮದ್ ಅವರು ಆತ್ಮೀಯವಾಗಿ ಸ್ವಾಗತಿಸಿದರು ಮತ್ತು ವಿಧ್ಯುಕ್ತ ಸ್ವಾಗತ ನೀಡಿದರು.

ಜೋಹಾನ್ಸ್‌ಬರ್ಗ್‌ ನಲ್ಲಿ ನಡೆಯುತ್ತಿರುವ ಜಿ20 ಶೃಂಗಸಭೆಯ ಸಂದರ್ಭದಲ್ಲಿ ದಕ್ಷಿಣ ಆಫ್ರಿಕಾದ ಅಧ್ಯಕ್ಷರನ್ನು ಪ್ರಧಾನಮಂತ್ರಿ ಅವರು ಭೇಟಿ ಮಾಡಿದರು

November 23rd, 02:18 pm

ಗೌರವಾನ್ವಿತ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಜೋಹಾನ್ಸ್‌ಬರ್ಗ್‌ ನಲ್ಲಿ ನಡೆಯುತ್ತಿರುವ ಜಿ20 ಶೃಂಗಸಭೆಯ ಹಿನ್ನೆಲೆಯಲ್ಲಿ ದಕ್ಷಿಣ ಆಫ್ರಿಕಾ ಗಣರಾಜ್ಯದ ಅಧ್ಯಕ್ಷರಾದ ಘನತೆವೆತ್ತ ಶ್ರೀ ಸಿರಿಲ್ ರಾಮಫೋಸಾ ಅವರನ್ನು ಇಂದು ಭೇಟಿ ಮಾಡಿದರು. ಶೃಂಗಸಭೆಯ ಆತ್ಮೀಯ ಆತಿಥ್ಯ ಮತ್ತು ಯಶಸ್ವಿ ನಡವಳಿಕೆಗಳಿಗಾಗಿ ಅಧ್ಯಕ್ಷ ಶ್ರೀ ರಾಮಫೋಸಾ ಅವರಿಗೆ ಪ್ರಧಾನಮಂತ್ರಿ ಅವರು ಧನ್ಯವಾದ ಅರ್ಪಿಸಿದರು. ನವದೆಹಲಿಯಲ್ಲಿ ನಡೆದ ಜಿ20 ಶೃಂಗಸಭೆಯಲ್ಲಿ ತೆಗೆದುಕೊಂಡ ನಿರ್ಧಾರಗಳನ್ನು ಮುಂದಕ್ಕೆ ತೆಗೆದುಕೊಂಡು ಹೋಗಲು ಮತ್ತು ನೂತನ ಹಂತ ನಿರ್ಮಿಸಲು ದಕ್ಷಿಣ ಆಫ್ರಿಕಾದ ಜಿ20 ಮಾಡಿರುವ ಪ್ರಯತ್ನಗಳನ್ನು ಪ್ರಧಾನಮಂತ್ರಿ ಅವರು ಶ್ಲಾಘಿಸಿದರು.

ಚೀನಾ ಅಧ್ಯಕ್ಷರಾದ ಕ್ಸಿ ಜಿನ್ಪಿಂಗ್ ಅವರೊಂದಿಗೆ ಪ್ರಧಾನಮಂತ್ರಿ ಅವರ ದ್ವಿಪಕ್ಷೀಯ ಮಾತುಕತೆ

August 31st, 11:00 am

ಆಗಸ್ಟ್ 31, 2025 ರಂದು ಟಿಯಾಂಜಿನ್ ನಲ್ಲಿ ನಡೆದ ಶಾಂಘೈ ಸಹಕಾರ ಸಂಸ್ಥೆಯ (ಎಸ್.ಸಿ.ಒ.) ನಾಯಕರ ಶೃಂಗಸಭೆಯ ಸಂದರ್ಭದಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಪೀಪಲ್ಸ್ ರಿಪಬ್ಲಿಕ್ ಆಫ್ ಚೀನಾದ ಅಧ್ಯಕ್ಷರಾದ ಶ್ರೀ ಕ್ಸಿ ಜಿನ್ಪಿಂಗ್ ಅವರನ್ನು ಭೇಟಿಯಾದರು.

ಜಂಟಿ ಹೇಳಿಕೆ: ಭಾರತ ಮತ್ತು ಬ್ರೆಜಿಲ್ - ಉನ್ನತ ಉದ್ದೇಶಗಳನ್ನು ಹೊಂದಿರುವ ಎರಡು ಶ್ರೇಷ್ಠ ರಾಷ್ಟ್ರಗಳು

July 09th, 05:55 am

ಭಾರತ ಗಣರಾಜ್ಯದ ಪ್ರಧಾನ ಮಂತ್ರಿಯವರಾದ ಗೌರವಾನ್ವಿತ ಶ್ರೀ ನರೇಂದ್ರ ಮೋದಿ ಅವರು ಜುಲೈ 8, 2025 ರಂದು ಬ್ರೆಜಿಲ್ ಗೆ ಅಧಿಕೃತ ಭೇಟಿ ನೀಡಿದರು. ಫೆಡರೇಟಿವ್ ರಿಪಬ್ಲಿಕ್ ಆಫ್ ಬ್ರೆಜಿಲ್ ನ ಅಧ್ಯಕ್ಷರಾದ ಗೌರವಾನ್ವಿತ ಶ್ರೀ ಲೂಯಿಜ್ ಇನಾಸಿಯೊ ಲುಲಾ ಡ ಸಿಲ್ವಾ ಅವರ ಆಹ್ವಾನದ ಮೇರೆಗೆ ಈ ಭೇಟಿಯನ್ನು ಕೈಗೊಳ್ಳಲಾಯಿತು. ಸುಮಾರು ಎಂಟು ದಶಕಗಳಿಂದ ಬ್ರೆಜಿಲ್-ಭಾರತ ಸಂಬಂಧಗಳ ಮೂಲಾಧಾರವಾಗಿರುವ ಸ್ನೇಹ ಮತ್ತು ವಿಶ್ವಾಸದ ಉತ್ಸಾಹದಲ್ಲಿ ಈ ಭೇಟಿ ನಡೆಯಿತು. 2006ರಲ್ಲಿ, ಈ ಸಂಬಂಧವನ್ನು ಕಾರ್ಯತಂತ್ರದ ಪಾಲುದಾರಿಕೆಗೆ ಏರಿಸಲಾಯಿತು.

17ನೇ ಬ್ರಿಕ್ಸ್ ಶೃಂಗಸಭೆ - ಪರಿಸರ, ಸಿಒಪಿ-30 ಮತ್ತು ಜಾಗತಿಕ ಆರೋಗ್ಯ ಕುರಿತ ಅಧಿವೇಶನವನ್ನುದ್ದೇಶಿಸಿ ಪ್ರಧಾನಮಂತ್ರಿ ಭಾಷಣ

July 07th, 11:38 pm

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಪರಿಸರ, ಸಿಒಪಿ-30 ಮತ್ತು ಜಾಗತಿಕ ಆರೋಗ್ಯ ಕುರಿತಾದ ಅಧಿವೇಶನವನ್ನು ಉದ್ದೇಶಿಸಿ ಮಾತನಾಡಿದರು. ಈ ಅಧಿವೇಶನದಲ್ಲಿ ಬ್ರಿಕ್ಸ್ ಸದಸ್ಯರು, ಪಾಲುದಾರ ರಾಷ್ಟ್ರಗಳು ಮತ್ತು ಆಹ್ವಾನಿತ ರಾಷ್ಟ್ರಗಳು ಭಾಗವಹಿಸಿದ್ದವು. ವಿಶ್ವದ ಭವಿಷ್ಯಕ್ಕಾಗಿ ಇಂತಹ ಮಹತ್ವದ ವಿಷಯ ಕುರಿತು ಅಧಿವೇಶನವನ್ನು ಆಯೋಜಿಸಿದ್ದಕ್ಕಾಗಿ ಅವರು ಬ್ರೆಜಿಲ್‌ ಗೆ ಧನ್ಯವಾದ ಸಲ್ಲಿಸಿದರು. ಭಾರತಕ್ಕೆ ಹವಾಮಾನ ಬದಲಾವಣೆಯು ಕೇವಲ ಇಂಧನ ಸಮಸ್ಯೆಗಳನ್ನು ನಿಭಾಯಿಸುವುದಲ್ಲ, ಬದಲಾಗಿ ಅದು ಜೀವನ ಮತ್ತು ನಿಸರ್ಗದ ನಡುವಿನ ಸಮತೋಲನದ ಮೇಲೆ ಪರಿಣಾಮ ಬೀರುವುದಾಗಿದೆ ಎಂದು ಪ್ರಧಾನಮಂತ್ರಿ ಹೇಳಿದರು. ಭಾರತವು ಹವಾಮಾನ ನ್ಯಾಯವನ್ನು ಈಡೇರಿಸಬೇಕಾದ ನೈತಿಕ ಜವಾಬ್ದಾರಿಯಾಗಿ ನೋಡುತ್ತದೆ ಎಂದು ಅವರು ಒತ್ತಿ ಹೇಳಿದರು. ಪರಿಸರ ಕ್ರಮಕ್ಕೆ ಭಾರತದ ಆಳವಾದ ಬದ್ಧತೆಯನ್ನು ಪುನರುಚ್ಚರಿಸಿದ ಅವರು, ಜನರು ಮತ್ತು ಗ್ರಹದ ಅಭಿವೃದ್ಧಿಯನ್ನು ಉತ್ತೇಜಿಸಲು ಅದು ಕೈಗೊಂಡ ಉಪಕ್ರಮಗಳಾದ ಅಂತಾರಾಷ್ಟ್ರೀಯ ಸೌರ ಒಕ್ಕೂಟ, ವಿಪತ್ತು ಸ್ಥಿತಿಸ್ಥಾಪಕ ಮೂಲಸೌಕರ್ಯಕ್ಕಾಗಿ ಒಕ್ಕೂಟ, ಜಾಗತಿಕ ಜೈವಿಕ ಇಂಧನ ಒಕ್ಕೂಟ, ಅಂತರರಾಷ್ಟ್ರೀಯ ಬಿಗ್ ಕ್ಯಾಟ್ ಒಕ್ಕೂಟ, ಮಿಷನ್ ಲೈಫ್, ತಾಯಿಯ ಹೆಸರಿನಲ್ಲಿ ಒಂದು ಗಿಡ ಇತ್ಯಾದಿಗಳ ಬಗ್ಗೆ ವಿವರಿಸಿದರು.

ಪರಿಸರ, ಸಿಒಪಿ-30 ಮತ್ತು ಜಾಗತಿಕ ಆರೋಗ್ಯದ ಕುರಿತಾದ ಬ್ರಿಕ್ಸ್ ಅಧಿವೇಶನದಲ್ಲಿ ಪ್ರಧಾನಮಂತ್ರಿ ಅವರ ಹೇಳಿಕೆಯ ಕನ್ನಡ ಅನುವಾದ

July 07th, 11:13 pm

ಬ್ರೆಜಿಲ್ ಅಧ್ಯಕ್ಷತೆಯಲ್ಲಿ ಬ್ರಿಕ್ಸ್, ಪರಿಸರ ಮತ್ತು ಆರೋಗ್ಯ ಸುರಕ್ಷತೆಯಂತಹ ಪ್ರಮುಖ ವಿಷಯಗಳಿಗೆ ಹೆಚ್ಚಿನ ಆದ್ಯತೆ ನೀಡಿರುವುದು ನನಗೆ ಸಂತೋಷ ತಂದಿದೆ. ಈ ವಿಷಯಗಳು ಪರಸ್ಪರ ಸಂಬಂಧ ಹೊಂದಿರುವುದು ಮಾತ್ರವಲ್ಲ ಮಾನವೀಯತೆಯ ಉಜ್ವಲ ಭವಿಷ್ಯಕ್ಕೂ ಸಹ ಬಹಳ ಮುಖ್ಯವಾಗಿವೆ.

ಬ್ರೆಜಿಲ್ ನ ರಿಯೋ ಡಿ ಜನೈರೊದಲ್ಲಿ ನಡೆಯುತ್ತಿರುವ 17ನೇ ಬ್ರಿಕ್ಸ್ ಶೃಂಗಸಭೆಯ ನೇಪಥ್ಯದಲ್ಲಿ ಪ್ರಧಾನಮಂತ್ರಿ ಅವರು ಉರುಗ್ವೆ ಅಧ್ಯಕ್ಷರನ್ನು ಭೇಟಿ ಮಾಡಿದರು

July 07th, 09:20 pm

ಉಭಯ ನಾಯಕರು ದ್ವಿಪಕ್ಷೀಯ ಸಂಬಂಧಗಳ ಸಂಪೂರ್ಣ ವ್ಯಾಪ್ತಿಯನ್ನು ಒಳಗೊಂಡ ಚರ್ಚೆಗಳನ್ನು ನಡೆಸಿದರು. ಡಿಜಿಟಲ್ ಸಹಯೋಗ, ಐಸಿಟಿ, ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯ ಮತ್ತು ಯುಪಿಐ, ರಕ್ಷಣೆ, ರೈಲ್ವೆ, ಆರೋಗ್ಯ ಮತ್ತು ಔಷಧೀಯ, ಕೃಷಿ, ಇಂಧನ, ಸಂಸ್ಕೃತಿ ಮತ್ತು ಜನರ ನಡುವಿನ ಸಂಪರ್ಕ ಕ್ಷೇತ್ರಗಳಲ್ಲಿನ ಸಹಕಾರವನ್ನು ಅವರು ಪರಿಶೀಲಿಸಿದರು. ದ್ವಿಪಕ್ಷೀಯ ವ್ಯಾಪಾರ ಮತ್ತು ಹೂಡಿಕೆಯನ್ನು ಬಲಪಡಿಸುವುದು ಚರ್ಚೆಯ ಪ್ರಮುಖ ಕ್ಷೇತ್ರವಾಗಿತ್ತು. ಹೆಚ್ಚಿನ ಆರ್ಥಿಕ ಸಾಮರ್ಥ್ಯ ಮತ್ತು ವ್ಯಾಪಾರದ ಅವಕಾಶಗಳನ್ನು ಮುಕ್ತಗೊಳಿಸುವ ಗುರಿಯನ್ನು ಹೊಂದಿರುವ ಭಾರತ-ಮೆರ್ಕೋಸುರ್ ಆದ್ಯತಾ ವ್ಯಾಪಾರ ಒಪ್ಪಂದದ ವಿಸ್ತರಣೆಯಲ್ಲಿ ಎರಡೂ ಕಡೆಯವರು ಆಸಕ್ತಿ ವ್ಯಕ್ತಪಡಿಸಿದರು.

ಬ್ರಿಕ್ಸ್ ಶೃಂಗಸಭೆಯ ಸಂದರ್ಭದಲ್ಲಿ ಬೊಲಿವಿಯಾ ಅಧ್ಯಕ್ಷರನ್ನು ಭೇಟಿಯಾದ ಪ್ರಧಾನಮಂತ್ರಿ

July 07th, 09:19 pm

ಬ್ರೆಜಿಲ್ ನ ರಿಯೊ ಡಿ ಜನೈರೊದಲ್ಲಿ ನಡೆದ ಬ್ರಿಕ್ಸ್ ಶೃಂಗಸಭೆಯ ಸಂದರ್ಭದಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಬೊಲಿವಿಯಾ ಬಹುರಾಷ್ಟ್ರೀಯ ರಾಜ್ಯದ ಅಧ್ಯಕ್ಷ ಘನತೆವೆತ್ತ ಲೂಯಿಸ್ ಆರ್ಸ್ ಕ್ಯಾಟಕೋರಾ ಅವರನ್ನು ಭೇಟಿ ಮಾಡಿದರು.

ರಿಯೋ ಡಿ ಜನೈರೋ ಘೋಷಣೆ - ಹೆಚ್ಚು ಸಮಗ್ರ ಹಾಗೂ ಸುಸ್ಥಿರ ಆಡಳಿತಕ್ಕಾಗಿ 'ಗ್ಲೋಬಲ್ ಸೌತ್' ಸಹಕಾರ ಬಲವರ್ಧನೆ

July 07th, 06:00 am

ಬ್ರಿಕ್ಸ್ ರಾಷ್ಟ್ರಗಳ ನಾಯಕರಾದ ನಾವು, ಹೆಚ್ಚು ಸಮಗ್ರ ಹಾಗೂ ಸುಸ್ಥಿರ ಆಡಳಿತಕ್ಕಾಗಿ ಗ್ಲೋಬಲ್ ಸೌತ್ ಸಹಕಾರವನ್ನು ಬಲಪಡಿಸುವುದು ಎಂಬ ಧ್ಯೇಯವಾಕ್ಯದ ಅಡಿಯಲ್ಲಿ, ಜುಲೈ 6 ರಿಂದ 7, 2025 ರವರೆಗೆ ಬ್ರೆಜಿಲ್‌ನ ರಿಯೊ ಡಿ ಜನೈರೊದಲ್ಲಿ ನಡೆದ 17ನೇ ಬ್ರಿಕ್ಸ್ ಶೃಂಗಸಭೆಯಲ್ಲಿ ಸಭೆ ಸೇರಿದ್ದೇವೆ.

ಬ್ರೆಜಿಲ್ ನ ರಿಯೋ ಡಿ ಜನೈರೊದಲ್ಲಿ ನಡೆದ ಬ್ರಿಕ್ಸ್ ಶೃಂಗಸಭೆಯ ನೇಪಥ್ಯದಲ್ಲಿ ಪ್ರಧಾನಮಂತ್ರಿ ಅವರು ಕ್ಯೂಬಾದ ಅಧ್ಯಕ್ಷರನ್ನು ಭೇಟಿಯಾದರು

July 07th, 05:19 am

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಬ್ರೆಜಿಲ್ ನ ರಿಯೋ ಡಿ ಜನೈರೊದಲ್ಲಿ ನಡೆಯುತ್ತಿರುವ 17ನೇ ಬ್ರಿಕ್ಸ್ ಶೃಂಗಸಭೆಯ ನೇಪಥ್ಯದಲ್ಲಿ ಕ್ಯೂಬಾದ ಅಧ್ಯಕ್ಷ ಘನತೆವೆತ್ತ ಮಿಗುಯೆಲ್ ಡಯಾಜ್-ಕ್ಯಾನೆಲ್ ಬೆರ್ಮುಡೆಜ್ ಅವರನ್ನು ಭೇಟಿ ಮಾಡಿದರು. 2023ರಲ್ಲಿ ಜೋಹಾನ್ಸ್ ಬರ್ಗ್ ನಲ್ಲಿ ನಡೆದ ಬ್ರಿಕ್ಸ್ ಶೃಂಗಸಭೆಯಲ್ಲಿ ಕ್ಯೂಬಾ ವಿಶೇಷ ಆಹ್ವಾನಿತರಾಗಿದ್ದಾಗ ಪ್ರಧಾನಿ ನರೇಂದ್ರ ಮೋದಿ ಅವರು ಅಧ್ಯಕ್ಷ ಡಿಯಾಜ್-ಕ್ಯಾನೆಲ್ ಅವರನ್ನು ಭೇಟಿ ಮಾಡಿದ್ದರು.

ಬ್ರೆಜಿಲ್ ನ ರಿಯೋ ಡಿ ಜನೈರೊದಲ್ಲಿ ನಡೆಯುತ್ತಿರುವ 17ನೇ ಬ್ರಿಕ್ಸ್ ಶೃಂಗಸಭೆಯ ನೇಪಥ್ಯದಲ್ಲಿ ಪ್ರಧಾನಮಂತ್ರಿ ಅವರು ಮಲೇಷ್ಯಾದ ಪ್ರಧಾನಮಂತ್ರಿಯವರೊಂದಿಗೆ ಸಭೆ ನಡೆಸಿದರು

July 07th, 05:13 am

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಬ್ರೆಜಿಲ್ ನ ರಿಯೋ ಡಿ ಜನೈರೊದಲ್ಲಿ ನಡೆದ 17ನೇ ಬ್ರಿಕ್ಸ್ ಶೃಂಗಸಭೆಯ ನೇಪಥ್ಯದಲ್ಲಿ ಮಲೇಷ್ಯಾ ಪ್ರಧಾನಮಂತ್ರಿ ಘನತೆವೆತ್ತ ಅನ್ವರ್ ಬಿನ್ ಇಬ್ರಾಹಿಂ ಅವರನ್ನು ಭೇಟಿ ಮಾಡಿದರು.

ಶಾಂತಿ ಮತ್ತು ಭದ್ರತೆ ಕುರಿತ ಬ್ರಿಕ್ಸ್ ಅಧಿವೇಶನದಲ್ಲಿ ಪ್ರಧಾನಮಂತ್ರಿ ಅವರ ಹೇಳಿಕೆಯ ಕನ್ನಡ ಅನುವಾದ

July 06th, 11:07 pm

ಜಾಗತಿಕ ಶಾಂತಿ ಮತ್ತು ಭದ್ರತೆ ಕೇವಲ ಆದರ್ಶಗಳಲ್ಲ, ಬದಲಿಗೆ ಅವು ನಮ್ಮ ಹಂಚಿಕೆಯ ಹಿತಾಸಕ್ತಿಗಳು ಮತ್ತು ಭವಿಷ್ಯದ ಅಡಿಪಾಯವಾಗಿದೆ. ಶಾಂತಿಯುತ ಮತ್ತು ಸುಭದ್ರ ವಾತಾವರಣದಲ್ಲಿ ಮಾತ್ರ ಮಾನವೀಯತೆಯ ಪ್ರಗತಿ ಸಾಧ್ಯ. ಈ ಉದ್ದೇಶವನ್ನು ಈಡೇರಿಸುವಲ್ಲಿ ಬ್ರಿಕ್ಸ್ ಬಹಳ ಮುಖ್ಯವಾದ ಪಾತ್ರವನ್ನು ಹೊಂದಿದೆ. ನಾವೆಲ್ಲರೂ ಒಗ್ಗೂಡಲು, ನಮ್ಮ ಪ್ರಯತ್ನಗಳನ್ನು ಒಗ್ಗೂಡಿಸಲು ಮತ್ತು ನಾವೆಲ್ಲರೂ ಎದುರಿಸುತ್ತಿರುವ ಸವಾಲುಗಳನ್ನು ಸಾಮೂಹಿಕವಾಗಿ ಎದುರಿಸಲು ಇದು ಸುಸಮಯ. ನಾವು ಒಟ್ಟಾಗಿ ಮುಂದೆ ಸಾಗಬೇಕು.

ಬ್ರಿಕ್ಸ್ ಅಧಿವೇಶನದಲ್ಲಿ ಪ್ರಧಾನಮಂತ್ರಿ ಅವರ ಭಾಷಣದ ಇಂಗ್ಲಿಷ್‌ ಅನುವಾದ: ಜಾಗತಿಕ ಆಡಳಿತದ ಸುಧಾರಣೆ

July 06th, 09:41 pm

17ನೇ ಬ್ರಿಕ್ಸ್ ಶೃಂಗಸಭೆಯ ಅತ್ಯುತ್ತಮ ಸಂಘಟನೆಗಾಗಿ ಅಧ್ಯಕ್ಷ ಲೂಲಾ ಅವರಿಗೆ ನಾನು ನನ್ನ ಹೃತ್ಪೂರ್ವಕ ಕೃತಜ್ಞತೆಯನ್ನು ವ್ಯಕ್ತಪಡಿಸುತ್ತೇನೆ. ಬ್ರೆಜಿಲ್‌ನ ಕ್ರಿಯಾತ್ಮಕ ಅಧ್ಯಕ್ಷತೆಯಲ್ಲಿ, ನಮ್ಮ ಬ್ರಿಕ್ಸ್ ಸಹಕಾರವು ಹೊಸ ಆವೇಗ ಮತ್ತು ಚೈತನ್ಯವನ್ನು ಪಡೆದುಕೊಂಡಿದೆ. ನಾವು ಪಡೆದ ಶಕ್ತಿಯು ಕೇವಲ ಎಸ್ಪ್ರೆಸೊ ಅಲ್ಲ; ಇದು ಡಬಲ್ ಎಸ್ಪ್ರೆಸೊ ಶಾಟ್! ಇದಕ್ಕಾಗಿ, ಅಧ್ಯಕ್ಷ ಲೂಲಾ ಅವರ ದೃಷ್ಟಿಕೋನ ಮತ್ತು ಅವರ ಅಚಲ ಬದ್ಧತೆಯನ್ನು ನಾನು ಶ್ಲಾಘಿಸುತ್ತೇನೆ. ಭಾರತದ ಪರವಾಗಿ, ಬ್ರಿಕ್ಸ್ ಕುಟುಂಬದಲ್ಲಿ ಇಂಡೋನೇಷ್ಯಾ ಸೇರ್ಪಡೆಗಾಗಿ ನನ್ನ ಸ್ನೇಹಿತರಾದ ಅಧ್ಯಕ್ಷ ಪ್ರಬೋವೊ ಅವರಿಗೆ ನನ್ನ ಹೃತ್ಪೂರ್ವಕ ಅಭಿನಂದನೆಗಳು ಮತ್ತು ಶುಭಾಶಯಗಳನ್ನು ತಿಳಿಸುತ್ತೇನೆ.

ಬ್ರಿಕ್ಸ್ ಅಧಿವೇಶನದಲ್ಲಿ ಪ್ರಧಾನಮಂತ್ರಿ ಹೇಳಿಕೆ: ಬಹುಪಕ್ಷೀಯತೆ, ಆರ್ಥಿಕ ಹಣಕಾಸು ವಿಷಯಗಳು ಮತ್ತು ಕೃತಕ ಬುದ್ಧಿಮತ್ತೆಯನ್ನು ಬಲಪಡಿಸುವುದು

July 06th, 09:40 pm

ವಿಸ್ತೃತ ಬ್ರಿಕ್ಸ್ ಕುಟುಂಬದ ನನ್ನ ಸ್ನೇಹಿತರೊಂದಿಗೆ ಈ ಸಭೆಯಲ್ಲಿ ಭಾಗವಹಿಸಲು ನನಗೆ ಬಹಳ ಸಂತೋಷವಾಗಿದೆ. ಬ್ರಿಕ್ಸ್ ಔಟ್ರೀಚ್ ಶೃಂಗಸಭೆಯಲ್ಲಿ ಲ್ಯಾಟಿನ್ ಅಮೆರಿಕ, ಆಫ್ರಿಕಾ ಮತ್ತು ಏಷ್ಯಾದ ಸ್ನೇಹಪರ ರಾಷ್ಟ್ರಗಳೊಂದಿಗೆ ನನ್ನ ಅಭಿಪ್ರಾಯಗಳನ್ನು ಹಂಚಿಕೊಳ್ಳಲು ಅವಕಾಶ ನೀಡಿದ ಅಧ್ಯಕ್ಷ ಲೂಲಾ ಅವರಿಗೆ ನನ್ನ ಹೃತ್ಪೂರ್ವಕ ಧನ್ಯವಾದಗಳು.

ಬ್ರೆಜಿಲ್ ನ ರಿಯೊ ಡಿ ಜನೈರೊದಲ್ಲಿ ನಡೆದ 17ನೇ ಬ್ರಿಕ್ಸ್ ಶೃಂಗಸಭೆಯಲ್ಲಿ ಪ್ರಧಾನಮಂತ್ರಿ ಭಾಗವಹಿಸಿದ್ದರು

July 06th, 09:39 pm

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಜುಲೈ 6-7, 2025 ರಂದು ಬ್ರೆಜಿಲ್ ನ ರಿಯೊ ಡಿ ಜನೈರೊದಲ್ಲಿ ನಡೆಯುತ್ತಿರುವ 17ನೇ ಬ್ರಿಕ್ಸ್ ಶೃಂಗಸಭೆಯಲ್ಲಿ ಭಾಗವಹಿಸಿದರು. ಜಾಗತಿಕ ಆಡಳಿತದ ಸುಧಾರಣೆ, ಗ್ಲೋಬಲ್ ಸೌತ್ ನ (ದಕ್ಷಿಣದ ದೇಶಗಳ) ಧ್ವನಿಯನ್ನು ಹೆಚ್ಚಿಸುವುದು, ಶಾಂತಿ ಮತ್ತು ಭದ್ರತೆ, ಬಹುಪಕ್ಷೀಯತೆಯನ್ನು ಬಲಪಡಿಸುವುದು, ಅಭಿವೃದ್ಧಿ ವಿಷಯಗಳು ಮತ್ತು ಕೃತಕ ಬುದ್ಧಿಮತ್ತೆ ಸೇರಿದಂತೆ ಬ್ರಿಕ್ಸ್ ಕಾರ್ಯಸೂಚಿಯಲ್ಲಿನ ವಿವಿಧ ವಿಷಯಗಳ ಕುರಿತು ನಾಯಕರು ಫಲಪ್ರದ ಚರ್ಚೆಗಳನ್ನು ನಡೆಸಿದರು. ಪ್ರಧಾನಮಂತ್ರಿಯವರು, ಬ್ರೆಜಿಲ್ ಅಧ್ಯಕ್ಷರ ಆತ್ಮೀಯ ಆತಿಥ್ಯಕ್ಕೆ ಹಾಗೂ ಶೃಂಗಸಭೆಯ ಯಶಸ್ವಿ ಆಯೋಜನೆಗೆ ಧನ್ಯವಾದಗಳನ್ನು ಅರ್ಪಿಸಿದರು.

ಪ್ರಧಾನಿ ಮೋದಿ ಬ್ರೆಜಿಲ್‌ನ ರಿಯೊ ಡಿ ಜನೈರೊಗೆ ಆಗಮಿಸಿದರು

July 06th, 04:47 am

ಪ್ರಧಾನಿ ನರೇಂದ್ರ ಮೋದಿ ಅವರು ಸ್ವಲ್ಪ ಸಮಯದ ಹಿಂದೆ ಬ್ರೆಜಿಲ್‌ಗೆ ಆಗಮಿಸಿದ್ದಾರೆ. ಅವರು ರಿಯೊ ಡಿ ಜನೈರೊದಲ್ಲಿ ನಡೆಯಲಿರುವ ಬ್ರಿಕ್ಸ್ ಶೃಂಗಸಭೆಯಲ್ಲಿ ಭಾಗವಹಿಸಲಿದ್ದಾರೆ ಮತ್ತು ಹಲವಾರು ವಿಶ್ವ ನಾಯಕರನ್ನು ಭೇಟಿಯಾಗಲಿದ್ದಾರೆ.

ಘಾನಾ, ಟ್ರಿನಿಡಾಡ್ ಮತ್ತು ಟೊಬಾಗೊ, ಅರ್ಜೆಂಟೀನಾ, ಬ್ರೆಜಿಲ್ ಮತ್ತು ನಮೀಬಿಯಾ ಭೇಟಿಯ ಮುನ್ನ ಪ್ರಧಾನಮಂತ್ರಿ ಅವರ ನಿರ್ಗಮನ ಹೇಳಿಕೆ

July 02nd, 07:34 am

ಇಂದು, ನಾನು ಜುಲೈ 2 ರಿಂದ 9, 2025 ರವರೆಗೆ ಘಾನಾ, ಟ್ರಿನಿಡಾಡ್ ಮತ್ತು ಟೊಬಾಗೊ, ಅರ್ಜೆಂಟೀನಾ, ಬ್ರೆಜಿಲ್ ಮತ್ತು ನಮೀಬಿಯಾಕ್ಕೆ ಐದು ರಾಷ್ಟ್ರಗಳ ಭೇಟಿಯನ್ನು ಕೈಗೊಳ್ಳುತ್ತೇನೆ

ಘಾನಾ, ಟ್ರಿನಿಡಾಡ್ ಮತ್ತು ಟೊಬಾಗೊ, ಅರ್ಜೆಂಟೀನಾ, ಬ್ರೆಜಿಲ್ ಮತ್ತು ನಮೀಬಿಯಾಕ್ಕೆ ಪ್ರಧಾನಮಂತ್ರಿ ಅವರ ಭೇಟಿ (ಜುಲೈ 02-09)

June 27th, 10:03 pm

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2025ರ ಜುಲೈ 02ರಿಂದ 3ರವರೆಗೆ ಘಾನಾಕ್ಕೆ ಭೇಟಿ ನೀಡಲಿದ್ದಾರೆ. ಇದು ಘಾನಾಕ್ಕೆ ಪ್ರಧಾನಮಂತ್ರಿ ಅವರ ಮೊದಲ ದ್ವಿಪಕ್ಷೀಯ ಭೇಟಿಯಾಗಿದೆ. ಭಾರತದಿಂದ ಘಾನಾಕ್ಕೆ ಪ್ರಧಾನಮಂತ್ರಿ ಅವರ ಈ ಭೇಟಿ ಮೂರು ದಶಕಗಳ ನಂತರ ನಡೆಯುತ್ತಿದೆ. ಈ ಭೇಟಿಯ ಸಮಯದಲ್ಲಿ, ಪ್ರಧಾನಮಂತ್ರಿ ಅವರು ಘಾನಾ ಅಧ್ಯಕ್ಷರೊಂದಿಗೆ ಬಲವಾದ ದ್ವಿಪಕ್ಷೀಯ ಪಾಲುದಾರಿಕೆಯನ್ನು ಪರಿಶೀಲಿಸಲು ಮತ್ತು ಆರ್ಥಿಕ, ಇಂಧನ ಮತ್ತು ರಕ್ಷಣಾ ಸಹಯೋಗ ಮತ್ತು ಅಭಿವೃದ್ಧಿ ಸಹಕಾರ ಪಾಲುದಾರಿಕೆಯ ಮೂಲಕ ಅದನ್ನು ಹೆಚ್ಚಿಸಲು ಹೆಚ್ಚಿನ ಮಾರ್ಗಗಳ ಬಗ್ಗೆ ಚರ್ಚಿಸಲು ಮಾತುಕತೆ ನಡೆಸಲಿದ್ದಾರೆ. ಈ ಭೇಟಿಯು ದ್ವಿಪಕ್ಷೀಯ ಸಂಬಂಧಗಳನ್ನು ಆಳಗೊಳಿಸಲು ಮತ್ತು ಇಕೋವಾಸ್ (ಪಶ್ಚಿಮ ಆಫ್ರಿಕಾ ರಾಜ್ಯಗಳ ಆರ್ಥಿಕ ಸಮುದಾಯ) ಮತ್ತು ಆಫ್ರಿಕನ್ ಒಕ್ಕೂಟದೊಂದಿಗೆ ಭಾರತದ ಸಂಬಂಧವನ್ನು ಬಲಪಡಿಸಲು ಉಭಯ ದೇಶಗಳ ಹಂಚಿಕೆಯ ಬದ್ಧತೆಯನ್ನು ಪುನರುಚ್ಚರಿಸುತ್ತದೆ.

ಇಂಡೋನೇಷ್ಯಾ ಅಧ್ಯಕ್ಷರಾದ ಪ್ರಬೋವೊ ಸುಬಿಯಾಂಟೊ ಅವರನ್ನು ಸ್ವಾಗತಿಸಲು ಭಾರತ ಧನ್ಯ: ಪ್ರಧಾನಮಂತ್ರಿ

January 25th, 05:48 pm

ಇಂಡೋನೇಷ್ಯಾದ ಅಧ್ಯಕ್ಷರಾದ ಗೌರವಾನ್ವಿತ ಶ್ರೀ ಪ್ರಬೋವೊ ಸುಬಿಯಾಂಟೊ ಅವರನ್ನು ಸ್ವಾಗತಿಸಿದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಭಾರತ-ಇಂಡೋನೇಷ್ಯಾ ಸಮಗ್ರ ಕಾರ್ಯತಂತ್ರದ ಪಾಲುದಾರಿಕೆಯ ವಿವಿಧ ಆಯಾಮಗಳನ್ನು ಚರ್ಚಿಸಲಾಗಿದೆ ಎಂದು ಹೇಳಿದರು. ಇಂಡೋನೇಷ್ಯಾ ನಮ್ಮ ಆಕ್ಟ್ ಈಸ್ಟ್ ನೀತಿಯ ಪ್ರಮುಖ ಭಾಗವಾಗಿದೆ ಮತ್ತು ಇಂಡೋನೇಷ್ಯಾದ ಬ್ರಿಕ್ಸ್ ಸದಸ್ಯತ್ವವನ್ನು ಭಾರತ ಸ್ವಾಗತಿಸುತ್ತದೆ ಎಂದು ಪ್ರಧಾನಮಂತ್ರಿ ಒತ್ತಿ ಹೇಳಿದ್ದಾರೆ.

ಇಂಡೋನೇಷ್ಯಾ ಅಧ್ಯಕ್ಷರೊಂದಿಗೆ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಪ್ರಧಾನಮಂತ್ರಿಯವರ ಹೇಳಿಕೆಯ ಇಂಗ್ಲಿಷ್ ಅವತರಣಿಕೆ

January 25th, 01:00 pm

ಭಾರತದ ಮೊದಲ ಗಣರಾಜ್ಯೋತ್ಸವಕ್ಕೆ ಇಂಡೋನೇಷ್ಯಾ ನಮ್ಮ ಮುಖ್ಯ ಅತಿಥಿಯಾಗಿತ್ತು. ಮತ್ತು ನಾವು ನಮ್ಮ 75 ನೇ ಗಣರಾಜ್ಯೋತ್ಸವವನ್ನು ಆಚರಿಸುತ್ತಿರುವಾಗ, ಮತ್ತೊಮ್ಮೆ, ಇಂಡೋನೇಷ್ಯಾ ಈ ಮಹತ್ವದ ಸಂದರ್ಭದ ಭಾಗವಾಗಲು ಗೌರವಯುತವಾಗಿ ಒಪ್ಪಿಕೊಂಡಿದೆ ಎಂಬುದು ನಮಗೆ ಬಹಳ ಹೆಮ್ಮೆಯ ವಿಷಯವಾಗಿದೆ. ಈ ಸಂದರ್ಭದಲ್ಲಿ ನಾನು ಅಧ್ಯಕ್ಷ ಪ್ರಬೋವೊ ಅವರನ್ನು ಭಾರತಕ್ಕೆ ಹಾರ್ದಿಕವಾಗಿ ಸ್ವಾಗತಿಸುತ್ತೇನೆ.