ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಸಂಘರ್ಷ ಕುರಿತು ಲೋಕಸಭೆಯಲ್ಲಿ ಪ್ರಧಾನಮಂತ್ರಿ ಅವರ ಭಾಷಣ

March 23rd, 02:15 pm

ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಸಂಘರ್ಷ ಮತ್ತು ಅದು ಭಾರತಕ್ಕೆ ಎದುರಾಗಿರುವ ಸವಾಲುಗಳ ಕುರಿತು ಮಾತನಾಡಲು ನಾನು ಈ ಗೌರವಾನ್ವಿತ ಸದನದ ಮುಂದೆ ಬಂದಿದ್ದೇನೆ. ಪಶ್ಚಿಮ ಏಷ್ಯಾದಲ್ಲಿನ ಪರಿಸ್ಥಿತಿ ತುಂಬಾ ಕಳವಳಕಾರಿಯಾಗಿದೆ. ಕಳೆದ 2-3 ವಾರಗಳಲ್ಲಿ ಶ್ರೀ ಜೈಶಂಕರ್ ಜಿ ಮತ್ತು ಶ್ರೀ ಹರ್‌ದೀಪ್ ಪುರಿ ಅವರು ಪರಿಷ್ಕೃತ ವಿಷಯಗಳನ್ನು ಸದನಕ್ಕೆ ಒದಗಿಸಿದ್ದಾರೆ. ಬಿಕ್ಕಟ್ಟು 3 ವಾರಗಳಿಗೂ ಹೆಚ್ಚು ಕಾಲ ಇರುವುದರಿಂದ, ಜಾಗತಿಕ ಆರ್ಥಿಕತೆ ಮತ್ತು ಜನರ ಜೀವನದ ಮೇಲೆ ಅದರ ಪ್ರತಿಕೂಲ ಪರಿಣಾಮವು ಸ್ಪಷ್ಟವಾಗಿದೆ. ಈ ಬಿಕ್ಕಟ್ಟಿಗೆ ತ್ವರಿತ ಪರಿಹಾರಕ್ಕಾಗಿ ಇಡೀ ಜಗತ್ತು ಎಲ್ಲಾ ಪಕ್ಷಗಳನ್ನು ಒತ್ತಾಯಿಸುತ್ತಾ ಬಂದಿದೆ.

ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಸಂಘರ್ಷದ ಕುರಿತು ಲೋಕಸಭೆಯಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಭಾಷಣ

March 23rd, 02:00 pm

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಲೋಕಸಭೆಯನ್ನುದ್ದೇಶಿಸಿ ಮಾತನಾಡುತ್ತಾ, ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಸಂಘರ್ಷ ಮತ್ತು ಅದು ಭಾರತಕ್ಕೆ ಒಡ್ಡುತ್ತಿರುವ ವ್ಯಾಪಕ ಸವಾಲುಗಳ ಬಗ್ಗೆ ಪ್ರಸ್ತಾಪಿಸಿದರು. ಈ ಬಿಕ್ಕಟ್ಟು ಈಗ ಮೂರು ವಾರಗಳಿಗೂ ಹೆಚ್ಚು ಕಾಲ ಮುಂದುವರಿದಿದ್ದು, ಜಾಗತಿಕ ಆರ್ಥಿಕತೆ ಮತ್ತು ಮಾನವ ಜೀವಗಳ ಮೇಲೆ ಗಂಭೀರ ಪ್ರತಿಕೂಲ ಪರಿಣಾಮಗಳನ್ನು ಬೀರುತ್ತಿದೆ ಎಂದು ಹೇಳಿದ ಪ್ರಧಾನಮಂತ್ರಿಯವರು, ಇದರ ಪರಿಹಾರದ ತುರ್ತು ಅಗತ್ಯವನ್ನು ಒತ್ತಿಹೇಳಿದರು. ಪರಿಸ್ಥಿತಿಯ ಗಂಭೀರತೆಯನ್ನು ಉಲ್ಲೇಖಿಸುತ್ತಾ ಶ್ರೀ ಮೋದಿಯವರು, ಈ ಬಿಕ್ಕಟ್ಟನ್ನು ಆದಷ್ಟು ಬೇಗ ಪರಿಹರಿಸುವಂತೆ ಇಡೀ ಜಗತ್ತು ಎಲ್ಲಾ ಪಕ್ಷಗಳನ್ನು ಒತ್ತಾಯಿಸುತ್ತಿದೆ ಎಂದು ಹೇಳಿದರು.

ಇಟಿ ನೌ ಜಾಗತಿಕ ವ್ಯಾಪಾರ ಶೃಂಗಸಭೆಯಲ್ಲಿ ಪ್ರಧಾನಮಂತ್ರಿ ಅವರ ಭಾಷಣ

February 13th, 08:30 pm

ಈ ಜಾಗತಿಕ ವ್ಯಾಪಾರ ಶೃಂಗಸಭೆಗೆ ನಿಮ್ಮೆಲ್ಲರನ್ನೂ ಸ್ವಾಗತಿಸುತ್ತೇನೆ; ಪ್ರತಿಯೊಬ್ಬರಿಗೂ ನನ್ನ ಶುಭಾಶಯಗಳು. ಅಡೆತಡೆಯ ಒಂದು ದಶಕ, ಬದಲಾವಣೆಯ ಒಂದು ಶತಮಾನ ಎನ್ನುವ ವಿಷಯವನ್ನು ಚರ್ಚಿಸಲು ನಾವು ಇಲ್ಲಿದ್ದೇವೆ. ವಿನೀತ್ ಅವರ ಭಾಷಣವನ್ನು ಕೇಳಿದ ನಂತರ, ನನ್ನ ಕೆಲಸವು ಬಹಳ ಸುಲಭವಾಗಿದೆ ಎಂದು ನನಗೆ ಅನಿಸುತ್ತದೆ. ಆದರೆ ನಾನು ಒಂದು ಸಣ್ಣ ವಿನಂತಿ - ನಿಮಗೆ ಬಹಳಷ್ಟು ತಿಳಿದಿರುವುದರಿಂದ, ಅದು ಕೆಲವೊಮ್ಮೆ ಇ ಟಿ ಯಲ್ಲಿಯೂ ಕಾಣಿಸಿಕೊಳ್ಳಬೇಕು.

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇ ಟಿ ನೌ ಜಾಗತಿಕ ವ್ಯಾಪಾರ ಶೃಂಗಸಭೆ 2026 ಅನ್ನು ಉದ್ದೇಶಿಸಿ ಮಾತನಾಡಿದರು

February 13th, 08:00 pm

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ನವದೆಹಲಿಯಲ್ಲಿ ನಡೆದ ʻಇಟಿ ನೌ ಜಾಗತಿಕ ವ್ಯಾಪಾರ ಶೃಂಗಸಭೆ 2026ʼ ಅನ್ನು ಉದ್ದೇಶಿಸಿ ಮಾತನಾಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಪ್ರಧಾನಮಂತ್ರಿಯವರು, ಜಾಗತಿಕ ವ್ಯಾಪಾರ ಶೃಂಗಸಭೆಯಲ್ಲಿ ಹಾಜರಿದ್ದ ಎಲ್ಲರಿಗೂ ಶುಭಾಶಯಗಳನ್ನು ತಿಳಿಸಿದರು ಮತ್ತು ʻಅಡೆತಡೆಯ ಒಂದು ದಶಕ, ಬದಲಾವಣೆಯ ಒಂದು ಶತಮಾನʼ ಎನ್ನುವ ವಿಷಯದ ಕುರಿತು ಮಾತನಾಡಿದರು. 21 ನೇ ಶತಮಾನದ ಕಳೆದ ದಶಕವು ಜಾಗತಿಕ ಸಾಂಕ್ರಾಮಿಕ ರೋಗ, ಉದ್ವಿಗ್ನತೆ ಹಾಗು ವಿವಿಧ ಪ್ರದೇಶಗಳಲ್ಲಿನ ಯುದ್ಧಗಳು ಮತ್ತು ಜಾಗತಿಕ ಸಮತೋಲನವನ್ನು ಅಲುಗಾಡಿಸಿದ ಪೂರೈಕೆ ಸರಪಳಿ ಸ್ಥಗಿತಗಳು ಸೇರಿದಂತೆ ಹಿಂದೆಂದೂ ಕಾಣದಂತ ಅಡೆತಡೆಗಳನ್ನು ಕಂಡಿದೆ ಎಂದು ಅವರು ಉಲ್ಲೇಖಿಸಿದರು. ಬಿಕ್ಕಟ್ಟುಗಳು ರಾಷ್ಟ್ರದ ನಿಜವಾದ ಶಕ್ತಿಯನ್ನು ತೋರಿಸುತ್ತವೆ ಎಂದು ಅವರು ಒತ್ತಿ ಹೇಳಿದರು ಮತ್ತು ಈ ಅಡೆತಡೆಗಳ ಹೊರತಾಗಿಯೂ, ಭಾರತದ ದಶಕವು ಗಮನಾರ್ಹ ಅಭಿವೃದ್ಧಿ, ಅತ್ಯುತ್ತಮ ವಿತರಣೆ ಮತ್ತು ಪ್ರಜಾಪ್ರಭುತ್ವದ ಬಲವರ್ಧನೆಯಿಂದ ಗುರುತಿಸಲ್ಪಟ್ಟಿದೆ ಎಂದು ಅವರು ಹೆಮ್ಮೆ ವ್ಯಕ್ತಪಡಿಸಿದರು. ಕಳೆದ ದಶಕ ಪ್ರಾರಂಭವಾದಾಗ, ಭಾರತವು ಹನ್ನೊಂದನೇ ಅತಿದೊಡ್ಡ ಆರ್ಥಿಕತೆಯಾಗಿತ್ತು ಮತ್ತು ಪ್ರಕ್ಷುಬ್ಧತೆಯ ನಡುವೆ ಕುಸಿತದ ಭಯವಿತ್ತು, ಆದರೆ ಇಂದು ಭಾರತವು ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕತೆಯಾಗಲು ವೇಗವಾಗಿ ಮುನ್ನಡೆಯುತ್ತಿದೆ ಎಂದು ಶ್ರೀ ಮೋದಿ ನೆನಪಿಸಿಕೊಂಡರು. ಬದಲಾವಣೆಯ ಶತಮಾನಕ್ಕೆ ಭಾರತವು ಪ್ರಮುಖ ಅಡಿಪಾಯವಾಗಲಿದೆ ಎಂದು ಒತ್ತಿ ಹೇಳಿದ ಶ್ರೀ ಮೋದಿಯವರು, ಭಾರತವು ಪ್ರಸ್ತುತ ಜಾಗತಿಕ ಬೆಳವಣಿಗೆಗೆ ಶೇ. ಹದಿನಾರು ಕ್ಕಿಂತ ಹೆಚ್ಚು ಕೊಡುಗೆ ನೀಡುತ್ತದೆ ಎಂದು ಹೇಳಿದರು ಮತ್ತು ಈ ಕೊಡುಗೆ ವರ್ಷದಿಂದ ವರ್ಷಕ್ಕೆ ಏರಿಕೆಯಾಗುತ್ತಲೇ ಇರುತ್ತದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು. ಭಾರತವು ಜಾಗತಿಕ ಬೆಳವಣಿಗೆಗೆ ಚಾಲನೆ ನೀಡುತ್ತದೆ ಮತ್ತು ವಿಶ್ವ ಆರ್ಥಿಕತೆಯ ಹೊಸ ಎಂಜಿನ್ ಆಗಿ ಹೊರಹೊಮ್ಮುತ್ತದೆ ಎಂದು ಅವರು ದೃಢಪಡಿಸಿದರು.

ನವದೆಹಲಿಯ ಕಾರಿಯಪ್ಪ ಮೈದಾನದಲ್ಲಿ ನಡೆದ ಎನ್ ಸಿಸಿ ರ‍್ಯಾಲಿ (Rally) ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

January 28th, 04:00 pm

ಕೇಂದ್ರ ಸಚಿವ ಸಂಪುಟದ ನನ್ನ ಸಹೋದ್ಯೋಗಿ, ರಕ್ಷಣಾ ಸಚಿವರಾದ ಶ್ರೀ ರಾಜನಾಥ್ ಸಿಂಗ್ ಜಿ, ವೇದಿಕೆಯಲ್ಲಿರುವ ಇತರೆ ಎಲ್ಲ ಗಣ್ಯರೆ, ದೇಶಾದ್ಯಂತ ಬಂದಿರುವ ಎನ್ ಸಿ ಸಿ ಮತ್ತು ಎನ್‌ ಎಸ್‌ ಎಸ್ ಕೆಡೆಟ್ ‌ಗಳೆ, ಟ್ಯಾಬ್ಲೊ ಕಲಾವಿದರೆ, ರಾಷ್ಟ್ರೀಯ ರಂಗಶಾಲೆಯ ಸಹೋದ್ಯೋಗಿಗಳೆ ಮತ್ತು ನನ್ನ ಪ್ರೀತಿಯ ಯುವ ಸ್ನೇಹಿತರೆ. ನಿಮ್ಮೆಲ್ಲರ ಕಠಿಣ ಪರಿಶ್ರಮ ಇಲ್ಲಿ ಗೋಚರಿಸುತ್ತಿದೆ. ನೀವು ಉತ್ತಮ ಸಮನ್ವಯದಿಂದ ನಿಮ್ಮ ಪ್ರದರ್ಶನವನ್ನು ತೋರಿದ್ದೀರಿ.

ದೆಹಲಿಯಲ್ಲಿ ನಡೆದ ವಾರ್ಷಿಕ ಎನ್‌ಸಿಸಿ ಪ್ರಧಾನಮಂತ್ರಿ ಪರೇಡ್ ಉದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ

January 28th, 03:30 pm

ದೆಹಲಿಯಲ್ಲಿ ಕಾರಿಯಪ್ಪ ಪರೇಡ್ ಮೈದಾನದಲ್ಲಿ ಇಂದು ನಡೆದ ವಾರ್ಷಿಕ ಎನ್‌ಸಿಸಿ ಪ್ರಧಾನಮಂತ್ರಿ ಪರೇಡನ್ನು (ರ‍್ಯಾಲಿಯನ್ನು) ಉದ್ದೇಶಿಸಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಮಾತನಾಡಿದರು. ಎನ್‌ಸಿಸಿ ದಿನದ ಸಂದರ್ಭದಲ್ಲಿ ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿ, ಎನ್‌ಸಿಸಿ, ಎನ್‌ಎಸ್‌ಎಸ್ ಕೆಡೆಟ್‌ಗಳು, ಟ್ಯಾಬ್ಲೋ ಕಲಾವಿದರು, ರಾಷ್ಟ್ರೀಯ ರಂಗಶಾಲೆಯ ಸಹಚರರು ಮತ್ತು ದೇಶಾದ್ಯಂತದ ಯುವ ಪಾಲ್ಗೊಳ್ಳುವಿಕೆಯ ಪ್ರಯತ್ನಗಳು ಅವರ ಸಂಘಟಿತ ಪ್ರದರ್ಶನಗಳಲ್ಲಿ ಸ್ಪಷ್ಟವಾಗಿ ಗೋಚರಿಸುತ್ತವೆ ಎಂದು ಹೇಳಿದರು. ಇಂದು ಬೆಳಿಗ್ಗೆ ಮಹಾರಾಷ್ಟ್ರದಲ್ಲಿ ಸಂಭವಿಸಿದ ವಿಮಾನ ಅಪಘಾತದಿಂದಾಗಿ ಈ ದಿನವು ತೀವ್ರ ದುಃಖವನ್ನುಂಟುಮಾಡಿದೆ ಎಂದು ಶ್ರೀ ಮೋದಿ ದುಃಖದಿಂದ ನುಡಿದರು, ಇದರಲ್ಲಿ ಉಪಮುಖ್ಯಮಂತ್ರಿ ಶ್ರೀ ಅಜಿತ್ ಪವಾರ್ ಅವರು ಮತ್ತು ಕೆಲವು ಸಹೋದ್ಯೋಗಿಗಳು ಸಾವನ್ನಪ್ಪಿದ್ದಾರೆ. ಅಜಿತ್ ದಾದಾ ಅವರು ಮಹಾರಾಷ್ಟ್ರ ಮತ್ತು ರಾಷ್ಟ್ರದ ಅಭಿವೃದ್ಧಿಗೆ, ವಿಶೇಷವಾಗಿ ಗ್ರಾಮೀಣ ಜೀವನವನ್ನು ಸುಧಾರಿಸಲು ಕೆಲಸ ಮಾಡುವ ಮೂಲಕ ಮಹತ್ವದ ಕೊಡುಗೆ ನೀಡಿದ್ದಾರೆ ಎಂದು ಅವರು ಎತ್ತಿ ತೋರಿಸಿದರು ಮತ್ತು ಶ್ರೀ ಅಜಿತ್ ಪವಾರ್ ಜೀ ಅವರ ಕುಟುಂಬಕ್ಕೆ ಸಂತಾಪ ಸೂಚಿಸಿದರು. ಈ ನೋವಿನ ಕ್ಷಣದಲ್ಲಿ, ಅಪಘಾತದಲ್ಲಿ ಮಡಿದವರ ಕುಟುಂಬಗಳೊಂದಿಗೆ ರಾಷ್ಟ್ರವು ನಿಂತಿದೆ ಎಂದು ಅವರು ಹೇಳಿದರು. ದುಃಖ ಮತ್ತು ಸಂತಾಪದ ಈ ಕ್ಷಣಗಳ ನಡುವೆ ಪ್ರಧಾನಿ, ಸ್ನೇಹಪರ ರಾಷ್ಟ್ರಗಳವರು ಸೇರಿದಂತೆ ಹಾಜರಿದ್ದ ಎಲ್ಲಾ ಕೆಡೆಟ್‌ಗಳಿಗೆ ಶುಭಾಶಯಗಳನ್ನು ತಿಳಿಸಿದರು ಮತ್ತು ಈ ವರ್ಷ ಬಾಲಕಿಯರ ಹೆಚ್ಚಿನ ಭಾಗವಹಿಸುವಿಕೆಯನ್ನು ಗುರುತಿಸಿದರು.

ಮಂಗೋಲಿಯಾ ಅಧ್ಯಕ್ಷರೊಂದಿಗಿನ ಜಂಟಿ ಪತ್ರಿಕಾ ಹೇಳಿಕೆಯ ಸಂದರ್ಭದಲ್ಲಿ ಪ್ರಧಾನಮಂತ್ರಿ ಅವರ ಪತ್ರಿಕಾ ಪ್ರಕಟಣೆಯ ಕನ್ನಡ ಅನುವಾದ

October 14th, 01:15 pm

ಮಂಗೋಲಿಯಾ ಅಧ್ಯಕ್ಷರು ಆರು ವರ್ಷಗಳ ನಂತರ ಭಾರತಕ್ಕೆ ಭೇಟಿ ನೀಡುತ್ತಿದ್ದಾರೆ, ಇದು ಬಹಳ ವಿಶೇಷ ಸಂದರ್ಭವಾಗಿದೆ. ಭಾರತ ಮತ್ತು ಮಂಗೋಲಿಯಾ 70 ವರ್ಷಗಳ ರಾಜತಾಂತ್ರಿಕ ಸಂಬಂಧಗಳು ಮತ್ತು 10 ವರ್ಷಗಳ ಕಾರ್ಯತಂತ್ರದ ಪಾಲುದಾರಿಕೆಯನ್ನು ಆಚರಿಸುತ್ತಿರುವ ಸಂದರ್ಭದಲ್ಲಿ ಈ ಭೇಟಿ ಬಂದಿದೆ. ಇದನ್ನು ಗುರುತಿಸಲು, ನಾವು ನಮ್ಮ ಹಂಚಿಕೆಯ ಪರಂಪರೆ, ವೈವಿಧ್ಯತೆ ಮತ್ತು ಬಲವಾದ ನಾಗರಿಕತೆಯ ಬಾಂಧವ್ಯಗಳನ್ನು ಎತ್ತಿ ತೋರಿಸುವ ಜಂಟಿ ಅಂಚೆ ಚೀಟಿಯನ್ನು ಬಿಡುಗಡೆ ಮಾಡಿದ್ದೇವೆ.

ಆದಂಪುರ ವಾಯುನೆಲೆಯಲ್ಲಿ ವೀರ ವಾಯುಪಡೆ ಯೋಧರು ಮತ್ತು ಸಮರ ವೀರರೊಂದಿಗೆ ಪ್ರಧಾನಮಂತ್ರಿ ಸಂವಾದ

May 13th, 03:45 pm

ಈ ಘೋಷಣೆಯ ಶಕ್ತಿಯನ್ನು ಜಗತ್ತು ಇದೀಗವಷ್ಟೇ ನೋಡಿದೆ. ಭಾರತ್ ಮಾತಾ ಕಿ ಜೈ ಎಂಬುದು ಕೇವಲ ಘೋಷಣೆಯಲ್ಲ, ಭಾರತ ಮಾತೆಯ ಗೌರವ ಮತ್ತು ಘನತೆಗಾಗಿ ತನ್ನ ಪ್ರಾಣವನ್ನೇ ಪಣಕ್ಕಿಡುವ ದೇಶದ ಪ್ರತಿಯೊಬ್ಬ ಸೈನಿಕನ ಪ್ರಮಾಣವಚನ ಇದಾಗಿದೆ. ದೇಶಕ್ಕಾಗಿ ಬದುಕಲು ಬಯಸುವ, ಏನನ್ನಾದರೂ ಸಾಧಿಸಲು ಬಯಸುವ ದೇಶದ ಪ್ರತಿಯೊಬ್ಬ ನಾಗರಿಕನ ಧ್ವನಿ ಇದಾಗಿದೆ. ಭಾರತ್ ಮಾತಾ ಕಿ ಜೈ ಎಂಬುದು ಯುದ್ಧಭೂಮಿಯಲ್ಲಿ ಮತ್ತು ಕಾರ್ಯಾಚರಣೆಯಲ್ಲಿ ಪ್ರತಿಧ್ವನಿಸುತ್ತದೆ. ಭಾರತದ ಸೈನಿಕರು ಭಾರತ್ ಮಾತಾ ಕಿ ಜೈ ಎಂದು ಜಪಿಸಿದಾಗ, ಶತ್ರುಗಳ ಹೃದಯ ನಡುಗುತ್ತದೆ. ನಮ್ಮ ಡ್ರೋನ್‌ಗಳು ಶತ್ರುಗಳ ಕೋಟೆಯ ಗೋಡೆಗಳನ್ನು ಉರುಳಿಸಿದಾಗ, ನಮ್ಮ ಕ್ಷಿಪಣಿಗಳು ಭಾರಿ ಶಬ್ದದೊಂದಿಗೆ ಗುರಿ ತಲುಪಿದಾಗ, ಶತ್ರು ಕೇಳುತ್ತಾನೆ - ಭಾರತ್ ಮಾತಾ ಕಿ ಜೈ! ಘೋಷಣೆಯನ್ನ. ರಾತ್ರಿಯ ಕಗ್ಗತ್ತಲೆಯಲ್ಲೂ ನಾವು ಸೂರ್ಯನನ್ನು ಬೆಳಗಿದಾಗ, ಶತ್ರು ನೋಡುತ್ತಾನೆ - ಭಾರತ್ ಮಾತಾ ಕಿ ಜೈ! ನಮ್ಮ ಪಡೆಗಳು ಪರಮಾಣು ಬೆದರಿಕೆಯನ್ನು ಹುಸಿಗೊಳಿಸಿದಾಗ, ಆಕಾಶದಿಂದ ಭೂಗತ ಲೋಕಕ್ಕೆ ಒಂದೇ ಒಂದು ವಿಷಯ ಪ್ರತಿಧ್ವನಿಸುತ್ತದೆ, ಅದೇ - ಭಾರತ್ ಮಾತಾ ಕಿ ಜೈ!

ಆದಂಪುರ ವಾಯುಪಡೆ ನಿಲ್ದಾಣದಲ್ಲಿ ಧೈರ್ಯಶಾಲಿ ವಾಯುಪಡೆ ಯೋಧರು ಮತ್ತು ಸೈನಿಕರೊಂದಿಗೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಸಂವಾದ

May 13th, 03:30 pm

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಆದಂಪುರದ ವಾಯುಪಡೆ ನಿಲ್ದಾಣದಲ್ಲಿಂದು ವೀರ ವಾಯುಪಡೆ ಯೋಧರು ಮತ್ತು ಸೈನಿಕರನ್ನು ಭೇಟಿ ಮಾಡಿ ಸಂವಾದ ನಡೆಸಿದರು. ಅವರ ಜತೆ ಮಾತನಾಡಿದ ಅವರು, 'ಭಾರತ್ ಮಾತಾ ಕಿ ಜೈ' ಘೋಷಣೆಯ ಶಕ್ತಿಯನ್ನು ಜಗತ್ತು ಇದೀಗಷ್ಟೇ ಕಂಡಿದೆ. ಇದು ಕೇವಲ ಮಂತ್ರವಲ್ಲ, ಭಾರತ ಮಾತೆಯ ಘನತೆ ಎತ್ತಿಹಿಡಿಯಲು ತಮ್ಮ ಪ್ರಾಣವನ್ನೇ ಪಣಕ್ಕಿಡುವ ಪ್ರತಿಯೊಬ್ಬ ಸೈನಿಕನು ತೆಗೆದುಕೊಳ್ಳುವ ಗಂಭೀರ ಪ್ರಮಾಣವಚನ ಇದಾಗಿದೆ. ಈ ಘೋಷಣೆಯು ರಾಷ್ಟ್ರಕ್ಕಾಗಿ ಬದುಕಲು ಮತ್ತು ಅರ್ಥಪೂರ್ಣ ಕೊಡುಗೆ ನೀಡಲು ಬಯಸುವ ಪ್ರತಿಯೊಬ್ಬ ನಾಗರಿಕನ ಧ್ವನಿಯಾಗಿದೆ. 'ಭಾರತ್ ಮಾತಾ ಕಿ ಜೈ' ಯುದ್ಧಭೂಮಿಯಲ್ಲಿ ಮತ್ತು ನಿರ್ಣಾಯಕ ಕಾರ್ಯಾಚರಣೆಗಳಲ್ಲಿ ಪ್ರತಿಧ್ವನಿಸುತ್ತದೆ. ಭಾರತೀಯ ಸೈನಿಕರು 'ಭಾರತ್ ಮಾತಾ ಕಿ ಜೈ' ಎಂದು ಜಪಿಸಿದಾಗ, ಅದು ಶತ್ರುಗಳ ಬೆನ್ನುಮೂಳೆಯಲ್ಲಿ ನಡುಕ ಉಂಟುಮಾಡುತ್ತದೆ. ಅವರು ಭಾರತದ ಸೇನಾ ಶಕ್ತಿಯನ್ನು ಶ್ಲಾಘಿಸಿದ ಅವರು, ಭಾರತೀಯ ಡ್ರೋನ್‌ಗಳು ಶತ್ರುಗಳ ಕೋಟೆಗಳನ್ನು ಕೆಡವಿದಾಗ ಮತ್ತು ಕ್ಷಿಪಣಿಗಳು ನಿಖರವಾಗಿ ದಾಳಿ ಮಾಡಿದಾಗ, ಶತ್ರುವು 'ಭಾರತ್ ಮಾತಾ ಕಿ ಜೈ' ಎಂಬ ಒಂದೇ ಒಂದು ಪದ ಕೇಳುತ್ತಾನೆ. ಅತ್ಯಂತ ಕತ್ತಲೆಯ ರಾತ್ರಿಗಳಲ್ಲೂ ಭಾರತವು ಆಕಾಶವನ್ನು ಬೆಳಗಿಸುವ ಸಾಮರ್ಥ್ಯ ಹೊಂದಿದೆ, ಶತ್ರುಗಳು ರಾಷ್ಟ್ರದ ಅದಮ್ಯ ಚೈತನ್ಯವನ್ನು ವೀಕ್ಷಿಸುವಂತೆ ಮಾಡಿದೆ. ಭಾರತದ ಪಡೆಗಳು ಪರಮಾಣು ಬೆದರಿಕೆಯನ್ನು ಕಳಚಿದಾಗ, 'ಭಾರತ್ ಮಾತಾ ಕಿ ಜೈ' ಎಂಬ ಸಂದೇಶವು ಆಕಾಶ ಮತ್ತು ಆಳದಲ್ಲಿ ಪ್ರತಿಧ್ವನಿಸಿದೆ ಎಂದು ಅವರು ಘೋಷಿಸಿದರು.

India's youth are a force for global good: PM Modi at NCC Rally

January 27th, 05:00 pm

PM Modi addressed the NCC Rally in Delhi. The Prime Minister remarked that the youth of India will determine the development of the country and the world in the 21st century. He emphasised, “Indian youth are not only contributing to India's development but are also a force for global good.”

ಎನ್‌ಸಿಸಿ ವಾರ್ಷಿಕ ಪಿಎಂ ರ‍್ಯಾಲಿಯಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಭಾಷಣ

January 27th, 04:30 pm

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ದೆಹಲಿಯ ಕಾರ್ಯಪ್ಪ ಪರೇಡ್ ಮೈದಾನದಲ್ಲಿ ನಡೆದ ವಾರ್ಷಿಕ ರಾಷ್ಟ್ರೀಯ ಕೆಡೆಟ್ ಕಾರ್ಪ್ಸ್ (ಎನ್‌ಸಿಸಿ) ಪ್ರಧಾನಮಂತ್ರಿ ರ‍್ಯಾಲಿಯನ್ನು ಉದ್ದೇಶಿಸಿ ಭಾಷಣ ಮಾಡಿದರು. ಸಾಂಸ್ಕೃತಿಕ ಕಾರ್ಯಕ್ರಮವನ್ನು ವೀಕ್ಷಿಸಿದ ಶ್ರೀ ಮೋದಿ ಅವರು ಅತ್ಯುತ್ತಮ ಕೆಡೆಟ್ ಪ್ರಶಸ್ತಿಗಳನ್ನು ಪ್ರದಾನ ಮಾಡಿದರು. ಎನ್‌ಸಿಸಿ ದಿನಾಚರಣೆ ಸಂದರ್ಭದಲ್ಲಿ ಮಾತನಾಡಿದ ಪ್ರಧಾನ ಮಂತ್ರಿಗಳು, 18 ಸ್ನೇಹಪರ ರಾಷ್ಟ್ರಗಳಿಂದ ಸುಮಾರು 150 ಕೆಡೆಟ್‌ಗಳಿದ್ದು, ಎಲ್ಲರನ್ನೂ ಆತ್ಮೀಯವಾಗಿ ಸ್ವಾಗತಿಸಲಾಗುವುದು ಎಂದು ಹೇಳಿದರು. ಇದೇ ಸಂದರ್ಭದಲ್ಲಿ ಮೇರಾ ಯುವ ಭಾರತ್ (ಎಂವೈ ಭಾರತ್) ಪೋರ್ಟಲ್ ಮೂಲಕ ವರ್ಚುವಲ್ ಆಗಿ ದೇಶದ ಎಲ್ಲ ಭಾಗಗಳಿಂದ ಪಾಲ್ಗೊಂಡಿದ್ದ ಯುವಜನತೆಯನ್ನೂ ಅವರು ಅಭಿನಂದಿಸಿದರು.

ಗಡಿ ಭದ್ರತಾ ಪಡೆಯ ಸಂಸ್ಥಾಪನಾ ದಿನದ ಅಂಗವಾಗಿ ಪ್ರಧಾನಮಂತ್ರಿ ಶುಭಾಶಯ

December 01st, 08:52 am

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಗಡಿ ಭದ್ರತಾ ಪಡೆಗೆ ಸಂಸ್ಥಾಪನಾ ದಿನದ ಅಂಗವಾಗಿ ಶುಭಾಶಯ ಕೋರಿದರು. ಗಡಿ ಭದ್ರತಾ ಪಡೆಯ ಧೈರ್ಯ, ಸಮರ್ಪಣೆ ಮತ್ತು ಅಸಾಧಾರಣ ಸೇವೆಯು ರಕ್ಷಣಾ ಸೇವೆಯಲ್ಲಿ ನಿರ್ಣಾಯಕವಾಗಿ ಎಂದು ಅವರು ಶ್ಲಾಘಿಸಿದ್ದಾರೆ.

ಗುಜರಾತಿನ ಕಚ್‌ನಲ್ಲಿ ದೀಪಾವಳಿಯ ಸಂದರ್ಭದಲ್ಲಿ ಭದ್ರತಾ ಸಿಬ್ಬಂದಿಗೆ ಪ್ರಧಾನಮಂತ್ರಿಯವರ ಭಾಷಣದ ಪಠ್ಯ

October 31st, 07:05 pm

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಗುಜರಾತ್‌ನ ಕಚ್‌ನ ಕ್ರೀಕ್ ಏರಿಯಾದಲ್ಲಿರುವ ಲಕ್ಕಿ ನಾಲಾದಲ್ಲಿ ಬಿಎಸ್‌ಎಫ್, ಸೇನೆ, ನೌಕಾಪಡೆ ಮತ್ತು ವಾಯುಪಡೆಯ ವೀರ ಸಿಬ್ಬಂದಿಗಳೊಂದಿಗೆ ದೀಪಾವಳಿಯನ್ನು ಆಚರಿಸಿದರು.

"ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಗುಜರಾತ್‌ ನ ಕಚ್‌ ನಲ್ಲಿ ಭಾರತೀಯ ಸಶಸ್ತ್ರ ಪಡೆಗಳೊಂದಿಗೆ ದೀಪಾವಳಿಯನ್ನು ಆಚರಿಸಿದರು "

October 31st, 07:00 pm

ಗುಜರಾತ್‌ ನ ಕಚ್‌ ನ ಕ್ರೀಕ್ ಏರಿಯಾದಲ್ಲಿರುವ ಲಕ್ಕಿ ನಾಲಾದಲ್ಲಿ ಬಿ.ಎಸ್‌.ಎಫ್, ಸೇನೆ, ನೌಕಾಪಡೆ ಮತ್ತು ವಾಯುಪಡೆಯ ವೀರ ಸಿಬ್ಬಂದಿಗಳೊಂದಿಗೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ದೀಪಾವಳಿಯನ್ನು ಆಚರಿಸಿದರು.

ಪದಾತಿದಳ ದಿನದ ಅಂಗವಾಗಿ ಎಲ್ಲಾ ಶ್ರೇಣಿಯ ಸೇನಾ ಸಿಬ್ಬಂದಿ ಮತ್ತು ನಿವೃತ್ತರ ಅದಮ್ಯ ಚೈತನ್ಯ ಮತ್ತು ಧೈರ್ಯಕ್ಕೆ ಪ್ರಧಾನಮಂತ್ರಿ ಅವರಿಂದ ವಂದನೆ

October 27th, 09:07 am

ಪದಾತಿ ದಳ ದಿನದ ಅಂಗವಾಗಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಪದಾತಿದಳದ ಎಲ್ಲಾ ಶ್ರೇಣಿಯ ಸೇನಾ ಸಿಬ್ಬಂದಿ ಮತ್ತು ನಿವೃತ್ತರ ಅದಮ್ಯ ಚೈತನ್ಯ ಮತ್ತು ಧೈರ್ಯವನ್ನು ಶ್ಲಾಘಿಸಿದ್ದಾರೆ.

ಕಾಮನ್ ವೆಲ್ತ್ ಕಾನೂನು ಶಿಕ್ಷಣ ಸಂಘ - ಕಾಮನ್ ವೆಲ್ತ್ ಅಟಾರ್ನಿಸ್ ಮತ್ತು ಸಾಲಿಸಿಟರ್ಸ್ ಜನರಲ್ ಕಾನ್ಫರೆನ್ಸ್ 2024 ಅನ್ನು ಫೆಬ್ರವರಿ 3 ರಂದು ಉದ್ಘಾಟಿಸಲಿರುವ ಪ್ರಧಾನಮಂತ್ರಿ

February 02nd, 11:10 am

ಕಾಮನ್ ವೆಲ್ತ್ ಕಾನೂನು ಶಿಕ್ಷಣ ಸಂಘ - ಕಾಮನ್ ವೆಲ್ತ್ ವಕೀಲರು ಮತ್ತು ಸಾಲಿಸಿಟರ್ಸ್ ಜನರಲ್ ಕಾನ್ಫರೆನ್ಸ್ 2024 ಅನ್ನು 3 ನೇ ಫೆಬ್ರವರಿ, 2024 ರಂದು ಬೆಳಿಗ್ಗೆ 10 ಗಂಟೆಗೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ವಿಜ್ಞಾನ ಭವನದಲ್ಲಿ ಉದ್ಘಾಟಿಸಲಿದ್ದಾರೆ. ಈ ಸಂದರ್ಭದಲ್ಲಿ ಪ್ರಧಾನಮಂತ್ರಿಯವರು ಸಭೆಯನ್ನು ಉದ್ದೇಶಿಸಿ ಭಾಷಣ ಮಾಡಲಿದ್ದಾರೆ.

ಪಿಎಂ-ಜನ್ ಮನ್ ಯೋಜನೆಯಡಿ ಪಿಎಂಎವೈ(ಜಿ)ಯ 1 ಲಕ್ಷ ಫಲಾನುಭವಿಗಳಿಗೆ ಮೊದಲ ಕಂತಿನ ಬಿಡುಗಡೆ ಕಾರ್ಯಕ್ರಮ ಉದ್ದೇಶಿಸಿ ಪ್ರಧಾನ ಮಂತ್ರಿ ಭಾಷಣ

January 15th, 12:15 pm

ಎಲ್ಲರಿಗೂ ಶುಭಾಶಯಗಳು! ಪ್ರಸ್ತುತ ಉತ್ತರಾಯಣ, ಮಕರ ಸಂಕ್ರಾಂತಿ, ಪೊಂಗಲ್ ಮತ್ತು ಬಿಹು ಹಬ್ಬದ ಆಚರಣೆಯ ವಾತಾವರಣವು ಇಡೀ ದೇಶವನ್ನು ವ್ಯಾಪಿಸಿದೆ. ಹಲವಾರು ಹಬ್ಬಗಳ ಸಂಭ್ರಮ ನಮ್ಮನ್ನು ಆವರಿಸಿದೆ. ಇಂದಿನ ಈ ಕಾರ್ಯಕ್ರಮದ ಉತ್ಸಾಹಕ್ಕೆ ಹೆಚ್ಚಿನ ಭವ್ಯತೆ ಮತ್ತು ಲವಲವಿಕೆಯನ್ನು ಸೇರಿಸಿದೆ. ಈ ಸಂದರ್ಭದಲ್ಲಿ ನಿಮ್ಮೊಂದಿಗೆ ಸಂವಹನ ನಡೆಸುವುದು ನನಗೆ ಸಂಭ್ರಮಾಚರಣೆಯಂತೆ ಭಾಸವಾಗುತ್ತಿದೆ. ಪ್ರಸ್ತುತ, ಅಯೋಧ್ಯೆಯಲ್ಲಿ ಹಬ್ಬಗಳು ತೆರೆದುಕೊಳ್ಳುತ್ತಿವೆ, ಅದೇ ಸಮಯದಲ್ಲಿ, ನನ್ನ ಕುಟುಂಬದ ಭಾಗವೆಂದು ಪರಿಗಣಿಸಲ್ಪಟ್ಟ ಒಂದು ಲಕ್ಷ ಅತ್ಯಂತ ಹಿಂದುಳಿದ ಬುಡಕಟ್ಟು ಸಹೋದರರು ಮತ್ತು ಸಹೋದರಿಯರು ತಮ್ಮ ಮನೆಗಳಲ್ಲಿ ಸಂತೋಷದಿಂದ ಹಬ್ಬ ಆಚರಿಸುತ್ತಿದ್ದಾರೆ. ಇದು ನನಗೆ ಅಪಾರ ಸಂತೋಷ ತರುತ್ತಿದೆ. ಇಂದು ಅವರ ಪಕ್ಕಾ ಮನೆಗಳ ನಿರ್ಮಾಣಕ್ಕಾಗಿ ಅವರ ಬ್ಯಾಂಕ್ ಖಾತೆಗಳಿಗೆ ಹಣ ವರ್ಗಾವಣೆಯಾಗಿದೆ. ನಾನು ಈ ಎಲ್ಲಾ ಕುಟುಂಬಗಳಿಗೆ ನನ್ನ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆ, ಅವರಿಗೆ ಸಂತೋಷದ ಮಕರ ಸಂಕ್ರಾಂತಿಯ ಶುಭಾಶಯಗಳನ್ನು ಕೋರುತ್ತೇನೆ! ಈ ಉದಾತ್ತ ಪ್ರಯತ್ನದಲ್ಲಿ ಪ್ರಮುಖ ಪಾತ್ರ ವಹಿಸಲು ನನಗೆ ಸಿಕ್ಕಿರುವ ಅವಕಾಶವು ನನ್ನ ಜೀವನದಲ್ಲಿ ಬಹಳ ಸಂತೋಷ ತಂದಿದೆ.

​​​​​​​ʻಪಿಎಂ-ಜನಮನʼ ಯೋಜನೆಯಡಿ 1 ಲಕ್ಷ ʻಪಿಎಂಎವೈ(ಜಿ)ʼ ಫಲಾನುಭವಿಗಳಿಗೆ ಮೊದಲ ಕಂತನ್ನು ಬಿಡುಗಡೆ ಮಾಡಿದ ಪ್ರಧಾನಿ

January 15th, 12:00 pm

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ʻಪ್ರಧಾನಮಂತ್ರಿ ಜನಜಾತಿ ಆದಿವಾಸಿ ನ್ಯಾಯ ಮಹಾ ಅಭಿಯಾನ’ದ (ಪಿಎಂ-ಜನಮನ) ಅಡಿಯಲ್ಲಿ ʻಪ್ರಧಾನ ಮಂತ್ರಿ ಗ್ರಾಮೀಣ ಆವಾಸ್ ಯೋಜನೆʼಯ(ಪಿಎಂಎವೈ-ಜಿ)ʼ 1 ಲಕ್ಷ ಫಲಾನುಭವಿಗಳಿಗೆ ಮೊದಲ ಕಂತನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ಬಿಡುಗಡೆ ಮಾಡಿದರು. ಈ ಸಂದರ್ಭದಲ್ಲಿ ಪ್ರಧಾನಮಂತ್ರಿಯವರು ʻಪಿಎಂ-ಜನಮನʼ ಫಲಾನುಭವಿಗಳೊಂದಿಗೆ ಸಂವಾದ ನಡೆಸಿದರು.

​​​​​​​ಅಖಿಲ ಭಾರತ ಮಹಾನಿರ್ದೇಶಕರು/ ಪೊಲೀಸ್ ಮಹಾನಿರೀಕ್ಷಕರ ಸಮ್ಮೇಳನದಲ್ಲಿ ಪ್ರಧಾನಮಂತ್ರಿ ಭಾಗಿ

January 07th, 08:34 pm

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2024 ರ ಜನವರಿ 6 ಮತ್ತು 7 ರಂದು ಜೈಪುರದ ರಾಜಸ್ಥಾನ ಇಂಟರ್‌ ನ್ಯಾಷನಲ್‌ ಸೆಂಟರ್‌ನಲ್ಲಿ ಡೈರೆಕ್ಟರ್ ಜನರಲ್‌ಗಳು / ಇನ್‌ಸ್ಪೆಕ್ಟರ್ ಜನರಲ್‌ಗಳ 58 ನೇ ಅಖಿಲ ಭಾರತ ಸಮ್ಮೇಳನದಲ್ಲಿ ಭಾಗವಹಿಸಿದರು.

There is continuous progress in bilateral trade, investment between India and Kenya: PM Modi

December 05th, 01:33 pm

Addressing the event during the visit of the President of Kenya to India, PM Modi said, Africa has always been given high priority in India's foreign policy. Over the past decade, we have strengthened our collaboration with Africa in mission mode. I am confident that President Ruto's visit will not only enhance our bilateral relations but also provide new impetus to our engagement with the entire African continent.