ʻಗ್ರ್ಯಾಂಡ್ ಕಮಾಂಡರ್ ಆಫ್ ದಿ ಆರ್ಡರ್ ಆಫ್ ನೈಜರ್ʼ ಪ್ರಶಸ್ತಿ ಸ್ವೀಕಾರ ಕುರಿತು ಪ್ರಧಾನಮಂತ್ರಿಯವರ ಭಾಷಣದ ಕನ್ನಡ ಅನುವಾದ

November 17th, 08:30 pm

ನೈಜೀರಿಯಾದ ರಾಷ್ಟ್ರೀಯ ಪ್ರಶಸ್ತಿಯಾದ ʻಗ್ರ್ಯಾಂಡ್ ಕಮಾಂಡರ್ ಆಫ್ ದಿ ಆರ್ಡರ್ ಆಫ್ ದಿ ನೈಜರ್ʼ ಅನ್ನು ನನಗೆ ನೀಡಿ ಗೌರವಿಸಿದ್ದಕ್ಕಾಗಿ ನಾನು ನಿಮಗೆ, ನಿಮ್ಮ ಸರ್ಕಾರಕ್ಕೆ ಮತ್ತು ನೈಜೀರಿಯಾದ ಜನರಿಗೆ ನನ್ನ ಹೃತ್ಪೂರ್ವಕ ಕೃತಜ್ಞತೆಯನ್ನು ಅರ್ಪಿಸುತ್ತೇನೆ. ನಾನು ಈ ಗೌರವವನ್ನು ನಮ್ರತೆ ಮತ್ತು ಗೌರವದಿಂದ ಸ್ವೀಕರಿಸುತ್ತೇನೆ. ಮತ್ತು ನಾನು ಈ ಗೌರವವನ್ನು ಭಾರತದ 1.4 ಶತಕೋಟಿ ಜನರಿಗೆ ಹಾಗೂ ಭಾರತ ಮತ್ತು ನೈಜೀರಿಯಾ ನಡುವಿನ ಶಾಶ್ವತ ಸ್ನೇಹಕ್ಕೆ ಅರ್ಪಿಸುತ್ತೇನೆ. ಈ ಗೌರವವು ಭಾರತ ಮತ್ತು ನೈಜೀರಿಯಾ ನಡುವಿನ ವ್ಯೂಹಾತ್ಮಕ ಪಾಲುದಾರಿಕೆಯನ್ನು ಹೊಸ ಎತ್ತರಕ್ಕೆ ಕೊಂಡೊಯ್ಯಲು ನಮಗೆ ಸ್ಫೂರ್ತಿ ನೀಡುತ್ತದೆ.

ಪ್ರಧಾನ ಮಂತ್ರಿಯವರಿಗೆ "ಗ್ರ್ಯಾಂಡ್ ಕಮಾಂಡರ್ ಆಫ್ ದಿ ಆರ್ಡರ್ ಆಫ್ ನೈಜರ್" ಎಂಬ ರಾಷ್ಟ್ರೀಯ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು

November 17th, 08:11 pm

ಸ್ಟೇಟ್ ಹೌಸ್ ನಲ್ಲಿ ನಡೆದ ಸಮಾರಂಭದಲ್ಲಿ, ನೈಜೀರಿಯಾ ಫೆಡರಲ್ ರಿಪಬ್ಲಿಕ್ ನ ಅಧ್ಯಕ್ಷರಾದ ಗೌರವಾನ್ವಿತ ಶ್ರೀ ಬೋಲಾ ಅಹ್ಮದ್ ಟಿನುಬು ಅವರು ಭಾರತ-ನೈಜೀರಿಯಾ ಸಂಬಂಧಗಳನ್ನು ಬೆಳೆಸುವಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ ರಾಜನೀತಿ ಮತ್ತು ಅದ್ಭುತ ಕೊಡುಗೆಗಾಗಿ ಅವರಿಗೆ ಗ್ರ್ಯಾಂಡ್ ಕಮಾಂಡರ್ ಆಫ್ ದಿ ಆರ್ಡರ್ ಆಫ್ ನೈಜರ್ ಎಂಬ ರಾಷ್ಟ್ರೀಯ ಪ್ರಶಸ್ತಿಯನ್ನು ಪ್ರದಾನ ಮಾಡಿದರು. ಪ್ರಧಾನ ಮಂತ್ರಿಯವರ ದೂರದೃಷ್ಟಿಯ ನಾಯಕತ್ವದಲ್ಲಿ ಭಾರತವು ಜಾಗತಿಕ ಶಕ್ತಿಕೇಂದ್ರವಾಗಿ ಸ್ಥಾನ ಪಡೆದಿದ್ದು, ಅವರ ಪರಿವರ್ತನಾತ್ಮಕ ಆಡಳಿತವು ಎಲ್ಲರಿಗೂ ಏಕತೆ, ಶಾಂತಿ ಮತ್ತು ಹಂಚಿಕೆಯ ಪ್ರವೃತ್ತಿಯನ್ನು ಬೆಳೆಸುವಲ್ಲಿ ಸಹಕಾರಿಯಾಗಿದೆ ಎಂದು ಪ್ರಶಸ್ತಿಯ ಉಲ್ಲೇಖವು ಹೇಳುತ್ತದೆ.

ನೈಜೀರಿಯಾ ಅಧ್ಯಕ್ಷರೊಂದಿಗೆ ಪ್ರಧಾನಮಂತ್ರಿ ಅಧಿಕೃತ ಮಾತುಕತೆ

November 17th, 06:41 pm

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 17-18 ನವೆಂಬರ್ 2024 ರಿಂದ ನೈಜೀರಿಯಾಕ್ಕೆ ಪ್ರವಾಸ ಕೈಗೊಳ್ಳಲಿದ್ದಾರೆ. ಅವರು ನೈಜೀರಿಯಾದ ಅಧ್ಯಕ್ಷ ಶ್ರೀ ಬೋಲಾ ಅಹ್ಮದ್ ಟಿನುಬು ಅವರೊಂದಿಗೆ ಅವರೊಂದಿಗೆ ಅಧಿಕೃತ ಮಾತುಕತೆ ನಡೆಸಿದರು. ಇಂದು ಅಬುಜಾದಲ್ಲಿ ರಾಜ್ಯ ಭವನಕ್ಕೆ ಆಗಮಿಸಿದ ಪ್ರಧಾನಿಯವರಿಗೆ 21 ಗನ್ ಸೆಲ್ಯೂಟ್‌ನೊಂದಿಗೆ ವಿಧ್ಯುಕ್ತ ಸ್ವಾಗತ ನೀಡಲಾಯಿತು.

PM Modi arrives in Abuja, Nigeria

November 17th, 02:00 am

Prime Minister Narendra Modi arrived in Abuja, Nigeria. This is the Prime Minister's first visit to Nigeria. During the visit, PM Modi will hold talks with President Bola Ahmed Tinubu. He will also interact with the Indian community.

ನೈಜೀರಿಯಾ, ಬ್ರೆಜಿಲ್ ಮತ್ತು ಗಯಾನಾ ದೇಶಗಳಿಗೆ ಐದು ದಿನಗಳ ಭೇಟಿಗೆ ತೆರಳುವ ಮುನ್ನಾ ಹೇಳಿಕೆ ನೀಡಿದ ಪ್ರಧಾನಮಂತ್ರಿ

November 16th, 12:45 pm

ಪಶ್ಚಿಮ ಆಫ್ರಿಕಾದಲ್ಲಿರುವ ನಮ್ಮ ದೇಶದ ನಿಕಟ ಪಾಲುದಾರರಾಗಿರುವ ನೈಜೀರಿಯಾಕ್ಕೆ, ಘನತೆವೆತ್ತ ಅಧ್ಯಕ್ಷ ಶ್ರೀ ಬೋಲಾ ಅಹ್ಮದ್ ಟಿನುಬು ಅವರ ಆಹ್ವಾನದ ಮೇರೆಗೆ ಭೇಟಿ ನೀಡುತ್ತಿದ್ದೇನೆ. ಇದು ಆ ದೇಶಕ್ಕೆ ನನ್ನ ಮೊದಲ ಭೇಟಿಯಾಗಿದೆ. ನನ್ನ ಭೇಟಿಯು ಪ್ರಜಾಪ್ರಭುತ್ವ ಮತ್ತು ಬಹುತ್ವದಲ್ಲಿ ಹಂಚಿಕೊಂಡ ನಂಬಿಕೆಯನ್ನು ಆಧರಿಸಿದ ನಮ್ಮ ಕಾರ್ಯತಂತ್ರದ ಪಾಲುದಾರಿಕೆಯನ್ನು ಇನ್ನೂ ಸಧೃಡಗೊಳಿಸಲು ಮತ್ತು ಇನ್ನೂ ಉತ್ತಮವಾಗಿ ನಿರ್ಮಿಸಲು ಒಂದು ಅವಕಾಶವಾಗಿದೆ.

ನೈಜೀರಿಯಾ, ಬ್ರೆಜಿಲ್ ಮತ್ತು ಗಯಾನಾಗೆ ಪ್ರಧಾನಿ ಮೋದಿ ಭೇಟಿ ನೀಡಲಿದ್ದಾರೆ

November 12th, 07:44 pm

ಪ್ರಧಾನಿ ನರೇಂದ್ರ ಮೋದಿ ಅವರು ನವೆಂಬರ್ 16-21 ರವರೆಗೆ ನೈಜೀರಿಯಾ, ಬ್ರೆಜಿಲ್ ಮತ್ತು ಗಯಾನಾಗೆ ಅಧಿಕೃತ ಪ್ರವಾಸವನ್ನು ಕೈಗೊಳ್ಳಲಿದ್ದಾರೆ. ನೈಜೀರಿಯಾದಲ್ಲಿ, ಅವರು ಕಾರ್ಯತಂತ್ರದ ಪಾಲುದಾರಿಕೆಯನ್ನು ಬಲಪಡಿಸಲು ಮತ್ತು ಭಾರತೀಯ ಸಮುದಾಯವನ್ನು ಉದ್ದೇಶಿಸಿ ಉನ್ನತ ಮಟ್ಟದ ಚರ್ಚೆಗಳಲ್ಲಿ ತೊಡಗುತ್ತಾರೆ. ಬ್ರೆಜಿಲ್‌ನಲ್ಲಿ ಅವರು ಜಿ20 ಶೃಂಗಸಭೆಯಲ್ಲಿ ಭಾಗವಹಿಸಲಿದ್ದಾರೆ. ಗಯಾನಾದಲ್ಲಿ, ಪ್ರಧಾನ ಮಂತ್ರಿಗಳು ಹಿರಿಯ ನಾಯಕರೊಂದಿಗೆ ಮಾತುಕತೆ ನಡೆಸುತ್ತಾರೆ, ಸಂಸತ್ತನ್ನು ಉದ್ದೇಶಿಸಿ ಮಾತನಾಡುತ್ತಾರೆ ಮತ್ತು ಕ್ಯಾರಿಕಾಮ್-ಭಾರತ ಶೃಂಗಸಭೆಯಲ್ಲಿ ಭಾಗವಹಿಸುತ್ತಾರೆ, ಕೆರಿಬಿಯನ್ ಪ್ರದೇಶದೊಂದಿಗೆ ಬಾಂಧವ್ಯವನ್ನು ಗಾಢಗೊಳಿಸುವ ಭಾರತದ ಬದ್ಧತೆಯನ್ನು ಒತ್ತಿಹೇಳಿದ್ದಾರೆ.

ನೈಜೀರಿಯಾ ಗಣರಾಜ್ಯ ಒಕ್ಕೂಟದ ಅಧ್ಯಕ್ಷರೊಂದಿಗೆ ಸಭೆ ನಡೆಸಿದ ಪ್ರಧಾನಮಂತ್ರಿ

September 10th, 07:51 pm

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ನೈಜೀರಿಯಾ ಗಣರಾಜ್ಯ ಒಕ್ಕೂಟದ ಅಧ್ಯಕ್ಷರಾದ ಗೌರವಾನ್ವಿತ ‍ಶ್ರೀ ಬೋಲಾ ಅಹ್ಮದ್‌ ತಿನುಬು ಅವರೊಂದಿಗೆ ಜಿ-20 ಶೃಂಗಸಭೆ ಅಂಗವಾಗಿ ನವದೆಹಲಿಯಲ್ಲಿ 2023 ಸೆಪ್ಟೆಂಬರ್ 10 ರಂದು ಸಭೆ ನಡೆಸಿದರು.