ಶ್ರೀ ಬಿಸ್ವಾ ಬಂಧು ಸೇನ್ ಅವರ ನಿಧನಕ್ಕೆ ಪ್ರಧಾನಮಂತ್ರಿ ಸಂತಾಪ

December 26th, 11:46 am

ತ್ರಿಪುರಾ ವಿಧಾನಸಭೆಯ ಸ್ಪೀಕರ್ ಶ್ರೀ ಬಿಸ್ವಾ ಬಂಧು ಸೇನ್ ಅವರ ನಿಧನಕ್ಕೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಸಂತಾಪ ಸೂಚಿಸಿದ್ದಾರೆ. ತ್ರಿಪುರಾ ರಾಜ್ಯದ ಪ್ರಗತಿ ಮತ್ತು ಹಲವಾರು ಸಾಮಾಜಿಕ ಉದ್ದೇಶಗಳಿಗೆ ಬದ್ಧತೆಯನ್ನು ಹೆಚ್ಚಿಸಲು ಅವರು ಮಾಡಿದ ಪ್ರಯತ್ನಗಳಿಗಾಗಿ ಅವರನ್ನು ಸ್ಮರಿಸಲಾಗುವುದು ಎಂದು ಶ್ರೀ ಮೋದಿ ಹೇಳಿದ್ದಾರೆ.