ಪಾಟ್ನಾ ಪಕ್ಷಿಧಾಮ ಮತ್ತು ಛಾರಿ-ಧಂಡ್ ನಲ್ಲಿ ಹೊಸ ರಾಮ್ಸರ್ ತಾಣಗಳನ್ನು ಸ್ವಾಗತಿಸಿದ ಪ್ರಧಾನಮಂತ್ರಿ

January 31st, 10:52 am

ಇಟಾಹ್ (ಉತ್ತರ ಪ್ರದೇಶ)ದ ಪಟ್ನಾ ಪಕ್ಷಿಧಾಮ ಮತ್ತು ಗುಜರಾತ್ ಕಚ್ ನ ಛಾರಿ-ಧಂಡ್ ಅನ್ನು ರಾಮ್ಸಾರ್ ತಾಣಗಳಾಗಿ ಸೇರ್ಪಡೆ ಮಾಡಿರುವುದನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಸ್ವಾಗತಿಸಿದ್ದಾರೆ. ಸ್ಥಳೀಯ ಜನಸಂಖ್ಯೆ ಮತ್ತು ಜೌಗು ಭೂಮಿ ಸಂರಕ್ಷಣೆಯ ಬಗ್ಗೆ ಉತ್ಸುಕರಾಗಿರುವ ಎಲ್ಲರಿಗೂ ಅಭಿನಂದನೆ ಸಲ್ಲಿಸಿದ ಶ್ರೀ ನರೇಂದ್ರ ಮೋದಿ ಅವರು, ಈ ಮಾನ್ಯತೆಗಳು ಜೀವವೈವಿಧ್ಯತೆಯನ್ನು ಸಂರಕ್ಷಿಸುವ ಮತ್ತು ಪ್ರಮುಖ ಪರಿಸರ ವ್ಯವಸ್ಥೆಗಳನ್ನು ರಕ್ಷಿಸುವ ನಮ್ಮ ಬದ್ಧತೆಯನ್ನು ಪುನರುಚ್ಚರಿಸುತ್ತವೆ ಎಂದು ಹೇಳಿದರು.

ತಮಿಳುನಾಡಿನ ಕೊಯಮತ್ತೂರಿನಲ್ಲಿ ನಡೆದ ದಕ್ಷಿಣ ಭಾರತ ನೈಸರ್ಗಿಕ ಕೃಷಿ ಶೃಂಗಸಭೆ-2025 ಉದ್ದೇಶಿಸಿ ಪ್ರಧಾನಮಂತ್ರಿ ಭಾಷಣ

November 19th, 07:01 pm

ತಮಿಳುನಾಡು ರಾಜ್ಯಪಾಲರಾದ ಆರ್.ಎನ್. ರವಿ ಜಿ, ಕೇಂದ್ರ ಸಚಿವ ಸಂಪುಟದ ನನ್ನ ಸಹೋದ್ಯೋಗಿ ಎಲ್. ಮುರುಗನ್ ಜಿ, ತಮಿಳುನಾಡು ಕೃಷಿ ವಿಶ್ವವಿದ್ಯಾಲಯದ ಮಾಜಿ ಉಪಕುಲಪತಿ ಡಾ. ಕೆ. ರಾಮಸಾಮಿ ಜಿ, ವಿವಿಧ ಕೃಷಿ ಸಂಸ್ಥೆಗಳ ಎಲ್ಲಾ ಗಣ್ಯರೆ, ಇಲ್ಲಿ ಉಪಸ್ಥಿತರಿರುವ ಇತರೆ ಜನಪ್ರತಿನಿಧಿಗಳೆ, ನನ್ನ ಪ್ರೀತಿಯ ರೈತ ಸಹೋದರ ಸಹೋದರಿಯರೆ ಮತ್ತು ಡಿಜಿಟಲ್ ತಂತ್ರಜ್ಞಾನದ ಮೂಲಕ ನಮ್ಮೊಂದಿಗೆ ಸೇರಿಕೊಂಡಿರುವ ದೇಶಾದ್ಯಂತದ ಲಕ್ಷಾಂತರ ರೈತರೆ! ನಾನು ನಿಮ್ಮೆಲ್ಲರಿಗೂ ವಣಕ್ಕಂ ಮತ್ತು ನಮಸ್ಕಾರದೊಂದಿಗೆ ಶುಭಾಶಯ ಕೋರುತ್ತೇನೆ. ಮೊದಲನೆಯದಾಗಿ, ಇಲ್ಲಿರುವ ನಿಮ್ಮೆಲ್ಲರಿಗೂ ಮತ್ತು ದೇಶಾದ್ಯಂತದ ನನ್ನ ಎಲ್ಲಾ ರೈತ ಸಹೋದರ ಸಹೋದರಿಯರಿಗೂ ಕ್ಷಮೆ ಯಾಚಿಸಲು ಬಯಸುತ್ತೇನೆ. ಇಂದು ಬೆಳಗ್ಗೆ ನಾನು ಸತ್ಯಸಾಯಿ ಬಾಬಾ ಅವರಿಗೆ ಮೀಸಲಾದ ಪುಟ್ಟಪರ್ತಿ ಕಾರ್ಯಕ್ರಮದಲ್ಲಿದ್ದೆ, ಅಲ್ಲಿ ನಡೆದ ಕಾರ್ಯಕ್ರಮ ನಿರೀಕ್ಷೆಗಿಂತ ಹೆಚ್ಚು ಸಮಯ ನಡೆದ ಕಾರಣ ನಾನು ಇಲ್ಲಿಗೆ ತಲುಪಲು ಸುಮಾರು 1 ತಾಸು ತಡವಾಯಿತು. ಅದರಿಂದ ನಾನಿಲ್ಲಿಗೆ ಬರುವುದು ತಡವಾಯಿತು. ಇದರಿಂದ ನಿಮಗೆ ಉಂಟಾಗಿರಬಹುದಾದ ಯಾವುದೇ ಅನನುಕೂಲತೆಗಾಗಿ ನಾನು ಪ್ರಾಮಾಣಿಕವಾಗಿ ಕ್ಷಮೆ ಯಾಚಿಸುತ್ತೇನೆ. ದೇಶಾದ್ಯಂತ ಅನೇಕ ಜನರು ಕಾಯುತ್ತಿರುವುದನ್ನು ನಾನು ನೋಡುತ್ತಿದ್ದೇನೆ, ಆದ್ದರಿಂದ ನಾನು ನಿಮ್ಮ ಕ್ಷಮೆ ಕೋರುತ್ತೇನೆ.

ತಮಿಳುನಾಡಿನ ಕೊಯಮತ್ತೂರಿನಲ್ಲಿ ನಡೆದ ದಕ್ಷಿಣ ಭಾರತ ನೈಸರ್ಗಿಕ ಕೃಷಿ ಶೃಂಗಸಭೆ 2025 ಅನ್ನು ಉದ್ದೇಶಿಸಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಮಾತನಾಡಿದರು

November 19th, 02:30 pm

ತಮಿಳುನಾಡಿನ ಕೊಯಮತ್ತೂರಿನಲ್ಲಿ ಇಂದು ನಡೆದ ದಕ್ಷಿಣ ಭಾರತ ನೈಸರ್ಗಿಕ ಕೃಷಿ ಶೃಂಗಸಭೆ 2025 ಅನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಉದ್ಘಾಟಿಸಿದರು. ಪ್ರಧಾನಮಂತ್ರಿಯವರು ಕೊಯಮತ್ತೂರಿನ ಪವಿತ್ರ ನೆಲದಲ್ಲಿ ಮರುಧಮಲೈ ಮುರುಗನ್ ದೇವರಿಗೆ ನಮಸ್ಕಾರ ಸಲ್ಲಿಸುವ ಮೂಲಕ ತಮ್ಮ ಭಾಷಣವನ್ನು ಪ್ರಾರಂಭಿಸಿದರು. ಕೊಯಮತ್ತೂರು ಸಂಸ್ಕೃತಿ, ಸಹಾನುಭೂತಿ ಮತ್ತು ಸೃಜನಶೀಲತೆಯ ಭೂಮಿ ಎಂದು ಅವರು ಬಣ್ಣಿಸಿದರು ಮತ್ತು ಅದು ದಕ್ಷಿಣ ಭಾರತದ ಉದ್ಯಮಶೀಲ ಶಕ್ತಿಯ ಕೇಂದ್ರವಾಗಿದೆ ಎಂದು ಹೇಳಿದರು. ನಗರದ ಜವಳಿ ವಲಯವು ರಾಷ್ಟ್ರೀಯ ಆರ್ಥಿಕತೆಗೆ ಪ್ರಮುಖ ಕೊಡುಗೆ ನೀಡುತ್ತಿದೆ ಎಂದು ಅವರು ಒತ್ತಿ ಹೇಳಿದರು. ಕೊಯಮತ್ತೂರಿನ ಮಾಜಿ ಸಂಸದರಾದ ಶ್ರೀ ಸಿ.ಪಿ. ರಾಧಾಕೃಷ್ಣನ್ ಅವರು ಈಗ ಉಪರಾಷ್ಟ್ರಪತಿಯಾಗಿ ದೇಶಕ್ಕೆ ಮಾರ್ಗದರ್ಶನ ನೀಡುತ್ತಿರುವುದರಿಂದ ಕೊಯಮತ್ತೂರು ಈಗ ಮತ್ತಷ್ಟು ಹೆಗ್ಗಳಿಕೆಗೆ ಪಾತ್ರವಾಗಿದೆ ಎಂದು ಪ್ರಧಾನಮಂತ್ರಿ ಹೇಳಿದರು.

ನವದೆಹಲಿಯಲ್ಲಿ ಆಯೋಜಿತವಾಗಿದ್ದ ಎಂ.ಎಸ್. ಸ್ವಾಮಿನಾಥನ್ ಶತಮಾನೋತ್ಸವ ಅಂತಾರಾಷ್ಟ್ರೀಯ ಸಮ್ಮೇಳನ ಉದ್ದೇಶಿಸಿ ಪ್ರಧಾನಮಂತ್ರಿ ಭಾಷಣ

August 07th, 09:20 am

ನನ್ನ ಸಂಪುಟ ಸಹೋದ್ಯೋಗಿ ಶ್ರೀ ಶಿವರಾಜ್ ಸಿಂಗ್ ಚೌಹಾಣ್, ಎಂ.ಎಸ್. ಸ್ವಾಮಿನಾಥನ್ ಸಂಶೋಧನಾ ಪ್ರತಿಷ್ಠಾನದ ಅಧ್ಯಕ್ಷೆ ಡಾ. ಸೌಮ್ಯ ಸ್ವಾಮಿನಾಥನ್, ನೀತಿ ಆಯೋಗದ ಸದಸ್ಯ ಡಾ. ರಮೇಶ್ ಚಂದ್, ಸ್ವಾಮಿನಾಥನ್ ಕುಟುಂಬದ ಅನೇಕ ಸದಸ್ಯರು ಇಲ್ಲಿ ಉಪಸ್ಥಿತರಿರುವುದನ್ನು ನಾನು ನೋಡಿದ್ದೇನೆ - ನಾನು ಅವರಿಗೂ ನನ್ನ ಗೌರವಯುತ ಶುಭಾಶಯಗಳನ್ನು ಸಲ್ಲಿಸುತ್ತೇನೆ. ಇಲ್ಲಿ ನೆರೆದಿರುವ ಎಲ್ಲಾ ವಿಜ್ಞಾನಿಗಳೆ, ಗೌರವಾನ್ವಿತ ಅತಿಥಿಗಳೆ, ಮಹಿಳೆಯರೆ ಮತ್ತು ಮಹನೀಯರೆ!

ಎಂ.ಎಸ್. ಸ್ವಾಮಿನಾಥನ್ ಶತಮಾನೋತ್ಸವ ಅಂತಾರಾಷ್ಟ್ರೀಯ ಸಮ್ಮೇಳನ ಉದ್ದೇಶಿಸಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಭಾಷಣ

August 07th, 09:00 am

ನಿತ್ಯಹರಿದ್ವರ್ಣ ಕ್ರಾಂತಿ, ಜೈವಿಕ ಸಂತೋಷಕ್ಕೆ ಹಾದಿ ಎಂಬ ಸಮ್ಮೇಳನದ ವಿಷಯವು ಸರ್ವರಿಗೂ ಆಹಾರವನ್ನು ಖಾತ್ರಿಪಡಿಸುವಲ್ಲಿ ಪ್ರೊ. ಸ್ವಾಮಿನಾಥನ್ ಅವರ ಜೀವಮಾನದ ಸಮರ್ಪಣೆಯನ್ನು ಪ್ರತಿಬಿಂಬಿಸುತ್ತದೆ. ಈ ಸಮ್ಮೇಳನವು ವಿಜ್ಞಾನಿಗಳು, ನೀತಿ ನಿರೂಪಕರು, ಅಭಿವೃದ್ಧಿ ವೃತ್ತಿಪರರು ಮತ್ತು ಇತರ ಮಧ್ಯಸ್ಥಗಾರರಿಗೆ 'ನಿತ್ಯಹರಿದ್ವರ್ಣ ಕ್ರಾಂತಿ'ಯ ತತ್ವಗಳನ್ನು ಮುಂದುವರಿಸುವ ಬಗ್ಗೆ ಚರ್ಚಿಸಲು ಮತ್ತು ಸಮಾಲೋಚಿಸಲು ಅವಕಾಶ ಒದಗಿಸುತ್ತದೆ. ಸಮ್ಮೇಳನದ ಪ್ರಮುಖ ವಿಷಯಗಳಲ್ಲಿ - ಜೀವವೈವಿಧ್ಯತೆ ಮತ್ತು ನೈಸರ್ಗಿಕ ಸಂಪನ್ಮೂಲಗಳ ಸುಸ್ಥಿರ ನಿರ್ವಹಣೆ; ಆಹಾರ ಮತ್ತು ಪೌಷ್ಠಿಕಾಂಶದ ಭದ್ರತೆಗಾಗಿ ಸುಸ್ಥಿರ ಕೃಷಿ; ಹವಾಮಾನ ಬದಲಾವಣೆಗೆ ಹೊಂದಿಕೊಳ್ಳುವ ಮೂಲಕ ಹವಾಮಾನ ಸ್ಥಿತಿಸ್ಥಾಪಕತ್ವವನ್ನು ಬಲಪಡಿಸುವುದು; ಸುಸ್ಥಿರ ಮತ್ತು ಸಮಾನ ಜೀವನೋಪಾಯಕ್ಕಾಗಿ ಸೂಕ್ತ ತಂತ್ರಜ್ಞಾನಗಳನ್ನು ಬಳಸುವುದು; ಮತ್ತು ಅಭಿವೃದ್ಧಿಯ ಚರ್ಚೆಗಳಲ್ಲಿ ಯುವಕರು, ಮಹಿಳೆಯರು ಮತ್ತು ಸಮಾಜದ ಅಂಚಿನಲ್ಲಿರುವ ಸಮುದಾಯಗಳನ್ನು ತೊಡಗಿಸಿಕೊಳ್ಳುವುದು ಮುಂತಾದವು ಸೇರಿವೆ.

ಪ್ರಧಾನಮಂತ್ರಿ ಅವರಿಂದ ನವದೆಹಲಿಯಲ್ಲಿ ಆಗಸ್ಟ್ 7ರಂದು ಎಂ.ಎಸ್. ಸ್ವಾಮಿನಾಥನ್ ಶತಮಾನೋತ್ಸವ ಅಂತಾರಾಷ್ಟ್ರೀಯ ಸಮ್ಮೇಳನ ಉದ್ಘಾಟನೆ

August 06th, 12:20 pm

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಆಗಸ್ಟ್ 7 ರಂದು ಬೆಳಿಗ್ಗೆ 9 ಗಂಟೆಗೆ ನವದೆಹಲಿಯ ಐಸಿಎಆರ್ ಪುಸಾದಲ್ಲಿ ಎಂ.ಎಸ್. ಸ್ವಾಮಿನಾಥನ್ ಶತಮಾನೋತ್ಸವ ಅಂತಾರಾಷ್ಟ್ರೀಯ ಸಮ್ಮೇಳನವನ್ನು ಉದ್ಘಾಟಿಸಲಿದ್ದಾರೆ. ಈ ಸಂದರ್ಭದಲ್ಲಿ ಅವರು ಸಭೆಯನ್ನುದ್ದೇಶಿಸಿ ಮಾತನಾಡಲಿದ್ದಾರೆ.

ಜಾಗತಿಕ ವೇದಿಕೆಯಲ್ಲಿ ಭಾರತೀಯ ಸಂಸ್ಕೃತಿಯನ್ನು ಪ್ರಚುರಪಡಿಸಿದ ಜರ್ಮನ್ ಗಾಯಕಿ ಶ್ರೀಮತಿ ಕ್ಯಾಸ್ ಮೇ ಅವರಿಗೆ ಪ್ರಧಾನಮಂತ್ರಿ ಶ್ಲಾಘನೆ

March 18th, 03:25 pm

ಜಾಗತಿಕ ವೇದಿಕೆಯಲ್ಲಿ ಭಾರತೀಯ ಸಂಸ್ಕೃತಿಯನ್ನು ಪ್ರಚಾರ ಮಾಡಿದ್ದಕ್ಕಾಗಿ ಜರ್ಮನ್ ಗಾಯಕಿ ಶ್ರೀಮತಿ ಕ್ಯಾಸ್ ಮೇ ಅವರನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಶ್ಲಾಘಿಸಿದ್ದಾರೆ.

ವಿಶ್ವ ವನ್ಯಜೀವಿ ದಿನದ ನಿಮಿತ್ತ ನಮ್ಮ ಭೂಗ್ರಹದ ಅನನ್ಯ ಜೀವವೈವಿಧ್ಯತೆಯನ್ನು ಕಾಪಾಡುವ ಮತ್ತು ಸಂರಕ್ಷಿಸುವ ಬದ್ಧತೆ ಪ್ರಧಾನಮಂತ್ರಿಗಳಿಂದ ಪುನರುಚ್ಚಾರ

March 03rd, 08:37 am

ವಿಶ್ವ ವನ್ಯಜೀವಿ ದಿನದ ಅಂಗವಾಗಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ನಮ್ಮ ಭೂಮಿಯ ಅದ್ಭುತ ಜೀವವೈವಿಧ್ಯತೆಯನ್ನು ಕಾಪಾಡುವ ಮತ್ತು ಸಂರಕ್ಷಿಸುವ ಬದ್ಧತೆಯನ್ನು ಇಂದು ಪುನರುಚ್ಚರಿಸಿದ್ದಾರೆ.

ಜಂಟಿ ಹೇಳಿಕೆ: 7ನೇ ಭಾರತ ಮತ್ತು ಜರ್ಮನಿ ನಡುವಿನ ಅಂತರ್-ಸರ್ಕಾರಿ ಸಮಾಲೋಚನೆಗಳು(ಐಜಿಸಿ)

October 25th, 08:28 pm

ನವದೆಹಲಿಯಲ್ಲಿ 2024 ಅಕ್ಟೋಬರ್ 25ರಂದು ಆಯೋಜಿತವಾಗಿದ್ದ 7ನೇ ಸುತ್ತಿನ ಭಾರತ-ಜರ್ಮನಿ ಅಂತರ್-ಸರ್ಕಾರಿ ಸಮಾಲೋಚನಾ(7ನೇ ಐಜಿಸಿ) ಸಭೆಯಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಮತ್ತು ಜರ್ಮನಿ ಚಾನ್ಸೆಲರ್ ಓಲಾಫ್ ಸ್ಕೋಲ್ಜ್ ಅವರು ಮಾತುಕತೆ ನಡೆಸಿದರು. ಭಾರತದ ನಿಯೋಗದಲ್ಲಿ ರಕ್ಷಣಾ ಸಚಿವಾಲಯ, ವಿದೇಶಾಂಗ ವ್ಯವಹಾರಗಳು, ವಾಣಿಜ್ಯ ಮತ್ತು ಕೈಗಾರಿಕೆಗಳು, ಕಾರ್ಮಿಕ ಮತ್ತು ಉದ್ಯೋಗ, ವಿಜ್ಞಾನ ಮತ್ತು ತಂತ್ರಜ್ಞಾನ(ಎಂಒಎಸ್) ಮತ್ತು ಕೌಶಲ್ಯ ಅಭಿವೃದ್ಧಿ(ಎಂಒಎಸ್) ಸಚಿವಾಲಯಗಳು ಭಾಗವಹಿಸಿದ್ದವು. ಜರ್ಮನಿಯ ನಿಯೋಗದಲ್ಲಿ ಆರ್ಥಿಕ ವ್ಯವಹಾರಗಳು ಮತ್ತು ಹವಾಮಾನ ಕ್ರಮ, ವಿದೇಶಾಂಗ ವ್ಯವಹಾರಗಳು, ಕಾರ್ಮಿಕ ಮತ್ತು ಸಾಮಾಜಿಕ ವ್ಯವಹಾರಗಳು ಮತ್ತು ಶಿಕ್ಷಣ ಮತ್ತು ಸಂಶೋಧನೆ ಸಚಿವಾಲಯಗಳು ಭಾಗವಹಿಸಿದ್ದವು. ಅಲ್ಲದೆ, ಜರ್ಮನಿಯ ಹಣಕಾಸು, ಪರಿಸರ, ಪ್ರಕೃತಿ ಸಂರಕ್ಷಣೆ, ಪರಮಾಣು ಸುರಕ್ಷತೆ ಮತ್ತು ಗ್ರಾಹಕರ ರಕ್ಷಣೆ, ಆರ್ಥಿಕ ಸಹಕಾರ ಮತ್ತು ಅಭಿವೃದ್ಧಿ ಇಲಾಖೆಗಳ ಸಂಸದೀಯ ಕಾರ್ಯದರ್ಶಿಗಳು ಹಾಗೂ ಎರಡೂ ಕಡೆಯ ಹಿರಿಯ ಅಧಿಕಾರಿಗಳು ಸಮಾಲೋಚನಾ ಸಭೆಯಲ್ಲಿ ಭಾಗವಹಿಸಿದ್ದರು.

ಜರ್ಮನ್ ಬ್ಯುಸಿನೆಸಸ್‌ ಕುರಿತಾದ 18ನೇ ಏಷ್ಯಾ ಫೆಸಿಪಿಕ್ ಸಮ್ಮೇಳನ (ಎಪಿಕೆ 2024)ನಲ್ಲಿ ಪ್ರಧಾನಮಂತ್ರಿ ಮಾಡಿದ ಪ್ರಾಸ್ತಾವಿಕ ಭಾಷಣದ ಕನ್ನಡ ಅನುವಾದ

October 25th, 11:20 am

ಮೊದಲ ಭೇಟಿಯು ಅವರು ಮೇಯರ್ ಆಗಿದ್ದಾಗ ಮತ್ತು ನಂತರದ ಮೂರು ಭೇಟಿಗಳು ಅವರು ಚಾನ್ಸೆಲರ್ ಆದ ನಂತರ. ಇದು ಭಾರತ-ಜರ್ಮನಿ ಸಂಬಂಧಗಳ ಮೇಲೆ ಅವರ ಹೆಚ್ಚಿನ ಗಮನ ಹರಿಸುತ್ತಿರುವುದನ್ನು ಎತ್ತಿ ತೋರಿಸುತ್ತದೆ.

Development of Northeast is imperative for a Viksit Bharat: PM Modi

March 09th, 01:50 pm

PM Modi inaugurated, dedicated to the nation and laid the foundation stone for multiple development projects worth more than Rs 17,500 crores in Jorhat, Assam. He said, “Veer Lachit Borphukan is the symbol of Assam’s valor and determination and said Vikas bhi, Virasat bhi is our development model.

ಅಸ್ಸಾಂನ ಜೋರ್ಹತ್ ನಲ್ಲಿ 17,500 ಕೋಟಿ ರೂ.ಗೂ ಅಧಿಕ ಮೌಲ್ಯದ ಹಲವು ಅಭಿವೃದ್ಧಿ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಿದ ಪ್ರಧಾನಮಂತ್ರಿ

March 09th, 01:14 pm

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಅಸ್ಸಾಂನ ಜೋರ್ಹತ್ ನಲ್ಲಿ 17,500 ಕೋಟಿ ರೂ.ಗೂ ಅಧಿಕ ಮೌಲ್ಯದ ಹಲವು ಅಭಿವೃದ್ಧಿ ಯೋಜನೆಗಳನ್ನು ಉದ್ಘಾಟಿಸಿದರು, ರಾಷ್ಟ್ರಕ್ಕೆ ಸಮರ್ಪಿಸಿದರು ಮತ್ತು ಶಂಕುಸ್ಥಾಪನೆ ನೆರವೇರಿಸಿದರು. ಇಂದಿನ ಅಭಿವೃದ್ಧಿ ಯೋಜನೆಗಳು ಆರೋಗ್ಯ, ತೈಲ ಮತ್ತು ಅನಿಲ, ರೈಲು ಮತ್ತು ವಸತಿ ಕ್ಷೇತ್ರಗಳನ್ನು ಒಳಗೊಂಡಿವೆ.

ಭಾರತದಲ್ಲಿ ಚಿರತೆಗಳ ಸಂಖ್ಯೆ ಹೆಚ್ಚಾಗುತ್ತಿರುವುದಕ್ಕೆ ಸಂತಸ ವ್ಯಕ್ತಪಡಿಸಿದ ಪ್ರಧಾನಮಂತ್ರಿ

February 29th, 09:35 pm

ಭಾರತದಲ್ಲಿ ಚಿರತೆಗಳ ಸಂಖ್ಯೆ ಹೆಚ್ಚಾಗುತ್ತಿರುವುದಕ್ಕೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಸಂತಸ ವ್ಯಕ್ತಪಡಿಸಿದ್ದಾರೆ. ಚಿರತೆಗಳ ಸಂಖ್ಯೆಯಲ್ಲಿನ ಈ ಗಮನಾರ್ಹ ಹೆಚ್ಚಳವು ಜೀವವೈವಿಧ್ಯತೆಯ ಬಗ್ಗೆ ಭಾರತದ ಅಚಲವಾದ ಸಮರ್ಪಣೆಗೆ ಸಾಕ್ಷಿಯಾಗಿದೆ ಎಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಹೇಳಿದ್ದಾರೆ.

ʻಜಿ-20 ಯೂನಿವರ್ಸಿಟಿ ಕನೆಕ್ಟ್ʼ ಫಿನಾಲೆಯಲ್ಲಿ ಪ್ರಧಾನಮಂತ್ರಿಯವರ ಭಾಷಣದ ಕನ್ನಡ ಪಠ್ಯಾಂತರ

September 26th, 04:12 pm

ದೇಶದ ವಿವಿಧ ವಿಶ್ವವಿದ್ಯಾಲಯಗಳೇ, ಉಪಕುಲಪತಿಗಳೇ, ಪ್ರಾಧ್ಯಾಪಕರೇ, ವಿವಿಧ ಸಂಸ್ಥೆಗಳ ಪ್ರತಿನಿಧಿಗಳೇ ಮತ್ತು ನನ್ನ ಯುವ ಸ್ನೇಹಿತರೇ! ʻಭಾರತ್ ಮಂಟಪಂʼನಲ್ಲಿ ಇದ್ದುದ್ದಕ್ಕಿಂತ ಹೆಚ್ಚಿನ ಜನರು ಇಂದು ಆನ್‌ಲೈನ್ ಮೂಲಕ ನಮ್ಮೊಂದಿಗೆ ಸಂಪರ್ಕ ಹೊಂದಿದ್ದಾರೆ. ನಾನು 'ಜಿ -20 ಯೂನಿವರ್ಸಿಟಿ ಕನೆಕ್ಟ್' ಕಾರ್ಯಕ್ರಮಕ್ಕೆ ಎಲ್ಲರನ್ನೂ ಸ್ವಾಗತಿಸುತ್ತೇನೆ ಮತ್ತು ಎಲ್ಲಾ ಯುವಕರನ್ನು ಅಭಿನಂದಿಸುತ್ತೇನೆ.

ಜಿ-20 ವಿಶ್ವವಿದ್ಯಾಲಯ ಸಂಪರ್ಕ ಅಂತಿಮ(ಯೂನಿವರ್ಸಿಟಿ ಕನೆಕ್ಟ್ ಫಿನಾಲೆ) ಕಾರ್ಯಕ್ರಮ ಉದ್ದೇಶಿಸಿ ಪ್ರಧಾನ ಮಂತ್ರಿ ಭಾಷಣ

September 26th, 04:11 pm

ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ನವದೆಹಲಿಯ ಭಾರತ್ ಮಂಟಪದಲ್ಲಿಂದು ಜಿ-20 ವಿಶ್ವವಿದ್ಯಾಲಯ ಸಂಪರ್ಕ ಕಲ್ಪಿಸುವ ಅಂತಿಮ(ಯುನಿವರ್ಸಿಟಿ ಕನೆಕ್ಟ್ ಫಿನಾಲೆ) ಕಾರ್ಯಕ್ರಮ ಉದ್ದೇಶಿಸಿ ಭಾಷಣ ಮಾಡಿದರು. ಜಿ-20 ವಿಶ್ವವಿದ್ಯಾಲಯ ಸಂಪರ್ಕ ಉಪಕ್ರಮವನ್ನು ಭಾರತದ ಯುವಜನರಲ್ಲಿ ಭಾರತದ ಅಧ್ಯಕ್ಷತೆಯ ಜಿ-20 ಶೃಂಗಸಭೆಯ ಬಗ್ಗೆ ತಿಳುವಳಿಕೆ ಮೂಡಿಸಲು ಮತ್ತು ವಿವಿಧ ಜಿ-20 ಕಾರ್ಯಕ್ರಮಗಳಲ್ಲಿ ಅವರ ಭಾಗವಹಿಸುವಿಕೆ ಹೆಚ್ಚಿಸುವ ಉದ್ದೇಶದಿಂದ ಆಯೋಜಿಸಲಾಗಿದೆ. ಪ್ರಧಾನ ಮಂತ್ರಿ ಅವರು ಈ ಸಂದರ್ಭದಲ್ಲಿ 4 ಪ್ರಕಟಣೆಗಳನ್ನು ಬಿಡುಗಡೆ ಮಾಡಿದರು. ಅವುಗಳೆಂದರೆ ದಿ ಗ್ರ್ಯಾಂಡ್ ಸಕ್ಸಸ್ ಆಫ್ ಜಿ-20 ಭಾರತ್ ಪ್ರೆಸಿಡೆನ್ಸಿ: ದೂರದೃಷ್ಟಿಯ ನಾಯಕತ್ವ, ಅಂತರ್ಗತ ಕಾರ್ಯವಿಧಾನ; ಭಾರತದ ಜಿ-20 ಪ್ರೆಸಿಡೆನ್ಸಿ: ವಸುಧೈವ ಕುಟುಂಬಕಂ; ಜಿ-20 ವಿಶ್ವವಿದ್ಯಾಲಯ ಸಂಪರ್ಕ ಕಾರ್ಯಕ್ರಮದ ಸಂಕಲನ; ಮತ್ತು ಜಿ-20ರಲ್ಲಿ ಭಾರತೀಯ ಸಂಸ್ಕೃತಿಯ ಪ್ರದರ್ಶನ.

ಗ್ರೀಸ್‌ನ ಅಥೆನ್ಸ್‌ನಲ್ಲಿ ಭಾರತೀಯ ಸಮುದಾಯವನ್ನು ಉದ್ದೇಶಿಸಿ ಪ್ರಧಾನಮಂತ್ರಿಯವರ ಭಾಷಣದ ಕನ್ನಡ ಪಠ್ಯಾಂತರ

August 25th, 09:30 pm

ಸಂಭ್ರಮದ ವಾತಾವರಣ, ಹಬ್ಬದ ಉತ್ಸಾಹ ಇದ್ದಾಗ, ಥಟ್ಟನೆ ಯಾರೊಬ್ಬರೂ ತಮ್ಮ ಕುಟುಂಬ ಸದಸ್ಯರ ನಡುವೆ ಇರಲು ಬಯಸುತ್ತಾರೆ. ನಾನು ಕೂಡ ಇಂದು ನನ್ನ ಕುಟುಂಬ ಸದಸ್ಯರ ನಡುವೆ ಬಂದಿದ್ದೇನೆ. ಇದು ಶ್ರಾವಣ ಮಾಸ. ಒಂದು ರೀತಿಯಲ್ಲಿ ಶಿವನ ತಿಂಗಳು ಎಂದು ಪರಿಗಣಿಸಲಾಗಿದೆ, ಮತ್ತು ನಮ್ಮ ದೇಶವು ಈ ಪವಿತ್ರ ತಿಂಗಳಲ್ಲಿ ಹೊಸ ಮೈಲಿಗಲ್ಲನ್ನು ಸಾಧಿಸಿದೆ. ಚಂದ್ರನ ಕತ್ತಲ ವಲಯವಾದ ದಕ್ಷಿಣ ಧ್ರುವದಲ್ಲಿ ಇಳಿದ ವಿಶ್ವದ ಮೊದಲ ರಾಷ್ಟ್ರ ಎಂಬ ಹೆಗ್ಗಳಿಕೆಗೆ ಭಾರತ ಪಾತ್ರವಾಗಿದೆ. ಭಾರತವು ಚಂದ್ರನ ಮೇಲೆ ತ್ರಿವರ್ಣ ಧ್ವಜವನ್ನು ಹಾರಿಸಿದೆ, ಭಾರತ ತನ್ನ ಸಾಮರ್ಥ್ಯವನ್ನು ಇಡೀ ಜಗತ್ತಿಗೆ ತೋರಿಸಿದೆ. ಪ್ರಪಂಚದಾದ್ಯಂತ ಅಭಿನಂದನಾ ಸಂದೇಶಗಳು ಹರಿದು ಬರುತ್ತಿವೆ. ಜನರು ತಮ್ಮ ಶುಭ ಹಾರೈಕೆಗಳನ್ನು ಕಳುಹಿಸುತ್ತಿದ್ದಾರೆ. ಜನರು ನಿಮ್ಮನ್ನು ಅಭಿನಂದಿಸುತ್ತಿದ್ದಾರೆ ಎಂದು ನಾನು ದೃಢವಾಗಿ ನಂಬುತ್ತೇನೆ, ಹೌದಲ್ಲವೇ? ನೀವು ಸಹ ಅನೇಕ ಅಭಿನಂದನೆಗಳನ್ನು ಸ್ವೀಕರಿಸುತ್ತಿದ್ದೀರಿ, ಅಲ್ಲವೇ? ಪ್ರತಿಯೊಬ್ಬ ಭಾರತೀಯನಿಗೂ ಅಭಿನಂದನೆಗಳು ಹರಿದುಬರುತ್ತಿವೆ. ಇಡೀ ಸಾಮಾಜಿಕ ಮಾಧ್ಯಮವು ಅಭಿನಂದನಾ ಸಂದೇಶಗಳಿಂದ ತುಂಬಿ ಹೋಗಿದೆ. ಯಶಸ್ಸು ತುಂಬಾ ಮಹತ್ವದ್ದಾಗಿದ್ದಾಗ, ಆ ಯಶಸ್ಸಿನ ಉತ್ಸಾಹವು ಎಲ್ಲೆಡೆ ಸಮಾನವಾಗಿರುತ್ತದೆ. ನೀವು ವಿಶ್ವದ ಯಾವ ಮೂಲೆಯಲ್ಲಾದರೂ ವಾಸಿಸಬಹುದು, ಆದರೆ ಭಾರತವು ನಿಮ್ಮ ಹೃದಯದಲ್ಲಿ ಮಿಡಿಯುತ್ತದೆ ಎಂದು ನಿಮ್ಮ ಮುಖವೇ ನನಗೆ ಹೇಳುತ್ತಿದೆ. ಭಾರತ ನಿಮ್ಮ ಹೃದಯದಲ್ಲಿ ಮಿಡಿಯುತ್ತದೆ, ಭಾರತ ನಿಮ್ಮ ಹೃದಯದಲ್ಲಿ ಮಿಡಿಯುತ್ತದೆ, ಭಾರತ ನಿಮ್ಮ ಮನದಲ್ಲಿ ಮಿಡಿಯುತ್ತದೆ. ಇಂದು, ನಾನು ನಿಮ್ಮೆಲ್ಲರ ನಡುವೆ ಗ್ರೀಸ್‌ನಲ್ಲಿದ್ದೇನೆ, ಮತ್ತೊಮ್ಮೆ, ಚಂದ್ರಯಾನದ ಅದ್ಭುತ ಯಶಸ್ಸಿಗಾಗಿ ನಾನು ಎಲ್ಲರಿಗೂ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆ.

ಅಥೆನ್ಸ್ ನಲ್ಲಿ ಭಾರತೀಯ ಸಮುದಾಯದೊಂದಿಗೆ ಪ್ರಧಾನಮಂತ್ರಿ ಅವರ ಸಂವಾದ

August 25th, 09:00 pm

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2023ರ ಆಗಸ್ಟ್ 25ರಂದು ಅಥೆನ್ಸ್ ನ ಅಥೆನ್ಸ್ ಕನ್ಸರ್ವೇಟರಿಯಲ್ಲಿ ಭಾರತೀಯ ಸಮುದಾಯವನ್ನುದ್ದೇಶಿಸಿ ಭಾಷಣ ಮಾಡಿದರು.

ಹವಾಮಾನ ಬಿಕ್ಕಟ್ಟಿನೊಂದಿಗೆ ಜಗತ್ತು ಹೋರಾಡುತ್ತಿರುವಾಗ ಪರಿಸರಕ್ಕಾಗಿ ಜೀವನ ಶೈಲಿಯನ್ನು ಪ್ರಾರಂಭಿಸಿದ್ದೇವೆ ಮತ್ತು ದಾರಿ ತೋರಿಸಿದ್ದೇವೆ - ಜೀವನ [ಲೈಫ್‌ ಮಿಷನ್‌ ಇನಿಷಿಯೇಟೀವ್] ಅಭಿಯಾನ ಉಪಕ್ರಮ

August 15th, 05:08 pm

‌ನಾವು ಜಿ20 ಶೃಂಗಸಭೆಗಾಗಿ “ಒಂದು ಪ್ರಪಂಚ, ಒಂದು ಕುಟುಂಬ, ಒಂದು ಭವಿಷ್ಯ” ಎಂಬ ಪರಿಕಲ್ಪನೆಯನ್ನು ಮುಂದಿಟ್ಟಿದ್ದೇವೆ ಮತ್ತು ಅ ದಿಕ್ಕಿನಲ್ಲಿ ಕೆಲಸ ಮಾಡುತ್ತಿದ್ದೇವೆ ಎಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಹೇಳಿದರು.

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 77ನೇ ಸ್ವಾತಂತ್ರ್ಯ ದಿನದಂದು ಕೆಂಪು ಕೋಟೆಯಿಂದ ರಾಷ್ಟ್ರವನ್ನುದ್ದೇಶಿಸಿ ಮಾತನಾಡಿದರು.

August 15th, 02:14 pm

1. ನನ್ನ ಪ್ರೀತಿಯ 140 ಕೋಟಿ ಕುಟುಂಬ ಸದಸ್ಯರೇ, ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ಮತ್ತು ಈಗ ಜನಸಂಖ್ಯೆ ಹಾಗೂ ನಂಬಿಕೆಯಲ್ಲೂ ನಾವು ನಂಬರ್ ಒನ್ ಎಂದು ಅನೇಕ ಜನರು ಅಭಿಪ್ರಾಯಪಟ್ಟಿದ್ದಾರೆ. ಇಂತಹ ಬೃಹತ್ ದೇಶ, 140 ಕೋಟಿ ದೇಶವಾಸಿಗಳು, ನನ್ನ ಸಹೋದರ ಸಹೋದರಿಯರು, ನನ್ನ ಕುಟುಂಬ ಸದಸ್ಯರು ಇಂದು ಸ್ವಾತಂತ್ರ್ಯದ ಹಬ್ಬವನ್ನು ಆಚರಿಸುತ್ತಿದ್ದಾರೆ. ಭಾರತವನ್ನು ಪ್ರೀತಿಸುವ, ಭಾರತವನ್ನು ಗೌರವಿಸುವ, ಭಾರತದ ಬಗ್ಗೆ ಹೆಮ್ಮೆಪಡುವ ದೇಶ ಮತ್ತು ಜಗತ್ತಿನ ಕೋಟ್ಯಂತರ ಜನರಿಗೆ ನಾನು ಈ ಮಹಾನ್ ಪವಿತ್ರ ಸ್ವಾತಂತ್ರ್ಯದ ಹಬ್ಬದಂದು ಶುಭ ಹಾರೈಸುತ್ತೇನೆ.

India Celebrates 77th Independence Day

August 15th, 09:46 am

On the occasion of India's 77th year of Independence, PM Modi addressed the nation from the Red Fort. He highlighted India's rich historical and cultural significance and projected India's endeavour to march towards the AmritKaal. He also spoke on India's rise in world affairs and how India's economic resurgence has served as a pole of overall global stability and resilient supply chains. PM Modi elaborated on the robust reforms and initiatives that have been undertaken over the past 9 years to promote India's stature in the world.