Bodoland is scripting a new chapter of peace and prosperity: PM Modi in Assam
March 13th, 03:00 pm
PM Modi laid the foundation stone for various development works in Kokrajhar, Assam via video conferencing. He lauded the Bodo community for preserving the Bodo language and culture and reiterated the double-engine government’s commitment to safeguard Assam's heritage. Attacking previous regimes for the violence in the region, he highlighted the Bodo Peace Accord as a landmark achievement and resolved to achieve a ‘Viksit Assam’.PM Modi launches multiple development works worth over ₹4,570 crore in Kokrajhar, Assam
March 13th, 02:30 pm
PM Modi laid the foundation stone for various development works in Kokrajhar, Assam via video conferencing. He lauded the Bodo community for preserving the Bodo language and culture and reiterated the double-engine government’s commitment to safeguard Assam's heritage. Attacking previous regimes for the violence in the region, he highlighted the Bodo Peace Accord as a landmark achievement and resolved to achieve a ‘Viksit Assam’.ಭೂತಾನ್ ಪ್ರಧಾನಮಂತ್ರಿಗಳೊಂದಿಗೆ ಪ್ರಧಾನಮಂತ್ರಿ ಸಭೆ
February 18th, 07:40 pm
ಇಂಡಿಯಾ-ಎಐ ಇಂಪ್ಯಾಕ್ಟ್ ಶೃಂಗಸಭೆ 2026 ರಲ್ಲಿ ಪಾಲ್ಗೊಳ್ಳಲು ಭಾರತಕ್ಕೆ ಆಗಮಿಸಿರುವ ಭೂತಾನ್ ಪ್ರಧಾನಮಂತ್ರಿ ಮಾನ್ಯ ತ್ಸೆರಿಂಗ್ ಟೋಬ್ಗೆ ಅವರನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಭೇಟಿ ಮಾಡಿದರು.ಭಾರತದ 77ನೇ ಗಣರಾಜ್ಯೋತ್ಸವದ ಶುಭಾಶಯಗಳಿಗಾಗಿ ವಿಶ್ವ ನಾಯಕರಿಗೆ ಧನ್ಯವಾದ ಅರ್ಪಿಸಿದ ಪ್ರಧಾನಮಂತ್ರಿ
January 26th, 11:12 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಭಾರತದ 77ನೇ ಗಣರಾಜ್ಯೋತ್ಸವದ ಶುಭಾಶಯ ಮತ್ತು ಶುಭಾಶಯಗಳಿಗಾಗಿ ವಿಶ್ವ ನಾಯಕರಿಗೆ ಧನ್ಯವಾದ ಅರ್ಪಿಸಿದರು.ಗುವಾಹತಿಯಲ್ಲಿ “ಬಾಗುರೂಂಬಾ ದೊಹೊ” ಸಾಂಪ್ರದಾಯಿಕ ಬೋಡೊ ಸಾಂಸ್ಕೃತಿಕ ಕಾರ್ಯಕ್ರಮ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
January 17th, 06:30 pm
ಅಸ್ಸಾಂ ರಾಜ್ಯಪಾಲರಾದ ಶ್ರೀ ಲಕ್ಷ್ಮಣ್ ಪ್ರಸಾದ್ ಆಚಾರ್ಯ ಅವರೇ, ಮುಖ್ಯಮಂತ್ರಿ ಶ್ರೀ ಹಿಮಂತ ಬಿಸ್ವಾ ಶರ್ಮಾ ಅವರೇ, ಕೇಂದ್ರ ಸರ್ಕಾರದ ನನ್ನ ಸಹೋದ್ಯೋಗಿಗಳಾದ ಶ್ರೀ ಸರ್ಬಾನಂದ ಸೋನೋವಾಲ್ ಅವರೇ, ಪಬಿತ್ರ ಮಾರ್ಗರಿಟಾ ಅವರೇ, ಅಸ್ಸಾಂ ವಿಧಾನಸಭೆ ಸ್ಪೀಕರ್ ಶ್ರೀ ಬಿಸ್ವಾಜಿತ್ ಡೈಮರಿ ಅವರೇ, ಬೋಡೊಲ್ಯಾಂಡ್ ಪ್ರಾದೇಶಿಕ ಮಂಡಳಿಯ ಮುಖ್ಯ ಕಾರ್ಯನಿರ್ವಾಹಕ ಸದಸ್ಯ ಹಗ್ರಾಮ ಮೊಹಿಲರಿ ಅವರೇ, ರಾಜ್ಯ ಸರ್ಕಾರದ ಸಚಿವರೆ, ಎಲ್ಲಾ ಗೌರವಾನ್ವಿತ ನಾಗರಿಕ ಸಹೋದರ ಸಹೋದರಿಯರೆ ಮತ್ತು ಅಸ್ಸಾಂನ ನನ್ನ ಸಹೋದರ ಸಹೋದರಿಯರೆ,ಅಸ್ಸಾಂನ ಗುವಾಹಟಿಯಲ್ಲಿ ನಡೆದ "ಬಾಗುರೂಂಬಾ ದೊಹೊ," ಕಾರ್ಯಕ್ರಮವನ್ನು ಉದ್ದೇಶಿಸಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಭಾಷಣ ಮಾಡಿದರು
January 17th, 06:00 pm
ಗುವಾಹಟಿಯ ಸರುಸಜೈ ಕ್ರೀಡಾಂಗಣದಲ್ಲಿ ಬೋಡೋ ಸಮುದಾಯದ ಶ್ರೀಮಂತ ಪರಂಪರೆಯನ್ನು ಆಚರಿಸುವ ಐತಿಹಾಸಿಕ ಸಾಂಸ್ಕೃತಿಕ ಕಾರ್ಯಕ್ರಮವಾದ ಬಾಗುರೂಂಬಾ ದೊಹೊ 2026 ಕಾರ್ಯಕ್ರಮವನ್ನು ಉದ್ದೇಶಿಸಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಭಾಷಣ ಮಾಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಪ್ರಧಾನಮಂತ್ರಿಯವರು, ಅಸ್ಸಾಂನ ಸಂಸ್ಕೃತಿಯನ್ನು ವೀಕ್ಷಿಸುವುದು ಮತ್ತು ಬೋಡೋ ಸಮುದಾಯದ ಸಂಪ್ರದಾಯಗಳನ್ನು ಸೂಕ್ಷ್ಮವಾಗಿ ಗಮನಿಸುವುದು ತಮ್ಮ ಸೌಭಾಗ್ಯ ಎಂದು ಹೇಳಿದರು. ಈ ಹಿಂದಿನ ಯಾವುದೇ ಪ್ರಧಾನಮಂತ್ರಿಗಳು, ಅಸ್ಸಾಂಗೆ ತಾವು ಭೇಟಿ ನೀಡಿದಷ್ಟು ಬಾರಿ ಭೇಟಿ ನೀಡಲಿಲ್ಲ ಎಂದು ಹೇಳಿದ ಶ್ರೀ ಮೋದಿ ಅವರು, ಅಸ್ಸಾಂನ ಕಲೆ ಮತ್ತು ಸಂಸ್ಕೃತಿ ದೊಡ್ಡ ವೇದಿಕೆಯನ್ನು ಪಡೆಯಬೇಕು ಮತ್ತು ಭವ್ಯ ಆಚರಣೆಗಳ ಮೂಲಕ ರಾಷ್ಟ್ರ ಮತ್ತು ಪ್ರಪಂಚದಾದ್ಯಂತ ಮನ್ನಣೆ ಪಡೆಯಬೇಕು ಎಂಬ ತಮ್ಮ ನಿರಂತರ ಆಶಯವನ್ನು ಒತ್ತಿ ಹೇಳಿದರು. ದೊಡ್ಡ ಪ್ರಮಾಣದ ಬಿಹು ಉತ್ಸವಗಳು, ಜುಮೋಯಿರ್ ಬಿನೋಂದಿನಿಯ ಅಭಿವ್ಯಕ್ತಿ, ಒಂದೂವರೆ ವರ್ಷಗಳ ಹಿಂದೆ ನವದೆಹಲಿಯಲ್ಲಿ ನಡೆದ ಭವ್ಯ ಬೋಡೋ ಮಹೋತ್ಸವ ಮತ್ತು ಇತರ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಉಲ್ಲೇಖಿಸಿ ಈ ದಿಕ್ಕಿನಲ್ಲಿ ನಿರಂತರ ಪ್ರಯತ್ನಗಳು ನಡೆದಿವೆ ಎಂದು ಪ್ರಧಾನಮಂತ್ರಿ ಅವರು ಹೇಳಿದರು. ಅಸ್ಸಾಂನ ಕಲೆ ಮತ್ತು ಸಂಸ್ಕೃತಿಯ ವಿಶಿಷ್ಟತೆ , ವೈವಿಧ್ಯತೆಗಳ ಆನಂದವನ್ನು ಅನುಭವಿಸುವ ಅವಕಾಶವನ್ನು ತಾವು ಎಂದಿಗೂ ಕಳೆದುಕೊಳ್ಳುವುದಿಲ್ಲ ಎಂದು ಪ್ರಧಾನಮಂತ್ರಿ ಅವರು ಹೇಳಿದರು. ಮತ್ತೊಮ್ಮೆ, ಬಾಗುರುಂಬಾ ಉತ್ಸವವನ್ನು ಆಯೋಜಿಸಲಾಗುತ್ತಿದೆ ಎಂದು ಅವರು ಹೇಳಿದರು, ಇದು ಅನನ್ಯ ಬೋಡೋ ಗುರುತಿನ ವೈವಿಧ್ಯಮಯ ಆಚರಣೆ ಮತ್ತು ಅಸ್ಸಾಂನ ಪರಂಪರೆಗೆ ಗೌರವ ತುಂಬುತ್ತದೆ ಎಂದು ಅವರು ಬಣ್ಣಿಸಿದರು. ಈ ಕಾರ್ಯಕ್ರಮದೊಂದಿಗೆ ಸಂಬಂಧ ಹೊಂದಿರುವ ಎಲ್ಲರಿಗೂ, ವಿಶೇಷವಾಗಿ ಕಲಾವಿದರಿಗೆ ಶ್ರೀ ಮೋದಿ ಅವರು ತಮ್ಮ ಶುಭಾಶಯಗಳು ಮತ್ತು ಅಭಿನಂದನೆಗಳನ್ನು ವ್ಯಕ್ತಪಡಿಸಿದರು.ಭಾರತದ ಪ್ರಧಾನಮಂತ್ರಿ ಭೂತಾನ್ ಭೇಟಿಯ ಕುರಿತು ಜಂಟಿ ಪತ್ರಿಕಾ ಪ್ರಕಟಣೆ
November 12th, 10:00 am
ಭೂತಾನ್ ನ ದೊರೆ ಗೌರವಾನ್ವಿತ ಜಿಗ್ಮೆ ಖೇಸರ್ ನಮ್ಗ್ಯೆಲ್ ವಾಂಗ್ಚುಕ್ ಅವರ ಆಹ್ವಾನದ ಮೇರೆಗೆ, ಭಾರತದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2025ರ ನವೆಂಬರ್ 11-12, ರವರೆಗೆ ಭೂತಾನ್‌ಗೆ ಎರಡು ದಿನಗಳ ಅಧಿಕೃತ ಭೇಟಿಯಲ್ಲಿದ್ದರು.ಭೂತಾನ್ ನ ನಾಲ್ಕನೇ ರಾಜರೋಂದಿಗೆ ಸಭಿಕರು ಪ್ರಧಾನಮಂತ್ರಿ ಅವರನ್ನು ಬರಮಾಡಿಕೊಂಡರು ಮತ್ತು ಜಾಗತಿಕ ಶಾಂತಿ ಪ್ರಾರ್ಥನಾ ಉತ್ಸವದಲ್ಲಿ ಭಾಗವಹಿಸಿದರು
November 12th, 09:54 am
ಪ್ರಧಾನಮಂತ್ರಿ ಅವರು ಥಿಂಪುವಿನ ನಾಲ್ಕನೇ ರಾಜರಿಗೆ ಅವರ 70ನೇ ಜನ್ಮ ದಿನಾಚರಣೆ ಸಂದರ್ಭದಲ್ಲಿ ಶುಭಾಶಯಗಳನ್ನು ತಿಳಿಸಿದರು ಮತ್ತು ಅವರಿಗೆ ನಿರಂತರ ಉತ್ತಮ ಆರೋಗ್ಯ ಮತ್ತು ಯೋಗಕ್ಷೇಮಕ್ಕಾಗಿ ಭಾರತ ಸರ್ಕಾರ ಮತ್ತು ಜನರ ಪರವಾಗಿ ಶುಭಾಶಯಗಳು ಹಾಗು ಹಾರೈಕೆಗಳನ್ನು ತಿಳಿಸಿದರು. ಭಾರತ-ಭೂತಾನ್ ಸ್ನೇಹವನ್ನು ಮತ್ತಷ್ಟು ಬಲಪಡಿಸುವಲ್ಲಿ ಅವರ ನಾಯಕತ್ವ, ಸಲಹೆ ಮತ್ತು ಮಾರ್ಗದರ್ಶನಕ್ಕಾಗಿ ಪ್ರಧಾನಮಂತ್ರಿ ಅವರು ಕೃತಜ್ಞತೆ ಸಲ್ಲಿಸಿದರು. ಇಬ್ಬರೂ ನಾಯಕರು ದ್ವಿಪಕ್ಷೀಯ ಸಂಬಂಧಗಳು ಮತ್ತು ಪರಸ್ಪರ ಆಸಕ್ತಿಯ ವಿಷಯಗಳ ಕುರಿತು ಚರ್ಚೆ ನಡೆಸಿದರು. ಈ ಸಂದರ್ಭದಲ್ಲಿ, ಎರಡೂ ದೇಶಗಳ ಜನರನ್ನು ಹತ್ತಿರ ತರುವ ಪರಸ್ಪರ ಹಂಚಿಕೆಯ ಆಧ್ಯಾತ್ಮಿಕ ಮತ್ತು ಸಾಂಸ್ಕೃತಿಕ ಬಾಂಧವ್ಯಗಳನ್ನು ಅವರು ಒತ್ತಿ ಹೇಳಿದರು.ಭೂತಾನ್ ನ ರಾಜರೊಂದಿಗೆ ಸಭಿಕರನ್ನು ಬರಮಾಡಿಕೊಂಡ ಪ್ರಧಾನಮಂತ್ರಿ
November 11th, 06:14 pm
ಉಭಯ ದೇಶಗಳ ನಡುವಿನ ಸ್ನೇಹ ಮತ್ತು ಸಹಕಾರದ ನಿಕಟ ಸಂಬಂಧಗಳನ್ನು ರೂಪಿಸುವಲ್ಲಿ ಸತತವಾಗಿ ಅಧಿಕಾರಕ್ಕೆ ಬಂದ ಡ್ರೂಕ್ ಗಯಾಲ್ಪೋಸ್ (ರಾಜರು) ಒದಗಿಸಿದ ಮಾರ್ಗದರ್ಶಿ ದೃಷ್ಟಿಕೋನದ ಕುರಿತಾಗಿ ಪ್ರಧಾನಮಂತ್ರಿ ಅವರು ಮೆಚ್ಚುಗೆ ವ್ಯಕ್ತಪಡಿಸಿದರು. ಭೂತಾನ್ ನ ಸಾಮಾಜಿಕ-ಆರ್ಥಿಕ ಅಭಿವೃದ್ಧಿಗೆ ಭಾರತ ಸರ್ಕಾರ ನೀಡಿದ ಅಮೂಲ್ಯ ಬೆಂಬಲಕ್ಕೆ ಘನತೆವೆತ್ತ ದೊರೆ ಮೆಚ್ಚುಗೆ ವ್ಯಕ್ತಪಡಿಸಿದರು.ಪ್ರಧಾನಮಂತ್ರಿ ಅವರ ಭೂತಾನ್ ಭೇಟಿಯ ಸಫಲತೆ ಪಟ್ಟಿ
November 11th, 06:10 pm
ನವೀಕರಿಸಬಹುದಾದ ಇಂಧನ ಕ್ಷೇತ್ರದಲ್ಲಿ ದ್ವಿಪಕ್ಷೀಯ ಒಪ್ಪಂದಗಳನ್ನು ಸಾಂಸ್ಥಿಕಗೊಳಿಸಲು ಈ ತಿಳಿವಳಿಕೆ ಒಪ್ಪಂದವು ಸಹಕರಿಸುತ್ತದೆ. ಈ ಒಪ್ಪಂದವು ಸೌರಶಕ್ತಿ, ಪವನ ಶಕ್ತಿ, ಜೀವರಾಶಿ, ಇಂಧನ ಸಂಗ್ರಹಣೆ, ಹಸಿರು ಹೈಡ್ರೋಜನ್ ಮತ್ತು ಸಾಮರ್ಥ್ಯ ವರ್ಧನೆ ಮುಂತಾದ ಕ್ಷೇತ್ರಗಳಲ್ಲಿ ಒಟ್ಟಾಗಿ ಕೆಲಸ ಮಾಡುವ ಗುರಿಯನ್ನು ಹೊಂದಿದೆ.ದೆಹಲಿ ಸ್ಫೋಟದ ಘಟನೆಯ ನಂತರ ಭೂತಾನ್ ನ ಒಗ್ಗಟ್ಟಿನ ಸಂದೇಶಕ್ಕೆ ಧನ್ಯವಾದ ತಿಳಿಸಿದ ಪ್ರಧಾನಮಂತ್ರಿ
November 11th, 03:01 pm
ಭೂತಾನಿನ ನಾಲ್ಕನೇ ರಾಜರ 70ನೇ ಜನ್ಮದಿನದ ಸ್ಮರಣಾರ್ಥ ಕಾರ್ಯಕ್ರಮದಲ್ಲಿ ಭಾರತದೊಂದಿಗೆ ಒಗ್ಗಟ್ಟಿನ ಭಾವನೆಯನ್ನು ವ್ಯಕ್ತಪಡಿಸಿದ ಭೂತಾನ್ ಜನರಿಗೆ ಪ್ರಧಾನಮಂತ್ರ ಶ್ರೀ ನರೇಂದ್ರ ಮೋದಿ ಹೃತ್ಪೂರ್ವಕ ಧನ್ಯವಾದಗಳನ್ನು ಸಲ್ಲಿಸಿದರು. ದೆಹಲಿಯಲ್ಲಿ ನಡೆದ ದುರಂತ ಘಟನೆಯ ನಂತರ, ಭೂತಾನ್ ನ ಜನರು ಸಂತ್ರಸ್ತರು ಮತ್ತು ಅವರ ಕುಟುಂಬಗಳಿಗಾಗಿ ವಿಶಿಷ್ಟ ಪ್ರಾರ್ಥನೆ ಸಲ್ಲಿಸಿದರು. ಜನರ ಪ್ರೀತಿ, ಸಹಾನುಭೂತಿಯನ್ನು ಎಂದಿಗೂ ಮರೆಯುವುದಿಲ್ಲ ಎಂದು ಹೇಳುವ ಮೂಲಕ ಪ್ರಧಾನಮಂತ್ರಿ ಏಕತೆಯ ಕಾರ್ಯವನ್ನು ಶ್ಲಾಘಿಸಿದರು.ಭೂತಾನ್ ನ ಮಹಾರಾಜ ಅವರ ಹುಟ್ಟುಹಬ್ಬ ಆಚರಣೆಯ ಸಂದರ್ಭದಲ್ಲಿ ಪ್ರಧಾನಮಂತ್ರಿ ಅವರ ಭಾಷಣದ ಕನ್ನಡ ಅನುವಾದ
November 11th, 12:00 pm
ನಮ್ಮ ಸಂಸ್ಥೆಗಳು ಈ ಪಿತೂರಿಯ ಆಳವನ್ನು ಕಂಡುಕೊಳ್ಳುತ್ತವೆ. ಇದರ ಹಿಂದಿನ ಅಪರಾಧಿಗಳನ್ನು ಕಠಿಣ ಶಿಕ್ಷೆಗೆ ಒಳಪಡಿಸದೆ ಬಿಡಲಾಗುವುದಿಲ್ಲ.ಭೂತಾನ್ ನ ಘನತೆವೆತ್ತ ನಾಲ್ಕನೇ ದೊರೆಯವರ 70ನೇ ಜನ್ಮ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಉದ್ದೇಶಿಸಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಭಾಷಣ
November 11th, 11:39 am
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಭೂತಾನ್ ನ ಥಿಂಪು ನಗರದಲ್ಲಿರುವ ಚಾಂಗ್ಲಿಮೆಥಾಂಗ್ ಸಂಭ್ರಮಾಚರಣೆ ಮೈದಾನದಲ್ಲಿ ನಡೆದ, ಭೂತಾನ್ನ ಘನತೆವೆತ್ತ ನಾಲ್ಕನೇ ದೊರೆಯವರ 70ನೇ ಜನ್ಮ ವಾರ್ಷಿಕೋತ್ಸವದ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು. ಈ ಸಂದರ್ಭದಲ್ಲಿ ಪ್ರಧಾನಮಂತ್ರಿ ಅವರು ಭೂತಾನ್ನ ದೊರೆ, ಘನತೆವೆತ್ತ ಜಿಗ್ಮೆ ಖೇಸರ್ ನಾಮ್ಗ್ಯೆಲ್ ವಾಂಗ್ ಚುಕ್ ಅವರಿಗೆ ಹಾಗೂ ನಾಲ್ಕನೇ ದೊರೆ, ಘನತೆವೆತ್ತ ಜಿಗ್ಮೆ ಸಿಂಗ್ಯೆ ವಾಂ ಗ್ಚುಕ್ ಅವರಿಗೆ ಹಾರ್ದಿಕ ಶುಭಾಶಯಗಳನ್ನು ಸಲ್ಲಿಸಿದರು. ಅಲ್ಲದೆ, ರಾಜಮನೆತನದ ಗೌರವಾನ್ವಿತ ಸದಸ್ಯರು, ಭೂತಾನ್ ನ ಪ್ರಧಾನ ಮಂತ್ರಿಗಳಾದ ಘನತೆವೆತ್ತ ಶ್ರೀ ಶೆರಿಂಗ್ ತೊಬ್ಗೆ ಅವರು ಹಾಗೂ ಅಲ್ಲಿ ಉಪಸ್ಥಿತರಿದ್ದ ಇತರ ಗಣ್ಯಾತಿಗಣ್ಯರಿಗೆ ಪ್ರಧಾನಮಂತ್ರಿಗಳು ಗೌರವಪೂರ್ವಕ ವಂದನೆಗಳನ್ನು ಸಲ್ಲಿಸಿದರು.PM Modi arrives in Bhutan for a two-day state visit
November 11th, 10:42 am
PM Modi arrived in Bhutan a short while ago. His two-day visit seeks to strengthen the special ties of friendship and cooperation between the two countries. The PM was given a warm welcome by Prime Minister of Bhutan Mr. Tshering Tobgay at the airport.ಭೂತಾನ್ ಗೆ ತೆರಳುವ ಮುನ್ನ ಪ್ರಧಾನಮಂತ್ರಿ ಅವರ ಹೇಳಿಕೆ
November 11th, 07:28 am
ನಾನು 2025ರ ನವೆಂಬರ್ 11-12 ರವರೆಗೆ ಭೂತಾನ್ ಸಂಸ್ಥಾನಕ್ಕೆ ಭೇಟಿ ನೀಡಲಿದ್ದೇನೆ ಎಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಹೇಳಿದ್ದಾರೆ.ಭಗವಾನ್ ಬುದ್ಧನ ಪವಿತ್ರ ಅವಶೇಷಗಳಿಗೆ ನೀಡಿದ ಗೌರವಯುತ ಸ್ವಾಗತಕ್ಕೆ ಭೂತಾನಿನ ಜನರು ಮತ್ತು ದೊರೆಗೆ ಕೃತಜ್ಞತೆ ಸಲ್ಲಿಸಿದ ಪ್ರಧಾನಮಂತ್ರಿ
November 09th, 03:43 pm
ಭಾರತದಿಂದ ಭಗವಾನ್ ಬುದ್ಧನ ಪವಿತ್ರ ಅವಶೇಷಗಳಿಗೆ ನೀಡಿದ ಗೌರವಯುತ ಸ್ವಾಗತಕ್ಕಾಗಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಭೂತಾನಿನ ಜನರು ಮತ್ತು ಅಲ್ಲಿನ ದೊರೆಗೆ ಹೃತ್ಪೂರ್ವಕ ಕೃತಜ್ಞತೆ ಸಲ್ಲಿಸಿದ್ದಾರೆ. ಭಗವಾನ್ ಬುದ್ಧನ ಅವಶೇಷಗಳು ಶಾಂತಿ, ಕರುಣೆ ಮತ್ತು ಸಾಮರಸ್ಯದ ಕಾಲಾತೀತ ಸಂದೇಶವನ್ನು ಸಂಕೇತಿಸುತ್ತವೆ. ಭಗವಾನ್ ಬುದ್ಧನ ಬೋಧನೆಗಳು ನಮ್ಮ ಎರಡೂ ರಾಷ್ಟ್ರಗಳ ಹಂಚಿಕೆಯ ಆಧ್ಯಾತ್ಮಿಕ ಪರಂಪರೆಯ ನಡುವಿನ ಪವಿತ್ರ ಕೊಂಡಿಯಾಗಿದೆ ಎಂದು ಶ್ರೀ ಮೋದಿ ಹೇಳಿದ್ದಾರೆ.ಪ್ರಧಾನಿ ನರೇಂದ್ರ ಮೋದಿ 2025 ರ ನವೆಂಬರ್ 11-12 ರವರೆಗೆ ಭೂತಾನ್‌ಗೆ ರಾಜ್ಯ ಭೇಟಿ ನೀಡಲಿದ್ದಾರೆ
November 09th, 09:59 am
ಉಭಯ ದೇಶಗಳ ನಡುವಿನ ಸಂಬಂಧಗಳನ್ನು ಬಲಪಡಿಸಲು ಪ್ರಧಾನಿ ಮೋದಿ 2025 ರ ನವೆಂಬರ್ 11-12 ರವರೆಗೆ ಭೂತಾನ್‌ಗೆ ರಾಜ್ಯ ಭೇಟಿ ನೀಡಲಿದ್ದಾರೆ. ಭೇಟಿಯ ಸಮಯದಲ್ಲಿ, ಪ್ರಧಾನಿಯವರು ಭೂತಾನ್ ರಾಜ ಹಿಸ್ ಮೆಜೆಸ್ಟಿ ಜಿಗ್ಮೆ ಖೇಸರ್ ನಮ್ಗ್ಯೆಲ್ ವಾಂಗ್‌ಚುಕ್ ಮತ್ತು ಭೂತಾನ್ ಪ್ರಧಾನಿ ತ್ಶೆರಿಂಗ್ ಟೋಬ್‌ಗೇ ಅವರನ್ನು ಭೇಟಿ ಮಾಡಲಿದ್ದಾರೆ. ಭೂತಾನ್‌ನ ನಾಲ್ಕನೇ ದೊರೆ ಹಿಸ್ ಮೆಜೆಸ್ಟಿ ಜಿಗ್ಮೆ ಸಿಂಗ್ಯೆ ವಾಂಗ್‌ಚುಕ್ ಅವರ 70 ನೇ ಜನ್ಮ ದಿನಾಚರಣೆ ಮತ್ತು ಜಾಗತಿಕ ಶಾಂತಿ ಪ್ರಾರ್ಥನಾ ಉತ್ಸವದಲ್ಲಿಯೂ ಪ್ರಧಾನಿ ಭಾಗವಹಿಸಲಿದ್ದಾರೆ.ಪ್ರಧಾನಮಂತ್ರಿ ಮೋದಿ ಅವರಿಂದ ಭೂತಾನ್ ಪ್ರಧಾನಮಂತ್ರಿ ಅವರ ಶ್ರೀ ರಾಮ ಜನ್ಮಭೂಮಿ ಮಂದಿರ ಭೇಟಿಗೆ ಸ್ವಾಗತ
September 06th, 08:28 pm
ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ಮಂದಿರದಲ್ಲಿ ಭೂತಾನ್ ಪ್ರಧಾನಮಂತ್ರಿ ತೋಬ್ಗೆ ಮತ್ತು ಅವರ ಪತ್ನಿ ಪ್ರಾರ್ಥನೆ ಸಲ್ಲಿಸುವುದನ್ನು ನೋಡಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಸಂತಸ ವ್ಯಕ್ತಪಡಿಸಿದ್ದಾರೆ. ಪ್ರಭು ಶ್ರೀ ರಾಮನ ಆದರ್ಶಗಳು ಜಗತ್ತಿನಾದ್ಯಂತ ಲಕ್ಷಾಂತರ ಜನರಿಗೆ ಬಲವನ್ನು ಮತ್ತು ಸ್ಫೂರ್ತಿಯನ್ನು ನೀಡುತ್ತಲಿದೆ ಎಂದು ಶ್ರೀ ಮೋದಿ ಅವರು ಹೇಳಿದ್ದಾರೆ.79ನೇ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳಿಗಾಗಿ ವಿಶ್ವದೆಲ್ಲೆಡೆಗಿನ ನಾಯಕರಿಗೆ ಪ್ರಧಾನಮಂತ್ರಿ ಅವರು ಧನ್ಯವಾದ ಅರ್ಪಿಸಿದರು
August 15th, 07:26 pm
79ನೇ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳಿಗಾಗಿ ವಿಶ್ವದೆಲ್ಲೆಡೆಗಿನ ನಾಯಕರಿಗೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಧನ್ಯವಾದ ಅರ್ಪಿಸಿದರು.ಪಶ್ಚಿಮ ಬಂಗಾಳದ ಅಲಿಪುರ್ದಾರ್ ನಲ್ಲಿ ನಗರ ಅನಿಲ ವಿತರಣಾ ಯೋಜನೆಯ ಶಿಲಾನ್ಯಾಸ ಸಮಾರಂಭದಲ್ಲಿ ಪ್ರಧಾನಮಂತ್ರಿ ಅವರ ಭಾಷಣ
May 29th, 01:30 pm
ಕೇಂದ್ರ ಸಚಿವ ಸಂಪುಟದಲ್ಲಿ ನನ್ನ ಸಹೋದ್ಯೋಗಿ ಸುಕಾಂತ ಮಜುಂದಾರ್ ಜೀ, ಪಶ್ಚಿಮ ಬಂಗಾಳ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸುವೆಂದು ಅಧಿಕಾರಿ ಜೀ, ಅಲಿಪುರ್ದಾರ್ ನ ಜನಪ್ರಿಯ ಸಂಸದ ಸಹೋದರ ಮನೋಜ್ ಟಿಗ್ಗಾ ಜೀ, ಇತರ ಸಂಸದರು, ಶಾಸಕರು ಮತ್ತು ಬಂಗಾಳದ ನನ್ನೆಲ್ಲಾ ಸಹೋದರ ಸಹೋದರಿಯರೇ!