ಆಂಧ್ರಪ್ರದೇಶ (ತಿರುಪತಿ), ಛತ್ತೀಸಗಢ (ಭಿಲಾಯಿ), ಜಮ್ಮು ಮತ್ತು ಕಾಶ್ಮೀರ (ಜಮ್ಮು), ಕರ್ನಾಟಕ (ಧಾರವಾಡ) ಮತ್ತು ಕೇರಳ(ಪಾಲಕ್ಕಾಡ್)ಗಳಲ್ಲಿ ಸ್ಥಾಪಿಸಲಾದ ಐದು ಭಾರತೀಯ ತಂತ್ರಜ್ಞಾನ ಸಂಸ್ಥೆಗಳ (ಐಐಟಿ) ಶೈಕ್ಷಣಿಕ ಮತ್ತು ಮೂಲಸೌಕರ್ಯ ಸಾಮರ್ಥ್ಯ ವಿಸ್ತರಣೆಗೆ ಸಂಪುಟದ ಅನುಮೋದನೆ
May 07th, 12:10 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ಇಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆಯು, ಐದು ಹೊಸ ಐಐಟಿಗಳ ಶೈಕ್ಷಣಿಕ ಮತ್ತು ಮೂಲಸೌಕರ್ಯ ಸಾಮರ್ಥ್ಯ ವಿಸ್ತರಣೆಗೆ (ಹಂತ-‘ಬಿ’ನಿರ್ಮಾಣ) ಅನುಮೋದನೆ ನೀಡಿದೆ. ಈ ಐದು ಹೊಸ ಐಐಟಿಗಳನ್ನು ಆಂಧ್ರಪ್ರದೇಶ (ಐಐಟಿ ತಿರುಪತಿ), ಕೇರಳ (ಐಐಟಿ ಪಾಲಕ್ಕಾಡ್), ಛತ್ತೀಸಗಢ (ಐಐಟಿ ಭಿಲಾಯಿ), ಜಮ್ಮು ಮತ್ತು ಕಾಶ್ಮೀರ (ಐಐಟಿ ಜಮ್ಮು) ಮತ್ತು ಕರ್ನಾಟಕ (ಐಐಟಿ ಧಾರವಾಡ) ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಲ್ಲಿ ಸ್ಥಾಪಿಸಲಾಗಿದೆ.