ನವರಾತ್ರಿಯ ಸಂದರ್ಭದಲ್ಲಿ ಪಂಡಿತ್ ಜಸ್ರಾಜ್ ಅವರ ಭಾವಪೂರ್ಣ ಗಾಯನವನ್ನು ಹಂಚಿಕೊಂಡ ಪ್ರಧಾನಮಂತ್ರಿ

September 22nd, 09:32 am

ನವರಾತ್ರಿಯ ಸಂದರ್ಭದಲ್ಲಿ ಪಂಡಿತ್ ಜಸ್ರಾಜ್ ಅವರ ಭಾವಪೂರ್ಣ ಗಾಯನವನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಹಂಚಿಕೊಂಡಿದ್ದಾರೆ. ನವರಾತ್ರಿಯ ಈ ಶುಭ ಸಂದರ್ಭದಲ್ಲಿ ಶುದ್ಧ ಭಕ್ತಿಯ ಬಗ್ಗೆ ಅನೇಕ ಜನರು ಈ ಭಕ್ತಿಯನ್ನು ಸಂಗೀತದ ಮೂಲಕ ಅಂತರ್ಗತಗೊಳಿಸಿದ್ದಾರೆ ಎಂದು ಶ್ರೀ ಮೋದಿ ಅವರು ಹೇಳಿದ್ದಾರೆ. ನೀವು ಭಜನೆ ಹಾಡಿದ್ದರೆ ಅಥವಾ ನಿಮಗೆ ಇಷ್ಟವಾದ ಭಜನೆ ಯಾವುದಾದರೂ ಇದ್ದರೆ, ದಯವಿಟ್ಟು ಅದನ್ನು ನನ್ನೊಂದಿಗೆ ಹಂಚಿಕೊಳ್ಳಿ. ಮುಂಬರುವ ದಿನಗಳಲ್ಲಿ ನಾನು ಅವುಗಳಲ್ಲಿ ಕೆಲವನ್ನು ರೀ-ಪೋಸ್ಟ್ ಮಾಡುತ್ತೇನೆ! ಎಂದು ಶ್ರೀ ಮೋದಿ ಅವರು ತಿಳಿಸಿದ್ದಾರೆ.