RJD forced Congress to surrender its CM claim at gunpoint: PM Modi in Bhagalpur, Bihar
November 06th, 12:01 pm
In the Bhagalpur rally, PM Modi criticised RJD and Congress for never understanding the value of self-reliance or Swadeshi. He reminded the people that the Congress can never erase the stain of the Bhagalpur riots. Outlining NDA’s roadmap for progress, PM Modi said the government is working to make Bihar a hub for textiles, tourism and technology.PM Modi stirs up massive rallies with his addresses in Araria & Bhagalpur, Bihar
November 06th, 11:35 am
PM Modi addressed large public gatherings in Araria & Bhagalpur, Bihar, where people turned up in huge numbers to express their support for the NDA. Speaking with conviction, PM Modi said that the people of Bihar have already made up their minds – ‘Phir Ekbar, NDA Sarkar!’ಬಿಹಾರದ ಪುರ್ನಿಯಾದಲ್ಲಿ ವಿವಿಧ ಅಭಿವೃದ್ಧಿ ಯೋಜನೆಗಳ ಉದ್ಘಾಟನಾ ಸಮಾರಂಭ ಉದ್ದೇಶಿಸಿ ಪ್ರಧಾನಮಂತ್ರಿ ಭಾಷಣ
September 15th, 04:30 pm
ಗೌರವಾನ್ವಿತ ರಾಜ್ಯಪಾಲರಾದ ಶ್ರೀ ಆರಿಫ್ ಮೊಹಮ್ಮದ್ ಖಾನ್ ಜಿ, ನಮ್ಮ ಜನಪ್ರಿಯ ಮುಖ್ಯಮಂತ್ರಿ ಶ್ರೀ ನಿತೀಶ್ ಕುಮಾರ್ ಜಿ, ವೇದಿಕೆಯಲ್ಲಿ ಉಪಸ್ಥಿತರಿರುವ ಇತರೆ ಗಣ್ಯರೆ ಮತ್ತು ನನ್ನ ಪ್ರೀತಿಯ ಸಹೋದರ ಸಹೋದರಿಯರೆ!ಬಿಹಾರದ ಪೂರ್ಣಿಯಾದಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಂದ ಸುಮಾರು ₹40,000 ಕೋಟಿ ಮೌಲ್ಯದ ಅಭಿವೃದ್ಧಿ ಕಾಮಗಾರಿಗಳಿಗೆ ಅಡಿಗಲ್ಲು ಹಾಗೂ ಉದ್ಘಾಟನೆ
September 15th, 04:00 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಬಿಹಾರದ ಪೂರ್ಣಿಯಾದಲ್ಲಿ ಸುಮಾರು ₹40,000 ಕೋಟಿ ಮೌಲ್ಯದ ಅಭಿವೃದ್ಧಿ ಕಾಮಗಾರಿಗಳಿಗೆ ಶಿಲಾನ್ಯಾಸ ನೆರವೇರಿಸಿ, ಹಲವು ಯೋಜನೆಗಳನ್ನು ಉದ್ಘಾಟಿಸಿದರು. ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿ, ಎಲ್ಲರಿಗೂ ಗೌರವಪೂರ್ವಕ ಶುಭಾಶಯಗಳನ್ನು ತಿಳಿಸಿದರು. ಪೂರ್ಣಿಯಾವು ಮಾ ಪುರನ್ ದೇವಿ, ಭಕ್ತ ಪ್ರಹ್ಲಾದ, ಮತ್ತು ಮಹರ್ಷಿ ಮೇಹಿ ಬಾಬಾ ಅವರ ಪುಣ್ಯಭೂಮಿಯಾಗಿದೆ ಎಂದು ಅವರು ಬಣ್ಣಿಸಿದರು. ಈ ಮಣ್ಣು ಫಣೀಶ್ವರ್ ನಾಥ್ ರೇಣು ಮತ್ತು ಸತೀನಾಥ್ ಭಾದುರಿ ಅವರಂತಹ ಸಾಹಿತ್ಯ ದಿಗ್ಗಜರಿಗೆ ಜನ್ಮ ನೀಡಿದೆ ಎಂದು ಶ್ರೀ ಮೋದಿಯವರು ಸ್ಮರಿಸಿದರು. ಇದಲ್ಲದೆ, ಈ ಪ್ರದೇಶವು ವಿನೋಬಾ ಭಾವೆ ಅವರಂತಹ ನಿಷ್ಠಾವಂತ ಕರ್ಮಯೋಗಿಗಳ ಕರ್ಮಭೂಮಿಯಾಗಿದೆ ಎಂದು ಹೇಳಿದ ಅವರು, ಈ ಪವಿತ್ರ ಭೂಮಿಯ ಬಗ್ಗೆ ತನಗೆ ಅಗಾಧವಾದ ಗೌರವವಿದೆ ಎಂದು ಹೇಳಿದರು.ಸೆಪ್ಟೆಂಬರ್ 13 ರಿಂದ 15 ರವರೆಗೆ ಪ್ರಧಾನಮಂತ್ರಿ ಮಿಜೋರಾಂ, ಮಣಿಪುರ, ಅಸ್ಸಾಂ, ಪಶ್ಚಿಮ ಬಂಗಾಳ ಮತ್ತು ಬಿಹಾರ ಭೇಟಿ
September 12th, 02:12 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇದೇ ಸೆಪ್ಟಂಬರ್ 13ರಿಂದ 15ರವರೆಗೆ ಮಿಜೋರಾಂ, ಮಣಿಪುರ, ಅಸ್ಸಾಂ, ಪಶ್ಚಿಮ ಬಂಗಾಳ ಮತ್ತು ಬಿಹಾರಕ್ಕೆ ಭೇಟಿ ನೀಡಲಿದ್ದಾರೆ.ಬಿಹಾರ, ಜಾರ್ಖಂಡ್ ಮತ್ತು ಪಶ್ಚಿಮ ಬಂಗಾಳಗಳಲ್ಲಿ ಭಾಗಲ್ಪುರ್ - ದುಮ್ಕಾ – ರಾಂಪುರ್ ಹಾತ್ ಏಕ ರೈಲು ಮಾರ್ಗದಲ್ಲಿ (177 ಕಿ.ಮೀ) ಒಟ್ಟು 3,169 ಕೋಟಿ ರೂ ವೆಚ್ಚದಲ್ಲಿ ಜೋಡಿ ಹಳಿ ಮಾರ್ಗಕ್ಕೆ ಸಂಪುಟ ಅನುಮೋದನೆ
September 10th, 03:05 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ಇಂದು ನಡೆದ ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿಯು ಬಿಹಾರ, ಜಾರ್ಖಂಡ್ ಮತ್ತು ಪಶ್ಚಿಮ ಬಂಗಾಳದಲ್ಲಿ ಭಾಗಲ್ಪುರ್ - ದುಮ್ಕಾ - ರಾಂಪುರ್ ಹಾತ್ ಏಕ ರೈಲು ಮಾರ್ಗವನ್ನು (177 ಕಿ.ಮೀ) ಒಟ್ಟು (ಅಂದಾಜು) ರೂ. 3,169 ಕೋಟಿ ವೆಚ್ಚದಲ್ಲಿ ಜೋಡಿ ಮಾರ್ಗ ನಿರ್ಮಾಣ ಮಾಡಲು ಅನುಮೋದನೆ ನೀಡಿದೆ.ಬಿಹಾರದ ಬಕ್ಸರ್-ಭಾಗಲ್ಪುರ್ ಹೈ-ಸ್ಪೀಡ್ ಕಾರಿಡಾರ್ ನ ಭಾಗವಾಗಿ, 82.4 ಕಿ.ಮೀ. ಉದ್ದದ ಮೊಕಾಮಾ-ಮುಂಗೇರ್ ವಿಭಾಗವನ್ನು ಹೈಬ್ರಿಡ್ ಆನ್ಯುಟಿ ಮೋಡ್ (HAM) ಅಡಿಯಲ್ಲಿ ರೂ. 4447.38 ಕೋಟಿ ವೆಚ್ಚದಲ್ಲಿ 4-ಪಥದ ಗ್ರೀನ್ ಫೀಲ್ಡ್ ಪ್ರವೇಶ-ನಿಯಂತ್ರಿತ ರಸ್ತೆಯಾಗಿ ನಿರ್ಮಿಸಲು ಕೇಂದ್ರ ಸಂಪುಟ ಅನುಮೋದನೆ ನೀಡಿದೆ
September 10th, 03:02 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿಯು, ಬಿಹಾರದ ಬಕ್ಸರ್-ಭಾಗಲ್ಪುರ್ ಹೈ-ಸ್ಪೀಡ್ ಕಾರಿಡಾರ್ ನ ಮೊಕಾಮಾ-ಮುಂಗೇರ್ ವಿಭಾಗದ ನಿರ್ಮಾಣಕ್ಕೆ ಅನುಮೋದನೆ ನೀಡಿದೆ. ಇದು 4 ಪಥದ ಗ್ರೀನ್ ಫೀಲ್ಡ್, ಪ್ರವೇಶ-ನಿಯಂತ್ರಿತ ರಸ್ತೆಯಾಗಿದ್ದು, ಇದನ್ನು ಹೈಬ್ರಿಡ್ ಆನ್ಯುಟಿ ಮೋಡ್ (HAM) ಅಡಿಯಲ್ಲಿ ನಿರ್ಮಿಸಲಾಗುವುದು. ಈ ಯೋಜನೆಯ ಒಟ್ಟು ಉದ್ದ 82.400 ಕಿ.ಮೀ ಇದ್ದು, ಒಟ್ಟು ಬಂಡವಾಳ ವೆಚ್ಚ ₹4,447.38 ಕೋಟಿ ಆಗಿದೆ.ಕರ್ನಾಟಕ, ತೆಲಂಗಾಣ, ಬಿಹಾರ ಮತ್ತು ಅಸ್ಸಾಂಗಳಿಗೆ ಪ್ರಯೋಜನಕಾರಿಯಾದ 3 ಯೋಜನೆಗಳ ಮಲ್ಟಿ-ಟ್ರ್ಯಾಕಿಂಗ್ ವ್ಯವಸ್ಥೆಗೆ ಮತ್ತು ಗುಜರಾತ್ ರಾಜ್ಯದ ಕಚ್ ನ ದೂರದ ಪ್ರದೇಶಗಳನ್ನು ಸಂಪರ್ಕಿಸಲು ಒಂದು ಹೊಸ ರೈಲು ಮಾರ್ಗಕ್ಕೆ ಕೇಂದ್ರ ಸಂಪುಟ ಸಭೆಯು ಅನುಮೋದನೆ ನೀಡಿದೆ
August 27th, 04:50 pm
ಮೇಲಿನ ಯೋಜನೆಗಳು ಪ್ರಯಾಣಿಕರು ಮತ್ತು ಸರಕುಗಳ ಸುಗಮ ಮತ್ತು ವೇಗದ ಸಾಗಣೆಯನ್ನು ಖಚಿತಪಡಿಸಿಕೊಳ್ಳುವ ಗುರಿಯನ್ನು ಹೊಂದಿವೆ. ಈ ಉಪಕ್ರಮಗಳು ಸಂಪರ್ಕವನ್ನು ಒದಗಿಸುತ್ತವೆ ಮತ್ತು ಪ್ರಯಾಣದ ಅನುಕೂಲತೆಯನ್ನು ಸುಧಾರಿಸುತ್ತವೆ, ಜೊತೆಗೆ ಲಾಜಿಸ್ಟಿಕ್ (ಸರಕುಗಳ ಸಾಗಣೆ) ವೆಚ್ಚವನ್ನು ಕಡಿಮೆ ಮಾಡುತ್ತವೆ ಮತ್ತು ತೈಲ ಆಮದಿನ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುತ್ತವೆ. ಹೆಚ್ಚುವರಿಯಾಗಿ, ಯೋಜನೆಗಳು ಕಡಿಮೆ CO2 (ಇಂಗಾಲದ ಡೈಆಕ್ಸೈಡ್) ಹೊರಸೂಸುವಿಕೆಗೆ ಸಹಾಯಕವಾಗಿವೆ, ಇದರಿಂದಾಗಿ ಸುಸ್ಥಿರ ಮತ್ತು ಪರಿಣಾಮಕಾರಿ ರೈಲು ಕಾರ್ಯಾಚರಣೆಗಳನ್ನು ಬೆಂಬಲಿಸುತ್ತವೆ. ಯೋಜನೆಗಳು ಅದರ ನಿರ್ಮಾಣದ ಸಮಯದಲ್ಲಿ ಸುಮಾರು 251 (ಎರಡು ನೂರ ಐವತ್ತೊಂದು) ಲಕ್ಷ ಮಾನವ-ದಿನಗಳ ನೇರ ಉದ್ಯೋಗವನ್ನು ಸೃಷ್ಟಿಸುತ್ತವೆ.17ನೇ ನಾಗರಿಕ ಸೇವಾ ದಿನದಂದು ಪ್ರಧಾನಮಂತ್ರಿಯವರ ಭಾಷಣ
April 21st, 11:30 am
ನನ್ನ ಸಂಪುಟ ಸಹೋದ್ಯೋಗಿ ಡಾ. ಜಿತೇಂದ್ರ ಸಿಂಗ್ ಜಿ, ಶ್ರೀ ಶಕ್ತಿಕಾಂತ ದಾಸ್ ಜಿ, ಡಾ. ಸೋಮನಾಥನ್ ಜಿ, ಇತರ ಹಿರಿಯ ಅಧಿಕಾರಿಗಳು, ದೇಶಾದ್ಯಂತ ನಾಗರಿಕ ಸೇವೆಗಳ ಎಲ್ಲಾ ಸಹೋದ್ಯೋಗಿಗಳು, ಮಹಿಳೆಯರೇ ಮತ್ತು ಮಹನೀಯರೇ!17ನೇ ನಾಗರಿಕ ಸೇವಾ ದಿನವನ್ನು ಉದ್ದೇಶಿಸಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಭಾಷಣ
April 21st, 11:00 am
ನವದೆಹಲಿಯ ವಿಜ್ಞಾನ ಭವನದಲ್ಲಿ ಇಂದು ನಡೆದ 17ನೇ ನಾಗರಿಕ ಸೇವಾ ದಿನದಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ನಾಗರಿಕ ಸೇವೆಗಳ ಅಧಿಕಾರಿಗಳನ್ನು ಉದ್ದೇಶಿಸಿ ಮಾತನಾಡಿದರು. ಸಾರ್ವಜನಿಕ ಆಡಳಿತದಲ್ಲಿ ಶ್ರೇಷ್ಠತೆಗಾಗಿ ಪ್ರಧಾನಮಂತ್ರಿಯವರ ಪ್ರಶಸ್ತಿಗಳನ್ನು ಸಹ ಅವರು ಪ್ರದಾನ ಮಾಡಿದರು. ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿ ಅವರು ನಾಗರಿಕ ಸೇವಾ ದಿನದ ಸಂದರ್ಭದಲ್ಲಿ ಎಲ್ಲರಿಗೂ ಅಭಿನಂದನೆ ಸಲ್ಲಿಸಿದರು ಮತ್ತು ಸಂವಿಧಾನದ 75ನೇ ವರ್ಷ ಮತ್ತು ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ 150ನೇ ಜಯಂತಿಯಾದ ಈ ವರ್ಷದ ಆಚರಣೆಯ ಮಹತ್ವವನ್ನು ಎತ್ತಿ ತೋರಿಸಿದರು. ಏಪ್ರಿಲ್ 21, 1947 ರಂದು ಸರ್ದಾರ್ ಪಟೇಲ್ ಅವರು 'ಭಾರತದ ಉಕ್ಕಿನ ಚೌಕಟ್ಟು' ಎಂದು ನಾಗರಿಕ ಸೇವಕರನ್ನು ಬಣ್ಣಿಸಿದ ಐತಿಹಾಸಿಕ ಹೇಳಿಕೆಯನ್ನು ಸ್ಮರಿಸಿದ ಶ್ರೀ ಮೋದಿ, ಶಿಸ್ತು, ಪ್ರಾಮಾಣಿಕತೆ ಮತ್ತು ಪ್ರಜಾಪ್ರಭುತ್ವ ಮೌಲ್ಯಗಳನ್ನು ಎತ್ತಿಹಿಡಿಯುವ, ಅತ್ಯಂತ ಸಮರ್ಪಣಾಬಾವದಿಂದ ರಾಷ್ಟ್ರಕ್ಕೆ ಸೇವೆ ಸಲ್ಲಿಸುವ ಅಧಿಕಾರಶಾಹಿಯನ್ನು ಕುರಿತ ಪಟೇಲ್ ಅವರ ದೃಷ್ಟಿಕೋನವನ್ನು ಒತ್ತಿ ಹೇಳಿದರು. ಭಾರತವು ವಿಕಸಿತ ಭಾರತವಾಗುವ ಸಂಕಲ್ಪದ ಸಂದರ್ಭದಲ್ಲಿ ಸರ್ದಾರ್ ಪಟೇಲ್ ಅವರ ಆದರ್ಶಗಳ ಪ್ರಸ್ತುತತೆಯನ್ನು ಅವರು ಒತ್ತಿ ಹೇಳಿದರು ಮತ್ತು ಸರ್ದಾರ್ ಪಟೇಲ್ ಅವರ ದೃಷ್ಟಿಕೋನ ಮತ್ತು ಪರಂಪರೆಗೆ ಹೃತ್ಪೂರ್ವಕ ಗೌರವ ಸಲ್ಲಿಸಿದರು.ಬಿಹಾರದ ಭಾಗಲ್ಪುರದಲ್ಲಿ ಅಭಿವೃದ್ಧಿ ಕಾರ್ಯಗಳ ಉದ್ಘಾಟನೆ ಕಾರ್ಯಕ್ರಮ ಉದ್ದೇಶಿಸಿ ಪ್ರಧಾನಮಂತ್ರಿ ಭಾಷಣ
February 24th, 02:35 pm
ವೇದಿಕೆಯಲ್ಲಿರುವ ನಮ್ಮ ಪ್ರೀತಿಯ ಮುಖ್ಯಮಂತ್ರಿ ನಿತೀಶ್ ಕುಮಾರ್ ಜಿ ಅವರೊಂದಿಗೆ ಗೌರವಾನ್ವಿತ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಜಿ ಇದ್ದಾರೆ, ಅವರು ಬಿಹಾರದ ಅಭಿವೃದ್ಧಿಗೆ ತಮ್ಮ ಸಮರ್ಪಣೆ ಮೂಲಕ ವ್ಯಾಪಕ ಮೆಚ್ಚುಗೆ ಪಡೆದಿದ್ದಾರೆ. ನನ್ನ ಗೌರವಾನ್ವಿತ ಸಂಪುಟ ಸಹೋದ್ಯೋಗಿಗಳಾದ ಶಿವರಾಜ್ ಸಿಂಗ್ ಚೌಹಾಣ್ ಜಿ, ಜಿತನ್ ರಾಮ್ ಮಾಂಝಿ ಜಿ, ಲಲ್ಲನ್ ಸಿಂಗ್ ಜಿ, ಗಿರಿರಾಜ್ ಸಿಂಗ್ ಜಿ, ಚಿರಾಗ್ ಪಾಸ್ವಾನ್ ಜಿ - ರಾಜ್ಯ ಸಚಿವರಾದ ಶ್ರೀ ರಾಮನಾಥ್ ಠಾಕೂರ್ ಜಿ, ಬಿಹಾರದ ಉಪಮುಖ್ಯಮಂತ್ರಿ ಸಾಮ್ರಾಟ್ ಚೌಧರಿ ಜಿ, ವಿಜಯ್ ಸಿನ್ಹಾ ಜಿ, ರಾಜ್ಯದ ಇತರೆ ಸಚಿವರೆ, ಸಾರ್ವಜನಿಕ ಪ್ರತಿನಿಧಿಗಳೆ, ಗಣ್ಯರೆ ಮತ್ತು ಬಿಹಾರದ ನನ್ನ ಪ್ರೀತಿಯ ಸಹೋದರ ಸಹೋದರಿಯರೆ,ಪಿಎಂ ಕಿಸಾನ್ ನ 19ನೇ ಕಂತನ್ನು ಬಿಡುಗಡೆ ಮಾಡಿದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ, ಬಿಹಾರದ ಭಾಗಲ್ ಪುರದಲ್ಲಿ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ
February 24th, 02:30 pm
ರೈತರ ಕಲ್ಯಾಣವನ್ನು ಖಾತ್ರಿಪಡಿಸುವ ತಮ್ಮ ಬದ್ಧತೆಗೆ ಅನುಗುಣವಾಗಿ, ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಬಿಹಾರದ ಭಾಗಲ್ ಪುರದಲ್ಲಿ ಪಿಎಂ ಕಿಸಾನ್ ನ 19ನೇ ಕಂತನ್ನು ಬಿಡುಗಡೆ ಮಾಡಿದರು. ಈ ಸಂದರ್ಭದಲ್ಲಿ ಅವರು ಹಲವು ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಿದರು. ಕಾರ್ಯಕ್ರಮಕ್ಕೆ ವರ್ಚುವಲ್ ಮೂಲಕ ಭಾಗವಹಿಸಿದ ಎಲ್ಲ ಗಣ್ಯರು ಮತ್ತು ಜನರನ್ನು ಶ್ರೀ ಮೋದಿ ಸ್ವಾಗತಿಸಿದರು. ಮಹಾಕುಂಭದ ಪವಿತ್ರ ಅವಧಿಯಲ್ಲಿ ಮಂದಾರಾಚಲದ ಭೂಮಿಯಲ್ಲಿ ಹೆಜ್ಜೆ ಹಾಕುವುದು ಒಂದು ದೊಡ್ಡ ಸೌಭಾಗ್ಯ ಎಂದು ಅವರು ಹೇಳಿದರು. ಈ ಸ್ಥಳವು ಆಧ್ಯಾತ್ಮಿಕತೆ, ಪರಂಪರೆ ಮತ್ತು ವಿಕ್ಷಿತ್ ಭಾರತದ ಸಾಮರ್ಥ್ಯವನ್ನು ಹೊಂದಿದೆ ಎಂದು ಅವರು ಹೇಳಿದರು. ಇದು ಹುತಾತ್ಮ ತಿಲ್ಕಾ ಮಾಂಝಿ ಅವರ ಭೂಮಿ ಮತ್ತು ಸಿಲ್ಕ್ ಸಿಟಿ ಎಂದು ಕೂಡಾ ಪ್ರಸಿದ್ಧವಾಗಿದೆ ಎಂದು ಶ್ರೀ ಮೋದಿ ಹೇಳಿದರು. ಬಾಬಾ ಅಜ್ಜೈಬಿನಾಥ್ ಅವರ ಪವಿತ್ರ ಭೂಮಿಯಲ್ಲಿ ಮುಂಬರುವ ಮಹಾ ಶಿವರಾತ್ರಿಗೆ ಸಿದ್ಧತೆಗಳು ನಡೆದಿವೆ ಎಂದು ಅವರು ಉಲ್ಲೇಖಿಸಿದರು. ಇಂತಹ ಪವಿತ್ರ ಸಮಯದಲ್ಲಿ ಪಿಎಂ ಕಿಸಾನ್ ನ 19 ನೇ ಕಂತನ್ನು ಬಿಡುಗಡೆ ಮಾಡುವ ಅದೃಷ್ಟ ನನ್ನದಾಗಿದೆ ಮತ್ತು ಸುಮಾರು 22,000 ಕೋಟಿ ರೂ.ಗಳನ್ನು ನೇರ ಲಾಭ/ನಗದು ವರ್ಗಾವಣೆಯ ಮೂಲಕ ನೇರವಾಗಿ ರೈತರ ಬ್ಯಾಂಕ್ ಖಾತೆಗಳಿಗೆ ಜಮಾ ಮಾಡಲಾಗಿದೆ ಎಂದು ಅವರು ಹೇಳಿದರು.ಫೆಬ್ರವರಿ 23 ರಿಂದ 25 ರವರೆಗೆ ಮಧ್ಯಪ್ರದೇಶ, ಬಿಹಾರ ಮತ್ತು ಅಸ್ಸಾಂ ರಾಜ್ಯಗಳಿಗೆ ಭೇಟಿ ನೀಡಲಿರುವ ಪ್ರಧಾನಮಂತ್ರಿ
February 22nd, 02:05 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಫೆಬ್ರವರಿ 23 ರಿಂದ 25, 2025 ರವರೆಗೆ ಮಧ್ಯಪ್ರದೇಶ, ಬಿಹಾರ ಮತ್ತು ಅಸ್ಸಾಂ ರಾಜ್ಯಗಳಿಗೆ ಭೇಟಿ ನೀಡಲಿದ್ದಾರೆ. ಫೆಬ್ರವರಿ 23, 2025 ರಂದು, ಅವರು ಮಧ್ಯಪ್ರದೇಶದ ಛತ್ತರ್ ಪುರ ಜಿಲ್ಲೆಯಲ್ಲಿ ಪ್ರಯಾಣಿಸಲಿದ್ದಾರೆ ಮತ್ತು ಅಂದು ಮಧ್ಯಾಹ್ನ 2 ಗಂಟೆಗೆ, ಪ್ರಧಾನಮಂತ್ರಿಯವರು ಬಾಗೇಶ್ವರ್ ಧಾಮ್ ವೈದ್ಯಕೀಯ ಮತ್ತು ವಿಜ್ಞಾನ ಸಂಶೋಧನಾ ಸಂಸ್ಥೆಗೆ ಶಂಕುಸ್ಥಾಪನೆ ಮಾಡಲಿದ್ದಾರೆ. ಫೆಬ್ರವರಿ 24 ,2025 ರಂದು, ಸುಮಾರು 10 ಗಂಟೆಗೆ, ಪ್ರಧಾನಮಂತ್ರಿಯವರು ಮಧ್ಯಪ್ರದೇಶದ ಭೋಪಾಲ್ ನಲ್ಲಿ ಜಾಗತಿಕ ಹೂಡಿಕೆದಾರರ ಶೃಂಗಸಭೆ 2025 ಅನ್ನು ಉದ್ಘಾಟಿಸಲಿದ್ದಾರೆ. ನಂತರ, ಅವರು ಬಿಹಾರದ ಭಾಗಲ್ಪುರಕ್ಕೆ ಪ್ರಯಾಣಿಸಲಿದ್ದಾರೆ ಮತ್ತು ಮಧ್ಯಾಹ್ನ 2:15 ರ ಸುಮಾರಿಗೆ, ಪ್ರಧಾನಮಂತ್ರಿಯವರು ಪಿಎಂ ಕಿಸಾನ್ ಯೋಜನೆಯ 19 ನೇ ಕಂತನ್ನು ಬಿಡುಗಡೆ ಮಾಡಲಿದ್ದಾರೆ ಮತ್ತು ಬಿಹಾರದಲ್ಲಿ ವಿವಿಧ ಅಭಿವೃದ್ಧಿ ಯೋಜನೆಗಳನ್ನು ಉದ್ಘಾಟಿಸಿ ರಾಷ್ಟ್ರಕ್ಕೆ ಸಮರ್ಪಿಸಲಿದ್ದಾರೆ. ಹಾಗೂ ಆನಂತರ ಅವರು ಅಸ್ಸಾಂನ ಗುವಾಹಟಿಗೆ ಪ್ರಯಾಣಿಸಲಿದ್ದಾರೆ ಮತ್ತು ಸಂಜೆ 6 ಗಂಟೆಗೆ ಅವರು ಜುಮೋಯಿರ್ ಬಿನಂದಿನಿ (ಮೆಗಾ ಜುಮೋಯಿರ್) 2025 ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಫೆಬ್ರವರಿ 25 ರಂದು, ಬೆಳಗ್ಗೆ ಸುಮಾರು 10:45 ಗಂಟೆಗೆ, ಪ್ರಧಾನಮಂತ್ರಿಯವರು ಗುವಾಹಟಿಯಲ್ಲಿ ಅಡ್ವಾಂಟೇಜ್ ಅಸ್ಸಾಂ 2.0 ಹೂಡಿಕೆ ಮತ್ತು ಮೂಲಸೌಕರ್ಯ ಶೃಂಗಸಭೆ 2025 ಅನ್ನು ಉದ್ಘಾಟಿಸಲಿದ್ದಾರೆ.4Ps of 'people, public, private partnership' make Surat special: PM Modi
September 29th, 11:31 am
PM Modi laid the foundation stone and dedicated various projects worth more than ₹3400 crores in Surat. Recalling the time during the early decades of this century, when 3 P i.e. public-private partnership was discussed in the world, the PM remarked that Surat is an example of 4 P. “4 P means people, public, private partnership. This model makes Surat special”, PM Modi added.PM Modi lays foundation stone & dedicates development projects in Surat, Gujarat
September 29th, 11:30 am
PM Modi laid the foundation stone and dedicated various projects worth more than ₹3400 crores in Surat. Recalling the time during the early decades of this century, when 3 P i.e. public-private partnership was discussed in the world, the PM remarked that Surat is an example of 4 P. “4 P means people, public, private partnership. This model makes Surat special”, PM Modi added.ಭಾಗಲ್ಪುರದಲ್ಲಿ ಸಂಭವಿಸಿದ ಸ್ಫೋಟದಲ್ಲಿ ಪ್ರಾಣಹಾನಿಯ ಬಗ್ಗೆ ಪ್ರಧಾನಿ ವಿಷಾದ
March 04th, 12:02 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಭಾಗಲ್ಪುರದಲ್ಲಿ ಸಂಭವಿಸಿದ ಸ್ಫೋಟದಲ್ಲಿ ಜೀವಹಾನಿಯ ಬಗ್ಗೆ ವಿಷಾದ ವ್ಯಕ್ತಪಡಿಸಿದ್ದಾರೆ. ಈ ಘಟನೆ ಹಾಗೂ ಪರಿಸ್ಥಿತಿಯ ಕುರಿತು ಪ್ರಧಾನ ಮಂತ್ರಿಗಳು ಮುಖ್ಯಮಂತ್ರಿ ಶ್ರೀ ನಿತೀಶ್ ಕುಮಾರ್ ಅವರೊಂದಿಗೆ ಮಾತನಾಡಿದ್ದಾರೆ. ಇದೇ ವೇಳೆ, ಆಡಳಿತವು ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದೆ ಹಾಗೂ ಸಂತ್ರಸ್ತರಿಗೆ ಸಾಧ್ಯವಿರುವ ಎಲ್ಲ ನೆರವು ನೀಡಲಾಗುತ್ತಿದೆ ಎಂದು ತಿಳಿಸಿದ್ದಾರೆ.Time of 'lantern' is gone now: PM Modi in Bhagalpur
October 23rd, 01:02 pm
Bihar, Election, BJP, Karyakarta, Novel Coronavirus, Jan Bhagidari, Good Governance, Infrastructure, Voters, Yuva Shakti, Jobs, Employment, Direct Benefit Transfer, MSP, Farmer Welfare, Agriculture, Defence, India First, Article 370, Jammu & Kashmir, Development, LPG, Pradhan Mantri Ujjwala Yojana, Swachh Bharat Abhiyan, Pradhan Mantri Awas Yojana, Empowering the Poor, Jal Jeevan Mission, Nari Shakti, Women Empowerment, Education, Tribal Community, Rural Development, SVAMITVA Scheme, Dalit Community, Common Eligibility Test, National Education Policy, MUDRA, Fishermen, Kisan Credit Cards, Pradhan Mantri Kisan Samman Nidhi Yojana, Connectivity, NDA, Road, Next Generation Infrastructure, Indian Railways, Farm Bills, Aatma Nirbhar Bharat Abhiyan, Ayushman Bharat Yojana, Pradhan Mantri Gram Sadak Yojana, Jan Dhan Yojana, Banking, Governance Reform, Garib Kalyan Rojgar Abhiyaan, Technology, Pradhan Mantri Krishi Sinchai Yojna, Sasaram, Gaya, Bhagalpur, Public Rally,PM Modi addresses public meetings in Sasaram, Gaya and Bhagalpur in Bihar
October 23rd, 10:30 am
Prime Minister Narendra Modi kickstarted NDA’s campaign for the upcoming Bihar Assembly polls. He addressed his public meetings in Sasaram, Gaya and Bhagalpur today. At the rally, PM Modi said, “Voters of Bihar have taken a resolve that they won't let those who have a history of making the state 'Bimaru' come near them.”ಪೆಟ್ರೋಲಿಯಂ ಕ್ಷೇತ್ರಕ್ಕೆ ಸಂಬಂಧಿಸಿದ ಬಿಹಾರದ ಮೂರು ಪ್ರಮುಖ ಯೋಜನೆಗಳ ಉದ್ಘಾಟನಾ ಸಮಾರಂಭವನ್ನುದ್ದೇಶಿಸಿ ಪ್ರಧಾನಿಯವರು ಮಾಡಿದ ಭಾಷಣದ ಕನ್ನಡ ಅವತರಣಿಕೆ
September 13th, 12:01 pm
ಕಾರ್ಯಕ್ರಮದ ಪ್ರಾರಂಭದಲ್ಲಿ ನಾನು ನಿಮ್ಮೊಂದಿಗೆ ಬಹಳ ದುಃಖದ ಸುದ್ದಿಯನ್ನು ಹಂಚಿಕೊಳ್ಳಬೇಕಾಗಿದೆ. ಬಿಹಾರದ ಹಿರಿಯ ನಾಯಕ ಶ್ರೀ ರಘುವಂಶ ಪ್ರಸಾದ್ ಸಿಂಗ್ ನಮ್ಮನ್ನು ಅಗಲಿದ್ದಾರೆ. ಅವರಿಗೆ ನನ್ನ ಗೌರವ ನಮನಗಳು. ರಘುವಂಶ್ ಬಾಬು ಅವರ ನಿಧನದಿಂದಾಗಿ ಬಿಹಾರ ಮತ್ತು ದೇಶದ ರಾಜಕೀಯ ಕ್ಷೇತ್ರಕ್ಕೆ ತುಂಬಲಾರದ ನಷ್ಟವಾಗಿದೆ. ಅವರು ಬೇರುಗಳೊಂದಿಗೆ ಸಂಪರ್ಕ ಹೊಂದಿದ್ದರು, ಅವರು ಬಡತನವನ್ನು ಅರ್ಥಮಾಡಿಕೊಂಡವರು ಮತ್ತು ಅವರು ತಮ್ಮ ಇಡೀ ಜೀವನವನ್ನು ಬಿಹಾರಕ್ಕಾಗಿ ಮುಡುಪಾಗಿಟ್ಟಿದ್ದರು. ಅವರು ತಮ್ಮ ಜೀವನದುದ್ದಕ್ಕೂ ತಾವು ನಂಬಿದ ಸಿದ್ಧಾಂತವನ್ನು ಬದುಕಲು ಪ್ರಯತ್ನಿಸಿದರು.ಪೆಟ್ರೋಲಿಯಂ ವಲಯಕ್ಕೆ ಸಂಬಂಧಿಸಿದ ಬಿಹಾರದ ಮೂರು ಪ್ರಮುಖ ಯೋಜನೆಗಳನ್ನು ರಾಷ್ಟ್ರಕ್ಕೆ ಸಮರ್ಪಿಸಿದ ಪ್ರಧಾನಿ ನರೇಂದ್ರ ಮೋದಿ
September 13th, 12:00 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಪೆಟ್ರೋಲಿಯಂ ವಲಯಕ್ಕೆ ಸಂಬಂಧಿಸಿದ ಬಿಹಾರದಲ್ಲಿನ ಮೂರು ಪ್ರಮುಖ ಯೋಜನೆಗಳನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ಇಂದು ರಾಷ್ಟ್ರಕ್ಕೆ ಸಮರ್ಪಿಸಿದರು.