ಐ.ಎನ್.ಎಸ್. ವಿಕ್ರಾಂತ್ ನಲ್ಲಿ ದೀಪಾವಳಿ ಆಚರಣೆಯ ಕ್ಷಣಗಳನ್ನು ಹಂಚಿಕೊಂಡ ಪ್ರಧಾನಮಂತ್ರಿ

October 21st, 09:30 am

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಐ.ಎನ್.ಎಸ್. ವಿಕ್ರಾಂತ್ ನಲ್ಲಿ ಭಾರತೀಯ ನೌಕಾಪಡೆಯೊಂದಿಗೆ ಆಚರಿಸಿದ ದೀಪಾವಳಿ ಆಚರಣೆಯ ಕ್ಷಣಗಳನ್ನು ಹಂಚಿಕೊಂಡರು. ಈ ದಿನವು ಒಂದು ಗಮನಾರ್ಹ ದಿನ, ಒಂದು ಗಮನಾರ್ಹ ಕ್ಷಣ ಮತ್ತು ಒಂದು ಗಮನಾರ್ಹ ದೃಶ್ಯವಾಗಿತ್ತು ಎಂದು ಉಲ್ಲೇಖಿಸಿದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಒಂದು ಕಡೆ ವಿಶಾಲ ಸಾಗರ ಮತ್ತು ಇನ್ನೊಂದು ಕಡೆ ಭಾರತ ಮಾತೆಯ ಧೈರ್ಯಶಾಲಿ ಸೈನಿಕರ ಅಗಾಧ ಶಕ್ತಿಯನ್ನು ಪ್ರದರ್ಶಿಸುತ್ತದೆ. ಒಂದು ಕಡೆ ಅನಂತ ದಿಗಂತ ಮತ್ತು ಮಿತಿಯಿಲ್ಲದ ಆಕಾಶವನ್ನು ಪ್ರಸ್ತುತಪಡಿಸಿದರೆ, ಇನ್ನೊಂದು ಕಡೆ ಅನಂತ ಶಕ್ತಿಯನ್ನು ಸಾಕಾರಗೊಳಿಸುವ ಐ.ಎನ್.ಎಸ್. ವಿಕ್ರಾಂತ್ ನ ಬೃಹತ್ ಶಕ್ತಿಯನ್ನು ಪ್ರದರ್ಶಿಸುತ್ತದೆ. ಸಮುದ್ರದ ಮೇಲಿನ ಸೂರ್ಯನ ಬೆಳಕಿನ ಹೊಳಪು ದೀಪಾವಳಿಯ ಸಮಯದಲ್ಲಿ ವೀರ ಸೈನಿಕರು ಬೆಳಗಿದ ದೀಪಗಳನ್ನು ಹೋಲುತ್ತದೆ, ಇದು ದೀಪಗಳ ದೈವಿಕ ಹಾರವನ್ನು ಸ್ಪಷ್ಟವಾಗಿ ರೂಪಿಸುತ್ತದೆ ಎಂದು ಹೇಳಿದರು. ಭಾರತೀಯ ನೌಕಾಪಡೆಯ ಧೈರ್ಯಶಾಲಿ ಸಿಬ್ಬಂದಿಯ ಜೊತೆಗೆ ಈ ದೀಪಾವಳಿ ಹಬ್ಬವನ್ನು ಆಚರಿಸಲು ದೊರಕಿದ ಅವಕಾಶವನ್ನು ಬಹುದೊಡ್ಡ ಸೌಭಾಗ್ಯವೆಂದು ಅವರು ತಮ್ಮ ಆಶಯವನ್ನು ವ್ಯಕ್ತಪಡಿಸಿದರು.