ದೆಹಲಿ-ಡೆಹ್ರಾಡೂನ್ ಆರ್ಥಿಕ ಕಾರಿಡಾರ್ ಉದ್ಘಾಟನೆ ಸಮಾರಂಭ ಉದ್ದೇಶಿಸಿ ಪ್ರಧಾನಮಂತ್ರಿ ಅವರಾ ಭಾಷಣ

April 14th, 01:25 pm

ಉತ್ತರಾಖಂಡ ರಾಜ್ಯಪಾಲರಾದ ಗುರ್ಮೀತ್ ಸಿಂಗ್ ಜಿ, ಇಲ್ಲಿನ ಜನಪ್ರಿಯ ಮತ್ತು ಶ್ರಮಜೀವಿ ಯುವ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಜಿ, ಕೇಂದ್ರ ಸಚಿವರಾದ ನಿತಿನ್ ಗಡ್ಕರಿ ಜಿ, ಅಜಯ್ ತಮ್ತಾ ಜಿ, ವರ್ಚುವಲ್ ಮೂಲಕ ಸಮಾರಂಭದಲ್ಲಿರುವ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಜಿ, ರಾಜ್ಯಪಾಲರಾದ ಆನಂದಿಬೆನ್, ದೆಹಲಿಯ ಮುಖ್ಯಮಂತ್ರಿ ರೇಖಾ ಗುಪ್ತಾ ಜಿ, ರಾಜ್ಯ ಬಿಜೆಪಿ ಅಧ್ಯಕ್ಷ ಮಹೇಂದ್ರ ಭಟ್ ಜಿ, ಮಾಜಿ ರಾಜ್ಯಪಾಲರಾದ ಭಗತ್ ಸಿಂಗ್ ಕೋಶ್ಯಾರಿ ಜಿ, ಮಾಜಿ ಮುಖ್ಯಮಂತ್ರಿ ಸಹೋದರ ರಮೇಶ್ ಪೋಖ್ರಿಯಾಲ್, ವಿಜಯ್ ಬಹುಗುಣ ಜಿ, ತಿರತ್ ಸಿಂಗ್ ರಾವತ್ ಜಿ, ತ್ರಿವೇಂದ್ರ ಸಿಂಗ್ ರಾವತ್ ಜಿ, ಉತ್ತರಾಖಂಡ ಸರ್ಕಾರದ ಎಲ್ಲಾ ಸಚಿವರೆ, ಸಂಸದರೆ ಮತ್ತು ಶಾಸಕರೆ ಮತ್ತು ಅಪಾರ ಸಂಖ್ಯೆಯಲ್ಲಿ ಆಗಮಿಸಿರುವ ನನ್ನ ಪ್ರೀತಿಯ ಸಹೋದರ ಸಹೋದರಿಯರೆ.

ದೆಹಲಿ-ಡೆಹ್ರಾಡೂನ್ ಎಕನಾಮಿಕ್ ಕಾರಿಡಾರ್ ಉದ್ಘಾಟಿಸಿದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ

April 14th, 01:20 pm

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ದೆಹಲಿ-ಡೆಹ್ರಾಡೂನ್ ಎಕನಾಮಿಕ್ ಕಾರಿಡಾರ್ ಅನ್ನು ಉದ್ಘಾಟಿಸಿದರು, ಇದು ಉತ್ತರಾಖಂಡ ಮತ್ತು ಸುತ್ತಮುತ್ತಲಿನ ಪ್ರದೇಶದ ಅಭಿವೃದ್ಧಿಯಲ್ಲಿ ಒಂದು ಐತಿಹಾಸಿಕ ಕ್ಷಣವಾಗಿದೆ. ಡೆಹ್ರಾಡೂನ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರಧಾನಮಂತ್ರಿ ಅವರು, ಬೈಸಾಖಿ, ಬೊಹಾಗ್ ಬಿಹು ಮತ್ತು ಪುತಾಂಡು ಹಬ್ಬಗಳ ಸಂದರ್ಭದಲ್ಲಿ ದೇಶದ ಜನತೆಗೆ ಶುಭಾಶಯಗಳನ್ನು ಕೋರಿದರು. ಈ ಉದ್ಘಾಟನೆಯು ಭಾರತದಾದ್ಯಂತ ಹಬ್ಬದ ಸಂಭ್ರಮದ ಸಮಯದಲ್ಲಿ ನಡೆಯುತ್ತಿರುವುದಕ್ಕೆ ಸಂತೋಷ ವ್ಯಕ್ತಪಡಿಸಿದರು.

ಉತ್ತರ ಪ್ರದೇಶದ ಮೀರತ್‌ನಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಸಮಾರಂಭ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

February 22nd, 01:30 pm

ಉತ್ತರ ಪ್ರದೇಶದ ಗೌರವಾನ್ವಿತ ಮತ್ತು ಜನಪ್ರಿಯ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಜಿ, ಕೇಂದ್ರ ಸಚಿವ ಸಂಪುಟದ ನನ್ನ ಸಹೋದ್ಯೋಗಿಗಳಾದ ಪಂಕಜ್ ಚೌಧರಿ ಜಿ ಮತ್ತು ಜಯಂತ್ ಚೌಧರಿ ಜಿ, ಉತ್ತರ ಪ್ರದೇಶದ ಉಪಮುಖ್ಯಮಂತ್ರಿ ಬ್ರಜೇಶ್ ಪಾಠಕ್ ಜಿ, ಉತ್ತರ ಪ್ರದೇಶ ಸರ್ಕಾರದ ಸಚಿವರೆ, ನನ್ನ ಸಹ ಸಂಸತ್ ಸದಸ್ಯರೆ, ಶಾಸಕರೆ ಮತ್ತು ಇಲ್ಲಿ ಇಷ್ಟೊಂದು ಸಂಖ್ಯೆಯಲ್ಲಿ ನೆರೆದಿರುವ ನನ್ನ ಪ್ರೀತಿಯ ಸಹೋದರ ಸಹೋದರಿಯರೆ!

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಭಾರತದ ಮೊದಲ ನಮೋ ಭಾರತ್ ಆರ್‌ಆರ್‌ಟಿಎಸ್ ಅನ್ನು ಉದ್ಘಾಟಿಸುತ್ತಿದ್ದಾರೆ ಮತ್ತು ದೆಹಲಿ-ಮೀರತ್ ನಮೋ ಭಾರತ್ ಕಾರಿಡಾರ್ ಅನ್ನು ರಾಷ್ಟ್ರಕ್ಕೆ ಅರ್ಪಿಸುತ್ತಿದ್ದಾರೆ

February 22nd, 01:12 pm

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಮೀರತ್‌ನಲ್ಲಿ ನಮೋ ಭಾರತ್ ರ‍್ಯಾಪಿಡೊ ರೈಲು ಮತ್ತು ಮೀರತ್ ಮೆಟ್ರೋ ಮಾರ್ಗವನ್ನು ಉದ್ಘಾಟಿಸಿದರು, ಈ ಯೋಜನೆಯನ್ನು 'ವಿಕಸಿತ ಉತ್ತರ ಪ್ರದೇಶ' ಮತ್ತು 'ವಿಕಸಿತ ಭಾರತ'ಕ್ಕೆ ಹೊಸ ಶಕ್ತಿ ಎಂದು ಬಣ್ಣಿಸಿದರು. ಈ ಕಾರ್ಯಕ್ರಮವು ಭಾರತದಲ್ಲಿ ಮೊದಲ ಬಾರಿಗೆ ಒಂದೇ ವೇದಿಕೆಯಿಂದ ಒಂದೇ ದಿನ ತ್ವರಿತ ರೈಲು ಮತ್ತು ಮೆಟ್ರೋ ಸೇವೆಯನ್ನು ಪ್ರಾರಂಭಿಸಲಾಗಿದೆ.

40.2 ಕಿ.ಮೀ. ಉದ್ದದ ರಾಷ್ಟ್ರೀಯ ಹೆದ್ದಾರಿ ಎನ್ಎಚ್-334ಬಿ ಅಭಿವೃದ್ಧಿಗೆ ಬಾಳಿಕೆ ಬರುವ ಕಚ್ಚಾವಸ್ತುಗಳ ಬಳಕೆ; ಪ್ರಧಾನ ಮಂತ್ರಿ ಶ್ಲಾಘನೆ

June 14th, 10:57 pm

40.2 ಕಿಲೋ ಮೀಟರ್ ಉದ್ದದ ರಾಷ್ಟ್ರೀಯ ಹೆದ್ದಾರಿ ಎನ್ಎಚ್-334ಬಿ ಅಭಿವೃದ್ಧಿಪಡಿಸಲು ಬಾಳಿಕೆ ಬರುವ ಕಚ್ಚಾವಸ್ತುಗಳನ್ನು ಬಳಕೆ ಮಾಡಿರುವ ಕ್ರಮಕ್ಕೆ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ವೆಚ್ಚ ಪರಿಣಾಮಕಾರಿ ಮತ್ತು ಪರಿಸರ-ಸ್ನೇಹಿ ಆಗಿರುವ ಕಚ್ಚಾ ವಸ್ತುಗಳಾದ ಪ್ಲಾಸ್ಟಿಕ್ ತ್ಯಾಜ್ಯ ಮತ್ತು ಹಾರು ಬೂದಿ ಬಳಕೆಗೆ ಆದ್ಯತೆ ನೀಡಿರುವುದು ನಿಜಕ್ಕೂ ಶ್ಲಾಘನೀಯ ಎಂದಿದ್ದಾರೆ.. ಉತ್ತರ ಪ್ರದೇಶ-ಹರಿಯಾಣ ಗಡಿ ಭಾಗದ ಬಾಗ್ಪತ್ ನಿಂದ ಆರಂಭವಾಗುವ ಈ ರಾಷ್ಟ್ರೀಯ ಹೆದ್ದಾರಿಯು ಹರಿಯಾಣದ ರೊಹ್ನಾವರೆಗೆ ವ್ಯಾಪಿಸಿದೆ.

ಡಿಸೆಂಬರ್ 4ರಂದು ಡೆಹ್ರಾಡೂನ್‌ನಲ್ಲಿ 18,000 ಕೋಟಿ ರೂಪಾಯಿ ವೆಚ್ಚದ ಬಹುಹಂತದ ಯೋಜನೆಗಳ ಉದ್ಘಾಟನೆ ಮತ್ತು ಶಂಕು ಸ್ಥಾಪನೆ ನೆರವೇರಿಸಲಿರುವ ಪ್ರಧಾನಮಂತ್ರಿ

December 01st, 12:06 pm

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2021 ರ ಡಿಸೆಂಬರ್ 4 ರಂದು ಸುಮಾರು 18,000 ಕೋಟಿ ರೂಪಾಯಿ ಮೊತ್ತದ ಬಹು ಹಂತದ ಯೋಜನೆಗಳ ಉದ್ಘಾಟನೆ ಮತ್ತು ಶಿಲಾನ್ಯಾಸ ನೆರವೇರಿಸಲಿದ್ದಾರೆ. ಪ್ರಧಾನಮಂತ್ರಿಯವರ ಈ ಭೇಟಿಯಿಂದ ಈ ಭಾಗದ ರಸ್ತೆ ವಲಯದ ಮೂಲ ಸೌಲಭ್ಯ ಸುಧಾರಣೆ ಮತ್ತು ಪ್ರವಾಸಿಗರ ಸುಗಮ ಮತ್ತು ಸುರಕ್ಷಿತ ಸಂಚಾರಕ್ಕೆ ಸಹಕಾರಿಯಾಗಲಿದೆ. ಒಂದು ಕಾಲದಲ್ಲಿ ದೂರದ ಪ್ರದೇಶಗಳೆಂದು ಪರಿಗಣಿಸಲ್ಪಟ್ಟ ಪ್ರದೇಶಗಳಲ್ಲಿ ಸಂಪರ್ಕ ಹೆಚ್ಚಿಸುವ ಪ್ರಧಾನಮಂತ್ರಿ ಅವರ ದೂರದೃಷ್ಟಿಗೆ ಈ ಯೋಜನೆಗಳು ಅನುಗುಣವಾಗಿವೆ.