ಸ್ಕೈರೂಟ್‌ನ ಇನ್ಫಿನಿಟಿ ಕ್ಯಾಂಪಸ್ ಉದ್ಘಾಟನಾ ಸಮಾರಂಭದಲ್ಲಿ ವಿಸಿ ಮೂಲಕ ಪ್ರಧಾನಮಂತ್ರಿ ಅವರು ಮಾಡಿದ ಭಾಷಣದ ಕನ್ನಡ ಅವತರಣಿಕೆ
November 27th, 11:01 am
ನನ್ನ ಸಚಿವ ಸಂಪುಟದ ಸಹೋದ್ಯೋಗಿಗಳಾದ ಶ್ರೀ ಜಿ. ಕಿಶನ್ ರೆಡ್ಡಿ ಜೀ; ಆಂಧ್ರಪ್ರದೇಶದ ಕೈಗಾರಿಕಾ ಸಚಿವರಾದ ಶ್ರೀ ಟಿ. ಜಿ. ಭರತ್ ಜೀ; ಇನ್ ಸ್ಪೇಸ್ ಅಧ್ಯಕ್ಷರಾದ ಶ್ರೀ ಪವನ್ ಗೋಯೆಂಕಾ ಜೀ; ಸ್ಕೈರೂಟ್ ತಂಡ; ಇತರ ಗಣ್ಯರು; ಮಹಿಳೆಯರೇ ಮತ್ತು ಮಹನೀಯರೇ!ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಂದ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಹೈದರಾಬಾದ್‌ನ ಸ್ಕೈರೂಟ್‌ನ ಇನ್ಫಿನಿಟಿ ಕ್ಯಾಂಪಸ್ ಉದ್ಘಾಟನೆ
November 27th, 11:00 am
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ವಿಡಿಯೋ ಕಾನ್ಫರೆನ್ಸ್ ಮೂಲಕ ತೆಲಂಗಾಣದ ಹೈದರಾಬಾದ್‌ನಲ್ಲಿರುವ ಸ್ಕೈರೂಟ್‌ನ ಇನ್ಫಿನಿಟಿ ಕ್ಯಾಂಪಸ್ ಅನ್ನು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿ, ಇಂದು ದೇಶವು ಬಾಹ್ಯಾಕಾಶ ಕ್ಷೇತ್ರದಲ್ಲಿ ಅಭೂತಪೂರ್ವ ಅವಕಾಶವನ್ನು ಕಾಣುತ್ತಿದೆ ಎಂದು ಹೇಳಿದರು. ಮತ್ತು ಖಾಸಗಿ ವಲಯವು ಎತ್ತರಕ್ಕೆ ಹಾರಾಡುತ್ತಿರುವುದರಿಂದ ಭಾರತದ ಬಾಹ್ಯಾಕಾಶ ಪೂರಕ ವ್ಯವಸ್ಥೆಯು ಭಾರಿ ಏರಿಕೆಯನ್ನು ಕಂಡಿದೆ ಎಂದು ಪ್ರಮುಖವಾಗಿ ಪ್ರಸ್ತಾಪಿಸಿದರು. ಸ್ಕೈರೂಟ್‌ನ ಇನ್ಫಿನಿಟಿ ಕ್ಯಾಂಪಸ್ ಭಾರತದ ಹೊಸ ಚಿಂತನೆ, ನಾವೀನ್ಯತೆ ಮತ್ತು ಯುವ ಶಕ್ತಿಯನ್ನು ಪ್ರತಿಬಿಂಬಿಸುತ್ತದೆ ಮತ್ತು ದೇಶದ ಯುವಕರ ನಾವೀನ್ಯತೆ, ಅಪಾಯ ಎದುರಿಸುವ ಸಾಮರ್ಥ್ಯ ಮತ್ತು ಉದ್ಯಮಶೀಲತೆ ಹೊಸ ಎತ್ತರವನ್ನು ತಲುಪುತ್ತಿದೆ ಎಂದು ಅವರು ಒತ್ತಿ ಹೇಳಿದರು.ಉದಯೋನ್ಮುಖ ವಿಜ್ಞಾನ, ತಂತ್ರಜ್ಞಾನ ಮತ್ತು ನಾವೀನ್ಯತೆ ಸಮಾವೇಶ-2025 ಉದ್ದೇಶಿಸಿ ಪ್ರಧಾನಮಂತ್ರಿ ಭಾಷಣ
November 03rd, 11:00 am
ಭಾರತ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರಾದ ಡಾ. ಜಿತೇಂದ್ರ ಸಿಂಗ್ ಜಿ, ಪ್ರಧಾನ ವೈಜ್ಞಾನಿಕ ಸಲಹೆಗಾರ ಅಜಯ್ ಕುಮಾರ್ ಸೂದ್, ನೊಬೆಲ್ ಪ್ರಶಸ್ತಿ ವಿಜೇತ ಸರ್ ಆಂಡ್ರೆ ಗೀಮ್ ಅವರು ನಮ್ಮೊಂದಿಗೆ ಉಪಸ್ಥಿತರಿದ್ದಾರೆ, ಇಲ್ಲಿರುವ ಎಲ್ಲಾ ವಿಜ್ಞಾನಿಗಳೆ, ಅನುಶೋಧಕರೆ, ಶೈಕ್ಷಣಿಕ ಕ್ಷೇತ್ರದ ಗಣ್ಯರೆ, ಭಾರತ ಮತ್ತು ವಿದೇಶಗಳಿಂದ ಆಗಮಿಸಿರುವ ಗಣ್ಯರೆ, ಮಹಿಳೆಯರೆ ಮತ್ತು ಮಹನೀಯರೆ!ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 'ಉದಯೋನ್ಮುಖ ವಿಜ್ಞಾನ, ತಂತ್ರಜ್ಞಾನ ಮತ್ತು ನಾವೀನ್ಯತೆ ಸಮಾವೇಶ 2025' ಅನ್ನು ಉದ್ದೇಶಿಸಿ ಮಾತನಾಡಿದರು
November 03rd, 10:30 am
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ನವದೆಹಲಿಯ ಭಾರತ್ ಮಂಟಪದಲ್ಲಿ ನಡೆದ 'ಉದಯೋನ್ಮುಖ ವಿಜ್ಞಾನ, ತಂತ್ರಜ್ಞಾನ ಮತ್ತು ನಾವೀನ್ಯತೆ ಸಮಾವೇಶ (ESTIC) 2025' ಅನ್ನು ಉದ್ದೇಶಿಸಿ ಮಾತನಾಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಪ್ರಧಾನಿಯವರು, ಭಾರತ ಮತ್ತು ವಿದೇಶಗಳ ವಿಜ್ಞಾನಿಗಳು, ನಾವೀನ್ಯಕಾರರು (innovators), ಶಿಕ್ಷಣ ತಜ್ಞರು ಮತ್ತು ಇತರ ಗಣ್ಯ ಅತಿಥಿಗಳನ್ನು ಸ್ವಾಗತಿಸಿದರು. ಐಸಿಸಿ ಮಹಿಳಾ ವಿಶ್ವಕಪ್ 2025 ರಲ್ಲಿ ಭಾರತ ಗಳಿಸಿದ ಗಮನಾರ್ಹ ವಿಜಯದ ಬಗ್ಗೆ ಮಾತನಾಡಿದ ಶ್ರೀ ಮೋದಿಯವರು, ಭಾರತೀಯ ಕ್ರಿಕೆಟ್ ತಂಡದ ಯಶಸ್ಸಿನಿಂದ ಇಡೀ ರಾಷ್ಟ್ರವೇ ಹರ್ಷಗೊಂಡಿದೆ ಎಂದು ಪ್ರಸ್ತಾಪಿಸಿದರು. ಇದು ಭಾರತದ ಮೊದಲ ಮಹಿಳಾ ವಿಶ್ವಕಪ್ ಗೆಲುವು ಎಂಬುದನ್ನು ಒತ್ತಿ ಹೇಳಿದ ಅವರು, ಮಹಿಳಾ ಕ್ರಿಕೆಟ್ ತಂಡಕ್ಕೆ ತಮ್ಮ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸಿದರು. ರಾಷ್ಟ್ರವು ಅವರ ಬಗ್ಗೆ ಹೆಮ್ಮೆಪಡುತ್ತದೆ ಎಂದು ಹೇಳಿದ ಪ್ರಧಾನಿಯವರು, ಅವರ ಈ ಸಾಧನೆಯು ದೇಶಾದ್ಯಂತ ಲಕ್ಷಾಂತರ ಯುವಜನರಿಗೆ ಸ್ಫೂರ್ತಿ ನೀಡುತ್ತದೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದರು.ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತ ಶಿಕ್ಷಕರೊಂದಿಗಿನ ಸಭೆಯಲ್ಲಿ ಪ್ರಧಾನಮಂತ್ರಿ ಅವರ ಭಾಷಣದ ಅನುವಾದ
September 04th, 05:35 pm
ನಮ್ಮ ಸಂಪ್ರದಾಯದಲ್ಲಿ ಶಿಕ್ಷಕರ ಬಗ್ಗೆ ವಿಶೇಷ ಗೌರವವಿದೆ, ಮತ್ತು ಅವರು ಸಮಾಜದ ದೊಡ್ಡ ಶಕ್ತಿಯೂ ಹೌದು. ಶಿಕ್ಷಕರು ಆಶೀರ್ವಾದಕ್ಕಾಗಿ ಎದ್ದು ನಿಲ್ಲುವಂತೆ ಮಾಡುವುದು ತಪ್ಪು. ನಾನು ಅಂತಹ ಪಾಪವನ್ನು ಮಾಡಲು ಬಯಸುವುದಿಲ್ಲ. ಆದರೆ ನಾನು ಖಂಡಿತವಾಗಿಯೂ ನಿಮ್ಮೊಂದಿಗೆ ಸಂವಾದ ನಡೆಸಲು ಬಯಸುತ್ತೇನೆ. ನನಗೆ, ನಿಮ್ಮೆಲ್ಲರನ್ನು ಭೇಟಿಯಾಗುವ ಅವಕಾಶ ಸಿಕ್ಕಿರುವುದು ಅದ್ಭುತ ಅನುಭವವಾಗಿದೆ. ನಿಮ್ಮಲ್ಲಿ ಪ್ರತಿಯೊಬ್ಬರೂ ನಿಮ್ಮದೇ ಆದ ಕಥೆಯನ್ನು ಹೊಂದಿರಬೇಕು, ಏಕೆಂದರೆ ಅದು ಇಲ್ಲದೇ, ನೀವು ಈ ಹಂತವನ್ನು ತಲುಪುತ್ತಿರಲಿಲ್ಲ. ಆ ಎಲ್ಲಾ ಕಥೆಗಳನ್ನು ತಿಳಿದುಕೊಳ್ಳಲು ಸಾಕಷ್ಟು ಸಮಯವನ್ನು ಒದಗಿಸುವುದು ಕಷ್ಟ, ಆದರೆ ನಾನು ನಿಮ್ಮಿಂದ ಕಲಿಯಬಹುದಾದ ಸ್ವಲ್ಪವಾದರೂ ನಿಜವಾಗಿಯೂ ಸ್ಪೂರ್ತಿದಾಯಕವಾಗಿತ್ತು ಮತ್ತು ಅದಕ್ಕಾಗಿ, ನಾನು ನಿಮ್ಮೆಲ್ಲರನ್ನು ಹೃತ್ಪೂರ್ವಕವಾಗಿ ಅಭಿನಂದಿಸುತ್ತೇನೆ. ಈ ರಾಷ್ಟ್ರೀಯ ಪ್ರಶಸ್ತಿಯನ್ನು ಸ್ವೀಕರಿಸುವುದು ಕೊನೆಯಲ್ಲ. ಈಗ, ಈ ಪ್ರಶಸ್ತಿಯ ನಂತರ ಎಲ್ಲರ ಗಮನವು ನಿಮ್ಮ ಮೇಲಿದೆ. ಇದರರ್ಥ ನಿಮ್ಮ ವ್ಯಾಪ್ತಿಯು ಗಮನಾರ್ಹವಾಗಿ ವಿಸ್ತರಿಸಿದೆ. ಹಿಂದೆ, ನಿಮ್ಮ ಪ್ರಭಾವ ಅಥವಾ ಆದೇಶದ ವ್ಯಾಪ್ತಿಯು ಸೀಮಿತವಾಗಿತ್ತು, ಆದರೆ ಈಗ ಈ ಮನ್ನಣೆಯ ನಂತರ, ಅದು ಹೆಚ್ಚು ವಿಸ್ತಾರವಾಗಿ ಬೆಳೆಯಬಹುದು. ಇದು ಆರಂಭ ಎಂದು ನಾನು ನಂಬುತ್ತೇನೆ ಮತ್ತು ಈ ಅವಕಾಶವನ್ನು ಬಳಸಿಕೊಳ್ಳಬೇಕು. ನಿಮ್ಮೊಳಗೆ ಏನೇ ಇರಲಿ, ಅದನ್ನು ನೀವು ಸಾಧ್ಯವಾದಷ್ಟು ಹಂಚಿಕೊಳ್ಳಬೇಕು. ನೀವು ಹಾಗೆ ಮಾಡಿದಾಗ, ನಿಮ್ಮ ತೃಪ್ತಿಯ ಭಾವನೆ ಬೆಳೆಯುತ್ತದೆ ಮತ್ತು ನೀವು ಆ ದಿಕ್ಕಿನಲ್ಲಿ ಶ್ರಮಿಸುವುದನ್ನು ಮುಂದುವರಿಸಬೇಕು. ಈ ಪ್ರಶಸ್ತಿಗೆ ನಿಮ್ಮ ಆಯ್ಕೆಯು ನಿಮ್ಮ ಕಠಿಣ ಪರಿಶ್ರಮ ಮತ್ತು ನಿರಂತರ ಸಮರ್ಪಣೆಗೆ ಸಾಕ್ಷಿಯಾಗಿದೆ. ಅದಕ್ಕಾಗಿಯೇ ಇದು ಸಾಧ್ಯವಾಗಿದೆ. ಒಬ್ಬ ಶಿಕ್ಷಕ ಕೇವಲ ವರ್ತಮಾನದ ಬಗ್ಗೆ ಅಲ್ಲ, ರಾಷ್ಟ್ರದ ಭವಿಷ್ಯದ ಪೀಳಿಗೆಯನ್ನು ರೂಪಿಸುತ್ತಾನೆ, ಭವಿಷ್ಯವನ್ನು ಮೆರುಗುಗೊಳಿಸುತ್ತಾನೆ ಮತ್ತು ಇದು ಇತರರಿಗಿಂತ ಕಡಿಮೆಯಿಲ್ಲದ ರಾಷ್ಟ್ರ ಸೇವೆಯಾಗಿದೆ ಎಂದು ನಾನು ನಂಬುತ್ತೇನೆ. ಇಂದು, ನಿಮ್ಮಂತಹ ಕೋಟ್ಯಂತರ ಶಿಕ್ಷಕರು ಅದೇ ಭಕ್ತಿ, ಪ್ರಾಮಾಣಿಕತೆ ಮತ್ತು ಸಮರ್ಪಣೆಯೊಂದಿಗೆ ರಾಷ್ಟ್ರ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಎಲ್ಲರಿಗೂ ಇಲ್ಲಿಗೆ ಬರುವ ಅವಕಾಶ ಸಿಗುವುದಿಲ್ಲ. ಬಹುಶಃ ಅನೇಕರು ಪ್ರಯತ್ನಿಸಿಲ್ಲ, ಅಥವಾ ಕೆಲವರು ಗಮನಿಸಿಲ್ಲ. ಅಂತಹ ಸಾಮರ್ಥ್ಯಗಳನ್ನು ಹೊಂದಿರುವ ಅಸಂಖ್ಯಾತ ಜನರಿದ್ದಾರೆ. ಅವರೆಲ್ಲರ ಸಾಮೂಹಿಕ ಪ್ರಯತ್ನಗಳಿಂದ ರಾಷ್ಟ್ರವು ಮುಂದುವರಿಯುವುದು, ಹೊಸ ಪೀಳಿಗೆಗಳನ್ನು ಪೋಷಿಸುವುದನ್ನು, ರಾಷ್ಟ್ರಕ್ಕಾಗಿ ಬದುಕುವುದನ್ನು ಖಚಿತಪಡಿಸುತ್ತವೆ ಮತ್ತು ಅದರಲ್ಲಿ ಪ್ರತಿಯೊಬ್ಬರ ಕೊಡುಗೆಯೂ ಇದೆ.ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತ ಶಿಕ್ಷಕರನ್ನು ಉದ್ದೇಶಿಸಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಭಾಷಣ
September 04th, 05:33 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ನವದೆಹಲಿಯಲ್ಲಿ ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತ ಶಿಕ್ಷಕರನ್ನುದ್ದೇಶಿಸಿ ಭಾಷಣ ಮಾಡಿದರು. ಭಾರತೀಯ ಸಮಾಜವು ಶಿಕ್ಷಕರ ಬಗ್ಗೆ ಹೊಂದಿರುವ ಸ್ವಾಭಾವಿಕ ಗೌರವವನ್ನು ಶ್ಲಾಘಿಸಿದ ಶ್ರೀ ನರೇಂದ್ರ ಮೋದಿ, ಅವರು ರಾಷ್ಟ್ರ ನಿರ್ಮಾಣದಲ್ಲಿ ಪ್ರಬಲ ಶಕ್ತಿ ಎಂದು ಬಣ್ಣಿಸಿದರು. ಶಿಕ್ಷಕರನ್ನು ಗೌರವಿಸುವುದು ಕೇವಲ ಆಚರಣೆಯಲ್ಲ, ಆದರೆ ಅವರ ಜೀವಮಾನದ ಸಮರ್ಪಣೆ ಮತ್ತು ಪ್ರಭಾವದ ಮನ್ನಣೆಯಾಗಿದೆ ಎಂದು ಅವರು ಒತ್ತಿ ಹೇಳಿದರು.18ನೇ ಅಂತಾರಾಷ್ಟ್ರೀಯ ಖಗೋಳವಿಜ್ಞಾನ ಮತ್ತು ಖಗೋಳ ಭೌತಶಾಸ್ತ್ರ ಒಲಿಂಪಿಯಾಡ್ ಗಾಗಿ ಪ್ರಧಾನಮಂತ್ರಿಯವರ ವೀಡಿಯೋ ಸಂದೇಶ
August 12th, 04:34 pm
64 ದೇಶಗಳಿಂದ ಆಗಮಿಸಿರುವ 300 ಕ್ಕೂ ಹೆಚ್ಚು ತರುಣ ಪ್ರತಿಭೆಗಳ ಜೊತೆ ಸಂವಾದ ನಡೆಸಲು ನನಗೆ ಸಂತೋಷವಾಗುತ್ತಿದೆ. 18ನೇ ಅಂತಾರಾಷ್ಟ್ರೀಯ ಖಗೋಳ ವಿಜ್ಞಾನ ಮತ್ತು ಖಗೋಳ ಭೌತಶಾಸ್ತ್ರದ ಒಲಿಂಪಿಯಾಡ್ ಗೆ ನಿಮ್ಮೆಲ್ಲರನ್ನೂ ಭಾರತಕ್ಕೆ ಆತ್ಮೀಯವಾಗಿ ಸ್ವಾಗತಿಸುತ್ತೇನೆ. ಭಾರತದಲ್ಲಿ ಸಂಪ್ರದಾಯ ಮತ್ತು ಹೊಸತನ, ಆಧ್ಯಾತ್ಮಿಕತೆ ಮತ್ತು ವಿಜ್ಞಾನ, ಕುತೂಹಲ ಮತ್ತು ಸೃಜನಶೀಲತೆ ಒಂದಾಗುತ್ತವೆ. ಶತಮಾನಗಳಿಂದಲೂ ಭಾರತೀಯರು ಆಕಾಶವನ್ನು ವೀಕ್ಷಿಸುತ್ತಾ, ಅನೇಕ ದೊಡ್ಡ ಪ್ರಶ್ನೆಗಳನ್ನು ಕೇಳುತ್ತಾ ಬಂದಿದ್ದಾರೆ. ಉದಾಹರಣೆಗೆ, 5ನೇ ಶತಮಾನದಲ್ಲಿ, ಆರ್ಯಭಟ ಸೊನ್ನೆಯನ್ನು ಕಂಡುಹಿಡಿದರು. ಭೂಮಿಯು ತನ್ನದೇ ಅಕ್ಷದ ಮೇಲೆ ಸುತ್ತುತ್ತದೆ ಎಂದು ಹೇಳಿದ ಮೊದಲ ವ್ಯಕ್ತಿ ಕೂಡ ಇವರೇ. ಅಕ್ಷರಶಃ, ಅವರು ಸೊನ್ನೆಯಿಂದಲೇ ಇತಿಹಾಸ ಸೃಷ್ಟಿಸಿದರು!ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 18ನೇ ಅಂತಾರಾಷ್ಟ್ರೀಯ ಖಗೋಳಶಾಸ್ತ್ರ ಮತ್ತು ಖಗೋಳ ಭೌತಶಾಸ್ತ್ರ ಒಲಿಂಪಿಯಾಡ್ ಉದ್ದೇಶಿಸಿ ಮಾತನಾಡಿದರು
August 12th, 04:33 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ವಿಡಿಯೋ ಸಂದೇಶದ ಮೂಲಕ 18 ನೇ ಅಂತಾರಾಷ್ಟ್ರೀಯ ಖಗೋಳಶಾಸ್ತ್ರ ಮತ್ತು ಖಗೋಳ ಭೌತಶಾಸ್ತ್ರ ಒಲಿಂಪಿಯಾಡ್ ಉದ್ದೇಶಿಸಿ ಮಾತನಾಡಿದರು. ಈ ಸಂದರ್ಭದಲ್ಲಿ, ಪ್ರಧಾನಮಂತ್ರಿ ಅವರು 64 ದೇಶಗಳಿಂದ ಬಂದಿದ್ದ 300 ಕ್ಕೂ ಹೆಚ್ಚು ಪ್ರತಿನಿಧಿಗಳೊಂದಿಗೆ ಸಂಪರ್ಕ ಸಾಧಿಸಲು ಸಾಧ್ಯವಾಗಿರುವುದಕ್ಕೆ ಸಂತೋಷ ವ್ಯಕ್ತಪಡಿಸಿದರು ಮತ್ತು ಅಂತರರಾಷ್ಟ್ರೀಯ ಒಲಿಂಪಿಯಾಡ್‌ಗಾಗಿ ಭಾರತಕ್ಕೆ ಅವರನ್ನು ಹೃತ್ಪೂರ್ವಕವಾಗಿ ಸ್ವಾಗತಿಸಿದರು. ಭಾರತದಲ್ಲಿ, ಸಂಪ್ರದಾಯವು ನಾವೀನ್ಯತೆಯನ್ನು ಭೇಟಿ ಮಾಡುತ್ತದೆ, ಆಧ್ಯಾತ್ಮಿಕತೆಯು ವಿಜ್ಞಾನವನ್ನು ಸಂಗಮಿಸುತ್ತದೆ ಮತ್ತು ಕುತೂಹಲವು ಸೃಜನಶೀಲತೆಯನ್ನು ಭೇಟಿ ಮಾಡುತ್ತದೆ. ಶತಮಾನಗಳಿಂದ, ಭಾರತೀಯರು ಆಕಾಶವನ್ನು ಗಮನಿಸುತ್ತಿದ್ದಾರೆ ಮತ್ತು ದೊಡ್ಡ ಪ್ರಶ್ನೆಗಳನ್ನು ಕೇಳುತ್ತಿದ್ದಾರೆ ಎಂದು ಶ್ರೀ ಮೋದಿ ಹೇಳಿದರು. 5 ನೇ ಶತಮಾನದಲ್ಲಿ ಶೂನ್ಯವನ್ನು ಕಂಡುಹಿಡಿದ ಮತ್ತು ಭೂಮಿಯು ತನ್ನ ಅಕ್ಷದ ಮೇಲೆ ತಿರುಗುತ್ತದೆ ಎಂದು ಮೊದಲು ಹೇಳಿದ ಆರ್ಯಭಟನ ಉದಾಹರಣೆಯನ್ನು ಅವರು ಉಲ್ಲೇಖಿಸಿದರು. ಅಕ್ಷರಶಃ, ಅವರು ಶೂನ್ಯದಿಂದ ಪ್ರಾರಂಭಿಸಿ ಇತಿಹಾಸವನ್ನು ನಿರ್ಮಿಸಿದರು! ಎಂಬುದರತ್ತ ಪ್ರಧಾನಮಂತ್ರಿ ಗಮನ ಸೆಳೆದರು.ನವದೆಹಲಿಯ ಭಾರತ ಮಂಟಪದಲ್ಲಿ ನಡೆದ ವೈಯುಜಿಎಂ ಸಮಾವೇಶದಲ್ಲಿ ಪ್ರಧಾನಮಂತ್ರಿ ಭಾಷಣ
April 29th, 11:01 am
ಇಂದು, ಸರ್ಕಾರ, ಶೈಕ್ಷಣಿಕ ವಲಯ, ವಿಜ್ಞಾನ ಮತ್ತು ಸಂಶೋಧನೆಗೆ ಸಂಬಂಧಿಸಿದ ವಿವಿಧ ಕ್ಷೇತ್ರಗಳ ಜನರು ಹೆಚ್ಚಿನ ಸಂಖ್ಯೆಯಲ್ಲಿ ಇಲ್ಲಿ ಉಪಸ್ಥಿತರಿದ್ದಾರೆ. ಈ ಏಕತೆ, ಈ ಸಂಗಮವನ್ನೇ ನಾವು ವೈಯುಜಿಎಂ ಎಂದು ಕರೆಯುತ್ತೇವೆ. ವಿಕಸಿತ ಭಾರತದ ಭವಿಷ್ಯದ ತಂತ್ರಜ್ಞಾನಕ್ಕೆ ಸಂಬಂಧಿಸಿದ ಎಲ್ಲಾ ಪಾಲುದಾರರು ಒಟ್ಟಿಗೆ ಸೇರಿ ತೊಡಗಿಸಿಕೊಂಡಿರುವ ಒಂದು ವೈಯುಜಿಎಂ. ಭಾರತದ ಇನೋವೇಶನ್ ಸಾಮರ್ಥ್ಯವನ್ನು ಮತ್ತು ಡೀಪ್-ಟೆಕ್ನಲ್ಲಿ ಅದರ ಪಾತ್ರವನ್ನು ಹೆಚ್ಚಿಸಲು ನಾವು ಮಾಡುತ್ತಿರುವ ಪ್ರಯತ್ನಗಳನ್ನು ಈ ಕಾರ್ಯಕ್ರಮವು ಮತ್ತಷ್ಟು ಬಲಪಡಿಸುತ್ತದೆ ಎಂದು ನಾನು ನಂಬುತ್ತೇನೆ. ಇಂದು ಐಐಟಿ ಕಾನ್ಪುರ ಮತ್ತು ಐಐಟಿ ಬಾಂಬೆಯಲ್ಲಿ AI, ಇಂಟೆಲಿಜೆಂಟ್ ಸಿಸ್ಟಮ್ಸ್, ಹಾಗೂ ಬಯೋಸೈನ್ಸಸ್, ಬಯೋಟೆಕ್ನಾಲಜಿ, ಆರೋಗ್ಯ ಮತ್ತು ವೈದ್ಯಕೀಯ ವಿಭಾಗಗಳಲ್ಲಿ ಸೂಪರ್ ಹಬ್ಗಳ ಆರಂಭಕ್ಕೆ ಚಾಲನೆ ದೊರೆತಿದೆ. ಇಂದು ವಾಧ್ವಾನಿ ಇನ್ನೋವೇಶನ್ ನೆಟ್ವರ್ಕ್ ನ ಉದ್ಘಾಟನೆಯೂ ಆಗಿದೆ. ರಾಷ್ಟ್ರೀಯ ಸಂಶೋಧನಾ ಪ್ರತಿಷ್ಠಾನದ ಸಹಯೋಗದೊಂದಿಗೆ ಸಂಶೋಧನೆಯನ್ನು ಮುನ್ನಡೆಸಲು ಪ್ರತಿಜ್ಞೆಯನ್ನು ಸಹ ತೆಗೆದುಕೊಳ್ಳಲಾಗಿದೆ. ಈ ಉಪಕ್ರಮಕ್ಕಾಗಿ ವಾಧ್ವಾನಿ ಫೌಂಡೇಶನ್, ನಮ್ಮ ಐಐಟಿಗಳು ಮತ್ತು ಇತರ ಎಲ್ಲ ಪಾಲುದಾರರಿಗೆ ನಾನು ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ವಿಶೇಷವಾಗಿ, ನನ್ನ ಸ್ನೇಹಿತರಾದ ರೊಮೇಶ್ ವಾಧ್ವಾನಿ ಜಿ ಅವರನ್ನು ನಾನು ಶ್ಲಾಘಿಸುತ್ತೇನೆ. ನಿಮ್ಮ ಸಮರ್ಪಣೆ ಮತ್ತು ಪೂರ್ವಭಾವಿ ಪ್ರಯತ್ನಗಳಿಂದಾಗಿ ಖಾಸಗಿ ಮತ್ತು ಸಾರ್ವಜನಿಕ ವಲಯಗಳು ಒಟ್ಟಾಗಿ ದೇಶದ ಶಿಕ್ಷಣ ವ್ಯವಸ್ಥೆಯಲ್ಲಿ ಅನೇಕ ಸಕಾರಾತ್ಮಕ ಬದಲಾವಣೆಗಳನ್ನು ತಂದಿವೆ.ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ವೈಯುಜಿಎಂ ಇನ್ನೋವೇಶನ್ ಸಮಾವೇಶವನ್ನುದ್ದೇಶಿಸಿ ಮಾತನಾಡಿದರು
April 29th, 11:00 am
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಇಂದು ನವದೆಹಲಿಯ ಭಾರತ್ ಮಂಟಪದಲ್ಲಿ ನಡೆದ ವೈಯುಜಿಎಂ ಇನ್ನೋವೇಶನ್ ಸಮಾವೇಶವನ್ನುದ್ದೇಶಿಸಿ (YUGM Innovation Conclave) ಮಾತನಾಡಿದರು. ಈ ಸಂದರ್ಭದಲ್ಲಿ ಅವರು, ಸರ್ಕಾರಿ ಅಧಿಕಾರಿಗಳು, ಶೈಕ್ಷಣಿಕ ವಲಯದವರು ಹಾಗೂ ವಿಜ್ಞಾನ ಮತ್ತು ಸಂಶೋಧನಾ ವೃತ್ತಿಪರರ ಈ ಮಹತ್ವದ ಸಮಾಗಮವನ್ನು ವಿಶೇಷವಾಗಿ ಪ್ರಸ್ತಾಪಿಸಿದರು. ಎಲ್ಲಾ ಪಾಲುದಾರರ ಈ ಸಂಗಮವೇ YUGM ಎಂದು ಒತ್ತಿ ಹೇಳಿದ ಪ್ರಧಾನಮಂತ್ರಿಯವರು, ಇದು ವಿಕಸಿತ ಭಾರತಕ್ಕಾಗಿ ಭವಿಷ್ಯದ ತಂತ್ರಜ್ಞಾನಗಳನ್ನು ಮುನ್ನಡೆಸುವ ಗುರಿ ಹೊಂದಿರುವ ಸಹಯೋಗವಾಗಿದೆ ಎಂದು ತಿಳಿಸಿದರು. ಈ ಕಾರ್ಯಕ್ರಮದ ಮೂಲಕ, ಭಾರತದ ನಾವೀನ್ಯತಾ ಸಾಮರ್ಥ್ಯವನ್ನು ಹೆಚ್ಚಿಸುವ ಮತ್ತು ಡೀಪ್-ಟೆಕ್ನಲ್ಲಿ (Deep-tech) ಅದರ ಪಾತ್ರವನ್ನು ಬಲಪಡಿಸುವ ಪ್ರಯತ್ನಗಳು ಇನ್ನಷ್ಟು ವೇಗವನ್ನು ಪಡೆದುಕೊಳ್ಳಲಿವೆ ಎಂದು ಪ್ರಧಾನಮಂತ್ರಿಯವರು ವಿಶ್ವಾಸ ವ್ಯಕ್ತಪಡಿಸಿದರು. ಅವರು AI, ಇಂಟೆಲಿಜೆಂಟ್ ಸಿಸ್ಟಮ್ ಹಾಗೂ ಜೈವಿಕ ವಿಜ್ಞಾನ (Biosciences), ಜೈವಿಕ ತಂತ್ರಜ್ಞಾನ (Biotechnology), ಆರೋಗ್ಯ (Health) ಮತ್ತು ವೈದ್ಯಕೀಯ (Medicine) ಕ್ಷೇತ್ರಗಳ ಮೇಲೆ ಗಮನ ಕೇಂದ್ರೀಕರಿಸುವ ಐಐಟಿ ಕಾನ್ಪುರ ಮತ್ತು ಐಐಟಿ ಬಾಂಬೆಯಲ್ಲಿ ಸೂಪರ್ ಹಬ್ಗಳ (Super hubs) ಉದ್ಘಾಟನೆಯನ್ನು ಪ್ರಸ್ತಾಪಿಸಿದರು. ರಾಷ್ಟ್ರೀಯ ಸಂಶೋಧನಾ ಪ್ರತಿಷ್ಠಾನದ (National Research Foundation) ಸಹಯೋಗದೊಂದಿಗೆ ಸಂಶೋಧನೆಯನ್ನು ಮುನ್ನಡೆಸುವ ಬದ್ಧತೆಯನ್ನು ಪುನರುಚ್ಚರಿಸುವ 'ವಾಧ್ವಾನಿ ಇನ್ನೋವೇಶನ್ ನೆಟ್ವರ್ಕ್' (Wadhwani Innovation Network) ನ ಪ್ರಾರಂಭದ ಬಗ್ಗೆಯೂ ಅವರು ಉಲ್ಲೇಖಿಸಿದರು. ಪ್ರಧಾನಿಯವರು ವಾಧ್ವಾನಿ ಫೌಂಡೇಶನ್, ಐಐಟಿಗಳು ಮತ್ತು ಈ ಉಪಕ್ರಮಗಳಲ್ಲಿ ಭಾಗಿಯಾಗಿರುವ ಎಲ್ಲಾ ಪಾಲುದಾರರನ್ನು ಅಭಿನಂದಿಸಿದರು. 1 ಖಾಸಗಿ ಮತ್ತು ಸಾರ್ವಜನಿಕ ವಲಯಗಳ ಸಹಯೋಗದ ಮೂಲಕ ದೇಶದ ಶಿಕ್ಷಣ ವ್ಯವಸ್ಥೆಯಲ್ಲಿ ಸಕಾರಾತ್ಮಕ ಬದಲಾವಣೆಗಳನ್ನು ತರಲು ಶ್ರೀ ರೊಮೇಶ್ ವಾಧ್ವಾನಿಯವರ ಸಮರ್ಪಣೆ ಮತ್ತು ಸಕ್ರಿಯ ಪಾತ್ರಕ್ಕಾಗಿ ಅವರು ವಿಶೇಷ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು.ಎನ್ಎಕ್ಸ್ ಟಿ ಸಮಾವೇಶ ಉದ್ದೇಶಿಸಿ ಪ್ರಧಾನಮಂತ್ರಿ ಭಾಷಣ
March 01st, 11:00 am
ನ್ಯೂಸ್ಎಕ್ಸ್ ವರ್ಲ್ಡ್‌ನ ಶುಭಾರಂಭಕ್ಕಾಗಿ ನಾನು ನಿಮ್ಮೆಲ್ಲರನ್ನು ಅಭಿನಂದಿಸುತ್ತೇನೆ, ನನ್ನ ಶುಭಾಶಯಗಳು. ಇಂದು ಹಿಂದಿ ಮತ್ತು ಇಂಗ್ಲಿಷ್ ಸೇರಿದಂತೆ ನಿಮ್ಮ ನೆಟ್‌ವರ್ಕ್‌ನ ಎಲ್ಲಾ ಪ್ರಾದೇಶಿಕ ವಾಹಿನಿಗಳು ಜಾಗತಿಕವಾಗಿ ಬೆಳೆಯುತ್ತಿವೆ, ಇಂದು ಅನೇಕ ಫೆಲೋಶಿಪ್‌ಗಳು ಮತ್ತು ವಿದ್ಯಾರ್ಥಿವೇತನಗಳನ್ನು ಸಹ ಪ್ರಾರಂಭಿಸಲಾಗಿದೆ. ಈ ಎಲ್ಲಾ ಕಾರ್ಯಕ್ರಮಗಳಿಗಾಗಿ ನಿಮ್ಮೆಲ್ಲರಿಗೂ ನಾನು ಶುಭ ಹಾರೈಸುತ್ತೇನೆ.ಎನ್ ಎಕ್ಸ್ ಟಿ ಕಾನ್‌ಕ್ಲೇವ್‌ನಲ್ಲಿ ಭಾಗವಹಿಸಿದ್ದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ
March 01st, 10:34 am
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ನವದೆಹಲಿಯ ಭಾರತ್ ಮಂಟಪದಲ್ಲಿ NXT ಕಾನ್ಕ್ಲೇವ್‌ನಲ್ಲಿ ಭಾಗವಹಿಸಿದರು. ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ನ್ಯೂಸ್ ಎಕ್ಸ್ ವರ್ಲ್ಡ್ ಶುಭಾರಂಭಕ್ಕೆ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸಿದರು. ನೆಟ್‌ವರ್ಕ್ ಹಿಂದಿ, ಇಂಗ್ಲಿಷ್ ಮತ್ತು ವಿವಿಧ ಪ್ರಾದೇಶಿಕ ಭಾಷೆಗಳಲ್ಲಿ ಚಾನೆಲ್‌ಗಳನ್ನು ಒಳಗೊಂಡಿದೆ ಮತ್ತು ಇಂದು ಅದು ಜಾಗತಿಕ ಮಟ್ಟದಲ್ಲಿದೆ ಎಂದು ಅವರು ಗಮನ ಸೆಳೆದರು. ಅವರು ಹಲವಾರು ಫೆಲೋಶಿಪ್‌ಗಳು ಮತ್ತು ಸ್ಕಾಲರ್‌ಶಿಪ್‌ಗಳ ಪ್ರಾರಂಭದ ಬಗ್ಗೆಯೂ ಹೇಳಿದರು, ಈ ಕಾರ್ಯಕ್ರಮಗಳಿಗೆ ತಮ್ಮ ಶುಭಾಶಯಗಳನ್ನು ತಿಳಿಸಿದರು.“ಪರೀಕ್ಷಾ ಪೇ ಚರ್ಚಾ 2025” ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳೊಂದಿಗೆ ಪ್ರಧಾನಮಂತ್ರಿ ಸಂವಾದ
February 10th, 11:30 am
ಈ ಕಾರ್ಯಕ್ರಮಕ್ಕೆ ಇಷ್ಟೊಂದು ಮಕ್ಕಳು ನೋಂದಾಯಿಸಿಕೊಂಡಿರುವುದು ಒಂದು ದೊಡ್ಡ ಸೌಭಾಗ್ಯ, ಮತ್ತು ನಾವು ಅವರಲ್ಲಿ ಒಬ್ಬರಾಗಿದ್ದೇವೆ.ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಪರೀಕ್ಷಾ ಪೇ ಚರ್ಚಾ 2025ರ ಸಂದರ್ಭದಲ್ಲಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು
February 10th, 11:00 am
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ನವದೆಹಲಿಯ ಸುಂದರ್ ನರ್ಸರಿಯಲ್ಲಿ 8ನೇ ಆವೃತ್ತಿಯ ಪರೀಕ್ಷಾ ಪೇ ಚರ್ಚಾ (ಪಿಪಿಸಿ) ಸಂದರ್ಭದಲ್ಲಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು. ಪ್ರಧಾನಮಂತ್ರಿಯವರು ದೇಶಾದ್ಯಂತದ ವಿದ್ಯಾರ್ಥಿಗಳೊಂದಿಗೆ ತಮ್ಮ ಅನೌಪಚಾರಿಕ ಸಂವಾದದಲ್ಲಿ ವ್ಯಾಪಕ ವಿಷಯಗಳ ಬಗ್ಗೆ ಚರ್ಚಿಸಿದರು. ಚಳಿಗಾಲದಲ್ಲಿ ದೇಹವನ್ನು ಬೆಚ್ಚಗಿಡಲು ಸಾಂಪ್ರದಾಯಿಕವಾಗಿ ನೀಡಲಾಗುವ ಎಳ್ಳಿನಿಂದ ತಯಾರಿಸಿದ ಸಿಹಿತಿಂಡಿಗಳನ್ನು ಅವರು ವಿತರಿಸಿದರು.ಲೋಕಸಭೆಯಲ್ಲಿ ರಾಷ್ಟ್ರಪತಿಯವರ ಭಾಷಣಕ್ಕೆ ವಂದನಾ ನಿರ್ಣಯದ ಕುರಿತು ಪ್ರಧಾನಮಂತ್ರಿಯವರ ಉತ್ತರ
February 04th, 07:00 pm
ಗೌರವಾನ್ವಿತ ರಾಷ್ಟ್ರಪತಿಯವರ ಭಾಷಣಕ್ಕೆ ನನ್ನ ಕೃತಜ್ಞತೆಯನ್ನು ವ್ಯಕ್ತಪಡಿಸಲು ನಾನು ಇಲ್ಲಿ ಹಾಜರಿದ್ದೇನೆ. ನಿನ್ನೆ ಮತ್ತು ಇಂದು ತಡರಾತ್ರಿಯವರೆಗೆ, ಎಲ್ಲಾ ಗೌರವಾನ್ವಿತ ಸಂಸದರು ಈ ಕೃತಜ್ಞತಾ ನಿರ್ಣಯವನ್ನು ತಮ್ಮ ಅಭಿಪ್ರಾಯಗಳಿಂದ ಶ್ರೀಮಂತಗೊಳಿಸಿದರು. ಅನೇಕ ಗೌರವಾನ್ವಿತ ಅನುಭವಿ ಸಂಸದರು ಸಹ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು. ಪ್ರಜಾಪ್ರಭುತ್ವದ ಸಂಪ್ರದಾಯದಂತೆ, ಅಗತ್ಯವಿದ್ದಲ್ಲಿ ಪ್ರಶಂಸೆ ವ್ಯಕ್ತವಾಯಿತು, ಸಮಸ್ಯೆಗಳಿದ್ದಲ್ಲಿ ಕೆಲವು ಟೀಕೆಗಳೂ ಕೇಳಿಬಂದವು. ಇದು ಸಹಜ. ಸಭಾಧ್ಯಕ್ಷರೇ, ದೇಶದ ಜನತೆ ನನಗೆ ಹದಿನಾಲ್ಕು ಬಾರಿ ಈ ಸ್ಥಾನದಲ್ಲಿ ಕುಳಿತು ರಾಷ್ಟ್ರಪತಿಗಳ ಭಾಷಣಕ್ಕೆ ಕೃತಜ್ಞತೆ ಸಲ್ಲಿಸುವ ಅವಕಾಶವನ್ನು ಕರುಣಿಸಿರುವುದು ನನ್ನ ಸೌಭಾಗ್ಯ. ಆದ್ದರಿಂದ, ಇಂದು ನಾನು ಜನತೆಗೆ ಅತ್ಯಂತ ಗೌರವದಿಂದ ಕೃತಜ್ಞತೆ ಸಲ್ಲಿಸುತ್ತೇನೆ. ಹಾಗೆಯೇ, ಈ ಚರ್ಚೆಯಲ್ಲಿ ಪಾಲ್ಗೊಂಡು ಅದನ್ನು ಶ್ರೀಮಂತಗೊಳಿಸಿದ ಎಲ್ಲರಿಗೂ ನನ್ನ ಕೃತಜ್ಞತೆಗಳು.ಲೋಕಸಭೆಯಲ್ಲಿ ರಾಷ್ಟ್ರಪತಿಗಳ ಭಾಷಣದ ಮೇಲಿನ ವಂದನಾ ನಿರ್ಣಯಕ್ಕೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಉತ್ತರ
February 04th, 06:55 pm
ಲೋಕಸಭೆಯಲ್ಲಿ ರಾಷ್ಟ್ರಪತಿಗಳ ಭಾಷಣದ ಮೇಲಿನ ವಂದನಾ ನಿರ್ಣಯಕ್ಕೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಉತ್ತರಿಸಿದರು. ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿಯವರು, ನಿನ್ನೆ ಮತ್ತು ಇಂದು ಚರ್ಚೆಗಳಲ್ಲಿ ಭಾಗವಹಿಸಿದ ಎಲ್ಲಾ ಗೌರವಾನ್ವಿತ ಸಂಸದರ ಕೊಡುಗೆಯನ್ನು ಶ್ಲಾಘಿಸಿದರು ಮತ್ತು ಪ್ರಜಾಪ್ರಭುತ್ವದ ಸಂಪ್ರದಾಯವು ಅಗತ್ಯವಿರುವಲ್ಲಿ ಹೊಗಳಿಕೆ ಮತ್ತು ಅಗತ್ಯವಿರುವಲ್ಲಿ ಕೆಲವು ನಕಾರಾತ್ಮಕ ಟೀಕೆಗಳನ್ನು ಒಳಗೊಂಡಿರುತ್ತದೆ, ಇದು ಸಹಜ ಎಂದು ಹೇಳಿದರು. ರಾಷ್ಟ್ರಪತಿಯವರ ಭಾಷಣಕ್ಕೆ 14 ನೇ ಬಾರಿಗೆ ಕೃತಜ್ಞತೆ ಸಲ್ಲಿಸುವ ಅವಕಾಶವನ್ನು ಜನರಿಂದ ಪಡೆಯುವ ಮಹಾನ್ ಸವಲತ್ತು ದೊರೆತಿದೆ ಎಂದು ಹೇಳಿದ ಅವರು, ನಾಗರಿಕರಿಗೆ ತಮ್ಮ ಗೌರವಪೂರ್ವಕ ವಂದನೆಗಳನ್ನು ಸಲ್ಲಿಸಿದರು ಮತ್ತು ಪ್ರಸ್ತಾಪವನ್ನು ತಮ್ಮ ಆಲೋಚನೆಗಳೊಂದಿಗೆ ಶ್ರೀಮಂತಗೊಳಿಸಿದ್ದಕ್ಕಾಗಿ ಚರ್ಚೆಯಲ್ಲಿ ಭಾಗವಹಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.For 10 years, AAP-da leaders sought votes on the same false promises. But now, Delhi will no longer tolerate these lies: PM
February 02nd, 01:10 pm
Prime Minister Modi addressed a massive and spirited rally in Delhi’s RK Puram, energizing the crowd with his vision for a Viksit Delhi and exposing the failures of the AAP-da government. He reaffirmed his commitment to fulfilling every promise and ensuring the city’s holistic development.PM Modi Addresses Enthusiastic Crowd in Delhi’s RK Puram, Calls for Historic BJP Mandate
February 02nd, 01:05 pm
Prime Minister Modi addressed a massive and spirited rally in Delhi’s RK Puram, energizing the crowd with his vision for a Viksit Delhi and exposing the failures of the AAP-da government. He reaffirmed his commitment to fulfilling every promise and ensuring the city’s holistic development.ನವದೆಹಲಿಯ ಭಾರತ್ ಮಂಟಪದಲ್ಲಿ ನಡೆದ ವಿಕಸಿತ ಭಾರತ ಯುವ ನಾಯಕರ ಸಂವಾದ 2025ರಲ್ಲಿ ಪ್ರಧಾನಮಂತ್ರಿ ಅವರ ಭಾಷಣ
January 12th, 02:15 pm
ಕೇಂದ್ರ ಸಚಿವ ಸಂಪುಟದ ನನ್ನ ಸಹೋದ್ಯೋಗಿಗಳಾದ ಶ್ರೀ ಮನ್ಸುಖ್ ಮಾಂಡವಿಯಾ ಜೀ, ಧರ್ಮೇಂದ್ರ ಪ್ರಧಾನ್ ಜೀ, ಜಯಂತ್ ಚೌಧರಿ ಜೀ, ರಕ್ಷಾ ಖಾಡ್ಸೆ ಜೀ, ಸಂಸತ್ ಸದಸ್ಯರು, ಇತರ ಗಣ್ಯರು ಮತ್ತು ದೇಶದ ಮೂಲೆ ಮೂಲೆಗಳಿಂದ ಬಂದಿರುವ ನನ್ನ ಯುವ ಸ್ನೇಹಿತರೇ! ಈ ಭಾರತ ಮಂಟಪವು ಭಾರತದ ಯುವಜನರಿಂದ ಶಕ್ತಿ ಮತ್ತು ಶಕ್ತಿಯಿಂದ ತುಂಬಿದೆ. ಇಂದು, ಇಡೀ ದೇಶವು ಸ್ವಾಮಿ ವಿವೇಕಾನಂದರನ್ನು ಸ್ಮರಿಸುತ್ತಿದೆ ಮತ್ತು ಅವರಿಗೆ ಗೌರವ ಸಲ್ಲಿಸುತ್ತಿದೆ. ಸ್ವಾಮಿ ವಿವೇಕಾನಂದರು ದೇಶದ ಯುವಕರ ಮೇಲೆ ಅಪಾರ ನಂಬಿಕೆ ಹೊಂದಿದ್ದರು. ಸ್ವಾಮೀಜಿ ಹೇಳುತ್ತಿದ್ದರು - ನನಗೆ ಯುವ ಪೀಳಿಗೆಯ ಮೇಲೆ, ಹೊಸ ಪೀಳಿಗೆಯ ಮೇಲೆ ನಂಬಿಕೆ ಇದೆ. ನನ್ನ ಕಾರ್ಯಕರ್ತರು ಯುವ ಪೀಳಿಗೆಯಿಂದ ಬರುತ್ತಾರೆ, ಸಿಂಹಗಳಂತೆ, ಅವರು ಪ್ರತಿಯೊಂದು ಸಮಸ್ಯೆಗೆ ಪರಿಹಾರವನ್ನು ಕಂಡುಕೊಳ್ಳುತ್ತಾರೆ ಎಂದು ಸ್ವಾಮೀಜಿ ಹೇಳುತ್ತಿದ್ದರು. ವಿವೇಕಾನಂದರಿಗೆ ನಿಮ್ಮ ಮೇಲೆ ನಂಬಿಕೆ ಇದ್ದಂತೆ, ನನಗೆ ವಿವೇಕಾನಂದರ ಮೇಲೆ ನಂಬಿಕೆ ಇದೆ, ಅವರು ಹೇಳಿದ ಎಲ್ಲದರಲ್ಲೂ ನನಗೆ ನಂಬಿಕೆ ಇದೆ. ಭಾರತದ ಯುವಕರಿಗಾಗಿ ಅವರು ಏನು ಯೋಚಿಸಿದ್ದಾರೆ ಮತ್ತು ಏನು ಹೇಳಿದ್ದಾರೆ, ಅದರಲ್ಲಿ ನನಗೆ ಕುರುಡು ನಂಬಿಕೆ ಇದೆ. ವಾಸ್ತವವಾಗಿ, ಸ್ವಾಮಿ ವಿವೇಕಾನಂದರು ಇಂದು ವೈಯಕ್ತಿಕವಾಗಿ ನಮ್ಮ ನಡುವೆ ಇದ್ದಿದ್ದರೆ, 21ನೇ ಶತಮಾನದ ಯುವಕರ ಈ ಜಾಗೃತ ಶಕ್ತಿಯನ್ನು ನೋಡಿ, ನಿಮ್ಮ ಸಕ್ರಿಯ ಪ್ರಯತ್ನಗಳನ್ನು ನೋಡಿ, ಅವರು ಭಾರತವನ್ನು ಹೊಸ ನಂಬಿಕೆ, ಹೊಸ ಶಕ್ತಿಯಿಂದ ತುಂಬುತ್ತಿದ್ದರು ಮತ್ತು ಹೊಸ ಕನಸುಗಳ ಬೀಜಗಳನ್ನು ಬಿತ್ತುತ್ತಿದ್ದರು.ವಿಕಸಿತ ಭಾರತ ಯುವ ನಾಯಕರ ಸಂವಾದ 2025ರಲ್ಲಿ ಭಾಗವಹಿಸಿದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ
January 12th, 02:00 pm
ಸ್ವಾಮಿ ವಿವೇಕಾನಂದರ ಜನ್ಮ ದಿನಾಚರಣೆಯ ಸ್ಮರಣಾರ್ಥ, ರಾಷ್ಟ್ರೀಯ ಯುವ ದಿನದ ಸಂದರ್ಭದಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಹೊಸದಿಲ್ಲಿಯ ಭಾರತ ಮಂಟಪದಲ್ಲಿ ನಡೆದ ವಿಕಸಿತ ಭಾರತ ಯುವ ನಾಯಕರ ಸಂವಾದ 2025ರಲ್ಲಿ ಭಾಗವಹಿಸಿದರು. ಅವರು ಭಾರತದಾದ್ಯಂತ 3,000 ಕ್ರಿಯಾತ್ಮಕ ಯುವ ನಾಯಕರೊಂದಿಗೆ ತೊಡಗಿಸಿಕೊಂಡರು. ಈ ಸಂದರ್ಭದಲ್ಲಿ ಸಭಿಕರನ್ನುದ್ದೇಶಿಸಿ ಮಾತನಾಡಿದ ಅವರು, ಭಾರತ ಮಂಟಪಕ್ಕೆ ಜೀವ ಮತ್ತು ಶಕ್ತಿಯನ್ನು ತಂದ ಭಾರತದ ಯುವಜನರ ರೋಮಾಂಚಕ ಶಕ್ತಿಯನ್ನು ಎತ್ತಿ ತೋರಿಸಿದರು. ದೇಶದ ಯುವಜನರ ಮೇಲೆ ಅಪಾರ ನಂಬಿಕೆ ಹೊಂದಿದ್ದ ಸ್ವಾಮಿ ವಿವೇಕಾನಂದರನ್ನು ಇಡೀ ದೇಶ ಸ್ಮರಿಸುತ್ತಿದೆ ಮತ್ತು ಅವರಿಗೆ ಗೌರವ ಸಲ್ಲಿಸುತ್ತಿದೆ ಎಂದು ಅವರು ಹೇಳಿದರು. ಸ್ವಾಮಿ ವಿವೇಕಾನಂದರು ತಮ್ಮ ಶಿಷ್ಯರು ಯುವ ಪೀಳಿಗೆಯಿಂದ ಬರುತ್ತಾರೆ ಎಂದು ನಂಬಿದ್ದರು, ಅವರು ಸಿಂಹಗಳಂತೆ ಪ್ರತಿಯೊಂದು ಸಮಸ್ಯೆಯನ್ನು ಪರಿಹರಿಸುತ್ತಾರೆ ಎಂದು ಅವರು ಭಾವಿಸಿದ್ದರು. ಸ್ವಾಮೀಜಿ ಯುವಜನರನ್ನು ನಂಬಿದ್ದಂತೆ ಸ್ವಾಮೀಜಿ ಮತ್ತು ಅವರ ನಂಬಿಕೆಗಳಲ್ಲಿ ನನಗೆ ಸಂಪೂರ್ಣ ನಂಬಿಕೆ ಇದೆ ಎಂದು ಪ್ರಧಾನ ಮಂತ್ರಿ ಹೇಳಿದರು. ವಿಶೇಷವಾಗಿ ಯುವಜನರ ಬಗ್ಗೆ ಅವರ ದೃಷ್ಟಿಕೋನದ ಬಗ್ಗೆ ತಾವು ಅವರನ್ನು ಸಂಪೂರ್ಣವಾಗಿ ನಂಬುವುದಾಗಿ ಹೇಳಿದರು. ಸ್ವಾಮಿ ವಿವೇಕಾನಂದರು ಇಂದು ನಮ್ಮ ನಡುವೆ ಇದ್ದಿದ್ದರೆ, 21ನೇ ಶತಮಾನದ ಯುವಜನರ ಜಾಗೃತ ಶಕ್ತಿ ಮತ್ತು ಸಕ್ರಿಯ ಪ್ರಯತ್ನಗಳನ್ನು ನೋಡಿ ಅವರಲ್ಲಿ ಹೊಸ ಆತ್ಮವಿಶ್ವಾಸ ತುಂಬುತ್ತಿತ್ತು ಎಂದು ಪ್ರಧಾನಿ ಒತ್ತಿ ಹೇಳಿದರು.