ಗುಜರಾತ್‌ನ ದೇಡಿಯಾಪದದಲ್ಲಿ ನಡೆದ ಜನಜಾತೀಯ ಗೌರವ್ ದಿವಸ್ ಕಾರ್ಯಕ್ರಮದಲ್ಲಿ ಪ್ರಧಾನಮಂತ್ರಿ ಅವರ ಭಾಷಣದ ಕನ್ನಡ ಅವತರಣಿಕೆ

November 15th, 03:15 pm

ಜೈ ಜೋಹರ್! ಗುಜರಾತ್ ರಾಜ್ಯಪಾಲರಾದ ಆಚಾರ್ಯ ದೇವವ್ರತ ಜೀ, ಜನಪ್ರಿಯ ಮುಖ್ಯಮಂತ್ರಿ ಶ್ರೀ ಭೂಪೇಂದ್ರಭಾಯಿ ಪಟೇಲ್, ಗುಜರಾತ್ ಬಿ.ಜೆ.ಪಿ ಅಧ್ಯಕ್ಷ ಜಗದೀಶ್ ವಿಶ್ವಕರ್ಮ ಜೀ, ಗುಜರಾತ್ ಸರ್ಕಾರದ ಸಚಿವರಾದ ನರೇಶ್‌ಭಾಯಿ ಪಟೇಲ್ ಮತ್ತು ಜಯರಾಮ್‌ಭಾಯಿ ಗಮಿತ್ ಜೀ, ಸಂಸತ್ತಿನಲ್ಲಿ ನನ್ನ ಹಳೆಯ ಸಹೋದ್ಯೋಗಿ ಮನ್ಸುಖ್‌ಭಾಯಿ ವಾಸವ ಜೀ, ವೇದಿಕೆಯಲ್ಲಿ ಉಪಸ್ಥಿತರಿರುವ ಭಗವಾನ್ ಬಿರ್ಸಾ ಮುಂಡಾ ಅವರ ಕುಟುಂಬದ ಎಲ್ಲಾ ಸದಸ್ಯರೇ, ಈ ಕಾರ್ಯಕ್ರಮದ ಭಾಗವಾಗಿರುವ ದೇಶದ ಮೂಲೆ ಮೂಲೆಗಳಿಂದ ಬಂದ ನನ್ನ ಬುಡಕಟ್ಟು ಸಹೋದರ, ಸಹೋದರಿಯರೇ, ಇತರ ಎಲ್ಲಾ ಗಣ್ಯರು ಮತ್ತು ಈ ಸಮಯದಲ್ಲಿ ಹಲವಾರು ರಾಷ್ಟ್ರೀಯ ಕಾರ್ಯಕ್ರಮಗಳು ನಡೆಯುತ್ತಿರುವುದರಿಂದ ತಂತ್ರಜ್ಞಾನದ ಮೂಲಕ ನಮ್ಮೊಂದಿಗೆ ಸಂಪರ್ಕ ಹೊಂದಿದ ಅನೇಕ ಜನರು. ಜನಜಾತೀಯ ಗೌರವ್ ದಿವಸ್ ಸಂದರ್ಭದಲ್ಲಿ ರಾಜ್ಯಪಾಲರು, ಮುಖ್ಯಮಂತ್ರಿ ಅವರು, ಸಚಿವರು ಮತ್ತು ನಿಮ್ಮೆಲ್ಲರಿಗೂ ನನ್ನ ಹೃತ್ಪೂರ್ವಕ ಶುಭಾಶಯಗಳನ್ನು ಸಲ್ಲಿಸುತ್ತೇನೆ.

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಗುಜರಾತಿನ ದೇಡಿಯಾಪಾಡಾದಲ್ಲಿ ಧರ್ತಿ ಆಬಾ ಭಗವಾನ್ ಬಿರ್ಸಾ ಮುಂಡಾ ಅವರ 150ನೇ ಜಯಂತಿಯ ಅಂಗವಾಗಿ ಜನಜಾತೀಯಯ ಗೌರವ ದಿವಸ್ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು

November 15th, 03:00 pm

ಧರ್ತಿ ಆಬಾ ಭಗವಾನ್ ಬಿರ್ಸಾ ಮುಂಡಾ ಅವರ 150ನೇ ಜಯಂತಿಯ ಸ್ಮರಣಾರ್ಥ ಗುಜರಾತಿನ ದೇಡಿಯಾಪಾಡಾದಲ್ಲಿ ಇಂದು ನಡೆದ ಜನಜಾತೀಯ ಗೌರವ ದಿವಸ್‌ ಕಾರ್ಯಕ್ರಮವನ್ನು ಉದ್ದೇಶಿಸಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾತನಾಡಿದರು. ಈ ಸಂದರ್ಭದಲ್ಲಿ, ಅವರು ₹9,700 ಕೋಟಿಗೂ ಹೆಚ್ಚು ಮೌಲ್ಯದ ವಿವಿಧ ಮೂಲಸೌಕರ್ಯ ಮತ್ತು ಅಭಿವೃದ್ಧಿ ಯೋಜನೆಗಳಿಗೆ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸಿದರು. ನರ್ಮದಾ ಮಾತೆಯ ಪವಿತ್ರ ಭೂಮಿ ಇಂದು ಮತ್ತೊಂದು ಐತಿಹಾಸಿಕ ಸಂದರ್ಭಕ್ಕೆ ಸಾಕ್ಷಿಯಾಗುತ್ತಿದೆ ಎಂದು ಹೇಳಿದ ಶ್ರೀ ಮೋದಿ, ಭಾರತದ ಏಕತೆ ಮತ್ತು ವೈವಿಧ್ಯತೆಯನ್ನು ಸಂಭ್ರಮಿಸಲು ಅಕ್ಟೋಬರ್ 31 ರಂದು ಸರ್ದಾರ್ ಪಟೇಲ್ ಅವರ 150ನೇ ಜಯಂತಿಯನ್ನು ಇದೇ ಸ್ಥಳದಲ್ಲಿ ಆಚರಿಸಲಾಯಿತು ಎಂದು ನೆನಪಿಸಿಕೊಂಡರು, ಅಂದು ಭಾರತ ಪರ್ವಕ್ಕೆ ಚಾಲನೆ ನೀಡಲಾಯಿತು. ಇಂದು ಭಗವಾನ್ ಬಿರ್ಸಾ ಮುಂಡಾ ಅವರ 150ನೇ ಜಯಂತಿಯ ಅದ್ಧೂರಿ ಆಚರಣೆಯೊಂದಿಗೆ, ನಾವು ಭಾರತ ಪರ್ವದ ಪರಾಕಾಷ್ಠೆಗೆ ಸಾಕ್ಷಿಯಾಗುತ್ತಿದ್ದೇವೆ ಎಂದು ಪ್ರಧಾನಮಂತ್ರಿ ಹೇಳಿದರು. ಈ ಶುಭ ಸಂದರ್ಭದಲ್ಲಿ ಪ್ರಧಾನಮಂತ್ರಿ ಅವರು ಭಗವಾನ್ ಬಿರ್ಸಾ ಮುಂಡಾ ಅವರಿಗೆ ಗೌರವ ಸಲ್ಲಿಸಿದರು. ಗುಜರಾತ್, ರಾಜಸ್ಥಾನ, ಮಧ್ಯಪ್ರದೇಶ ಮತ್ತು ಇಡೀ ಬುಡಕಟ್ಟು ಪ್ರದೇಶದಲ್ಲಿ ಸ್ವಾತಂತ್ರ್ಯದ ಮನೋಭಾವವನ್ನು ಜಾಗೃತಗೊಳಿಸಿದ ಗೋವಿಂದ ಗುರುಗಳ ಆಶೀರ್ವಾದ ಸಹ ಈ ಕಾರ್ಯಕ್ರಮಕ್ಕೆ ಇದೆ ಎಂದು ಪ್ರಧಾನಮಂತ್ರಿ ಒತ್ತಿ ಹೇಳಿದರು. ಅವರು ವೇದಿಕೆಯಿಂದ ಗೋವಿಂದ ಗುರುಗಳಿಗೆ ಗೌರವ ನಮನ ಸಲ್ಲಿಸಿದರು. ಸ್ವಲ್ಪ ಸಮಯದ ಹಿಂದೆ ದೇವಮೋಗ್ರ ಮಾತೆಯ ದೇಗುಲಕ್ಕೆ ಭೇಟಿ ನೀಡುವ ಸೌಭಾಗ್ಯ ಸಿಕ್ಕಿತು ಮತ್ತು ಮತ್ತೊಮ್ಮೆ ಅವರ ಪಾದಗಳಿಗೆ ನಮಸ್ಕರಿಸಿದೆ ಎಂದು ಅವರು ಹೇಳಿದರು.

ಡೆಹ್ರಾಡೂನ್‌ ನಲ್ಲಿ ನಡೆದ ಉತ್ತರಾಖಂಡ ರಾಜ್ಯ ರಚನೆಯ ಬೆಳ್ಳಿ ಮಹೋತ್ಸವ ಆಚರಣೆ ಸಮಾರಂಭದಲ್ಲಿ ಪ್ರಧಾನಮಂತ್ರಿ ಅವರು ಮಾಡಿದ ಭಾಷಣದ ಕನ್ನಡ ಅವತರಣಿಕೆ

November 09th, 01:00 pm

ಉತ್ತರಾಖಂಡದ ರಾಜ್ಯಪಾಲರಾದ ಶ್ರೀ ಗುರ್ಮೀತ್ ಸಿಂಗ್ ಜಿ; ಮುಖ್ಯಮಂತ್ರಿ ಶ್ರೀ ಪುಷ್ಕರ್ ಸಿಂಗ್ ಜಿ; ಕೇಂದ್ರ ಸರ್ಕಾರದಲ್ಲಿ ನನ್ನ ಸಹೋದ್ಯೋಗಿ ಶ್ರೀ ಅಜಯ್ ಟಂಟಾ ಜಿ; ವಿಧಾನಸಭೆಯ ಸ್ಪೀಕರ್ ಸೋದರಿ ಶ್ರೀಮತಿ ರಿತು ಜಿ; ಉತ್ತರಾಖಂಡ ಸರ್ಕಾರದ ಸಚಿವರು; ವೇದಿಕೆಯಲ್ಲಿ ಉಪಸ್ಥಿತರಿರುವ ಮಾಜಿ ಮುಖ್ಯಮಂತ್ರಿ ಮತ್ತು ಸಂಸತ್ ಸದಸ್ಯರು; ನಮ್ಮನ್ನು ಆಶೀರ್ವದಿಸಲು ಹೆಚ್ಚಿನ ಸಂಖ್ಯೆಯಲ್ಲಿ ಬಂದಿರುವ ಪೂಜ್ಯ ಸಂತರು; ಮತ್ತು ಇತರ ಎಲ್ಲಾ ಗಣ್ಯ ಅತಿಥಿಗಳು, ಉತ್ತರಾಖಂಡದ ನನ್ನ ಸಹೋದರ ಮತ್ತು ಸಹೋದರಿಯರೆ!

ಡೆಹ್ರಾಡೂನ್‌ ನಲ್ಲಿ ಉತ್ತರಾಖಂಡ ರಾಜ್ಯ ರಚನೆಯ ರಜತ ಮಹೋತ್ಸವ ಸಮಾರಂಭವನ್ನು ಉದ್ದೇಶಿಸಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಭಾಷಣ

November 09th, 12:30 pm

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಡೆಹ್ರಾಡೂನ್‌ನಲ್ಲಿ 'ಉತ್ತರಾಖಂಡ ರಾಜ್ಯ ರಚನೆಯ ರಜತ ಮಹೋತ್ಸವ' ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದರು. ಈ ಕಾರ್ಯಕ್ರಮದಲ್ಲಿ ಪ್ರಧಾನಮಂತ್ರಿ ಅವರು ₹8140 ಕೋಟಿಗೂ ಅಧಿಕ ಮೌಲ್ಯದ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ನೆರವೇರಿಸಿದರು. ಸಭೆಯನ್ನುದ್ದೇಶಿಸಿ ಮಾತನಾಡಿದ ಶ್ರೀ ಮೋದಿ ಅವರು, ದೇವಭೂಮಿ ಉತ್ತರಾಖಂಡದ ಜನತೆಗೆ ಶುಭಾಶಯಗಳನ್ನು ತಿಳಿಸಿದರು ಮತ್ತು ಎಲ್ಲರಿಗೂ ತಮ್ಮ ಹೃತ್ಪೂರ್ವಕ ನಮನ, ಗೌರವ ಹಾಗೂ ಸೇವೆಯನ್ನು ಸಮರ್ಪಿಸಿದರು.

ನವ ರಾಯ್‌ಪುರದಲ್ಲಿ ಛತ್ತೀಸ್‌ಗಢ ವಿಧಾನಸಭಾ ನೂತನ ಕಟ್ಟಡ ಉದ್ಘಾಟನಾ ಸಮಾರಂಭ ಉದ್ದೇಶಿಸಿ ಪ್ರಧಾನಮಂತ್ರಿ ಭಾಷಣ

November 01st, 01:30 pm

ಛತ್ತೀಸ್‌ಗಢದ ಅಭಿವೃದ್ಧಿಯ ಪಯಣಕ್ಕೆ ಇಂದು ಸುವರ್ಣ ಆರಂಭವಾಗಿದೆ. ವೈಯಕ್ತಿಕವಾಗಿ ಇದು ನನಗೆ ತುಂಬಾ ವಿಶೇಷ ಮತ್ತು ಸಂತೋಷದ ದಿನವಾಗಿದೆ. ಹಲವಾರು ದಶಕಗಳಿಂದ ನಾನು ಈ ಭೂಮಿಯೊಂದಿಗೆ ಸುದೀರ್ಘ ಭಾವನಾತ್ಮಕ ಬಾಂಧವ್ಯ ಹೊಂದಿದ್ದೇನೆ. ಒಬ್ಬ ಕೆಲಸಗಾರನಾಗಿ, ನಾನು ಛತ್ತೀಸ್‌ಗಢದಲ್ಲಿ ಸಾಕಷ್ಟು ಸಮಯ ಕಳೆದಿದ್ದೇನೆ, ಈ ಸ್ಥಳದಿಂದ ನಾನು ಬಹಳಷ್ಟು ಕಲಿತಿದ್ದೇನೆ. ಛತ್ತೀಸ್‌ಗಢದ ಜನರು ಮತ್ತು ಮಣ್ಣು ನನ್ನ ಜೀವನವನ್ನು ಬಹಳ ಆಶೀರ್ವದಿಸಿದೆ ಮತ್ತು ರೂಪಿಸಿದೆ. ಛತ್ತೀಸ್‌ಗಢದ ಕಲ್ಪನೆ ಮತ್ತು ಪರಿಕಲ್ಪನೆಯಿಂದ, ಅದರ ರಚನೆಗೆ ಕಾರಣವಾದ ಸಂಕಲ್ಪದವರೆಗೆ ಮತ್ತು ಆ ಕನಸಿನ ಸಾಕಾರದವರೆಗೆ, ರಾಜ್ಯದ ರೂಪಾಂತರದ ಪ್ರತಿಯೊಂದು ಹಂತಕ್ಕೂ ನಾನು ಸಾಕ್ಷಿಯಾಗಿದ್ದೇನೆ. ಇಂದು ಛತ್ತೀಸ್‌ಗಢವು ತನ್ನ 25 ವರ್ಷಗಳ ಪ್ರಯಾಣದಲ್ಲಿ ಮಹತ್ವದ ಮೈಲಿಗಲ್ಲು ತಲುಪುತ್ತಿರುವಾಗ, ಈ ಐತಿಹಾಸಿಕ ಕ್ಷಣದ ಭಾಗವಾಗಲು ನನಗೆ ಮತ್ತೊಮ್ಮೆ ಗೌರವ ದೊರೆತಿದೆ. ಈ ಬೆಳ್ಳಿ ಮಹೋತ್ಸವ ಆಚರಣೆ ಗುರುತಿಸಲು ರಾಜ್ಯದ ಜನರಿಗಾಗಿ ಈ ಹೊಸ ಶಾಸಕಾಂಗ ಕಟ್ಟಡವನ್ನು ಉದ್ಘಾಟಿಸಲು ನಾನು ಅದೃಷ್ಟಶಾಲಿಯಾಗಿದ್ದೇನೆ. ಈ ಶುಭ ಸಂದರ್ಭದಲ್ಲಿ ಛತ್ತೀಸ್‌ಗಢದ ಜನರಿಗೆ ಮತ್ತು ರಾಜ್ಯ ಸರ್ಕಾರಕ್ಕೆ ನನ್ನ ಹೃತ್ಪೂರ್ವಕ ಅಭಿನಂದನೆಗಳು ಮತ್ತು ಶುಭಾಶಯಗಳನ್ನು ಸಲ್ಲಿಸುತ್ತೇನೆ.

ಛತ್ತೀಸ್‌ಗಢದ ನವ ರಾಯ್‌ಪುರದಲ್ಲಿ ಛತ್ತೀಸ್‌ಗಢ ವಿಧಾನಸಭಾ ನೂತನ ಕಟ್ಟಡವನ್ನು ಉದ್ಘಾಟಿಸಿದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ

November 01st, 01:00 pm

ಛತ್ತೀಸ್‌ಗಢದ ನವ ರಾಯ್‌ಪುರದಲ್ಲಿ ಇಂದು ಛತ್ತೀಸ್‌ಗಢ ವಿಧಾನಸಭೆಯ ಹೊಸ ಕಟ್ಟಡವನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿ, ಛತ್ತೀಸ್‌ಗಢದ ಅಭಿವೃದ್ಧಿ ಪ್ರಯಾಣಕ್ಕೆ ಇಂದಿನ ದಿನ ಸುವರ್ಣ ಆರಂಭ ಎಂದು ಹೇಳಿದರು. ವೈಯಕ್ತಿಕವಾಗಿ, ಇದು ತಮಗೆ ಬಹಳ ಸಂತೋಷದಾಯಕ ಮತ್ತು ಮಹತ್ವದ ದಿನ ಎಂದು ಅವರು ಹೇಳಿದರು. ಹಲವಾರು ದಶಕಗಳಿಂದ ಪೋಷಿಸಲ್ಪಟ್ಟ ಈ ಭೂಮಿಯೊಂದಿಗಿನ ತಮ್ಮ ಆಳವಾದ ಭಾವನಾತ್ಮಕ ಬಾಂಧವ್ಯವನ್ನು ಅವರು ಉಲ್ಲೇಖಿಸಿದರು. ಪಕ್ಷದ ಕಾರ್ಯಕರ್ತನಾಗಿ ತಾವಿಲ್ಲಿದ್ದ ಸಮಯವನ್ನು ನೆನಪಿಸಿಕೊಳ್ಳುತ್ತಾ, ಶ್ರೀ ಮೋದಿ ಅವರು ಛತ್ತೀಸ್‌ಗಢದಲ್ಲಿ ತಾವು ಸಾಕಷ್ಟು ಸಮಯವನ್ನು ಕಳೆದಿದ್ದನ್ನು ಮತ್ತು ಬಹಳಷ್ಟು ಕಲಿತುದನ್ನು ಹೇಳಿದರು. ಛತ್ತೀಸ್‌ಗಢದ ದೃಷ್ಟಿಕೋನ, ಅದರ ಸೃಷ್ಟಿಗಾಗಿನ ಸಂಕಲ್ಪ ಮತ್ತು ಆ ಸಂಕಲ್ಪದ ನೆರವೇರಿಕೆಯನ್ನು ಅವರು ನೆನಪಿಸಿಕೊಂಡರು, ಛತ್ತೀಸ್‌ಗಢದ ರೂಪಾಂತರದ ಪ್ರತಿ ಕ್ಷಣಕ್ಕೂ ತಾವು ಸಾಕ್ಷಿಯಾಗಿರುವುದನ್ನು ಅವರು ಉಲ್ಲೇಖಿಸಿದರು. ರಾಜ್ಯವು ತನ್ನ 25 ವರ್ಷಗಳ ಪ್ರಯಾಣದಲ್ಲಿ ಪ್ರಮುಖ ಮೈಲಿಗಲ್ಲನ್ನು ತಲುಪುತ್ತಿರುವಾಗ, ಈ ಕ್ಷಣದ ಭಾಗವಾಗಲು ಅವಕಾಶ ನೀಡಿದ್ದಕ್ಕಾಗಿ ಅವರು ಕೃತಜ್ಞತೆಯನ್ನು ವ್ಯಕ್ತಪಡಿಸಿದರು. ಬೆಳ್ಳಿ ಮಹೋತ್ಸವ ಆಚರಣೆಯ ಸಂದರ್ಭದಲ್ಲಿ, ರಾಜ್ಯದ ಜನತೆಗಾಗಿ ಹೊಸ ವಿಧಾನಸಭಾ ಕಟ್ಟಡವನ್ನು ಉದ್ಘಾಟಿಸುವ ಸೌಭಾಗ್ಯ ತಮಗೆ ಸಿಕ್ಕಿದೆ ಎಂದು ಪ್ರಧಾನಮಂತ್ರಿ ಹೇಳಿದರು. ಈ ಸಂದರ್ಭದಲ್ಲಿ ಛತ್ತೀಸ್‌ಗಢದ ಜನರಿಗೆ ಮತ್ತು ರಾಜ್ಯ ಸರ್ಕಾರಕ್ಕೆ ಅವರು ತಮ್ಮ ಶುಭಾಶಯಗಳು ಮತ್ತು ಅಭಿನಂದನೆಗಳನ್ನು ವ್ಯಕ್ತಪಡಿಸಿದರು.

ನವೆಂಬರ್ 1ರಂದು ಛತ್ತೀಸ್ ಗಢಕ್ಕೆ ಭೇಟಿ ನೀಡಲಿರುವ ಪ್ರಧಾನಮಂತ್ರಿ

October 31st, 12:02 pm

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ನವೆಂಬರ್ 1ರಂದು ಛತ್ತೀಸ್ ಗಢಕ್ಕೆ ಭೇಟಿ ನೀಡಲಿದ್ದಾರೆ.

BJP’s connection with Delhi goes back to the Jana Sangh days and is built on trust and commitment to the city: PM Modi

September 29th, 08:40 pm

Inaugurating the Delhi BJP’s new office, PM Modi said, “On this auspicious occasion of Navratri, Delhi BJP has received its new office today. It is a moment filled with new dreams and fresh resolutions.” He added, “For us, every BJP office is no less than a shrine, no less than a temple. A BJP office is not merely a building. It is a strong link that connects the Party with the grassroots and with people’s aspirations.”

PM Modi inaugurates Delhi BJP’s new office at Deendayal Upadhyaya Marg

September 29th, 05:00 pm

Inaugurating the Delhi BJP’s new office, PM Modi said, “On this auspicious occasion of Navratri, Delhi BJP has received its new office today. It is a moment filled with new dreams and fresh resolutions.” He added, “For us, every BJP office is no less than a shrine, no less than a temple. A BJP office is not merely a building. It is a strong link that connects the Party with the grassroots and with people’s aspirations.”

ಅಟಲ್ ಬಿಹಾರಿ ವಾಜಪೇಯಿ ಅವರ ಪುಣ್ಯ ತಿಥಿಯಂದು ಪ್ರಧಾನಮಂತ್ರಿ ಗೌರವ ಸಲ್ಲಿಸಿದ್ದಾರೆ

August 16th, 08:57 am

ಮಾಜಿ ಪ್ರಧಾನಮಂತ್ರಿ ಅಟಲ್ ಬಿಹಾರಿ ವಾಜಪೇಯಿ ಅವರ ಪುಣ್ಯ ತಿಥಿಯಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಗೌರವ ಸಲ್ಲಿಸಿದ್ದಾರೆ.

ಎಬಿಪಿ ನೆಟ್‌ವರ್ಕ್ ಇಂಡಿಯಾ@2047 ಶೃಂಗಸಭೆ ಉದ್ದೇಶಿಸಿ ಪ್ರಧಾನಮಂತ್ರಿ ಭಾಷಣ

May 06th, 08:04 pm

ಭಾರತ ಮಂಟಪವು ಇಂದು ಬೆಳಿಗ್ಗೆಯಿಂದ ರೋಮಾಂಚನಕಾರಿ ವೇದಿಕೆಯಾಗಿದೆ. ಕೆಲವೇ ನಿಮಿಷಗಳ ಹಿಂದೆ, ನಿಮ್ಮ ತಂಡವನ್ನು ಭೇಟಿ ಮಾಡುವ ಅವಕಾಶ ನನಗೆ ಸಿಕ್ಕಿತು. ಈ ಶೃಂಗಸಭೆಯು ವೈವಿಧ್ಯತೆಯಿಂದ ಕೂಡಿದೆ. ಅನೇಕ ಗಣ್ಯರು ಈ ಶೃಂಗಸಭೆಗೆ ಮೆರುಗು ತುಂಬಿದ್ದಾರೆ. ನಿಮ್ಮೆಲ್ಲರ ಅನುಭವ ಶ್ರೀಮಂತವಾಗಿದೆ ಎಂದು ನಾನು ನಂಬಿದ್ದೇನೆ. ಈ ಶೃಂಗಸಭೆಯಲ್ಲಿ ಯುವಕರು ಮತ್ತು ಮಹಿಳೆಯರ ದೊಡ್ಡ ಉಪಸ್ಥಿತಿಯು ಒಂದು ರೀತಿಯಲ್ಲಿ ವಿಶಿಷ್ಟ ಲಕ್ಷಣವಾಗಿದೆ. ವಿಶೇಷವಾಗಿ, ನಮ್ಮ ಡ್ರೋನ್ ದೀದಿಗಳು ಮತ್ತು ಲಖ್ಪತಿ ದೀದಿಗಳು ಹಂಚಿಕೊಂಡ ಅನುಭವಗಳು - ನಾನು ಈಗ ಈ ಎಲ್ಲರನ್ನೂ ಭೇಟಿಯಾದಾಗ, ಅವರು ತಮ್ಮ ಕಥೆಗಳನ್ನು ಹಂಚಿಕೊಳ್ಳುತ್ತಿದ್ದ ಉತ್ಸಾಹವನ್ನು ನಾನು ನೋಡಿದೆ. ಅವರ ಪ್ರತಿಯೊಂದು ಸಂಭಾಷಣೆಯೂ ನೆನಪಾಗುತ್ತಿದೆ. ಇದು ನಿಜಕ್ಕೂ ಸ್ಫೂರ್ತಿದಾಯಕವಾಗಿದೆ.

ಎಬಿಪಿ ನೆಟ್‌ವರ್ಕ್ ಇಂಡಿಯಾ @ 2047 ಶೃಂಗಸಭೆ ಉದ್ದೇಶಿಸಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಭಾಷಣ

May 06th, 08:00 pm

ನವದೆಹಲಿಯ ಭಾರತ ಮಂಟಪದಲ್ಲಿಂದು ನಡೆದ ಎಬಿಪಿ ನೆಟ್‌ವರ್ಕ್ ಇಂಡಿಯಾ@2047 ಶೃಂಗಸಭೆ ಉದ್ದೇಶಿಸಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಭಾಷಣ ಮಾಡಿದರು. ಭಾರತ್ ಮಂಟಪದಲ್ಲಿ ನಡೆಯುತ್ತಿರುವ ಈ ಕಾರ್ಯಕ್ರಮವು ಇಂದು ಬೆಳಗ್ಗೆಯಿಂದಲೂ ಗದ್ದಲದಿಂದ ಕೂಡಿದೆ. ಸಂಘಟನಾ ತಂಡದೊಂದಿಗಿನ ತಮ್ಮ ಸಂವಾದವನ್ನು ಪ್ರಸ್ತಾಪಿಸಿದ ಅವರು, ಶೃಂಗಸಭೆಯ ಶ್ರೀಮಂತ ವೈವಿಧ್ಯತೆಯನ್ನು ಶ್ಲಾಘಿಸಿದರು. ಕಾರ್ಯಕ್ರಮದ ಚೈತನ್ಯಕ್ಕೆ ಕೊಡುಗೆ ನೀಡಿದ ಹಲವಾರು ಗಣ್ಯ ವ್ಯಕ್ತಿಗಳ ಭಾಗವಹಿಸಿದ್ದಾರೆ. ಇಲ್ಲಿ ನೆರೆದಿರುವ ಎಲ್ಲಾ ಪ್ರತಿನಿಧಿಗಳು ಸಕಾರಾತ್ಮಕ ಅನುಭವ ಹೊಂದಿದ್ದಾರೆ. ಶೃಂಗಸಭೆಯಲ್ಲಿ ಯುವಕರು ಮತ್ತು ಮಹಿಳೆಯರ ಗಮನಾರ್ಹ ಉಪಸ್ಥಿತಿ ಇದೆ, ಡ್ರೋನ್ ದೀದಿಗಳು ಮತ್ತು ಲಖ್ಪತಿ ದೀದಿಗಳು ಹಂಚಿಕೊಂಡ ಸ್ಪೂರ್ತಿದಾಯಕ ಅನುಭವಗಳನ್ನು ಶ್ಲಾಘಿಸಿದರು. ಅವರ ಕಥೆಗಳು ಪ್ರೇರಣೆಯ ಮೂಲವಾಗಿ ಕಾರ್ಯ ನಿರ್ವಹಿಸುತ್ತವೆ ಎಂದರು.

ನ್ಯೂಸ್ 18 ರೈಸಿಂಗ್ ಭಾರತ್ ಶೃಂಗಸಭೆ ಉದ್ದೇಶಿಸಿ ಪ್ರಧಾನಮಂತ್ರಿ ಭಾಷಣ

April 08th, 08:30 pm

ಈ ಶೃಂಗಸಭೆಯ ಮೂಲಕ ದೇಶ ಮತ್ತು ವಿಶ್ವಾದ್ಯಂತದ ಗೌರವಾನ್ವಿತ ಅತಿಥಿಗಳೊಂದಿಗೆ ಮತ್ತು ನಿಮ್ಮ ಪ್ರೇಕ್ಷಕರೊಂದಿಗೆ ಸಂಪರ್ಕ ಸಾಧಿಸಲು ನೀವು ನನಗೆ ಅವಕಾಶ ನೀಡಿದ್ದಕ್ಕಾಗಿ ನಾನು “ನೆಟ್‌ವರ್ಕ್ 18”ಗೆ ನನ್ನ ಕೃತಜ್ಞತೆ ವ್ಯಕ್ತಪಡಿಸುತ್ತೇನೆ. ಈ ವರ್ಷದ ಶೃಂಗಸಭೆಯನ್ನು ಭಾರತದ ಯುವಕರ ಆಕಾಂಕ್ಷೆಗಳೊಂದಿಗೆ ನೀವು ಸಂಪರ್ಕಿಸಿದ್ದೀರಿ ಎಂಬುದನ್ನು ತಿಳಿದು ನನಗೆ ಸಂತೋಷವಾಗಿದೆ. ಈ ವರ್ಷದ ಆರಂಭದಲ್ಲಿ, ವಿವೇಕಾನಂದ ಜಯಂತಿಯಂದು, ಭಾರತ್ ಮಂಟಪದಲ್ಲಿ ವಿಕಸಿತ ಭಾರತ ಯುವ ನಾಯಕರ ಸಂವಾದ ನಡೆಸಲಾಯಿತು. ಆ ಸಮಯದಲ್ಲಿ, ಯುವಕರ ಕಣ್ಣುಗಳಲ್ಲಿ ಕನಸುಗಳ ಮಿಂಚು, ಅವರ ಸಂಕಲ್ಪ ಶಕ್ತಿ ಮತ್ತು ಭಾರತವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ಮಾಡುವ ಅವರ ಉತ್ಸಾಹವನ್ನು ನಾನು ನೋಡಿದೆ. 2047ರ ವೇಳೆಗೆ ನಾವು ಭಾರತವನ್ನು ಕೊಂಡೊಯ್ಯಲು ಬಯಸುವ ಎತ್ತರ ಮತ್ತು ನಾವು ಅನುಸರಿಸುತ್ತಿರುವ ಮಾರ್ಗಸೂಚಿಯನ್ನು ನಾವು ಪ್ರತಿ ಹಂತದಲ್ಲೂ ಚರ್ಚಿಸುವುದನ್ನು ಮುಂದುವರಿಸಿದರೆ, 'ಅಮೃತ' (ಅಮೃತ ಕಾಲ) ಖಂಡಿತವಾಗಿಯೂ ಹೊರಹೊಮ್ಮುತ್ತದೆ. ಈ 'ಅಮೃತ'ವು 'ಅಮೃತ ಕಾಲ'ದ ಪೀಳಿಗೆಗೆ ಶಕ್ತಿ ಮತ್ತು ನಿರ್ದೇಶನ ನೀಡುವ ಜತೆಗೆ, ಭಾರತಕ್ಕೆ ಆವೇಗವನ್ನು ನೀಡುತ್ತದೆ. ಈ ಶೃಂಗಸಭೆಯಲ್ಲಿ ನಾನು ನಿಮ್ಮನ್ನು ಅಭಿನಂದಿಸುತ್ತೇನೆ, ನನ್ನ ಶುಭಾಶಯಗಳನ್ನು ಸಲ್ಲಿಸುತ್ತೇನೆ.

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಂದ ನ್ಯೂಸ್18 ರೈಸಿಂಗ್ ಭಾರತ್ ಶೃಂಗಸಭೆಯನ್ನುದ್ದೇಶಿಸಿ ಭಾಷಣ

April 08th, 08:15 pm

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ನವದೆಹಲಿಯ ಭಾರತ್ ಮಂಟಪದಲ್ಲಿ ನ್ಯೂಸ್18 ರೈಸಿಂಗ್ ಭಾರತ್ ಶೃಂಗಸಭೆಯನ್ನುದ್ದೇಶಿಸಿ ಮಾತನಾಡಿದರು. ಈ ಸಮಾವೇಶದಲ್ಲಿ ಭಾರತ ಮತ್ತು ಪ್ರಪಂಚದಾದ್ಯಂತದ ಗಣ್ಯ ಅತಿಥಿಗಳೊಂದಿಗೆ ಸಂವಹನ ನಡೆಸಲು ಅವಕಾಶ ನೀಡಿದ್ದಕ್ಕಾಗಿ ಅವರು ನೆಟ್ವರ್ಕ್18 ಗೆ ಕೃತಜ್ಞತೆ ಸಲ್ಲಿಸಿದರು. ಈ ವರ್ಷದ ಶೃಂಗಸಭೆಯು ಭಾರತದ ಯುವಕರ ಆಕಾಂಕ್ಷೆಗಳ ಮೇಲೆ ಗಮನ ಕೇಂದ್ರೀಕರಿಸಿದ್ದನ್ನು ಅವರು ಮೆಚ್ಚುಗೆ ವ್ಯಕ್ತಪಡಿಸಿದರು. ಈ ವರ್ಷದ ಆರಂಭದಲ್ಲಿ ಸ್ವಾಮಿ ವಿವೇಕಾನಂದ ಜಯಂತಿಯಂದು ಭಾರತ್ ಮಂಟಪದಲ್ಲಿ ನಡೆದ ‘ವಿಕಸಿತ ಭಾರತ ಯುವ ನಾಯಕರ ಸಂವಾದ’ (Viksit Bharat Young Leaders Dialogue) ಮಹತ್ವವನ್ನು ಒತ್ತಿ ಹೇಳಿದ ಅವರು, ಭಾರತವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ಮಾಡಲು ಯುವಕರ ಕನಸುಗಳು, ದೃಢಸಂಕಲ್ಪ ಮತ್ತು ಉತ್ಸಾಹದ ಬಗ್ಗೆ ಮಾತನಾಡಿದರು. ಭಾರತದ ಪ್ರಗತಿಗಾಗಿ 2047 ರವರೆಗಿನ ಮಾರ್ಗಸೂಚಿಯನ್ನು ಅವರು ಒತ್ತಿ ಹೇಳಿದರು, ಪ್ರತಿ ಹಂತದಲ್ಲೂ ನಿರಂತರ ಚಿಂತನೆ ಅಮೂಲ್ಯವಾದ ಒಳನೋಟಗಳನ್ನು ನೀಡುತ್ತದೆ ಎಂದು ಅವರು ಹೇಳಿದರು. ಈ ಒಳನೋಟಗಳು ಅಮೃತ ಕಾಲದ ಪೀಳಿಗೆಗೆ ಶಕ್ತಿ ತುಂಬುತ್ತವೆ, ಮಾರ್ಗದರ್ಶನ ನೀಡುತ್ತವೆ ಮತ್ತು ವೇಗವನ್ನು ಹೆಚ್ಚಿಸುತ್ತವೆ ಎಂದು ಅವರು ಹೇಳಿದರು. ಅವರು ಶೃಂಗಸಭೆಯ ಯಶಸ್ಸಿಗೆ ತಮ್ಮ ಅಭಿನಂದನೆಗಳು ಮತ್ತು ಶುಭ ಹಾರೈಕೆಗಳನ್ನು ತಿಳಿಸಿದರು.

Government is running a special campaign for the development of tribal society: PM Modi in Bilaspur, Chhattisgarh

March 30th, 06:12 pm

PM Modi laid the foundation stone and inaugurated development projects worth over Rs 33,700 crore in Bilaspur, Chhattisgarh. He highlighted that three lakh poor families in Chhattisgarh are entering their new homes. He acknowledged the milestone achieved by women who, for the first time, have property registered in their names. The PM said that the Chhattisgarh Government is observing 2025 as Atal Nirman Varsh and reaffirmed the commitment, We built it, and we will nurture it.

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಛತ್ತೀಸಗಢದ ಬಿಲಾಸಪುರದಲ್ಲಿ 33,700 ಕೋಟಿ ರೂ.ಗೂ ಹೆಚ್ಚು ಮೊತ್ತದ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ಮತ್ತು ಉದ್ಘಾಟನೆ ನೆರವೇರಿಸಿದರು

March 30th, 03:30 pm

ಮೂಲಸೌಕರ್ಯಗಳನ್ನು ಅಭಿವೃದ್ಧಿಪಡಿಸುವ ಮತ್ತು ಸುಸ್ಥಿರ ಜೀವನೋಪಾಯವನ್ನು ಹೆಚ್ಚಿಸುವ ತಮ್ಮ ಬದ್ಧತೆಗೆ ಅನುಗುಣವಾಗಿ, ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಛತ್ತೀಸಗಢದ ಬಿಲಾಸಪುರದಲ್ಲಿ 33,700 ಕೋಟಿ ರೂ.ಗಳಿಗೂ ಹೆಚ್ಚು ಮೌಲ್ಯದ ಹಲವಾರು ಅಭಿವೃದ್ಧಿ ಯೋಜನೆಗಳಿಗೆ ಶಂಕುಸ್ಥಾಪನೆ, ಕಾಮಗಾರಿ ಆರಂಭ ಮಾಡಿದರು ಮತ್ತು ರಾಷ್ಟ್ರಕ್ಕೆ ಸಮರ್ಪಿಸಿದರು. ಮಾತಾ ಮಹಾಮಾಯೆಯ ನಾಡು ಮತ್ತು ಮಾತಾ ಕೌಶಲ್ಯೆಯ ತವರು ಮನೆಯಾದ ಛತ್ತೀಸಗಢಕ್ಕೆ ಹೊಸ ವರ್ಷದ ಶುಭ ಆರಂಭ ಮತ್ತು ನವರಾತ್ರಿಯ ಮೊದಲ ದಿನವಾದ ಇಂದಿನ ಮಹತ್ವವನ್ನು ಅವರು ಒತ್ತಿ ಹೇಳಿದರು. ರಾಜ್ಯಕ್ಕೆ ಸ್ತ್ರೀ ದೈವತ್ವಕ್ಕೆ ಮೀಸಲಾದ ಈ ಒಂಬತ್ತು ದಿನಗಳ ವಿಶೇಷ ಪ್ರಾಮುಖ್ಯತೆಯನ್ನು ಅವರು ಎತ್ತಿ ತೋರಿಸಿದರು. ನವರಾತ್ರಿಯ ಮೊದಲ ದಿನದಂದು ಛತ್ತೀಸಗಢದಲ್ಲಿರುವುದು ತಮಗೆ ದೊರೆತ ಗೌರವ ಎಂದು ಅವರು ಹೇಳಿದರು ಮತ್ತು ಇತ್ತೀಚೆಗೆ ಭಕ್ತ ಶಿರೋಮಣಿ ಮಾತಾ ಕರ್ಮ ಅವರ ಗೌರವಾರ್ಥ ಅಂಚೆ ಚೀಟಿ ಬಿಡುಗಡೆ ಮಾಡಿದ್ದಕ್ಕಾಗಿ ಎಲ್ಲರಿಗೂ ಅಭಿನಂದನೆ ತಿಳಿಸಿದರು. ನವರಾತ್ರಿ ಉತ್ಸವವು ರಾಮನವಮಿಯ ಆಚರಣೆಯೊಂದಿಗೆ ಮುಕ್ತಾಯಗೊಳ್ಳಲಿದೆ ಎಂದು ಅವರು ಹೇಳಿದರು, ಇದು ಛತ್ತೀಸಗಢದಲ್ಲಿ ರಾಮನ ಮೇಲಿನ ಅನನ್ಯ ಭಕ್ತಿಯನ್ನು, ವಿಶೇಷವಾಗಿ ರಾಮನಾಮಕ್ಕೆ ತಮ್ಮನ್ನು ಸಂಪೂರ್ಣವಾಗಿ ಅರ್ಪಿಸಿಕೊಂಡಿರುವ ರಾಮನಾಮಿ ಸಮಾಜದ ಅಸಾಧಾರಣ ಸಮರ್ಪಣೆಯನ್ನು ಎತ್ತಿ ತೋರಿಸುತ್ತದೆ ಎಂದು ಅವರು ಹೇಳಿದರು. ಛತ್ತೀಸಗಢದ ಜನರನ್ನು ಭಗವಾನ್ ರಾಮನ ತಾಯಿಯ ಕುಟುಂಬ ಎಂದು ಕರೆಯುವ ಮೂಲಕ ಅವರು ತಮ್ಮ ಶುಭಾಶಯಗಳನ್ನು ತಿಳಿಸಿದರು.

Politics is about winning people's hearts, says PM Modi in podcast with Nikhil Kamath

January 10th, 02:15 pm

Prime Minister Narendra Modi engages in a deep and insightful conversation with entrepreneur and investor Nikhil Kamath. In this discussion, they explore India's remarkable growth journey, PM Modi's personal life story, the challenges he has faced, his successes and the crucial role of youth in shaping the future of politics.

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ತಮ್ಮ ಮೊದಲ ಪಾಡ್ ಕಾಸ್ಟ್ ನಲ್ಲಿ ಉದ್ಯಮಿ ನಿಖಿಲ್ ಕಾಮತ್ ಅವರೊಂದಿಗೆ ಸಂವಾದ ನಡೆಸಿದರು

January 10th, 02:00 pm

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ತಮ್ಮ ಮೊದಲ ಪಾಡ್ಕ್ಯಾಸ್ಟ್ನಲ್ಲಿ ಉದ್ಯಮಿ ಮತ್ತು ಹೂಡಿಕೆದಾರ ನಿಖಿಲ್ ಕಾಮತ್ ಅವರೊಂದಿಗೆ ವಿವಿಧ ವಿಷಯಗಳ ಕುರಿತು ಮಾತುಕತೆ ನಡೆಸಿದರು. ಅವರ ಬಾಲ್ಯದ ಬಗ್ಗೆ ಕೇಳಿದಾಗ, ಪ್ರಧಾನಿಯವರು ತಮ್ಮ ಆರಂಭಿಕ ಜೀವನದ ಅನುಭವಗಳನ್ನು ಹಂಚಿಕೊಂಡರು ಮತ್ತು ಉತ್ತರ ಗುಜರಾತ್ ನ ಮೆಹ್ಸಾನಾ ಜಿಲ್ಲೆಯ ಸಣ್ಣ ಪಟ್ಟಣವಾದ ವಡ್ನಗರದಲ್ಲಿನ ತಮ್ಮ ಮೂಲದ ಬಗ್ಗೆ ಮಾತನಾಡಿದರು. ಗಾಯಕ್ವಾಡ್ ಸಾಮ್ರಾಜ್ಯದ ವಡ್ನಗರ ಪಟ್ಟಣವು ಶಿಕ್ಷಣದ ಬಗೆಗಿನ ತನ್ನ ಬದ್ಧತೆಗೆ ಹೆಸರುವಾಸಿಯಾಗಿದ್ದು, ಕೊಳ, ಅಂಚೆ ಕಚೇರಿ ಮತ್ತು ಗ್ರಂಥಾಲಯದಂತಹ ಅಗತ್ಯ ಸೌಲಭ್ಯಗಳನ್ನು ಹೊಂದಿದೆ ಎಂದು ಅವರು ಹೇಳಿದರು. ಗಾಯಕ್ವಾಡ್ ರಾಜ್ಯ ಪ್ರಾಥಮಿಕ ಶಾಲೆ ಮತ್ತು ಭಾಗವತಾಚಾರ್ಯ ನಾರಾಯಣಾಚಾರ್ಯ ಪ್ರೌಢಶಾಲೆಯಲ್ಲಿ ಕಳೆದ ತಮ್ಮ ಶಾಲಾ ದಿನಗಳನ್ನು ಪ್ರಧಾನಮಂತ್ರಿಯವರು ನೆನೆದರು. ವಡ್ನಗರದಲ್ಲಿ ಸಾಕಷ್ಟು ಸಮಯ ಕಳೆದಿದ್ದ ಚೀನೀ ತತ್ವಜ್ಞಾನಿ ಕ್ಸುವಾನ್ ಜಾಂಗ್ ಅವರ ಕುರಿತು ನಿರ್ಮಿಸಲಾಗುತ್ತಿರುವ ಚಲನಚಿತ್ರದ ಬಗ್ಗೆ ಅವರು ಒಮ್ಮೆ ಚೀನೀ ರಾಯಭಾರ ಕಚೇರಿಗೆ ಬರೆದಿದ್ದರ ಬಗ್ಗೆ ಆಸಕ್ತಿದಾಯಕ ಮಾಹಿತಿಯನ್ನು ಹಂಚಿಕೊಂಡರು. 2014 ರಲ್ಲಿ ತಾವು ಭಾರತದ ಪ್ರಧಾನಿಯಾದಾಗ ಚೀನಾದ ಅಧ್ಯಕ್ಷ ಕ್ಸಿ ಜಿನ್ಪಿಂಗ್ ಅವರು ಕ್ಸುವಾನ್ಜಾಂಗ್ ಮತ್ತು ತಮ್ಮ ಊರುಗಳ ನಡುವಿನ ಐತಿಹಾಸಿಕ ಸಂಬಂಧವನ್ನು ಉಲ್ಲೇಖಿಸಿ ಗುಜರಾತ್ ಮತ್ತು ವಡ್ನಗರಕ್ಕೆ ಭೇಟಿ ನೀಡುವ ಬಯಕೆಯನ್ನು ವ್ಯಕ್ತಪಡಿಸಿದ್ದನ್ನು ಪ್ರಧಾನಮಂತ್ರಿಯವರು ನೆನಪಿಸಿಕೊಂಡರು. ಈ ಸಂಪರ್ಕವು ಎರಡೂ ದೇಶಗಳ ನಡುವಿನ ಹಂಚಿಕೆಯ ಪರಂಪರೆ ಮತ್ತು ಬಲವಾದ ಸಂಬಂಧಗಳನ್ನು ಎತ್ತಿ ತೋರಿಸಿದೆ ಎಂದು ಅವರು ಹೇಳಿದರು.

ಒಡಿಶಾದ ಭುವನೇಶ್ವರದಲ್ಲಿ 18ನೇ ಪ್ರವಾಸಿ ಭಾರತೀಯ ದಿವಸ್ ಸಮ್ಮೇಳನದ ಉದ್ಘಾಟನಾ ಸಮಾರಂಭದಲ್ಲಿ ಪ್ರಧಾನಮಂತ್ರಿಯವರ ಭಾಷಣ

January 09th, 10:15 am

ಒಡಿಶಾದ ಗವರ್ನರ್ ಹರಿ ಬಾಬು ಜೀ, ನಮ್ಮ ಜನಪ್ರಿಯ ಮುಖ್ಯಮಂತ್ರಿ ಮೋಹನ್ ಚರಣ್ ಮಾಂಝಿ ಜೀ, ಕೇಂದ್ರ ಸಚಿವ ಸಂಪುಟದ ನನ್ನ ಸಹ ಸದಸ್ಯ ಎಸ್. ಜೈಶಂಕರ್ ಜೀ, ಜುವಾಲ್ ಒರಾಮ್ ಜೀ, ಧರ್ಮೇಂದ್ರ ಪ್ರಧಾನ ಜೀ, ಅಶ್ವಿನಿ ವೈಷ್ಣವ್ ಜೀ, ಶೋಭಾ ಕರಂದ್ಲಾಜೆ ಜೀ, ಕೀರ್ತಿ ವರ್ಧನ್ ಸಿಂಗ್ ಜೀ, ಪಬಿತ್ರ ಮಾರ್ಗರೇಟಾ ಜೀ, ಒಡಿಶಾದ ಉಪ ಮುಖ್ಯಮಂತ್ರಿ ಕನಕ್ ವರ್ಧನ್ ಸಿಂಗ್ ದೇವ್ ಜೀ, ಪ್ರವತಿ ಪರಿದಾ ಜೀ, ಇತರ ಮಂತ್ರಿಗಳು, ಸಂಸದರು ಮತ್ತು ಶಾಸಕರು, ಜಗತ್ತಿನ ಮೂಲೆ ಮೂಲೆಯಿಂದ ಇಲ್ಲಿಗೆ ಬಂದಿರುವ ಭಾರತ ಮಾತೆಯ ಎಲ್ಲಾ ಪುತ್ರರೇ ಮತ್ತು ಪುತ್ರಿಯರೇ!

ಒಡಿಶಾದಲ್ಲಿ 18ನೇ ಪ್ರವಾಸಿ ಭಾರತೀಯ ದಿನ ಉದ್ಘಾಟಿಸಿದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ

January 09th, 10:00 am

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಒಡಿಶಾದ ಭುವನೇಶ್ವರದಲ್ಲಿ ಇಂದು 18ನೇ ಪ್ರವಾಸಿ ಭಾರತೀಯ ದಿನವನ್ನು ಉದ್ಘಾಟಿಸಿದರು. ಜಗತ್ತಿನ ನಾನಾ ಮೂಲೆಗಳಿಂದ ಆಗಮಿಸಿರುವ ಪ್ರತಿನಿಧಿಗಳು ಹಾಗೂ ಅನಿವಾಸಿ ಭಾರತೀಯರನ್ನು ಸ್ವಾಗತಿಸಿದ ಶ್ರೀ ನರೇಂದ್ರ ಮೋದಿ ಅವರು ಭವಿಷ್ಯದಲ್ಲಿ ಜಗತ್ತಿನಾದ್ಯಂತದ ವಿವಿಧ ಭಾರತೀಯ ಅನಿವಾಸಿ ಕಾರ್ಯಕ್ರಮಗಳಲ್ಲಿ ಉದ್ಘಾಟನಾ ಗೀತೆಯನ್ನು ನುಡಿಸಲಾಗುವುದು ಎಂದು ವಿಶ್ವಾಸ ವ್ಯಕ್ತಪಡಿಸಿದರು. ಭಾರತೀಯ ವಲಸಿಗರ ಭಾವನೆಗಳು ಮತ್ತು ಅನುಭವಗಳನ್ನು ಸೆರೆಹಿಡಿದ ಅದ್ಭುತ ಗಾಯನಕ್ಕಾಗಿ ಅವರು ಗ್ರ್ಯಾಮಿ ಪ್ರಶಸ್ತಿ ವಿಜೇತ ಕಲಾವಿದ ರಿಕಿ ಕೇಜ್ ಮತ್ತು ಅವರ ತಂಡವನ್ನು ಶ್ಲಾಘಿಸಿದರು.