ಗುವಾಹತಿಯಲ್ಲಿ “ಬಾಗುರೂಂಬಾ ದೊಹೊ” ಸಾಂಪ್ರದಾಯಿಕ ಬೋಡೊ ಸಾಂಸ್ಕೃತಿಕ ಕಾರ್ಯಕ್ರಮ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
January 17th, 06:30 pm
ಅಸ್ಸಾಂ ರಾಜ್ಯಪಾಲರಾದ ಶ್ರೀ ಲಕ್ಷ್ಮಣ್ ಪ್ರಸಾದ್ ಆಚಾರ್ಯ ಅವರೇ, ಮುಖ್ಯಮಂತ್ರಿ ಶ್ರೀ ಹಿಮಂತ ಬಿಸ್ವಾ ಶರ್ಮಾ ಅವರೇ, ಕೇಂದ್ರ ಸರ್ಕಾರದ ನನ್ನ ಸಹೋದ್ಯೋಗಿಗಳಾದ ಶ್ರೀ ಸರ್ಬಾನಂದ ಸೋನೋವಾಲ್ ಅವರೇ, ಪಬಿತ್ರ ಮಾರ್ಗರಿಟಾ ಅವರೇ, ಅಸ್ಸಾಂ ವಿಧಾನಸಭೆ ಸ್ಪೀಕರ್ ಶ್ರೀ ಬಿಸ್ವಾಜಿತ್ ಡೈಮರಿ ಅವರೇ, ಬೋಡೊಲ್ಯಾಂಡ್ ಪ್ರಾದೇಶಿಕ ಮಂಡಳಿಯ ಮುಖ್ಯ ಕಾರ್ಯನಿರ್ವಾಹಕ ಸದಸ್ಯ ಹಗ್ರಾಮ ಮೊಹಿಲರಿ ಅವರೇ, ರಾಜ್ಯ ಸರ್ಕಾರದ ಸಚಿವರೆ, ಎಲ್ಲಾ ಗೌರವಾನ್ವಿತ ನಾಗರಿಕ ಸಹೋದರ ಸಹೋದರಿಯರೆ ಮತ್ತು ಅಸ್ಸಾಂನ ನನ್ನ ಸಹೋದರ ಸಹೋದರಿಯರೆ,ಅಸ್ಸಾಂನ ಗುವಾಹಟಿಯಲ್ಲಿ ನಡೆದ "ಬಾಗುರೂಂಬಾ ದೊಹೊ," ಕಾರ್ಯಕ್ರಮವನ್ನು ಉದ್ದೇಶಿಸಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಭಾಷಣ ಮಾಡಿದರು
January 17th, 06:00 pm
ಗುವಾಹಟಿಯ ಸರುಸಜೈ ಕ್ರೀಡಾಂಗಣದಲ್ಲಿ ಬೋಡೋ ಸಮುದಾಯದ ಶ್ರೀಮಂತ ಪರಂಪರೆಯನ್ನು ಆಚರಿಸುವ ಐತಿಹಾಸಿಕ ಸಾಂಸ್ಕೃತಿಕ ಕಾರ್ಯಕ್ರಮವಾದ ಬಾಗುರೂಂಬಾ ದೊಹೊ 2026 ಕಾರ್ಯಕ್ರಮವನ್ನು ಉದ್ದೇಶಿಸಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಭಾಷಣ ಮಾಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಪ್ರಧಾನಮಂತ್ರಿಯವರು, ಅಸ್ಸಾಂನ ಸಂಸ್ಕೃತಿಯನ್ನು ವೀಕ್ಷಿಸುವುದು ಮತ್ತು ಬೋಡೋ ಸಮುದಾಯದ ಸಂಪ್ರದಾಯಗಳನ್ನು ಸೂಕ್ಷ್ಮವಾಗಿ ಗಮನಿಸುವುದು ತಮ್ಮ ಸೌಭಾಗ್ಯ ಎಂದು ಹೇಳಿದರು. ಈ ಹಿಂದಿನ ಯಾವುದೇ ಪ್ರಧಾನಮಂತ್ರಿಗಳು, ಅಸ್ಸಾಂಗೆ ತಾವು ಭೇಟಿ ನೀಡಿದಷ್ಟು ಬಾರಿ ಭೇಟಿ ನೀಡಲಿಲ್ಲ ಎಂದು ಹೇಳಿದ ಶ್ರೀ ಮೋದಿ ಅವರು, ಅಸ್ಸಾಂನ ಕಲೆ ಮತ್ತು ಸಂಸ್ಕೃತಿ ದೊಡ್ಡ ವೇದಿಕೆಯನ್ನು ಪಡೆಯಬೇಕು ಮತ್ತು ಭವ್ಯ ಆಚರಣೆಗಳ ಮೂಲಕ ರಾಷ್ಟ್ರ ಮತ್ತು ಪ್ರಪಂಚದಾದ್ಯಂತ ಮನ್ನಣೆ ಪಡೆಯಬೇಕು ಎಂಬ ತಮ್ಮ ನಿರಂತರ ಆಶಯವನ್ನು ಒತ್ತಿ ಹೇಳಿದರು. ದೊಡ್ಡ ಪ್ರಮಾಣದ ಬಿಹು ಉತ್ಸವಗಳು, ಜುಮೋಯಿರ್ ಬಿನೋಂದಿನಿಯ ಅಭಿವ್ಯಕ್ತಿ, ಒಂದೂವರೆ ವರ್ಷಗಳ ಹಿಂದೆ ನವದೆಹಲಿಯಲ್ಲಿ ನಡೆದ ಭವ್ಯ ಬೋಡೋ ಮಹೋತ್ಸವ ಮತ್ತು ಇತರ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಉಲ್ಲೇಖಿಸಿ ಈ ದಿಕ್ಕಿನಲ್ಲಿ ನಿರಂತರ ಪ್ರಯತ್ನಗಳು ನಡೆದಿವೆ ಎಂದು ಪ್ರಧಾನಮಂತ್ರಿ ಅವರು ಹೇಳಿದರು. ಅಸ್ಸಾಂನ ಕಲೆ ಮತ್ತು ಸಂಸ್ಕೃತಿಯ ವಿಶಿಷ್ಟತೆ , ವೈವಿಧ್ಯತೆಗಳ ಆನಂದವನ್ನು ಅನುಭವಿಸುವ ಅವಕಾಶವನ್ನು ತಾವು ಎಂದಿಗೂ ಕಳೆದುಕೊಳ್ಳುವುದಿಲ್ಲ ಎಂದು ಪ್ರಧಾನಮಂತ್ರಿ ಅವರು ಹೇಳಿದರು. ಮತ್ತೊಮ್ಮೆ, ಬಾಗುರುಂಬಾ ಉತ್ಸವವನ್ನು ಆಯೋಜಿಸಲಾಗುತ್ತಿದೆ ಎಂದು ಅವರು ಹೇಳಿದರು, ಇದು ಅನನ್ಯ ಬೋಡೋ ಗುರುತಿನ ವೈವಿಧ್ಯಮಯ ಆಚರಣೆ ಮತ್ತು ಅಸ್ಸಾಂನ ಪರಂಪರೆಗೆ ಗೌರವ ತುಂಬುತ್ತದೆ ಎಂದು ಅವರು ಬಣ್ಣಿಸಿದರು. ಈ ಕಾರ್ಯಕ್ರಮದೊಂದಿಗೆ ಸಂಬಂಧ ಹೊಂದಿರುವ ಎಲ್ಲರಿಗೂ, ವಿಶೇಷವಾಗಿ ಕಲಾವಿದರಿಗೆ ಶ್ರೀ ಮೋದಿ ಅವರು ತಮ್ಮ ಶುಭಾಶಯಗಳು ಮತ್ತು ಅಭಿನಂದನೆಗಳನ್ನು ವ್ಯಕ್ತಪಡಿಸಿದರು.ಅಸ್ಸಾಂನ ಗೋಲಾಘಾಟ್ ನಲ್ಲಿ ಪಾಲಿಪ್ರೊಪಿಲೀನ್ ಸ್ಥಾವರದ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಪ್ರಧಾನಮಂತ್ರಿ ಅವರ ಭಾಷಣದ ಕನ್ನಡ ಅನುವಾದ
September 14th, 03:30 pm
ಭಾರತ್ ಮಾತಾ ಕೀ ಜೈ! ಅಸ್ಸಾಂನ ಜನಪ್ರಿಯ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಜೀ, ಕೇಂದ್ರ ಸಚಿವ ಸಂಪುಟದ ನನ್ನ ಸಹೋದ್ಯೋಗಿಗಳಾದ ಸರ್ಬಾನಂದ ಸೋನೊವಾಲ್ ಜೀ, ಹರ್ದೀಪ್ ಸಿಂಗ್ ಪುರಿ ಜೀ, ಅಸ್ಸಾಂ ಸರ್ಕಾರದ ಸಚಿವರು, ಸಂಸದರು ಮತ್ತು ಶಾಸಕರು ಹಾಗೂ ಹೆಚ್ಚಿನ ಸಂಖ್ಯೆಯಲ್ಲಿ ಇಲ್ಲಿಗೆ ಬಂದಿರುವ ನನ್ನ ಸಹೋದರ ಸಹೋದರಿಯರೇ!ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಂದ ಅಸ್ಸಾಂನ ಗೋಲಾಘಾಟ್ ನಲ್ಲಿ ಬಯೋಇಥೆನಾಲ್ ಸ್ಥಾವರವನ್ನು ಉದ್ಘಾಟನೆ, ಪಾಲಿಪ್ರೊಪಿಲೀನ್ ಘಟಕಕ್ಕೆ ಶಂಕುಸ್ಥಾಪನೆ ನೆರವೇರಿಸಿದರು
September 14th, 03:00 pm
ಕಳೆದ ಎರಡು ದಿನಗಳಿಂದ ತಾವು ಈಶಾನ್ಯದಲ್ಲಿದ್ದು, ಪ್ರತಿ ಬಾರಿ ಈ ಪ್ರದೇಶಕ್ಕೆ ಭೇಟಿ ನೀಡಿದಾಗಲೂ ಅಸಾಧಾರಣ ಪ್ರೀತಿ ಮತ್ತು ಆಶೀರ್ವಾದಗಳನ್ನು ಪಡೆಯುವುದಾಗಿ ಪ್ರಧಾನಮಂತ್ರಿಯವರು ಹೇಳಿದರು. ಅಸ್ಸಾಂನ ಈ ಭಾಗದಲ್ಲಿ ತಾವು ಅನುಭವಿಸುವ ವಿಶಿಷ್ಟವಾದ ಆತ್ಮೀಯತೆ ಮತ್ತು ಬಂಧುತ್ವದ ಭಾವನೆಯನ್ನು ಅವರು ಎತ್ತಿ ತೋರಿಸಿದರು ಮತ್ತು ಜನರಿಗೆ ಕೃತಜ್ಞತೆ ವ್ಯಕ್ತಪಡಿಸಿದರು.