ಪ್ರಧಾನಮಂತ್ರಿಯವರಿಂದ ಏಷ್ಯನ್ ಅಭಿವೃದ್ಧಿ ಬ್ಯಾಂಕಿನ ಅಧ್ಯಕ್ಷರಾದ ಶ್ರೀ ಮಸಾಟೊ ಕಾಂಡಾ ಅವರ ಭೇಟಿ
June 01st, 04:35 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಏಷ್ಯನ್ ಅಭಿವೃದ್ಧಿ ಬ್ಯಾಂಕಿನ ಅಧ್ಯಕ್ಷರಾದ ಶ್ರೀ ಮಸಾಟೊ ಕಾಂಡಾ ಅವರನ್ನು ಭೇಟಿಯಾದರು. ಕಳೆದ ದಶಕದಲ್ಲಿ ಭಾರತದ ಕ್ಷಿಪ್ರ ಪರಿವರ್ತನೆಯು ಅಸಂಖ್ಯಾತ ಜನರನ್ನು ಸಬಲಗೊಳಿಸಿದೆ ಮತ್ತು ಈ ಪಯಣಕ್ಕೆ ಮತ್ತಷ್ಟು ವೇಗ ನೀಡಲು ನಾವು ಕಾರ್ಯ ನಿರ್ವಹಿಸುತ್ತಿದ್ದೇವೆ ಎಂದು ಶ್ರೀ ಮೋದಿ ಅವರು ಹೇಳಿದ್ದಾರೆ.ಕೈಗಾರಿಕಾ ತರಬೇತಿ ಸಂಸ್ಥೆ (ಐಟಿಐ) ಉನ್ನತೀಕರಣಕ್ಕೆ ರಾಷ್ಟ್ರೀಯ ಯೋಜನೆ ಮತ್ತು ಕೌಶಲ್ಯಕ್ಕಾಗಿ ಐದು ರಾಷ್ಟ್ರೀಯ ಉತ್ಕೃಷ್ಟತಾ ಕೇಂದ್ರಗಳ ಸ್ಥಾಪನೆಗೆ ಸಂಪುಟದ ಅನುಮೋದನೆ
May 07th, 02:07 pm
2024-25 ಮತ್ತು 2025-26ನೇ ಸಾಲಿನ ಆಯವ್ಯಯದಲ್ಲಿ ಘೋಷಿಸಲಾಗಿರುವ 60,000 ಕೋಟಿ ರೂ.ಗಳ (ಕೇಂದ್ರ ಪಾಲು: 30,000 ಕೋಟಿ ರೂ., ರಾಜ್ಯ ಪಾಲು 20,000 ಕೋಟಿ ರೂ. ಮತ್ತು ಕೈಗಾರಿಕಾ ಪಾಲು 10,000 ಕೋಟಿ ರೂ.ಗಳ) ವೆಚ್ಚದಲ್ಲಿ ಕೈಗಾರಿಕಾ ತರಬೇತಿ ಸಂಸ್ಥೆ (ಐ.ಟಿ.ಐ.) ಮೇಲ್ದರ್ಜೆಗೆ ಏರಿಸುವ ಮತ್ತು ಕೌಶಲ್ಯಕ್ಕಾಗಿ ಐದು (5) ರಾಷ್ಟ್ರೀಯ ಉತ್ಕೃಷ್ಟತಾ ಕೇಂದ್ರಗಳನ್ನು (ಎನ್‌ಸಿಒಇ) ಸ್ಥಾಪಿಸುವ ಯೋಜನೆಯನ್ನು ಕೇಂದ್ರ ಪ್ರಾಯೋಜಿತ ಯೋಜನೆಯಾಗಿ ಜಾರಿಗೆ ತರಲಾಗುವುದು. ಇದರಲ್ಲಿ ಕೇಂದ್ರದ ಪಾಲನ್ನು 50% ವರೆಗೆ ಏಷಿಯನ್ ಡೆವಲಪ್ಮೆಂಟ್ ಬ್ಯಾಂಕ್ ಮತ್ತು ವಿಶ್ವಬ್ಯಾಂಕ್ ಗಳು ಸಮಾನವಾಗಿ ಭರಿಸಲಿವೆ.