ಮಲೇಷ್ಯಾದ ಪ್ರಧಾನಮಂತ್ರಿ ಅವರೊಂದಿಗೆ ಅಧಿಕೃತ ಮಾತುಕತೆ ನಡೆಸಿದ ಪ್ರಧಾನಮಂತ್ರಿ ಮೋದಿ
February 08th, 11:19 am
ನಾಯಕರು ವ್ಯಾಪಕ ಚರ್ಚೆಗಳನ್ನು ನಡೆಸಿದರು ಮತ್ತು 2024ರಲ್ಲಿ ಉಭಯ ದೇಶಗಳ ನಡುವೆ ಸ್ಥಾಪಿಸಲಾದ ಸಮಗ್ರ ಕಾರ್ಯತಂತ್ರದ ಪಾಲುದಾರಿಕೆಯನ್ನು ಮತ್ತಷ್ಟು ಬಲಪಡಿಸಲು ಸಹಮತ ವ್ಯಕ್ತಪಡಿಸಿದರು. ಪಾಲುದಾರಿಕೆ ಮತ್ತು ಜನರ ನಡುವಿನ ನಿಕಟ ಸಂಬಂಧದಲ್ಲಿ ನೆಲೆಯೂರಿರುವ ಭಾರತ-ಮಲೇಷ್ಯಾ ಹಳೆಯ ಬಾಂಧವ್ಯವನ್ನು ಅವರು ಸ್ಮರಿಸಿದರು. ವ್ಯಾಪಾರ, ಹೂಡಿಕೆ, ರಕ್ಷಣೆ, ಭದ್ರತೆ, ಸಮುದ್ರ, ಶುದ್ಧ ಇಂಧನ, ಮೂಲಸೌಕರ್ಯ, ನವೋದ್ಯಮಗಳು, ಕೃಷಿ, ಶಿಕ್ಷಣ, ಆರೋಗ್ಯ, ಆಯುರ್ವೇದ, ಪ್ರವಾಸೋದ್ಯಮ ಮತ್ತು ಸಾಂಸ್ಕೃತಿಕ ಸಂಪರ್ಕಗಳಂತಹ ಆದ್ಯತೆಯ ಕ್ಷೇತ್ರಗಳು ಸೇರಿದಂತೆ ದ್ವಿಪಕ್ಷೀಯ ಸಂಬಂಧಗಳ ಸಂಪೂರ್ಣ ಆಯಾಮವನ್ನು ನಾಯಕರು ಪರಿಶೀಲಿಸಿದರು. ಸೆಮಿಕಂಡಕ್ಟರ್‌ಗಳು ಮತ್ತು ಕೃತಕ ಬುದ್ಧಿಮತ್ತೆಯಂತಹ ಉದಯೋನ್ಮುಖ ಕ್ಷೇತ್ರಗಳಲ್ಲಿ ಸಹಕಾರವನ್ನು ಹೆಚ್ಚಿಸುವ ಬಗ್ಗೆಯೂ ಅವರು ಚರ್ಚಿಸಿದರು. 'ದ್ವಿಪಕ್ಷೀಯ ಡಿಜಿಟಲ್ ಮಂಡಳಿ' ಮೂಲಕ ಉಭಯ ದೇಶಗಳ ನಡುವಿನ ಡಿಜಿಟಲ್ ಸಹಕಾರದ ಸ್ಥಿರ ಪ್ರಗತಿಯನ್ನು ನಾಯಕರು ಶ್ಲಾಘಿಸಿದರು. ಇದೇವೇಳೆ 'ಫಿನ್‌ಟೆಕ್' ಕ್ಷೇತ್ರದಲ್ಲಿ ಸಹಯೋಗವನ್ನು ಹೆಚ್ಚಿಸಲು 'ಯುಪಿಐ' ಮತ್ತು 'ಪೇ-ನೆಟ್' ನಡುವಿನ ಒಪ್ಪಂದವನ್ನು ಅವರು ಸ್ವಾಗತಿಸಿದರು.ಮಲೇಷ್ಯಾ ಪ್ರಧಾನಮಂತ್ರಿ ಅವರ ಜೊತೆ ಜಂಟಿ ಪತ್ರಿಕಾ ಹೇಳಿಕೆಯ ಸಂದರ್ಭದಲ್ಲಿ ಪ್ರಧಾನಮಂತ್ರಿ ಅವರ ಪತ್ರಿಕಾ ಹೇಳಿಕೆ
February 08th, 08:35 am
ಮೊದಲನೆಯದಾಗಿ, ಆತ್ಮೀಯ ಸ್ವಾಗತಕ್ಕಾಗಿ ನನ್ನ ಆಪ್ತ ಮಿತ್ರರಾದ ಪ್ರಧಾನಮಂತ್ರಿ ಅನ್ವರ್ ಇಬ್ರಾಹಿಂ ಅವರಿಗೆ ನನ್ನ ಹೃತ್ಪೂರ್ವಕ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ. ಕಳೆದ ವರ್ಷ, ಆಸಿಯಾನ್ (ASEAN) ಶೃಂಗಸಭೆಯ ಸಂದರ್ಭದಲ್ಲಿ ನನಗೆ ಮಲೇಷ್ಯಾಕ್ಕೆ ಭೇಟಿ ನೀಡಲು ಸಾಧ್ಯವಾಗಲಿಲ್ಲ. ಆದರೆ ಶೀಘ್ರದಲ್ಲೇ ಮಲೇಷ್ಯಾಕ್ಕೆ ಬರುತ್ತೇನೆ ಎಂದು ನಾನು ನನ್ನ ಪ್ರಿಯ ಮಿತ್ರರಿಗೆ ಮಾತು ಕೊಟ್ಟಿದ್ದೆ. ಅದರಂತೆ ಇಂದು, 2026ರ ಸಾಲಿನ ನನ್ನ ಮೊದಲ ವಿದೇಶಿ ಪ್ರವಾಸದ ಅಂಗವಾಗಿ ನಾನು ಮಲೇಷ್ಯಾದಲ್ಲಿದ್ದೇನೆ.ಭಾರತದ ಪ್ರಧಾನಮಂತ್ರಿ ಅವರು ಮಲೇಷ್ಯಾಕ್ಕೆ ನೀಡಿದ ಅಧಿಕೃತ ಭೇಟಿಯ ಸಂದರ್ಭದಲ್ಲಿ ಭಾರತ - ಮಲೇಷ್ಯಾ ಜಂಟಿ ಹೇಳಿಕೆ
February 08th, 08:30 am
ಮಲೇಷ್ಯಾ ಪ್ರಧಾನಮಂತ್ರಿ ಗೌರವಾನ್ವಿತ ಡಾಟೋ ಸೆರಿ ಅನ್ವರ್ ಇಬ್ರಾಹಿಂ ಅವರ ಆಹ್ವಾನದ ಮೇರೆಗೆ, ಭಾರತ ಗಣರಾಜ್ಯದ ಪ್ರಧಾನಮಂತ್ರಿ ಗೌರವಾನ್ವಿತ ಶ್ರೀ ನರೇಂದ್ರ ಮೋದಿ ಅವರು 2026ರ ಫೆಬ್ರವರಿ 7 ರಿಂದ 8 ರವರೆಗೆ ಮಲೇಷ್ಯಾಕ್ಕೆ ಅಧಿಕೃತ ಭೇಟಿ ನೀಡಿದರು. ಈ ಭೇಟಿಯು ಉಭಯ ದೇಶಗಳ ನಡುವಿನ ನಾಗರಿಕ ಸಂಬಂಧಗಳ ಆಧಾರದ ಮೇಲೆ ಆಳವಾಗಿ ಬೇರೂರಿರುವ ಸ್ನೇಹ ಮತ್ತು ಜನರ ನಡುವಿನ ಸುದೀರ್ಘ ಬಾಂಧವ್ಯವನ್ನು ಪ್ರತಿಫಲಿಸುತ್ತದೆ. ಭಾರತ-ಮಲೇಷ್ಯಾ ಸಮಗ್ರ ಕಾರ್ಯತಂತ್ರದ ಪಾಲುದಾರಿಕೆಯನ್ನು ಮತ್ತಷ್ಟು ಬಲಪಡಿಸಲು ಮತ್ತು ವಿಸ್ತರಿಸಲು ಉಭಯ ನಾಯಕರ ಹಂಚಿಕೆಯ ಬದ್ಧತೆಯನ್ನು ಇದು ಪುನರುಚ್ಚರಿಸಿದೆ.ಮಲೇಷ್ಯಾ ಪ್ರಧಾನಮಂತ್ರಿ ಅನ್ವರ್ ಇಬ್ರಾಹಿಂ ಅವರೊಂದಿಗೆ ನಡೆದ ನಿಯೋಗ ಮಟ್ಟದ ಮಾತುಕತೆಯ ಸಂದರ್ಭದಲ್ಲಿ ಪ್ರಧಾನಮಂತ್ರಿ ಅವರ ಭಾಷಣ
February 08th, 08:20 am
ನನ್ನ ಮಿತ್ರರಾದ ಪ್ರಧಾನಮಂತ್ರಿಗಳೇ, ನಾನು ನಿಮಗೆ ನನ್ನ ಹೃತ್ಪೂರ್ವಕ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ. ನನ್ನ ನಿಯೋಗಕ್ಕೆ ಮತ್ತು ನನಗೆ ನೀಡಿದ ಸ್ವಾಗತದ ರೀತಿ, ಹಾಗೂ ಕೇವಲ ಕೆಲವು ಗಂಟೆಗಳಲ್ಲಿ ಮಲೇಷ್ಯಾದ ಜೀವನದ ಸಾರವನ್ನು ಸಂಪ್ರದಾಯಗಳನ್ನೂ ಮೀರಿ ಅತ್ಯಂತ ಸುಂದರವಾಗಿ ನೀವು ಪ್ರಸ್ತುತಪಡಿಸಿದ ರೀತಿ ನನ್ನ ನೆನಪಿನಲ್ಲಿ ಎಂದೆಂದಿಗೂ ಅಚ್ಚಳಿಯದೆ ಉಳಿಯುತ್ತದೆ. ಇದಕ್ಕಾಗಿ ನಾನು ನನ್ನ ಆಳವಾದ ಪ್ರಶಂಸೆಯನ್ನು ವ್ಯಕ್ತಪಡಿಸುತ್ತೇನೆ. ಸ್ನೇಹ ಎಂದರೆ ಏನು, ಅದರ ಎತ್ತರ ಮತ್ತು ಆಳಗಳು ಎಂಥವು ಎಂಬುದನ್ನು ನಾನು ಇಂದು ನಿಜವಾಗಿಯೂ ಅನುಭವಿಸಿದ್ದೇನೆ ಮತ್ತು ಅದಕ್ಕಾಗಿ ನಾನು ನಿಮಗೆ ಚಿರಋಣಿಯಾಗಿದ್ದೇನೆ.22ನೇ ಆಸಿಯಾನ್-ಭಾರತ ಶೃಂಗಸಭೆಯಲ್ಲಿ ಪ್ರಧಾನ ಮಂತ್ರಿಯವರ ಭಾಗವಹಿಸುವಿಕೆ
October 25th, 09:48 am
ಮಲೇಷ್ಯಾದ ಪ್ರಧಾನಿ ಅನ್ವರ್ ಇಬ್ರಾಹಿಂ ಅವರ ಆಹ್ವಾನದ ಮೇರೆಗೆ, ಪ್ರಧಾನಿ ಮೋದಿ ಅವರು ಅಕ್ಟೋಬರ್ 26, 2025 ರಂದು ನಡೆಯಲಿರುವ 22ನೇ ಆಸಿಯಾನ್ - ಭಾರತ ಶೃಂಗಸಭೆಯಲ್ಲಿ ವರ್ಚುವಲ್ ಆಗಿ ಭಾಗವಹಿಸಲಿದ್ದಾರೆ. ನಮ್ಮ ಆಕ್ಟ್ ಈಸ್ಟ್ ನೀತಿ ಮತ್ತು ಇಂಡೋ-ಪೆಸಿಫಿಕ್ ದೃಷ್ಟಿಕೋನಕ್ಕೆ ಅನುಗುಣವಾಗಿ ಪ್ರಧಾನಿ ಮೋದಿ ಅವರು ಆಸಿಯಾನ್-ಭಾರತ ಸಂಬಂಧಗಳಲ್ಲಿನ ಪ್ರಗತಿಯನ್ನು ಆಸಿಯಾನ್ ನಾಯಕರೊಂದಿಗೆ ಜಂಟಿಯಾಗಿ ಪರಿಶೀಲಿಸಲಿದ್ದಾರೆ.ಪ್ರಧಾನಮಂತ್ರಿ ಅವರು ಮಲೇಷ್ಯಾದ ಪ್ರಧಾನಮಂತ್ರಿ ಅವರೊಂದಿಗೆ ಮಾತನಾಡಿ ಆಸಿಯಾನ್ ಅಧ್ಯಕ್ಷತೆಗಾಗಿ ಅವರಿಗೆ ಅಭಿನಂದನೆ ಸಲ್ಲಿಸಿದರು
October 23rd, 10:55 am
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಲೇಷ್ಯಾದ ಪ್ರಧಾನಮಂತ್ರಿ ಅನ್ವರ್ ಇಬ್ರಾಹಿಂ ಅವರೊಂದಿಗೆ ಆತ್ಮೀಯ ಮತ್ತು ಸೌಹಾರ್ದಯುತ ಮಾತುಕತೆ ನಡೆಸಿದರು.ಪಿಲಿಪೀನ್ಸ್ ಅಧ್ಯಕ್ಷರೊಂದಿಗಿನ ಭೇಟಿಯ ಸಂದರ್ಭದಲ್ಲಿ ಪ್ರಧಾನಮಂತ್ರಿ ಅವರ ಹೇಳಿಕೆಗಳ ಕನ್ನಡ ಅನುವಾದ
August 05th, 03:45 pm
ನಾನು ಭಾರತಕ್ಕೆ ನಿಮ್ಮನ್ನು ಮತ್ತು ನಿಮ್ಮ ನಿಯೋಗವನ್ನು ಆತ್ಮೀಯವಾಗಿ ಸ್ವಾಗತಿಸುತ್ತೇನೆ. ಇಂದು ನಮ್ಮ ದ್ವಿಪಕ್ಷೀಯ ಸಂಬಂಧಗಳಿಗೆ ಐತಿಹಾಸಿಕ ದಿನವಾಗಿದೆ. ನಾವು ಭಾರತ- ಪಿಲಿಪೀನ್ಸ್ ಸಂಬಂಧವನ್ನು ಕಾರ್ಯತಂತ್ರದ ಪಾಲುದಾರಿಕೆಯ ಮಟ್ಟಕ್ಕೆ ಎತ್ತರಿಸುತ್ತಿದ್ದೇವೆ. ಇದು ನಮ್ಮ ಸಂಬಂಧಗಳಿಗೆ ಹೊಸ ವೇಗ ಮತ್ತು ತೀವ್ರತೆಯನ್ನು ತಂದುಕೊಡುತ್ತದೆ ಮತ್ತು ರಕ್ಷಣೆ ಮತ್ತು ಭದ್ರತೆಯ ಕ್ಷೇತ್ರಗಳಲ್ಲಿ ನಮ್ಮ ಸಹಕಾರ ಮತ್ತಷ್ಟು ಬಲವರ್ಧನೆಗೊಳ್ಳಲಿದೆ. ಕಳೆದ ಕೆಲವು ವರ್ಷಗಳಿಂದ, ವ್ಯಾಪಾರ, ರಕ್ಷಣೆ, ಸಾಗರ ಸಹಕಾರ, ಆರೋಗ್ಯ ರಕ್ಷಣೆ, ಭದ್ರತೆ, ಆಹಾರ ಭದ್ರತೆ, ಅಭಿವೃದ್ಧಿ ಪಾಲುದಾರಿಕೆ ಮತ್ತು ಜನರ ನಡುವಿನ ಸಂಬಂಧಗಳು ಸೇರಿದಂತೆ ಎಲ್ಲಾ ವಲಯಗಳಲ್ಲಿ ನಮ್ಮ ಸಂಬಂಧಗಳು ಪ್ರಗತಿಯನ್ನು ಸಾಧಿಸಿವೆ. ಮುಂದಿನ ಐದು ವರ್ಷಗಳಿಗಾಗಿ ನಾವು ಇಂದು ಕ್ರಿಯಾ ಯೋಜನೆಯನ್ನು ರೂಪಿಸುತ್ತಿರುವುದೂ ಸಹ ನಿಜಕ್ಕೂ ತೃಪ್ತಿಯ ವಿಷಯವಾಗಿದೆ.ಇಂಡೋನೇಷ್ಯಾದ ಪ್ರಧಾನಮಂತ್ರಿಯನ್ನು ಭೇಟಿ ಮಾಡಿದ ಪ್ರಧಾನಮಂತ್ರಿ
November 19th, 06:09 am
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಬ್ರೆಜಿಲ್‌ನ ರಿಯೊ ಡಿ ಜನೈರೊದಲ್ಲಿ ನಡೆಯುತ್ತಿರುವ ಜಿ 20 ಶೃಂಗಸಭೆಯ ನೇಪಥ್ಯದಲ್ಲಿ ಇಂಡೋನೇಷ್ಯಾದ ನೂತನ ಅಧ್ಯಕ್ಷರಾಗಿ ಚುನಾಯಿತರಾಗಿರುವ ಗೌರವಾನ್ವಿತ ಪ್ರಬೋವೊ ಸುಬಿಯಾಂಟೊ ಅವರನ್ನು ಭೇಟಿ ಮಾಡಿದರು. ಇದು ಉಭಯ ನಾಯಕರ ಮೊದಲ ಭೇಟಿಯಾಗಿತ್ತುಲಾವೊ ಪಿಡಿಆರ್ ನ ವಿಯೆಂಟಿಯಾನ್ ನಲ್ಲಿ ನಡೆದ 19ನೇ ಪೂರ್ವ ಏಷ್ಯಾ ಶೃಂಗಸಭೆಯಲ್ಲಿ ಪ್ರಧಾನಮಂತ್ರಿಯವರು ಮಾಡಿದ ಮಧ್ಯಂತರ ಭಾಷಣದ ಕನ್ನಡ ಅವತರಣಿಕೆ
October 11th, 08:15 am
ಭಾರತವು ಆಸಿಯಾನ್ ನ ಏಕತೆ ಮತ್ತು ಕೇಂದ್ರೀಕರಣವನ್ನು ಸತತವಾಗಿ ಬೆಂಬಲಿಸುತ್ತಿದೆ. ಭಾರತದ ಇಂಡೋ-ಪೆಸಿಫಿಕ್ ದೃಷ್ಟಿಕೋನ ಮತ್ತು ಕ್ವಾಡ್ ಸಹಕಾರಕ್ಕೆ ಆಸಿಯಾನ್ ಪ್ರಮುಖ ಆಧಾರವಾಗಿದೆ. ಭಾರತದ ಇಂಡೋ-ಪೆಸಿಫಿಕ್ ಓಷನ್ಸ್ ಇನಿಶಿಯೇಟಿವ್ ಮತ್ತು ಇಂಡೋ-ಪೆಸಿಫಿಕ್ ಮೇಲಿನ ಆಸಿಯಾನ್ ಔಟ್‌ಲುಕ್ ನಡುವೆ ಪ್ರಮುಖ ಸಾಮ್ಯತೆಗಳಿವೆ. ಸಂಪೂರ್ಣ ಪ್ರದೇಶದ ಸಮಗ್ರ ಶಾಂತಿ ಮತ್ತು ಪ್ರಗತಿಗೆ ಮುಕ್ತ, ತೆರೆದ, ಅಂತರ್ಗತ, ಸಮೃದ್ಧ ಮತ್ತು ನಿಯಮಗಳ-ಆಧಾರಿತ ಇಂಡೋ-ಪೆಸಿಫಿಕ್ ನಿರ್ಣಾಯಕಗಳು ಅಗತ್ಯವಾಗಿದೆ.19ನೇ ಪೂರ್ವ ಏಷ್ಯಾ ಶೃಂಗಸಭೆಯಲ್ಲಿ ಪ್ರಧಾನಮಂತ್ರಿ ಅವರ ಭಾಗವಹಿಸುವಿಕೆ
October 11th, 08:10 am
ಪ್ರಧಾನಮಂತ್ರಿ ಅವರು 2024ರ ಅಕ್ಟೋಬರ್ 11ರಂದು ಲಾವೋ ಪಿಡಿಆರ್ ನ ವಿಯೆಂಟಿಯಾನ್ ನಲ್ಲಿ ನಡೆದ 19ನೇ ಪೂರ್ವ ಏಷ್ಯಾ ಶೃಂಗಸಭೆಯಲ್ಲಿ (ಇಎಎಸ್) ಭಾಗವಹಿಸಿದ್ದರು.21ನೇ ಆಸಿಯಾನ್-ಭಾರತ ಶೃಂಗಸಭೆಯಲ್ಲಿ ಭಾರತದ ರಾಷ್ಟ್ರೀಯ ಹೇಳಿಕೆ ಪ್ರಕಟಿಸಿದ ಪ್ರಧಾನಮಂತ್ರಿ ನರೇಂದ್ರ ಮೋದಿ
October 10th, 08:37 pm
ನಿಮ್ಮ ಅಮೂಲ್ಯವಾದ ಒಳನೋಟಗಳು ಮತ್ತು ಸಲಹೆಗಳನ್ನು ನೀಡಿದ್ದಕ್ಕಾಗಿ ನಿಮ್ಮೆಲ್ಲರಿಗೂ ಧನ್ಯವಾದಗಳನ್ನು ಸಲ್ಲಿಸುತ್ತೇನೆ. ಭಾರತ ಮತ್ತು ಆಸಿಯಾನ್ ನಡುವಿನ ಸಮಗ್ರ ಕಾರ್ಯತಂತ್ರ ಪಾಲುದಾರಿಕೆ ಬಲಪಡಿಸಲು ನಾವು ಬದ್ಧರಾಗಿದ್ದೇವೆ. ನಾವು ಒಟ್ಟಾಗಿ ಮನುಕುಲದ ಕಲ್ಯಾಣ, ಪ್ರಾದೇಶಿಕ ಶಾಂತಿ, ಸ್ಥಿರತೆ ಮತ್ತು ಸಮೃದ್ಧಿಗಾಗಿ ಶ್ರಮಿಸುವುದನ್ನು ಮುಂದುವರಿಸುತ್ತೇವೆ ಎಂಬ ವಿಶ್ವಾಸ ನನಗಿದೆ.ಲಾವೋ ಪಿಡಿಆರ್ ನಲ್ಲಿ 21ನೇ ಆಸಿಯಾನ್- ಭಾರತ ಶೃಂಗಸಭೆಯಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಸಮಾರೋಪ ಭಾಷಣದ ಅನುವಾದ
October 10th, 08:13 pm
ಇಂದಿನ ನಮ್ಮ ಸಕಾರಾತ್ಮಕ ನಿರ್ಧಾರಗಳಿಗೆ ಮತ್ತು ನಿಮ್ಮ ಅಮೂಲ್ಯ ಆಲೋಚನೆಗಳು ಮತ್ತು ಸಲಹೆಗಳಿಗೆ ನಾನು ಕೃತಜ್ಞತೆ ಸಲ್ಲಿಸುತ್ತೇನೆ.ಆಸಿಯಾನ್-ಭಾರತ ಶೃಂಗಸಭೆಯ ನೇಪಥ್ಯದಲ್ಲಿ ಪ್ರಧಾನಮಂತ್ರಿ ಮತ್ತು ನ್ಯೂಜಿಲೆಂಡ್ ಪ್ರಧಾನಮಂತ್ರಿ ಭೇಟಿ
October 10th, 07:18 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಮತ್ತು ನ್ಯೂಜಿಲೆಂಡ್ ಪ್ರಧಾನಮಂತ್ರಿ ಶ್ರೀ ಕ್ರಿಸ್ಟೋಫರ್ ಲುಕ್ಸನ್ ಅವರು ಇಂದು ಲಾವೋ ಪಿಡಿಆರ್ ನ ವಿಯೆಂಟಿಯಾನ್‌ನಲ್ಲಿ ಆಸಿಯಾನ್-ಭಾರತ ಶೃಂಗಸಭೆಯ ನೇಪಥ್ಯದಲ್ಲಿ ಭೇಟಿಯಾದರು. ಉಭಯ ನಾಯಕರ ನಡುವಿನ ಮೊದಲ ಭೇಟಿ ಇದಾಗಿತ್ತು.ಆಸಿಯಾನ್-ಭಾರತ (ASEAN-India) ಶೃಂಗಸಭೆಯ ಸಂದರ್ಭದಲ್ಲಿ ಜಪಾನ್ ಪ್ರಧಾನಮಂತ್ರಿಯವರನ್ನು ಭೇಟಿ ಮಾಡಿದ ಪ್ರಧಾನಮಂತ್ರಿ
October 10th, 07:12 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಲಾವೋಸ್ ನಲ್ಲಿ ಆಸಿಯಾನ್-ಭಾರತ ಶೃಂಗಸಭೆಯ ಸಂದರ್ಭದಲ್ಲಿ ಜಪಾನ್ ನ ನೂತನ ಪ್ರಧಾನಮಂತ್ರಿ ಘನತೆವೆತ್ತ ಶ್ರೀ ಶಿಗೆರು ಇಶಿಬಾ ಅವರೊಂದಿಗೆ ಇಂದು ದ್ವಿಪಕ್ಷೀಯ ಸಭೆ ನಡೆಸಿದರು.ಡಿಜಿಟಲ್ ಪರಿವರ್ತನೆಯನ್ನು ಮುನ್ನಡೆಸುವ ಕುರಿತು ಆಸಿಯಾನ್-ಭಾರತ ಜಂಟಿ ಹೇಳಿಕೆ
October 10th, 05:42 pm
ಲಾವೋ ಪಿಡಿಆರ್ ನ ವಿಯೆಂಟಿಯಾನ್ ನಲ್ಲಿ 2024ರ ಅಕ್ಟೋಬರ್ 10 ರಂದು ನಡೆದ 21ನೇ ಆಸಿಯಾನ್-ಭಾರತ ಶೃಂಗಸಭೆಯ ಸಂದರ್ಭದಲ್ಲಿ ಆಗ್ನೇಯ ಏಷ್ಯಾ ರಾಷ್ಟ್ರಗಳ ಸಂಘ (ಆಸಿಯಾನ್) ಮತ್ತು ಭಾರತ ಗಣರಾಜ್ಯದ ಸದಸ್ಯ ರಾಷ್ಟ್ರಗಳಾದ ನಾವು;ಲಾವೊ ಪಿಡಿಆರ್ ನ ವಿಯೆಂಟಿಯಾನ್ ನಲ್ಲಿ ನಡೆದ 21 ನೇ ಆಸಿಯಾನ್-ಭಾರತ ಶೃಂಗಸಭೆಯಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಮಾಡಿದ ಪ್ರಾಸ್ತಾವಿಕ ಭಾಷಣದ ಕನ್ನಡ ಅವತರಣಿಕೆ
October 10th, 02:35 pm
ಇಂದು, ಆಸಿಯಾನ್ ಕುಟುಂಬದೊಂದಿಗೆ ಹನ್ನೊಂದನೇ ಬಾರಿಗೆ ಈ ಸಭೆಯಲ್ಲಿ ಭಾಗವಹಿಸಲು ನನಗೆ ಗೌರವ ವಿಷಯವಾಗಿದೆ.ಲಾವೊ ಪಿಡಿಆರ್ ನ ವಿಯೆಂಟಿಯಾನ್ ನಲ್ಲಿ ನಡೆದ 21 ನೇ ಆಸಿಯಾನ್-ಭಾರತ ಶೃಂಗಸಭೆಯಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಮಾಡಿದ ಪ್ರಾಸ್ತಾವಿಕ ಭಾಷಣದ ಕನ್ನಡ ಅವತರಣಿಕೆ
October 10th, 02:30 pm
ಹತ್ತು ವರ್ಷಗಳ ಹಿಂದೆ, ನಾನು ಭಾರತದ ‘ಆಕ್ಟ್ ಈಸ್ಟ್’ ನೀತಿಯನ್ನು ಘೋಷಿಸಿದೆ. ಕಳೆದ ದಶಕದಲ್ಲಿ, ಈ ಉಪಕ್ರಮವು ಭಾರತ ಮತ್ತು ಆಸಿಯಾನ್ ದೇಶಗಳ ನಡುವಿನ ಐತಿಹಾಸಿಕ ಸಂಬಂಧಗಳನ್ನು ಪುನರುಜ್ಜೀವನಗೊಳಿಸಿದೆ, ಅವುಗಳನ್ನು ಈಗ ನವೀಕರಿಸಿ ಇನ್ನೂ ಉತ್ತಮ ಶಕ್ತಿ, ನಿರ್ದೇಶನ ಮತ್ತು ಆವೇಗದೊಂದಿಗೆ ರೂಪಿಸಿದ್ದೇವೆ.ಲಾವೋ ಪೀಪಲ್ಸ್ ಡೆಮಾಕ್ರಟಿಕ್ ರಿಪಬ್ಲಿಕ್ ನ ವಿಯೆಂಟಿಯಾನ್ ಗೆ ಭೇಟಿ ನೀಡುವ ಮುನ್ನ ಪ್ರಧಾನಮಂತ್ರಿ ಅವರ ನಿರ್ಗಮನ ಹೇಳಿಕೆ
October 10th, 07:00 am
ಇಂದು, 21ನೇ ಆಸಿಯಾನ್-ಭಾರತ ಮತ್ತು 19ನೇ ಪೂರ್ವ ಏಷ್ಯಾ ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಪ್ರಧಾನಮಂತ್ರಿ ಶ್ರೀ ಸೋನೆಕ್ಸೇ ಸಿಫಾಂಡನ್ ಅವರ ಆಹ್ವಾನದ ಮೇರೆಗೆ ನಾನು ಲಾವೋ ಪಿಡಿಆರ್ ನ ವಿಯೆಂಟಿಯಾನ್ ಗೆ ಎರಡು ದಿನಗಳ ಭೇಟಿ ನೀಡುತ್ತಿದ್ದೇನೆ.ಲಾವೋಸ್‌ನ ವಿಯೆಂಟಿಯಾನ್‌ಗೆ ಭೇಟಿ ನೀಡಲಿರುವ ಪ್ರಧಾನಿ ನರೇಂದ್ರ ಮೋದಿ
October 09th, 09:00 am
ಹೆಚ್.ಇ ಅವರ ಆಹ್ವಾನದ ಮೇರೆಗೆ ಲಾವೊ ಪೀಪಲ್ಸ್ ಡೆಮಾಕ್ರಟಿಕ್ ರಿಪಬ್ಲಿಕ್‌ನ ಪ್ರಧಾನಮಂತ್ರಿ ಶ್ರೀ ಸೋನೆಕ್ಸೆ ಸಿಫಾಂಡೋನ್, ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 10-11 ಅಕ್ಟೋಬರ್ 2024 ರಂದು ಲಾವೊ ಪಿಡಿಆರ್‌ನ ವಿಯೆಂಟಿಯಾನ್‌ಗೆ ಭೇಟಿ ನೀಡಲಿದ್ದಾರೆ. ಈ ಭೇಟಿಯ ಸಮಯದಲ್ಲಿ, ಪ್ರಧಾನಮಂತ್ರಿಯವರು 21 ನೇ ಆಸಿಯಾನ್-ಭಾರತ ಶೃಂಗಸಭೆಯಲ್ಲಿ ಭಾಗವಹಿಸಲಿದ್ದಾರೆ ಮತ್ತು 19 ನೇ ಆಸಿಯಾನ್ ನ ಪ್ರಸ್ತುತ ಅಧ್ಯಕ್ಷರಾಗಿ ಲಾವೊ ಪಿಡಿಆರ್ ನಿಂದ ಪೂರ್ವ ಏಷ್ಯಾ ಶೃಂಗಸಭೆಯನ್ನು ಆಯೋಜಿಸಲಾಗಿದೆ.20ನೇ ಆಸಿಯಾನ್- ಭಾರತ ಶೃಂಗಸಭೆ ಮತ್ತು 18ನೇ ಪೂರ್ವ ಏಷ್ಯಾ ಶೃಂಗಸಭೆಯಲ್ಲಿ ಪ್ರಧಾನಮಂತ್ರಿ ಭಾಗಿ
September 07th, 11:47 am
ಆಸಿಯಾನ್-ಭಾರತ ಶೃಂಗಸಭೆಯಲ್ಲಿ ಪ್ರಧಾನಮಂತ್ರಿ ಅವರು ಆಸಿಯಾನ್-ಭಾರತದ ಸಮಗ್ರ ಕಾರ್ಯತಂತ್ರ ಪಾಲುದಾರಿಕೆಯನ್ನು ಮತ್ತಷ್ಟು ಬಲಪಡಿಸುವ ಮತ್ತು ಅದರ ಭವಿಷ್ಯದ ದಿಕ್ಕನ್ನು ರೂಪಿಸುವ ಕುರಿತು ಆಸಿಯಾನ್ ಪಾಲುದಾರರೊಂದಿಗೆ ವಿಸ್ತೃತ ಚರ್ಚೆ ನಡೆಸಿದರು. ಪ್ರಧಾನಮಂತ್ರಿ ಅವರು, ಇಂಡೋ-ಪೆಸಿಫಿಕ್ ನಲ್ಲಿ ಆಸಿಯಾನ್ ಕೇಂದ್ರೀಯತೆಯನ್ನು ಪುನರುಚ್ಚರಿಸಿದರು ಮತ್ತು ಭಾರತ ಇಂಡೋ-ಪೆಸಿಫಿಕ್ ಸಾಗರ ಉಪಕ್ರಮ (ಐಪಿಒಐ) ಮತ್ತು ಇಂಡೋ-ಪೆಸಿಫಿಕ್ ಕುರಿತು ಆಸಿಯಾನ್ ಆಮಾಯದ ಸಮನ್ವಯತೆಯನ್ನು ಪ್ರಮುಖವಾಗಿ ಪ್ರಸ್ತಾಪಿಸಿದರು. ಆಸಿಯಾನ್- ಭಾರತ ಎಫ್ ಟಿಎ (ಎಐಟಿಐಜಿಎ) ಯ ಪರಿಶೀಲನೆಯನ್ನು ಕಾಲಮಿತಿಯಲ್ಲಿ ಪೂರ್ಣಗೊಳಿಸುವ ಅಗತ್ಯತೆಯನ್ನು ಬಲವಾಗಿ ಪ್ರತಿಪಾಸಿದರು.