ಬೀಟಿಂಗ್ ರಿಟ್ರೀಟ್ 2026ರ ಕೆಲವು ತುಣುಕುಗಳನ್ನು ಹಂಚಿಕೊಂಡಿರುವ ಪ್ರಧಾನಮಂತ್ರಿ

January 29th, 04:46 pm

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಬೀಟಿಂಗ್ ರಿಟ್ರೀಟ್ 2026 ಕಾರ್ಯಕ್ರಮದ ಕೆಲವು ತುಣುಕುಗಳನ್ನು ಹಂಚಿಕೊಂಡಿದ್ದಾರೆ. ವಿವಿಧ ಬ್ಯಾಂಡ್‌ಗಳ ಪ್ರದರ್ಶನಗಳು ಸ್ಮರಣೀಯವಾಗಿದ್ದವು ಎಂದು ಶ್ರೀ ಮೋದಿ ಹೇಳಿದ್ದಾರೆ.

ಚಿತ್ರಗಳಲ್ಲಿ: ನವದೆಹಲಿಯ ಕರ್ತವ್ಯ ಪಥದಲ್ಲಿ 77 ನೇ ಗಣರಾಜ್ಯೋತ್ಸವ

January 26th, 08:12 am

ಕರ್ತವ್ಯ ಪಥದಲ್ಲಿ ನಡೆದ 77 ನೇ ಗಣರಾಜ್ಯೋತ್ಸವ ಆಚರಣೆಯು ಭಾರತದ ಏಕತೆ, ಶಕ್ತಿ ಮತ್ತು ಪರಂಪರೆಯನ್ನು ಪ್ರದರ್ಶಿಸಿತು. ಪ್ರಧಾನಿ ನರೇಂದ್ರ ಮೋದಿ ಅವರು ರಾಷ್ಟ್ರೀಯ ಸಮರ್ ಸ್ಮಾರಕದಲ್ಲಿ ಹುತಾತ್ಮರಿಗೆ ಗೌರವ ಸಲ್ಲಿಸುವ ಮೂಲಕ ದಿನವನ್ನು ಪ್ರಾರಂಭಿಸಿದರು ಮತ್ತು ದೇಶದ ಧೈರ್ಯಶಾಲಿಗಳಿಗೆ ಕೃತಜ್ಞತೆಯನ್ನು ಪುನರುಚ್ಚರಿಸಿದರು.

ಸೇನಾ ದಿನದಂದು ಭಾರತೀಯ ಸೇನೆಯ ಶೌರ್ಯಕ್ಕೆ ವಂದಿಸಿದ ಪ್ರಧಾನಮಂತ್ರಿ

January 15th, 11:26 am

ಸೇನಾ ದಿನದ ಸಂದರ್ಭದಲ್ಲಿ, ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಭಾರತೀಯ ಸೇನೆಯ ಅದಮ್ಯ ಧೈರ್ಯ ಮತ್ತು ದೃಢ ಬದ್ಧತೆಗೆ ಹೃತ್ಪೂರ್ವಕ ಗೌರವ ನಮನ ಸಲ್ಲಿಸಿದರು.

ಸಶಸ್ತ್ರ ಪಡೆಗಳ ಧ್ವಜ ದಿನದಂದು ಸಶಸ್ತ್ರ ಪಡೆಗಳಿಗೆ ಕೃತಜ್ಞತೆ ಸಲ್ಲಿಸಿದ ಪ್ರಧಾನಮಂತ್ರಿ

December 07th, 10:58 am

ಸಶಸ್ತ್ರ ಪಡೆಗಳ ಧ್ವಜ ದಿನದ ಸಂದರ್ಭದಲ್ಲಿ ಸಶಸ್ತ್ರ ಪಡೆಗಳ ಧೈರ್ಯಶಾಲಿ ಪುರುಷರು ಮತ್ತು ಮಹಿಳೆಯರಿಗೆ ಪ್ರಧಾನಮಂತ್ರಿ ಅವರು ತಮ್ಮ ಹೃದಯಾಂತರಾಳದ ಕೃತಜ್ಞತೆಯನ್ನು ವ್ಯಕ್ತಪಡಿಸಿದ್ದಾರೆ.

ಐ.ಎನ್.ಎಸ್ ವಿಕ್ರಾಂತ್ ನಲ್ಲಿ ಸಶಸ್ತ್ರ ಪಡೆಗಳೊಂದಿಗೆ ದೀಪಾವಳಿ ಆಚರಣೆ ಸಂದರ್ಭದಲ್ಲಿ ಪ್ರಧಾನಮಂತ್ರಿ ಭಾಷಣ

October 20th, 10:30 am

ಇಂದು ಅದ್ಭುತ ದಿನ, ಈ ಕ್ಷಣವನ್ನು ಮರೆಯಲಾಗದು, ಇವತ್ತಿನ ಈ ದೃಶ್ಯ ಅಸಾಧಾರಣವಾಗಿದೆ. ನನ್ನ ಒಂದು ಬದಿಯಲ್ಲಿ ವಿಶಾಲವಾದ ಅಮಿತ ಸಾಗರವಿದೆ, ಇನ್ನೊಂದು ಬದಿಯಲ್ಲಿ ಭಾರತ ಮಾತೆಯ ಧೈರ್ಯಶಾಲಿ ಸೈನಿಕರ ಅಪಾರ ಶಕ್ತಿಯೇ ಇದೆ. ನನ್ನ ಒಂದು ಬದಿಯಲ್ಲಿ ಅನಂತ ದಿಗಂತ ಮತ್ತು ಅಂತ್ಯ ಕಾಣದ ಆಗಸವಿದೆ, ಇನ್ನೊಂದು ಬದಿಯಲ್ಲಿ ತನ್ನೊಳಗೆ ಅನಂತ ಶಕ್ತಿಯನ್ನು ಸಾಕಾರಗೊಳಿಸುವ ಪ್ರಬಲ ಮತ್ತು ಭವ್ಯವಾದ ಐಎನ್ಎಸ್ ವಿಕ್ರಾಂತ್ ನೆಲೆ ನಿಂತಿದೆ. ಸಾಗರ ನೀರಿನ ಮೇಲೆ ಸೂರ್ಯನ ಬೆಳಕಿನ ಹೊಳಪು, ಒಂದು ರೀತಿಯಲ್ಲಿ, ನಮ್ಮ ಧೈರ್ಯಶಾಲಿ ಸೈನಿಕರು ಬೆಳಗಿದ ದೀಪಾವಳಿ ದೀಪಗಳಂತೆ ಕಾಣುತ್ತಿದ್ದಾರೆ. ಇವು ನಮ್ಮ ದೈವಿಕ ಬೆಳಕಿನ ಹಾರಗಳಾಗಿವೆ. ಈ ಬಾರಿ ನಾನು ನಮ್ಮ ನೌಕಾಪಡೆಯ ಅಪ್ರತಿಮ ಯೋಧರ ನಡುವೆ ದೀಪಾವಳಿಯ ಪವಿತ್ರ ಹಬ್ಬ ಆಚರಿಸುತ್ತಿರುವುದು ನನ್ನ ಪಾಲಿನ ದೊಡ್ಡ ಅದೃಷ್ಟವೇ ಆಗಿದೆ.

PM Modi celebrates Diwali on board the INS Vikrant

October 20th, 10:00 am

In his address to the armed forces personnel on board INS Vikrant, PM Modi extended heartfelt Diwali greetings to the countrymen. He highlighted that, inspired by Chhatrapati Shivaji Maharaj, the Indian Navy has adopted a new flag. Recalling various operations, the PM emphasized that India stands ready to provide humanitarian assistance anywhere in the world. He also noted that over 100 districts have now fully emerged from Maoist terror.

ಕೋಲ್ಕತ್ತಾದಲ್ಲಿ ನಡೆದ ಸಂಯೋಜಿತ ಕಮಾಂಡರ್ ಗಳ ಸಮ್ಮೇಳನದಲ್ಲಿ ಸಶಸ್ತ್ರ ಪಡೆಗಳ ವರ್ಧಿಕ ಕಾರ್ಯಾಚರಣೆಯ ಸಿದ್ಧತೆಗಾಗಿ ಒಗ್ಗೂಡಿ ಹೋರಾಡುವುದು, ಆತ್ಮನಿರ್ಭರ ಭಾರತ ಮತ್ತು ನಾವೀನ್ಯತೆಯ ಬಗ್ಗೆ ಉಲ್ಲೇಖಿಸಿದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ

September 15th, 03:34 pm

ಪ್ರಧಾನಮಂತ್ರಿ ಅವರು ಕೋಲ್ಕತ್ತಾದಲ್ಲಿ 16ನೇ ಸಂಯೋಜಿತ ಕಮಾಂಡರ್‌ ಗಳ ಸಮಾವೇಶವನ್ನು ಉದ್ಘಾಟಿಸಿದರು. ಎರಡು ವರ್ಷಗಳಿಗೊಮ್ಮೆ ನಡೆಯುವ ಈ ಸಮ್ಮೇಳನ ಸಶಸ್ತ್ರ ಪಡೆಗಳ ಉನ್ನತ ಮಟ್ಟದ ಚಿಂಥನ ಮಂಥನಕ್ಕೆ ಒಂದು ವೇದಿಕೆಯಾಗಿದೆ. ಇದು ಭಾರತದ ಮಿಲಿಟರಿ ಸಿದ್ಧತೆಯ ಭವಿಷ್ಯದ ಅಭಿವೃದ್ಧಿಗೆ ಭದ್ರ ಅಡಿಪಾಯ ಹಾಕಲು ಮತ್ತು ಅಭಿಪ್ರಾಯಗಳನ್ನು ವಿನಿಮಯ ಮಾಡಿಕೊಳ್ಳಲು ದೇಶದ ಉನ್ನತ ನಾಗರಿಕ ಮತ್ತು ಮಿಲಿಟರಿ ನಾಯಕತ್ವವನ್ನು ಒಗೂಡಿಸುತ್ತದೆ. ಸಮ್ಮೇಳನದ ವಿಷಯವು 'ಸುಧಾರಣೆಗಳ ವರ್ಷ - ಭವಿಷ್ಯಕ್ಕಾಗಿ ಪರಿವರ್ತನೆ' ಎಂಬುದಾಗಿದೆ, ಇದು ಸಶಸ್ತ್ರ ಪಡೆಗಳ ನಡೆಯುತ್ತಿರುವ ಆಧುನೀಕರಣ ಮತ್ತು ಪರಿವರ್ತನೆಗೆ ಹೊಂದಿಕೆಯಾಗುತ್ತದೆ.

ಮಾವೋವಾದದ ಪಿಡುಗು ತೊಡೆದುಹಾಕುವಲ್ಲಿ ಸಶಸ್ತ್ರ ಪಡೆಗಳ ಪ್ರಯತ್ನಗಳಿಗೆ ಪ್ರಧಾನಮಂತ್ರಿ ಶ್ಲಾಘನೆ

May 21st, 05:31 pm

ಮಾವೋವಾದದ ಪಿಡುಗನ್ನು ತೊಡೆದುಹಾಕಲು ಹಾಗೂ ನಮ್ಮ ಜನರಿಗೆ ಶಾಂತಿ ಮತ್ತು ಪ್ರಗತಿಯ ಜೀವನವನ್ನು ಖಾತರಿಪಡಿಸುವ ಸರ್ಕಾರದ ಬದ್ಧತೆಯನ್ನು ಪುನರುಚ್ಚರಿಸುತ್ತಾ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು, ಸಶಸ್ತ್ರಪಡೆಗಳ ಪ್ರಯತ್ನಗಳನ್ನು ಶ್ಲಾಘಿಸಿದ್ದಾರೆ.

ಆದಂಪುರ ವಾಯುನೆಲೆಯಲ್ಲಿ ವೀರ ವಾಯುಪಡೆ ಯೋಧರು ಮತ್ತು ಸಮರ ವೀರರೊಂದಿಗೆ ಪ್ರಧಾನಮಂತ್ರಿ ಸಂವಾದ

May 13th, 03:45 pm

ಈ ಘೋಷಣೆಯ ಶಕ್ತಿಯನ್ನು ಜಗತ್ತು ಇದೀಗವಷ್ಟೇ ನೋಡಿದೆ. ಭಾರತ್ ಮಾತಾ ಕಿ ಜೈ ಎಂಬುದು ಕೇವಲ ಘೋಷಣೆಯಲ್ಲ, ಭಾರತ ಮಾತೆಯ ಗೌರವ ಮತ್ತು ಘನತೆಗಾಗಿ ತನ್ನ ಪ್ರಾಣವನ್ನೇ ಪಣಕ್ಕಿಡುವ ದೇಶದ ಪ್ರತಿಯೊಬ್ಬ ಸೈನಿಕನ ಪ್ರಮಾಣವಚನ ಇದಾಗಿದೆ. ದೇಶಕ್ಕಾಗಿ ಬದುಕಲು ಬಯಸುವ, ಏನನ್ನಾದರೂ ಸಾಧಿಸಲು ಬಯಸುವ ದೇಶದ ಪ್ರತಿಯೊಬ್ಬ ನಾಗರಿಕನ ಧ್ವನಿ ಇದಾಗಿದೆ. ಭಾರತ್ ಮಾತಾ ಕಿ ಜೈ ಎಂಬುದು ಯುದ್ಧಭೂಮಿಯಲ್ಲಿ ಮತ್ತು ಕಾರ್ಯಾಚರಣೆಯಲ್ಲಿ ಪ್ರತಿಧ್ವನಿಸುತ್ತದೆ. ಭಾರತದ ಸೈನಿಕರು ಭಾರತ್ ಮಾತಾ ಕಿ ಜೈ ಎಂದು ಜಪಿಸಿದಾಗ, ಶತ್ರುಗಳ ಹೃದಯ ನಡುಗುತ್ತದೆ. ನಮ್ಮ ಡ್ರೋನ್‌ಗಳು ಶತ್ರುಗಳ ಕೋಟೆಯ ಗೋಡೆಗಳನ್ನು ಉರುಳಿಸಿದಾಗ, ನಮ್ಮ ಕ್ಷಿಪಣಿಗಳು ಭಾರಿ ಶಬ್ದದೊಂದಿಗೆ ಗುರಿ ತಲುಪಿದಾಗ, ಶತ್ರು ಕೇಳುತ್ತಾನೆ - ಭಾರತ್ ಮಾತಾ ಕಿ ಜೈ! ಘೋಷಣೆಯನ್ನ. ರಾತ್ರಿಯ ಕಗ್ಗತ್ತಲೆಯಲ್ಲೂ ನಾವು ಸೂರ್ಯನನ್ನು ಬೆಳಗಿದಾಗ, ಶತ್ರು ನೋಡುತ್ತಾನೆ - ಭಾರತ್ ಮಾತಾ ಕಿ ಜೈ! ನಮ್ಮ ಪಡೆಗಳು ಪರಮಾಣು ಬೆದರಿಕೆಯನ್ನು ಹುಸಿಗೊಳಿಸಿದಾಗ, ಆಕಾಶದಿಂದ ಭೂಗತ ಲೋಕಕ್ಕೆ ಒಂದೇ ಒಂದು ವಿಷಯ ಪ್ರತಿಧ್ವನಿಸುತ್ತದೆ, ಅದೇ - ಭಾರತ್ ಮಾತಾ ಕಿ ಜೈ!

ಆದಂಪುರ ವಾಯುಪಡೆ ನಿಲ್ದಾಣದಲ್ಲಿ ಧೈರ್ಯಶಾಲಿ ವಾಯುಪಡೆ ಯೋಧರು ಮತ್ತು ಸೈನಿಕರೊಂದಿಗೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಸಂವಾದ

May 13th, 03:30 pm

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಆದಂಪುರದ ವಾಯುಪಡೆ ನಿಲ್ದಾಣದಲ್ಲಿಂದು ವೀರ ವಾಯುಪಡೆ ಯೋಧರು ಮತ್ತು ಸೈನಿಕರನ್ನು ಭೇಟಿ ಮಾಡಿ ಸಂವಾದ ನಡೆಸಿದರು. ಅವರ ಜತೆ ಮಾತನಾಡಿದ ಅವರು, 'ಭಾರತ್ ಮಾತಾ ಕಿ ಜೈ' ಘೋಷಣೆಯ ಶಕ್ತಿಯನ್ನು ಜಗತ್ತು ಇದೀಗಷ್ಟೇ ಕಂಡಿದೆ. ಇದು ಕೇವಲ ಮಂತ್ರವಲ್ಲ, ಭಾರತ ಮಾತೆಯ ಘನತೆ ಎತ್ತಿಹಿಡಿಯಲು ತಮ್ಮ ಪ್ರಾಣವನ್ನೇ ಪಣಕ್ಕಿಡುವ ಪ್ರತಿಯೊಬ್ಬ ಸೈನಿಕನು ತೆಗೆದುಕೊಳ್ಳುವ ಗಂಭೀರ ಪ್ರಮಾಣವಚನ ಇದಾಗಿದೆ. ಈ ಘೋಷಣೆಯು ರಾಷ್ಟ್ರಕ್ಕಾಗಿ ಬದುಕಲು ಮತ್ತು ಅರ್ಥಪೂರ್ಣ ಕೊಡುಗೆ ನೀಡಲು ಬಯಸುವ ಪ್ರತಿಯೊಬ್ಬ ನಾಗರಿಕನ ಧ್ವನಿಯಾಗಿದೆ. 'ಭಾರತ್ ಮಾತಾ ಕಿ ಜೈ' ಯುದ್ಧಭೂಮಿಯಲ್ಲಿ ಮತ್ತು ನಿರ್ಣಾಯಕ ಕಾರ್ಯಾಚರಣೆಗಳಲ್ಲಿ ಪ್ರತಿಧ್ವನಿಸುತ್ತದೆ. ಭಾರತೀಯ ಸೈನಿಕರು 'ಭಾರತ್ ಮಾತಾ ಕಿ ಜೈ' ಎಂದು ಜಪಿಸಿದಾಗ, ಅದು ಶತ್ರುಗಳ ಬೆನ್ನುಮೂಳೆಯಲ್ಲಿ ನಡುಕ ಉಂಟುಮಾಡುತ್ತದೆ. ಅವರು ಭಾರತದ ಸೇನಾ ಶಕ್ತಿಯನ್ನು ಶ್ಲಾಘಿಸಿದ ಅವರು, ಭಾರತೀಯ ಡ್ರೋನ್‌ಗಳು ಶತ್ರುಗಳ ಕೋಟೆಗಳನ್ನು ಕೆಡವಿದಾಗ ಮತ್ತು ಕ್ಷಿಪಣಿಗಳು ನಿಖರವಾಗಿ ದಾಳಿ ಮಾಡಿದಾಗ, ಶತ್ರುವು 'ಭಾರತ್ ಮಾತಾ ಕಿ ಜೈ' ಎಂಬ ಒಂದೇ ಒಂದು ಪದ ಕೇಳುತ್ತಾನೆ. ಅತ್ಯಂತ ಕತ್ತಲೆಯ ರಾತ್ರಿಗಳಲ್ಲೂ ಭಾರತವು ಆಕಾಶವನ್ನು ಬೆಳಗಿಸುವ ಸಾಮರ್ಥ್ಯ ಹೊಂದಿದೆ, ಶತ್ರುಗಳು ರಾಷ್ಟ್ರದ ಅದಮ್ಯ ಚೈತನ್ಯವನ್ನು ವೀಕ್ಷಿಸುವಂತೆ ಮಾಡಿದೆ. ಭಾರತದ ಪಡೆಗಳು ಪರಮಾಣು ಬೆದರಿಕೆಯನ್ನು ಕಳಚಿದಾಗ, 'ಭಾರತ್ ಮಾತಾ ಕಿ ಜೈ' ಎಂಬ ಸಂದೇಶವು ಆಕಾಶ ಮತ್ತು ಆಳದಲ್ಲಿ ಪ್ರತಿಧ್ವನಿಸಿದೆ ಎಂದು ಅವರು ಘೋಷಿಸಿದರು.

ಪ್ರಧಾನಮಂತ್ರಿಯವರು ಎ ಎಫ್ ಎಸ್ ಆದಂಪುರಕ್ಕೆ ಭೇಟಿ ನೀಡಿ ವೀರ ವಾಯು ಯೋಧರು ಮತ್ತು ಸೈನಿಕರನ್ನು ಭೇಟಿಯಾದರು

May 13th, 01:04 pm

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಎ ಎಫ್ ಎಸ್ ಆದಂಪುರಕ್ಕೆ ಭೇಟಿ ನೀಡಿ ನಮ್ಮ ವೀರ ವಾಯು ಯೋಧರು ಮತ್ತು ಸೈನಿಕರನ್ನು ಭೇಟಿಯಾದರು. ಧೈರ್ಯ, ದೃಢತೆ ಮತ್ತು ನಿರ್ಭೀತಿಯನ್ನು ಸಾರುವ ಜನರೊಂದಿಗೆ ಇರುವುದು ಬಹಳ ವಿಶೇಷ ಅನುಭವವಾಗಿತ್ತು ಎಂದು ಶ್ರೀ ಮೋದಿ ಹೇಳಿದರು.

ಪ್ರಧಾನಮಂತ್ರಿಯವರ ಅಧ್ಯಕ್ಷತೆಯಲ್ಲಿ ಉನ್ನತ ಮಟ್ಟದ ಸಭೆ

May 10th, 02:31 pm

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ನವದೆಹಲಿಯ 7, ಲೋಕ ಕಲ್ಯಾಣ್ ಮಾರ್ಗ್ ನಲ್ಲಿ ನಡೆದ ಉನ್ನತ ಮಟ್ಟದ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಈ ಸಭೆಯಲ್ಲಿ ರಕ್ಷಣಾ ಸಚಿವರಾದ ಶ್ರೀ ರಾಜನಾಥ್ ಸಿಂಗ್, ರಾಷ್ಟ್ರೀಯ ಭದ್ರತಾ ಸಲಹೆಗಾರರಾದ (ಎನ್ ಎಸ್ ಎ) ಅಜಿತ್ ದೋವಲ್, ರಕ್ಷಣಾ ಪಡೆಗಳ ಮುಖ್ಯಸ್ಥರಾದ (ಸಿಡಿಎಸ್) ಜನರಲ್ ಅನಿಲ್ ಚೌಹಾಣ್, ಸಶಸ್ತ್ರ ಪಡೆಗಳ ಮುಖ್ಯಸ್ಥರು ಮತ್ತು ಹಿರಿಯ ಅಧಿಕಾರಿಗಳು ಭಾಗಿಯಾಗಿದ್ದರು.

ಪ್ರಧಾನಮಂತ್ರಿ ಅವರ ಅಧ್ಯಕ್ಷತೆಯಲ್ಲಿ ರಕ್ಷಣಾ ಸಚಿವರು, ರಾಷ್ಟ್ರೀಯ ಭದ್ರತಾ ಸಲಹೆಗಾರರು, ರಕ್ಷಣಾ ಸಿಬ್ಬಂದಿ ಮುಖ್ಯಸ್ಥರು, ಸಶಸ್ತ್ರ ಪಡೆಗಳ ಮುಖ್ಯಸ್ಥರು ಮತ್ತು ಹಿರಿಯ ಅಧಿಕಾರಿಗಳ ಸಭೆ

May 09th, 10:24 pm

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ರಕ್ಷಣಾ ಸಚಿವರಾದ ಶ್ರೀ ರಾಜನಾಥ್ ಸಿಂಗ್, ರಾಷ್ಟ್ರೀಯ ಭದ್ರತಾ ಸಲಹೆಗಾರರಾದ ಶ್ರೀ ಅಜಿತ್ ದೋವಲ್, ರಕ್ಷಣಾ ಸಿಬ್ಬಂದಿ ಮುಖ್ಯಸ್ಥರಾದ ಜನರಲ್ ಅನಿಲ್ ಚೌಹಾಣ್, ಸಶಸ್ತ್ರ ಪಡೆಗಳ ಮುಖ್ಯಸ್ಥರು ಮತ್ತು ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.

ಭಾರತವು 76 ನೇ ಗಣರಾಜ್ಯೋತ್ಸವವನ್ನು ಆಚರಿಸಿದೆ

January 26th, 12:30 pm

ಕರ್ತವ್ಯ ಪಥದಲ್ಲಿ ನಡೆದ 76 ನೇ ಗಣರಾಜ್ಯೋತ್ಸವ ಆಚರಣೆಯು ಭಾರತದ ಏಕತೆ, ಶಕ್ತಿ ಮತ್ತು ಪರಂಪರೆಯನ್ನು ಪ್ರದರ್ಶಿಸಿತು. ಪ್ರಧಾನಿ ಮೋದಿ ಅವರು ರಾಷ್ಟ್ರೀಯ ಸಮರ್ ಸ್ಮಾರಕದಲ್ಲಿ ಗೌರವ ಸಲ್ಲಿಸಿದರು. ಈ ಕಾರ್ಯಕ್ರಮವನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಮತ್ತು ಇಂಡೋನೇಷ್ಯಾ ಅಧ್ಯಕ್ಷ ಪ್ರಬೋವೊ ಸುಬಿಯಾಂಟೊ ಅಲಂಕರಿಸಿದರು. ಸಶಸ್ತ್ರ ಪಡೆಗಳ ಪಥಸಂಚಲನ ತುಕಡಿಗಳು ಶಿಸ್ತು ಮತ್ತು ಶೌರ್ಯವನ್ನು ಪ್ರದರ್ಶಿಸಿದವು, ಆದರೆ ರೋಮಾಂಚಕ ಸಾಂಸ್ಕೃತಿಕ ಪ್ರದರ್ಶನಗಳು ಭಾರತದ ಶ್ರೀಮಂತ ವೈವಿಧ್ಯತೆಯನ್ನು ಎತ್ತಿ ತೋರಿಸಿದವು. ಭಾರತೀಯ ವಾಯುಪಡೆಯ ಉಸಿರುಕಟ್ಟುವ ಹಾರಾಟವು ಪ್ರೇಕ್ಷಕರನ್ನು ಆಕರ್ಷಿಸಿತು. ಆಚರಣೆಗಾಗಿ ನೆರೆದಿದ್ದ ಜನರನ್ನು ಪ್ರಧಾನಿ ಸ್ವಾಗತಿಸಿದರು.

ಸೇನಾ ದಿನದಂದು ಭಾರತೀಯ ಸೇನೆಯ ಅಚಲ ಧೈರ್ಯಕ್ಕೆ ಗೌರವ ಸಲ್ಲಿಸಿದ ಪ್ರಧಾನಮಂತ್ರಿ

January 15th, 09:18 am

ಸೇನಾ ದಿನವಾದ ಇಂದು ಭಾರತೀಯ ಸೇನೆಯ ಅಚಲ ಧೈರ್ಯಕ್ಕೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಗೌರವ ಸಲ್ಲಿಸಿದ್ದಾರೆ. “ಭಾರತೀಯ ಸೇನೆಯು ದೃಢನಿಶ್ಚಯ, ವೃತ್ತಿಪರತೆ ಮತ್ತು ಸಮರ್ಪಣೆಯನ್ನು ಪ್ರತಿನಿಧಿಸುತ್ತದೆ” ಎಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಹೇಳಿದರು. ನಮ್ಮ ಸರ್ಕಾರವು ಸಶಸ್ತ್ರ ಪಡೆಗಳು ಮತ್ತು ಅವರ ಕುಟುಂಬಗಳ ಕಲ್ಯಾಣಕ್ಕೆ ಬದ್ಧವಾಗಿದೆ. ಕಳೆದ ಹಲವಾರು ವರ್ಷಗಳಲ್ಲಿ, ನಾವು ಹಲವಾರು ಸುಧಾರಣೆಗಳನ್ನು ಪರಿಚಯಿಸಿದ್ದೇವೆ ಮತ್ತು ಆಧುನೀಕರಣದ ಮೇಲೆ ಕೇಂದ್ರೀಕರಿಸಿದ್ದೇವೆ ಎಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಹೇಳಿದರು.

ಒನ್ ರಾಂಕ್ (ಶ್ರೇಯಾಂಕ) ಒನ್ ಪೆನ್ಷನ್ (ಒ ಆರ್ ಒ ಪಿ) ಯೋಜನೆ ನಮ್ಮ ನಿವೃತ್ತ ಯೋಧರು ಮತ್ತು ಮಾಜಿ ಸೈನಿಕರ ಧೈರ್ಯ ಮತ್ತು ತ್ಯಾಗಕ್ಕೆ ಗೌರವವಾಗಿದೆ: ಪ್ರಧಾನಮಂತ್ರಿ

November 07th, 09:39 am

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಒನ್ ರಾಂಕ್ (ಶ್ರೇಯಾಂಕ) ಒನ್ ಪೆನ್ಷನ್ (ಒಆರ್ ಒಪಿ) ಯೋಜನೆಯ ಹತ್ತು ವರ್ಷಗಳನ್ನು ಇಂದು ಆಚರಿಸಿದರು, ಇದು ನಮ್ಮ ರಾಷ್ಟ್ರದ ರಕ್ಷಣೆಗಾಗಿ ತಮ್ಮ ಜೀವನವನ್ನು ಮುಡಿಪಾಗಿಡುವ ನಮ್ಮ ನಿವೃತ್ತ ಯೋಧರು ಮತ್ತು ಮಾಜಿ ಸೇವಾ ಸಿಬ್ಬಂದಿಯ ಧೈರ್ಯ ಮತ್ತು ತ್ಯಾಗಕ್ಕೆ ಗೌರವವಾಗಿದೆ ಎಂದು ಹೇಳಿದರು. ಒ ಆರ್ ಒ ಪಿಯನ್ನು ಜಾರಿಗೆ ತರುವ ನಿರ್ಧಾರವು ಈ ದೀರ್ಘಕಾಲದ ಬೇಡಿಕೆಯನ್ನು ಪರಿಹರಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯಾಗಿದೆ ಮತ್ತು ನಮ್ಮ ವೀರರಿಗೆ ನಮ್ಮ ರಾಷ್ಟ್ರದ ಕೃತಜ್ಞತೆಯನ್ನು ಪುನರುಚ್ಚರಿಸುತ್ತದೆ ಎಂದು ಅವರು ಹೇಳಿದರು. ನಮ್ಮ ಸಶಸ್ತ್ರ ಪಡೆಗಳನ್ನು ಬಲಪಡಿಸಲು ಮತ್ತು ನಮಗೆ ಸೇವೆ ಸಲ್ಲಿಸುವವರ ಕಲ್ಯಾಣವನ್ನು ಹೆಚ್ಚಿಸಲು ಸರ್ಕಾರ ಯಾವಾಗಲೂ ಸಾಧ್ಯವಿರುವ ಎಲ್ಲವನ್ನೂ ಮಾಡುತ್ತದೆ ಎಂದು ಶ್ರೀ ನರೇಂದ್ರ ಮೋದಿ ಭರವಸೆ ನೀಡಿದರು.

ಮಾರ್ಚ್ 12ರಂದು ಗುಜರಾತ್ ಮತ್ತು ರಾಜಸ್ಥಾನಕ್ಕೆ ಭೇಟಿ ನೀಡಲಿರುವ ಪ್ರಧಾನಮಂತ್ರಿ

March 10th, 05:24 pm

ಪ್ರಧಾನಮಂತ್ರಿಯವರು 2024ರ ಮಾರ್ಚ್ 12ರಂದು ಗುಜರಾತ್ ಮತ್ತು ರಾಜಸ್ಥಾನಕ್ಕೆ ಭೇಟಿ ನೀಡಲಿದ್ದಾರೆ. ಬೆಳಿಗ್ಗೆ 9:15 ರ ಸುಮಾರಿಗೆ ಪ್ರಧಾನಮಂತ್ರಿಯವರು ಅಹ್ಮದಾಬಾದ್ ನಲ್ಲಿ 85,000 ಕೋಟಿ ರೂ.ಗೂ ಹೆಚ್ಚು ಮೌಲ್ಯದ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ ಮತ್ತು ರಾಷ್ಟ್ರಕ್ಕೆ ಸಮರ್ಪಿಸಲಿದ್ದಾರೆ. ನಂತರ, ಬೆಳಿಗ್ಗೆ 10 ಗಂಟೆಗೆ ಪ್ರಧಾನಮಂತ್ರಿಯವರು ಸಬರಮತಿ ಆಶ್ರಮಕ್ಕೆ ಭೇಟಿ ನೀಡಲಿದ್ದು, ಅಲ್ಲಿ ಅವರು ಕೊಚ್ರಾಬ್ ಆಶ್ರಮವನ್ನು ಉದ್ಘಾಟಿಸಲಿದ್ದಾರೆ ಮತ್ತು ಗಾಂಧಿ ಆಶ್ರಮ ಸ್ಮಾರಕದ ಮಾಸ್ಟರ್ ಪ್ಲಾನ್ ಗೆ ಚಾಲನೆ ನೀಡಲಿದ್ದಾರೆ. ನಂತರ, ಮಧ್ಯಾಹ್ನ 1:45 ರ ಸುಮಾರಿಗೆ, ಪ್ರಧಾನಮಂತ್ರಿಯವರು ರಾಜಸ್ಥಾನದ ಪೋಖ್ರಾನ್ ನಲ್ಲಿ ಮೂರು-ಸೇವೆಗಳ ಲೈವ್ ಫೈರ್ ಮತ್ತು ಕುಶಲತೆ ಸಾಹಸದ ರೂಪದಲ್ಲಿ ದೇಶೀಯ ರಕ್ಷಣಾ ಸಾಮರ್ಥ್ಯಗಳ ಸಂಯೋಜಿತ ಪ್ರದರ್ಶನವಾದ 'ಭಾರತ್ ಶಕ್ತಿ'ಗೆ ಸಾಕ್ಷಿಯಾಗಲಿದ್ದಾರೆ.

Glimpses from 75th Republic Day celebrations at Kartavya Path, New Delhi

January 26th, 01:08 pm

India marked the 75th Republic Day with great fervour and enthusiasm. The country's perse culture, prowess of the Armed Forces were displayed at Kartavya Path in New Delhi. President Droupadi Murmu, Prime Minister Narendra Modi, President Emmanuel Macron of France, who was this year's chief guest, graced the occasion.

ಭಾರತವು ಹೊಸ ಕಾರ್ಯತಂತ್ರದ ಬಲವನ್ನು ಪಡೆದುಕೊಂಡಿದೆ; ಗಡಿಗಳು ಹಿಂದೆಂದಿಗಿಂತಲೂ ಹೆಚ್ಚು ಸುರಕ್ಷಿತ: ಪ್ರಧಾನಿ ಮೋದಿ

August 15th, 02:46 pm

ಸಶಸ್ತ್ರ ಪಡೆಗಳನ್ನು ಆಧುನೀಕರಿಸಲಾಗುತ್ತಿದೆ, ಅವುಗಳನ್ನು ಯುವಕರನ್ನಾಗಿ ಮಾಡಲಾಗುತ್ತಿದೆ ಮತ್ತು ಭವಿಷ್ಯದ ಸವಾಲುಗಳನ್ನು ಎದುರಿಸಲು ಯುದ್ಧವನ್ನು ಸಿದ್ಧಪಡಿಸುವುದು ನಮ್ಮ ಪ್ರಮುಖ ಆದ್ಯತೆಯಾಗಿದೆ ಎಂದು ಪ್ರಧಾನಿ ಮೋದಿ ಹೇಳಿದರು, ಇತ್ತೀಚಿನ ವರ್ಷಗಳಲ್ಲಿ ಭಾರತವು ಹೊಸ ಕಾರ್ಯತಂತ್ರದ ಶಕ್ತಿಯನ್ನು ಗಳಿಸಿದೆ ಮತ್ತು ಇಂದು ನಮ್ಮ ಗಡಿಗಳು ಎಂದಿಗಿಂತಲೂ ಹೆಚ್ಚು ಸುರಕ್ಷಿತವಾಗಿದೆ.

ಪ್ರಧಾನ ಮಂತ್ರಿ ಅವರನ್ನು ಭೇಟಿ ಮಾಡಿದ 2022 ತಂಡದ ಐಎಫ್‌ಎಸ್ ಪ್ರಶಿಕ್ಷಣಾರ್ಥಿ ಅಧಿಕಾರಿಗಳು

July 25th, 07:56 pm

ಭಾರತೀಯ ವಿದೇಶಾಂಗ ಸೇವೆ(ಐಎಫ್ಎಸ್)ಯ 2022ರ ತಂಡದ ಪ್ರಶಿಕ್ಷಣಾರ್ಥಿ ಅಧಿಕಾರಿಗಳು ಇಂದು ಮುಂಜಾನೆ ಲೋಕ ಕಲ್ಯಾಣ್ ಮಾರ್ಗ್‌ನಲ್ಲಿರುವ 7ನೇ ಸಂಖ್ಯೆಯ ನಿವಾಸದಲ್ಲಿ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದರು.