ಸರ್ದಾರ್ ಸರೋವರ್ ಅಣೆಕಟ್ಟೆಯನ್ನು ದೇಶಕ್ಕೆ ಸಮರ್ಪಿಸಲಿರುವ ಪ್ರಧಾನಿ, ಗುಜರಾತ್ ನಲ್ಲಿ ಎರಡು ಸಾರ್ವಜನಿಕ ಸಭೆ ಉದ್ದೇಶಿಸಿ ಭಾಷಣ
September 16th, 02:19 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2017ರ ಸೆಪ್ಟೆಂಬರ್ 17ರಂದು ಗುಜರಾತ್ ನ ಕೆವಾಡಿಯಾದಲ್ಲಿ ಸರ್ದಾರ್ ಸರೋವರವನ್ನು ದೇಶಕ್ಕೆ ಸಮರ್ಪಿಸಲಿದ್ದಾರೆ.ಈ ಯೋಜನೆಯು ನರ್ಮದಾ ನದಿಯ ನೀರನ್ನು ಗುಜರಾತ್ ರಾಜ್ಯದ ನೀರಿನ ಕೊರತೆ ಇರುವ ಪ್ರದೇಶಗಳಿಗೆ ವಿಸ್ತೃತ ಕಾಲುವೆ ಮತ್ತು ಕೊಳವೆ ಜಾಲದ ಮೂಲಕ ಹರಿಸಲು ನೆರವಾಗುತ್ತದೆ.ಯೋಜನೆಯಿಂದ 10 ಲಕ್ಷ ರೈತರಿಗೆ ನೀರಾವರಿ ಸೌಲಭ್ಯ ದೊರಕಲಿದೆ ಮತ್ತು ವಿವಿಧ ನಗರ ಮತ್ತು ಪಟ್ಟಣಗಳ 4 ಕೋಟಿಯಷ್ಟು ಜನರಿಗೆ ಕುಡಿಯುವ ನೀರಿನ ಸೌಲಭ್ಯವೂ ದೊರಕುವ ನಿರೀಕ್ಷೆ ಇದೆ.