ಏಕ್ ಪೆಡ್ ಮಾ ಕೆ ನಾಮ್ ಉಪಕ್ರಮವನ್ನು ಬಲಪಡಿಸುವ ಮತ್ತು ಅರಾವಳಿ ಹಸಿರು ಗೋಡೆ ಯೋಜನೆಯಡಿಯಲ್ಲಿ ಅರಾವಳಿ ಶ್ರೇಣಿಯನ್ನು ಮರು ಅರಣ್ಯೀಕರಣಗೊಳಿಸುವ ಸಂಕಲ್ಪದೊಂದಿಗೆ ದಿಲ್ಲಿಯ ಭಗವಾನ್ ಮಹಾವೀರ್ ವನಸ್ಥಲಿ ಉದ್ಯಾನವನದಲ್ಲಿ ಸಸಿ ನೆಟ್ಟ ಪ್ರಧಾನಮಂತ್ರಿ
June 05th, 01:33 pm
ವಿಶ್ವ ಪರಿಸರ ದಿನದ ಅಂಗವಾಗಿ, ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ದಿಲ್ಲಿಯ ಭಗವಾನ್ ಮಹಾವೀರ್ ವನಸ್ಥಲಿ ಉದ್ಯಾನವನದಲ್ಲಿ ಗಿಡ ನೆಡುವ ಕಾರ್ಯಕ್ರಮದಲ್ಲಿ ಭಾಗವಹಿಸಿ, ಏಕ್ ಪೆಡ್ ಮಾ ಕೆ ನಾಮ್ ಉಪಕ್ರಮವನ್ನು ಬಲಪಡಿಸುವ ಸಲುವಾಗಿ ಸಸಿ ನೆಟ್ಟಿದ್ದಾರೆ.ವಿಶ್ವ ಪರಿಸರ ದಿನದಂದು, ಏಕ್ ಪೆಡ್ ಮಾ ಕೆ ನಾಮ್ ಉಪಕ್ರಮದ ಅಡಿಯಲ್ಲಿ ವಿಶೇಷ ಮರ ನೆಡುವ ಅಭಿಯಾನದ ನೇತೃತ್ವ ವಹಿಸಲಿರುವ ಪ್ರಧಾನಮಂತ್ರಿ
June 04th, 01:20 pm
ವಿಶ್ವ ಪರಿಸರ ದಿನಾಚರಣೆಯ ಸಂದರ್ಭದಲ್ಲಿ, ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2025ರ ಜೂನ್ 5 ರಂದು ಬೆಳಗ್ಗೆ 10:15ಕ್ಕೆ ನವದೆಹಲಿಯ ಭಗವಾನ್ ಮಹಾವೀರ್ ವನಸ್ಥಲಿ ಉದ್ಯಾನವನದಲ್ಲಿ ವಿಶೇಷ ಮರ ನೆಡುವ ಉಪಕ್ರಮದ ನೇತೃತ್ವ ವಹಿಸಲಿದ್ದು, ಪರಿಸರ ನಿರ್ವಹಣೆ ಮತ್ತು ಹಸಿರು ಚಲನಶೀಲತೆಗೆ ಭಾರತದ ಬದ್ಧತೆಯನ್ನು ಪುನರುಚ್ಚರಿಸಲಿದ್ದಾರೆ.