ಕುವೈತ್ ಗೆ ಭಾರತದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ ಅಧಿಕೃತ ಭೇಟಿ (ಡಿಸೆಂಬರ್ 21-22, 2024): ಜಂಟಿ ಹೇಳಿಕೆ
December 22nd, 07:46 pm
ಕುವೈತ್ ದೇಶದ ದೊರೆ (ಅಮೀರ್) ಘನತೆವೆತ್ತ ಶೇಖ್ ಮೆಶಲ್ ಅಲ್-ಅಹ್ಮದ್ ಅಲ್-ಜಾಬರ್ ಅಲ್-ಸಬಾಹ್ ಅವರ ಆಹ್ವಾನದ ಮೇರೆಗೆ, ಭಾರತದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 21-22 ಡಿಸೆಂಬರ್ 2024 ರಂದು ಕುವೈಟ್ ಗೆ ಅಧಿಕೃತ ಭೇಟಿ ನೀಡಿದರು. ಕುವೈತ್ ಗೆ ಅವರ ಮೊದಲ ಭೇಟಿಯಾಗಿದೆ. ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 21 ಡಿಸೆಂಬರ್ 2024 ರಂದು ಅಮೀರ್ ಶೇಖ್ ಮೆಶಲ್ ಅಲ್-ಅಹ್ಮದ್ ಅಲ್-ಜಾಬರ್ ಅಲ್-ಸಬಾಹ್ ಅವರ ಗೌರವಾನ್ವಿತ ಅತಿಥಿಯಾಗಿ ಕುವೈತ್ ನಲ್ಲಿ ನಡೆದ 26ನೇ ಅರೇಬಿಯನ್ ಗಲ್ಫ್ ಕಪ್ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿದರು.ಪ್ರಧಾನಮಂತ್ರಿಗಳಿಂದ ಕುವೈತ್‌ನ ಅಮೀರ್ ಅವರ ಭೇಟಿ
December 22nd, 05:08 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಇಂದು ಕುವೈತ್‌ನ ಅಮೀರ್ ಆಗಿರುವ ಶೇಖ್ ಮೆಶಾಲ್ ಅಲ್-ಅಹ್ಮದ್ ಅಲ್-ಜಬೇರ್ ಅಲ್-ಸಬಾಹ್ ಅವರನ್ನು ಭೇಟಿ ಮಾಡಿದರು. ಇದು ಉಭಯ ನಾಯಕರ ನಡುವಿನ ಮೊದಲ ಭೇಟಿಯಾಗಿತ್ತು. ಬಯಾನ್ ಅರಮನೆಗೆ ಆಗಮಿಸಿದಾಗ, ಪ್ರಧಾನಿ ಮೋದಿ ಅವರಿಗೆ ಔಪಚಾರಿಕ ಸ್ವಾಗತ ನೀಡಲಾಯಿತು ಮತ್ತು ಕುವೈತ್ ಪ್ರಧಾನಿ ಅಹ್ಮದ್ ಅಲ್-ಅಬ್ದುಲ್ಲಾ ಅಲ್-ಅಹ್ಮದ್ ಅಲ್-ಸಬಾಹ್ ಅವರು ಪ್ರಧಾನಮಂತ್ರಿ ಅವರನ್ನು ಬರಮಾಡಿಕೊಂಡರು.ಕುವೈತ್ ನ ಅಮೀರ್ ಅವರ ಗೌರವಾನ್ವಿತ ಅತಿಥಿಯಾಗಿ ಅರೇಬಿಯನ್ ಗಲ್ಫ್ ಕಪ್ ನಲ್ಲಿ ಪ್ರಧಾನಮಂತ್ರಿ ಭಾಗವಹಿಸಿದರು
December 21st, 10:24 pm
ಕುವೈತ್ ನ ದೊರೆ (ಅಮೀರ್) ಘನತೆವೆತ್ತ ಶೇಖ್ ಮೆಶಾಲ್ ಅಲ್-ಅಹ್ಮದ್ ಅಲ್-ಜಾಬರ್ ಅಲ್-ಸಬಾಹ್ ಅವರ ಆಹ್ವಾನದ ಮೇರೆಗೆ, ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಕುವೈತ್ ನಲ್ಲಿ ನಡೆದ 26ನೇ ಅರೇಬಿಯನ್ ಗಲ್ಫ್ ಕಪ್ ನ ಉದ್ಘಾಟನಾ ಸಮಾರಂಭದಲ್ಲಿ ‘ಗೌರವ ಅತಿಥಿ’ಯಾಗಿ ಭಾಗವಹಿಸಿದರು. ಘನತೆವೆತ್ತ ಕುವೈತ್ ದೊರೆ (ಅಮೀರ್), ಘನತೆವೆತ್ತ ಕುವೈತ್ ಯುವರಾಜ, ಮತ್ತು ಘನತೆವೆತ್ತ ಕುವೈತ್ ಪ್ರಧಾನಮಂತ್ರಿಯವರೊಂದಿಗೆ ಉದ್ಘಾಟನಾ ಸಮಾರಂಭಕ್ಕೆ ಆಗಮಿಸಿದ ಪ್ರಧಾನಮಂತ್ರಿಯವರು, ಕಾರ್ಯಕ್ರಮದಲ್ಲಿ ಸಂಪೂರ್ಣವಾಗಿ ಪಾಲ್ಗೊಂಡರು. ಕುವೈತ್ ನ ಉನ್ನತ ನಾಯಕತ್ವದೊಂದಿಗೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಗೆ ಅನೌಪಚಾರಿಕ ಸಂವಾದಕ್ಕೆ ಕೂಡಾ ಈ ಕಾರ್ಯಕ್ರಮವು ಅವಕಾಶವನ್ನು ಒದಗಿಸಿಕೊಟ್ಟಿತು.ಕುವೈತ್‌ನಲ್ಲಿ ಭಾರತೀಯ ಸಮುದಾಯ ಆಯೋಜಿಸಿದ್ದ ‘ಹಲಾ ಮೋದಿ’ ಕಾರ್ಯಕ್ರಮ ಉದ್ದೇಶಿಸಿ ಪ್ರಧಾನಮಂತ್ರಿ ಭಾಷಣ
December 21st, 06:34 pm
ಎರಡೂವರೆ ಗಂಟೆಗಳ ಹಿಂದೆಯಷ್ಟೇ ನಾನು ಕುವೈತ್‌ಗೆ ಬಂದೆ. ನಾನು ಇಲ್ಲಿಗೆ ಕಾಲಿಟ್ಟಾಗಿನಿಂದ, ಹೃದಯಾಂತರಾಳದ ಅನನ್ಯ ಭಾವನೆಯನ್ನು ಅನುಭವಿಸಿದೆ. ನೀವೆಲ್ಲರೂ ಭಾರತದ ವಿವಿಧ ರಾಜ್ಯಗಳಿಂದ ಬಂದಿದ್ದೀರಿ, ಆದರೆ ನಿಮ್ಮೆಲ್ಲರನ್ನು ನೋಡುವಾಗ ನನ್ನ ಮುಂದೆ ಒಂದು ಮಿನಿ ಹಿಂದೂಸ್ಥಾನವೇ ಜೀವಂತವಾಗಿದೆ ಎಂದು ಭಾಸವಾಗುತ್ತಿದೆ. ಇಲ್ಲಿ, ಉತ್ತರ, ದಕ್ಷಿಣ, ಪೂರ್ವ ಮತ್ತು ಪಶ್ಚಿಮದ ಜನರು ವಿಭಿನ್ನ ಭಾಷೆ ಮತ್ತು ಉಪಭಾಷೆಗಳನ್ನು ಮಾತನಾಡುವುದನ್ನು ನಾನು ನೋಡುತ್ತೇನೆ. ಆದರೂ, ಪ್ರತಿಯೊಬ್ಬರ ಹೃದಯದಲ್ಲಿ ಒಂದು ಸಾಮಾನ್ಯ ಪ್ರತಿಧ್ವನಿ ಇದೆ, ಪ್ರತಿಯೊಬ್ಬರ ಹೃದಯದಲ್ಲಿ ಒಂದು ಪ್ರತಿಧ್ವನಿಸುವ ಘೋಷಣೆ - ಭಾರತ್ ಮಾತಾ ಕಿ ಜೈ, ಭಾರತ್ ಮಾತಾ ಕಿ - ಜೈ.ಕುವೈತ್‌ನಲ್ಲಿ ನಡೆದ ‘ಹಾಲಾ ಮೋದಿ’ ಕಾರ್ಯಕ್ರಮದಲ್ಲಿ ಭಾರತೀಯ ಸಮುದಾಯವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು
December 21st, 06:30 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಕುವೈತ್‌ನಲ್ಲಿರುವ ಶೇಖ್ ಸಾದ್ ಅಲ್-ಅಬ್ದುಲ್ಲಾ ಒಳಾಂಗಣ ಕ್ರೀಡಾ ಸಂಕೀರ್ಣದಲ್ಲಿ ಆಯೋಜಿಸಲಾಗಿದ್ದ ‘ಹಾಲಾ ಮೋದಿ’ ವಿಶೇಷ ಕಾರ್ಯಕ್ರಮದಲ್ಲಿ ಅಲ್ಲಿನ ಭಾರತೀಯ ಸಮುದಾಯದ ಬೃಹತ್ ಸಭೆಯನ್ನುದ್ದೇಶಿಸಿ ಮಾತನಾಡಿದರು. ಕುವೈತ್‌ನ ಸಮುದಾಯದ ಹೆಚ್ಚಿನ ಭಾಗವನ್ನು ಪ್ರತಿನಿಧಿಸುವ ಭಾರತೀಯ ಪ್ರಜೆಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.ಕುವೈತ್ ಗೆ ತೆರಳುವ ಮುನ್ನ ಪ್ರಧಾನಮಂತ್ರಿಯವರ ಹೇಳಿಕೆ
December 21st, 09:21 am
ಇಂದು, ಕುವೈತ್ ನ ಅಮೀರ್ ಅವರ ಹೈನೆಸ್ ಶೇಖ್ ಮೆಶಾಲ್ ಅಲ್-ಅಹ್ಮದ್ ಅಲ್-ಜಾಬರ್ ಅಲ್-ಸಬಾಹ್ ಅವರ ಆಹ್ವಾನದ ಮೇರೆಗೆ ನಾನು ಕುವೈತ್ ಗೆ ಎರಡು ದಿನಗಳ ಭೇಟಿಯನ್ನು ಪ್ರಾರಂಭಿಸುತ್ತಿದ್ದೇನೆ.