ಮಲೇಷ್ಯಾದ ಪ್ರಧಾನಮಂತ್ರಿ ಅವರೊಂದಿಗೆ ಅಧಿಕೃತ ಮಾತುಕತೆ ನಡೆಸಿದ ಪ್ರಧಾನಮಂತ್ರಿ ಮೋದಿ

February 08th, 11:19 am

ನಾಯಕರು ವ್ಯಾಪಕ ಚರ್ಚೆಗಳನ್ನು ನಡೆಸಿದರು ಮತ್ತು 2024ರಲ್ಲಿ ಉಭಯ ದೇಶಗಳ ನಡುವೆ ಸ್ಥಾಪಿಸಲಾದ ಸಮಗ್ರ ಕಾರ್ಯತಂತ್ರದ ಪಾಲುದಾರಿಕೆಯನ್ನು ಮತ್ತಷ್ಟು ಬಲಪಡಿಸಲು ಸಹಮತ ವ್ಯಕ್ತಪಡಿಸಿದರು. ಪಾಲುದಾರಿಕೆ ಮತ್ತು ಜನರ ನಡುವಿನ ನಿಕಟ ಸಂಬಂಧದಲ್ಲಿ ನೆಲೆಯೂರಿರುವ ಭಾರತ-ಮಲೇಷ್ಯಾ ಹಳೆಯ ಬಾಂಧವ್ಯವನ್ನು ಅವರು ಸ್ಮರಿಸಿದರು. ವ್ಯಾಪಾರ, ಹೂಡಿಕೆ, ರಕ್ಷಣೆ, ಭದ್ರತೆ, ಸಮುದ್ರ, ಶುದ್ಧ ಇಂಧನ, ಮೂಲಸೌಕರ್ಯ, ನವೋದ್ಯಮಗಳು, ಕೃಷಿ, ಶಿಕ್ಷಣ, ಆರೋಗ್ಯ, ಆಯುರ್ವೇದ, ಪ್ರವಾಸೋದ್ಯಮ ಮತ್ತು ಸಾಂಸ್ಕೃತಿಕ ಸಂಪರ್ಕಗಳಂತಹ ಆದ್ಯತೆಯ ಕ್ಷೇತ್ರಗಳು ಸೇರಿದಂತೆ ದ್ವಿಪಕ್ಷೀಯ ಸಂಬಂಧಗಳ ಸಂಪೂರ್ಣ ಆಯಾಮವನ್ನು ನಾಯಕರು ಪರಿಶೀಲಿಸಿದರು. ಸೆಮಿಕಂಡಕ್ಟರ್‌ಗಳು ಮತ್ತು ಕೃತಕ ಬುದ್ಧಿಮತ್ತೆಯಂತಹ ಉದಯೋನ್ಮುಖ ಕ್ಷೇತ್ರಗಳಲ್ಲಿ ಸಹಕಾರವನ್ನು ಹೆಚ್ಚಿಸುವ ಬಗ್ಗೆಯೂ ಅವರು ಚರ್ಚಿಸಿದರು. 'ದ್ವಿಪಕ್ಷೀಯ ಡಿಜಿಟಲ್ ಮಂಡಳಿ' ಮೂಲಕ ಉಭಯ ದೇಶಗಳ ನಡುವಿನ ಡಿಜಿಟಲ್ ಸಹಕಾರದ ಸ್ಥಿರ ಪ್ರಗತಿಯನ್ನು ನಾಯಕರು ಶ್ಲಾಘಿಸಿದರು. ಇದೇವೇಳೆ 'ಫಿನ್‌ಟೆಕ್‌' ಕ್ಷೇತ್ರದಲ್ಲಿ ಸಹಯೋಗವನ್ನು ಹೆಚ್ಚಿಸಲು 'ಯುಪಿಐ' ಮತ್ತು 'ಪೇ-ನೆಟ್' ನಡುವಿನ ಒಪ್ಪಂದವನ್ನು ಅವರು ಸ್ವಾಗತಿಸಿದರು.

ಮಲೇಷ್ಯಾಕ್ಕೆ ಪ್ರಧಾನಮಂತ್ರಿ ಅವರ ಅಧಿಕೃತ ಭೇಟಿ: ಫಲಪ್ರದತೆಯ ವಿವರ

February 08th, 11:05 am

ಭಾರತ ಸರ್ಕಾರ ಮತ್ತು ಮಲೇಷ್ಯಾ ಸರ್ಕಾರದ ನಡುವೆ ದೃಶ್ಯ-ಶ್ರಾವ್ಯ ಸಹ ನಿರ್ಮಾಣ ಒಪ್ಪಂದ

ಮಲೇಷ್ಯಾ ಪ್ರಧಾನಮಂತ್ರಿ ಅವರ ಜೊತೆ ಜಂಟಿ ಪತ್ರಿಕಾ ಹೇಳಿಕೆಯ ಸಂದರ್ಭದಲ್ಲಿ ಪ್ರಧಾನಮಂತ್ರಿ ಅವರ ಪತ್ರಿಕಾ ಹೇಳಿಕೆ

February 08th, 08:35 am

ಮೊದಲನೆಯದಾಗಿ, ಆತ್ಮೀಯ ಸ್ವಾಗತಕ್ಕಾಗಿ ನನ್ನ ಆಪ್ತ ಮಿತ್ರರಾದ ಪ್ರಧಾನಮಂತ್ರಿ ಅನ್ವರ್ ಇಬ್ರಾಹಿಂ ಅವರಿಗೆ ನನ್ನ ಹೃತ್ಪೂರ್ವಕ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ. ಕಳೆದ ವರ್ಷ, ಆಸಿಯಾನ್ (ASEAN) ಶೃಂಗಸಭೆಯ ಸಂದರ್ಭದಲ್ಲಿ ನನಗೆ ಮಲೇಷ್ಯಾಕ್ಕೆ ಭೇಟಿ ನೀಡಲು ಸಾಧ್ಯವಾಗಲಿಲ್ಲ. ಆದರೆ ಶೀಘ್ರದಲ್ಲೇ ಮಲೇಷ್ಯಾಕ್ಕೆ ಬರುತ್ತೇನೆ ಎಂದು ನಾನು ನನ್ನ ಪ್ರಿಯ ಮಿತ್ರರಿಗೆ ಮಾತು ಕೊಟ್ಟಿದ್ದೆ. ಅದರಂತೆ ಇಂದು, 2026ರ ಸಾಲಿನ ನನ್ನ ಮೊದಲ ವಿದೇಶಿ ಪ್ರವಾಸದ ಅಂಗವಾಗಿ ನಾನು ಮಲೇಷ್ಯಾದಲ್ಲಿದ್ದೇನೆ.

ಭಾರತದ ಪ್ರಧಾನಮಂತ್ರಿ ಅವರು ಮಲೇಷ್ಯಾಕ್ಕೆ ನೀಡಿದ ಅಧಿಕೃತ ಭೇಟಿಯ ಸಂದರ್ಭದಲ್ಲಿ ಭಾರತ - ಮಲೇಷ್ಯಾ ಜಂಟಿ ಹೇಳಿಕೆ

February 08th, 08:30 am

ಮಲೇಷ್ಯಾ ಪ್ರಧಾನಮಂತ್ರಿ ಗೌರವಾನ್ವಿತ ಡಾಟೋ ಸೆರಿ ಅನ್ವರ್ ಇಬ್ರಾಹಿಂ ಅವರ ಆಹ್ವಾನದ ಮೇರೆಗೆ, ಭಾರತ ಗಣರಾಜ್ಯದ ಪ್ರಧಾನಮಂತ್ರಿ ಗೌರವಾನ್ವಿತ ಶ್ರೀ ನರೇಂದ್ರ ಮೋದಿ ಅವರು 2026ರ ಫೆಬ್ರವರಿ 7 ರಿಂದ 8 ರವರೆಗೆ ಮಲೇಷ್ಯಾಕ್ಕೆ ಅಧಿಕೃತ ಭೇಟಿ ನೀಡಿದರು. ಈ ಭೇಟಿಯು ಉಭಯ ದೇಶಗಳ ನಡುವಿನ ನಾಗರಿಕ ಸಂಬಂಧಗಳ ಆಧಾರದ ಮೇಲೆ ಆಳವಾಗಿ ಬೇರೂರಿರುವ ಸ್ನೇಹ ಮತ್ತು ಜನರ ನಡುವಿನ ಸುದೀರ್ಘ ಬಾಂಧವ್ಯವನ್ನು ಪ್ರತಿಫಲಿಸುತ್ತದೆ. ಭಾರತ-ಮಲೇಷ್ಯಾ ಸಮಗ್ರ ಕಾರ್ಯತಂತ್ರದ ಪಾಲುದಾರಿಕೆಯನ್ನು ಮತ್ತಷ್ಟು ಬಲಪಡಿಸಲು ಮತ್ತು ವಿಸ್ತರಿಸಲು ಉಭಯ ನಾಯಕರ ಹಂಚಿಕೆಯ ಬದ್ಧತೆಯನ್ನು ಇದು ಪುನರುಚ್ಚರಿಸಿದೆ.

ಮಲೇಷ್ಯಾ ಪ್ರಧಾನಮಂತ್ರಿ ಅನ್ವರ್ ಇಬ್ರಾಹಿಂ ಅವರೊಂದಿಗೆ ನಡೆದ ನಿಯೋಗ ಮಟ್ಟದ ಮಾತುಕತೆಯ ಸಂದರ್ಭದಲ್ಲಿ ಪ್ರಧಾನಮಂತ್ರಿ ಅವರ ಭಾಷಣ

February 08th, 08:20 am

ನನ್ನ ಮಿತ್ರರಾದ ಪ್ರಧಾನಮಂತ್ರಿಗಳೇ, ನಾನು ನಿಮಗೆ ನನ್ನ ಹೃತ್ಪೂರ್ವಕ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ. ನನ್ನ ನಿಯೋಗಕ್ಕೆ ಮತ್ತು ನನಗೆ ನೀಡಿದ ಸ್ವಾಗತದ ರೀತಿ, ಹಾಗೂ ಕೇವಲ ಕೆಲವು ಗಂಟೆಗಳಲ್ಲಿ ಮಲೇಷ್ಯಾದ ಜೀವನದ ಸಾರವನ್ನು ಸಂಪ್ರದಾಯಗಳನ್ನೂ ಮೀರಿ ಅತ್ಯಂತ ಸುಂದರವಾಗಿ ನೀವು ಪ್ರಸ್ತುತಪಡಿಸಿದ ರೀತಿ ನನ್ನ ನೆನಪಿನಲ್ಲಿ ಎಂದೆಂದಿಗೂ ಅಚ್ಚಳಿಯದೆ ಉಳಿಯುತ್ತದೆ. ಇದಕ್ಕಾಗಿ ನಾನು ನನ್ನ ಆಳವಾದ ಪ್ರಶಂಸೆಯನ್ನು ವ್ಯಕ್ತಪಡಿಸುತ್ತೇನೆ. ಸ್ನೇಹ ಎಂದರೆ ಏನು, ಅದರ ಎತ್ತರ ಮತ್ತು ಆಳಗಳು ಎಂಥವು ಎಂಬುದನ್ನು ನಾನು ಇಂದು ನಿಜವಾಗಿಯೂ ಅನುಭವಿಸಿದ್ದೇನೆ ಮತ್ತು ಅದಕ್ಕಾಗಿ ನಾನು ನಿಮಗೆ ಚಿರಋಣಿಯಾಗಿದ್ದೇನೆ.

ಮಲೇಷ್ಯಾದಲ್ಲಿರುವ ಭಾರತೀಯ ಸಮುದಾಯವನ್ನುದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

February 07th, 03:59 pm

ನಿಮ್ಮ ಶುಭಾಶಯಗಳ ಆತ್ಮೀಯತೆಯು ನಮ್ಮ ಹಂಚಿಕೆಯ ಸಂಸ್ಕೃತಿಯ ಸುಂದರ ವೈವಿಧ್ಯತೆಯನ್ನು ಪ್ರತಿಬಿಂಬಿಸುತ್ತದೆ.

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಲೇಷ್ಯಾದ ಕೌಲಾಲಂಪುರ್‌ ನಲ್ಲಿ ಸಮುದಾಯ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು

February 07th, 03:15 pm

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಮಲೇಷ್ಯಾದ ಕೌಲಾಲಂಪುರ್‌ನಲ್ಲಿ ಸಮುದಾಯ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು. ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿಯವರು, ಈ ಆತ್ಮೀಯ ಸ್ವಾಗತವು ನಮ್ಮ ಹಂಚಿಕೆಯ ಸಂಸ್ಕೃತಿಯ ಸುಂದರ ವೈವಿಧ್ಯತೆಯನ್ನು ಪ್ರತಿಬಿಂಬಿಸುತ್ತದೆ ಎಂದು ಹೇಳಿದರು. ಈ ಸಮುದಾಯ ಸಂಭ್ರಮಾಚರಣೆಯಲ್ಲಿ ಭಾಗವಹಿಸಿದ್ದಕ್ಕಾಗಿ ಅವರು ತಮ್ಮ ಆತ್ಮೀಯ ಮಿತ್ರರಾದ ಪ್ರಧಾನಮಂತ್ರಿ ಅನ್ವರ್ ಇಬ್ರಾಹಿಂ ಅವರಿಗೆ ಧನ್ಯವಾದ ಅರ್ಪಿಸಿದರು. ಪ್ರಧಾನಮಂತ್ರಿ ಅನ್ವರ್ ಇಬ್ರಾಹಿಂ ಅವರು ವಿಮಾನ ನಿಲ್ದಾಣಕ್ಕೆ ಬಂದು ತಮ್ಮನ್ನು ಸ್ವಾಗತಿಸಿ, ತಮ್ಮ ಕಾರಿನಲ್ಲೇ ಈ ಕಾರ್ಯಕ್ರಮಕ್ಕೆ ಕರೆತಂದಿದ್ದನ್ನು ಅವರು ಸ್ಮರಿಸಿದರು. ಈ ವಿಶೇಷ ಸನ್ನೆಗಳು ಭಾರತದ ಮೇಲೆ ಮತ್ತು ಇಲ್ಲಿ ಉಪಸ್ಥಿತರಿರುವ ಜನರ ಮೇಲೆ ಪ್ರಧಾನಮಂತ್ರಿ ಅನ್ವರ್ ಇಬ್ರಾಹಿಂ ಅವರಿಗಿರುವ ಪ್ರೀತಿ ಮತ್ತು ಗೌರವವನ್ನು ಪ್ರತಿಬಿಂಬಿಸುತ್ತವೆ ಎಂದು ಶ್ರೀ ಮೋದಿ ಸೇರಿಸಿದರು.

ಕೌಲಾಲಂಪುರಕ್ಕೆ ಆಗಮಿಸಿದ ಪ್ರಧಾನಮಂತ್ರಿ ಅವರನ್ನು ಮಲೇಷ್ಯಾ ಪ್ರಧಾನಮಂತ್ರಿ ಸ್ವಾಗತಿಸಿ ಬರಮಾಡಿಕೊಂಡರು

February 07th, 02:30 pm

ಮಲೇಷ್ಯಾ ಪ್ರಧಾನಮಂತ್ರಿ ಗೌರವಾನ್ವಿತ ಡಾಟೋ’ಸೆರಿ ಅನ್ವರ್ ಇಬ್ರಾಹಿಂ ಅವರ ಆಹ್ವಾನದ ಮೇರೆಗೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಫೆಬ್ರವರಿ 7-8, 2026 ರಂದು ಮಲೇಷ್ಯಾಕ್ಕೆ ಈ ಭೇಟಿ ನೀಡುತ್ತಿದ್ದಾರೆ. 2015 ರಿಂದ ಇದು ಪ್ರಧಾನಮಂತ್ರಿ ಅವರ ಮಲೇಷ್ಯಾಕ್ಕೆ ಮೂರನೇ ಭೇಟಿಯಾಗಿದೆ.

ಮಲೇಷ್ಯಾ ಭೇಟಿಗೂ ಮುನ್ನ ಪ್ರಧಾನಮಂತ್ರಿ ಅವರ ನಿರ್ಗಮನದ ಹೇಳಿಕೆ

February 07th, 08:45 am

ಮಲೇಷ್ಯಾ ಪ್ರಧಾನಮಂತ್ರಿ, ನನ್ನ ಸ್ನೇಹಿತ ಅನ್ವರ್ ಇಬ್ರಾಹಿಂ ಅವರ ಆಹ್ವಾನದ ಮೇರೆಗೆ ನಾನು ಇಂದು ಮಲೇಷ್ಯಾಕ್ಕೆ ಅಧಿಕೃತ ಭೇಟಿ ನೀಡುತ್ತಿದ್ದೇನೆ.

ಮಲೇಷ್ಯಾದ ಕೌಲಾಲಂಪುರಕ್ಕೆ ಗೌರವಾನ್ವಿತ ಪ್ರಧಾನಿ ಶ್ರೀ ನರೇಂದ್ರ ಮೋದಿಯವರ ಅಧಿಕೃತ ಭೇಟಿ

February 04th, 04:17 pm

ಮಲೇಷ್ಯಾದ ಪ್ರಧಾನಿ ಅನ್ವರ್ ಇಬ್ರಾಹಿಂ ಅವರ ಆಹ್ವಾನದ ಮೇರೆಗೆ, ಪ್ರಧಾನಿ ಮೋದಿ ಅವರು ಫೆಬ್ರವರಿ 7–8, 2026 ರವರೆಗೆ ಮಲೇಷ್ಯಾಕ್ಕೆ ಭೇಟಿ ನೀಡಲಿದ್ದಾರೆ. ಭೇಟಿಯ ಸಮಯದಲ್ಲಿ, ಪ್ರಧಾನಿಯವರು ಮಲೇಷ್ಯಾದ ಪ್ರಧಾನಿಯೊಂದಿಗೆ ದ್ವಿಪಕ್ಷೀಯ ಚರ್ಚೆಗಳನ್ನು ನಡೆಸಲಿದ್ದಾರೆ ಮತ್ತು ದ್ವಿಪಕ್ಷೀಯ ಸಹಕಾರದ ಸಂಪೂರ್ಣ ವ್ಯಾಪ್ತಿಯನ್ನು ಪರಿಶೀಲಿಸಲಿದ್ದಾರೆ. ಅವರು ಭಾರತೀಯ ಸಮುದಾಯದ ಸದಸ್ಯರು, ಕೈಗಾರಿಕೆ ಮತ್ತು ವ್ಯಾಪಾರ ಪ್ರತಿನಿಧಿಗಳೊಂದಿಗೆ ಸಂವಹನ ನಡೆಸಲಿದ್ದಾರೆ ಮತ್ತು 10 ನೇ ಭಾರತ-ಮಲೇಷ್ಯಾ ಸಿಇಒ ವೇದಿಕೆಯಲ್ಲಿ ಭಾಗವಹಿಸಲಿದ್ದಾರೆ.

22ನೇ ಆಸಿಯಾನ್-ಭಾರತ ಶೃಂಗಸಭೆಯ ಸಂದರ್ಭದಲ್ಲಿ ಪ್ರಧಾನಮಂತ್ರಿ ಅವರ ಉದ್ಘಾಟನಾ ಭಾಷಣದ ಕನ್ನಡ ಅವತರಣಿಕೆ

October 26th, 02:20 pm

ಗೌರವಾನ್ವಿತ ಪ್ರಧಾನಮಂತ್ರಿ ಹಾಗು ನನ್ನ ಸ್ನೇಹಿತ ಅನ್ವರ್ ಇಬ್ರಾಹಿಂ,

ಕ್ವಾಲಾಲಂಪುರದಲ್ಲಿ ನಡೆದ 22ನೇ ಆಸಿಯಾನ್-ಭಾರತ ಶೃಂಗಸಭೆಯಲ್ಲಿ ಪ್ರಧಾನಮಂತ್ರಿ ಅವರು ಭಾಗವಹಿಸಿದರು

October 26th, 02:06 pm

22ನೇ ಆಸಿಯಾನ್ ಭಾರತ ಶೃಂಗಸಭೆಯು ಅಕ್ಟೋಬರ್ 26, 2025 ರಂದು ನಡೆಯಿತು. ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಶೃಂಗಸಭೆಯಲ್ಲಿ ವರ್ಚುವಲ್ ಮೂಲಕ ಭಾಗವಹಿಸಿದರು. ಪ್ರಧಾನಮಂತ್ರಿ ಮತ್ತು ಆಸಿಯಾನ್ ನಾಯಕರು ಜಂಟಿಯಾಗಿ ಆಸಿಯಾನ್-ಭಾರತ ಸಂಬಂಧಗಳಲ್ಲಿನ ಪ್ರಗತಿಯನ್ನು ಪರಿಶೀಲಿಸಿದರು ಹಾಗು ಸಮಗ್ರ ಕಾರ್ಯತಂತ್ರದ ಪಾಲುದಾರಿಕೆಯನ್ನು ಬಲಪಡಿಸುವ ಉಪಕ್ರಮಗಳ ಕುರಿತು ಚರ್ಚೆ ನಡೆಸಿದರು. ಇದು ಭಾರತ-ಆಸಿಯಾನ್ ಶೃಂಗಸಭೆಯಲ್ಲಿ ಪ್ರಧಾನಮಂತ್ರಿ ಅವರ 12ನೇ ಬಾರಿಗೆ ಭಾಗವಹಿಸಿರುವುದಾಗಿದೆ.

ಪ್ರಧಾನಮಂತ್ರಿ ಅವರು ಮಲೇಷ್ಯಾದ ಪ್ರಧಾನಮಂತ್ರಿ ಅವರೊಂದಿಗೆ ಮಾತನಾಡಿ ಆಸಿಯಾನ್ ಅಧ್ಯಕ್ಷತೆಗಾಗಿ ಅವರಿಗೆ ಅಭಿನಂದನೆ ಸಲ್ಲಿಸಿದರು

October 23rd, 10:55 am

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಲೇಷ್ಯಾದ ಪ್ರಧಾನಮಂತ್ರಿ ಅನ್ವರ್ ಇಬ್ರಾಹಿಂ ಅವರೊಂದಿಗೆ ಆತ್ಮೀಯ ಮತ್ತು ಸೌಹಾರ್ದಯುತ ಮಾತುಕತೆ ನಡೆಸಿದರು.

ಬ್ರೆಜಿಲ್ ನ ರಿಯೋ ಡಿ ಜನೈರೊದಲ್ಲಿ ನಡೆಯುತ್ತಿರುವ 17ನೇ ಬ್ರಿಕ್ಸ್ ಶೃಂಗಸಭೆಯ ನೇಪಥ್ಯದಲ್ಲಿ ಪ್ರಧಾನಮಂತ್ರಿ ಅವರು ಮಲೇಷ್ಯಾದ ಪ್ರಧಾನಮಂತ್ರಿಯವರೊಂದಿಗೆ ಸಭೆ ನಡೆಸಿದರು

July 07th, 05:13 am

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಬ್ರೆಜಿಲ್ ನ ರಿಯೋ ಡಿ ಜನೈರೊದಲ್ಲಿ ನಡೆದ 17ನೇ ಬ್ರಿಕ್ಸ್ ಶೃಂಗಸಭೆಯ ನೇಪಥ್ಯದಲ್ಲಿ ಮಲೇಷ್ಯಾ ಪ್ರಧಾನಮಂತ್ರಿ ಘನತೆವೆತ್ತ ಅನ್ವರ್ ಬಿನ್ ಇಬ್ರಾಹಿಂ ಅವರನ್ನು ಭೇಟಿ ಮಾಡಿದರು.