ಭಾರತ ನೆರವಿನ ರೈಲು ಮೂಲಸೌಕರ್ಯ ಯೋಜನೆಗಳನ್ನು ಉದ್ಘಾಟಿಸಿದ ಪ್ರಧಾನಮಂತ್ರಿ

April 06th, 12:09 pm

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಶ್ರೀಲಂಕಾದ ಅಧ್ಯಕ್ಷರಾದ ಘನತೆವೆತ್ತ ಅನುರಾ ಕುಮಾರ ದಿಸ್ಸಾನಾಯಕೆ ಅವರೊಂದಿಗೆ ಇಂದು ಅನುರಾಧಪುರದಲ್ಲಿ ಭಾರತದ ನೆರವಿನೊಂದಿಗೆ ನಿರ್ಮಿಸಲಾದ ಎರಡು ರೈಲ್ವೆ ಯೋಜನೆಗಳನ್ನು ಉದ್ಘಾಟಿಸುವ ಮತ್ತು ಪ್ರಾರಂಭಿಸುವ ಸಮಾರಂಭದಲ್ಲಿ ಭಾಗವಹಿಸಿದ್ದರು.

ಜಯ ಶ್ರೀ ಮಹಾ ಬೋಧಿ ದೇವಸ್ಥಾನಕ್ಕೆ ಪ್ರಧಾನಮಂತ್ರಿ ಭೇಟಿ

April 06th, 11:24 am

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಶ್ರೀಲಂಕಾದ ಅಧ್ಯಕ್ಷ ಘನತೆವೆತ್ತ ಅನುರಾ ಕುಮಾರ ದಿಸ್ಸನಾಯಕೆ ಅವರೊಂದಿಗೆ ಅನುರಾಧಪುರದ ಪವಿತ್ರ ಜಯ ಶ್ರೀ ಮಹಾ ಬೋಧಿ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜ್ಯ ಮಹಾಬೋಧಿ ಮರಕ್ಕೆ ಪೂಜೆ ಸಲ್ಲಿಸಿದರು.

ಪ್ರಧಾನಮಂತ್ರಿಗಳ ಶ್ರೀಲಂಕಾ ಭೇಟಿ: ಸಭಾ ಒಪ್ಪಂದಗಳ ಪಟ್ಟಿ

April 05th, 01:45 pm

ವಿದ್ಯುತ್ ಆಮದು/ರಫ್ತುಗಾಗಿ ಹೆಚ್ ವಿ ಡಿ ಸಿ ಅಂತರ್ ಸಂಪರ್ಕ ಅನುಷ್ಠಾನಕ್ಕಾಗಿ ಭಾರತ ಗಣರಾಜ್ಯ ಸರ್ಕಾರ ಮತ್ತು ಶ್ರೀಲಂಕಾದ ಪ್ರಜಾಸತ್ತಾತ್ಮಕ ಸಮಾಜವಾದಿ ಗಣರಾಜ್ಯ ಸರ್ಕಾರದ ನಡುವಿನ ತಿಳುವಳಿಕಾ ಒಪ್ಪಂದ

ಏಪ್ರಿಲ್ 03-06, 2025 ರಿಂದ ಪ್ರಧಾನ ಮಂತ್ರಿಯವರ ಥೈಲ್ಯಾಂಡ್ ಮತ್ತು ಶ್ರೀಲಂಕಾ ಭೇಟಿ

April 02nd, 02:00 pm

ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಬ್ಯಾಂಕಾಕ್‌ನಲ್ಲಿ ನಡೆಯಲಿರುವ 6 ನೇ ಬಿಮ್‌ಸ್ಟೆಕ್ ಶೃಂಗಸಭೆಯಲ್ಲಿ ಭಾಗವಹಿಸಲು ಥೈಲ್ಯಾಂಡ್‌ಗೆ (ಏಪ್ರಿಲ್ 3-4, 2025) ಭೇಟಿ ನೀಡಲಿದ್ದಾರೆ. ನಂತರ, ಅಧ್ಯಕ್ಷ ಅನುರ ಕುಮಾರ ದಿಸಾನಾಯಕ ಅವರ ಆಹ್ವಾನದ ಮೇರೆಗೆ ಅವರು ಶ್ರೀಲಂಕಾಕ್ಕೆ (ಏಪ್ರಿಲ್ 4-6, 2025) ರಾಜ್ಯ ಭೇಟಿ ನೀಡಲಿದ್ದಾರೆ.